Tag: ಅತಿಯಾ ಶೆಟ್ಟಿ

  • ಆರಂಭದಲ್ಲೇ ಗಾಯಕ್ಕೆ ತುತ್ತಾದ ಕೆ.ಎಲ್‌ ರಾಹುಲ್‌ – ಅತಿಯಾಗೆ ಭಾರೀ ನಿರಾಸೆ

    ಆರಂಭದಲ್ಲೇ ಗಾಯಕ್ಕೆ ತುತ್ತಾದ ಕೆ.ಎಲ್‌ ರಾಹುಲ್‌ – ಅತಿಯಾಗೆ ಭಾರೀ ನಿರಾಸೆ

    ಲಕ್ನೋ: 14ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2023) ಸೋಮವಾರ ನಡೆದ 43ನೇ ಪಂದ್ಯದಲ್ಲಿ ನಾಯಕ ಕೆ.ಎಲ್‌ ರಾಹುಲ್‌ (KL Rahul) ಆರಂಭದಲ್ಲೇ ಗಾಯಕ್ಕೆ ತುತ್ತಾಗಿ ಪಂದ್ಯದಲ್ಲಿ ಹೊರಗುಳಿದರು.

    ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಕೇವಲ 9 ವಿಕೆಟ್‌ ನಷ್ಟಕ್ಕೆ 126 ರನ್‌ಗಳನ್ನಷ್ಟೇ ಗಳಿಸಿತು. ಗಾಯದಿಂದ ಚೇರಿಸಿಕೊಂಡ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಮತ್ತೆ ನಾಯಕನಾಗಿ ಪಂದ್ಯವನ್ನ ಮುನ್ನಡೆಸಿದರು. ಆದ್ರೆ ಇದೇ ಪಂದ್ಯದ ವೇಳೆ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡದ ನಾಯಕ ಕೆಎಲ್ ರಾಹುಲ್ ಗಾಯಕ್ಕೊಳಗಾಗಿ ಮೈದಾನದಿಂದ ಹೊರನಡೆದರು. ಇದನ್ನೂ ಓದಿ: ಒಂದು ಹುಡ್ಗನ್ನ ಪಟಾಯಿಸಿಕೊಡು ವಿರಾಟ್‌ – ಪೋಸ್ಟರ್‌ ಹಿಡಿದು ರಿಕ್ವೆಸ್ಟ್‌ ಮಾಡಿದ RCB ಫ್ಯಾನ್ಸ್‌

    ಹೌದು, ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡರು. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಬ್ಯಾಟಿಂಗ್ ಮಾಡಿತು. ಈ ವೇಳೆ 2ನೇ ಓವರ್‌ನ ಅಂತಿಮ ಎಸೆತದಲ್ಲಿ ಬೌಂಡರಿ ರಕ್ಷಣೆಗೆ ತೆರಳಿದ್ದ ಕೆ.ಎಲ್ ರಾಹುಲ್ ಗಾಯಕ್ಕೆ ತುತ್ತಾದರು. ಮಾರ್ಕಸ್‌ ಸ್ಟೋಯ್ನಿಸ್‌ ಎಸೆದ ಈ ಎಸೆತವನ್ನ ಡುಪ್ಲೆಸಿಸ್ ಬೌಂಡರಿಗಟ್ಟಿದರು. ಈ ಬೌಂಡರಿ ತಡೆಯಲು ಯತ್ನಿಸಿದ ರಾಹುಲ್ ಬೌಂಡರಿ ಲೈನ್ ಬಳಿಯೇ ಕುಸಿದು ಬಿದ್ದರು. ತಕ್ಷಣವೇ ಆಗಮಿಸಿದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಪರಿಶೀಲಿಸಿ ಕೆಎಲ್ ರಾಹುಲ್ ಅವರನ್ನು ಮೈದಾನದಿಂದ ಪೆವಿಲಿಯನ್‌ಗೆ ಕರೆದೊಯ್ದರು. ಇದನ್ನೂ ಓದಿ: ವಿರಾಟ್‌ ಕೊಹ್ಲಿ ನನ್ನ ಫೇವ್ರೆಟ್‌ – ʻಈ ಸಲ ಕಪ್‌ ನಮ್ದೆʼ ಅಂತಿದ್ದಾರೆ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ

    ರಾಹುಲ್‌ ಹೊರಹೋಗುತ್ತಿದ್ದಂತೆ ಕೃನಾಲ್‌ ಪಾಂಡ್ಯ ಪಂದ್ಯದ ನಾಯಕತ್ವ ವಹಿಸಿಕೊಂಡು ಮುನ್ನಡೆಸಿದರು. ಇದರಿಂದ ಪತಿಯ ಅಮೋಘ ಪ್ರದರ್ಶನವನ್ನ ಕಣ್ತುಂಬಿಕೊಳ್ಳಲು ಬಂದಿದ್ದ ಅತಿಯಾ ಶೆಟ್ಟಿಗೆ ಭಾರೀ ನಿರಾಸೆಯಾಯಿತು.

  • ಶೀಘ್ರದಲ್ಲೇ ಕ್ರಿಕೆಟಿಗ ರಾಹುಲ್ ಜತೆ ಸುನಿಲ್ ಶೆಟ್ಟಿ ಮಗಳ ಮ್ಯಾರೇಜ್

    ಶೀಘ್ರದಲ್ಲೇ ಕ್ರಿಕೆಟಿಗ ರಾಹುಲ್ ಜತೆ ಸುನಿಲ್ ಶೆಟ್ಟಿ ಮಗಳ ಮ್ಯಾರೇಜ್

    ಗುಜರಾತ್ ಜೈಟ್ಸ್ ತಂಡದ ನಾಯಕ, ಟೀಮ್ ಇಂಡಿಯಾ ಆಟಗಾರ ಕೆ.ಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ಲವ್ವಿಡ‍ವ್ವಿಗೆ ತೆರೆ ಬೀಳುವ ಸಮಯ ಬಂದಿದೆ. ಮೊನ್ನೆಯಷ್ಟೇ ರಾಹುಲ್ ಜತೆ ಇರುವ ರೋಮ್ಯಾಂಟಿಕ್ ಫೋಟೋ ಶೇರ್ ಮಾಡಿದ್ದ ಅತಿಯಾ ಶೆಟ್ಟಿ, ತಮ್ಮಿಬ್ಬರ ಪ್ರೀತಿಯ ಕುರಿತಾಗಿ ಹಂಚಿಕೊಂಡಿದ್ದರು. ಈ ಮೂಲಕ ರಾಹುಲ್ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆಯನ್ನು ನೀಡಿದ್ದರು. ಇದನ್ನೂ ಓದಿ : ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋ

    ಅಲ್ಲದೇ, ಈ ಹಿಂದೆಯೂ ರಾಹುಲ್ ಜತೆ ಅತಿಯಾ ಓಡಾಡುವ ದೃಶ್ಯಗಳು ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದ್ದವು. ತಡರಾತ್ರಿ ಈ ಜೋಡಿಗಳು ಕಾಣಿಸಿಕೊಂಡು ಕ್ಯಾಮೆರಾಗಳಿಗೆ ಆಹಾರವಾಗಿದ್ದರು. ಇದೀಗ ಈ ಜೋಡಿ ಮದುವೆ ಆಗುವ ಸುದ್ದಿ ಬಿಟೌನ್ ನಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ

    ಕ್ರಿಕೆಟಿಗೆ ರಾಹುಲ್ ಜತೆ ಮಗಳ ಮದುವೆಗೆ ಸುನಿಲ್ ಶೆಟ್ಟಿ ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ. ಅಂದುಕೊಂಡಂತೆ ಆದರೆ, ಇದೇ ವರ್ಷದ ಕೊನೆಯಲ್ಲಿ ರಾಹುಲ್ ಮತ್ತು ಅತಿಯಾ ಹಸೆಮಣೆ ಏರಲಿದ್ದಾರೆ. ಇದನ್ನೂ ಓದಿ: ಮಗಳ ಮದುವೆಯ ಫೋಟೋ ಶೇರ್ ಮಾಡಿ ಭಾವುಕರಾದ ಆಲಿಯಾ ತಾಯಿ

    ಮೊದ ಮೊದಲ ರಾಹುಲ್ ಮತ್ತು ಅತಿಯಾ ಸ್ನೇಹಿತರು ಎಂದು ಬಿಂಬಿಸಲಾಯಿತು. ರಾಹುಲ್ ಕ್ರಿಕೆಟ್ ಪಂದ್ಯ ಆಡುವಾಗೆಲ್ಲ ಅತಿಯಾ ಕ್ರೀಡಾಂಗಣದಲ್ಲಿ ಹಾಜರಿರುತ್ತಿದ್ದರು. ಅವರನ್ನು ಹುರುದುಂಬಿಸುತ್ತಿದ್ದರು. ಸ್ನೇಹಿತನನ್ನು ಹುರಿದುಂಬಿಸಲು ಅತಿಯಾ ಬರುತ್ತಿದ್ದಾರೆ ಎಂದೇ ಹೇಳಲಾಯಿತು. ಈ ಜೋಡಿ ತಡರಾತ್ರಿಯ ಪಾರ್ಟಿಗಳಲ್ಲಿ ಸಿಗುತ್ತಿದ್ದಂತೆಯೇ ಇಬ್ಬರ ಮಧ್ಯೆ ಏನೋ ನಡೆಯುತ್ತಿದೆ ಎಂದು ಬಿಟೌನ್ ಮಾತಾಡಿಕೊಂಡಿತು. ಆನಂತರ  ತಾವಿಬ್ಬರೂ ಪ್ರೀತಿಸುವ ವಿಷಯವನ್ನು ಬೇರೆ ಬೇರೆ ರೀತಿಯಲ್ಲಿ ಇಬ್ಬರೂ ಹೇಳಿಕೊಂಡರು. ಇದೀಗ ಈ ಪ್ರೇಮಿಗಳು ಹೊಸ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.

  • ಹ್ಯಾಪಿ ಬರ್ತಡೇ ಮ್ಯಾಡ್ ಚೈಲ್ಡ್ – ಗಾಸಿಪ್ ಗರ್ಲ್‍ಫ್ರೆಂಡ್‍ಗೆ ರಾಹುಲ್ ವಿಶ್

    ಹ್ಯಾಪಿ ಬರ್ತಡೇ ಮ್ಯಾಡ್ ಚೈಲ್ಡ್ – ಗಾಸಿಪ್ ಗರ್ಲ್‍ಫ್ರೆಂಡ್‍ಗೆ ರಾಹುಲ್ ವಿಶ್

    ನವದೆಹಲಿ: ತನ್ನ ಗಾಸಿಪ್ ಗೆಳತಿ ನಟಿ ಅತಿಯಾ ಶೆಟ್ಟಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಅವರು ಹುಟ್ಟುಹಬ್ಬದ ಶುಭಕೋರಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಬಾಲಿವುಡ್‍ನ ಹಿರಿಯ ನಟ ಸುನಿಲ್ ಶೆಟ್ಟಿಯವರ ಪುತ್ರಿ ಮತ್ತು ಭಾರತದ ಉಪನಾಯಕ ಕೆಎಲ್ ರಾಹುಲ್ ಗಾಸಿಪ್ ಗರ್ಲ್‍ಫ್ರೆಂಡ್ ಅತಿಯಾ ಶೆಟ್ಟಿ ಇಂದು ತಮ್ಮ 28ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಗೆಳತಿಯ ಹುಟ್ಟುಹಬ್ಬಕ್ಕೆ ಕೆಎಲ್ ರಾಹುಲ್ ಅವರು ಪ್ರೀತಿಯಿಂದ ವಿಶ್ ಮಾಡಿದ್ದು, ಇದನ್ನು ಅತಿಯಾ ಶೆಟ್ಟಿ ಇನ್‍ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.

     

    View this post on Instagram

     

    Happy birthday mad child ????

    A post shared by KL Rahul???? (@rahulkl) on

    ಅತಿಯಾ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ರಾಹುಲ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ತನ್ನ ಹೆಗಲ ಮೇಲೆ ಅತಿಯಾ ತಲೆ ಇಟ್ಟಿರುವ ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ ಹುಟ್ಟುಹಬ್ಬದ ಶುಭಾಶಯಗಳು ಮ್ಯಾಡ್ ಚೈಲ್ಡ್ ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ. ಕಳೆದ ಜೂನ್‍ನಲ್ಲಿ ನಡೆದ ರಾಹುಲ್ ಅವರ ಹುಟ್ಟುಹಬ್ಬಕ್ಕೂ ಕೂಡ ಅತಿಯಾ ಶೆಟ್ಟಿಯವರು ನನ್ನವನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದರು.

    ಈ ಹಿಂದೆ ಅಥಿಯಾ ಶೆಟ್ಟಿ ಬಿಳಿ ಶರ್ಟ್ ಧರಿಸಿ ಸ್ಟೈಲಿಶ್ ಆಗಿ ಪೋಸ್ ನೀಡಿದ ಫೋಟೋವನ್ನು ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದರು. ಫೋಟೋಗೆ ಗೆಳೆಯ ಕೆ.ಎಲ್ ರಾಹುಲ್ `ಒಳ್ಳೆಯ ಶರ್ಟ್’ ಎಂದು ಕಾಮೆಂಟ್ ಮಾಡಿದ್ದರು. ಅಭಿಮಾನಿಗಳಿಗೆ ಇಷ್ಟೇ ಸಾಕಿತ್ತು ಅಥಿಯಾ, ರಾಹುಲ್‍ರ ಕಾಲೆಳೆಯಲು ಆರಂಭಿಸಿದ್ದರು. ಹೀಗಾಗಿ ರಾಹುಲ್ ಕಾಮೆಂಟ್ ಕಾರಣಕ್ಕೆ ಅಥಿಯಾ ಪೋಸ್ಟ್ ಸಾಕಷ್ಟು ವೈರಲ್ ಆಗಿತ್ತು.

    ಕೆಲವರು ಈ ಶರ್ಟ್ ಬಹುಶಃ ನಿಮ್ಮದಾಗಿರಬೇಕು ಎಂದು ರಾಹುಲ್ ಕಾಲೆಳೆದರೆ, ಶರ್ಟ್ ನಿಮಗೆ ಇಷ್ಟವಾಗಿದೆಯಾ ಎಂದು ಕೆಲವರು ಪ್ರಶ್ನಿಸಿದ್ದರು. ಇನ್ನು ಕೆಲವರಂತೂ ನಿಮ್ಮಿಬ್ಬರ ಜೋಡಿ ಫೋಟೊವನ್ನು ಹಂಚಿಕೊಳ್ಳಿ ಎಂದು ಬೇಡಿಕೆಯಿಟ್ಟಿದ್ದರು. ಅಷ್ಟಕ್ಕೂ ರಾಹುಲ್ ಕಾಮೆಂಟ್ ಜೊತೆಗೆ ಈ ಫೋಟೋ ವೈರಲ್ ಆಗೋದಕ್ಕೆ ಮತ್ತೊಂದು ಕಾರಣವೂ ಇದೆ. ಇಲ್ಲಿ ಅಥಿಯಾ ತನ್ನದಲ್ಲದ ಸೈಜ್‍ನ ಶರ್ಟ್ ಧರಿಸಿದ್ದರು. ಇದೇ ಕಾರಣಕ್ಕೆ ಕೆಎಲ್ ರಾಹುಲ್ ಕಾಮೆಂಟ್ ಜೊತೆಗೆ ಅಭಿಮಾನಿಗಳು ತಮಾಷೆ ಮಾಡಿ ಟ್ರೋಲ್ ಮಾಡಿದ್ದರು.

    ಸದ್ಯ ಕೆಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್-2020ಯಿಂದ ಹೊರಗೆ ಬಿದ್ದಿದೆ. ನಾಯಕನಾಗಿ ರಾಹುಲ್ ವಿಫಲರಾದರೂ ಬ್ಯಾಟ್ಸ್ ಮ್ಯಾನ್ ಆಗಿ ಮಿಂಚಿದ್ದಾರೆ. ಐಪಿಎಲ್-2020ಯಲ್ಲಿ ತಾವು ಆಡಿದ 14 ಪಂದ್ಯಗಳಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕದ ಸಹಾಯದಿಂದ 670 ರನ್ ಗಳಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. ಇದರ ಜೊತೆಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ತಂಡದ ಉಪನಾಯಕನಾಗಿಯೂ ಆಯ್ಕೆ ಆಗಿದ್ದಾರೆ.