Tag: ಅತ್ಯಾಚಾರಿಗಳು

  • ಎಲ್ಲಾ ಪುರುಷರು ಅತ್ಯಾಚಾರಿಗಳು ಎನ್ನುವುದು ಸರಿಯಲ್ಲ: ಸ್ಮೃತಿ ಇರಾನಿ

    ಎಲ್ಲಾ ಪುರುಷರು ಅತ್ಯಾಚಾರಿಗಳು ಎನ್ನುವುದು ಸರಿಯಲ್ಲ: ಸ್ಮೃತಿ ಇರಾನಿ

    ನವದೆಹಲಿ: ದೇಶದ ಮಹಿಳೆ ಮತ್ತು ಮಕ್ಕಳ ರಕ್ಷಣೆ ಮುಖ್ಯ ಆದ್ಯತೆಯಾಗಬೇಕು. ಆದರೆ ಎಲ್ಲಾ ಮದುವೆಯೂ ಹಿಂಸಾತ್ಮಕ, ಎಲ್ಲಾ ಪುರುಷರು ಅತ್ಯಾಚಾರಿಗಳು ಎನ್ನುವುದು ಸರಿಯಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಭಿಪ್ರಾಯಪಟ್ಟಿದ್ದಾರೆ.

    ಸಿಪಿಐ ನಾಯಕ ಬಿನೋಯ್‌ ವಿಶ್ವಂ ಅವರ ವೈವಾಹಿಕ ಅತ್ಯಾಚಾರ ಹೇಳಿಕೆಗೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ ಅವರು, ಎಲ್ಲಾ ಮದುವೆಯೂ ಹಿಂಸಾತ್ಮಕ, ಎಲ್ಲಾ ಪುರುಷರೂ ಅತ್ಯಾಚಾರಿಗಳು ಎಂದು ಖಂಡಿಸುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಸೇರಿದರೆ ನನ್ನನ್ನು ಹೇಮಾ ಮಾಲಿನಿಯಾಗಿ ಮಾಡುತ್ತಿದ್ದರು: ಜಯಂತ್ ಚೌಧರಿ

    ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ದೇಶದಲ್ಲಿ ಮಹಿಳೆಯರನ್ನು ರಕ್ಷಿಸುವುದು ಸರ್ಕಾರದ ಪ್ರಯತ್ನವಾಗಿದೆ. ಪ್ರಸ್ತುತ ದೇಶಾದ್ಯಂತ 30 ಕ್ಕೂ ಹೆಚ್ಚು ಸಹಾಯವಾಣಿಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ಈವರೆಗೆ 66 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸಹಾಯವಾಗಿದೆ. ಅಲ್ಲದೇ 703 ʼಒನ್‌ ಸ್ಟಾಪ್‌ ಕೇಂದ್ರʼಗಳು ಕಾರ್ಯನಿರ್ವಹಿಸುತ್ತಿದ್ದು, ಇದರಿಂದ 5 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸಹಾಯವಾಗಿದೆ ಎಂದು ಹೇಳಿದ್ದಾರೆ.

    ಸಂಸತ್‌ನ ಪ್ರತಿ ಸದಸ್ಯರು ತಮ್ಮ ಜಿಲ್ಲೆಗಳಲ್ಲಿ ತಮ್ಮದೇ ನಾಯಕತ್ವದಲ್ಲಿ ದಿಶಾ ಸಭೆಯನ್ನು ಏರ್ಪಡಿಸಬೇಕು ಎಂದು ಮನವಿ ಮಾಡಿದ್ದಾರೆ. ನಿಮ್ಮ ನಾಯಕತ್ವದಲ್ಲಿ ಮಹಿಳಾ ಹಕ್ಕುಗಳ ಹೋರಾಟದಲ್ಲಿ ಬದ್ಧತೆಯಿಂದ ತೊಡಗಿಸಿಕೊಂಡರೆ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬಹುದು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಜಯಲಲಿಲಾ ಆಪ್ತೆ ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ – ಪೊಲೀಸರಿಗೆ ಸಂಕಷ್ಟ

    ಮಹಿಳೆಯರ ವಿರುದ್ಧ ಹೆಚ್ಚು ಅಪರಾಧಗಳು ನಡೆಯುವ ಸ್ಥಳಗಳಲ್ಲಿ ನಾವು ರಾಜ್ಯ ಸರ್ಕಾರಗಳ ಜೊತೆಗೆ ಹೆಚ್ಚುವರಿ ಒನ್‌ ಸ್ಟಾಪ್‌ ಕೇಂದ್ರಗಳನ್ನು ಸ್ಥಾಪಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

  • ಅತ್ಯಾಚಾರಿಗಳಿಗೆ ಸಜ್ಜನ್ ರಾವ್ ಮಾರ್ಗವೇ ಸರಿ – ಪರೋಕ್ಷವಾಗಿ ಎನ್‍ಕೌಂಟರ್ ಮಾಡ್ಬೇಕೆಂದ್ರು ರಾಜೂಗೌಡ

    ಅತ್ಯಾಚಾರಿಗಳಿಗೆ ಸಜ್ಜನ್ ರಾವ್ ಮಾರ್ಗವೇ ಸರಿ – ಪರೋಕ್ಷವಾಗಿ ಎನ್‍ಕೌಂಟರ್ ಮಾಡ್ಬೇಕೆಂದ್ರು ರಾಜೂಗೌಡ

    ಯಾದಗಿರಿ: ಅತ್ಯಾಚಾರಿಗಳಿಗೆ ಹೈದರಾಬಾದ್ ನಲ್ಲಿ ಸಜ್ಜನ ಸರ್ ನೀಡಿದಂತಹ ಮದ್ದು ನೀಡಬೇಕು ಎಂದು ಪರೋಕ್ಷವಾಗಿ ಅತ್ಯಾಚಾರಿಗಳನ್ನ ಎನ್ ಕೌಂಟರ್ ಮಾಡಬೇಕು ಎಂದು ಶಹಾಪೂರ ಗ್ಯಾಂಗ್ ರೇಪ್ ಪ್ರಕರಣಕ್ಕೆ ಶಾಸಕ ರಾಜೂಗೌಡ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀಡಿಯೋ ನೋಡಿ ನಾವು ಮನುಷ್ಯತ್ವದಲ್ಲಿ ಇದ್ದಿವೋ, ರಾಕ್ಷಸರು ಅಂತ ಇದ್ದಿವೋ ಅಂತ ಗೊತ್ತಾಗುತ್ತಿಲ್ಲ. ಮೃಗಗಳು ಸಹ ಈ ರೀತಿ ನಡೆದುಕೊಳ್ಳಲ್ಲ, ಎಲ್ಲಾ ಅಧಿಕಾರಿಗಳು ಹಾಗೂ ಗೃಹ ಸಚಿವರ ಜೊತೆ ಮಾತನಾಡಿದ್ದೇನೆ ಎಂದರು.

    ಹೈದರಾಬಾದ್ ನಲ್ಲಿ ಸಜ್ಜನ್ ಸರ್ ನೀಡಿದ ಔಷಧಿಯೊಂದೇ ಮದ್ದು. ನಾನೊಬ್ಬ ಶಾಸಕನಾಗಿ, ಮಾಜಿ ಸಚಿವನಾಗಿ ಈ ಮಾತನ್ನ ಹೇಳಬಾರದು. ಆದರೆ ಅನಿವಾರ್ಯವಾಗಿ ಹೇಳಬೇಕಾಗುತ್ತೆ. ಯಾಕಂದ್ರೆ ದುಷ್ಟರಿಗೆ ಭಯ ಇಲ್ಲದಂತಾಗತ್ತೆ. ಹೆಣ್ಣು ಮಕ್ಕಳಂದ್ರೆ ತಾವು ಮಾಡಿದ್ದೆ ಆಟ ಅಂತ ತಿಳಿದಿದ್ದಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಉಪನಾಯಕನ ಪಟ್ಟದಿಂದ ಕೆಳಗಿಳಿಸಿ – ರೋಹಿತ್ ಬಗ್ಗೆ ಕೊಹ್ಲಿ ಮಾತು

    ಆರೋಪಿಗಳು ನಿರ್ಭಯವಾಗಿ ನಾವೇ ಮಾಡಿದ್ದು ಅಂತ ಹೇಳ್ತಿದ್ದಾರೆ.ಇದನ್ನೆಲ್ಲ ನೋಡಿದ್ರೆ ನಮ್ಮ ವೈಫಲ್ಯ ಕಾಣಿಸತ್ತೆ. ರಾಜಕಾರಣಿಗಳು, ಮಾಧ್ಯಮಗಳು ಇನ್ನಿತರ ಯಾವುದೇ ಪ್ರಭಾವ ಬೀರುವ ಮುಂಚೆ ಪೊಲೀಸರ ಪ್ರಭಾವ ಬೀರಬೇಕು. ಯಾರ ಯಾವ ರೀತಿ ಇರಬೇಕೊ ಹಾಗೆ ಇದ್ರೆನೆ ಭಯ ಇರುತ್ತೆ. ಇನ್ಸ್ ಪೆಕ್ಟರ್ ಇನ್ಸ್ ಪೆಕ್ಟರ್ ಆಗಿನೇ ಇರಬೇಕಾಗುತ್ತೆ. ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲಂದ್ರೆ ಕಷ್ಟ ಆಗತ್ತೆ. ಇದು ನಮ್ಮೆಲ್ಲರ ತಲೆ ತಗ್ಗಿಸುವ ವಿಚಾರ ಅಂತ ವಿಷಾದ ವ್ಯಕ್ತಪಡಿಸಿದರು. ಇದನ್ನೂ ಓದಿ: ನನ್ನ ಮಗ ಗೂಂಡಾ ಅಲ್ಲ, ತಪ್ಪು ಸಾಬೀತಾದರೆ ಕ್ರಮ ಕೈಗೊಳ್ಳಲಿ: ಮಾನಪ್ಪ ವಜ್ಜಲ್

  • ಕಾಮುಕರ ಹುಟ್ಟಡಗಿಸಿದ ವೀರ ಕನ್ನಡಿಗ – ಎನ್‌ಕೌಂಟರ್‌ಗೆ ವಿಶ್ವನಾಥ್ ಸಜ್ಜನರ್ ನೇತೃತ್ವ

    ಕಾಮುಕರ ಹುಟ್ಟಡಗಿಸಿದ ವೀರ ಕನ್ನಡಿಗ – ಎನ್‌ಕೌಂಟರ್‌ಗೆ ವಿಶ್ವನಾಥ್ ಸಜ್ಜನರ್ ನೇತೃತ್ವ

    – ಪಶುವೈದ್ಯೆ ಕುಟುಂಬಸ್ಥರಿಂದ ಸಂತಸ

    ಹೈದರಾಬಾದ್: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಹೈದರಾಬಾದ್ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಹುಬ್ಬಳ್ಳಿ ಮೂಲದ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ಅವರು ಎನ್‍ಕೌಂಟರ್ ಮಾಡಿದ್ದಾರೆ.

    ವಿಶ್ವನಾಥ್ ಸಜ್ಜನರ್ ಎನ್‍ಕೌಂಟರ್ ಸ್ಪೆಷಲಿಸ್ಟ್ ಆಗಿದ್ದು, ಸೈಬರಾಬಾದ್ ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ವಿಶ್ವನಾಥ್ ಸಜ್ಜನರ್ ವಾರಂಗಲ್ ಎಸ್‍ಪಿ ಆಗಿದ್ದರು. ಆಗ ಆಸಿಡ್ ದಾಳಿ ಆರೋಪಿಗಳು ಎನ್‍ಕೌಂಟರ್ ನಲ್ಲಿ ಹತ್ಯೆಗೈದಿದ್ದರು. ಆ ಎನ್‍ಕೌಂಟರ್ ಬಳಿಕ ಆ್ಯಸಿಡ್ ದಾಳಿಯಲ್ಲಿ ಇಳಿಕೆ ಕಂಡಿತ್ತು.

    ವೀರ ಕನ್ನಡಿಗ ವಿಶ್ವನಾಥ್ ಈಗ ‘ಹತ್ಯಾಚಾರಿ’ಗಳ ಹುಟ್ಟಡಗಿಸಿದ್ದಾರೆ. ಅಲ್ಲದೆ ಕಾಮುಕರನ್ನು ಎನ್‍ಕೌಂಟರ್ ಮಾಡಿದ್ದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ರೇಪಿಸ್ಟ್ ಗಳ ಎನ್‍ಕೌಂಟರ್ ಬೆನ್ನಲ್ಲೇ ಹೈದಾರಾಬಾದ್‍ನಲ್ಲಿ ವಿದ್ಯಾರ್ಥಿಗಳು ಪೊಲೀಸರಿಗೆ ಜೈಕಾರ ಹಾಕುತ್ತಿದ್ದಾರೆ. ಇದನ್ನೂ ಓದಿ: ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ- ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ ಪೊಲೀಸರು

    ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಪೊಲೀಸರು ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ. ಕಾಮುಕರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲೇ ಪೊಲೀಸರು ಅತ್ಯಾಚಾರಿಗಳ ಮೇಲೆ ಫೈರಿಂಗ್ ಮಾಡಿ ಹತ್ಯೆ ಮಾಡಿದ್ದಾರೆ. ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ನಾಲ್ವರು ಅತ್ಯಾಚಾರಿಗಳ ಮೇಲೆ ಎನ್‍ಕೌಂಟರ್ ಮಾಡಿದ್ದಾರೆ.  ಇದನ್ನೂ ಓದಿ: ಸುಡುವಾಗ ಪಶುವೈದ್ಯೆ ಜೀವಂತವಾಗಿದ್ಳು: ಸತ್ಯ ಬಾಯಿಬಿಟ್ಟ ಮೃಗೀಯ ಮನುಷ್ಯ

    ಏನಿದು ಪ್ರಕರಣ?
    ನವೆಂಬರ್ 27ರಂದು 26 ವರ್ಷದ ಪಶುವೈದ್ಯೆಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮೊಹಮ್ಮದ್ ಪಾಷಾ, ಮೂವರು ಕ್ಲೀನರ್ ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು, ನಾಲ್ವರು ಮೃಗೀಯ ಮನುಷ್ಯರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಈ ಕೃತ್ಯಕ್ಕೆ ಇವರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಇದನ್ನೂ ಓದಿ: ಮಹಿಳೆಯರು ತಮ್ಮ ಜೊತೆ ಕಾಂಡೋಮ್ ಇಟ್ಟುಕೊಂಡು ಅತ್ಯಾಚಾರಿಗಳಿಗೆ ಸಹಕರಿಸಬೇಕು: ನಿರ್ದೇಶಕ

    ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದರು. ಸಾಮೂಹಿಕ ಅತ್ಯಾಚಾರದ ಬಳಿಕ ಪಶುವೈದ್ಯೆ ಓಡಿ ಹೋಗಬಾರದು ಎನ್ನುವ ಉದ್ದೇಶದಿಂದ ಅವಳ ಕೈ ಕಾಲುಗಳನ್ನು ಕಟ್ಟಿದ್ದೆವು. ಅತ್ಯಾಚಾರದ ನಂತರವೂ ಸಂತ್ರಸ್ತೆಗೆ ಮದ್ಯಪಾನ ಮಾಡುವಂತೆ ಒತ್ತಾಯಿಸಿದ್ದೆವು. ಸಂತ್ರಸ್ತೆ ಪ್ರಜ್ಞೆ ತಪ್ಪಿದಾಗ ಆಕೆಯನ್ನು ಸೇತುವೆಯ ಕೆಳಗೆ ಸಾಗಿಸಲಾಗಿತ್ತು. ನಂತರ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ವಿ ಎಂದು ಮುಖ್ಯ ಆರೋಪಿ ಮೊಹಮ್ಮದ್ ಪಾಷಾ, ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಮೂಲಗಳನ್ನು ಆಧರಿಸಿ ಮಾಧ್ಯಮ ವರದಿ ಮಾಡಿತ್ತು. ಇದನ್ನೂ ಓದಿ: ಪಶುವೈದ್ಯೆಯನ್ನು ಕೊಂದಂತೆ ನನ್ನ ಮಗನನ್ನು ಕೊಲ್ಲಿ – ಸಿಡಿದೆದ್ದ ಅತ್ಯಾಚಾರಿಯ ತಾಯಿ

    ಬೆಂಕಿ ಹಚ್ಚುವುದಕ್ಕೂ ಮುನ್ನ ಪಶುವೈದ್ಯೆ ಮೃತಪಟ್ಟಿದ್ದಾಳೆ ಎಂದು ಭಾವಿಸಿದ್ದೇವು. ಆದರೆ ಬೆಂಕಿಯ ಹಚ್ಚಿದಾಗ ಅವಳು ಕಿರುಚಲು ಪ್ರಾರಂಭಿಸಿದಳು. ಹೀಗಾಗಿ ಸಂತ್ರಸ್ತೆ ಸಾಯುವವರೆಗೂ ನೋಡುತ್ತಲೇ ಇದ್ದೆವು. ಏಕೆಂದರೆ ಒಂದು ವೇಳೆ ಆಕೆ ಜೀವಂತವಾಗಿ ಉಳಿದರೆ ಪೊಲೀಸರು ನಮ್ಮನ್ನು ಹಿಡಿಯುತ್ತಾರೆ ಎನ್ನುವ ಭಯ ನಮ್ಮಲ್ಲಿತ್ತು ಎಂದು ಆರೋಪಿ ಪಾಷಾ ಬಾಯಿ ಬಿಟ್ಟಿದ್ದನು.