Tag: ಅತ್ತಿಬೆಲೆ

  • ಬೆಂಗಳೂರು ಜನತೆಗೆ ಮತ್ತೆ ದರ ಏರಿಕೆ ಬಿಸಿ – ಹೊಸೂರು ರಸ್ತೆಯ ಎರಡು ಟೋಲ್ ದರ ಏರಿಕೆ

    ಬೆಂಗಳೂರು ಜನತೆಗೆ ಮತ್ತೆ ದರ ಏರಿಕೆ ಬಿಸಿ – ಹೊಸೂರು ರಸ್ತೆಯ ಎರಡು ಟೋಲ್ ದರ ಏರಿಕೆ

    – ಸೋಮವಾರ ಮಧ್ಯರಾತ್ರಿಯಿಂದಲೇ ನೂತನ ದರ ಜಾರಿ

    ಬೆಂಗಳೂರು: ದರ ಏರಿಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಇಂದಿನಿಂದ ಬೆಂಗಳೂರಿನ ಮತ್ತೆರೆಡು ಪ್ರಮುಖ ಟೋಲ್ ದರ (Toll Price) ಏರಿಕೆಯಾಗಿದೆ.

    ಬೆಂಗಳೂರಿನಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಹೊಸೂರು ರಸ್ತೆಯ (Hosur Road) ಎರಡು ಟೋಲ್‌ಗಳಲ್ಲೂ ದರ ಏರಿಕೆಯಾಗಿದೆ. ಸೋಮವಾರ ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಯಾಗಿದೆ. ಇದನ್ನೂ ಓದಿ: ಅಬ್ದುಲ್ ರಹಿಮಾನ್ ಹತ್ಯೆ ಕೇಸ್ – ಇನ್ನೋರ್ವ ಆರೋಪಿ ಅರೆಸ್ಟ್

    ಇಂದಿನಿಂದ ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಟೋಲ್‌ವೇ ಶುಲ್ಕ ಹೆಚ್ಚಳವಾಗಿದೆ. ಪರಿಣಾಮ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಎಲೆಕ್ಟ್ರಾನಿಕ್ ಸಿಟಿಗೆ ಮತ್ತು ಕರ್ನಾಟಕ, ತಮಿಳುನಾಡು ಗಡಿಯ ಬಳಿಯ ಅತ್ತಿಬೆಲೆ ಕಡೆಯ ಮಾರ್ಗದಲ್ಲಿ ಚಲಿಸುವ ಪ್ರಯಾಣಿಕರು ಎಲಿವೇಟೆಡ್ ರಸ್ತೆಗೆ ಹೆಚ್ಚಿನ ಟೋಲ್ ಶುಲ್ಕವನ್ನು ಪಾವತಿಸಬೇಕಾಗಿದೆ. ಈ ಕುರಿತ ಪರಿಷ್ಕೃತ ದರಗಳನ್ನ ಮಾರ್ಚ್ 31ರ ಸಗಟು ಬೆಲೆ ಸೂಚ್ಯಂಕ ಆಧರಿಸಿ ದರ ಏರಿಕೆ ಮಾಡಲಾಗಿದೆ. ಇದನ್ನೂ ಓದಿ: ಶೀಘ್ರದಲ್ಲೇ ಡಿಕೆಶಿ ಸಿಎಂ ಆಗ್ತಾರೆ – ಇಕ್ಬಾಲ್ ಹುಸೇನ್ ಬಾಂಬ್

    ಎಲಿವೇಟೆಡ್ ಎಕ್ಸ್‌ಪ್ರೆಸ್ ವೇ ಹೊಸ ಟೋಲ್ ರಚನೆಯಡಿಯಲ್ಲಿ, ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಿಗೆ ಏಕಮುಖ ಪ್ರಯಾಣಕ್ಕೆ 65 ರೂ. ಇದೆ. ವಾಪಸ್ ಹಿಂತಿರುಗಿ ಬರಲು ಅದೇ ದಿನಕ್ಕೆ 95 ರೂ. ಮತ್ತು ಮಾಸಿಕ ಪಾಸ್‌ಗೆ 1,885 ರೂ. ಪಾವತಿಸಬೇಕಾಗುತ್ತದೆ. ಈ ಹಿಂದೆ ಈ ಎಲ್ಲಾದಕ್ಕೂ 5 ರೂ. ಕಡಿಮೆ ಇತ್ತು. ಈಗ ಬಿಇಟಿಪಿಎಲ್‌ನಿಂದ 5 ರೂ. ಏರಿಕೆ ಮಾಡಿದ್ದು, ದರ ಜಾರಿಯಾಗಿದೆ. ಆದರೆ ಬಸ್‌ಗಳು ಮತ್ತು ಟ್ರಕ್‌ಗಳಿಗೆ ಶುಲ್ಕ ಭಾರೀ ಹೆಚ್ಚಳವಾಗಿದೆ. ಒಂದೇ ಪ್ರಯಾಣಕ್ಕೆ 175 ರೂ. ಮತ್ತು ಮಾಸಿಕ ಪಾಸ್‌ಗೆ 5,275 ರೂ.ಗೆ ಶುಲ್ಕ ಏರಿಕೆಯಾಗಿದೆ. ಮಲ್ಟಿ-ಆಕ್ಸಲ್ ವಾಹನಗಳಿಗೆ ಪ್ರತಿ ಟ್ರಿಪ್‌ಗೆ 350 ರೂ. ಮತ್ತು ತಿಂಗಳಿಗೆ 10,550 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಇದನ್ನೂ ಓದಿ: ಪ್ರಾಣ ಹೋದ್ರೂ ಸರಿ ಮಸೀದಿ ನಿರ್ಮಾಣಕ್ಕೆ ಬಿಡಲ್ಲ: ಮುಸ್ಲಿಂ ಮುಖಂಡರ ವಿರುದ್ಧ ಸ್ಥಳೀಯರ ಆಕ್ರೋಶ

    ಇನ್ನೂ ಅತ್ತಿಬೆಲೆ ಟೋಲ್‌ನಲ್ಲೂ ದರ ಏರಿಕೆಯಾಗಿದೆ. ಹಳೆಯ ದರಕ್ಕಿಂತ 5 ರೂ. ಹೆಚ್ಚಳವಾಗಿದ್ದು, ಈ ಭಾಗದ ಸವಾರರಿಗೂ ಇಂದಿನಿಂದಲೇ ದರ ಏರಿಕೆ ಬಿಸಿ ತಟ್ಟಲಿದೆ. ಇದನ್ನೂ ಓದಿ: Bengaluru | ಸ್ಪೋರ್ಟ್ಸ್ ಪ್ರಾಕ್ಟಿಸ್ ನೋಡಲು ಹೋಗಿದ್ದ ವಿದ್ಯಾರ್ಥಿ ನಾಪತ್ತೆ

    ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ದರ ಎಷ್ಟಾಗಲಿದೆ?
    *ಕಾರು, ಜೀಪ್, ನಾಲ್ಕು ಚಕ್ರದ ಲಘು ವಾಹನಗಳಿಗೆ ಒಂದು ಪ್ರಯಾಣಕ್ಕೆ ರೂ.65 – ಹಳೆ ಬೆಲೆ 60
    *ಎರಡು ಕಡೆಗಿನ ಪ್ರಯಾಣಕ್ಕೆ ರೂಪಾಯಿ 90- ಹಳೆಯ ಬೆಲೆ 85
    *ದ್ವಿಚಕ್ರ ವಾಹನಗಳಿಗೆ ಒಂದು ಮಾರ್ಗದ ಪ್ರಯಾಣಕ್ಕೆ ?25 ಪಾವತಿಸಬೇಕಾಗಿದೆ (ಬದಲಾವಣೆ ಇಲ್ಲ)
    *ಲಾರಿ (ಟ್ರಕ್) ಹಾಗೂ ಬಸ್‌ಗಳಿಗೆ ಒಂದು ಬದಿ ಪ್ರಯಾಣಕ್ಕೆ 175 (ಹಳೆ ಬೆಲೆ 170) ರೂಪಾಯಿ
    *ಮಲ್ಟಿ-ಆಕ್ಸಲ್ ವಾಹನಗಳಿಗೆ ಒಂದು ಬದಿಗೆ 350 ರೂಪಾಯಿ ಕಟ್ಟಬೇಕಿದೆ (ಹಳೆ ಬೆಲೆ 345)

    ಅತ್ತಿಬೆಲೆ ಟೋಲ್ ದರವೂ ಹೆಚ್ಚಳ:
    *ಕಾರುಗಳು ಏಕ ಬದಿ ಪ್ರಯಾಣಕ್ಕೆ 40 ರೂ. (ಹಳೆ ಬೆಲೆ 35 ರೂ.)
    *ಲಘು ವಾಹನಗಳು, ಮಿನಿ ಬಸ್ 65 ರೂ. (ಹಳೆ ಬೆಲೆ 60 ರೂ.)
    *ಟ್ರಕ್, ಬಸ್ 125 ರೂ. (ಹಳೆ ಬೆಲೆ 120 ರೂ.)
    *ದೊಡ್ಡ ಮಲ್ಟಿ ಆಕ್ಸೆಲ್ ವಾಹನಗಳಿಗೆ ಒಂದು ಟ್ರಿಪ್‌ಗೆ 265 ರೂ. ಇದೆ (ಹಳೆ ಬೆಲೆ 260 ರೂ.)

  • ಬೈಕ್‌ಗೆ ಕ್ಯಾಂಟರ್ ಡಿಕ್ಕಿ – ಹಿಟ್ ಅಂಡ್ ರನ್‌ಗೆ ನಿವೃತ್ತ ಪೊಲೀಸ್ ಬಲಿ

    ಬೈಕ್‌ಗೆ ಕ್ಯಾಂಟರ್ ಡಿಕ್ಕಿ – ಹಿಟ್ ಅಂಡ್ ರನ್‌ಗೆ ನಿವೃತ್ತ ಪೊಲೀಸ್ ಬಲಿ

    ಆನೇಕಲ್: ಆಕ್ಟಿವಾ ಬೈಕ್‌ಗೆ ಕ್ಯಾಂಟರ್ (Cantor) ಡಿಕ್ಕಿ ಹೊಡೆದಿದ್ದು, ನಿವೃತ್ತ ಪೊಲೀಸ್ ಅಧಿಕಾರಿ ಸಾವನ್ನಪ್ಪಿರುವ ಭೀಕರ ಘಟನೆ ಬೆಂಗಳೂರು ಹೊರವಲಯದ ಅತ್ತಿಬೆಲೆಯ (Attibele) ಟಿವಿಎಸ್ ಕ್ರಾಸ್ ಬಳಿ ನಡೆದಿದೆ.

    ಮೃತ ವ್ಯಕ್ತಿಯನ್ನು ಬೆಂಗಳೂರಿನ (Bengaluru) ಆಡುಗೋಡಿ (Adugodi) ಮೂಲದ ನಿವೃತ್ತ ಎಎಸ್‌ಐ ಪ್ರಕಾಶ್ (61) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಾಗಿತ್ತು: ಛಲವಾದಿ ಕಿಡಿ

    ಟಿವಿಎಸ್ ಕ್ರಾಸ್ ಬಳಿ ಆಕ್ಟಿವಾ ಬೈಕ್‌ನಲ್ಲಿ ಪ್ರಕಾಶ್ ತೆರಳುತ್ತಿದ್ದರು. ಈ ವೇಳೆ ಧರ್ಮಪುರಿಯಿಂದ ಮಂಗಳೂರಿಗೆ ಹೊರಟಿದ್ದ ಕ್ಯಾಂಟರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾಂಟರ್‌ಗೆ ಸಿಲುಕಿ ಪ್ರಕಾಶ್ ದೇಹ ಛಿದ್ರ ಛಿದ್ರಗೊಂಡಿದೆ. ಅಪಘಾತ ಸಂಭವಿಸಿದ ಬಳಿಕ ಕ್ಯಾಂಟರ್ ಚಾಲಕ ದಿನೇಶ್ ಪಾರಾಗಲು ಯತ್ನಿಸಿದ್ದು, ಪೊಲೀಸರು ಚಾಲಕ ಹಾಗೂ ಕ್ಯಾಂಟರ್‌ನ್ನು ವಶಕ್ಕೆ ಪಡೆದಿದ್ದಾರೆ.

    ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಜಾಗತಿಕ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡೋಣ – ಟ್ರಂಪ್‌ಗೆ ಮೋದಿ ಅಭಿನಂದನೆ

  • ದಾರಿಯುದ್ದಕ್ಕೂ ಮಾತಾಡ್ತಲೇ ಇದ್ದ, ನಾನು ಬದುಕಲ್ಲ ಎಂದು ಕೂಗಿಕೊಳ್ತಿದ್ದ- ಮೃತ ವೆಂಕಟೇಶ್ ಸ್ನೇಹಿತ ಭಾವುಕ

    ದಾರಿಯುದ್ದಕ್ಕೂ ಮಾತಾಡ್ತಲೇ ಇದ್ದ, ನಾನು ಬದುಕಲ್ಲ ಎಂದು ಕೂಗಿಕೊಳ್ತಿದ್ದ- ಮೃತ ವೆಂಕಟೇಶ್ ಸ್ನೇಹಿತ ಭಾವುಕ

    ಬೆಂಗಳೂರು: ಪಟಾಕಿ ದುರಂತದಿಂದ ಗಾಯಗೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯುದ್ದಕ್ಕೂ ಮಾತಾಡ್ತಲೇ ಇದ್ದ, ನಾನು ಬದುಕಲ್ಲ ಎಂದು ಕೂಗಿಕೊಳ್ಳುತ್ತಿದ್ದ ಎಂದು ಮೃತ ವೆಂಕಟೇಶ್ (Venkatesh) ಗೆಳೆಯ ಮುರಳಿ ಭಾವುಕರಾಗಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪಟಾಕಿ ಅಂಗಡಿಗೆ ಬೆಂಕಿ ಹೊರಗಿನಿಂದ ಬಂದಿದ್ದಲ್ಲ. ಗೋಡಾನ್ ಒಳಗಿನಿಂದಲೇ ಬೆಂಕಿ ಹೊತ್ತಿಕೊಂಡಿತ್ತು. ಕ್ಷಣಾರ್ಧದಲ್ಲಿ ಸಂಪೂರ್ಣ ಗೋಡಾನ್ ಧಗಧಗ ಹೊತ್ತಿ ಉರಿಯಿತು ಎಂದು ನಡೆದ ಘಟನೆ ವಿವರಿಸಿದರು. ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತದಲ್ಲಿ ಗಾಯಗೊಂಡಿದ್ದ ಯುವಕ ದುರ್ಮರಣ- ಸಾವಿನ ಸಂಖ್ಯೆ 16ಕ್ಕೆ ಏರಿಕೆ

    ಪಟಾಕಿ ಖರೀದಿಗೆ (Attibele Fire Crackers Tragedy) ನಾನೂ, ವೆಂಕಟೇಶ್ ಹೋಗಿದ್ದೆವು. ಬೆಂಕಿ ಕಂಡ ಕೂಡಲೇ ಹೊರಗೆ ಓಡಿ ಬಂದ್ವಿ. ನಾನು ಎಡಗಡೆ ತಿರುವು ತೆಗೆದುಕೊಂಡೆ, ವೆಂಕಟೇಶ್ ಬಲಗಡೆ ಓಡಿದ. ನಾನು ಬೆಂಕಿಯಿಂದ ಬಚಾವ್ ಆದರೆ, ಆದರೆ ಸ್ನೇಹಿತ ಗಾಯಗೊಂಡ. ಆತನ ಬೆನ್ನಿನ ಭಾಗ ಹೆಚ್ಚಾಗಿ ಸುಟ್ಟಿತ್ತು. ಕೂಡಲೇ ಅವನನ್ನ ಆಸ್ಪತ್ರೆಗೆ ದಾಖಲು ಮಾಡಿದೆ. ದಾರಿಯುದ್ದಕ್ಕೂ ಮಾತನಾಡುತ್ತಲೇ ಇದ್ದ, ನಾನು ಬದುಕಲ್ಲ ಎಂದು ಕೂಗಿಕೊಳ್ಳುತ್ತಿದ್ದ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಭಯೋತ್ಪಾದಕರು ಮಕ್ಕಳ ಶಿರಚ್ಛೇದನ ಮಾಡೋ ಚಿತ್ರಗಳನ್ನು ಯಾವತ್ತೂ ನೋಡುತ್ತೇನೆ ಎಂದುಕೊಂಡಿರಲಿಲ್ಲ: ಆಘಾತ ವ್ಯಕ್ತಪಡಿಸಿದ ಬೈಡನ್

    ಗೆಳೆಯನಿಗೆ ಒಳ್ಳೆಯ ಚಿಕಿತ್ಸೆ ನೀಡುತ್ತಿದ್ದರೆ ಬದುಕುತ್ತಿದ್ದ. ಆದರೆ ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ಮುರಳಿ ಗಂಭೀರ ಆರೋಪ ಮಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅತ್ತಿಬೆಲೆ ಪಟಾಕಿ ದುರಂತ- ನಾಲ್ವರು ಅಧಿಕಾರಿಗಳ ಅಮಾನತು

    ಅತ್ತಿಬೆಲೆ ಪಟಾಕಿ ದುರಂತ- ನಾಲ್ವರು ಅಧಿಕಾರಿಗಳ ಅಮಾನತು

    ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತಕ್ಕೆ (Fire Crackers incident Attibele) ಸಬಂಧಿಸಿದಂತೆ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

    ಆನೇಕಲ್ ತಾಲೂಕಿನ ಹಿಂದಿನ ತಹಶೀಲ್ದಾರ್ ಶಶಿಧರ್ ಮಾಡ್ಯಾಳ್, ಉಪ ತಹಶೀಲ್ದಾರ್ ಶ್ರೀಧರ್, ರಾಜಸ್ವ ನಿರೀಕ್ಷಕ ಅತ್ತಿಬೆಲೆ, ಗ್ರಾಮ ಆಡಳಿತಾಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

    ಅತ್ತಿಬೆಲೆ ಅಗ್ನಿ ಅವಘಡಕ್ಕೆ ಅಧಿಕಾರಿಗಳೇ ಹೊಣೆ ಎಂದು ವರದಿ ಬಂದಿತ್ತು. ಪಟಾಕಿ ಅಂಗಡಿಗೆ 1ಸಾವಿರ ಕೆ.ಜಿ ಮಾತ್ರ ಸ್ಟಾಕ್ ಇಡಲು ಅವಕಾಶ ನೀಡಲಾಗಿತ್ತು. ಪರವಾನಿಗೆ ನೀಡುವಾಗ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ಪರವಾನಿಗೆ ನೀಡಿರುವ ಹಿನ್ನಲೆಯಲ್ಲಿ ಈ ಅವಘಡಕ್ಕೆ ಕಾರಣವೆಂದು 4 ಜನ ಅಧಿಕಾರಿಗಳನ್ನ ಸೇವೆಯಿಂದ ಅಮಾನತು ಮಾಡಿ ಆದೇಶಿಸಲಾಗಿದೆ. ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ – ಸ್ಥಳಕ್ಕೆ ಸಿಎಂ, ಡಿಸಿಎಂ ಭೇಟಿ

    ಮಂಗಳವಾರ ಅಮಾನತಿನ ಬಗ್ಗೆ ಡಿಸಿ, ಎಸ್‍ಪಿಗೆ ಸಿಎಂ ಸೂಚನೆ ನೀಡಿದ್ದರು. ಇದೀಗ ಸಿಎಂ ಸೂಚನೆ ಬೆನ್ನಲ್ಲೆ ಅಧಿಕಾರಿಗಳ ಅಮಾನತು ಮಾಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅತ್ತಿಬೆಲೆ ಪಟಾಕಿ ದುರಂತ, ಮೂವರು ಅಧಿಕಾರಿಗಳು ಸಸ್ಪೆಂಡ್: ಡಿಸಿ, ಎಸ್‌ಪಿಗೆ ನೋಟಿಸ್‌

    ಅತ್ತಿಬೆಲೆ ಪಟಾಕಿ ದುರಂತ, ಮೂವರು ಅಧಿಕಾರಿಗಳು ಸಸ್ಪೆಂಡ್: ಡಿಸಿ, ಎಸ್‌ಪಿಗೆ ನೋಟಿಸ್‌

    ಬೆಂಗಳೂರು: ಅತ್ತಿಬೆಲೆ ಪಟಾಕಿ ಅವಘಡ (Attibele Firecrackers Tragedy) ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ರಾಜ್ಯದಲ್ಲಿ ಮುಂದೆ ಅತ್ತಿಬೆಲೆ ಅವಘಡಗಳು ಮರುಕಳಿಸದಂತೆ ಕ್ರಮವಹಿಸುವ ಕುರಿತು ಚರ್ಚೆ ನಡೆಸಿ, ಹಲವು ತೀರ್ಮಾನಗಳನ್ನು ಪ್ರಕಟಿಸಿದರು.

    ಸಭೆ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಅತ್ತಿಬೆಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ತಹಶೀಲ್ದಾರ್, ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್, ಸ್ಥಳೀಯ ಮುಖ್ಯ ಅಗ್ನಿಶಾಮಕ ದಳ ಮುಖ್ಯಸ್ಥರನ್ನು ಅಮಾನತು ಮಾಡಲು ಸೂಚನೆ ನೀಡಲಾಗಿದ್ದು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೋಟಿಸ್‌ ಜಾರಿ ಮಾಡಲು ಸೂಚಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಮನೆಗೆ ಕಲ್ಲೆಸೆತ; ವ್ಯಕ್ತಿ ಪೊಲೀಸ್ ವಶಕ್ಕೆ

     

    ಅತ್ತಿಬೆಲೆ ಪಟಾಕಿ ಅಂಗಡಿ ಅವಘಡ ಪ್ರಕರಣದಲ್ಲಿ ರಾಮಸ್ವಾಮಿ ರೆಡ್ಡಿ ಎಂಬುವನು ಮಾರಾಟ ಮಾಡುವುದಕ್ಕೆ ಲೈಸೆನ್ಸ್ ತೆಗೆದುಕೊಂಡಿದ್ದ. ಆದರೆ ಉಗ್ರಾಣಕ್ಕೆ ಲೈಸೆನ್ಸ್ ಪಡೆದಿರಲಿಲ್ಲ. ತಮಿಳುನಾಡಿನಿಂದ ಪಟಾಕಿ ಸಾಮಾಗ್ರಿ ತೆಗೆದುಕೊಂಡು ಬಂದಿದ್ದಾನೆ. ಸೆಪ್ಟೆಂಬರ್‌ನಲ್ಲಿ 2026ರ ವರೆಗೆ ಒಂದು ಲೈಸೆನ್ಸ್ ಮಂಜೂರು ಮಾಡಲಾಗಿದೆ. ಆದರೆ ಇದು ನಕಲಿ ಲೈಸೆನ್ಸ್‌ (Fake Licence) ಆಗಿದ್ದು ಎಲ್ಲರ ವಿರುದ್ಧ ಕ್ರಮ ಆಗಲಿದೆ ಎಂದು ತಿಳಿಸಿದರು.

    ಲೈಸೆನ್ಸ್ ಪರಿಷ್ಕರಣೆ ಮಾಡಲು ಸೂಚನೆ ನೀಡಲಾಗಿದ್ದು, ಈ ಮೊದಲು 5 ವರ್ಷಕ್ಕೆ ಲೈಸೆನ್ಸ್ ಅವಧಿ ಇತ್ತು. ಈಗ ಪ್ರತಿ ವರ್ಷವೂ ಲೈಸೆನ್ಸ್ ಪಡೆಯವುದನ್ನು ಕಡ್ಡಾಯ ಮಾಡಿದ್ದೇವೆ. ಪಟಾಕಿ ಗೊಡೌನ್‌ಗಳ ಮುಂಭಾಗದಲ್ಲಿ ವಿಶಾಲವಾದ ಖಾಲಿ ಜಾಗ ಇರುವುದು ಕಡ್ಡಾಯ ಮಾಡಲಾಗಿದೆ ಎಂದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅತ್ತಿಬೆಲೆ ಪಟಾಕಿ ದುರಂತ – ಸ್ಥಳಕ್ಕೆ ಸಿಎಂ, ಡಿಸಿಎಂ ಭೇಟಿ

    ಅತ್ತಿಬೆಲೆ ಪಟಾಕಿ ದುರಂತ – ಸ್ಥಳಕ್ಕೆ ಸಿಎಂ, ಡಿಸಿಎಂ ಭೇಟಿ

    ಆನೇಕಲ್: ಅತ್ತಿಬೆಲೆಯಲ್ಲಿ (Attibele) ನಡೆದ ಭೀಕರ ಪಟಾಕಿ ದುರಂತದಲ್ಲಿ (Fireworks Tragedy) ಇಲ್ಲಿಯವರೆಗೆ 14 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ದುರ್ಘಟನೆ ನಡೆದ ಸ್ಥಳಕ್ಕೆ ಸಿಎಂ ಡಿಸಿಎಂ ಆಗಮಿಸಿ ಸ್ಥಳ ಪರಿಶೀಲಿಸಿದ್ದಾರೆ.

    ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸ್ಥಳಕ್ಕೆ ಆಗಮಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಬಳಸುವ ಶೂ ಧರಿಸಿಕೊಂಡು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಿಎಂ, ಡಿಸಿಎಂಗೆ ಮಾಜಿ ಸಚಿವ ಎಸ್‌ಟಿ ಸೋಮಶೇಖರ್ ಸಾಥ್ ನೀಡಿದ್ದಾರೆ.

    ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮು ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಪಟಾಕಿ ಸಂಗ್ರಹಕ್ಕೆ ಲೈಸೆನ್ಸ್ ಇರಲಿಲ್ಲ. ಕೇವಲ ಬೇರೆಡೆಗೆ ರವಾನಿಸುವ ಪ್ರೊಸೆಸಿಂಗ್ ಯೂನಿಟ್‌ಗೆ ಮಾತ್ರ ಪರವಾನಗಿ ನೀಡಲಾಗಿತ್ತು. ಆದರೆ ಮಾಲೀಕ ಭಾರೀ ಪ್ರಮಾಣದ ಪಟಾಕಿ ಸಂಗ್ರಹಿಸುವ ದಾಸ್ತಾನು ಮಳಿಗೆಯನ್ನಾಗಿ ಬಳಕೆ ಮಾಡುತ್ತಿದ್ದ. ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ- ಗೋದಾಮು ಮಾಲೀಕ ಅರೆಸ್ಟ್

    ಪಟಾಕಿ ದುರಂತದಲ್ಲಿ ತಮಿಳುನಡು ಮೂಲದ ಗಿರಿ ಬಿನ್ ವೇಡಿಯಪ್ಪನ್, ಸಚೀನ್ ಬಿನ್ ಲೇಟ್ ವೇಡಿಯಪ್ಪನ್, ವಿಜಯರಾಘವನ್, ವಿಳಂಬರತಿ ಬಿನ್ ಸೆಂದಿಲ್, ಆಕಾಶ ಬಿನ್ ರಾಜಾ, ವೆಡಿಯಪ್ಪನ್, ಆದಿಕೇಶವ ಬಿನ್ ಪೆರಿಯಾಸ್ವಾಮಿ, ಪ್ರಕಾಶ್ ಬಿನ್ ರಾಮು, ವಸಂತರಾಜು ಬಿನ್ ಗೋವಿಂದ ರಾಜು, ಅಬ್ಬಾಸ್ ಬಿಸ್ ಶಂಕರ್, ಪ್ರಭಾಕರನ್ ಬಿನ್ ಗೋಪಿನಾಥ್, ನಿತೀಶ್ ಬಿನ್ ಮೇಘನಾಥ್, ಸಂತೋಷ್ ಬಿನ್ ಕುಮಾರ್ ಮೃತಪಟ್ಟಿದ್ದು, ಇನ್ನೊಬ್ಬನ ಹೆಸರು ಗುರುತು ಪತ್ತೆಯಾಗಿಲ್ಲ. ಇದನ್ನೂ ಓದಿ: ಮನ್‌ಮುಲ್ ಮೆಗಾ ಡೈರಿ ಘಟಕದಲ್ಲಿ ಅಗ್ನಿ ಅವಘಡ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅತ್ತಿಬೆಲೆ ಪಟಾಕಿ ದುರಂತ- ಗೋದಾಮು ಮಾಲೀಕ ಅರೆಸ್ಟ್

    ಅತ್ತಿಬೆಲೆ ಪಟಾಕಿ ದುರಂತ- ಗೋದಾಮು ಮಾಲೀಕ ಅರೆಸ್ಟ್

    ಆನೇಕಲ್ (ಬೆಂಗಳೂರು): ಅತ್ತಿಬೆಲೆಯಲ್ಲಿ ನಡೆದ ಪಟಾಕಿ ದುರಂತ (Fire Cracker Tragedy In Attibele) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗೋದಾಮು ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

    ಪಟಾಕಿ ಸಂಗ್ರಹಕ್ಕೆ ಲೈಸೆನ್ಸ್ ಇರಲಿಲ್ಲ. ಕೇವಲ ಬೇರೆಡೆಗೆ ರವಾನಿಸುವ ಪ್ರೊಸೆಸಿಂಗ್ ಯೂನಿಟ್‍ಗೆ ಮಾತ್ರ ಪರವಾನಿಗೆ ನೀಡಲಾಗಿತ್ತು. ಆದರೆ ಮಾಲೀಕ ಭಾರೀ ಪ್ರಮಾಣದ ಪಟಾಕಿ ಸಂಗ್ರಹಿಸುವ ದಾಸ್ತಾನು ಮಳಿಗೆಯನ್ನಾಗಿ ಬಳಕೆ ಮಾಡ್ತಿದ್ದ. ಪ್ರೊಸೆಸಿಂಗ್ ಯೂನಿಟ್‍ಗೆ 2028ವರೆಗೆ ಪರವಾನಿಗೆ ಇದ್ದು, ಗೋದಾಮಿಗೆ ಅನುಮತಿ ಇರಲಿಲ್ಲ.

    ಅಕ್ರಮವಾಗಿ ದೊಡ್ಡ ಪ್ರಮಾಣದಲ್ಲಿ ಪಟಾಕಿಯನ್ನು ಸಂಗ್ರಹಿಸಿದ್ದ ಕುರಿತು ಗೋದಾಮಿನ ಮಾಲೀಕರ ವಿರುದ್ಧ ಪ್ರತ್ಯೇಕವಾಗಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಮಾಲೀಕ ರಾಮಸ್ವಾಮಿ ರೆಡ್ಡಿಯನ್ನ ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ. 2018 ರಲ್ಲಿ ಪಟಾಕಿ ಅಂಗಡಿಕಷ್ಟೇ ಅನುಮತಿ ಪಡೆದಿದ್ದಾರೆ. ಗೋದಾಮಿಗೆ ಅನುಮತಿ ನೀಡಿಲ್ಲ ಎಂದು ರಾಮಸ್ವಾಮಿ ವಿಚಾರಣೆ ಬಳಿಕ ಬೆಳಕಿಗೆ ಬಂದಿದೆ.

    ಒಟ್ಟಿನಲ್ಲಿ ಪಟಾಕಿ ಅಂಗಡಿ ಅನುಮತಿ ಪಡೆದು ಗೋಡೌನ್ ಮಾಡಿಕೊಂಡಿದ್ದ ಆರೋಪಿ ರಾಮಸ್ವಾಮಿ ವಿರುದ್ಧ ಸ್ಫೋಟಕ ಕಾಯ್ದೆ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಹಾವೇರಿ, ಅತ್ತಿಬೆಲೆ ದುರಂತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಲಿ: ಬೊಮ್ಮಾಯಿ

    ಪಟಾಕಿ ದುರಂತದಲ್ಲಿ ತಮಿಳುನಡು ಮೂಲದ ಗಿರಿ ಬಿನ್ ವೇಡಿಯಪ್ಪನ್, ಸಚೀನ್ ಬಿನ್ ಲೇಟ್ ವೇಡಿಯಪ್ಪನ್, ವಿಜಯರಾಘವನ್, ವಿಳಂಬರತಿ ಬಿನ್ ಸೆಂದಿಲ್, ಆಕಾಶ ಬಿನ್ ರಾಜಾ, ವೆಡಿಯಪ್ಪನ್, ಆದಿಕೇಶವ ಬಿನ್ ಪೆರಿಯಾಸ್ವಾಮಿ, ಪ್ರಕಾಶ್ ಬಿನ್ ರಾಮು, ವಸಂತರಾಜು ಬಿನ್ ಗೋವಿಂದ ರಾಜು, ಅಬ್ಬಾಸ್ ಬಿಸ್ ಶಂಕರ್, ಪ್ರಭಾಕರನ್ ಬಿನ್ ಗೋಪಿನಾಥ್, ನಿತೀಶ್ ಬಿನ್ ಮೇಘನಾಥ್, ಸಂತೋಷ್ ಬಿನ್ ಕುಮಾರ್ ಮೃತಪಟ್ಟಿದ್ದು, ಇನ್ನೊಬ್ಬನ ಹೆಸರು ಗುರುತು ಪತ್ತೆಯಾಗಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಾವೇರಿ, ಅತ್ತಿಬೆಲೆ ದುರಂತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಲಿ: ಬೊಮ್ಮಾಯಿ

    ಹಾವೇರಿ, ಅತ್ತಿಬೆಲೆ ದುರಂತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಲಿ: ಬೊಮ್ಮಾಯಿ

    ಬೆಂಗಳೂರು: ಒಂದೂವರೆ ತಿಂಗಳಲ್ಲಿ ಎರಡನೇ ಪಟಾಕಿ ದುರಂತ ನಡೆದಿದೆ. ಹೀಗಾಗಿ ಹಾವೇರಿ (Haveri) ಮತ್ತು ಅತ್ತಿಬೆಲೆ ದುರಂತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಒತ್ತಾಯಿಸಿದರು.

    ಅತ್ತಿಬೆಲೆ ಪಟಾಕಿ ದುರಂತ (Fire Accident Attibele) ಪ್ರಕರಣ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ತಿಬೆಲೆ ಪಟಾಕಿ ದುರಂತ ಬಹಳ ದೊಡ್ಡ ಘೋರ. 14 ಜನ ಮೃತಪಟ್ಟಿದ್ದಾರೆ, ಇದು ಆಘಾತಕಾರಿ ವಿಚಾರವಾಗಿದೆ. ಸರ್ಕಾರ ಘೋಷಣೆ ಮಾಡಿರುವ ಪರಿಹಾರವನ್ನು ಶೀಘ್ರವೇ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.

    ಗಾಯಾಳುಗಳಿಗೆ ಸರ್ಕಾರ ಉತ್ತಮ ಚಿಕಿತ್ಸೆ ಕೊಡಿಸಲಿ. ಹಾವೇರಿಯಲ್ಲೂ ಪಟಾಕಿ ದುರಂತ ಆಗಿತ್ತು. ಕಾನೂನಿನಲ್ಲಿ ಪಟಾಕಿಗಳ ಇಷ್ಟೊಂದು ಪ್ರಮಾಣದ ಶೇಖರಣೆಗೆ ಅವಕಾಶ ಇಲ್ಲ. ಕಾನೂನು ಉಲ್ಲಂಘಿಸಿ ಪಟಾಕಿ ಶೇಖರಣೆ ಮಾಡಿಕೊಳ್ಳಲು ಗೋಡೌನ್ ಗೆ ಅಧಿಕಾರಿಗಳ ಅನುಮತಿ ಕೊಟ್ಟಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಲಿ ಎಂದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಒಂದೇ ಕುಟುಂಬದ ಮೂವರು ಸಜೀವ ದಹನ

    ಈ ಮೊದಲು ಹಾವೇರಿಯಲ್ಲಿ ದುರಂತ ನಡೆದು ನಾಲ್ಕು ಜನ ಮೃತಪಟ್ಟಿದ್ರು. ಈಗ ಅತ್ತಿಬೆಲೆಯಲ್ಲಿ 14 ಜನ ಮೃತಪಟ್ಟಿದ್ದಾರೆ. ಅಂದ್ರೆ ನಿಯಮಗಳ ಪಾಲನೆ ಆಗ್ತಿಲ್ಲ ಅಂತ ಇದರಿಂದ ಗೊತ್ತಾಗುತ್ತೆ. ಹಾವೇರಿ, ಅತ್ತಿಬೆಲೆ ದುರಂತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಲಿ. ಮೊದಲು ತಪ್ಪು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡರೆ ಇಂತಹ ಘಟನೆಗಳು ನಿಲ್ಲುತ್ತವೆ ಎಂದು ಹೇಳಿದರು.

    ಅತ್ತಿಬೆಲೆ ಪಟಾಕಿ ದುರಂತಕ್ಕೆ ಸ್ಥಳೀಯ ಜಿಲ್ಲಾಡಳಿತದ ನಿರ್ಲಕ್ಷ್ಯ ಕಾರಣ. ಹಣಕಾಸು ವ್ಯವಹಾರ ಮಾಡಿಕೊಂಡು ಅಕ್ರಮವಾಗಿ ಲೈಸೆನ್ಸ್ ಕೊಡೋದು, ಅಕ್ರಮ ಶೇಖರಣೆಗೆ ಅವಕಾಶ ಮಾಡಿಕೊಟ್ಟಿದ್ರಿಂದ ಇಷ್ಟು ದೊಡ್ಡ ದುರಂತ ಆಗಿದೆ. ಪಟಾಕಿ ನಿರ್ವಹಣೆಯ ನಿಯಮಗಳ ಪಾಲನೆ ಆಗ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ. ಇಷ್ಟು ದೊಡ್ಡ ದುರಂತ ಆಗಿದ್ದು, ಸರ್ಕಾರ ಕಣ್ತೆರಯದಿದ್ದರೆ ಇನ್ನಷ್ಟು ದುರಂತಗಳು ನಡೆಯಲಿವೆ ಎಂದು ಎಚ್ಚರಿಕೆ ನೀಡಿದರು.

    ಇದೇ ವೇಳೆ ಬಿಜೆಪಿ ನಾಯಕರ ಪ್ರವಾಸ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಧ್ಯಕ್ಷರು, ನಾವು ಎಲ್ಲ ಕೂತು ಚರ್ಚೆ ಮಾಡ್ತೇವೆ. ಎಲ್ಲರೂ ಚರ್ಚಿಸಿ ಪ್ರವಾಸದ ರೂಪುರೇಷೆ ಬಗ್ಗೆ ತೀರ್ಮಾನ ಮಾಡುತ್ತೇವೆ. ಎಲ್ಲರೂ ಒಟ್ಟಾಗಿ ಪ್ರವಾಸ ಮಾಡುತ್ತೇವೆ ಎಂದರು.

    ರಾಜರಾಜೇಶ್ವರಿ ವಲಯದ ಒಂಭತ್ತು ವಾರ್ಡ್ ಗಳಿಗೆ ಅನುದಾನ ಕೊಡದ ಸರ್ಕಾರದ ನಡೆಗೆ ಮಾಜಿ ಸಿಎಂ ಖಂಡನೆ ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರ ಇದ್ದಾಗ ನಾವು ಭೇದಭಾವ ಮಾಡಿರಲಿಲ್ಲ. ಸೀನಿಯಾರಿಟಿ ಮೇಲೆ ಅನುದಾನ ಕೊಟ್ಟಿದ್ವಿ. ಈಗ ಸಿನಿಯಾರಿಟಿ ಇಲ್ಲ. ಈಗಾಗಲೇ ಪಾಲಿಕೆ ವಾರ್ಡ್ ಗಳಿಗೆ ಅನುದಾನ ಕೊಡದೇ ನಿಲ್ಲಿಸಿದ್ದಾರೆ. ಈಗ ಅದರ ಮೇಲೆ ತಾರತಮ್ಯ ಮಾಡುತ್ತಿದ್ದಾರೆ. ತಾರತಮ್ಯ ಮಾಡದೇ ಸರ್ಕಾರ ಕೂಡಲೇ ಅನುದಾನ ಕೊಡಲಿ. ಬೇರೆ ವಾರ್ಡ್ ಗಳಿಗೆ ಅನುದಾನ ಕೊಟ್ಟು ರಾಜರಾಜೇಶ್ವರಿ ವಲಯಕ್ಕೆ ಕೊಟ್ಟಿಲ್ಲ ಅಂದ್ರೆ ಅದು ರಾಜಕೀಯವೇ ಎಂದು ಕಿಡಿಕಾರಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಟಾಕಿ ದುರಂತ ಸ್ಥಳಕ್ಕೆ ಡಿಕೆಶಿ ಭೇಟಿ- ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ

    ಪಟಾಕಿ ದುರಂತ ಸ್ಥಳಕ್ಕೆ ಡಿಕೆಶಿ ಭೇಟಿ- ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ

    ಬೆಂಗಳೂರು: ಅತ್ತಿಬೆಲೆಯಲ್ಲಿ (Attibele) ನಡೆದ ಪಟಾಕಿ ದುರಂತಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಘೋಷಿಸಿದ್ದಾರೆ.

    ಘಟನಾ ಸ್ಥಳಕ್ಕೆ ಶನಿವಾರ ರಾತ್ರಿಯೇ ಭೇಟಿ ನೀಡಿದ ಡಿಸಿಎಂ, ಸ್ಥಳ ಪರಿಶೀಲನೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಗೋಡೌನ್‍ಗೆ ಅನುಮತಿ ಇರಲಿಲ್ಲ, ಅಂಗಡಿಗಷ್ಟೇ ಅನುಮತಿ ಇತ್ತು. ಕಾರ್ಮಿಕರಿಲ್ಲದೇ ಗ್ರಾಹಕರು ಕೂಡ ಸಿಲುಕಿರುವ ಶಂಕೆ ಇದೆ ಎಂದು ಹೇಳಿದರು.

    ದುರಂತ ಸಂಬಂಧ ಅಗ್ನಿಶಾಮಕದಳ ಡಿಜಿಪಿ ಕಮಲ್ ಪಂಥ್ (Kamal Panth) ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಒಟ್ಟು 6 ಮಂದಿ ಗಾಯಗೊಂಡಿದ್ದಾರೆ. ಮೂವರು ಸೆಂಟ್ ಜಾನ್ಸ್, ಮೂವರು ಆಕ್ಸ್ ಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾತನಾಡುವ ಪರಿಸ್ಥಿತಿಯಲ್ಲಿರುವವರ ಬಳಿ ಮಾಹಿತಿ ಪಡೆದಿದ್ದೇನೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಪಟಾಕಿ ದುರಂತಕ್ಕೆ ಕಾರಣ ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಪಟಾಕಿ ಅಂಗಡಿಗೆ ಬೆಂಕಿ – 13 ಕಾರ್ಮಿಕರು ಸಜೀವ ದಹನ

    ಸದ್ಯ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೇರಿಕೆ ಆಗಿದೆ. ಪಟಾಕಿ ಶಾಪ್‍ನಲ್ಲಿದ್ದವರು ಸುಟ್ಟು ಕರಕಲಾಗಿದ್ದಾರೆ. ಮೃತರ ಸಂಖ್ಯೆ ಮತ್ತಷ್ಟು ಏರಿಕೆ ಸಾಧ್ಯತೆ ಎನ್ನಲಾಗಿದೆ. ಗೋಡೌನ್‍ನ ಒಂದೇ ಸ್ಥಳದಲ್ಲಿ ಎಂಟು ಬಾಡಿಗಳು ಪತ್ತೆಯಾಗಿವೆ. ಪ್ರತ್ಯೇಕ ಎರಡು ಡೋರ್‍ಗಳಿರೋ ಸ್ಥಳದಲ್ಲಿ ನಾಲ್ಕು ನಾಲ್ಕು ಮಂದಿಯ ಮೃತದೇಹಗಳು ಸಿಕ್ಕಿವೆ. ಎಸ್‍ಡಿಆರ್‍ಎಫ್ ತಂಡದಿಂದ ಕಾರ್ಯಾಚರಣೆ ಮುಂದುವರಿದಿದೆ. ಕಾರ್ಯಾಚರಣೆ ಸ್ಥಳದಲ್ಲಿ ಪಟಾಕಿಗಳು ಸ್ಫೋಟಗೊಳ್ಳುತ್ತಿವೆ.

    ಅತ್ತಿಬೆಲೆಯ ಆಕ್ಸ್ ಪಾರ್ಡ್ ಆಸ್ಪತ್ರೆಯಲ್ಲಿಯೇ 14 ಮೃತದೇಹಗಳು ಇದ್ದು, ಹೀಗಾಗಿ ಆಸ್ಪತ್ರೆ ಮುಂದೆ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಆಸ್ಪತ್ರೆಯ ಮುಂದೆ ಕುಟುಂಬಸ್ಥರು ಗೋಳಾಡಿ ಕಣ್ಣೀರು ಹಾಕುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರಲ್ಲಿ ಹಿಟ್ & ರನ್ – ಸ್ಥಳದಲ್ಲೇ ಇಬ್ಬರು ಸಾವು

    ಬೆಂಗಳೂರಲ್ಲಿ ಹಿಟ್ & ರನ್ – ಸ್ಥಳದಲ್ಲೇ ಇಬ್ಬರು ಸಾವು

    ಬೆಂಗಳೂರು: ಲಾರಿಯೊಂದು ಬೈಕ್‍ಗೆ ಡಿಕ್ಕಿಯಾದ ಪರಿಣಾಮ ಸವಾರರಿಬ್ಬರು ಸಾವಿಗೀಡಾದ ಘಟನೆ ಅತ್ತಿಬೆಲೆಯ (Attibele) ಸಮೀಪದ ಗೆಸ್ಟ್ ಲೈನ್ ಗೇಟ್ ಬಳಿ ನಡೆದಿದೆ.

    ಓರ್ವ ಮೃತನನ್ನು ಮಂಗಮ್ಮನಪಾಳ್ಯ ವಾಸಿ ಮಂಜಪ್ಪ (32) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಬೈಕ್ ಸವಾರನ ಗುರುತು ಪತ್ತೆಯಾಗಿಲ್ಲ. ಲಾರಿ ಹಿಂಬದಿಯಿಂದ ಬೈಕ್‍ಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅಪಘಾತದ ಬಳಿಕ ಲಾರಿಯನ್ನು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ. ಇದನ್ನೂ ಓದಿ: ದೇಶವೇ ಎದುರು ನೋಡುತ್ತಿರೋ ಚಂದ್ರಯಾನ-3ಗೆ ಬೆಳಗಾವಿಯ ಯುವ ವಿಜ್ಞಾನಿಯ ಕೊಡುಗೆ

    ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು (Police) ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಚಂದ್ರಯಾನ -3 ಉಡಾವಣೆಗೆ ಕ್ಷಣಗಣನೆ: ಶುಭಕೋರಿದ ಖಾದರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]