Tag: ಅದಾ ಶರ್ಮಾ

  • ತರಕಾರಿ ಮಾರಲು ರಸ್ತೆಗಿಳಿದ ಪುನೀತ್ ಚಿತ್ರದ ನಾಯಕಿ: ನಟಿಯ ಲುಕ್ ನೋಡಿ ಫ್ಯಾನ್ಸ್ ಶಾಕ್

    ತರಕಾರಿ ಮಾರಲು ರಸ್ತೆಗಿಳಿದ ಪುನೀತ್ ಚಿತ್ರದ ನಾಯಕಿ: ನಟಿಯ ಲುಕ್ ನೋಡಿ ಫ್ಯಾನ್ಸ್ ಶಾಕ್

    ಪುನೀತ್ ರಾಜ್‌ಕುಮಾರ್ ನಟನೆಯ `ರಣವಿಕ್ರಮ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ಅದಾ ಶರ್ಮಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಅದಾ ರಸ್ತೆ ಬದಿಯಲ್ಲಿ ತರಕಾರಿ ಮಾರುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ. ಪುನೀತ್ ಚಿತ್ರದ ನಾಯಕಿಯ ಅವತಾರ ನೋಡಿ ಫ್ಯಾನ್ಸ್ ದಂಗಾಗಿದ್ದಾರೆ.

    ಸದಾ ತನ್ನ ಬೋಲ್ಡ್ ಫೋಟೋಶೂಟ್ ಮೂಲಕ ಗಮನ ಸೆಳೆದಿರುವ ನಟಿ ಅದಾ ಶರ್ಮಾ ಈಗ ತಾವು ತರಕಾರಿ ಮಾರುತ್ತಿರುವ ಫೋಟೋ ಶೇರ್ ಮಾಡಿ, ಎಲ್ಲರನ್ನೂ ಅಚ್ಚರಿಪಡಿಸಿದ್ದಾರೆ. ಫುಟ್ ಪಾತ್‌ನಲ್ಲಿ ತರಕಾರಿ ಮಾರುತ್ತಿರುವ ಫೋಟೋ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ. ನಟಿಯ ಅವತಾರ ನೋಡಿ ಅದೇನಾಯ್ತಪ್ಪಾ ಅಂತಾ ಬೆರಗಾಗಿದ್ದಾರೆ.

    ಬಹುಭಾಷಾ ನಟಿಯಾಗಿ ಸದ್ದು ಮಾಡುತ್ತಿರುವ ಬೆಡಗಿ ಅದಾ ಶರ್ಮಾ, ತರಕಾರಿ ಮಾರುತ್ತಿರುವ ಈ ಫೋಟೋ ತಮ್ಮ ಮುಂದಿನ ಚಿತ್ರದ ಲುಕ್ ಆಗಿದೆ. ಈ ಫೋಟೋ ಜತೆ ಎಲೆಗಳಿಂದಲೇ ಡಿಸೈನ್ ಮಾಡಿಸಿರುವ ಡ್ರೆಸ್ ತೊಟ್ಟು ಬೋಲ್ಡ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ಶೇರ್ ಮಾಡುವುದರ ಜತೆಗೆ ಅಭಿಮಾನಿಗಳಿಗೆ ಸಂದೇಶ ಕೂಡ ನೀಡಿದ್ದಾರೆ. ಇದನ್ನೂ ಓದಿ:ಅವಳಿ ಮಕ್ಕಳಿಗೆ ತಾಯಿಯಾಗಲಿದ್ದಾರಾ ಆಲಿಯಾ: ರಣ್‌ಬೀರ್‌ ಕೊಟ್ರು ಬ್ರೇಕಿಂಗ್‌ ನ್ಯೂಸ್

     

    View this post on Instagram

     

    A post shared by Adah Sharma (@adah_ki_adah)

    ಸೊಪ್ಪಿನಲ್ಲಿ ಮೈಮುಚ್ಚಿಕೊಂಡಿರುವ ಫೋಟೋ ಶೇರ್ ಮಾಡಿ, ಫೋಟೋ ಜೊತೆಗೆ ಆದಾ ಶರ್ಮಾ ಈ ರೀತಿ ಬರೆದುಕೊಂಡಿದ್ದು, ತರಕಾರಿ ಬೆಲೆ ಏರಿಕೆಯಾಗಿದೆ ಎಂದು ಕೇಳಿದೆ. ಫ್ಯಾಶನ್ ಎಂದರೆ ಮೋಜು ಮಾಡುವುದು. ಆದರೆ ನೀವು ತಿನ್ನುವ ಪ್ರತಿಯೊಂದು ವಸ್ತುವನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಇದಲ್ಲದೇ ನನ್ನ ಫ್ಯಾಷನ್‌ಗೆ ಸ್ಪೂರ್ತಿ ನೇಚರ್, ಅಲ್ಲದೇ ಈ ಪ್ರಕೃತಿಯಲ್ಲಿ ಯಾವುದೂ ಪರಿಪೂರ್ಣವಲ್ಲ ಎಂದು ಬರೆದುಕೊಂಡಿದ್ದಾರೆ. ಇನ್ನು ಆದಾ ಶರ್ಮಾ ಹೊಸ ಫೋಟೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸೀರೆಯುಟ್ಟು ಕಾರ್ಟ್‍ವೀಲ್ ಫ್ಲಿಪ್ ಮಾಡಿದ ಅದಾ ಶರ್ಮಾ

    ಸೀರೆಯುಟ್ಟು ಕಾರ್ಟ್‍ವೀಲ್ ಫ್ಲಿಪ್ ಮಾಡಿದ ಅದಾ ಶರ್ಮಾ

    ಬೆಂಗಳೂರು: ಸೀರೆಯುಟ್ಟ ಅದಾ ಶರ್ಮಾ ಕಡಲ ತೀರದಲ್ಲಿ ಕಾರ್ಟ್‍ವೀಲ್ ಫ್ಲಿಪ್ ಮಾಡಿದ್ದಾರೆ. ಈ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

    ಹಾಟ್ ಫೋಟೋ ಶೂಟ್‍ಗಳಿಂದಲೇ ಸದಾ ಸುದ್ದಿಯಲ್ಲಿರುವ ನಟಿ ಅದಾ ಶರ್ಮಾ. ಇದೀಗ ಸಮುದ್ರದ ತಟದಲ್ಲಿ ಕಾರ್ಟ್‍ವೀಲ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಕಾರ್ಟ್‍ವೀಲ್ ಮಾಡಿರುವುದರಲ್ಲಿಯೂ ಒಂದು ವಿಶೇಷತೆ ಇದೆ. ಸೀರೆಯನ್ನು ತೊಟ್ಟು ಕಾರ್ಟ್‍ವೀಲ್ ಮಾಡಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮೆಚ್ಚುಗೆ ಮತ್ತು ಉತ್ತಮ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

    ಸದಾ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುವ ನಟಿಮಣಿಯರಲ್ಲಿ ಅದಾ ಶರ್ಮಾ ಕೊಂಚ ವಿಭಿನ್ನವಾಗಿದ್ದಾರೆ. ಇತ್ತೀಚೆಗೆ ಇವರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಹಾಟ್ ಫೋಟೋಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೆ ತಮ್ಮ ಲೆಟೆಸ್ಟ್ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆ ಫೋಟೋಗಳು ಸಖತ್ ವೈರಲ್ ಆಗಿದ್ದವು. ಫೋಟೋಗಳ ಜೊತೆಗೆ ತಮ್ಮ ವಿಭಿನ್ನವಾದ ವಿಡಿಯೋಗಳ ಮೂಲಕವೂ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

    ಅದಾ ಶರ್ಮಾ 16 ವರ್ಷದವರಿದ್ದಾಗಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. 2008ರಲ್ಲೇ ಅದಾ ಅವರ ಬಣ್ಣದ ಜಗತ್ತಿನ ಪಯಣ ಆರಂಭವಾಗಿತ್ತು. ವಿಕ್ರಂ ಭಟ್ ಅವರ ಸಿನಿಮಾ ಮೂಲಕ ಅದಾ ಬಾಲಿವುಡ್‍ಗೆ ಕಾಲಿಟ್ಟಿದ್ದಾರೆ. ಇದೀಗ ತಮ್ಮ ಉತ್ತಮ ನಟನೆಯ ಮೂಲಕವಾಗಿ ರಂಜಿಸುತ್ತಿದ್ದಾರೆ.

     

    View this post on Instagram

     

    A post shared by Adah Sharma (@adah_ki_adah)

    ತಮ್ಮ ಹಾಟ್ ಫೋಟೋಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುವ, ಈ ನಟಿ ತಮ್ಮ ಸಖತ್ ಡಿಫರೆಂಟ್ ಫಿಟ್ನೆಸ್ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ. ಈ ವೀಡಿಯೋ ನೋಡಿದ ಅಭಿಮಾನಿಗಳು ಮೆಚ್ಚಿ ಕಮೆಂಟ್‍ಗಳ ಸುರಿಮಳೆಗೈಯುತ್ತಿದ್ದಾರೆ.

  • ಟವೆಲ್ ಕಟ್ಟಿಕೊಂಡು ಸವಾಲ್ ಹಾಕಿದ ‘ರಣವಿಕ್ರಮ’ ಬೆಡಗಿ

    ಟವೆಲ್ ಕಟ್ಟಿಕೊಂಡು ಸವಾಲ್ ಹಾಕಿದ ‘ರಣವಿಕ್ರಮ’ ಬೆಡಗಿ

    ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುವ ನಟಿ ಅದಾ ಶರ್ಮಾ ಲಾಕ್‍ಡೌನ್‍ನಲ್ಲಿ ತಮ್ಮ ಅಭಿಮಾನಿಗಳಿಗೆ ಹೊಸ ಹೊಸ ಚಾಲೆಂಜ್ ಹಾಕಿ ಕೆಲಸ ಕೊಡುತ್ತಿದ್ದಾರೆ. ಅದರಲ್ಲೂ ಆಗಾಗ ಅವರು ಶೇರ್ ಮಾಡುವ ಹಾಟ್ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ.

    ಇತ್ತೀಚೆಗೆ ಪಾರ್ಟಿ ವಿಥ್ ಪಾಟಿ ಎಂದು ಸ್ಟೆಪ್ ಹಾಕಿದ್ದ ಅದಾ ಈಗ ಟವೆಲ್ ಕಟ್ಟಿಕೊಂಡು ಅಭಿಮಾನಿಗಳಿಗೆ ಸವಾಲ್ ಹಾಕಿದ್ದಾರೆ. ಹೌದು. ಟವೆಲ್ ಕಟ್ಟಿಕೊಂಡ ಅದಾ ಸಖತ್ ಹಾಟ್ ಪೋಸ್ ಕೊಟ್ಟಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಅದಾ ಶರ್ಮಾ, ಬಾತ್ ಟವೆಲ್ ಸುತ್ತಿಕೊಂಡು ಕಾಲಿನ ಎರಡು ಬೆರಳು ಒಂದು ಕಡೆ, ಉಳಿದ ಮೂರು ಬೆರಳು ಇನ್ನೊಂದು ಕಡೆ ಸ್ಪಿಲ್ಟ್ ಮಾಡಿದ್ದಾರೆ. ನೀವು ಹೀಗೆ ಮಾಡಬಲ್ಲಿರಾ ಅಂತ ಅಭಿಮಾನಿಗಳಿಗೆ ತಮ್ಮ ಫೋಟೋವನ್ನು ಶೇರ್ ಮಾಡಿ ಸವಾಲ್ ಹಾಕಿದ್ದಾರೆ.

    https://www.instagram.com/p/CAaPdjynYTa/

    ಆದರೆ ಅದಾ ಹಾಕಿರುವ ಸವಾಲಿಗಿಂತ ಅವರ ಬೋಲ್ಡ್ ಫೋಟೋಗಳೇ ನೆಟ್ಟಿಗರನ್ನು ಆಕರ್ಷಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೇ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅದಾ ಹೆಚ್ಚಾಗಿ ಹಾಟ್ ಫೋಟೋಗಳನ್ನೆ ಪೋಸ್ಟ್ ಮಾಡುತ್ತಿರುತ್ತಾರೆ. ಈ ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿರುತ್ತವೆ. ಜೊತೆಗೆ ಅದಾ ಅವರ ಹಲವು ವಿಡಿಯೋಗಳು ಕೂಡ ವೈರಲ್ ಆಗುತ್ತಲೇ ಇರುತ್ತದೆ.

    ಬಾಲಿವುಡ್‍ನ 1920 ಹಾರರ್ ಸಿನಿಮಾ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಅದಾ ಬಿಟೌನ್‍ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು ಚಿತ್ರಗಳಲ್ಲಿ ಕೂಡ ಅದಾ ನಟಿಸಿ ಮೋಡಿ ಮಾಡಿದ್ದಾರೆ. ಇತ್ತ ಸ್ಯಾಂಡಲ್‍ವುಡ್‍ನಲ್ಲಿ ಪವರ್ ಸ್ಟಾರ್ ಗೆ ಜೋಡಿ ಆಗಿ ರಣವಿಕ್ರಮ ಚಿತ್ರದಲ್ಲಿ ನಟಿಸಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಸದ್ಯ ಮ್ಯಾನ್ ಟು ಮ್ಯಾನ್ ಸಿನಿಮಾದಲ್ಲಿ ನಟಿ ಬ್ಯುಸಿಯಾಗಿದ್ದಾರೆ.

  • ಇನ್‍ಸ್ಟಾಗ್ರಾಂನಲ್ಲಿ ನಗ್ನ ಫೋಟೋ ಹಂಚಿಕೊಂಡ ರಣವಿಕ್ರಮ ಬೆಡಗಿ

    ಇನ್‍ಸ್ಟಾಗ್ರಾಂನಲ್ಲಿ ನಗ್ನ ಫೋಟೋ ಹಂಚಿಕೊಂಡ ರಣವಿಕ್ರಮ ಬೆಡಗಿ

    ಮುಂಬೈ: ‘ರಣವಿಕ್ರಮ’ ಚಿತ್ರದ ಬೆಡಗಿ ಅದಾ ಶರ್ಮಾ ತನ್ನ ಚಿತ್ರದ ಹೊಸ ಪ್ರಮೋಶನ್‍ಗಾಗಿ ಇನ್‍ಸ್ಟಾಗ್ರಾಂನಲ್ಲಿ ನಗ್ನ ಫೋಟೋ ಹಂಚಿಕೊಂಡಿದ್ದಾರೆ.

    ಅದಾ ಹಿಂದಿಯಲ್ಲಿ ‘ಮ್ಯಾನ್ ಟು ಮ್ಯಾನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಪ್ರಮೋಶನ್‍ಗಾಗಿ ಅವರು ನಗ್ನ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಅದಾ ನಕಲಿ ಮೀಸೆಯನ್ನು ಅಂಟಿಸಿಕೊಂಡಿದ್ದಾರೆ.

    ಅದಾ ಇನ್‍ಸ್ಟಾಗ್ರಾಂನಲ್ಲಿ ನಗ್ನ ಫೋಟೋ ಹಾಕಿ ಅದಕ್ಕೆ, “ನಾನು ನಿಮ್ಮ ಕನಸಿನ ಯುವಕನಾ? ಎಂದು ಅಭಿಮಾನಿಗಳನ್ನು ಪ್ರಶ್ನಿಸಿ, ಮ್ಯಾನ್ ಟು ಮ್ಯಾನ್ ನನ್ನ ಮುಂದಿನ ಹಿಂದಿ ಚಿತ್ರ. ನಾನು ನಟಿ ಆದಾಗ ನಾನು ಇಂತಹ ಪಾತ್ರ ನಿರ್ವಹಿಸುತ್ತೇನೆ ಎಂದು ನಾನು ಅಂದುಕೊಂಡಿರಲಿಲ್ಲ. ಇದೊಂದು ರೊಮ್ಯಾಂಟಿಕ್ ಚಿತ್ರ ಆಗಿದ್ದು, ವಿಭಿನ್ನ ಲವ್ ಸ್ಟೋರಿ ಚಿತ್ರದಲ್ಲಿದೆ. ಮಿಕ್ಕಿದ್ದು ನಿಮ್ಮ ಕಲ್ಪನೆಗೆ ಬಿಡುತ್ತೇನೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ಚಿತ್ರದಲ್ಲಿ ನವೀನ್ ಕಸ್ತೂರಿಯಾ ನಾಯಕನಾಗಿ ನಟಿಸುತ್ತಿದ್ದು, ನಿರ್ದೇಶಕ ಅಬೀರ್ ಸೆನ್‍ಗುಪ್ತಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅದಾ ಶರ್ಮಾ ತನ್ನ ಸಿನಿ ಜರ್ನಿಯಲ್ಲಿ ಮೊದಲ ಬಾರಿಗೆ ಪುರುಷನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

  • ಅವಾರ್ಡ್ ಕಾರ್ಯಕ್ರಮಕ್ಕೆ ನ್ಯೂಸ್‍ಪೇಪರ್ ಧರಿಸಿ ಬಂದ ರಣವಿಕ್ರಮ ನಟಿ!

    ಅವಾರ್ಡ್ ಕಾರ್ಯಕ್ರಮಕ್ಕೆ ನ್ಯೂಸ್‍ಪೇಪರ್ ಧರಿಸಿ ಬಂದ ರಣವಿಕ್ರಮ ನಟಿ!

    ಮುಂಬೈ: ರಣವಿಕ್ರಮ ಚಿತ್ರದ ನಾಯಕಿ ಅದಾ ಶರ್ಮಾ ಅವರು ನ್ಯೂಸ್‍ಪೇಪರ್ ಉಡುಪು ಧರಿಸಿ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

    ಮುಂಬೈನಲ್ಲಿ ನಡೆದ ನೈಕಾ ಫೆಮಿನಾ ಬ್ಯೂಟಿ ಅವಾರ್ಡ್ ಕಾರ್ಯಕ್ರಮದಲ್ಲಿ ನಟಿ ಅದಾ ಶರ್ಮಾ ನ್ಯೂಸ್ ಪೇಪರ್ ಪ್ರಿಂಟ್ ಇರುವ ಗೌನ್ ಧರಿಸಿ ಹೋಗಿದ್ದರು. ಈ ಗೌನ್ ಅನ್ನು ಫ್ಯಾಶನ್ ಸ್ಟೈಲಿಸ್ಟ್ ಆದ ಜೂಹಿ ಅಲಿ ಜೊತೆ ಸೇರಿ ಸ್ವತಃ ಅದಾ ಅವರೇ ವಿನ್ಯಾಸ ಮಾಡಿದ್ದರು.

     

    View this post on Instagram

     

    I’m in the news ???? #nykafeminabeautyawards #nfba2019

    A post shared by Adah Sharma (@adah_ki_adah) on

    ಅದಾ ಕಾರ್ಯಕ್ರಮದಲ್ಲಿ ಧರಿಸಿದ್ದ ಈ ಉಡುಪನ್ನು ನೋಡಿ ಸಾಕಷ್ಟು ಜನ ಫಿದಾ ಆಗಿದ್ದಾರೆ. ಅದಾ ಶರ್ಮಾ ಅವರು ತಾವು ನ್ಯೂಸ್ ಪೇಪರ್ ಗೌನ್ ಧರಿಸಿದ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದ್ದು, 1 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ.

    ಅದಾ ಕನ್ನಡದಲ್ಲಿ ರಣವಿಕ್ರಮ ಚಿತ್ರದಲ್ಲಿ ನಟಿಸಿದ್ದರು. ಈಗ ಅವರು ಹಿಂದಿಯ ‘ಕಮಾಂಡೋ-3’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ಅದಾ ತಮಿಳಿನಲ್ಲಿ ನಟ ಪ್ರಭುದೇವ ಅವರ ‘ಚಾರ್ಲಿ ಚಾಪ್ಲಿನ್ 2’ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.

     

    View this post on Instagram

     

    Tag someone who would wear a newspaper dress???????? Last night for #nfba2019 . . Swipe swipe swipe ????

    A post shared by Adah Sharma (@adah_ki_adah) on

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತರಕಾರಿ ವ್ಯಾಪಾರ ಮಾಡೋ ಪರಿಸ್ಥಿತಿಗೆ ಬಂದ ರಣವಿಕ್ರಮ ಬೆಡಗಿ- ಫೋಟೋ ವೈರಲ್

    ತರಕಾರಿ ವ್ಯಾಪಾರ ಮಾಡೋ ಪರಿಸ್ಥಿತಿಗೆ ಬಂದ ರಣವಿಕ್ರಮ ಬೆಡಗಿ- ಫೋಟೋ ವೈರಲ್

    ಮುಂಬೈ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೊತೆ ‘ರಣವಿಕ್ರಮ’ ಚಿತ್ರದಲ್ಲಿ ನಟಸಿದ ನಟಿ ಅದಾ ಶರ್ಮಾ ಇಂದು ತರಕಾರಿ ಮಾರಾಟ ಮಾಡುವ ಪರಿಸ್ಥಿತಿಗೆ ಬಂದಿದ್ದಾರೆ!

    ನಟಿ ಅದಾ ಶರ್ಮಾ ತರಕಾರಿ ಮಾರುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದಾ ಶರ್ಮಾ ಅವರ ಈ ಫೋಟೋ ನೋಡಿ ಅಭಿಮಾನಿಗಳು ಕೂಡ ದಂಗಾಗಿದ್ದಾರೆ. ಅದಾ ಶರ್ಮಾ ಅವರನ್ನು ಈ ಫೋಟೋದಲ್ಲಿ ಕಂಡು ಹಿಡಿಯುವುದು ಅಭಿಮಾನಿಗಳಿಗೆ ಸ್ವಲ್ಪ ಕಷ್ಟವಾಗಿದೆ.

    ಫೋಟೋದಲ್ಲಿ ಅದಾ ಶರ್ಮಾ ಹಳೆಯ ಸೀರೆ ಹಾಕಿ ತರಕಾರಿ ಮಾರುತ್ತಿದ್ದಾರೆ. ತರಕಾರಿ ಮಾರುವವರ ರೀತಿಯಲ್ಲೇ ಅದಾ ಕೂಡ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕೂತುಹಲ ಮೂಡಿದೆ.

    ಶೀಘ್ರದಲ್ಲೇ ಅದಾ ಹಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಲಿವುಡ್ ಚಿತ್ರಕ್ಕಾಗಿ ಅದಾ ಲುಕ್ ಟೆಸ್ಟ್ ಮಾಡುವ ಸಲುವಾಗಿ ತರಕಾರಿ ಮಾರುವ ಮಹಿಳೆಯ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಅದಾ ಮುಗ್ಧ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ.

    ಅದಾ 2008ರಲ್ಲಿ ‘1920’ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ನಂತರ ಕಳೆದ ವರ್ಷ ‘ಕಮಾಂಡೋ 2’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 10 ವರ್ಷದ ಬಾಲಿವುಡ್ ಸಿನಿಮಾ ಬದುಕಿನಲ್ಲಿ ಅದಾ ಕೇವಲ 5 ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು ಚಿತ್ರದಲ್ಲಿ ನಟಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ತಮ್ಮ ಡ್ಯಾನ್ಸ್ ವಿಡಿಯೋ ಹಾಗೂ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುವ ಅದಾ ಕೆಲ ದಿನಗಳ ಹಿಂದೆ ತಮ್ಮ ಕೂದಲಿಗೆ ಹೊಸ ಲುಕ್ ಕೂಡ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಜ್ಜಿ ಜೊತೆ ಸೊಂಟ ಬಳುಕಿಸಿ ಒಂದೇ ದಿನದಲ್ಲಿ 13.14 ಲಕ್ಷ ವ್ಯೂ ಗಳಿಸಿದ ರಣವಿಕ್ರಮ ನಟಿ: ವಿಡಿಯೋ ವೈರಲ್!

    ಅಜ್ಜಿ ಜೊತೆ ಸೊಂಟ ಬಳುಕಿಸಿ ಒಂದೇ ದಿನದಲ್ಲಿ 13.14 ಲಕ್ಷ ವ್ಯೂ ಗಳಿಸಿದ ರಣವಿಕ್ರಮ ನಟಿ: ವಿಡಿಯೋ ವೈರಲ್!

    ಮುಂಬೈ: ಬಾಲಿವುಡ್ ಬೆಡಗಿ ಅದಾ ಶರ್ಮಾ ಇನ್‍ಸ್ಟಾಗ್ರಾಂನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದು, ಇತ್ತೀಚಿಗೆ ತನ್ನ ಅಜ್ಜಿ ಜೊತೆ ಸೊಂಟ ಬಳುಕಿಸುತ್ತಿರುವ ವಿಡಿಯೋವೊಂದನ್ನು ಹಾಕಿದ್ದಾರೆ.

    ವಿಡಿಯೋದಲ್ಲಿ ಅದಾ ಜೊತೆಗೆ ಅವರ ಸ್ಪೆಷಲ್ ಪಾರ್ಟ್ ನರ್ ಅಜ್ಜಿ ಕೂಡ ಸೆಪ್ಸ್ ಹಾಕಿದ್ದಾರೆ. ‘ಸೋನು ಕೇ ಟೀಟು ಕಿ ಸ್ವೀಟು’ ಹಾಡಿಗೆ ಅಜ್ಜಿ ಮೊಮ್ಮಗಳು ಈ ಪಾರ್ಟಿ ಹಾಡಿಗೆ ಕುಣಿದಿದ್ದಾರೆ. ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್, ಸನ್ನಿ ಸಿಂಗ್ ಹಾಗೂ ಸುಸ್ರತ್ ಬರುಚಾ ಅಭಿನಯಿಸಿದ್ದಾರೆ.

    ಅದಾ ಈ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅದಕ್ಕೆ, “ನಿಮ್ಮ ಡ್ಯಾನ್ಸ್ ಪಾರ್ಟ್ ನರ್ ಗೆ ಟ್ಯಾಗ್ ಮಾಡಿ. ನನ್ನ ಡ್ಯಾನ್ಸ್ ಪಾರ್ಟ್ ನರ್ ನನ್ನ ಅಜ್ಜಿ ಎಂದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು ಅದಾ ಅವರ ತಾಯಿ ಚಿತ್ರೀಕರಿಸಿದ್ದು, ಒಂದೇ ದಿನದಲ್ಲಿ ಈ ವಿಡಿಯೋ ಇನ್‍ಸ್ಟಾಗ್ರಾಂನಲ್ಲಿ 13.14 ಲಕ್ಷ ವ್ಯೂ ಗಳಿಸಿದೆ.

    ಅದಾ 1920 ಚಿತ್ರಕ್ಕೆ ಬೆಸ್ಟ್ ಫೀಮೇಲ್ ಫಿಲ್ಮಂ ಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೇ ದಕ್ಷಿಣ ಭಾರತದ ತೆಲುಗು ಹಾಗೂ ಕನ್ನಡದ ಚಿತ್ರದಲ್ಲಿ ನಟಿಸಿದ್ದರು. ನಂತರ ಮತ್ತೆ 2017ರಲ್ಲಿ ‘ಕಮಾಂಡೋ 2’ ಚಿತ್ರದಲ್ಲಿ ವಿದ್ಯತ್ ಜಮ್ಮಾವಲ್ ಜೊತೆ ನಟಿಸಿದ್ದರು. ಇದನ್ನೂ ಓದಿ: ಟವಲ್ ಸುತ್ತಿಕೊಂಡು ಸೆಕ್ಸಿ ಡ್ಯಾನ್ಸ್ ಮಾಡಲು ಹೋಗಿ ಎಡವಟ್ಟು ಮಾಡ್ಕೊಂಡ ನಟಿ!