Tag: ಅದಿತಿ

  • ಪಾರ್ಟ್‌ನರ್ ಎಂದು ಅದಿತಿ ಜೊತೆಗಿನ ಪ್ರೀತಿ ಒಪ್ಪಿಕೊಂಡ ಸಿದ್ಧಾರ್ಥ್

    ಪಾರ್ಟ್‌ನರ್ ಎಂದು ಅದಿತಿ ಜೊತೆಗಿನ ಪ್ರೀತಿ ಒಪ್ಪಿಕೊಂಡ ಸಿದ್ಧಾರ್ಥ್

    ಕಾಲಿವುಡ್ ನಟ ಸಿದ್ಧಾರ್ಥ್- ಅದಿತಿ ರಾವ್ ಹೈದರಿ (Aditi Rao Hidari) ಸಾಕಷ್ಟು ಸಮಯದಿಂದ ಡೇಟಿಂಗ್ ಮಾಡ್ತಿದ್ದಾರೆ. ಆದರೆ ಎಲ್ಲೂ ಕೂಡ ತಮ್ಮ ಪ್ರೀತಿ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಈಗ ಅದಿತಿ ಅವರನ್ನ ತಮ್ಮ ಪಾರ್ಟ್‌ನರ್ ಎಂದು ಒಪ್ಪಿಕೊಂಡಿದ್ದಾರೆ. ಅದಷ್ಟೇ ಅಲ್ಲ, ಅದಿತಿ ಫೋಟೋ ಶೇರ್ ಮಾಡಿ ವಿಶೇಷ ಸಾಲುಗಳನ್ನ ಬರೆದುಕೊಂಡಿದ್ದಾರೆ.‌ ಇದನ್ನೂ ಓದಿ:ಪೊಲೀಸ್ ಕಸ್ಟಡಿಯಲ್ಲಿ ದೈವ ನರ್ತಕರು: ಕೊರಗಜ್ಜ ಡೈರೆಕ್ಟರ್ ಹೇಳಿದ್ದೇನು?

    ಅ.28ರಂದು ಅದಿತಿ ರಾವ್ ಹುಟ್ಟುಹಬ್ಬವಾಗಿದ್ದು, ಸಿದ್ಧಾರ್ಥ್ (Actor Siddarth) ವಿಶೇಷವಾಗಿ ಶುಭಕೋರಿದ್ದಾರೆ. ಈ ವೇಳೆ, ಪಾರ್ಟ್‌ನರ್ ಎಂದು ನಟ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಸಿದ್ಧಾರ್ಥ್ ಪೋಸ್ಟ್‌ಗೆ ಅದಿತಿ ಕೂಡ ಪ್ರತಿಕ್ರಿಯೆ ನೀಡಿ, ಧನ್ಯವಾದ ತಿಳಿಸಿದ್ದಾರೆ. ಸಿದ್ಧಾರ್ಥ್ ಶೇರ್ ಮಾಡಿರುವ ಪೋಸ್ಟ್‌ಗೆ ಅದಿತಿ ಪ್ರತಿಕ್ರಿಯೆ ನೀಡಿರೋದನ್ನ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅದಷ್ಟು ಬೇಗ ಮದುವೆಯಾಗಿ ಎಂದು ಹಾರೈಸಿದ್ದಾರೆ.

     

    View this post on Instagram

     

    A post shared by Siddharth (@worldofsiddharth)

    ಸೆಲೆಬ್ರಿಟಿಗಳ ಸಾಕಷ್ಟು ಡಿನ್ನರ್ ಪಾರ್ಟಿಗಳಲ್ಲಿ ಸಿದ್ಧಾರ್ಥ್- ಅದಿತಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಶರ್ವಾನಂದ್ ಆರತಕ್ಷತೆಯಲ್ಲೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇಬ್ಬರ ಲವ್ ಬಗ್ಗೆ ಆಗಲೇ ಗುಮಾನಿ ಇತ್ತು.

    ಅದಿತಿ ಅವರು ಈ ಹಿಂದೆ ಸತ್ಯದೀಪ್ ಮಿಶ್ರಾ ಜೊತೆ ಮದುವೆಯಾಗಿದ್ರು. ಬಳಿಕ 2013ರಲ್ಲಿ ಡಿವೋರ್ಸ್ ಪಡೆದರು. ಸಿದ್ಧಾರ್ಥ್ ಕೂಡ 2003ರಲ್ಲಿ ಮೇಘನಾ ಎಂಬುವವರನ್ನ ಮದುವೆಯಾಗಿದ್ದರು. 2007ರಲ್ಲಿ ಸಿದ್ಧಾರ್ಥ್-ಮೇಘನಾ ಡಿವೋರ್ಸ್ ಪಡೆದರು. ಈಗ ಅದಿತಿ-ಸಿದ್ಧಾರ್ಥ್ ಎಂಗೇಜ್ ಆಗಿದ್ದಾರೆ. ಸದ್ಯದಲ್ಲೇ ಮದುವೆ ಬಗ್ಗೆ ಸಿಹಿಸುದ್ದಿ ಕೊಡುತ್ತಾರಾ? ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿರ್ಮಾಪಕ ಕೆ.ಮಂಜು ಪುತ್ರನ ‘ರಾಣ’ ಸಿನಿಮಾದ ಹಾಡು ರಿಲೀಸ್ ಮಾಡಿದ ಜೋಗಿ ಪ್ರೇಮ್

    ನಿರ್ಮಾಪಕ ಕೆ.ಮಂಜು ಪುತ್ರನ ‘ರಾಣ’ ಸಿನಿಮಾದ ಹಾಡು ರಿಲೀಸ್ ಮಾಡಿದ ಜೋಗಿ ಪ್ರೇಮ್

    ನಿರ್ಮಾಪಕ ಕೆ.ಮಂಜು (, K. Manju) ಪುತ್ರ ಶ್ರೇಯಸ್ ನಾಯಕನಾಗಿ ನಟಿಸಿರುವ , ನಂದಕಿಶೋರ್ ನಿರ್ದೇಶನದ “ರಾಣ” (Rana) ಚಿತ್ರದ “ಗಲ್ಲಿ ಬಾಯ್” ಹಾಡನ್ನು ಜೋಗಿ ಪ್ರೇಮ್ (Jogi Prem) ಬಿಡುಗಡೆ ಮಾಡಿದರು. ಚಂದನ್ ಶೆಟ್ಟಿ ಬರೆದು ಸಂಗೀತ ನೀಡಿರುವ ಈ ಹಾಡನ್ನು ಅನಿರುದ್ಧ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಹಾಡಿದ್ದಾರೆ. ಆನಂದ್ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಶ್ರೇಯಸ್ ಹಾಗೂ ರೀಷ್ಮಾ ನಾಣಯ್ಯ ಇಬ್ಬರೂ ಚೆನ್ನಾಗಿ ನೃತ್ಯ ಮಾಡಿದ್ದಾರೆ. ಚಂದನ್ ಶೆಟ್ಟಿ ಸಂಗೀತ ಸುಂದರವಾಗಿದೆ. ಅನಿರುದ್ಧ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಗಾಯನ ಸುಮಧುರವಾಗಿದೆ. ನಂದ ಕಿಶೋರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಜೋಗಿ ಪ್ರೇಮ್ ಹಾರೈಸಿದರು.

    ಮೊದಲು ನಾನು, ನನ್ನ ಸ್ಪೂರ್ತಿಯಾದ ವಿಷ್ಣುವರ್ಧನ್ ಹಾಗೂ ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತೇನೆ. ಚಂದನ್ ಶೆಟ್ಟಿ  ಎಲ್ಲರ ಮನಸಿಗೆ ಹತ್ತಿರವಾಗುವಂತಹ ಸಾಹಿತ್ಯ ಬರೆದಿದ್ದಾರೆ. ಅಷ್ಟೇ ಚೆನ್ನಾಗಿ ಸಂಗೀತ ನೀಡಿದ್ದಾರೆ. ಅನಿರುಧ್ದ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಅವರ ಅದ್ಭುತ ಗಾಯನ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ರೀಷ್ಮಾ ನಾಣಯ್ಯ ಒಳ್ಳೆಯ ನೃತ್ಯಗಾರ್ತಿ.  ನೃತ್ಯ ನಿರ್ದೇಶಕ ಇಮ್ರಾನ್ ಮಾಸ್ಟರ್ ಹಾಗೂ ಛಾಯಾಗ್ರಾಹಕ ಶೇಖರ್ ಚಂದ್ರ ಅವರ ಕಾರ್ಯವೈಖರಿ ಚೆನ್ನಾಗಿದೆ. ನಾನು ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಅಭಿನಯಿಸಿದ್ದೇನೆ. ನವೆಂಬರ್ 11 ರಂದು ಚಿತ್ರ ತೆರೆಗೆ ಬರಲಿದೆ.‌ ಹಾಡು ಬಿಡುಗಡೆ ಮಾಡಿಕೊಟ್ಟ ಪ್ರೇಮ್ ಅವರಿಗೆ ಹಾಗೂ ಅವಕಾಶ ನೀಡಿರುವ ನಿರ್ಮಾಪಕ ಪುರುಷೋತ್ತಮ್ ಹಾಗೂ ನಿರ್ದೇಶಕ ನಂದಕಿಶೋರ್ ಅವರಿಗೆ ಧನ್ಯವಾದ ಎಂದರು ನಾಯಕ ಶ್ರೇಯಸ್ (Shreyash). ಇದನ್ನೂ ಓದಿ:ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್

    ಚಿತ್ರ ಚೆನ್ನಾಗಿ ಬಂದಿದೆ. ಈ ಹಾಡಂತೂ ಸಖತ್‌ ಆಗಿದೆ. ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ (Chandan Shetty)  ಅವರು ಬರೆದಿರುವ ಈ ಹಾಡು ಎಲ್ಲರ ಗಮನ ಸೆಳೆಯುತ್ತಿದೆ ಎಂದರು ನಾಯಕಿ ರೀಷ್ಮಾ ನಾಣಯ್ಯ. ಗುಜ್ಜಲ್ ಪುರುಷೋತ್ತಮ್ ಅವರು ಒಂದು ಸಿನಿಮಾ ಮಾಡುತ್ತಿದ್ದೇನೆ. ನೀವು ಜೊತೆಗಿರಬೇಕು ಎಂದರು.  ನನ್ನ ಮಗನೇ ಹೀರೋ ಅಂತ ತಿಳಿದ ಮೇಲೆ, ನಾನು ಅವನಿಗೆ ಚಿತ್ರ ಚೆನ್ನಾಗಿ ಬರಲು ನಿರ್ದೇಶಕರು ಕಾರಣ ಅವರು ಹೇಳಿದ ಹಾಗೆ ಕೇಳಬೇಕು ಅಂತ ಹೇಳಿದೆ. “ರಾಣ” ಒಂದೊಳ್ಳೆಯ ಕೌಟುಂಬಿಕ ಚಿತ್ರ.  ಹಳ್ಳಿಯಿಂದ ನಗರಕ್ಕೆ ಬಂದು ನೆಲೆಸಿರುವವರ ಕುರಿತಾದ ಕಥೆಯಿದೆ. ನಂದಕಿಶೋರ್ (Nandakishor) ನಿರ್ದೇಶನ, ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಸೇರಿದಂತೆ ಎಲ್ಲರ ಕೆಲಸ ಚೆನ್ನಾಗಿದೆ. ನವೆಂಬರ್ 11ಕ್ಕೆ ಚಿತ್ರ ತೆರೆಗೆ ಬರುತ್ತಿದೆ ಎಂದು ತಿಳಿಸಿದ ಕೆ.ಮಂಜು, ಹಾಡು ಬಿಡುಗಡೆ ಮಾಡಲು ದೂರದ ಮುಂಬೈನಿಂದ ಬಂದ ಪ್ರೇಮ್ ಅವರಿಗೆ ಧನ್ಯವಾದ ಹೇಳಿದರು.

    ಹಾಡು (Song) ಬಿಡುಗಡೆ ಮಾಡಿದ ಪ್ರೇಮ್ ಸರ್ ಗೆ ಧನ್ಯವಾದ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.‌ ನವೆಂಬರ್ 11ರಂದು ಬಿಡುಗಡೆಯಾಗಲಿದೆ. ತಂಡದವರೆಲ್ಲಾ ಸೇರಿ ಉತ್ತಮ ಚಿತ್ರ ಮಾಡಿದ್ದೇವೆ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ನಂದಕಿಶೋರ್. ಕೆ.ಮಂಜು ಅವರ ಸಹಕಾರದಿಂದ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ಇಡೀ ತಂಡಕ್ಕೆ ನನ್ನ ಧನ್ಯವಾದ ಎಂದರು ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್. ನಂದಕಿಶೋರ್ ನಿರ್ದೇಶನದಲ್ಲಿ ಚಿತ್ರ  ಚೆನ್ನಾಗಿ ಬಂದಿದೆ. ಹಾಡುಗಳು ಸುಂದರವಾಗಿದೆ. ಇದೇ ಮೊದಲ ಬಾರಿಗೆ ನಾನು ಹಿನ್ನೆಲೆ ಸಂಗೀತ ಕೂಡ ನೀಡಿದ್ದೇನೆ ಎಂದು ಸಂಗೀತದ ಬಗ್ಗೆ ಚಂದನ್ ಶೆಟ್ಟಿ ಮಾಹಿತಿ ನೀಡಿದರು. ಚಿತ್ರದಲ್ಲಿ ಅಭಿನಯಿಸಿರುವ ಕೋಟೆ ಪ್ರಭಾಕರ್, ಅಶೋಕ್, ರಘು ಹಾಗೂ ಗಾಯಕ ಅನಿರುದ್ಧ್ ಶಾಸ್ತ್ರಿ ಚಿತ್ರದ ಕುರಿತು ಮಾತನಾಡಿದರು. ರೈತ ಕೇಶವ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಡಾಲಿ-ಅದಿತಿ ನಟನೆಯ `ಜಮಾಲಿಗುಡ್ಡ’ ಚಿತ್ರದ ಡಬ್ಬಿಂಗ್ ಸ್ಟಾರ್ಟ್

    ಡಾಲಿ-ಅದಿತಿ ನಟನೆಯ `ಜಮಾಲಿಗುಡ್ಡ’ ಚಿತ್ರದ ಡಬ್ಬಿಂಗ್ ಸ್ಟಾರ್ಟ್

    ಸ್ಯಾಂಡಲ್‌ವುಡ್‌ನಲ್ಲಿ `ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರದ್ದೇ ಸುದ್ದಿ ಸದ್ದು. ಇತ್ತೀಚೆಗಷ್ಟೇ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಇದೀಗ ಚಿತ್ರದ ಡಬ್ಬಿಂಗ್ ಶುರುವಾಗಿದೆ. ಸಿನಿಮಾದ ಡಬ್ಬಿಂಗ್ ಕುರಿತು ಚಿತ್ರತಂಡ ವಿಡಿಯೋ ಝಲಕ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ನಟ ರಾಕ್ಷಸ ಡಾಲಿ ಧನಂಜಯ್ ಮತ್ತು ಅದತಿ ಪ್ರಭುದೇವಾ ನಟನೆಯ ಬಹುನಿರೀಕ್ಷಿತ ಚಿತ್ರ `ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರ ಶುರುವಾದಗಿನಿಂದ ಹಲವು ವಿಚಾರಗಳಿಂದ ಚಿತ್ರ ಸುದ್ದಿ ಮಾಡ್ತಿದೆ. ಇತ್ತೀಚಗಷ್ಟೇ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಇದೀಗ ಡಬ್ಬಿಂಗ್ ಕೆಲಸ ಕೂಡ ಭರದಿಂದ ಸಾಗುತ್ತಿದೆ.

    90ರ ದಶಕದ ರೆಟ್ರೋ ಸ್ಟೈಲ್ ಟ್ರಾವೆಲಿಂಗ್ ಲವ್ ಸ್ಟೋರಿ ಹೇಳಲು ಡಾಲಿ ಮತ್ತು ಅದಿತಿ ಬರುತ್ತಿದ್ದಾರೆ. ಚಿತ್ರದಲ್ಲಿ ಡಾಲಿ ಬಾರ್ ಸಪ್ಲೈಯರ್ ಪಾತ್ರಕ್ಕೆ ಜೀವ ತುಂಬಿದ್ದು, ನಟಿ ಅದಿತಿ ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡುವ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ನಡುವೆ ಪ್ರೇಮ ಹುಟ್ಟಿ ನಂತರ ಏನಾಗುತ್ತದೆ ಅನ್ನೋದನ್ನ ತೋರಿಸಲು ನಿರ್ದೇಶಕ ಕುಶಾಲ್ ಗೌಡ ಸಜ್ಜಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಕಂಪ್ಲಿಂಟ್ ಆಗಿದ್ದು, ಡಬ್ಬಿಂಗ್‌ನತ್ತ ಮುಖ ಮಾಡಿದೆ ಚಿತ್ರತಂಡ.

    ಡಬ್ಬಿಂಗ್ ಸ್ಟುಡಿಯೋಗೆ ಭೇಟಿ ನೀಡಿ, ಪೂಜೆ ನಂತರ ಡಬ್ಬಿಂಗ್‌ಗೆ ನಟಿ ಅದಿತಿ ಸಾಥ್ ಕೊಟ್ಟಿದ್ದಾರೆ. ಜೀವ ತುಂಬುದ ಘಳಿಕೆ ಅಂತಾ ಹೇಳಿ ಡಬ್ಬಿಂಗ್ ಶುರುಮಾಡಿರೋ ಅದಿತಿ ಮಾತುಗಳು ಗಮನ ಸೆಳೆಯುತ್ತಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಅಮ್ಮನ ಜತೆ ತಾರೆಯರ ಅಪರೂಪದ ಫೋಟೋಗಳು

    `ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರದ ಡಾಲಿ ಮತ್ತು ಅದಿತಿ ಲುಕ್ ನೋಡಿರೋ ಅಭಿಮಾನಿಗಳಲ್ಲಿ ಪಾತ್ರದ ಕುರಿತು ಕುತೂಹಲ ಹುಟ್ಟು ಹಾಕಿದೆ. ನವಿರಾದ ಹೊಸ ಪ್ರೇಮ ಕಥೆ ನೋಡಲು ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.

  • ಗೆಳತಿ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ಮೋಹಿತ್ ರೈನಾ

    ಗೆಳತಿ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ಮೋಹಿತ್ ರೈನಾ

    ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ʻದೇವೋ ಕೆ ದೇವ್ ಮಹದೇವ್ʼ ಧಾರವಾಹಿ ನಟ ಮೋಹಿತ್ ರೈನಾ ಅವರು ತಮ್ಮ ಬಹುಕಾಲದ ಗೆಳತಿ ಅದಿತಿ ಜೊತೆಗೆ ಸಪ್ತಪದಿ ತುಳಿದಿದ್ದಾರೆ.

    Mohit Raina

    2022ರ ಜನವರಿ 1ರಂದು ಹೊಸ ವರ್ಷದ ದಿನ ಹೊಸ ಜೀವನಕ್ಕೆ ಕಾಲಿಟ್ಟ ಮೋಹಿತ್ ರೈನಾ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ, ಅದ್ದೂರಿ ಮದುವೆಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಮೋಹಿತ್ ಗುರು ಹಿರಿಯರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ವಿದ್ಯುತ್‌ ನೀಡದಿದ್ದಕ್ಕೆ ಅಖಿಲೇಶ್‌ ಯಾದವ್‌ ಮೊದಲು ಕ್ಷಮೆಯಾಚಿಸಲಿ: ಯೋಗಿ ಆದಿತ್ಯನಾಥ್

    ಫೋಟೋ ಜೊತೆಗೆ, ಪ್ರೀತಿ ಇರುವಲ್ಲಿ ಅಡೆತಡೆಗಳಿರುವುದಿಲ್ಲ. ಅಡೆತಡೆಗಳಿದ್ದರೂ ಬೇಲಿಯನ್ನು ದಾಟುತ್ತೇವೆ. ಗುರಿಯನ್ನು ತಲುಪಲು ತಡೆಗೋಡೆಗಳನ್ನು ಭೇದಿಸುವ ಭರವಸೆಯಿಂದ ಮುನ್ನುಗ್ಗುತ್ತೇವೆ. ಈ ಭರವಸೆಯಿಂದ ನಾವಿಂದು ನಮ್ಮ ತಂದೆ, ತಾಯಿ ಆಶೀರ್ವಾದದಿಂದ ಒಂದಾಗಿದ್ದೇವೆ. ನಮ್ಮಿಬ್ಬರ ಈ ಹೊಸ ಪ್ರಯಾಣಕ್ಕೆ ನಿಮ್ಮೆಲ್ಲರ ಪ್ರೀತಿ ಹಾಗೂ ಆರ್ಶೀವಾದ ಬೇಕಾಗಿದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Mohit Raina (@merainna)

    ಈ ನವಜೋಡಿಗೆ ಕರಣ್ ಜೋಹಾರ್, ಕತ್ರಿಕಾ ಸೆಂಗಾರ್, ಸಚಿನ್ ಶ್ರಾಫ್, ಕರಿಷ್ಮಾ ಕೋಟಕ್ ಮತ್ತು ಸೋಮ್ಯಾ ಸೇಠ್ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು, ಸ್ನೇಹಿತರು ಮತ್ತು ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ. ಇದನ್ನೂ ಓದಿ: ಕೊರೊನಾ ತಡೆಗಟ್ಟುವಲ್ಲಿ ಕೇಜ್ರಿವಾಲ್ ಸರ್ಕಾರ ವಿಫಲ: ಚರಣ್‌ಜಿತ್ ಸಿಂಗ್

  • ಯಾರಿಗೆ ಯಾರುಂಟು: ಸಿಗೋದು ಪಕ್ಕಾ ಗೆಲುವಿನ ನಂಟು!

    ಯಾರಿಗೆ ಯಾರುಂಟು: ಸಿಗೋದು ಪಕ್ಕಾ ಗೆಲುವಿನ ನಂಟು!

    ಬೆಂಗಳೂರು: ರಘುನಾಥ್ ನಿರ್ಮಾಣದ ಯಾರಿಗೆ ಯಾರುಂಟು ಚಿತ್ರದ ಮೆಲೋಡಿ ಹಾಡುಗಳ ಮಾಯೆಗೆ ತಲೆದೂಗದವರೇ ಇಲ್ಲ. ಚಿತ್ರರಂಗದ ನಟ ನಟಿಯರನೇಕರು ಈ ಹಾಡುಗಳನ್ನು ಮೆಚ್ಚಿಕೊಂಡು, ಮನಸಾರೆ ಹೊಗಳುತ್ತಿದ್ದಾರೆ. ಅತ್ತ ಪ್ರೇಕ್ಷಕರ ವಲಯದಲ್ಲಿಯೂ ಕೂಡಾ ಇಂಥಾದ್ದೇ ವಾತಾವರಣವಿದೆ. ಎಲ್ಲರ ಬಾಯಲ್ಲಿಯೂ ಗುನುಗುನಿಸುತ್ತಿರೋ ಹಾಡುಗಳೇ ಇಷ್ಟು ಚೆನ್ನಾಗಿರೋದರಿಂದ ಇಡೀ ಸಿನಿಮಾ ಹೇಗಿರಬಹುದೆಂಬ ಕುತೂಹಲವಂತೂ ಸರ್ವವ್ಯಾಪಿಯಾಗಿ ಬಿಟ್ಟಿದೆ.

    ಅದೆಲ್ಲದಕ್ಕೂ ಇನ್ನೊಂದು ವಾರದಲ್ಲಿ ಖಂಡಿತಾ ಉತ್ತರ ಸಿಗಲಿದೆ. ಯಾಕೆಂದರೆ ಯಾರಿಗೆ ಯಾರುಂಟು ಚಿತ್ರ ಇದೇ ಫೆಬ್ರವರಿ 22ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

    ಒರಟ ಚಿತ್ರದ ಮೂಲಕ ಮಾಸ್ ಲುಕ್ಕಿನಲ್ಲಿ ಅಭಿಮಾನಿ ಬಳಗ ಸಂಪಾದಿಸಿಕೊಂಡಿದ್ದ ಪ್ರಶಾಂತ್ ಪಾಲಿಗೆ ಈ ಸಿನಿಮಾ ಮೂಲಕ ಮತ್ತೆ ಭರ್ಜರಿ ಓಪನಿಂಗ್ ಸಿಗೋ ಲಕ್ಷಣ ಸ್ಪಷ್ಟವಾಗಿದೆ. ನಾಯಕಿಯರಲ್ಲೊಬ್ಬರಾದ ಕೃತಿಕಾ ರವೀಂದ್ರ ಪಾಲಿಗೂ ಈ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲೊಂದು ಬ್ರೇಕ್ ಸಿಗೋ ಸೂಚನೆಗಳಿವೆ. ಲೇಖಾ ಚಂದ್ರ ಮತ್ತು ಅದಿತಿ ಪಾಲಿಗೂ ಅಂಥಾದ್ದೊಂದು ಭರವಸೆ ಇದೆ.

    ಬಿಡುಗಡೆಗೂ ಮುನ್ನವೇ ಇಂಥಾದ್ದೊಂದು ಭರವಸೆ ಮೂಡಿಕೊಂಡಿರೋದಕ್ಕೆ ಮೂಲ ಕಾರಣ ವಿಶಿಷ್ಟವಾದ ಟ್ರೈಲರ್, ಟೀಸರ್ ಮತ್ತು ಚೆಂದದ ಹಾಡುಗಳು ಜನರನ್ನು ತಲುಪಿಕೊಂಡಿರೋ ರೀತಿ. ಈ ಚಿತ್ರದ ಹಾಡುಗಳ ಬಗ್ಗೆ ಕನ್ನಡ ಚಿತ್ರರಂಗದ ಹಲವಾರು ನಟನಟಿಯರು ಭರವಸೆಯ ಮಾತಾಡಿದ್ದಾರೆ. ಬಿ.ಜೆ.ಭರತ್ ಈ ಮೂಲಕವೇ ಮತ್ತೆ ಮುಂಚೂಣಿಯಲ್ಲಿ ಮಿನುಗುತ್ತಿದ್ದಾರೆ. ಧ್ರುವ ಸರ್ಜಾ ಅವರಿಂದ ಆರಂಭವಾಗಿ ನಟ ನವೀನ್ ಕೃಷ್ಣ, ಅರು ಗೌಡ, ನಿರ್ದೇಶಕ ನಂದ ಕಿಶೋರ್, ದಯಾಳ್ ಪದ್ಮನಾಭನ್, ನಟಿ ಅನಿತಾ ಭಟ್, ಪ್ರಥಮ್ ಸೇರಿದಂತೆ ಎಲ್ಲ ವಿಭಾಗದವರೂ ಕೂಡಾ ಯಾರಿಗೆ ಯಾರುಂಟು ಚಿತ್ರ ಮ್ಯೂಸಿಕಲ್ ಹಿಟ್ ಆಗುತ್ತದೆ ಅನ್ನೋ ಭವಿಷ್ಯ ನುಡಿದಿದ್ದಾರೆ.

    ಇಂಥಾ ಪಾಸಿಟಿವ್ ಅಲೆಯ ನಡುವೆಯೇ ಕಿರಣ್ ಗೋವಿ ನಿರ್ದೇಶನದ ಯಾರಿಗೆ ಯಾರುಂಟು ಚಿತ್ರ ಮುಂದಿನ ವಾರ ಅದ್ಧೂರಿಯಾಗಿ ತೆರೆ ಕಾಣಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಣ್‍ಬೀರ್ ಕಪೂರ್ ನಟನೆಗೆ ಅದಿತಿ ಫಿದಾ!

    ರಣ್‍ಬೀರ್ ಕಪೂರ್ ನಟನೆಗೆ ಅದಿತಿ ಫಿದಾ!

    ಮುಂಬೈ: ಬಹು ನಿರೀಕ್ಷಿತ ಸಂಜು ಚಿತ್ರ ಬಿಡುಗಡೆಯಾಗಿ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಂಜಯ್ ದತ್ ಜೀವನಾಧಾರಿತವಾದ ಈ ಚಿತ್ರದಲ್ಲಿ ಸಂಜಯ್ ಪಾತ್ರ ಮಾಡಿರುವ ರಣ್‍ಬೀರ್ ಕಪೂರ್ ನಟನೆಯ ಬಗ್ಗೆ ಎಲ್ಲೆಡೆ ಅದ್ಭುತ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ. ಇದರಲ್ಲಿನ ಮುಖ್ಯವಾದ ಇತರೆ ಪಾತ್ರಗಳೂ ಕೂಡಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.

    ಅದರಲ್ಲಿಯೂ ವಿಶೇಷವಾಗಿ ಸಂಜಯ್ ದತ್ ತಂಗಿ ಪ್ರಿಯಾ ಪಾತ್ರವನ್ನೂ ಕೂಡಾ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಪಾತ್ರದಲ್ಲಿ ನಟಿಸಿರುವಾಕೆ ಅದಿತಿ ಸಿಯಾ. ರಣ್‍ಬೀರ್ ಕಪೂರ್ ಜೊತೆ ನಟಿಸಿದ್ದಕ್ಕಾಗಿ ಖುಷಿಗೊಂಡಿರುವ ಆದಿತಿ ಆತನ ನಟನೆ ಮತ್ತು ವ್ಯಕ್ತಿತ್ವವನ್ನು ಕೊಂಡಾಡಿದ್ದಾಳೆ!

    ತಾನೋರ್ವ ಸ್ಟಾರ್ ನಟ ಎಂಬ ಸಣ್ಣ ಅಹಂ ಇಲ್ಲದೆ ಓರ್ವ ಕಲಾವಿದನಾಗಿ ಮಾತ್ರವೇ ವರ್ತಿಸುವ ರಣ್‍ಬೀರ್ ಒಬ್ಬ ಒಳ್ಳೆತನದ ವ್ಯಕ್ತಿ ಅಂದಿರುವ ಅದಿತಿ, ಆತ ಒನ್ ಟೇಕ್ ಸ್ಪೆಷಲಿಸ್ಟ್ ಅಂತಲೂ ಹೇಳಿಕೊಂಡಿದ್ದಾಳೆ. ರಣ್‍ಬೀರ್ ಪ್ರತೀ ದೃಶ್ಯಗಳನ್ನೂ ಒಂದೇ ಟೇಕಿಗೆ ಓಕೆ ಮಾಡಿಸಿಕೊಳ್ಳುತ್ತಿದ್ದುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾಳೆ.

    ಸಂಜಯ್ ದತ್ ತಂಗಿ ಪ್ರಿಯಾ ಪಾತ್ರಕ್ಕೆ ನಿರ್ದೇಶಕರು ಸಾಕಷ್ಟು ಹುಡುಕಾಟ ನಡೆಸಿ ಕಡೆಗೆ ಅದಿತಿಯನ್ನು ಆಯ್ಕೆ ಮಾಡಿದ್ದರು. ಆದರೆ ಕಥೆಯನ್ನಷ್ಟೇ ಕೇಳಿಕೊಂಡಿದ್ದ ಅದಿತಿ ಪ್ರಿಯಾಳ ಹಾವಭಾವಗಳನ್ನು ನೇರವಾಗಿ ಅಭ್ಯಸಿಸಿರಲಿಲ್ಲವಂತೆ. ಆದರೂ ಕೂಡಾ ಎಲ್ಲರೂ ಮೆಚ್ಚುವಂತೆ ಆ ಪಾತ್ರವನ್ನು ಮಾಡಲು ರಣ್‍ಬೀರ್ ಕಪೂರ್ ಕೊಟ್ಟ ಸಲಹೆಗಳೇ ಕಾರಣ ಎಂದೂ ಅದಿತಿ ಹೇಳಿಕೊಂಡಿದ್ದಾಳೆ.