Tag: ಅತ್ಮಹತ್ಯಾ ದಾಳಿ

  • ಸಿಲಿಂಡರ್ ಸ್ಫೋಟ ಪ್ರಕರಣ ಆತ್ಮಹತ್ಯಾ ದಾಳಿಯೆಂದು ಪರಿಗಣಿಸಿ NIA ತನಿಖೆಗೆ ವಹಿಸಿ – ಅಣ್ಣಾಮಲೈ

    ಸಿಲಿಂಡರ್ ಸ್ಫೋಟ ಪ್ರಕರಣ ಆತ್ಮಹತ್ಯಾ ದಾಳಿಯೆಂದು ಪರಿಗಣಿಸಿ NIA ತನಿಖೆಗೆ ವಹಿಸಿ – ಅಣ್ಣಾಮಲೈ

    ಚೆನ್ನೈ: ಕೊಯಮತ್ತೂರಿನಲ್ಲಿ (Coimbatore) ಕಾರಿನಲ್ಲಿದ್ದ ಎಲ್‌ಪಿಜಿ ಸಿಲಿಂಡರ್ ಸ್ಫೋಟದಿಂದಾಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ. ಈ ಪ್ರಕರಣವನ್ನು ಪೊಲೀಸರು ಆತ್ಮಹತ್ಯಾ ದಾಳಿ (Suicide Attack) ಎಂದು ಒಪ್ಪಿಕೊಳ್ಳಬೇಕು. ಪ್ರಕರಣವನ್ನು ಎನ್‌ಐಎ (NIA) ತನಿಖೆಗೆ ವಹಿಸಬೇಕು ಎಂದು ತಮಿಳುನಾಡು ಭಾರತೀಯ ಜನತಾ ಪಾರ್ಟಿ (BJP) ಮುಖ್ಯಸ್ಥ ಅಣ್ಣಾಮಲೈ (Annamalai) ಒತ್ತಾಯಿಸಿದ್ದಾರೆ.

    ಸಿಲಿಂಡರ್ ಸ್ಫೋಟದಲ್ಲಿ (Cylinder Blast) ಸಾವನ್ನಪ್ಪಿದ ಜಮೇಶಾ ಮುಬಿನ್ ಅಕ್ಟೋಬರ್ 21 ರಂದು ಐಸಿಸ್‌ನಂತೆಯೇ ವಾಟ್ಸಪ್ ಸ್ಟೇಟಸ್ ಅನ್ನು ಪೋಸ್ಟ್ ಮಾಡಿದ್ದ. ಘಟನೆಯ ಬಳಿಕ ಆತನ ಮನೆಯಲ್ಲಿ ಸ್ಫೋಟಕ ವಸ್ತುಗಳೂ ಪತ್ತೆಯಾಗಿದ್ದವು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಆದರೆ ಏಕೆ ಬಂಧಿಸಿದ್ದಾರೆ ಎಂಬ ಮಾಹಿತಿಯನ್ನು ನೀಡಿಲ್ಲ. ಈ ಸ್ಫೋಟದ ಬಗ್ಗೆ ತಮಿಳುನಾಡು ಬಿಜೆಪಿ ಪರವಾಗಿ ನಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೇವೆ. ಈ ಘಟನೆಯನ್ನು ಪೊಲೀಸರು ಆತ್ಮಹತ್ಯಾ ದಾಳಿ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದಿದ್ದಾರೆ. ಇದನ್ನೂ ಓದಿ: ಮೌಢ್ಯಕ್ಕೆ ಸೆಡ್ಡು – ಗ್ರಹಣ ವೇಳೆ ಬಾಳೆಹಣ್ಣು, ಚುರುಮುರಿ ಸೇವಿಸಿದ ಜನ

    ವರದಿಗಳ ಪ್ರಕಾರ ಜಮೇಶಾ ಮುಬಿನ್‌ನ ಮನೆಯಿಂದ ಕೆಲವರು ಭಾರವಾದ ಚೀಲವನ್ನು ಹೊತ್ತುಕೊಂಡು ಹೊರಗಡೆ ಹೋಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ಐವರನ್ನು ಬಂಧಿಸಿದ್ದಾರೆ.

    ಭಾನುವಾರ ಕೊಯಮತ್ತೂರಿನಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸುವುದಕ್ಕೂ ಮೊದಲು ಜಮೇಶಾ ಮುಬಿನ್ ಕಾರನ್ನು ಚಲಾಯಿಸುತ್ತಿದ್ದ. ಆತ ಚೆಕ್ ಪಾಯಿಂಟ್ ಅನ್ನು ಕೂಡಾ ತಪ್ಪಿಸಲು ಪ್ರಯತ್ನಿಸಿದ್ದಾನೆ ಎಂಬುದು ತಿಳಿದುಬಂದಿದೆ. ಆತನ ಗುರಿ ಏನಾಗಿತ್ತು ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 80 ವರ್ಷ ಆದ್ಮೇಲೆ ಖರ್ಗೆ ಅವರನ್ನ ಡ್ರೈವರ್ ಸೀಟಲ್ಲಿ ಕೂರಿಸಿದ್ದಾರೆ: ಅಶೋಕ್ ಲೇವಡಿ

    Live Tv
    [brid partner=56869869 player=32851 video=960834 autoplay=true]