Tag: ಅದಮ್‌ಪುರ ವಾಯುನೆಲೆ

  • ಅದಮ್‌ಪುರದಲ್ಲಿ ಮೋದಿ ವಿಜಯೋತ್ಸವ – ಈ ವಾಯುನೆಲೆಗೆ ಮೋದಿ ಭೇಟಿ ನೀಡಿದ್ದು ಯಾಕೆ?

    ಅದಮ್‌ಪುರದಲ್ಲಿ ಮೋದಿ ವಿಜಯೋತ್ಸವ – ಈ ವಾಯುನೆಲೆಗೆ ಮೋದಿ ಭೇಟಿ ನೀಡಿದ್ದು ಯಾಕೆ?

    ನವದೆಹಲಿ: ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಯ ವಿಜಯೋತ್ಸವವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಪಂಜಾಬ್‌ನ ಅದಮ್‌ಪುರ ಏರ್‌ಬೇಸ್‌ಗೆ (Adampur Air Base) ಭೇಟಿ ನೀಡಿ ಸೈನಿಕರ ಜೊತೆ ಆಚರಿಸಿದ್ದಾರೆ.

    ಮೋದಿ ಅವರು ಅದಮ್‌ಪುರಕ್ಕೆ ಭೇಟಿ ನೀಡಲು ಕಾರಣವೂ ಇದೆ. ಕಳೆದ ವಾರ ಪಾಕಿಸ್ತಾನ (Pakistan) ಡ್ರೋನ್‌ಗಳು ಮತ್ತು ಕ್ಷಿಪಣಿ ಮೂಲಕ ಅದಮ್‌ಪುರವನ್ನು ಗುರಿಯಾಗಿಸಿ ಭಾರೀ ಪ್ರಮಾಣದಲ್ಲಿ ದಾಳಿ ನಡೆಸುತ್ತಿತ್ತು. ಇದನ್ನೂ ಓದಿ: ಹ್ಯಾಂಗರ್ಸ್‌ ನಾಶ, ರನ್‌ವೇಗಳಿಗೆ ಹಾನಿ – ಪಾಕ್‌ ದುಸ್ಥಿತಿ ಉಪಗ್ರಹ ಚಿತ್ರಗಳಲ್ಲಿ ಬಹಿರಂಗ

     

    ದಾಳಿ ನಡೆಸಿದ ಬಳಿಕ ಪಾಕ್‌ ಜೆಎಫ್‌ 17 ಯುದ್ಧ ವಿಮಾನದ ಮೂಲಕ ಅದಮ್‌ಪುರ ವಾಯುನೆಲೆಯ ಮೇಲೆ ದಾಳಿ ನಡೆಸಿದ್ದೇವೆ. ಅಷ್ಟೇ ಅಲ್ಲದೇ ಅಲ್ಲಿ ನಿಯೋಜನೆಗೊಂಡಿದ್ದ ರಷ್ಯಾ ನಿರ್ಮಿತ S-400 ವಾಯು ರಕ್ಷಣಾ ವ್ಯವಸ್ಥೆ ಧ್ವಂಸ ಮಾಡಿದ್ದೇವೆ ಎಂದು ಹೇಳಿಕೊಂಡಿತ್ತು. ಈ ಸುಳ್ಳು ಆರೋಪ ನಿಜವೆಂದು ಭಾವಿಸಿ ವಿದೇಶಿ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಭಾರತ ಈ ಆರೋಪವನ್ನು ಅಲ್ಲಗೆಳೆದಿದ್ದರೂ ಪಾಕ್‌ ಹೇಳಿದ್ದೇ ನಿಜ ಎಂಬಂತೆ ವರದಿಯಾಗುತ್ತಿತ್ತು. ಈ ಕಾರಣಕ್ಕೆ ಪಾಕ್‌ ಆರೋಪ ಸುಳ್ಳು ಎಂದು ಸಾಬೀತು ಪಡಿಸಲು ಮೋದಿ ಅವರು ಈ ವಾಯುನೆಲೆಗೆ ಭೇಟಿ ನೀಡಿ ಸೈನಿಕರ ಜೊತೆ ವಿಜಯೋತ್ಸವ ಆಚರಿಸಿದರು.  ಇದನ್ನೂ ಓದಿ: ಪಾಕ್ ಮತ್ತೆ ದಾಳಿ ಮಾಡಿದ್ರೆ ಭಾರತ ನುಗ್ಗಿ ಹೊಡೆಯುತ್ತೆ: ಮೋದಿ

    ಅದಮ್‌ಪುರ ವಾಯುನೆಲೆ ಮತ್ತು ರನ್‌ವೇ ಎಲ್ಲವೂ ಸುರಕ್ಷಿತವಾಗಿದೆ.ಅಷ್ಟೇ ಅಲ್ಲದೇ ಎಸ್‌-400 ಸುದರ್ಶನ ಚಕ್ರವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ವಿಚಾರವನ್ನು ವಿಶ್ವಕ್ಕೆ ತಿಳಿಸಲು ಮೋದಿ ಈ ವಾಯುನೆಲೆಗೆ ಭೇಟಿ ನೀಡಿದ್ದರು. ಮೋದಿ ಅವರು ಭಾಷಣ ಮಾಡುವಾಗಲೂ ಎಸ್‌-400 ಹಿಂದಿನಿಂದ ಸ್ಪಷ್ಟವಾಗಿ ಕಾಣುತ್ತಿತ್ತು.

    ಭಾರತದ 2ನೇ ಅತಿದೊಡ್ಡ ಏರ್‌ಬೇಸ್ ಅದಮ್‌ಪುರ ಆಗಿದ್ದು ಪಂಜಾಬ್, ರಾಜಸ್ಥಾನ, ಜಮ್ಮು ಕಾಶ್ಮೀರವನ್ನು ರಕ್ಷಣೆ ಮಾಡುತ್ತದೆ. ಪಾಕ್‌ ಗಡಿಯಿಂದ 100 ಕಿ.ಮೀ. ದೂರದಲ್ಲಿರುವ ಅದಮ್‌ಪುರ 1965ರ ಪಾಕ್ ವಿರುದ್ಧದ ಯುದ್ಧದಲ್ಲೂ ಈ ಏರ್‌ಬೇಸ್ ಅಭೇದ್ಯವಾಗಿತ್ತು.

    ಆಪರೇಷನ್ ಸಿಂಧೂರಕ್ಕೆ ಆದಮ್‌ಪುರ ಏರ್‌ಬೇಸ್ ಬಳಕೆ ಮಾಡಲಾಗಿತ್ತು. ಪಾಕ್ ಕಳಹಿಸುತ್ತಿದ್ದ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಈ ಜಾಗದಿಂದಲೇ ಕಾರ್ಯಾಚರಣೆ ನಡೆಸಿ ಆಕಾಶದಲ್ಲೇ ಧ್ವಂಸ ಮಾಡಲಾಗುತ್ತಿತ್ತು. ಈ ಏರ್‌ಬೇಸ್ ಸುಖೋಯ್ 7, ಮಿಗ್ 21 ಫೈಟರ್‌ಜೆಟ್‌ಗಳ ತಾಣವಾಗಿದೆ. ಮಿಸೈಲ್, ರಾಡಾರ್ ಘಟಕವನ್ನೂ ಆದಮ್‌ಪುರ ಏರ್‌ಬೇಸ್ ಹೊಂದಿದೆ. S-400 `ಸುದರ್ಶನ ಚಕ್ರ’ವನ್ನು 2022ರಲ್ಲಿ ಇಲ್ಲಿಗೆ ನಿಯೋಜಿಸಲಾಗಿತ್ತು.

  • ಪಾಕ್ ಮತ್ತೆ ದಾಳಿ ಮಾಡಿದ್ರೆ ಭಾರತ ನುಗ್ಗಿ ಹೊಡೆಯುತ್ತೆ: ಮೋದಿ

    ಪಾಕ್ ಮತ್ತೆ ದಾಳಿ ಮಾಡಿದ್ರೆ ಭಾರತ ನುಗ್ಗಿ ಹೊಡೆಯುತ್ತೆ: ಮೋದಿ

    – S400 ಕ್ಷಿಪಣಿ ವ್ಯವಸ್ಥೆ ಮುಂದೆ ನಿಂತು ಪ್ರಧಾನಿ ಭಾಷಣ

    ಛತ್ತೀಸಗಢ: ಭಯೋತ್ಪಾದನೆ ವಿರುದ್ಧ ಭಾರತದ ಲಕ್ಷ್ಮಣ ರೇಖೆ ಸ್ಪಷ್ಟ, ಪಾಕಿಸ್ತಾನದಿಂದ ಮತ್ತೆ ದಾಳಿ ನಡೆದರೆ ಭಾರತ ನುಗ್ಗಿ ಹೊಡೆಯುತ್ತದೆ ಎಂದು ಪ್ರಧಾನಿ ಮೋದಿ (PM Modi) ಮತ್ತೆ ನೇರಾನೇರ ಎಚ್ಚರಿಕೆ ನೀಡಿದ್ದಾರೆ.

    ಭಾರತ (India) ಮತ್ತು ಪಾಕಿಸ್ತಾನ (Pakistan) ನಡುವೆ ಕದನ ವಿರಾಮ ಘೋಷಣೆಯಾದ ಬಳಿಕ ಇಂದು ಮೋದಿ ಪಂಜಾಬ್‌ನ ಅದಮ್‌ಪುರ ವಾಯುನೆಲೆಗೆ (Adampur Airbase)  ಭೇಟಿ ನೀಡಿ ಸೈನಿಕರೊಂದಿಗೆ ಸಂವಾದ ನಡೆಸಿದರು.ಇದನ್ನೂ ಓದಿ: Photo Gallery: ‘ಆಪರೇಷನ್‌ ಸಿಂಧೂರ’ ವೀರರನ್ನು ಭೇಟಿಯಾದ ಪಿಎಂ ಮೋದಿ

    ಭಯೋತ್ಪಾದನೆಯ ವಿರುದ್ಧ ಭಾರತದ ಲಕ್ಷ್ಮಣ ರೇಖೆ ಈಗ ಸ್ಪಷ್ಟವಾಗಿದೆ. ಒಂದು ವೇಳೆ ಪಾಕಿಸ್ತಾನ ಮತ್ತೊಂದು ದಾಳಿ ನಡೆಸಿದರೆ, ಭಾರತವು ತಕ್ಕ ಉತ್ತರ ನೀಡುತ್ತದೆ. `ಆಪರೇಷನ್ ಸಿಂಧೂರ’ದಿಂದ (Operation Sindoor) ನೀವೆಲ್ಲ ಇತಿಹಾಸವನ್ನು ಸೃಷ್ಟಿಸಿದ್ದೀರಿ. ಪ್ರತಿಯೊಬ್ಬ ಭಾರತೀಯನೂ ನಿಮ್ಮ ಈ ಯಶಸ್ಸಿನಿಂದಾಗಿ ಹೆಮ್ಮೆಪಡುತ್ತಾರೆ. ನೀವು ಯಾವುದೇ ಗುರಿಯನ್ನು ತಲುಪಿದಾಗಲೂ ಕೇಳಿಬರುವುದು ಒಂದೇ ಅದು `ಭಾರತ್ ಮಾತಾ ಕಿ ಜೈ’, ಇದು ಕೇವಲ ಘೋಷ ವಾಕ್ಯವಲ್ಲ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡುವ ಸೈನಿಕರ ಧ್ವನಿ, ಭಾರತದ ನೆಲದ ಮೇಲೆ, ಕಾರ್ಯಾಚರಣೆಯ ವೇಳೆ ಇದು ಯಾವಾಗಲೂ ಪ್ರತಿಧ್ವನಿಸುತ್ತಿರುತ್ತದೆ. ಇಂದು ನಾನು ನಿಮ್ಮನ್ನು ನೋಡಲು ಇಲ್ಲಿಗೆ ಬಂದಿದ್ದೇನೆ. ನಿಮ್ಮಂತಹ ಧೈರ್ಯಶಾಲಿಗಳನ್ನು ಕಣ್ತುಂಬಿಕೊಳ್ಳುವುದೇ ನಮ್ಮೆಲ್ಲರಿಗೆ ಆಶೀರ್ವಾದ ಎಂದು ಹೇಳಿದರು.

    ಆಪರೇಷನ್ ಸಿಂಧೂರ್ ಇದೊಂದು ಸಾಮಾನ್ಯ ಕಾರ್ಯಾಚರಣೆಯಲ್ಲ. ಇದು ಇಡೀ ದೇಶದ ನಿರ್ಣಯ ಹಾಗೂ ದೃಢ ನಿರ್ಧಾರದ ಬಗ್ಗೆ ತೋರಿಸುತ್ತದೆ. ನಮ್ಮ ಉದ್ದೇಶ ಸ್ಪಷ್ಟವಾಗಿದೆ, ಒಂದು ವೇಳೆ ಇನ್ನೊಂದು ದಾಳಿ ನಡೆದರೆ ಭಾರತ ಖಂಡಿತವಾಗಿ ಸೇಡು ತೀರಿಸಿಕೊಳ್ಳುತ್ತದೆ. ಭಾರತೀಯ ಸೇನೆ ಕೇವಲ ಉಗ್ರರು ನೆಲೆಗಳನ್ನು ನಾಶ ಮಾಡಿಲ್ಲ, ಅವರ ದುಷ್ಟ ಉದ್ದೇಶಗಳನ್ನು ಹೊಡೆದು ಹಾಕಿದ್ದಾರೆ ಎಂದರು.

    ನಮ್ಮ ಉದ್ದೇಶ ಭಯೋತ್ಪಾದಕ ನೆಲೆಗಳು ಹಾಗೂ ಪಾಕಿಸ್ತಾನದೊಳಗಿನ ಭಯೋತ್ಪಾದಕರ ಮೇಲೆ ದಾಳಿ ಮಾಡುವುದು. ಆದರೆ ಪಾಕಿಸ್ತಾನ ನಾಗರಿಕ ವಿಮಾನಗಳನ್ನು ಗುರಾಣಿಯಾಗಿ ಬಳಸಿಕೊಂಡು ಹೇಯಕೃತ್ಯ ನಡೆಸಿತ್ತು. ಆದರೆ ನಾಗರಿಕ ವಿಮಾನಗಳಿಗೆ ಹಾನಿ ಮಾಡದೇ ನೀವು ನಿಮ್ಮ ಗುರಿಯನ್ನು ಸಾಧಿಸಿದ್ದೀರಿ ಎಂದು ನನಗೆ ಹೆಮ್ಮೆ ಇದೆ ಎಂದು ಹೇಳಿದರು.

    ಅದಮ್‌ಪುರ ವಾಯುನೆಲೆಯನ್ನು ನಾವು ಧ್ವಂಸ ಮಾಡಿದ್ದೇವೆ. ಎಸ್ 400 ಕ್ಷಿಪಣಿ ವ್ಯವಸ್ಥೆಗೆ ಹಾನಿ ಮಾಡಿದ್ದೇವೆ ಎಂದು ಪಾಕಿಸ್ತಾನ ಹೇಳಿತ್ತು. ಆದರೆ ಇಂದು ಮೋದಿ ಅದಮ್‌ಪುರ ವಾಯುನೆಲೆಗೆ ಭೇಟಿ ನೀಡುವುದರ ಜೊತೆ ಹಿಂದುಗಡೆ ಎಸ್ 400 ಕ್ಷಿಪಣಿ ವ್ಯವಸ್ಥೆ ಮುಂದೆ ನಿಂತು ಭಾಷಣ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.ಇದನ್ನೂ ಓದಿ: ಹ್ಯಾಂಗರ್ಸ್‌ ನಾಶ, ರನ್‌ವೇಗಳಿಗೆ ಹಾನಿ – ಪಾಕ್‌ ದುಸ್ಥಿತಿ ಉಪಗ್ರಹ ಚಿತ್ರಗಳಲ್ಲಿ ಬಹಿರಂಗ