Tag: ಅತ್ಯಾಚಾರ

  • ದೇವಾಸ್ಥಾನದೊಳಗೆ ವಿಕಲಾಂಗ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಯುವಕ

    ದೇವಾಸ್ಥಾನದೊಳಗೆ ವಿಕಲಾಂಗ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಯುವಕ

    ಭುವನೇಶ್ವರ: ದೇವಾಲಯದಲ್ಲಿ ವಿಕಲಾಂಗ ಅಪ್ರಾಪ್ತೆಯ ಮೇಲೆ ಯುವಕನೊಬ್ಬ ಅತ್ಯಾಚಾರ ನಡೆಸಿರುವ ಘಟನೆ ಓಡಿಶಾದ ಬಾರಿಪಾದಾದಲ್ಲಿ ನಡೆದಿದೆ.

    ಇಲ್ಲಿನ ಸ್ವಾಮಿ ಜಗನ್ನಾಥ ದೇವಾಲಯದಲ್ಲಿ ಶುಕ್ರವಾರ ರಾತ್ರಿ 11 ವರ್ಷದ ಬಾಲಕಿ ದೇವರ ದರ್ಶನ ಪಡೆಯಲು ದೇವಸ್ಥಾನಕ್ಕೆ ಹೋಗಿದ್ದಳು. ಈ ವೇಳೆ ದೇವಸ್ಥನ ನಿರ್ಜನವಾಗಿತ್ತು. ಈ ವೇಳೆ ದೇವಸ್ಥಾನದಲ್ಲಿದ್ದ 28 ವರ್ಷದ ಯುವಕ ಬಾಲಕಿಯನ್ನು ಮಂಟಪದ ಬಳಿ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಸಂತ್ರಸ್ತೆಯನ್ನು ಸ್ಥಳದಿಂದ ರಕ್ಷಿಸಲಾಗಿದ್ದು, ಆಕ್ರೋಶಗೊಂಡ ಸ್ಥಳೀಯರು ಯುವಕನನ್ನು ಪತ್ತೆಹಚ್ಚು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಬಾಲಕಿಯ ಸ್ಥಿತಿ ಗಂಭೀರವಾಗಿದ್ದರಿಂದ ಆಕೆಯನ್ನು ಕಟಕ್‍ನ ಎಸ್‍ಸಿಬಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಪೊಲೀಸರು ಹೇಳಿದ್ದಾರೆ.

    ಸ್ಥಳಕ್ಕೆ ಸಬ್-ಕಲೆಕ್ಟರ್ ಎಸ್.ಕೆ.ಪುರೋಹಿತ್ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಬಾಲಕಿಯ ಚಿಕಿತ್ಸಾ ವೆಚ್ಚಕ್ಕೆ 10,000 ರೂ. ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

     

  • ಚಲಿಸುತ್ತಿದ್ದ ಕಾರಿನಲ್ಲಿ ತಂದೆಯೆದುರೇ ಬಾಲಕಿಯರ ಮೇಲೆ ಗ್ಯಾಂಗ್‍ರೇಪ್- ಐವರ ಬಂಧನ

    ಚಲಿಸುತ್ತಿದ್ದ ಕಾರಿನಲ್ಲಿ ತಂದೆಯೆದುರೇ ಬಾಲಕಿಯರ ಮೇಲೆ ಗ್ಯಾಂಗ್‍ರೇಪ್- ಐವರ ಬಂಧನ

    ಗಾಂಧಿನಗರ: ಚಲಿಸುತ್ತಿದ್ದ ಕಾರಿನಲ್ಲಿ ತಂದೆಯ ಎದುರೇ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ 6 ಮಂದಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಗುಜರಾತ್‍ನ ದಾಹೊದ್‍ನಲ್ಲಿ ನಡೆದಿದೆ.

    ಅಹಮದಾಬಾದ್‍ನಿಂದ 200 ಕಿ.ಮೀ ದೂರದಲ್ಲಿರುವ ದಾಹೊದ್‍ನಲ್ಲಿ ಬುಧವಾರದಂದು ಈ ಘಟನೆ ನಡೆದಿದೆ. 13 ಜನ ಸೇರಿಕೊಂಡು ಈ ಕೃತ್ಯವೆಸಗಲು ಪ್ಲಾನ್ ಮಾಡಿದ್ದರು ಎಂದು ವರದಿಯಾಗಿದೆ. ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದಾರೆ ಎನ್ನಲಾದ 6 ಜನರಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದು, ಒಬ್ಬ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಪಾತ್ರ ವಹಿಸಿದ್ದಾರೆನ್ನಲಾದ ಇನ್ನುಳಿದ 7 ಮಂದಿ ಕೂಡ ತಲೆಮರೆಸಿಕೊಂಡಿದ್ದಾರೆ.

    ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಕುಮಾಟ್ ಬರಿಯಾ ಬಾಲಕಿಯರ ಅಣ್ಣನ ಮೇಲೆ ಸೇಡು ತೀರಿಸಿಕೊಳ್ಳಲು ಈ ಕೃತ್ಯವೆಸಗಿದ್ದಾಗಿ ಹೇಳಿದ್ದಾನೆ. ಈ ಹಿಂದೆ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಬಾಲಕಿಯರ ಅಣ್ಣ, ಕುಮಾಟ್ ಬಾರಿಯಾ ತನಗೆ ಮದ್ಯವನ್ನು ಮಾರಾಟ ಮಾಡಿದ್ದನೆಂದು ಹೇಳಿದ್ದು, ಕುಮಾತ್ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದರು ಎಂದು ವರದಿಯಾಗಿದೆ. (ಗುಜರಾತ್‍ನಲ್ಲಿ ಮದ್ಯ ಮಾರಾಟದ ಮೇಲೆ ನಿಷೇಧವಿದೆ).

    ತನ್ನ ವಿರುದ್ಧ ದೂರು ನೀಡಿದ್ದಕ್ಕೆ ಸೇಡು ತೀರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಬಾರಿಯಾ ಮತ್ತು ಸಂಗಡಿಗರು ಈ ಕೃತ್ಯವೆಸಗಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಬುಧವಾರ ಬೆಳಗ್ಗೆ, ಬಾರಿಯಾ ಮತ್ತು ಆತನ ಸಂಗಡಿಗರು ಸೇರಿ ಒಟ್ಟು 13 ಮಂದಿ ಎಸ್‍ಯುವಿ ಕಾರ್ ಮತ್ತು ಬೈಕ್‍ಗಳಲ್ಲಿ ಗ್ರಾಮಕ್ಕೆ ಬಂದಿದ್ದಾರೆ. ಗ್ರಾಮದಲ್ಲಿ ಅಂಗಡಿ ಇಟ್ಟುಕೊಂಡಿದ್ದ ತಂದೆ ಹಾಗೂ ಇಬ್ಬರು ಬಾಲಕಿಯರನ್ನು ಹೊರಗೆಳೆದುಕೊಂಡು ಬಂದು ಕಾರಿಗೆ ಹತ್ತಿಸಿದ್ದಾರೆ. ನಂತರ 6 ಮಂದಿ ಕಾರಿನಲ್ಲಿ ಬಾಲಕಿಯರ ಮೇಲೆ ಅತ್ಯಾಚಾರವೆಸಗಿ, ಸುಮಾರು 25 ಕಿ.ಮೀ ದೂರ ಹೋದ ನಂತರ ಬಾಲಕಿಯರು ಹಾಗೂ ಅವರ ತಂದೆಯನ್ನು ಕಾರಿನಿಂದ ಹೊರಗೆ ತಳ್ಳಿ ಪರಾರಿಯಾಗಿದ್ದಾರೆಂದು ದಾಹೋದ್ ಪೊಲೀಸರು ಹೇಳಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಅಪಹರಣ ಹಾಗೂ ಸಾಮೂಹಿಕ ಅತ್ಯಾಚಾರದ ಆರೋಪದಡಿ, ಪೋಕ್ಸೋ ಕಾಯ್ದೆಯಡಿ 13 ಜನರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ದಾಹೋದ್ ಪೊಲೀಸರು ತಿಳಿಸಿದ್ದಾರೆ.

  • ಬೆಂಗಳೂರಿನ ಮಹಿಳಾ ಪೊಲೀಸ್ ಪೇದೆ ಮೇಲೆ ಕಸ್ಟಮ್ಸ್ ಇನ್ಸ್ ಪೆಕ್ಟರ್‍ನಿಂದ ರೇಪ್!

    ಬೆಂಗಳೂರಿನ ಮಹಿಳಾ ಪೊಲೀಸ್ ಪೇದೆ ಮೇಲೆ ಕಸ್ಟಮ್ಸ್ ಇನ್ಸ್ ಪೆಕ್ಟರ್‍ನಿಂದ ರೇಪ್!

    – ವಿಮಾನ ನಿಲ್ದಾಣದ ಕಸ್ಟಮ್ಸ್ ಇನ್ಸ್ ಪೆಕ್ಟರ್‍ನಿಂದ ಅತ್ಯಾಚಾರ

    ಬೆಂಗಳೂರು: ನಗದರಲ್ಲಿ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್) ಮಹಿಳಾ ಪೊಲೀಸ್ ಪೇದೆ ಮೇಲೆ ವಿಮಾನ ನಿಲ್ದಾಣದ ಕಸ್ಟಮ್ಸ್ ಇನ್ಸ್ ಪೆಕ್ಟರ್‍ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

    ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ ಇನ್ಸ್ ಪೆಕ್ಟರ್ ಹೇಮರಾಜ್ ಗುರ್ಜರ್ ತನ್ನ ಮೇಲೆ ಅತ್ಯಾಚಾರವೆಸಗಿರೋದಾಗಿ 29 ವರ್ಷದ ಮಹಿಳಾ ಸಿಐಎಸ್‍ಎಫ್ ಪೇದೆ ಆರೋಪಿಸಿದ್ದಾರೆ.

    ಏನಿದು ಆರೋಪ: ಮದುವೆಯಾಗೋದಾಗಿ ನಂಬಿಸಿ, ಪೋಷಕರನ್ನು ಭೇಟಿ ಮಾಡಿಸುವುದಾಗಿ ಹೇಳಿ ಯಲಹಂಕ ಉಪನಗರದ ನಿವಾಸಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ನಂತರ ಮದುವೆಯಾಗೋಕೆ ಹೇಮರಾಜ್ ನಿರಾಕರಿಸಿದ್ದು, ಮದುವೆಯಾಗುವಂತೆ ಮಹಿಳಾ ಪೊಲೀಸ್ ಪೇದೆ ಒತ್ತಾಯಿಸಿದ್ದಾರೆ. ಈ ವೇಳೆ ಆತ ತನಗೆ ಮೊದಲೆ ಮದುವೆಯಾಗಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ. 2013 ರಲ್ಲೇ ಮದುವೆಯಾಗಿ ಎರಡು ಮಕ್ಕಳಿದ್ದು, ಹೆಂಡತಿ ಮಕ್ಕಳು ರಾಜಸ್ಥಾನದಲ್ಲಿ ವಾಸವಿರೋದಾಗಿ ಹೇಳಿದ್ದಾನೆ.

    ಹೇಮರಾಜ್ ವಿರುದ್ಧ ದೂರು ನೀಡೋದಾಗಿ ಮಹಿಳಾ ಪೇದೆ ಹೇಳಿದಾಗ, ರಾಜಸ್ಥಾನದಿಂದ ಬಂದ ಹೇಮರಾಜ್ ತಂದೆ ಸೃಜನ್ ಸಿಂಗ್ ಹಾಗೂ ಸಹೋದರ ನಿಹಾಲ ಸಿಂಗ್ ಮದುವೆಗೆ ನಿರಾಕರಿಸಿ ಮಹಿಳೆಗೆ ಬೆದರಿಕೆ ಹಾಕಿದ್ದಾರೆ. ಇದರಿಂದ ನೊಂದ ಮಹಿಳಾ ಪೊಲೀಸ್ ಪೇದೆ ಮಾರ್ಚ್ 5 ರಂದು ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಆದರೆ ದೂರು ದಾಖಲಾಗಿ 9 ದಿನಗಳಾದ್ರೂ ಬಾಗಲೂರು ಪೊಲೀಸರು ಆರೋಪಿಯನ್ನ ಬಂಧಿಸಿಲ್ಲ. ಕನಿಷ್ಟ ಪಕ್ಷ ಪೊಲೀಸರು ಆತನನ್ನು ಕರೆದು ವಿಚಾರಣೆ ಕೂಡ ನಡೆಸಿಲ್ಲ. ಪೊಲೀಸರ ನಡೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟದೆ ಅಂತಾ ಮಹಿಳಾ ಪೊಲೀಸ್ ಪೇದೆ ಅಳಲು ತೋಡಿಕೊಂಡಿದ್ದಾರೆ.

  • ಶಾಕಿಂಗ್: ಅಪಹರಣ, ಅತ್ಯಾಚಾರಕ್ಕೆ ಸುಪಾರಿ? ಬಹುಭಾಷಾ ನಟಿ ಹೇಳಿದ್ದೇನು?

    ಶಾಕಿಂಗ್: ಅಪಹರಣ, ಅತ್ಯಾಚಾರಕ್ಕೆ ಸುಪಾರಿ? ಬಹುಭಾಷಾ ನಟಿ ಹೇಳಿದ್ದೇನು?

    ಕೊಚ್ಚಿ: ಕೇರಳ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರಕ್ಕೆ ಸುಪಾರಿ ನೀಡಲಾಗಿತ್ತಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಫೆಬ್ರವರಿ 17ರ ಶುಕ್ರವಾರ ರಾತ್ರಿ ತನ್ನ ಮೇಲಾದ ಪಾತಕ ಕೃತ್ಯದ ಬಗ್ಗೆ ಕಳಮಶೇರಿ ಮ್ಯಾಜಿಸ್ಟ್ರೇಟರ್ ಮುಂದೆ ನೀಡಿದ ಹೇಳಿಕೆಯಲ್ಲಿ ಸ್ವತಃ ನಟಿಯೇ ಈ ಭಯಾನಕ ಸಂಗತಿಯನ್ನು ಹೊರಹಾಕಿದ್ದಾರೆ ಎಂದು ಸ್ಥಳಿಯ ವಾಹಿನಿಯೊಂದು ಸೋಮವಾರ ಮಧ್ಯಾಹ್ನ ವರದಿ ಮಾಡಿದೆ.

    “ನಿನ್ನ ಮೇಲೆ ಕೃತ್ಯ ಎಸಗುವುದಕ್ಕೆ ನಮಗೆ ಸುಪಾರಿ ನೀಡಲಾಗಿದೆ. ಆ ಕಾರಣದಿಂದ ನೀನು ನಮ್ಮೊಂದಿಗೆ ಸಹಕರಿಸಬೇಕು. ಒಂದು ವೇಳೆ ಪ್ರತಿರೋಧಿಸಿದರೆ ಅದರಿಂದಾಗುವ ಕೆಟ್ಟ ಪರಿಣಾಮಗಳಿಗೆ ನಾವು ಹೊಣೆಯಲ್ಲ. ನೀನು ಈ ರೀತಿ ಪ್ರತಿರೋಧಿಸಿದರೆ ನಿನ್ನನ್ನು ಹತ್ತಿರದಲ್ಲೇ ಇರುವ ತಮ್ಮನಂ ಫ್ಲಾಟ್‍ಗೆ ಎತ್ತಿಕೊಂಡು ಹೋಗಿ ಡ್ರಗ್ಸ್ ಚುಚ್ಚುಬೇಕಾಗುತ್ತದೆ. ಅಲ್ಲಿ 20 ಜನ ನಿನ್ನ ಮೇಲೆ ದೌರ್ಜನ್ಯ ಎಸಗಲು ಕಾಯುತ್ತಿದ್ದಾರೆ” ಎಂದು ಅವರು ಬೆದರಿಕೆ ಹಾಕಿದ್ದ ವಿಚಾರವನ್ನು ನಟಿ ಮ್ಯಾಜಿಸ್ಟ್ರೇಟರ್ ಮುಂದೆ ಹೇಳಿಕೆ ನೀಡಿದ್ದಾರೆ.

    ನಿರ್ಮಾಪಕನಿಗೆ ನಂಟು: ಕೃತ್ಯ ನಡೆದ ರಾತ್ರಿಯೇ ಪ್ರಮುಖ ಆರೋಪಿಯಾಗಿರುವ ಪಲ್ಸರ್ ಸುನಿಗೆ ಪ್ರಮುಖ ನಿರ್ಮಾಪಕರೊಬ್ಬರು ಕರೆ ಮಾಡಿ ಮಾತಾಡಿದ್ದಾರೆ. ಬಳಿಕ ಆ ನಂಬರ್ ಸ್ವಿಚ್ ಆಫ್ ಆಗಿದೆ. ನಿರ್ಮಾಪಕರು ಮಾತ್ರವಲ್ಲದೇ ಸಿನಿಮಾ ಇಂಡಸ್ಟ್ರಿಯ ಉಳಿದ ಐವರೊಂದಿಗೂ ಈತನಿಗೆ ಉತ್ತಮ ನಂಟಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಸುನಿ ಎಸ್ಕೇಪ್: ಪೊಲೀಸರ ಬಲೆಯಿಂದ ಕೂದಲೆಳೆ ಅಂತರದಲ್ಲಿ ಸುನಿ ಎಸ್ಕೇಪ್ ಆಗಿದ್ದಾನೆ. ಆತನ ಮೊಬೈಲ್ ಟ್ರೇಸ್ ಮಾಡಿದ್ದ ಪೊಲೀಸರು ಅಳಪುಜ್ಜಾದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದು ಬಂಧನಕ್ಕೆ ಹೋಗ್ತಿದ್ದಂತೆ ಆತ ಅಲ್ಲಿಂದ ಪರಾರಿಯಾಗಿದ್ದಾನೆ.

    ಜಾಮೀನಿಗೆ ಮೊರೆ: ನಿರೀಕ್ಷಣಾ ಜಾಮೀನಿಗಾಗಿ ಪಲ್ಸರ್ ಸುನಿ, ಮಣಿಕಂಠನ್ ಮತ್ತು ವಿಜ್ಞೇಶ್ ಹೈಕೋರ್ಟ್ ಕದ ತಟ್ಟಿದ್ದಾರೆ. ಸೋಮವಾರ ಮಧ್ಯಾಹ್ನ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಮಂಗಳವಾರ ಈ ಅರ್ಜಿಯ ವಿಚಾರಣೆ ಹೈಕೋರ್ಟ್ ನಲ್ಲಿ ಬರಲಿದೆ.

  • ಸಿಎಂ ಆಪ್ತ ಪಿ. ರಮೇಶ್‍ರಿಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ?

    ಸಿಎಂ ಆಪ್ತ ಪಿ. ರಮೇಶ್‍ರಿಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಆಪ್ತ ಪಿ. ರಮೇಶ್ ವಿರುದ್ಧ ಈಗ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ ಕೇಳಿ ಬಂದಿದೆ.

    ಟೀಚರ್ ಕೆಲಸದ ವರ್ಗಾವಣೆ ವಿಚಾರದ ಸಂಬಂಧ ನಾನು ರಮೇಶ್ ಬಳಿ ತೆರಳಿದಾಗ ನಗರದ ಪ್ರತಿಷ್ಟಿತ ಹೋಟೆಲ್ ಗೆ ಕರೆದೊಯ್ದು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

    ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಭಾನುವಾರ ಸಂಜೆ 4 ಗಂಟೆಗೆ ದೂರು ನೀಡಲು ಹೋದಾಗ ದೂರನ್ನು ಸ್ವೀಕರಿಸಿಲ್ಲ. ಪೊಲೀಸರು ಕೇಸನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ಪೊಲೀಸರಿಗೆ ದೂರು ನೀಡಿದರೆ ಜೀವ ತೆಗೆಯುವುದಾಗಿ ರಮೇಶ್ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

    ಯಾರೂ ಬಂದಿಲ್ಲ: ಮಹಿಳೆಯ ಆರೋಪಕ್ಕೆ ಸಂಬಂಧಿಸಿದಂತೆ ಡಿಸಿಪಿ ಅಜಯ್ ಹಿಲೋರಿ ಪ್ರತಿಕ್ರಿಯಿಸಿದ್ದು, ರಮೇಶ್ ವಿರುದ್ಧ ಯಾರೂ ದೂರನ್ನು ನೀಡಲು ಬಂದಿಲ್ಲ.ಇದೂವರೆಗೂ ಮಹಿಳೆ ಪೊಲೀಸ್ ಠಾಣೆಗೆ ಬಂದೇ ಇಲ್ಲ. ಮಾಧ್ಯಮ ಪ್ರತಿನಿಧಿಗಳಿಂದ ನನಗೆ ವಿಚಾರ ತಿಳಿಯಿತು. ನಮಗೆ ದೂರು ತೆಗೆದುಕೊಳ್ಳಬೇಡಿ ಎಂದು ಒತ್ತಡ ಹೇರಿಲ್ಲ. ಠಾಣೆಗೆ ಬಂದರೆ ದೂರನ್ನು ಸ್ವೀಕರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

    ಲೈಂಗಿಕ ದೌರ್ಜನ್ಯ ನಡೆಸಿಲ್ಲ: ಈ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ, ಆ ಯುವತಿ ಐಎಎಸ್ ಮಾಡಲು ಸಹಾಯ ಬೇಡಿಕೊಂಡು ನನ್ನ ಬಳಿ ಬಂದಿದ್ದಳು. ನಮ್ಮ ಟ್ರಸ್ಟ್ ವತಿಯಿಂದ ಆಕೆಗೆ ಸಹಾಯ ಮಾಡಿದ್ದು ನಿಜ, ಆದ್ರೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿಲ್ಲ. ಇದೆಲ್ಲ ಕಟ್ಟುಕತೆಯಾಗಿದ್ದು ಆಮೇಲೆ ಮಾತನಾಡುತ್ತೇನೆ ಎಂದು ಹೇಳಿ ಪಿ. ರಮೇಶ್ ಫೋನ್ ಕರೆಯನ್ನು ಕಡಿತಗೊಳಿಸಿದ್ದಾರೆ.

    ರಮೇಶ್ ಯಾರು?
    ಕಾಂಗ್ರೆಸ್ ನಾಯಕರಾಗಿರುವ ಪಿ. ರಮೇಶ್ ಸಿಎಂ ಆಪ್ತರಾಗಿದ್ದು, ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರೆ. 2018ರ ವಿಧಾನಸಭಾ ಚುನಾವಣೆಗೆ ಸಿವಿ ರಾಮನ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

    ಪಿ. ರಮೇಶ್ ಡಿಸಿಪಿ ಅಜಯ್ ಹಿಲೋರಿಗೆ ತುಂಬಾ ಆಪ್ತರಾದ ಹಿನ್ನೆಲೆಯಲ್ಲಿ ಕೇಸನ್ನು ಮುಚ್ಚಿ ಹಾಕಲು ಅಧಿಕಾರಿಗಳು ಪ್ರುಯತ್ನಿಸುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

     

  • ಕಾಮುಕನನ್ನು ಶೂಟ್ ಮಾಡಿ ಕೊಲ್ಲಬೇಕು: ಸುದೀಪ್

    ಕಾಮುಕನನ್ನು ಶೂಟ್ ಮಾಡಿ ಕೊಲ್ಲಬೇಕು: ಸುದೀಪ್

    ಬೆಂಗಳೂರು: ಕೇರಳದಲ್ಲಿ ಖ್ಯಾತ ಬಹುಭಾಷಾ ನಟಿಯ ಮೇಲಿನ ಕಾಮುಕರ ಕೃತ್ಯಕ್ಕೆ  ಸಂಬಂಧಿಸಿದಂತೆ ಸುದೀಪ್ ಪ್ರತಿಕ್ರಿಯಿಸಿದ್ದಾರೆ.

    ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ತಿಳಿದ ಪ್ರಕರಣ ನಿಜವೇ ಆಗಿದ್ದರೆ, ಆ ಕಾಮುಕನನ್ನು ಶೂಟ್ ಮಾಡಿ ಹತ್ಯೆ ಮಾಡಬೇಕೆಂದು ಹೇಳಿದ್ದಾರೆ.

    ಮಹಿಳೆಯ ನೋವು ಏನು ಎನ್ನುವುದು ಆಕೆಗೆ ಮಾತ್ರ ತಿಳಿಯುತ್ತದೆ. ಈ ಕೃತ್ಯ ನಡೆಸಿದವರು ತಾಯಿಗೂ ಗೌರವ ನೀಡುವುದಿಲ್ಲ. ಮಹಿಳೆಯ ದೈಹಿಕ ದೌರ್ಬಲ್ಯವನ್ನು ದುರುಪಯೋಗ ಪಡಿಸಿಕೊಂಡ ಗಂಡಸನ್ನು ಶೂಟ್ ಮಾಡಬೇಕು ಎಂದು ಕಿಡಿಕಾರಿದ್ದಾರೆ.

    ಶುಕ್ರವಾರ ರಾತ್ರಿ ಶೂಟಿಂಗ್ ಮಗಿಸಿ ಆಡಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ನಟಿಯ ಕಾರನ್ನು ಅಡ್ಡಗಟ್ಟಿದ ಗ್ಯಾಂಗ್ ಲೈಂಗಿಕ ದೌರ್ಜನ್ಯ ಎಸಗಿತ್ತು. ನಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಮತ್ತು ಮ್ಯಾಜಿಸ್ಟ್ರೇಟರ್ ಮುಂದೆ ನನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ನಟಿ ಮೇಲೆ ಅತ್ಯಾಚಾರ ಎಸಗಿದ್ದು ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಕೇರಳದಲ್ಲಿ ಖ್ಯಾತ ಬಹುಭಾಷಾ ನಟಿ ಮೇಲೆ ಮಾಜಿ ಡ್ರೈವರ್‍ನಿಂದಲೇ ರೇಪ್

     

  • ಕೇರಳದಲ್ಲಿ ಖ್ಯಾತ ಬಹುಭಾಷಾ ನಟಿ ಮೇಲೆ ಮಾಜಿ ಡ್ರೈವರ್‍ನಿಂದಲೇ ರೇಪ್

    ಕೇರಳದಲ್ಲಿ ಖ್ಯಾತ ಬಹುಭಾಷಾ ನಟಿ ಮೇಲೆ ಮಾಜಿ ಡ್ರೈವರ್‍ನಿಂದಲೇ ರೇಪ್

    ಕೊಚ್ಚಿ: ಶೂಟಿಂಗ್ ಮುಗಿಸಿ ವಾಪಾಸಾಗುತ್ತಿದ್ದ ಬಹುಭಾಷಾ ನಟಿಯೊಬ್ಬರನ್ನು ಗ್ಯಾಂಗ್‍ವೊಂದು ಅಪಹರಿಸಿ ಅತ್ಯಾಚಾರ ಎಸಗಿದ್ದು, ಈ ಸಂಬಂಧ ಪೊಲೀಸರು ನಟಿಯ  ಡ್ರೈವರ್‍ನನ್ನು ಬಂಧಿಸಿದ್ದಾರೆ.

    ಒಟ್ಟು ಏಳು ಮಂದಿಯ ಗ್ಯಾಂಗ್ ಈ ಕೃತ್ಯ ಎಸಗಿದ್ದು, ಡ್ರೈವರ್  ಮಾರ್ಟಿನ್ ನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಮುಖ್ಯ ಆರೋಪಿ ಸುನೀಲ್ ಎಂದು ಗುರುತಿಸಲಾಗಿದ್ದು, ಕೆಲ ತಿಂಗಳ ಕಾಲ ನಟಿಯ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕೃತ್ಯಕ್ಕೆ ಸಹಕಾರ ನೀಡಿದ ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಈಗ ಶೋಧ ಕಾರ್ಯ ಆರಂಭಿಸಿದ್ದಾರೆ.

    ಶನಿವಾರ ಬೆಳಗ್ಗೆ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನುವ ಸುದ್ದಿ ಸಿಕ್ಕಿತ್ತು. ಆದರೆ ನಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಮತ್ತು ಮ್ಯಾಜಿಸ್ಟ್ರೇಟ್ ಮುಂದೆ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ.

    ಏನಿದು ಘಟನೆ?
    ಶುಕ್ರವಾರ ರಾತ್ರಿ ಕೇರಳದ ತ್ರಿಶೂರ್‍ನಿಂದ ಎರ್ನಾಕುಳಂ ಗೆ ನಟಿ ಮತ್ತು ಚಾಲಕ ಇಬ್ಬರೇ ಪ್ರಯಾಣಿಸುತ್ತಿದ್ದ ವೇಳೆ ನಡು ರಸ್ತೆಯಲ್ಲೇ ಟೆಂಪೋ ಟ್ರಾವೆಲ್ಲರ್ ವಾಹನದಲ್ಲಿ ಬಂದ ಗ್ಯಾಂಗ್ ಆಡಿ ಕಾರನ್ನು ಕಾರನ್ನು ಅಡ್ಡಗಟ್ಟಿ ಪ್ರವೇಶಿಸಿದೆ. ಡ್ರೈವರ್ ಕಾರನ್ನು ಚಲಾಯುಸುತ್ತಿದ್ದಂತೆ ಕಾಮುಕರು ಕೃತ್ಯ ಎಸಗಿ ಪಳರಿವಟ್ಟಂ ಎಂಬಲ್ಲಿ ನಟಿಯನ್ನು ಬಿಟ್ಟು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಕಾಮುಕರು ಕೃತ್ಯದ ಫೋಟೋ ಮತ್ತು ವಿಡಿಯೋವನ್ನು ತೆಗೆದಿದ್ದು, ಘಟನೆ ಬಳಿಕ ನಟಿ ಕಾಕನಾಡದ ನಿರ್ದೇಶಕರ ಮನೆಗೆ ತೆರಳಿ ಆಶ್ರಯ ಪಡೆದಿದ್ದಾರೆ. ಕಳಮಶೆರಿ ವೈದ್ಯಕೀಯ ಕಾಲೇಜಿನಲ್ಲಿ  ವೈದ್ಯಕೀಯ ಪರೀಕ್ಷೆ ನಡೆದಿದ್ದು, ನಟಿಯ ಮೇಲೆ ಆತ್ಯಾಚಾರ ಎಸಗಿರುವುದು ಸಾಬೀತಾಗಿದೆ.

    ಶುಕ್ರವಾರ ಮಾರ್ಟಿನ್ ಮತ್ತು ಸುನೀಲ್ ನಡುವೆ ಸುಮಾರು 40 ಕರೆಗಳು ಹೋಗಿವೆ. ಅಷ್ಟೇ ಅಲ್ಲದೇ ಸಾಕಷ್ಟು ಸಂದೇಶಗಳು ಸಹ ಹೋಗಿದೆ ಎಂದು ಎರ್ನಾಕುಲಂ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • 8ನೇ ಕ್ಲಾಸ್ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ – ಆರೋಪಿ ಅರೆಸ್ಟ್

    8ನೇ ಕ್ಲಾಸ್ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ – ಆರೋಪಿ ಅರೆಸ್ಟ್

    ಬೆಂಗಳೂರು: 15 ವರ್ಷದ 8ನೇ ಕ್ಲಾಸ್ ಒದುತ್ತಿದ್ದ ಅಪ್ರಾಪ್ತ ಬಾಲಕಿಯನ್ನ ಅಪಹರಿಸಿ ಆಕೆಯ ಮೇಲೆ ಅತ್ಯಚಾರವೆಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ 21 ವರ್ಷದ ವಿಕ್ಕಿ ಅಲಿಯಾಸ್ ನರಸಿಂಹಮೂರ್ತಿ ಬಂಧಿತ ಆರೋಪಿ. ಈತ ವಿದ್ಯಾರ್ಥಿನಿಯನ್ನ ಕಿಡ್ನಾಪ್ ಮಾಡಿ ಆಂಧ್ರಪ್ರದೇಶದ ಮಡಕಶಿರಕ್ಕೆ ಕರೆದೊಯ್ದಿದ್ದ. ಬಾಲಕಿ ಕಾಣೆಯಾಗಿರುವ ಬಗ್ಗೆ ಫೆಬ್ರವರಿ 9ರಂದು ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಹರಣ ಕೇಸ್ ದಾಖಲಾಗಿತ್ತು. ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ನರಸಿಂಹ ಮೂರ್ತಿಯ ಬಾಲಕಿಯನ್ನು 3 ದಿನಗಳ ಹಿಂದೆ ವಾಪಸ್ ತಂದು ಬಿಟ್ಟು ಹೋಗಿದ್ದಾನೆ.

    ಬಾಲಕಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಅತ್ಯಾಚಾರವಾಗಿರವುದು ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಇಂದು ಬೆಳಿಗ್ಗೆ ಪೊಲೀಸರು ಆರೋಪಿ ನರಸಿಂಹಮೂರ್ತಿಯನ್ನು ಬಂಧಿಸಿದ್ದಾರೆ.

  • ಫ್ಯಾಷನ್ ಇವೆಂಟ್ ಮ್ಯಾನೇಜರ್‍ನಿಂದ ಅಪ್ರಾಪ್ತೆ ಮೇಲೆ ರೇಪ್

    ಬೆಂಗಳೂರು: ಫ್ಯಾಷನ್ ಇವೆಂಟ್ ಮ್ಯಾನೇಜರ್‍ನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರಗದೀಶ್ ಬಂಧಿತ ಆರೋಪಿ. ಬೆಂಗಳೂರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಮುಂಬೈ ಮೂಲದ 17 ವರ್ಷದ ಯುವತಿ ಪ್ರಗದೀಶ್‍ಗೆ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದಳು. ಫೆಬ್ರವರಿ 5ರಂದು ಯುವತಿಯನ್ನು ಮನೆಗೆ ಕರೆದಿದ್ದ ಪ್ರಗದೀಶ್ ಹಾಲಿನಲ್ಲಿ ಮತ್ತು ಬರಿಸುವ ಮಾತ್ರೆ ನೀಡಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.

    ಅತ್ಯಾಚಾರದ ವಿಡಿಯೋ ಮಾಡಿ ಪ್ರಗದೀಶ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಡುವ ಬೆದರಿಕೆ ಹಾಕಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಯುವತಿಗೆ ಬ್ಲಾಕ್‍ಮೇಲ್ ಮಾಡಿದ್ದಾನೆ.

    ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರೋ ರಾಮಮೂರ್ತಿ ನಗರ ಪೊಲೀಸರು ಆರೋಪಿ ಪ್ರಗದೀಶ್‍ನನ್ನು ಬಂಧಿಸಿದ್ದಾರೆ.

  • ಸಾಕು ತಂದೆಯಿಂದಲೇ ಅತ್ಯಾಚಾರ- ತಂದೆಯ ಕೃತ್ಯಕ್ಕೆ ಗರ್ಭಿಣಿಯಾದ ಬಾಲಕಿ

    ಚಿಕ್ಕಮಗಳೂರು: ಸಾಕು ತಂದೆಯೇ ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿ ಮಗಳನ್ನ ಗರ್ಭಿಣಿ ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ನಡೆದಿದೆ.

    ಮಕ್ಕಳಿಲ್ಲದ ಕಾರಣ ಹೆಣ್ಣು ಮಗುವೊಂದನ್ನ ದತ್ತು ತೆಗೆದುಕೊಂಡು ಸಾಕಿದ್ದ 59 ವರ್ಷದ ಕೃಷ್ಣಪ್ಪ ತಾನೇ ಎತ್ತಿ, ಮುದ್ದಾಡಿ ಬೆಳೆಸಿದ್ದ ಏಳನೇ ತರಗತಿ ಓದುತ್ತಿರೋ ಮಗಳನ್ನ ನಿರಂತರವಾಗಿ ಲೈಂಗಿಕ ತೃಪ್ತಿಗೆ ಬಳಸಿಕೊಂಡಿದ್ದ. ಆ ಬಾಲಕಿ ಈಗ ಮೂರು ತಿಂಗಳ ಗರ್ಭೀಣಿ. ಕೃಷ್ಣಪ್ಪ ಬಾಲಕಿಗೆ ಕೆಲ ನಾಟಿ ಔಷಧಿಗಳನ್ನು ಕೊಡಿಸಿದ್ದ ಎಂದು ಹೇಳಲಾಗ್ತಿದೆ.

    ಇದೀಗ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರೋ ಕೊಪ್ಪ ತಾಲೂಕಿನ ಜೈಪುರ ಪೊಲೀಸರು ಆರೋಪಿ ಕೃಷ್ಣಪ್ಪನನ್ನ ಬಂಧಿಸಿದ್ದಾರೆ. ಸಂತ್ರಸ್ಥ ಬಾಲಕಿಗೆ ಕೊಪ್ಪದ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.