Tag: ಅಥೆನ್ಸ್

  • ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಭಾರತ ವಿಶ್ವಕ್ಕೇ ತನ್ನ ಸಾಮರ್ಥ್ಯ ತೋರಿಸಿದೆ- ಮೋದಿ

    ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಭಾರತ ವಿಶ್ವಕ್ಕೇ ತನ್ನ ಸಾಮರ್ಥ್ಯ ತೋರಿಸಿದೆ- ಮೋದಿ

    – ಗ್ರೀಸ್‌ನಲ್ಲಿ ಚಂದ್ರಯಾನ ಗುಣಗಾನ, ಮೋದಿಗೆ ಗ್ರೀಸ್‌ ಅತ್ತುನ್ನತ ನಾಗರಿಕ ಗೌರವ

    ಅಥೆನ್ಸ್:‌ ಭಾರತ ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಇಡೀ ವಿಶ್ವಕ್ಕೇ ತನ್ನ ಸಾಮರ್ಥ್ಯವನ್ನ ತೋರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಚಂದ್ರಯಾನ ಗುಣಗಾನ ಮಾಡಿದ್ದಾರೆ.

    ಸುಮಾರು 40 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಗ್ರೀಸ್‌ (Greece) ದೇಶಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದು, ಪ್ರಧಾನಿ ಮೋದಿ ಅವರನ್ನ ಗ್ರೀಸ್‌ ರಾಷ್ಟ್ರಪತಿ ಹಾಗೂ ಪ್ರಧಾನಿ ಬರಮಾಡಿಕೊಂಡರು. ಭಾರತೀಯ ಸಮುದಾಯ ಸಾಂಪ್ರದಾಯಿಕವಾಗಿ ಮೋದಿ ಅವರನ್ನು ಸ್ವಾಗತಿಸಲಾಯಿತು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರೀಸ್‌ ನಾಗರಿಕ ಗೌರವ ‘ದಿ ಗ್ರ್ಯಾಂಡ್‌ ಕ್ರಾಸ್‌ ಆಫ್‌ ದಿ ಆರ್ಡರ್‌ ಆಫ್‌ ಹಾನರ್‌’ ನೀಡಿ ಗೌರವಿಸಲಾಯಿತು. ಅಧ್ಯಕ್ಷೆ ಕ್ಯಾಥರೀನಾ ಸಕೆಲ್ಲರೊಪೌಲೊ ಅವರು ಮೋದಿಗೆ ಅವರಿಗೆ ಗ್ರೀಸ್‌ ನಾಗರಿಕ ಗೌರವ ನೀಡಿ ಸನ್ಮಾನಿಸಿದರು.

    ನಂತರ ಗ್ರೀಸ್‌ನ ರಾಜಧಾನಿ ಅಥೆನ್ಸ್‌ನಲ್ಲಿ (Athens) ಭಾರತೀಯ ಸಮುದಾಯದವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತದ ಚಂದ್ರಯಾನ ಸಾಧನೆಯನ್ನ ಹಾಡಿ ಹೊಗಳಿದರು. ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಇಡೀ ಜಗತ್ತಿಗೆ ಭಾರತ ತನ್ನ ಸಾಮರ್ಥ್ಯ ತೋರಿಸಿದೆ ಎಂದು ಶ್ಲಾಘಿಸಿದರು.

    ಈ ತಿಂಗಳು ಶಿವನನ್ನು ಪೂಜಿಸುವ ಪರ್ವಕಾಲ, ಶ್ರಾವಣ ಮಾಸದಲ್ಲಿ ದೇಶವು ಹೊಸ ಸಾಧನೆ ಮಾಡಿದೆ. ಚಂದ್ರನ ಕತ್ತಲಿನ ವಲಯವಾದ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ. ತಿರಂಗವನ್ನು ಚಂದ್ರನ ಮೇಲೆ ಹಾರಿಸುವ ಮೂಲಕ ಜಗತ್ತಿಗೆ ನಮ್ಮ ಸಾಮರ್ಥ್ಯ ತೋರಿಸಿದ್ದೇವೆ. ಜಗತ್ತಿನ ಮೂಲೆಮೂಲೆಗಳಿಂದ ಅಭಿನಂದನೆಯ ಸಂದೇಶಗಳು ಹರಿದು ಬರುತ್ತಿವೆ. ಸಾಧನೆಯು ಇಷ್ಟು ದೊಡ್ಡದಾಗಿರುವಾಗ ಸಂಭ್ರಮವೂ ಸಹ ಮುಂದುವರಿಯುತ್ತದೆ. ಚಂದ್ರಯಾನ-3ರ ಯಶಸ್ಸಿಗೆ ನಾನು ಮತ್ತೊಮ್ಮೆ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಮುಖದ ಭಾವನೆಗಳೇ ಹೇಳುತ್ತಿವೆ, ನೀವು ಜಗತ್ತಿನ ಯಾವುದೇ ಜಾಗದಲ್ಲಿದ್ದರೂ ಹೃದಯದಲ್ಲಿ ಭಾರತವು ಮಿಡಿಯುತ್ತಿರುತ್ತದೆ ಎಂದು ಹೊಗಳಿದರು.

    ಮುಂದುವರಿದು, ವಿಶ್ವದ ದೊಡ್ಡ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಮುಂಚೂಣಿಯಲ್ಲಿವೆ. ಭಾರತದ ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕ ಶಕ್ತಿಯನ್ನು ಹೊಂದಿರುವ ದೇಶವಾಗಿದ್ದು, ತಜ್ಞರ ಪ್ರಕಾರ ದೇಶವು 3ನೇ ಸ್ಥಾನಕ್ಕೆ ಏರಲಿದೆ. ಆರ್ಥಿಕತೆ ಬೆಳೆಯುತ್ತಿದ್ದಂತೆ ದೇಶವು ಬಡತನದಿಂದ ವೇಗವಾಗಿ ಹೊರಬರುತ್ತದೆ. ಭಾರತದಲ್ಲಿ 5 ವರ್ಷಗಳಲ್ಲಿ 13.5 ಕೋಟಿ ಭಾರತೀಯರು ಬಡತನ ಮಟ್ಟದಿಂದ ಹೊರಬಂದಿದ್ದಾರೆ ಎಂದು ಹೇಳಿದರಲ್ಲದೇ, ಭಾರತ ತಾಂತ್ರಿಕವಾಗಿಯೂ ಬೆಳೆಯುತ್ತಿದ್ದ ಸುಮಾರು 700 ಜಿಲ್ಲೆಗಳಲ್ಲಿ ಈಗಾಗಲೇ 5 ಜಿ ತಂತ್ರಜ್ಞಾನವನ್ನು ಹೊಂದಿದೆ ಎಂದು ಬೀಗಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 37 ದಿನಗಳಲ್ಲಿ 17 ದಿನ ಕೊರೊನಾ ವಿರುದ್ಧ ಹೋರಾಟ- ನವಜಾತ ಶಿಶು ಸಾವು

    37 ದಿನಗಳಲ್ಲಿ 17 ದಿನ ಕೊರೊನಾ ವಿರುದ್ಧ ಹೋರಾಟ- ನವಜಾತ ಶಿಶು ಸಾವು

    ಅಥೆನ್ಸ್: ಹುಟ್ಟಿದ 37 ದಿನಗಳಲ್ಲಿ 17 ದಿನಗಳಕಾಲ ಕೊರೊನಾ ಸೋಂಕು ವಿರುದ್ಧ ಹೋರಾಡಿ ಮಗು ಮೃತಪಟ್ಟಿರುವ ಘಟನೆ ಗ್ರೀಸ್‍ನಲ್ಲಿ ನಡೆದಿದೆ.

    ಮೂಗಿನ ಉರಿಯೂತ ಮತ್ತು ಜ್ವರ ಎಂದು ಗಂಡು ಮಗುವನ್ನು ಅಥೆನ್ಸ್ ಮಕ್ಕಳ ಆಸ್ಪತ್ರೆಗೆ ಕರೆತರಲಾಗಿತ್ತು. ಮಗುವನ್ನು ಒಂದು ದಿನದ ನಂತರ ತೀವ್ರ ನಿಗಾದಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.

    ಅಥೆನ್ಸ್‍ನಲ್ಲಿನ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಅಸಹನೀಯ ಒತ್ತಡದಲ್ಲಿದೆ. ಹೀಗಾಗಿ ಹೆಚ್ಚುವರಿ ಖಾಸಗಿ ಆಸ್ಪತ್ರೆ ಸಂಪನ್ಮೂಲಗಳಿಗೆ ಕರೆ ನೀಡುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

    ಗ್ರೀಸ್‍ನಲ್ಲಿ ಸುಮಾರು 6,800 ಸಕ್ರಿಯ ಕೋವಿಡ್-19 ಸೋಂಕಿತರಿದ್ದಾರೆ. ಸೋಂಕಿತರಲ್ಲಿ ಈ ಮಗು ಅತ್ಯಂತ ಕಿರಿಯದ್ದಾಗಿತ್ತು. 6,800 ಜನರು ವೈರಸ್‍ನಿಂದ ಸಾವನ್ನಪ್ಪಿದ್ದರೆ, ಸುಮಾರು 480 ಜನರು ತೀವ್ರ ನಿಗಾದಲ್ಲಿದ್ದಾರೆ. ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿವೆ ಎಂದು ಮಿತ್ಸೊಟಾಕಿಸ್ ಆರೋಪ ಕೇಳಿಬಂದಿದೆ.

    ದುಃಖಕರವೆಂದರೆ ಇಂದು ನಾವು ನಮ್ಮ ದೇಶದಲ್ಲಿ ಸಾಂಕ್ರಾಮಿಕ ರೋಗಕ್ಕೆ ತುತ್ತಾದ ಕಿರಿಯ ಬಲಿಪಶುವನ್ನು ಹೊಂದಿದ್ದೇವೆ, ಹುಟ್ಟಿ 37 ದಿನಗಳಲ್ಲಿ 17 ದಿನಗಳ ಕಾಲ ಕರೋನವೈರಸ್ ವಿರುದ್ಧ ಹೋರಾಡಿದೆ ಎಂದು ಅಥೆನ್ಸ್ ಪ್ರಧಾನಿ ಕಿರಿಯಾಕೋಸ್ ಮಿತ್ಸೊಟಾಕಿಸ್ ಟ್ವೀಟ್ ಮಾಡಿದ್ದಾರೆ.

  • ಗ್ರೀಸ್‍ನಲ್ಲಿ 6.2 ತೀವ್ರತೆಯ ಭೂಕಂಪ

    ಗ್ರೀಸ್‍ನಲ್ಲಿ 6.2 ತೀವ್ರತೆಯ ಭೂಕಂಪ

    ಅಥೆನ್ಸ್: ಗ್ರೀಸ್‍ನಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ಬುಧವಾರ ತಿಳಿಸಿದೆ.

    ಸುಮಾರು 6.9 ಮತ್ತು 5.9ರಷ್ಟು ಭೂಕಂಪದ ತೀವ್ರತೆ ವರದಿಯಾಗಿದೆ. ಕೇಂದ್ರ ಗ್ರೀಸ್ ಎಲಾಸೊನಾ ಪಟ್ಟಣದಿಂದ ದಕ್ಷಿಣಕ್ಕೆ 20 ಕಿ.ಮೀ ದೂರದಲ್ಲಿ,  10 ಕಿ.ಮೀ ಆಳದಲ್ಲಿ ಇದರ ಕೇಂದ್ರ ಬಿಂದು ಪತ್ತೆಯಾಗಿದೆ.

    ನನ್ನ ಸಹೋದ್ಯೋಗಿಗಳಿಗೆ ಭೂಕಂಪದ ಅನುಭವ ಮತ್ತು ಅದರ ತೀವ್ರತೆಯ ಅನುಭವವಾಗಿದೆ ಎಂದು ಅಥೆನ್ಸ್‍ನ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಗ್ರೀಸ್‍ನ ಹಲವು ಭಾಗದಲ್ಲಿ ಭೂಮಿ ಕಂಪಿಸಿದೆ ಗ್ರೀಕ್ ಭೂಕಂಪ ಶಾಸ್ತ್ರಜ್ಞ ವಾಸಿಲಿಸ್ ಕರಥಾನಸಿಸ್ ತಿಳಿಸಿದ್ದಾರೆ.

  • 18 ತಿಂಗ್ಳ ಹಿಂದೆ ಮಾಲೀಕ ಮೃತಪಟ್ಟ ಸ್ಥಳವನ್ನು ಬಿಡಲು ನಾಯಿ ನಿರಾಕರಣೆ: ವಿಡಿಯೋ

    18 ತಿಂಗ್ಳ ಹಿಂದೆ ಮಾಲೀಕ ಮೃತಪಟ್ಟ ಸ್ಥಳವನ್ನು ಬಿಡಲು ನಾಯಿ ನಿರಾಕರಣೆ: ವಿಡಿಯೋ

    ಅಥೆನ್ಸ್: 18 ತಿಂಗಳ ಹಿಂದೆ ಮಾಲೀಕ ಮೃತಪಟ್ಟ ಸ್ಥಳವನ್ನು ಬಿಡಲು ನಾಯಿ ನಿರಾಕರಿಸುತ್ತಿರುವ ಘಟನೆ ಗ್ರೀಕ್‍ನಲ್ಲಿ ನಡೆದಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    40 ವರ್ಷದ ಮಾಲೀಕ ನವೆಂಬರ್ 9, 2017ರಂದು ಕಾರಿನಲ್ಲಿ ಹೋಗುತ್ತಿದ್ದಾಗ ಸಿಮೆಂಟ್ ಮಿಕ್ಸರ್ ಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಮಾಲೀಕ ಮೃತಪಟ್ಟ ಸ್ಥಳದಿಂದ ಅವರ ಮನೆಗೆ 12 ಕಿ.ಮೀ ದೂರವಿದ್ದು, ಆ ನಾಯಿ ಇಲ್ಲಿಯವರೆಗೆ ಹೇಗೆ ಪ್ರಯಾಣಿಸಿತು ಎಂದು ಸಾರ್ವಜನಿಕರು ಹಾಗೂ ಪ್ರಾಣಿ ಸಂರಕ್ಷಣಾ ತಜ್ಞರು ಗೊಂದಲಕ್ಕೊಳಗಾಗಿದ್ದಾರೆ.

    ನಾಯಿ ತನ್ನ ಮಾಲೀಕ ಮೃತಪಟ್ಟ ಸ್ಥಳವನ್ನು ಬಿಟ್ಟು ಬರಲು ನಿರಾಕರಿಸುತ್ತಿದೆ. ಈ ಕಾರಣದಿಂದಾಗಿ ಸ್ಥಳೀಯರು ನಾಯಿಗಾಗಿ ಮನೆ ನಿರ್ಮಿಸಿದ್ದಾರೆ. ಅಲ್ಲದೆ ಆ ನಾಯಿಗಾಗಿ ಕಂಬಳಿ ನೀಡಿ ಪ್ರತಿನಿತ್ಯ ನೀರು ಹಾಗೂ ಆಹಾರವನ್ನು ನೀಡುತ್ತಿದ್ದಾರೆ.

    ಮಾಲೀಕ ಮೃತಪಟ್ಟ ಸ್ಥಳದಲ್ಲಿ ಕೆಲ ಕುಟುಂಬದವರು ನಾಯಿಯನ್ನು ದತ್ತು ಪಡೆಯಲು ಮುಂದಾದರು. ಆದರೆ ಆ ನಾಯಿ ಬಿಸಿಲು – ಚಳಿ ಏನೇ ಇದ್ದರೂ ಸಹ ಆ ಜಾಗವನ್ನು ಬಿಡಲು ನಿರಾಕರಿಸುತ್ತಿದೆ. ಸ್ಥಳೀಯರು ಆ ನಾಯಿಯನ್ನು ‘ಗ್ರೀಕ್ ಹಚಿಕೋ’ ಎಂದು ಕರೆಯಲು ಪ್ರಾರಂಭಿಸಿದ್ದಾರೆ.

    https://www.youtube.com/watch?time_continue=79&v=UMu_XL8Mhbg