Tag: ಅತ್ಯಾಚಾರ ಆರೋಪಿ

  • ಬೇಲ್‌ನಲ್ಲಿ ಹೊರಬಂದ ಅತ್ಯಾಚಾರ ಆರೋಪಿ ಅಪ್ರಾಪ್ತೆ ಮೇಲೆ ಆ್ಯಸಿಡ್ ದಾಳಿ – ಬಳಿಕ ಆತ್ಮಹತ್ಯೆ

    ಬೇಲ್‌ನಲ್ಲಿ ಹೊರಬಂದ ಅತ್ಯಾಚಾರ ಆರೋಪಿ ಅಪ್ರಾಪ್ತೆ ಮೇಲೆ ಆ್ಯಸಿಡ್ ದಾಳಿ – ಬಳಿಕ ಆತ್ಮಹತ್ಯೆ

    ನವದೆಹಲಿ: ಅತ್ಯಾಚಾರ ಆರೋಪಿಯೊಬ್ಬ (Rape Accused) ಜಾಮೀನಿನ (Bail) ಮೇಲೆ ಜೈಲಿನಿಂದ ಹೊರಬಂದು ತನ್ನ ಮೇಲೆ ಆರೋಪ ಹೊರಿಸಿದ್ದ ಮಹಿಳೆಯ ಅಪ್ರಾಪ್ತ ಮಗಳ ಮೇಲೆ ಆ್ಯಸಿಡ್ ದಾಳಿ (Acid Attack) ನಡೆಸಿ ನಂತರ ತಾನು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ (Delhi) ನಡೆದಿದೆ.

    ಆಘಾತಕಾರಿ ಘಟನೆ ಮಧ್ಯ ದೆಹಲಿಯಲ್ಲಿ ನಡೆದಿದೆ. ಅತ್ಯಾಚಾರ ಆರೋಪಿ ಪ್ರೇಮ್ ಸಿಂಗ್‌ಗೆ ಕುಟುಂಬದವರ ವಿವಾಹದಲ್ಲಿ ಪಾಲ್ಗೊಳ್ಳಲು ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿತ್ತು. ಗುರುವಾರ ಸಂಜೆ ತನ್ನ ಮೇಲೆ ಆರೋಪ ಹೊರಿಸಿದ್ದ ಮಹಿಳೆಯ ಬಳಿಗೆ ತೆರಳಿ ದೂರನ್ನು ಹಿಂಪಡೆಯುವಂತೆ ಕೇಳಿದ್ದಾನೆ. ಅದನ್ನು ನಿರಾಕರಿಸಿದ್ದಕ್ಕೆ ಆತ ಮಹಿಳೆಯ 17 ವರ್ಷದ ಮಗಳ ಮೇಲೆ ಆ್ಯಸಿಡ್ ಎರಚಿದ್ದಾನೆ. ಬಳಿಕ ತಾನೂ ಕುಡಿದಿದ್ದಾನೆ.

    ಪ್ರೇಮ್ ಸಿಂಗ್ ಹಾಗೂ ಮಹಿಳೆ ದೆಹಲಿಯ ಆನಂದ್ ಪರ್ಬತ್ ಪ್ರದೇಶದಲ್ಲಿ ನೆರೆಹೊರೆಯವರು. ವ್ಯಕ್ತಿ ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಾಗ ಪ್ರಕರಣವನ್ನು ಹಿಂಪಡೆಯುವಂತೆ ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ಆಕೆ ನಿರಾಕರಿಸಿದಾಗ ಈ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹೋಂ ವರ್ಕ್ ಮಾಡಿಲ್ಲವೆಂದು ಕೈಗೆ ರಾಡ್‍ನಿಂದ ಹೊಡೆದ್ರಾ ಶಿಕ್ಷಕಿ?

    ಆ್ಯಸಿಡ್ ದಾಳಿ ಮಾಡಿ ತಾನೂ ಆ್ಯಸಿಡ್ ಅನ್ನು ಕುಡಿದಿದ್ದಾನೆ. ತಕ್ಷಣ ಅಲ್ಲೇ ನೆರೆದಿದ್ದವರು ಆರೋಪಿ ಹಾಗೂ ಅಪ್ರಾಪ್ತೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ವೇಳೆ ಪ್ರೇಮ್ ಸಿಂಗ್ ಮೃತಪಟ್ಟರೆ, ಚಿಕಿತ್ಸೆ ನೀಡಿದ ಬಳಿಕ ಸಂತ್ರಸ್ತೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಇದನ್ನೂ ಓದಿ: ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಹೆತ್ತ ಮಕ್ಕಳನ್ನು ಕೊಂದು ತಾಯಿ ನೇಣಿಗೆ ಶರಣು

  • ಪೋಷಕರಿಲ್ಲದ ಸಮಯ ನೋಡ್ಕೊಂಡು 12ರ ಬಾಲಕಿಯರ ಮೇಲೆ 59ರ ವೃದ್ಧನಿಂದ ಅತ್ಯಾಚಾರ

    ನವದೆಹಲಿ: ಪೋಷಕರಿಲ್ಲ ಸಮಯ ನೋಡಿಕೊಂಡು ಆಗಾಗ್ಗೆ ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದ 59 ವರ್ಷದ ವೃದ್ಧನೊಬ್ಬ ಸುಮಾರು 12 ವರ್ಷದ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

    STOP RAPE

    ಬಾಲಕಿಯರ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿ ಕಾಳಿಚರಣ್ (59) ಅನ್ನು ಬಂಧಿಸಿದ್ದಾರೆ. ಇಬ್ಬರು ಬಾಲಕಿಯರ ವಯಸ್ಸು ಸುಮಾರು 12 ವರ್ಷಕ್ಕಿಂತ ಕಡಿಮೆಯಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ಆಗಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನ. 11ರಿಂದ ಒಂದು ತಿಂಗಳ ಕಾಲ ಬೆಂಗಳೂರು ಡಿಸೈನ್ ಫೆಸ್ಟಿವಲ್: ಅಶ್ವಥ್ ನಾರಾಯಣ

    ಪೋಷಕರು ಮನೆಯಲ್ಲಿ ಇಲ್ಲದ ವೇಳೆ ಆರೋಪಿ ಕಾಳಿ ಚರಣ್ ಆಗಾಗ್ಗೆ ಬಂದು ಕಿರುಕುಳ ನೀಡುತ್ತಿದ್ದ. ಇದೇ ಸಮಯದಲ್ಲಿ ಅತ್ಯಾಚಾರ ಎಸಗಿದ್ದಾನೆ. ಬಾಲಕಿಯರು ಘಟನೆ ಬಗ್ಗೆ ಮನೆಯವರಿಗೆ ತಿಳಿಸಿದ ನಂತರ ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ. ಇದನ್ನೂ ಓದಿ: 9 ವರ್ಷದ ಬಾಲಕನಾಗಿದ್ದಾಗ ನನ್ನನ್ನು ಕಳ್ಳಸಾಗಣೆ ಮಾಡಲಾಗಿತ್ತು: ಒಲಿಂಪಿಕ್, ವಿಶ್ವ ಚಾಂಪಿಯನ್‌ನ ಸ್ಫೋಟಕ ಹೇಳಿಕೆ

    ಸಿಐಸಿ ಆಯುಕ್ತರಾದ ದೀಪಾಲಿ ಅವರು ಇಬ್ಬರು ಮಕ್ಕಳಿಗೆ ಕೌನ್ಸಿಲಿಂಗ್ ನಡೆಸಿದ ನಂತರ ಅತ್ಯಾಚಾರ ಆಗಿರುವುದು ದೃಢಪಟ್ಟಿದೆ. ಇಬ್ಬರು ಬಾಲಕಿಯರು 12 ವರ್ಷಕ್ಕಿಂತ ಕಡಿಮೆ ವಯೋಮಾನದವರಾಗಿದ್ದಾರೆ ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬೇಲ್ ಮೇಲೆ ಬಿಡುಗಡೆಯಾದ ಅತ್ಯಾಚಾರ ಆರೋಪಿಗೆ ರಾಜಮರ್ಯಾದೆ- 500 ಬೈಕ್, ಕಾರ್‍ಗಳ ಜೊತೆ ಮೆರವಣಿಗೆ

    ಬೇಲ್ ಮೇಲೆ ಬಿಡುಗಡೆಯಾದ ಅತ್ಯಾಚಾರ ಆರೋಪಿಗೆ ರಾಜಮರ್ಯಾದೆ- 500 ಬೈಕ್, ಕಾರ್‍ಗಳ ಜೊತೆ ಮೆರವಣಿಗೆ

    ಧಾರವಾಡ: ಇವನು ಯಾವುದೇ ಘನಂಧಾರಿ ಕೆಲಸ ಮಾಡಿದವನಲ್ಲ. ಯಾವುದೇ ಸಮಾಜ ಉದ್ಧಾರ ಕೆಲಸ ಕೂಡ ಮಾಡಿಲ್ಲ. ಆದ್ರೂ ತೆರೆದ ವಾಹನದಲ್ಲಿ ಈತನನ್ನ ಮೆರವಣಿಗೆ ಮಾಡಿದ್ರು, ಘೋಷಣೆ ಕೂಗಿದ್ರು. ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬನಿಗೆ ರಾಜ ಮರ್ಯಾದೆ ಮೂಲಕ ಬೆಂಬಲಿಗರು ಕರೆಯೊಯ್ದ ಘಟನೆ ಧಾರವಾಡದಲ್ಲಿ ನಡೆದಿದೆ.

    ಪೆಂಡಾರಗಲ್ಲಿಯ ರಿಯಲ್ ಎಸ್ಟೇಟ್ ಉದ್ಯಮಿ ಮಕ್ತುಮ್ ಸೊಗಲದ ಎರಡು ತಿಂಗಳ ಹಿಂದೆ ಹುಬ್ಬಳ್ಳಿಯ ಲಾಡ್ಜ್ ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ. ಗುರುವಾರದಂದು ನ್ಯಾಯಾಲಯದಿಂದ ಜಾಮೀನಿನ ಮೇಲೆ ಆರೋಪಿ ಮುಕ್ತುಂ ಸೊಗಲದ ಬಿಡುಗಡೆಯಾಗಿದ್ದ.

    ಬಿಡುಗಡೆಯಾದ ನಂತರ ಆರೋಪಿ ಮುಕ್ತುಂ ಸೊಗಲದಗೆ ಬೆಂಬಲಿಗರು ರಾಜಾ ಮರ್ಯಾದೆಯಿಂದ ಮೆರವಣಿಗೆ ಮಾಡುವ ಮೂಲಕ ಕರೆದುಕೊಂಡು ಹೋಗಿದ್ದಾರೆ.

    ಅತ್ಯಾಚಾರ ಆರೋಪಿಗೆ 500 ಬೈಕ್, ಕಾರು, ಆಟೋಗಳ ಮೂಲಕ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಗಿದೆ. ಮುಕ್ತುಂ ಸೊಗಲದ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

  • 13ರ ಬಾಲಕಿ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಈತನನ್ನ ಹಿಡಿಯಲು ಪೊಲೀಸರು ಮಾಡಿದ್ರು ಸಖತ್ ಪ್ಲಾನ್

    13ರ ಬಾಲಕಿ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಈತನನ್ನ ಹಿಡಿಯಲು ಪೊಲೀಸರು ಮಾಡಿದ್ರು ಸಖತ್ ಪ್ಲಾನ್

    ಮುಂಬೈ: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನ ಹಿಡಿಯುವುದು ಇಲ್ಲಿನ ನೆಹರು ನಗರ ಪೊಲೀಸರಿಗೆ ಅಷ್ಟೊಂದು ಸುಲಭವಾಗಿರಲಿಲ್ಲ. ಹೀಗಾಗಿ ಒಂದೊಳ್ಳೆ ಐಡಿಯಾ ಮಾಡಿ ಈಗ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    22 ವರ್ಷದ ರಾಜು ಅಲಿಯಾಸ್ ನವೇರ್ ಶೇಕ್ ಬಂಧಿತ ಆರೋಪಿ. ಈತ ಫೆಬ್ರವರಿಯಲ್ಲಿ ತನ್ನ ನೆರೆಮನೆಯಲ್ಲಿ ವಾಸವಿದ್ದ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಿಹಾರಕ್ಕೆ ಪರಾರಿಯಾಗಿದ್ದ. ಪೊಲೀಸರು ಈತನಿಗಾಗಿ ತಿಂಗಳುಗಳ ಕಾಲ ಹುಡುಕಾಟ ನಡೆಸಿ ಇದೀಗ ಕಳೆದ ಮಂಗಳವಾರ ಈತನನ್ನು ಬಂಧಿಸಿ ಮುಂಬೈಗೆ ಕರೆತಂದಿದ್ದಾರೆ. ಬಂಧಿತನನ್ನ ಶನಿವಾರದಂದು ಕುರ್ಲಾ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರುಪಡಿಸಿದ್ದು, ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

    ಪೊಲೀಸರು ದಾಖಲಿಸಿಕೊಂಡಿದ್ದ ದೂರಿನ ಪ್ರಕಾರ ಈತ ತನ್ನ ನೆರೆಮನೆಯ ಬಾಲಕಿ ಒಬ್ಬಳೇ ಮನೆಯಲ್ಲಿದ್ದ ವೇಳೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಘಟನೆ ನಂತರ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಾಲಕಿಯ ತಾಯಿಗೆ ಬೆದರಿಕೆ ಹಾಕಿದ್ದ. ಬೆದರಿಕೆಯ ನಂತರವೂ ಬಾಲಕಿಯ ತಾಯಿ ನೆಹರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದ್ರೆ ಪೊಲೀಸರು ಆರೋಪಿಯ ಮನೆ ತಲುಪುವಷ್ಟರಲ್ಲಿ ಆತ ಅಲ್ಲಿಂದ ಪರಾರಿಯಾಗಿದ್ದ.

    ನಂತರ ಪೊಲೀಸರು ಸಹಾಯಕ ಪೊಲೀಸ್ ಆಯುಕ್ತ ಗೌತಮ್ ಲಕ್ಷ್ಮೀ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ರು. ಮೊದಲಿಗೆ ಈ ತಂಡ ಆರೋಪಿ ಶೇಕ್‍ನ ಗೆಳೆಯನನ್ನ ಸಂಪರ್ಕಿಸಿದ್ರು. ಆರೋಪಿ ಶೇಕ್ ಬಿಹಾರದ ಸಿವಾನ್ ಜಿಲ್ಲೆಯಲ್ಲಿರುವ ತನ್ನ ಗೆಳೆಯನೊಂದಿಗೆ ನರಂತರವಾಗಿ ಸಂಪರ್ಕದಲ್ಲಿದ್ದ ಎಂಬುದು ತನಿಖೆ ವೇಳೆ ನಮಗೆ ಗೊತ್ತಾಯಿತು. ಹೀಗಾಗಿ ಸ್ನೇಹಿತನನ್ನು ಪತ್ತೆ ಮಾಡಲು ಒಂದು ತಂಡವನ್ನು ಸಿವಾನ್‍ಗೆ ಕಳಿಸಿದೆವು ಎಂದು ಪೊಲೀಸರು ಹೇಳಿದ್ದಾರೆ.

    ಜಾಕ್‍ಪಾಟ್ ಬಂದಿದೆ ಎಂದು ನಂಬಿದ ಸ್ನೇಹಿತ: ಮುಂಬೈ ಪೊಲೀಸರು ಮಹಿಳೆಯೊಬ್ಬರ ಸಹಾಯ ಪಡೆದು ಆರೋಪಿ ಶೇಕ್‍ನ ಗೆಳೆಯನಿಗೆ ಫೋನ್ ಮಾಡಿಸಿದ್ರು. ಲಕ್ಕಿ ಡ್ರಾನಲ್ಲಿ ನಿಮ್ಮ ನಂಬರ್ ಆಯ್ಕೆ ಆಗಿದೆ. ನಿಮಗೆ ಬಹುಮಾನ ಬಂದಿದೆ ಎಂದು ಮಹಿಳೆ ಆತನಿಗೆ ಹೇಳಿದ್ರು. ಇದನ್ನ ನಂಬಿದ ಆತ ಬಹುಮಾನ ಸ್ವೀಕರಿಸಲು ಮಹಿಳೆಯನ್ನ ಭೇಟಿಯಾಗೋದಕ್ಕೆ ಒಪ್ಪಿದ್ದ. ನಂತರ ಸಿವಾನ್‍ನ ಮಾರುಕಟ್ಟೆ ಬಳಿ ಬಂದಾಗ ಆತನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ರು. ಸ್ಥಳೀಯ ಪೊಲೀಸ್ ಠಾಣೆಗೆ ಆತನನ್ನು ಕರೆದುಕೊಂಡುಹೋಗಿ ವಿಚಾರಣೆ ನಡೆಸಿದಾಗ ಆತ ಆರೋಪಿ ಶೇಕ್ ಎಲ್ಲಿದ್ದಾನೆ ಎಂಬುದನ್ನ ಬಾಯ್ಬಿಟ್ಟ. ನಂತರ ಅಧಿಕಾರಿಗಳು ಆತನಿಂದ ಶೇಕ್‍ಗೆ ಫೋನ್ ಮಾಡಿಸಿ ಭೇಟಿಯಾಗುವಂತೆ ಹೇಳಿಸಿದ್ರು. ನಂತರ ಸ್ನೇಹಿತನನ್ನು ಭೇಟಿಯಾಗಲು ಬಂದ ಆರೋಪಿ ಶೇಕ್‍ನನ್ನ ಪೊಲೀಸರು ಬಂಧಿಸಿದ್ರು.

    ಆರೋಪಿ ಶೇಕ್‍ನನ್ನು ವಿಚಾರಣೆ ಮಾಡಿದಾಗ, ಘಟನೆಯ ನಂತರ ಸೂರತ್‍ಗೆ ಪರಾರಿಯಾಗಿದ್ದು ಅಲ್ಲಿಂದ ಉತ್ತರಪ್ರದೇಶ ನಂತರ ಗೆಳೆಯನ ಸಂಪರ್ಕ ಸಿಕ್ಕಿದ ಮೇಲೆ ಸಿವಾನ್‍ಗೆ ಹೋಗಿದ್ದಾಗಿ ಬಾಯ್ಬಿಟ್ಟಿದ್ದಾನೆ. ನಕಲಿ ಹೆಸರು ಬಳಸಿ ಪಾಸ್‍ಪೋರ್ಟ್ ಮಾಡಿಸಿಕೊಳ್ಳಲು ಯತ್ನಿಸಿ ವಿಫಾಲವಾಗಿದ್ದಾಗಿ ತಿಳಿಸಿದ್ದಾನೆ. ಈತ ತನ್ನ ಫೇಸ್‍ಬುಕ್ ಖಾತೆಯಲ್ಲಿ ಹುಡುಗಿಯರನ್ನ ಮೆಚ್ಚಿಸಲು ನಕಲಿ ಮಾಹಿತಿಗಳನ್ನ ಹಾಕಿದ್ದು, ಇತರೆ ಪ್ರಕರಣಗಳಲ್ಲೂ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.