Tag: ಅದ್ಧೂರಿ ಸ್ವಾಗತ

  • ಪೊಲೀಸರಿಗೆ ಗನ್ ತೋರಿಸಿದ್ದ ದೆಹಲಿ ಗಲಭೆಯ ಆರೋಪಿಗೆ ಅದ್ಧೂರಿ ಸ್ವಾಗತ

    ಪೊಲೀಸರಿಗೆ ಗನ್ ತೋರಿಸಿದ್ದ ದೆಹಲಿ ಗಲಭೆಯ ಆರೋಪಿಗೆ ಅದ್ಧೂರಿ ಸ್ವಾಗತ

    ನವದೆಹಲಿ: ಪೊಲೀಸರಿಗೆ ಗನ್ ತೋರಿಸಿದ್ದ ದೆಹಲಿ ಗಲಭೆಯ ಆರೋಪಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.

    2020 ಫೆಬ್ರವರಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಹಿಂಸಾಚಾರದಲ್ಲಿ ಒಬ್ಬ ವ್ಯಕ್ತಿ ಪೊಲೀಸರಿಗೆ ಗನ್ ತೋರಿಸಿ ಜೈಲುಪಾಲಾಗಿದ್ದ. ಅದೇ ಆರೋಪಿ ಇತ್ತೀಚೆಗೆ ತನ್ನ ಮನೆಗೆ ಭೇಟಿ ನೀಡಿದ್ದು, ಸ್ವಗ್ರಾಮದ ಜನರು ಆತನಿಗೆ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

    ದೆಹಲಿ ಗಲಭೆಯಲ್ಲಿ ಭಾಗಿಯಾಗಿದ್ದ ಆರೋಪಿ ಶಾರೂಖ್ ಪಠಾಣ್ ಇತ್ತೀಚೆಗೆ ತಮ್ಮ ಅಸ್ವಸ್ಥ ತಂದೆಯನ್ನು ಭೇಟಿ ಮಾಡಲು ಜೈಲಿನಿಂದ 4 ಗಂಟೆಗಳ ಪೆರೋಲ್ ಪಡೆದಿದ್ದ. ಮನೆಗೆ ಭೇಟಿ ನೀಡುವ ವೇಳೆ ಪಠಾಣ್‌ಗೆ ತನ್ನ ಗ್ರಾಮದ ಜನರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಹರಿಯಾಣದ ಮಾಜಿ ಸಿಎಂ ಓಂ ಪ್ರಕಾಶ್ ಚೌತಾಲಗೆ 4 ವರ್ಷ ಜೈಲು

    ಆರೋಪಿಗೆ ರಾಜಮರ್ಯಾದೆ ನೀಡಿರುವ ವೀಡಿಯೋ ಟ್ವಿಟ್ಟರ್‌ನಲ್ಲಿ ಹರಿದಾಡಿದೆ. ಪೊಲೀಸರಿಗೆ ಗನ್ ತೋರಿಸಿ ಆರೋಪಿಯಾಗಿದ್ದರೂ ತನ್ನ ಊರಿನ ಜನರು ಆತನಿಗೆ ಹೀರೋ ಎಂಬಂತೆ ಉಪಚರಿಸಿದ್ದಾರೆ.

    ವೀಡಿಯೋದಲ್ಲಿ ಪಠಾಣ್ ಪೊಲೀಸರ ಬೆಂಗಾವಲಿನಲ್ಲಿ ತನ್ನ ಮನೆ ಕಡೆ ನಡೆದುಕೊಂಡು ಹೋಗುತ್ತಿದ್ದು, ಊರಿನ ಜನರು ಅವನನ್ನು ಹಿಂಬಾಲಿಸುವುದನ್ನು ನೋಡಬಹುದು. ಹಲವರು ಆರೋಪಿಯನ್ನು ಹುರಿದುಂಬಿಸಿ ಸ್ವಾಗತಿಸಿದ್ದಾರೆ. ಪಠಾಣ್ ಮನೆ ಭೇಟಿಯಾದ ಕೆಲವು ಗಂಟೆಗಳ ಬಳಿಕ ಮತ್ತೆ ಜೈಲಿಗೆ ಮರಳಿದ್ದಾನೆ. ಇದನ್ನೂ ಓದಿ: ಸಾಕ್ಷ್ಯಾಧಾರಗಳ ಕೊರತೆ- ಆರ್ಯನ್ ಖಾನ್ ಸೇರಿ 6 ಮಂದಿಗೆ ಎನ್‍ಸಿಬಿ ಕ್ಲೀನ್‌ಚಿಟ್

    ಪಠಾಣ್ ಗಲಭೆ, ಧಾರ್ಮಿಕ ದ್ವೇಷವನ್ನು ಉತ್ತೇಜಿಸುವುದು ಹಾಗೂ ಕೊಲೆ ಯತ್ನಗಳಂತಹ ಆರೋಪದ ಮೇಲೆ ಜೈಲು ಸೇರಿದ್ದಾನೆ. ದೆಹಲಿಯಲ್ಲಿ ನಡೆದ ಗಲಭೆಯಲ್ಲಿ 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 200 ಮಂದಿ ಗಾಯಗೊಂಡಿದ್ದರು.

  • ಡಿಕೆಶಿ ಯುದ್ಧ ಗೆದ್ದು ಬಂದವರಂತೆ ವರ್ತಿಸುತ್ತಿದ್ದಾರೆ: ಆರ್ ಅಶೋಕ್

    ಡಿಕೆಶಿ ಯುದ್ಧ ಗೆದ್ದು ಬಂದವರಂತೆ ವರ್ತಿಸುತ್ತಿದ್ದಾರೆ: ಆರ್ ಅಶೋಕ್

    ಹುಬ್ಬಳ್ಳಿ: ತಿಹಾರ್ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಯುದ್ಧ ಗೆದ್ದು ಬಂದವರಂತೆ ವರ್ತಿಸುತ್ತಿದ್ದಾರೆ. ಅವರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಿರುವುದು ಸರಿ ಅಲ್ಲ ಎಂದು ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಯುದ್ಧ ಗೆದ್ದು ಬಂದವರಂತೆ ವರ್ತಿಸುತ್ತಿದ್ದಾರೆ. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಇರುವಾಗ ಈ ರೀತಿಯ ವರ್ತನೆ ಸರಿಯಲ್ಲ. ಅವರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಿರುವುದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ:ಇದು ಕೇವಲ ಆರಂಭ ಅಷ್ಟೇ, ಅಂತ್ಯ ಅಲ್ಲ: ಗುಡುಗಿದ ಕನಕಪುರ ಬಂಡೆ

    ಹಾಗೆಯೇ ಅನರ್ಹ ಶಾಸಕರ ಬಗ್ಗೆ ಮಾತನಾಡಿ, ಅನರ್ಹಗೊಂಡ ಶಾಸಕರಿಗೆ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ಆದರೆ ಯಾರ ಕಾರಣದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂಬುದು ಪಕ್ಷದ ಕಾರ್ಯಕರ್ತರಿಗೆ ಗೊತ್ತಿದೆ. ಅನರ್ಹಗೊಂಡ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್ ಇನ್ನೂ ಅಂತಿಮ ತೀರ್ಪು ನೀಡುವುದು ಬಾಕಿಯಿದೆ. ತೀರ್ಪು ಪ್ರಕಟಗೊಂಡ ನಂತರ ಬಿಜೆಪಿ ಟಿಕೆಟ್ ಅಂತಿಮಗೊಳಿಸಲಾಗುವುದು. ಹಾಗೆಯೇ ಅನರ್ಹರೆಲ್ಲಾ ಬಿಜೆಪಿ ಸೇರಿಲ್ಲ ಎಂದು ತಿಳಿಸಿದರು.

    ನೆರೆ ಪರಿಹಾರದ ಬಗ್ಗೆ ಮಾತನಾಡಿ, ನೆರೆ ಸಂತ್ರಸ್ತರಿಗೆ ಈಗಾಗಲೇ ಪರಿಹಾರ ನೀಡಲಾಗುತ್ತಿದೆ. ಪರಿಹಾರ ನೀಡಲು ಆರ್ಥಿಕ ಕೊರತೆ ಇಲ್ಲ. ಮನೆ ಬಿದ್ದವರಿಗೆ 5 ಲಕ್ಷ ರೂ. ಹಾಗೂ 30/40 ನಿವೇಶನ ಉಚಿತವಾಗಿ ನೀಡಲಾಗುತ್ತದೆ ಎಂದು ಆರ್. ಅಶೋಕ್ ಪ್ರತಿಕ್ರಿಯಿಸಿದರು.

  • 22 ವರ್ಷಗಳ ಕಾಲ ಸೇವೆ ಸಲ್ಲಿಸಿದ ಯೋಧರಿಗೆ ಸಿಕ್ತು ಅದ್ಧೂರಿ ಸ್ವಾಗತ

    22 ವರ್ಷಗಳ ಕಾಲ ಸೇವೆ ಸಲ್ಲಿಸಿದ ಯೋಧರಿಗೆ ಸಿಕ್ತು ಅದ್ಧೂರಿ ಸ್ವಾಗತ

    ಕೋಲಾರ: ದೇಶದ ವಿವಿಧ ಗಡಿ ಭಾಗಗಳಲ್ಲಿ ಸುಮಾರು 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿ ತವರಿಗೆ ಮರಳಿದ ಇಬ್ಬರು ವೀರ ಯೋಧರಿಗೆ ಕೋಲಾರದ ಜನ ಅದ್ಧೂರಿ ಸ್ವಾಗತ ಕೋರಿದರು.

    ಕೋಲಾರ ನಗರದ ಸರ್ವಜ್ಞ ಪಾರ್ಕ್ ಬಳಿ ಯೋಧರಿಗೆ ಸಾರ್ವಜನಿಕರು ಹೂಮಾಲೆಯನ್ನು ಹಾಕಿ ಸನ್ಮಾನಿಸಿ ಮೆರವಣಿಗೆ ಮಾಡಿದರು. ಸೇನೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಹಾಗೂ ಗಡಿಯಾಚೆಗೂ ತೆರಳಿ ಸೇವೆ ಸಲ್ಲಿಸಿ ವಾಪಸ್ ಆದ ಇಬ್ಬರು ಯೋಧರಿಗೆ ಆರತಿ ಎತ್ತಿ ಸ್ವಾಗತ ಮಾಡಿದಲ್ಲದೆ, ಹೆಗಲ ಮೇಲೆ ಹೊತ್ತು ಖುಷಿಪಟ್ಟರು.

    ಕೋಲಾರ ತಾಲೂಕಿನ ತೊಂಡಾಲ ಗ್ರಾಮದ ಕೃಷ್ಣೇಗೌಡ ಹಾಗೂ ಮಿಟ್ಟೂರು ಗ್ರಾಮದ ಆಂಜಿನಪ್ಪ ಅವರು 22 ವರ್ಷ ಸೇವೆ ಸಲ್ಲಿಸಿ ಇಂದು ವಾಪಸ್ ಆದರು. ಈ ಹಿನ್ನೆಲೆಯಲ್ಲಿ ಕೋಲಾರದ ಟೀಂ ಯೋಧ ನಮನ ಹಾಗೂ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು. ಇದೇ ವೇಳೆ ಅವರನ್ನು ಸನ್ಮಾನಿಸಿ ಆತ್ಮೀಯವಾಗಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು.

    ಬಳಿಕ ಮಾತನಾಡಿದ ನಿವೃತ್ತ ಯೋಧರು ಜಮ್ಮು-ಕಾಶ್ಮೀರ, ಕಾಂಗೋ, ವಿಶ್ವ ಶಾಂತಿ ಸೇನಾ ಪಡೆ, ಛತ್ತೀಸ್ ಗಡ್ ನಕ್ಸಲ್ ಪ್ರದೇಶ ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರತಾಂಭೆ ಸೇವೆ ಸಲ್ಲಿಸಿದ್ದು, ಭಾರತ ಸೇನೆಗೆ ಅವಶ್ಯಕತೆ ಬಿದ್ದಲ್ಲಿ ಮತ್ತೆ ದೇಶ ಸೇವೆಗಾಗಿ ಕರೆ ಬಂದಲ್ಲಿ ನಾವು ಯಾವಾಗಲೂ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.