Tag: ಅತ್ಯಾಚಾರಿ

  • ಅತ್ಯಾಚಾರಿಗಳ ಪುರುಷತ್ವ ಹರಣ – ಪಾಕಿಸ್ತಾನದಲ್ಲಿ ಕಠಿಣ ಕಾನೂನು ಜಾರಿ

    ಅತ್ಯಾಚಾರಿಗಳ ಪುರುಷತ್ವ ಹರಣ – ಪಾಕಿಸ್ತಾನದಲ್ಲಿ ಕಠಿಣ ಕಾನೂನು ಜಾರಿ

    ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರ ಅತ್ಯಾಚಾರ ಮಾಡಿದವರ ವಿರುದ್ಧ ಕಠಿಣ ಕಾನೂನು ಜಾರಿಗೆ ತಂದಿದೆ ಎಂದು ಅಲ್ಲಿನ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಮಂಗಳವಾರ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡಿದವರ ಪುರುಷತ್ವ ಹರಣ (Chemical Castration) ಮಾಡುವ ಕಾನೂನನ್ನು ಜಾರಿಗೆ ತರಲು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಪಾಕ್ ಮಾಧ್ಯಮಗಳು ಸುದ್ದಿ ಮಾಡಿವೆ. ಅತ್ಯಾಚಾರ ಮಾಡಿದವರಿಗೆ ಕೆಮಿಕಲ್ ಕ್ಯಾಸ್ಟ್ರೇಶನ್ ಎಂಬ ರಾಸಾಯನಿಕ ಬಳಿಸಿ ಅವರು ಮುಂದೆ ಮತ್ತೆ ಸೆಕ್ಸ್ ಮಾಡದಂತೆ ಮಾಡಲು ನಿಯಮ ರೂಪಿಸಿದೆ.

    ಕೇಂದ್ರ ಸಂಪುಟ ಸಭೆಯಲ್ಲಿ ಪಾಕ್ ಕಾನೂನು ಸಚಿವರು ಅತ್ಯಾಚಾರ ವಿರೋಧಿ ಕರುಡನ್ನು ಮಂಡನೆ ಮಾಡಿದ್ದು, ಇದಕ್ಕೆ ಪ್ರಧಾನಿ ಇಮ್ರಾನ್ ಖಾನ್ ಸುಗ್ರೀವಾಜ್ಞೆಗೆ ಅನುಮೋದನೆ ಸೂಚಿಸಿದ್ದಾರೆ. ಜೊತೆಗೆ ಈ ಕಾಯ್ದೆಯ ಪ್ರಕಾರ ದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳನ್ನು ತ್ವರಿತ ರೀತಿಯಲ್ಲಿ ವಿಚಾರಣೆ ಮಾಡಬೇಕು. ಪೊಲೀಸರು ಸಾಕ್ಷಿ ನಾಶವಾಗದಂತೆ ನೋಡಿಕೊಳ್ಳಬೇಕು. ಅತ್ಯಾಚಾರ ಪ್ರಕರಣದಲ್ಲಿ ಹೆಚ್ಚು ಮಹಿಳಾ ಪೊಲೀಸರು ಭಾಗವಹಿಸಬೇಕು ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ.

    ಇದೇ ಸಂಪುಟ ಸಭೆಯಲ್ಲಿ ಕೆಲ ಸಚಿವರು ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಕಾನೂನು ತನ್ನಿ ಎಂದು ಒತ್ತಾಯ ಮಾಡಿದ್ದಾರೆ ಎಂದು ಮಾಧ್ಯಮಗಳು ಸುದ್ದಿ ಮಾಡಿವೆ. ಆದರೆ ಇಮ್ರಾನ್ ಖಾನ್ ಸದ್ಯ ಅತ್ಯಾಚಾರಿಗಳಿಗೆ ಕೆಮಿಕಲ್ ಕ್ಯಾಸ್ಟ್ರೇಶನ್ ರಾಸಾಯನಿಕ ನೀಡುವ ಮೂಲಕ ಅವರೆಂದು ಸೆಕ್ಸ್ ಮಾಡದಂತೆ ಮಾಡಲಾಗುವುದು. ಈ ಕಾನೂನು ಜಾರಿಗೆ ಬರಲಿ ನಂತರ ಮುಂದಿನ ಕಾನೂನಿನ ಬಗ್ಗೆ ಯೋಚಿಸೋಣ ಎಂದು ಹೇಳಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಪಾಕ್ ಸರ್ಕಾರ ನೀಡಲ್ಲ.

    ಕಳೆದ 2018ರ ಜನವರಿಯಲ್ಲಿ ನಡೆದ ಏಳು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ನಂತರ, ಪಾಕಿಸ್ತಾನದಲ್ಲಿ ಈ ಕಾನೂನು ತರಬೇಕು ಎಂದು ಒತ್ತಾಯ ಕೇಳಿಬಂದಿತ್ತು. ಆದರೆ ಈಗ ಮತ್ತೆ ಲಹೋರ್‍ನಲ್ಲಿ ಒಂದು ಗ್ಯಾಂಗ್ ರೇಪ್ ನಡೆದಿದ್ದು, ಈ ವಿಚಾರ ಮತ್ತೆ ಮುನ್ನಲೆಗೆ ಬಂದಿತ್ತು. ಹೀಗಾಗಿ ಪಾಕಿಸ್ತಾನದ ಸರ್ಕಾರ ಈ ಕಾನೂನನ್ನು ಜಾರಿಗೆ ತಂದಿದೆ ಎನ್ನಲಾಗಿದೆ.

  • ದೀಪಾವಳಿಯಂದು ಪೂಜೆ ಮಾಡ್ತಿದ್ದ ಮಹಿಳೆ ಮೇಲೆ ಪೆಟ್ರೋಲ್ ಸುರಿದು ದೀಪ ಎಸೆದ!

    ದೀಪಾವಳಿಯಂದು ಪೂಜೆ ಮಾಡ್ತಿದ್ದ ಮಹಿಳೆ ಮೇಲೆ ಪೆಟ್ರೋಲ್ ಸುರಿದು ದೀಪ ಎಸೆದ!

    – ಮಹಿಳೆಯನ್ನು ಸುಟ್ಟು ಹಾಕಿದ ಅತ್ಯಾಚಾರಿ

    ಜೈಪುರ: ದೀಪಾವಳಿ ಹಬ್ಬದ ಪ್ರಯುಕ್ತ ಮಹಿಳೆಯೊಬ್ಬರು ಪೂಜೆ ಮಾಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಆಕೆಯ ಮೇಲೆ ಪೆಟ್ರೋಲ್ ಸುರಿದು ದೀಪ ಎಸೆದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಆರೋಪಿಯನ್ನು ಲೇಖರಾಜ್ 3ಂದು ಗುರುತಿಸಲಾಗಿದೆ. ಈತ ಮಹಿಳೆಯ ಪಕ್ಕದ ಮನೆ ನಿವಾಸಿಯಾಗಿದ್ದಾನೆ. ಈ ಹಿಂದೆ ಇದೇ ಮಹಿಳೆಯನ್ನು ಅತ್ಯಾಚಾರ ಎಸಗಿ ನಂತರ ಬ್ಲಾಕ್‍ಮೇಲ್ ಮಾಡುತ್ತಿದ್ದನು. ಹೀಗಾಗಿ ಮಹಿಳೆ ಲೇಖರಾಜ್ ವಿರುದ್ಧ ಜೈಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದರು. ಆದರೆ ಇದೂವರೆಗೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

    ಶನಿವಾರ ಅಂದರೆ ದೀಪಾವಳಿ ಹಬ್ಬದಂದು ರಾತ್ರಿ ಲೇಖರಾಜ್ ಏಕಾಏಕಿ ಮಹಿಳೆಯ ಮನೆಗೆ ನುಗ್ಗಿದ್ದಾನೆ. ಈ ವೇಳೆ ಪೂಜೆ ಮಾಡುತ್ತಿದ್ದ ಆಕೆಯ ಮೇಲೆ ಪೆಟ್ರೋಲ್ ಸುರಿದು ಉರಿಯುತ್ತಿದ್ದ ದೀಪವನ್ನು ಆಕೆಯ ಮೇಲೆ ಎಸೆದಿದ್ದಾನೆ. ಪರಿಣಾಮ ಮಹಿಳೆ ಬೆಂಕಿಗಾಹುತಿಯಾಗಿದ್ದಾರೆ.

    ಘಟನೆ ನಡೆದ ಕೂಡಲೇ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಹಿಳೆಯ ಮನೆಗೆ ಜೈಪುರ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಇತ್ತ ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಿಸಿಕೊಂಡರೂ ಆರೋಪಿಯನ್ನು ಇದೂವರೆಗೆ ಬಂಧಿಸಿಲ್ಲ.

  • ಕೋರ್ಟ್ ಆವರಣದಲ್ಲೇ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಅತ್ಯಾಚಾರ ಆರೋಪಿ

    ಕೋರ್ಟ್ ಆವರಣದಲ್ಲೇ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಅತ್ಯಾಚಾರ ಆರೋಪಿ

    ಗುವಾಹಟಿ: ಮಗಳ ಮೇಲೆ ಆತ್ಯಾಚಾರ ಆರೋಪಕ್ಕೊಳಗಾಗಿದ್ದ ಆರೋಪಿಯು ತನ್ನ ಪತ್ನಿಯನ್ನು ಕೋರ್ಟ್ ಆವರಣದಲ್ಲೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಅಸ್ಸಾಂನ ದಿಬ್ರುಗರ್ ಜಿಲ್ಲೆಯಲ್ಲಿ ನಡೆದಿದೆ.

    ಪತ್ನಿ ರೀಟಾ ನೇಹಾರ್ ದೇಕಾ ಕೊಲೆಯಾದ ದುರ್ದೈವಿ. ಆರೋಪಿ ಪತಿ ಪೂರ್ಣ ನೇಹಾರ್ ದೇಕಾನು ಇಂದು ಬೆಳಗ್ಗೆ 10.30ರಲ್ಲಿ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಳೆದ 9 ತಿಂಗಳ ಹಿಂದೆ ಆರೋಪಿಯ ವಿರುದ್ಧ ಪತ್ನಿಯು ಮಗಳ ಮೇಲೆ ಅತ್ಯಾಚಾರ ಮಾಡಿದ ದೂರು ದಾಖಲಿಸಿದ್ದಳು. ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಆರೋಪಿಯು ಸೆರೆವಾಸ ಅನುಭವಿಸಿ, ಕೆಲವು ದಿನಗಳ ನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ. ಪ್ರಕರಣ ಕುರಿತಂತೆ ಇಂದು ಕೋರ್ಟ್ ನಲ್ಲಿ ವಿಚಾರಣೆಗೆ ಇಬ್ಬರೂ ಆಗಮಿಸಿದ್ದಾರೆ. ದಂಪತಿ ಕೋರ್ಟ್ ಆವರಣದ ಬೆಂಚ್ ಮೇಲೆ ಕುಳಿತಿದ್ದಾಗ ಆರೋಪಿಯು ಏಕಾಏಕಿ ಹರಿತವಾದ ಆಯುಧಗಳಿಂದ ಪತ್ನಿಯ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಸಿದೆಸ್ವರ್ ಬೋಹ್ರಾ ಹೇಳಿಕೆ ನೀಡಿದ್ದಾರೆ.

    ಕೂಡಲೇ ಮಹಿಳೆಯನ್ನು ದಿಬ್ರುಗರ್‍ನ ಅಸ್ಸಾಂ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಾರ್ಗ ಮಧ್ಯೆಯೇ ಮೃತ ಪಟ್ಟಿದ್ದಾಳೆಂದು ವೈದ್ಯರು ದೃಢಪಡಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಆರೋಪಿ ಪೂರ್ಣ ನೇಹಾರ್ ದೇಕಾನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

    ಘಟನೆ ಕುರಿತು ಆರೋಪಿಯು ಮಾಧ್ಯಮಗಳ ಮುಂದೆ, ನಾನು ಅಮಾಯಕ, ಆಕೆ ನನ್ನ ವಿರುದ್ಧ ಮಗಳ ಮೇಲೆ ಅತ್ಯಾಚಾರ ಆರೋಪದ ಸುಳ್ಳು ದೂರು ದಾಖಲಿಸಿದ್ದಳು. ನಾನು ಜಾಮೀನು ಪಡೆದು ಮನೆಗೆ ಬಂದಾಗ ನನ್ನನ್ನು ಮನೆಯ ಒಳಗೆ ಸೇರಿಸಿಕೊಳ್ಳಲಿಲ್ಲ ಆದ್ದರಿಂದ ಆಕೆಯನ್ನು ಹತ್ಯೆ ಮಾಡಿದ್ದಾಗಿ ತಿಳಿಸಿದ್ದಾನೆ.