Tag: ಅತ್ಯಚಾರ

  • ಕಾಮೋತ್ತೇಜಕ ಮದ್ದು ನೀಡಿ ಅತ್ಯಾಚಾರ-ಆರೋಪಿ ಸುಳಿವು ನೀಡಿದವರಿಗೆ 30 ಸಾವಿರ ಬಹುಮಾನ

    ಕಾಮೋತ್ತೇಜಕ ಮದ್ದು ನೀಡಿ ಅತ್ಯಾಚಾರ-ಆರೋಪಿ ಸುಳಿವು ನೀಡಿದವರಿಗೆ 30 ಸಾವಿರ ಬಹುಮಾನ

    ಭೋಪಾಲ್: ವ್ಯಕ್ತಿಯೊಬ್ಬ ಬಾಲಕಿಗೆ ಕಾಮೋತ್ತೇಜಕ ಮದ್ದು ನೀಡಿ ಅತ್ಯಾಚಾರ ಮಾಡಿದ್ದಾನೆ. ಈ ವೇಳೆ ಬಾಲಕಿಗೆ ಅತೀವ ರಕ್ತಸ್ರಾವವಾಗಿ ಸಾವನ್ನಪಿರುವ ಘಟನೆ ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯಲ್ಲಿ ನಡೆದಿದೆ.

    ವ್ಯಕ್ತಿಯೊಬ್ಬ 17 ವರ್ಷದ ಬಾಲಕಿಗೆ ಕಾಮೋತ್ತೇಜಕ ಮದ್ದು ನೀಡಿ ಅತ್ಯಾಚಾರ ಎಸಗಿರುವ ಕೃತ್ಯ ನಡೆದಿದೆ. ಬಾಲಕಿಯು ಅಧಿಕ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ. ಜಿಲ್ಲೆಯಲ್ಲಿ ರಾಜೇಂದ್ರನಗರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:  ರಾಜ್‌ ಕುಟುಂಬದಿಂದ ಗಂಧದಗುಡಿ‌ಯ 3ನೇ ಪ್ರಯೋಗ

    RAPE CASE

    ಆರೋಪಿ, ವರ್ಷದ ಯಶವಂತ್ ಮರವಿ ಸದ್ಯ ತಲೆಮರೆಸಿಕೊಂಡಿದ್ದಾನೆ. ಆತನ ಸುಳಿವು ನೀಡಿದವರಿಗೆ 30 ಸಾವಿರ ಬಹುಮಾನ ಘೋಷಿಸಲಾಗಿದೆ ಎಂದು ಹೆಚ್ಚುವರಿ ಡಿಜಿ ಸಾಗರ್ ತಿಳಿಸಿದ್ದಾರೆ. ಅಧಿಕ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿಯು ಸಾವಿಗೂ ಮೊದಲು ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಇದನ್ನೂ ಓದಿ:  ಪತಿ ಸರಿಯಾಗಿ ಬ್ಲೌಸ್ ಹೊಲಿಯಲಿಲ್ಲವೆಂದು ಪತ್ನಿ ಆತ್ಮಹತ್ಯೆ

    ರಕ್ತಸ್ರಾವದಿಂದ ಸತ್ತಿರುವುದು ಮರಣೋತ್ತರ ಪರೀಕ್ಷೆಯಿಂದ ಗೊತ್ತಾಗಿದೆ. ಆರೋಪಿಯ ಪತ್ತೆ, ಬಂಧಿಸಲು ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.

  • 10 ತಿಂಗಳ ಕಂದಮ್ಮನ ಮೇಲೆ ಮನೆಕೆಲಸದವನಿಂದ ಅತ್ಯಾಚಾರ

    10 ತಿಂಗಳ ಕಂದಮ್ಮನ ಮೇಲೆ ಮನೆಕೆಲಸದವನಿಂದ ಅತ್ಯಾಚಾರ

    ಲಕ್ನೋ: 10 ತಿಂಗಳಿನ ಹೆಣ್ಣು ಮಗು ಮೇಲೆ ಮನೆಕೆಲಸದವನು ಅತ್ಯಾಚಾರ ಮಾಡಿರುವ ಪ್ರಕರಣ ಸಾದಾತ್‍ಗಂಜ್‍ನಲ್ಲಿ ಭಾನುವಾರ ನಡೆದಿರುವುದು ಬೆಳಕಿಗೆ ಬಂದಿದೆ.

    ಮಗುವನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗಕ್ಕೆ ದಾಖಲಿಸಲಾಗಿದೆ. ಮಗುವಿನ ಜನನಾಂಗಕ್ಕೆ ಹಾನಿಯಾಗಿದ್ದು, ಸದ್ಯ ಆಕೆಯ ಆರೋಗ್ಯ ಸ್ಥಿರವಾಗಿದೆ. ಆದಾಗ್ಯೂ, ಮೂತ್ರ ಮತ್ತು ಮಲ ವಿಸರ್ಜನೆ ಸಮಯದಲ್ಲಿ ಸ್ವಲ್ಪ ನೋವು ಇರುತ್ತದೆ. ಇದಕ್ಕಾಗಿ ಔಷಧಿ ನೀಡುತ್ತಿದ್ದೇವೆ. ಗುದದ್ವಾರದಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕು ಕಡಿಮೆಯಾದ ಬಳಿಕ ಅಗತ್ಯ ಬಿದ್ದರೆ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಗುತ್ತದೆ ಎಂದು ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಪ್ರೊ ಜೆ.ಡಿ. ರಾವತ್ ತಿಳಿಸಿದ್ದಾರೆ. ಇದನ್ನೂ ಓದಿ: ಥ್ರೋಬಾಲ್ ಆಡಿ ಗಮನಸೆಳೆದ ನಟಿ ರೋಜಾ

    ನಡೆದಿದ್ದೇನು: ಮಗುವಿನ ತಾಯಿಯು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಮಗ ಇದ್ದಕ್ಕಿದ್ದಂತೆ ಅಳುಲು ಪ್ರಾರಂಭಿಸಿದೆ. ಕೂಡಲೇ ಬೆಡ್ ರೂಂಗೆ ಬಂದು ನೋಡಿದಾಗ ಮನೆ ಕೆಲಸ ಮಾಡಿಕೊಂಡಿದ್ದ ಸನ್ನಿ ಮಗುವಿನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ. ಆಗ ಮಹಿಳೆಯನ್ನು ನೋಡುತ್ತಿದ್ದಂತೆ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಯ ಮಗುವಿನ ತಾತಿ ಕುಟುಂಬಸ್ಥರಿಗೆ ನಡೆದಿರುವ ವಿಚಾರವನ್ನು ತಿಳಿಸಿದ್ದಾಳೆ. ಇದನ್ನೂ ಓದಿ: ಕೇರಳದಲ್ಲಿ ಭಾರೀ ಮಳೆ – 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

    ಮಗುವಿನ ಕುಟುಂಬಸ್ಥರು ಪೊಲೀಸರಲ್ಲಿ ದೂರು ನೀಡಿದ್ದಾರೆ. ಕುಟುಂಬದ ದೂರಿನ ಮೇರೆಗೆ ಆರೋಪಿಯನ್ನು ಸೋಮವಾರ ಬಂಧಿಸಲಾಗಿದ್ದು, ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಾದತ್‍ಗಂಜ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಬ್ರಿಜೇಶ್ ಕುಮಾರ್ ಯಾದವ್ ತಿಳಿಸಿದ್ದಾರೆ.

  • ವಿರಾಟ್ ಕೊಹ್ಲಿಯ 9 ತಿಂಗಳ ಮಗಳಿಗೆ ಅತ್ಯಾಚಾರ ಬೆದರಿಕೆ

    ವಿರಾಟ್ ಕೊಹ್ಲಿಯ 9 ತಿಂಗಳ ಮಗಳಿಗೆ ಅತ್ಯಾಚಾರ ಬೆದರಿಕೆ

    ಮುಂಬೈ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಪುತ್ರಿ ಮೇಲೆ ಆನ್‍ಲೈನ್‍ಲ್ಲಿ ಬಂದಿರುವ ಅತ್ಯಾಚಾರದ ಬೆದರಿಕೆಗಳ ಕುರಿತು ದೆಹಲಿ ಮಹಿಳಾ ಆಯೋಗವು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

    ದುಬೈನಲ್ಲಿ ನಡೆದ ಟಿ20 ವಿಶ್ವಕಪ್‍ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತ ನಂತರ ವಿರಾಟ್ ಕೊಹ್ಲಿ ಮಗಳ ವಿರುದ್ಧ ದ್ವೇಷಪೂರಿತ ಕಾಮೆಂಟ್‍ಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಈ ಪಂದ್ಯದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ದ ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ಕೋಮು ದಾಳಿ ನಡೆಸಿದ್ದರು. ಈ ಬಗ್ಗೆ ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಸೆಹ್ವಾಗ್ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿ ಶಮಿ ಪರವಾಗಿ ನಿಂತಿದ್ದರು. ಇದನ್ನೂ ಓದಿ: ಗೂಗಲ್ ಸರ್ಚ್‍ನಲ್ಲಿ ಸಿಕ್ಕ ಫ್ಲಿಪ್ಕಾರ್ಟ್ ನಂಬರ್ – ಕರೆ ಮಾಡಿ 2 ಲಕ್ಷ ಕಳ್ಕೊಂಡ

    ನ್ಯೂಜಿಲೆಂಡ್ ವಿರುದ್ದದ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೇ ವಿಷಯವನ್ನು ಪ್ರಸ್ತಾಪಿಸಿದ್ದರು. ಶಮಿ ವಿರುದ್ದದ ಕೋಮು ನಿಂದನೆಯನ್ನು ಖಂಡಿಸಿದ ಕೊಹ್ಲಿ, ಒಂದು ಧರ್ಮವನ್ನು ಗುರಿಯಾಗಿಸಿ ಆಕ್ರಮಣ ಮಾಡುವುದು ಒಬ್ಬ ಮನುಷ್ಯ ಮಾಡಬಹುದಾದ ಅತ್ಯಂತ ಹೀನಾಯ ಕೃತ್ಯ. ಏಕೆಂದರೆ ಧರ್ಮ ಎಂಬುದು ಅತ್ಯಂತ ಪವಿತ್ರ ಮತ್ತು ವೈಯಕ್ತಿಕ ವಿಷಯವಾಗಿದೆ. ಯಾವುದೇ ವ್ಯಕ್ತಿಯನ್ನು ಅವರ ಧರ್ಮದ ಆಧಾರದ ಮೇಲೆ ಗುರಿಯಾಗಿಸಬಾರದು ಎಂದು ವಿರಾಟ್ ಕೊಹ್ಲಿ ಸ್ಪಷ್ಟವಾಗಿ ಹೇಳಿದರು. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ

    ಮೊಹಮ್ಮದ್ ಶಮಿ ಟೀಮ್ ಇಂಡಿಯಾದ ಪ್ರಮುಖ ಭಾಗ. ಅವರು ಭಾರತಕ್ಕಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಇಂತಹ ಟೀಕೆಗಳನ್ನು ಮಾಡುವವರಿಗಾಗಿ ನನ್ನ ಸಮಯವನ್ನು ವ್ಯರ್ಥ ಮಾಡಲು ನಾನು ಬಯಸುವುದಿಲ್ಲ. ನಾವು ಶಮಿ ಜೊತೆ ಶೇಕಡಾ 200 ರಷ್ಟು ನಿಲ್ಲುತ್ತೇವೆ. ತಂಡದಲ್ಲಿನ ನಮ್ಮ ಸಹೋದರತ್ವ ಬಾಂದವ್ಯವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಕೊಹ್ಲಿ ಖಾರವಾಗಿ ಹೇಳಿದ್ದರು. ಇದನ್ನೂ ಓದಿ:  ಪಂಜಾಬ್ ಲೋಕ್ ಕಾಂಗ್ರೆಸ್ -ಅಮರಿಂದರ್ ಸಿಂಗ್ ಹೊಸ ಪಕ್ಷ

    ಕೊಹ್ಲಿಯ ಈ ಹೇಳಿಕೆಯ ಬೆನ್ನಲ್ಲೇ ಇದೀಗ ವಿಕೃತರು ಟೀಮ್ ಇಂಡಿಯಾ ನಾಯಕನ ವಿರುದ್ದ ತಿರುಗಿದ್ದಾರೆ. ಅನ್ಯಧರ್ಮೀಯನ ಪರ ನಿಂತಿದ್ದಕ್ಕಾಗಿ ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಕೊಹ್ಲಿಯ 9 ತಿಂಗಳ ಮಗುವಿನ ಮೇಲೆ ಅತ್ಯಾಚಾರ ಎಸೆಗುವುದಾಗಿ ಬೆದರಿಕೆಗಳ ಕಮೆಂಟ್ ಮಾಡುತ್ತಿದ್ದಾರೆ. ಈ ಕಮೆಂಟ್‍ಗಳು ಈಗ ವೈರಲ್ ಆಗುತ್ತಿದ್ದು, ಪಾಕ್ ಆಟಗಾರ ಮೊಹಮ್ಮದ್ ಅಮೀರ್ ಸೇರಿದಂತೆ ಅನೇಕರು ಇಂತಹ ನೀಚ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಅಪ್ಪು ಕೊನೆ ಕ್ಷಣದ ವಿಡಿಯೋ ಲಭ್ಯ

    ವಿರಾಟ್ ಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಪ್ರಿಯ ವಿರಾಟ್, ಈ ಜನರು ದ್ವೇಷದಿಂದ ತುಂಬಿದ್ದಾರೆ ಏಕೆಂದರೆ ಯಾರೂ ಅವರಿಗೆ ಯಾರೂ ಪ್ರೀತಿಯನ್ನು ನೀಡುವುದಿಲ್ಲ. ಅವರನ್ನು ಕ್ಷಮಿಸಿ. ತಂಡವನ್ನು ರಕ್ಷಿಸಿ ಎಂದು ರಾಹುಲ್ ಗಾಂಧಿ  ಟ್ವೀಟ್ ಮಾಡಿದ್ದಾರೆ.

  • ಒಂದು ವಾರ ನಿರಂತರ ಸಾಮೂಹಿಕ ಅತ್ಯಾಚಾರ- ಐವರ ಬಂಧನ

    ಒಂದು ವಾರ ನಿರಂತರ ಸಾಮೂಹಿಕ ಅತ್ಯಾಚಾರ- ಐವರ ಬಂಧನ

    ಪಾಟ್ನಾ: ವಿವಾಹಿತ ಮಹಿಳೆ ಮೇಲೆ ಐವರು ಪುರುಷರು ಒಂದು ವಾರ ನಿರಂತ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ತನ್ನ ಪತಿಯೊಂದಿಗೆ ಅಕ್ಟೋಬರ್ 10ರಂದು ಜಗಳವಾಡಿ ಮನೆಯನ್ನು ಬಿಟ್ಟು ಹೋಗಿದ್ದರು. ಬಳಿಕ ಮಹಿಳೆ ಕೊಲ್ಕತ್ತಾಗೆ ಹೋಗಲು ನಿರ್ಧರಿಸಿ, ಪಾಟ್ನಾ ಜಂಕ್ಷನ್‍ಗೆ ಬಂದಿದ್ದಾರೆ. ಅಲ್ಲಿಂದ ಮಹಿಳೆ ಹೋಟೆಲ್‍ಗೆ ಹೋಗಿ, ಓನರ್ ಬಳಿ ಕೊಲ್ಕತ್ತಾಗೆ ಹೋಗುವ ರೈಲಿನ ಬಗ್ಗೆ ಮಾಹಿತಿ ಕೇಳಿದ್ದಾರೆ. ಇದನ್ನೂ ಓದಿ:  ಭಾರೀ ಮಳೆಗೆ ಕೊಚ್ಚಿ ಹೋದ ಉತ್ತರಾಖಂಡ್ ರೈಲು ಹಳಿ

    ಹೋಟೆಲ್ ಮಾಲೀಕ ಗೋಪಾಲ್ ತನ್ನ ಸ್ನೇಹಿತ ಅಮಿತ್‍ಗೆ ಮಹಿಳೆಯ ಬಗ್ಗೆ ಹೇಳಿದ್ದಾನೆ. ಬಳಿಕ ಇಬ್ಬರೂ ಆಕೆಯನ್ನು ಅಜಯ್ ಇನ್ನೊಬ್ಬ ವ್ಯಕ್ತಿಯ ಬಳಿ ಕರೆದುಕೊಂಡು ಹೋಗಿದ್ದಾರೆ. ಅವರು ಕಾರ್ಬಿಗಾಹಿಯಾ ಎಂಬ ಪ್ರದೇಶದ ಒಂದು ಕೊಠಡಿಯಲ್ಲಿ ರೈಲು ಬರುವವರೆಗೆ ಕಾಯುವಂತೆ ಮಹಿಳೆಗೆ ಹೇಳಿದ್ದಾರೆ ಎಂದು ಜಕ್ಕನಪುರ ಪೊಲೀಸ್ ಠಾಣೆಯ ತನಿಖಾಧಿಕಾರಿ ಕೆಪಿ ಶರ್ಮಾ ಹೇಳಿದ್ದಾರೆ. ಇದನ್ನೂ ಓದಿ:   50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ ಶಿಲ್ಪಾ ಶೆಟ್ಟಿ

    ಅಕ್ಟೋಬರ್ 17ರ ರಾತ್ರಿಯವರೆಗೆ ಸಂತ್ರಸ್ತೆಯನ್ನು ಆ ಕೋಣೆಯಲ್ಲಿ ಕೂಡಿಹಾಕಿದ್ದಾರೆ. ಒಬ್ಬ ಆರೋಪಿ ಆಕೆಯ ಮೇಲೆ ಕಣ್ಣಿಡಲು 24 ಗಂಟೆ ಕೋಣೆಯ ಹೊರಗೆ ಕಾಯುತ್ತಿದ್ದ. ಕೊಲ್ಕತ್ತಾ ತಲುಪಲು ಸಂತ್ರಸ್ತೆ ವಿಫಲವಾದ ಕಾರಣ, ಆಕೆಯ ಪತಿ ಜಕ್ಕನಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮಹಿಳೆಯ ಮೊಬೈಲ್ ಟವರ್ ಪರಿಶೀಲಿಸಿದ್ದು, ಅದು ಪಾಟ್ನಾ ಜಂಕ್ಷನ್ ಆಕೆಯ ಕೊನೆಯ ಸ್ಥಳವೆಂದು ತೋರಿಸಿದೆ. ಸ್ಥಳೀಯ ಗುಪ್ತಚರ ಮಾಹಿತಿ ಆಧಾರದ ಮೇಲೆ ನಾವು ಮಹಿಳೆ ಇರುವ ಮನೆಯನ್ನು ತಲುಪಿದೆವು ಎಂದು ಅವರು ಹೇಳಿದ್ದಾರೆ.

  • ವಿಡಿಯೋ ತೋರಿಸಿ ಅಪ್ರಾಪ್ತೆ ಮೇಲೆ 4 ವರ್ಷ ಅತ್ಯಾಚಾರ ಮಾಡಿದ್ರು..!

    ವಿಡಿಯೋ ತೋರಿಸಿ ಅಪ್ರಾಪ್ತೆ ಮೇಲೆ 4 ವರ್ಷ ಅತ್ಯಾಚಾರ ಮಾಡಿದ್ರು..!

    ಹೈದರಾಬಾದ್: ಅತ್ಯಚಾರವೆಸೆಗಿದ ವಿಡಿಯೋ ತೋರಿಸಿ ಆರೋಪಿಗಳು 16 ವರ್ಷದ ಬಾಲಕಿಯೊಬ್ಬಳ ಮೇಲೆ 4 ವರ್ಷಗಳಿಂದ ನಿರಂತರ ಲೈಂಗಿಕ ಕಿರುಕುಳ ಕೊಟ್ಟ ಘಟನೆ ಹೈದರಾಬಾದ್‍ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    4 ವರ್ಷಗಳ ಹಿಂದೆ ಬಾಲಕಿ ಮೇಲೆ ಆಕೆಯ ಸಂಬಂಧಿಕನೊಬ್ಬ ಅತ್ಯಚಾರವೆಸೆಗಿದ್ದ. ಅಲ್ಲದೆ ಆ ದೃಶ್ಯಗಳನ್ನು ವಿಡಿಯೋ ಮಾಡಿ ತನ್ನ ಸ್ನೇಹಿತರಿಗೆ ಕಳುಹಿಸಿದ್ದ. ಬಳಿಕ ಆರೋಪಿ ಹಾಗೂ ಆತನ ಸ್ನೇಹಿತರು ಬಾಲಕಿಗೆ ವಿಡಿಯೋ ತೋರಿಸಿ ಬೆದರಿಸಿದ್ದಾರೆ. ಆದ್ರೆ ಈ ಯಾವ ವಿಷಯವನ್ನು ಬಾಲಕಿ ಮನೆಯವರಿಗೆ ತಿಳಿಸಿರಲಿಲ್ಲ.

    ಆ ವಿಡಿಯೋವೊಂದನ್ನೇ ಇಟ್ಟುಕೊಂಡು ಪಾಪಿಗಳು ಬಾಲಕಿ ಮೇಲೆ ಸತತ 4 ವರ್ಷಗಳಿಂದ ಅತ್ಯಚಾರ ಎಸಗಿದ್ದಾರೆ. ಇದರಿಂದ ಬೇಸತ್ತ ಬಾಲಕಿ ಕಿರುಕುಳ ತಾಳಲಾರದೇ ಕಳೆದ ತಿಂಗಳು ಹೈದರಾಬಾದ್‍ನ ಭರೋಸಾ ಕೇಂದ್ರಕ್ಕೆ ತೆರಳಿ ನಡೆದ ಘಟನೆ ಕುರಿತು ತಿಳಿಸಿದ್ದಾಳೆ. ಬಾಲಕಿಯ ದೂರಿನ ಮೇಲೆ ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

    ವಿಚಾರಣೆ ವೇಳೆ ಬಾಲಕಿ, ತನ್ನ ಸಂಬಂಧಿಯೊಬ್ಬ ಅವರ ಮನೆಯ ಮೇಲಿನ ಮಹಡಿಗೆ ಆಕೆಯನ್ನು ಕರೆದೊಯ್ದು ಕುಡಿಯುವ ಜ್ಯೂಸ್‍ನಲ್ಲಿ ಮತ್ತು ಬರುವ ಮಿಶ್ರಣವನ್ನು ಬೆರೆಸಿ ಕೊಟ್ಟನು. ಬಳಿಕ ತನ್ನ ಮೇಲೆ ಅತ್ಯಚಾರ ಮಾಡಿ ಅದನ್ನ ವಿಡಿಯೋ ಮಾಡಿಕೊಂಡಿದ್ದನು. ಅಲ್ಲದೆ ಆ ವಿಡಿಯೋ ಇಟ್ಟುಕೊಂಡು ಆರೋಪಿ ಹಾಗೂ ಆತನ ಸ್ನೇಹಿತರು ತನ್ನ ಮೇಲೆ ನಿರಂತರವಾಗಿ ಅತ್ಯಚಾರ ಮಾಡಿದ್ದಾರೆ ಅಂತ ಹೇಳಿದ್ದಾಳೆ.

    ಈ ವಿಷಯ ತಿಳಿಯುತ್ತಿದ್ದಂತೆ ಬಾಲಕಿಯ ಕುಟುಂಬಸ್ಥರು ಹಾಗೂ ನೆರೆಹೊರೆ ಮನೆಯವರು ಪ್ರತಿಭಟನೆ ಮಾಡಿ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಪೊಲೀಸರು ಕೇವಲ ಮೂವರನ್ನು ಬಂಧಿಸಿದ್ದಾರೆ. ಈ ವಿಚಾರದಲ್ಲಿ ಶಾಮೀಲಾದ ಉಳಿದ 8 ಮಂದಿಯನ್ನು ಕೂಡ ಬಂಧಿಸಬೇಕು. ಇಂತವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗುವಿನ ಎದುರೇ ತಾಯಿಯ ಬರ್ಬರ ಹತ್ಯೆ..!

    ಮಗುವಿನ ಎದುರೇ ತಾಯಿಯ ಬರ್ಬರ ಹತ್ಯೆ..!

    ವಿಜಯಪುರ: ಏಕಾಏಕಿ ಮನೆಗೆ ನುಗ್ಗಿ ಒಂಟಿ ಮಹಿಳೆಯನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ತಾಳಿಕೋಟಿ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.

    ಶಂಕ್ರವ್ವ ಪ್ರಭಪ್ಪ ಹರಿಜನ(30) ಕೊಲೆಯಾದ ಮಹಿಳೆ. ಕಳೆದ ರಾತ್ರಿ ಪತಿ ಪ್ರಭಪ್ಪ ಬೇರೆ ಊರಿಗೆ ಹೋಗಿದ್ದ ಸಮಯದಲ್ಲಿ ದುಷ್ಕರ್ಮಿಗಳು ಶಂಕ್ರವ್ವನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮಗು ಹಾಗೂ ಮಹಿಳೆ ಇಬ್ಬರೇ ಇದ್ದ ವೇಳೆ ದುಷ್ಕರ್ಮಿಗಳು ಏಕಾಏಕಿ ಮನೆಗೆ ನುಗ್ಗಿದ್ದಾರೆ. ಬಳಿಕ ಮಗುವಿನ ಎದುರಲ್ಲೇ ತಾಯಿಯನ್ನು ಕೊಲೆ ಮಾಡಿದ್ದಾರೆ.

    ಅಷ್ಟೆ ಅಲ್ಲದೇ ಬೆಳಗ್ಗೆ ಅಕ್ಕಪಕ್ಕದ ಮನೆಯವರು ಶಂಕ್ರವ್ವನ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಮೈಮೆಲೆ ಬಟ್ಟೆ ಇಲ್ಲದೆ ನಗ್ನವಾಗಿ ಬಿದ್ದಿರುವ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ದುಷ್ಕರ್ಮಿಗಳು ಅತ್ಯಾಚಾರವೆಸೆಗಿ ಕೊಲೆ ಮಾಡಿದ್ದಾರೆ ಎಂದು ಮಹಿಳೆ ಕುಟುಂಬಸ್ಥರು ಶಂಕಿಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ತಾಳಿಕೋಟೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗುಜರಾತ್‍ನಲ್ಲಿ ಮುಂದುವರಿದ ಹಿಂಸಾಚಾರ- ಬಿಹಾರಿ ಯುವಕನ ಕೊಲೆ

    ಗುಜರಾತ್‍ನಲ್ಲಿ ಮುಂದುವರಿದ ಹಿಂಸಾಚಾರ- ಬಿಹಾರಿ ಯುವಕನ ಕೊಲೆ

    ಗಾಂಧಿನಗರ: ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣದ ಸಂಬಂಧಿಸಿದಂತೆ ಗುಜರಾತ್‍ನಲ್ಲಿ ಮತ್ತೆ ಹಿಂಸಾಚಾರ ಮುಂದುವರಿದಿದ್ದು, ಈ ಬಾರಿ ಬಿಹಾರಿ ಯುವಕನನ್ನು ದುಷ್ಕರ್ಮಿಗಳ ಗುಂಪೊಂದು ರಾಡ್‍ನಿಂದ ಹಲ್ಲೆ ಮಾಡಿ ಕೊಲೆ ಮಾಡಿದೆ.

    ಅಮರ್‍ಜಿತ್ ಕುಮಾರ್ ಕೊಲೆಯಾದ ದುರ್ದೈವಿ. ಗುಜರಾತ್‍ನ ಗಾಯಾ ಕೋಡಿಯಾ ಎಂಬ ಹಳ್ಳಿಯಲ್ಲಿ ಘಟನೆ ನಡೆದಿದೆ. ಅಮರ್‍ಜಿತ್ ಕುಮಾರ್ ಪಾಂಡೇಶ್ವರಿ ನಗರದ ಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಶುಕ್ರವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಆತನನ್ನು ತಡೆದ ದುಷ್ಕರ್ಮಿಗಳು ರಾಡ್‍ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

    ಅಮರ್‍ಜಿತ್ ತನ್ನ 17ನೇ ವಯಸ್ಸಿನಲ್ಲಿ ಕೆಲಸ ಅರಸಿ ಗುಜರಾತ್‍ಗೆ ಬಂದಿದ್ದ. ಇಲ್ಲಿಯೇ ಒಂದು ಮನೆ ನಿರ್ಮಾಣ ಮಾಡಿಕೊಳ್ಳುವ ಉದ್ದೇಶದಿಂದ ದುಡಿಯುತ್ತಿದ್ದ. ದುಷ್ಕರ್ಮಿಗಳ ಹೇಯ ಕೃತ್ಯದಿಂದ ಆತನ ಪತ್ನಿ ಹಾಗೂ ಮಕ್ಕಳು ಬೀದಿ ಪಾಲಾಗಿದ್ದಾರೆ.

    ಕೇಂದ್ರ ಹಾಗೂ ಗುಜರಾತ್ ಬಿಜೆಪಿ ಸರ್ಕಾರ, ಬಿಹಾರ್ ಆಡಳಿತಾಧಿಕಾರಿಗಳ ಬೇಜವಾಬ್ದಾರಿಯಿಂದ ಇಂತಹ ಕೃತ್ಯಗಳು ಪದೇ ಪದೇ ನಡೆಯುತ್ತಿವೆ. ಈ ಕುರಿತು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಅಂತಾ ಅಮರ್‍ಜಿತ್ ತಂದೆ ರಾಜ್‍ದೇವ್ ಸಿಂಗ್ ಒತ್ತಾಯಿಸಿದ್ದಾರೆ.

    ಈ ಹಿಂದೆ ಆಗಿದ್ದೇನು?:
    ಸಬರ್ಕಾಂತಾ ಜಿಲ್ಲೆಯಲ್ಲಿ ಬಿಹಾರಿ ಯುವಕನೊಬ್ಬ 14 ತಿಂಗಳ ಗುಜರಾತಿ ಕಂದಮ್ಮನ ಮೇಲೆ ಕಳೆದ ಸೆಪ್ಟೆಂಬರ್ 28 ರಂದು ಅತ್ಯಾಚಾರ ಎಸಗಿದ್ದ. ಈ ಸುದ್ದಿ ಹಳ್ಳಿ-ಹಳ್ಳಿಗಳಿಗೆ ತಲುಪಿ, ಗುಜರಾತಿಗರು ಹಾಗೂ ಬಿಹಾರಿಗಳು ಪರಸ್ಪರ ಹಿಂಸಾಕೃತ್ಯಕ್ಕೆ ಮುಂದಾದರು. ಇದರಿಂದ ಭಯಗೊಂಡ 15 ಸಾವಿರ ವಲಸಿಗರು ಗುಜರಾತ್ ತೊರೆದಿದ್ದರು.

    ಗಲಭೆ ಹಾಗೂ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ 70 ಜನರರನ್ನು ಬಂಧಿಸಿದ್ದು, ಈವರೆಗೆ ಒಟ್ಟು 600 ಜನರನ್ನು ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 10 ವರ್ಷದ ಬಾಲಕಿಯನ್ನು ಪುಸಲಾಯಿಸಿ ದೇವಸ್ಥಾನದ ಹಿಂದೆ ಅತ್ಯಾಚಾರಗೈದ!

    10 ವರ್ಷದ ಬಾಲಕಿಯನ್ನು ಪುಸಲಾಯಿಸಿ ದೇವಸ್ಥಾನದ ಹಿಂದೆ ಅತ್ಯಾಚಾರಗೈದ!

    ತುಮಕೂರು: 10 ವರ್ಷದ ಬಾಲಕಿಯನ್ನು ಪುಸಲಾಯಿಸಿ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ ಘಟನೆ ತಮಕೂರಿನ ಶಿರಾ ಪಟ್ಟಣದಲ್ಲಿ ನಡೆದಿದೆ.

    ಪ್ರಭು(35) ಅತ್ಯಾಚಾರವೆಸಗಿದ ಆರೋಪಿಯಾಗಿದ್ದು, ಶಿರಾ ಪಟ್ಟಣದಲ್ಲಿ ಪಾನಿಪೂರಿ ಅಂಗಡಿ ಇಟ್ಟುಕೊಂಡಿದ್ದನು. ಸಂಬಂಧಿಕ ಬಾಲಕಿ ರಜೆ ನಿಮಿತ್ತ ಊರಿಗೆ ಬಂದಿದ್ದಳು. ಆಕೆಯನ್ನ ಪುಸಲಾಯಿಸಿ ದೇವಸ್ಥಾನವೊಂದರ ಹಿಂದೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

    ಅತ್ಯಾಚಾರವೆಸಗಿ ಯಾರಿಗೂ ತಿಳಿಸದಂತೆ ಹೆದರಿಸಿ ಬಾಲಕಿಯನ್ನು ಮನೆಗೆ ಕಳುಹಿಸಿದ್ದಾನೆ. ಬಾಲಕಿ ನೋವು ತಾಳಲಾರದೇ ಅತ್ಯಾಚಾರದ ವಿಷಯವನ್ನು ಮನೆಯವರಿಗೆ ತಿಳಿಸಿದ್ದಾಳೆ. ಆ ಬಳಿಕ ಶಿರಾ ಪಟ್ಟಣದ ಸಂತೇಪೇಟೆಯಲ್ಲಿದ್ದ ಪ್ರಭುವಿಗೆ ಸಂಬಂಧಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಬಾಲಕಿಯ ಪೋಷಕರ ಥಳಿತದಿಂದಾಗಿ ಅಸ್ವಸ್ಥನಾಗಿದ್ದ ಪ್ರಭುಗೆ ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಪ್ರಭು ವಿರುದ್ಧ ಶಿರಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಯಡಿ ಪ್ರಕರಣ ದಾಖಲಾಗಿದೆ.

  • ಮದ್ವೆಯಾಗೋದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸ್ದ- ನೊಂದ ಯುವತಿಯಿಂದ ಪೇದೆ ವಿರುದ್ಧ  ದೂರು

    ಮದ್ವೆಯಾಗೋದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸ್ದ- ನೊಂದ ಯುವತಿಯಿಂದ ಪೇದೆ ವಿರುದ್ಧ ದೂರು

    ದಾವಣಗೆರೆ: ಮದುವೆಯಾಗೋದಾಗಿ ನಂಬಿಸಿ, ವಂಚಿಸಿರುವ ಆರೋಪವೊಂದು ಪೊಲೀಸ್ ಪೇದೆಯೊಬ್ಬರ ವಿರುದ್ಧ ಕೇಳಿಬಂದಿದೆ.

    ದಾವಣಗೆರೆಯ ಹರಪನಹಳ್ಳಿ ತಾಲೂಕಿನ ಮಾಡಲಗೇರಿ ಮೂಲದ ಪೇದೆ ಮಂಜುನಾಥ್ ಕಣಿವೆ ಶಿವಮೊಗ್ಗದ ಕುಂಸಿಯಲ್ಲಿ ಪೇದೆಯಾಗಿದ್ದಾನೆ. ಕಳೆದ 6 ತಿಂಗಳ ಹಿಂದೆ ಹರಪ್ಪನಹಳ್ಳಿ ತಾಲೂಕು ಹುಲಿಕಟ್ಟೆ ಗ್ರಾಮದ ಮಂಜುಳಾ ಎಂಬ ಯುವತಿ ಪತ್ರಕರ್ತರೊಬ್ಬರಿಗೆ ಫೋನ್ ಮಾಡಲು ಹೋಗಿ ಅದು ಮಿಸ್ಸಾಗಿ ಪೇದೆ ಮಂಜುನಾಥ್‍ ಗೆ ಹೋಗಿದೆ.

    ಆದ್ರೆ ಕೂಡಲೇ ಯುವತಿ ಮಿಸ್ಸಾಗಿ ಬಂದಿದೆ ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಆದರೆ ಪದೇ ಪದೇ ಫೋನ್ ಮಾಡುತ್ತಿದ್ದ ಮಂಜುನಾಥ್ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದಾನೆ. ನಂತರ ಮದುವೆಯಾಗೋದಾಗಿ ನಂಬಿಸಿ, ಯುವತಿಯೊಂದಿಗೆ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದಾನೆ.

    ಆದರೆ ಈಗ ಮಂಜುನಾಥ್ ಜಾತಿಯ ನೆಪವೊಡ್ಡಿ ಯುವತಿಯಿಂದ ದೂರ ಸರಿಯುತ್ತಿದ್ದಾನೆ. ಹೀಗಾಗಿ ನೊಂದ ಯುವತಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಮಂಜುಳಾ ಅವರ ಬೆನ್ನಿಗೆ ಸಂಘಟನೆಗಳೂ ನಿಂತಿದ್ದು, ಯುವತಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡೋದಾಗಿ ಎಚ್ಚರಿಸಿವೆ.

  • ಹೆಡ್ ಮಾಸ್ಟರ್ ನಿಂದ್ಲೇ ರೇಪ್- ಗರ್ಭಿಣಿಯಾಗಿದ್ದಕ್ಕೆ ಗ್ರಾಮದಿಂದಲೇ ಬಾಲಕಿ ಕುಟುಂಬಕ್ಕೆ ಬಹಿಷ್ಕಾರ

    ಹೆಡ್ ಮಾಸ್ಟರ್ ನಿಂದ್ಲೇ ರೇಪ್- ಗರ್ಭಿಣಿಯಾಗಿದ್ದಕ್ಕೆ ಗ್ರಾಮದಿಂದಲೇ ಬಾಲಕಿ ಕುಟುಂಬಕ್ಕೆ ಬಹಿಷ್ಕಾರ

    ಭುವನೇಶ್ವರ್: ಮೂರು ವಾರಗಳ ಹಿಂದೆ ಶಾಲೆಯ ಮುಖ್ಯೋಪಾದ್ಯಾಯನೊಬ್ಬ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗರ್ಭವತಿ ಮಾಡಿ ಜೈಲಿಗೆ ಹೋದ ಘಟನೆ ಒಡಿಶಾದ ಕೊರತ್ ಪುತ್ ಜಿಲ್ಲೆಯಲ್ಲಿ ನಡೆದಿದೆ.

    ಮದುವೆಯ ಮುಂಚೆ ಬಾಲಕಿ ಗರ್ಭವತಿ ಆಗಿರುವ ವಿಷಯ ತಿಳಿದು ಗ್ರಾಮಸ್ಥರು ಬಾಲಕಿಯ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಅಕ್ಟೋಬರ್ ತಿಂಗಳ ಮೊದಲು ಕೊರತ್ ಪುತ್ ಜಿಲ್ಲೆಯ ನಂದಾಪುರ್ ಬ್ಲಾಕ್ ನ ಬಾಲ್ದಾ ಸರ್ಕಾರಿ ಶಾಲೆಯ ಮುಖ್ಯೋಪಾದ್ಯಾಯ 9ನೇ ತರಗತಿಯ ಬಾಲಕಿಯನ್ನು ಅತ್ಯಾಚಾರ ಮಾಡಿ ಅವಳನ್ನು ಗರ್ಭವತಿ ಮಾಡಿಸಿದ್ದಕ್ಕೆ ಆತನನ್ನು ಬಂಧಿಸಿದ್ದರು.

    ದೈಹಿಕವಾಗಿ ನನ್ನ ಜೊತೆ ನೀನು ಸಂಬಂಧವಿಟ್ಟುಕೊಳ್ಳಬೇಕು ಎಂದು ಬಾಲಕಿಗೆ ಕಿರುಕುಳ ನೀಡುತ್ತಿದ್ದನು. ಈ ವಿಷಯ ತಿಳಿದ ಬಾಲಕಿಯ ತಂದೆ ಮುಖ್ಯೋಪಾದ್ಯಾಯ ಬಿದುಬೂಷಣ್ ನಾಯಕ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು.

    5 ತಿಂಗಳು ಗರ್ಭಿಣಿ ಆಗಿದ್ದ ಬಾಲಕಿಯನ್ನು ಪೋಷಕರು ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದರು. ಬಾಲಕಿಯ ಆರೋಗ್ಯದ ಬಗ್ಗೆ ಪೋಷಕರು ಚಿಂತಿಸುತ್ತಿರುವಾಗಲೇ, ಇತ್ತ ಮದುವೆಗೆ ಮೊದಲೇ ಬಾಲಕಿ ಗರ್ಭವತಿ ಆಗಿರುವುದಕ್ಕೆ ಗ್ರಾಮಸ್ಥರು ಬಾಲಕಿಯ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ ಮತ್ತು ಸಮುದಾಯದ ದಂಡ ಕಟ್ಟಲು ಹೇಳಿದ್ದಾರೆ.

    ನಾನು ಒಬ್ಬ ಕೂಲಿ ಕಾರ್ಮಿಕ. ಸಮುದಾಯದ ದಂಡ ಸುಮಾರು ರೂ. 30,000 ಇರುತ್ತದೆ. ನಾನು ಅಷ್ಟು ದೊಡ್ಡ ಮೊತ್ತ ಹೇಗೆ ಕೊಡಲಿ. ನನ್ನ ಮಗಳ ಆರೋಗ್ಯ ತಪಾಸಣೆಗೆ ನನಗೆ ದುಡ್ಡು ಬೇಕಾಗಿದೆ ಎಂದು ಬಾಲಕಿಯ ತಂದೆ ಮಾಧ್ಯಮದ ಮುಂದೆ ತಮ್ಮ ಅಳಲುತೋಡಿಕೊಂಡಿದ್ದಾರೆ.

    ಈ ಸಂಬಂಧದ ಬಗ್ಗೆ ಮಾತನಾಡಿದ ಕೊರತ್ ಪುತ್ ಜಿಲ್ಲಾ ಆಡಳಿತದ ಅಧಿಕಾರಿಯಾದ ಜಗನ್ನಾಥ್ ಸೋರೆನ್, ಬಾಲಕಿಯ ಕುಟುಂಬದವರಿಗೆ ಎಲ್ಲಾ ರೀತಿಯ ಸಹಾಯ ನೀಡುವುದಾಗಿ ತಿಳಿಸಿದ್ದಾರೆ.