Tag: ಅಥ್ಲೀಟ್

  • ಕೇವಲ 1 ಗಂಟೆಯಲ್ಲಿ 3,182 ಪುಷ್‌-ಅಪ್‌ ಮಾಡಿ ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ಮಾಡಿದ ಭೂಪ!

    ಕೇವಲ 1 ಗಂಟೆಯಲ್ಲಿ 3,182 ಪುಷ್‌-ಅಪ್‌ ಮಾಡಿ ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ಮಾಡಿದ ಭೂಪ!

    ಕ್ಯಾನ್‌ಬೆರ್ರಾ: ಆಸ್ಟ್ರೇಲಿಯಾದ ಅಥ್ಲೀಟ್ ಒಬ್ಬರು ಕೇವಲ ಒಂದು ಗಂಟೆಯಲ್ಲಿ 3,182 ಪುಷ್‌-ಅಪ್‌ಗಳನ್ನು ಮಾಡಿ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ. ತಮ್ಮ ವಿಶಿಷ್ಟ ಸಾಧನೆ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಕಳೆದ ಏಪ್ರಿಲ್‌ನಲ್ಲಿ ಅಥ್ಲೀಟ್‌ ಸ್ಕಾಲಿ ಕೇವಲ ಒಂದು ಗಂಟೆಯಲ್ಲಿ 3,182 ಪುಷ್-ಅಪ್‌ಗಳನ್ನು ಮಾಡಿ ದಾಖಲೆ ಬರೆದಿದ್ದಾರೆ. 2021 ರಲ್ಲಿ ಆಸ್ಟ್ರೇಲಿಯನ್ ಜರಾಡ್ ಯಂಗ್ ಅವರು ಗಂಟೆಗೆ 3,054 ಪುಷ್‌-ಅಪ್‌ಗಳನ್ನು ಮಾಡಿ ದಾಖಲೆ ಬರೆದಿದ್ದರು. ಈಗ ಸ್ಕಾಲಿ ಆ ದಾಖಲೆಯನ್ನು ಮುರಿದಿದ್ದಾರೆ ಎಂದು ಜಿಡಬ್ಲ್ಯೂಆರ್‌ ತಿಳಿಸಿದೆ. ಇದನ್ನೂ ಓದಿ: ಸೈಕಲ್‌ನಿಂದ ಬಿದ್ದ ವಿಶ್ವದ ದೊಡ್ಡಣ್ಣ

    GWR ಶುಕ್ರವಾರ ತನ್ನ ಅಧಿಕೃತ ಯೂಟ್ಯೂಬ್‌ ಹ್ಯಾಂಡಲ್‌ನಲ್ಲಿ ವೀಡಿಯೋವನ್ನು ಹಂಚಿಕೊಂಡಿದೆ. ಇದರಲ್ಲಿ ಸ್ಕಾಲಿ ಅವರು ತಮ್ಮ ಜೀವನ ಮತ್ತು ಸಾಧನೆ ಕುರಿತು ಹೇಳಿಕೊಂಡಿದ್ದಾರೆ.

    ಸ್ಕಾಲಿ ತನ್ನ 12 ನೇ ವಯಸ್ಸಿನಲ್ಲಿ ಬಿದ್ದು ಕೈ ಮುರಿದುಕೊಂಡಿದ್ದರು. ಆಗಿನಿಂದ ಸಿಆರ್‌ಪಿಎಸ್‌ (ಕಾಂಪ್ಲೆಕ್ಸ್ ರೀಜನಲ್ ಪೇಯ್ನ್‌ ಸಿಂಡ್ರೋಮ್) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗುಣಪಡಿಸಲಾಗದ ನೋವಿನಿಂದಾಗಿ ಅವರು ಆಗಾಗ್ಗೆ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ಚಿಕಿತ್ಸೆ ಕೂಡ ಪಡೆದುಕೊಳ್ಳುತ್ತಿದ್ದಾರೆ ಎಂದು GWR ತಿಳಿಸಿದೆ.

    Live Tv

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತ ಅಥ್ಲೀಟ್ ಪೂವಮ್ಮ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತ ಅಥ್ಲೀಟ್ ಪೂವಮ್ಮ

    ಮಂಗಳೂರು: ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತೆ ಹಾಗೂ ಕರ್ನಾಟಕದ ಅಥ್ಲೀಟ್ ಮಚ್ಚೆಟ್ಟಿರ ರಾಜು ಪೂವಮ್ಮ ಕೇರಳದ ಅಥ್ಲೀಟ್ ಜಿತಿನ್ ಪೌಲ್ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

    ಮಂಗಳೂರು ಹೊರವಲಯದ ಅಡ್ಯಾರ್ ಗಾರ್ಡನ್‍ನ ವಿ.ಕೆ.ಶೆಟ್ಟಿ ಅಡಿಟೋರಿಯಂನಲ್ಲಿ ಕೊಡವ ಸಂಪ್ರದಾಯದಂತೆ ಮದುವೆ ನೆರವೇರಿತು. ಪೂವಮ್ಮ ಅವರ ತಂದೆ ಮಚ್ಚೆಟ್ಟಿರ ಜಿ. ತಮ್ಮಯ್ಯ (ರಾಜು), ತಾಯಿ ಜಾನಕಿ (ಜಾಜಿ), ಜಿತಿನ್ ಪೌಲ್ ಅವರ ತಾಯಿ ಜಾನ್ಸಿ ಸೇರಿದಂತೆ ಕುಟುಂಬದವರು, ಬಂಧುಮಿತ್ರರು ಸ್ನೇಹಿತರು ಈ ವೇಳೆ ಉಪಸ್ಥಿತರಿದ್ದರು. ಇದನ್ನೂ ಓದಿ: ಬೌಲರ್‌ಗಳ ಮೇಲಾಟ – ಒಂದೇ ದಿನ 18 ವಿಕೆಟ್ ಪತನ

    ಜನವರಿ 1 ರಂದು ಕೇರಳದ ತ್ರಿಶ್ಶೂರ್‌ನಲ್ಲಿ ಮತ್ತೊಂದು ಕಾರ್ಯಕ್ರಮ ಜರುಗಲಿದೆ. ಇದೀಗ ಪೂವಮ್ಮ ಮತ್ತು ಜಿತಿನ್ ಕ್ರೀಡಾ ದಂಪತಿಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ. ಕೊಡಗು ಮೂಲಕ 31 ವರ್ಷದ ಪೂವಮ್ಮ 2014ರ ಇಂಚೋನ್ ಏಷ್ಯಾಡ್‍ನಲ್ಲಿ 1 ಚಿನ್ನ, 1 ಕಂಚು ಮತ್ತು 2018ರ ಜಕಾರ್ತ್ ಏಷ್ಯಾಡ್‍ನಲ್ಲಿ 2 ಚಿನ್ನ ಜಯಿಸಿದ್ದರು. ಇದನ್ನೂ ಓದಿ: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಪಾಂಡ್ಯ ದಂಪತಿ

    ಪೂವಮ್ಮ ಒಲಿಂಪಿಕ್ಸ್‌ನಲ್ಲಿ 2 ಬಾರಿ ಮತ್ತು ಅಂತರಾಷ್ಟ್ರೀಯ ಅಥ್ಲೀಟ್ ಕೂಟದಲ್ಲಿ 4 ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಜಿತಿನ್ ಪೌಲ್ 400 ಮೀಟರ್ ಅಡೆತಡೆ ಓಟದ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿದ್ದು, ಏಷ್ಯನ್ ಗೇಮ್ಸ್ ಮತ್ತು ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

  • ಪ್ಯಾರಾ ಒಲಿಂಪಿಕ್ ಪದಕ ವಿಜೇತ ಗಿರೀಶ್ ಗೆ ನಿಶ್ಚಿತಾರ್ಥ

    ಪ್ಯಾರಾ ಒಲಿಂಪಿಕ್ ಪದಕ ವಿಜೇತ ಗಿರೀಶ್ ಗೆ ನಿಶ್ಚಿತಾರ್ಥ

    ಹಾಸನ: ಪ್ಯಾರಾ ಒಲಿಂಪಿಕ್ ಅಥ್ಲೀಟ್ ಎಚ್ ಎನ್ ಗಿರೀಶ್ ಅವರಿಗೆ ಇಂದು ನಿಶ್ಚಿತಾರ್ಥ ಸಂಭ್ರಮ.

    ಹೌದು. ಹಾಸನದ ತನ್ವಿ ತ್ರಿಶಾ ಕಲ್ಯಾಣ ಮಂಟಪದಲ್ಲಿ ಗಿರೀಶ್ ಇಂದು ಮೈಸೂರಿನ ಸಹನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಗಿರೀಶ್ ಅವರು 2012ರಲ್ಲಿ ಲಂಡನ್ ನಲ್ಲಿ ನಡೆದ ಎತ್ತರ ಜಿಗಿತದಲ್ಲಿ 1.74 ಮೀ ಎತ್ತರಕ್ಕೆ ಜಿಗಿದು ರಜತ ಪದಕ ಗೆದ್ದಿದ್ದರು. ಭಾರತದಲ್ಲೇ ಮೊದಲ ಬಾರಿಗೆ ಈ ವಿಭಾಗದಲ್ಲಿ ಪದಕ ಪಡೆದ ಗಿರೀಶ್ ಹೊಸನಗರ ನಾಗರಾಜೇ ಗೌಡ ಅವರಿಗೆ ಅಭಿನಂದನೆಗಳು ಅಂತ ಅಂದು ಗುಜುರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಟ್ವೀಟ್ ಮಾಡಿ ಶುಭಾಶಯ ಹೇಳಿದ್ದರು.

    ಗಿರೀಶ್ ಅವರಿಗೆ 2012ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2013ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿತ್ತು. 2014ರಲ್ಲಿ ಅರ್ಜುನ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದರು.