Tag: ಅತಿಥಿ

  • Exclusive- ಬೆಂಗಳೂರು ಚಿತ್ರೋತ್ಸವಕ್ಕೆ ಬಾಲಿವುಡ್ ನಟಿ ರೇಖಾ ಅತಿಥಿ

    Exclusive- ಬೆಂಗಳೂರು ಚಿತ್ರೋತ್ಸವಕ್ಕೆ ಬಾಲಿವುಡ್ ನಟಿ ರೇಖಾ ಅತಿಥಿ

    ರ್ನಾಟಕ ಚಲನಚಿತ್ರ ಅಕಾಡೆಮಿ (Academy) ನಡೆಸುವ ಬೆಂಗಳೂರು (Bangalore) ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ (Film Festival) ಈ ಬಾರಿ ಬಾಲಿವುಡ್ ನಟಿ ರೇಖಾ (Rekha) ಅತಿಥಿಯಾಗಿ (Guest) ಭಾಗಿಯಾಗಲಿದ್ದಾರೆ. ಈ ಕುರಿತು ಸ್ವತಃ ಕಂದಾಯ ಸಚಿವ ಆರ್.ಅಶೋಕ್ ಅವರೇ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.  ಮಾರ್ಚ್ ನಲ್ಲಿ ಚಿತ್ರೋತ್ಸವ ನಡೆಯಲಿದ್ದು, ನಾಳೆ ಫಿಲ್ಮ್ ಫೆಸ್ಟಿವಲ್ ಲೋಗೋವನ್ನು ಲಾಂಚ್ ಮಾಡಲಾಗುತ್ತಿದೆ ಎನ್ನುವ ಮಾಹಿತಿಯನ್ನೂ ಅವರು ಹಂಚಿಕೊಂಡಿದ್ದಾರೆ.

    ಅಂದುಕೊಂಡಂತೆ ಆಗಿದ್ದರೆ ಫೆಬ್ರವರಿಯಲ್ಲೇ ಚಿತ್ರೋತ್ಸವ ನಡೆಯಬೇಕಿತ್ತು. ಆದರೆ, ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಸರಕಾರದಿಂದ ಈವರೆಗೂ ಯಾವುದೇ ಅನುದಾನ ಬಾರದೇ ಇರುವ ಕಾರಣದಿಂದಾಗಿ ಈ ತಿಂಗಳು ನಡೆಸಲಿಕ್ಕೆ ಆಗಲಿಲ್ಲ. ಚಿತ್ರೋತ್ಸವ ನಡೆಯುವುದಕ್ಕೆ ಬರೋಬ್ಬರಿ ಮೂರು ತಿಂಗಳ ಕಾಲ ಸಿದ್ಧತೆ ಬೇಕು ಎನ್ನುವುದು ಅಕಾಡೆಮಿಯಲ್ಲಿ ಕೆಲಸ ಮಾಡಿರುವವರ ಹೇಳಿಕೆ. ಆದರೆ, ಕಂದಾಯ ಸಚಿವರು ಮಾರ್ಚ್ ನಲ್ಲಿ ಚಿತ್ರೋತ್ಸವ ನಡೆಸುವುದಾಗಿ ಹೇಳಿದ್ದಾರೆ. ಈ ಕುರಿತು ನಾಳೆ ಅವರು ವಿವರಣೆ ನೀಡುತ್ತಾರೆ ಎನ್ನುವುದು ನಿರೀಕ್ಷೆ. ಇದನ್ನೂ ಓದಿ: ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್ ವರ್ಮಾ ನಿಧನ

    ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿಸಂಹಿತೆ ಜಾರಿ ಆಗುವ ಮುನ್ನವೇ ಚಿತ್ರೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮಾಡಬೇಕು ಎನ್ನುವುದು ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಲಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.  ನಾಲ್ಕು ವರ್ಷಗಳಿಂದ ಚಲನಚಿತ್ರ ಪ್ರಶಸ್ತಿಗಳನ್ನೂ ನೀಡಿಲ್ಲ. ಕನಿಷ್ಠ ಎರಡು ವರ್ಷಗಳ ಪ್ರಶಸ್ತಿ ಪ್ರದಾನ ಸಮಾರಂಭ ಮಾಡುವ ತರಾತುರಿ ಕೂಡ ನಡೆದಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಮಾರ್ಚ್ ನಲ್ಲಿ ಅಂದುಕೊಂಡಿರುವ ಕಾರ್ಯಕ್ರಮಗಳು ನಡೆಯುತ್ತಿವೆಯಾ ಎಂದು ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆ ಸಮಾರಂಭದಲ್ಲಿ ಊಟ ಮಾಡಿದ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥ

    ಮದುವೆ ಸಮಾರಂಭದಲ್ಲಿ ಊಟ ಮಾಡಿದ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥ

    ಮುಂಬೈ: ಮದುವೆ ಸಮಾರಂಭದಲ್ಲಿ ಊಟ ಮಾಡಿದ ಸುಮಾರು 60ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ನಡೆದಿದೆ.

    ಪುಸಾದ್ ತಾಲೂಕಿನ ಶೇಂಬಳಪಿಂಪ್ರಿ ಗ್ರಾಮದಲ್ಲಿ ಸೋಮವಾರ ವಿವಾಹ ಕಾರ್ಯಕ್ರಮ ನಡೆಯಿತು. ಈ ವೇಳೆ ಊಟ ಮಾಡಿದ ಬಳಿಕ ಅನೇಕ ಮಂದಿಗೆ ವಾಂತಿ ಮತ್ತು ಸುಸ್ತು ಆರಂಭವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಪ್ರಹ್ಲಾದ್ ಚವ್ಹಾಣ್ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ವ್ಯಕ್ತಿ ಅರೆಸ್ಟ್ ಕೇಸ್- ಮಸೀದಿ ಬಳಿ ನೆಲೆಸಿದ್ದವನಿಗೆ ಇತ್ತಾ ಉಗ್ರರ ಜೊತೆ ನಂಟು!

    ಇದೀಗ ಸಮೀಪದ ಹಿಂಗೋಲಿ ಜಿಲ್ಲೆಯ ಕಲ್ಮನೂರಿನಲ್ಲಿರುವ ಆಸ್ಪತ್ರೆಯಲ್ಲಿ ಸುಮಾರು 40 ರಿಂದ 45 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪುಸಾದ್‍ನಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ 20-25 ಜನರಿಗೆ ವೈದ್ಯಕೀಯ ನೆರವು ನೀಡಲಾಗಿದೆ. ಕೆಲವರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ರೋಗಿಗಳ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾನ್ಪುರ ಹಿಂಸಾಚಾರ – 40 ದಂಗೆಕೋರರ ಫೋಟೋ ರಿಲೀಸ್, ಇಬ್ಬರು ಅರೆಸ್ಟ್

     

  • ಮದುವೆಯಲ್ಲಿ ಕೇಕ್ ಪೀಸ್ ತಿಂದಿದ್ದಕ್ಕೆ ಅತಿಥಿಗೆ 366 ರೂ. ಪಾವತಿಸಿ ಅಂದ ನವದಂಪತಿ

    ಮದುವೆಯಲ್ಲಿ ಕೇಕ್ ಪೀಸ್ ತಿಂದಿದ್ದಕ್ಕೆ ಅತಿಥಿಗೆ 366 ರೂ. ಪಾವತಿಸಿ ಅಂದ ನವದಂಪತಿ

    ಲಂಡನ್: ಮದುವೆ ಸಮಾರಂಭವೊಂದರಲ್ಲಿ ಅತಿಥಿಯೊಬ್ಬರು ಕೇವಲ ಒಂದು ಪೀಸ್ ಕೇಕ್ ತಿಂದಿದ್ದಕ್ಕೆ ನವದಂಪತಿ ಹಣ ಪಾವತಿಸುವಂತೆ ಕೇಳಿದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಇದನ್ನೂ ಓದಿ: ಪತಿ ಇಲ್ಲದ ಮೇಲೆ ಬದುಕಿ ಪ್ರಯೋಜನವಿಲ್ಲ – ಡೆತ್‍ನೋಟ್ ಬರೆದು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

    ನವದಂಪತಿಗಳು ತಮ್ಮ ಮದುವೆಯ ಸಿಸಿಟಿವಿ ದೃಶ್ಯವನ್ನು ವೀಕ್ಷಿಸಿದ್ದು, ಈ ವೇಳೆ ಅತಿಥಿಯೊಬ್ಬರು ಮದುವೆಯಲ್ಲಿ ಎರಡು ಕೇಕ್ ಪೀಸ್ ತಿಂದಿರುವುದನ್ನು ನೋಡಿದ್ದಾರೆ. ನಂತರ ಈ ವೀಡಿಯೋವನ್ನು ಅತಿಥಿಯ ವಾಟ್ಸಾಪ್‍ಗೆ ಕಳುಹಿಸಿದ್ದಾರೆ. ವೀಡಿಯೋದಲ್ಲಿ ಅತಿಥಿ ಎರಡನೇ ಬಾರಿ ಕೇಕ್ ಕತ್ತರಿಸಿ ತಿನ್ನುತ್ತಿರುವುದನ್ನು ನೋಡಿ. ಈ ವೀಡಿಯೋ ಕಳುಹಿಸಿದರ ಅರ್ಥವೇನು ಎಂದು ಕೇಳಿದ್ದಾರೆ.

    wedding

    ಆಗ, ನಾವು ಸಿಸಿಟಿವಿ ದೃಶ್ಯದಲ್ಲಿ ನೀವು ಎರಡು ಬಾರಿ ಕೇಕ್ ಪೀಸ್‍ನ್ನು ತಿನ್ನುತ್ತಿರುವುದನ್ನು ನೋಡಿದ್ದೇವೆ. ಮದುವೆಗೆ ಬಂದ ಪ್ರತಿ ಅತಿಥಿಗಳಿಗೆ ಒಂದು ಪೀಸ್ ಕೇಕ್‍ಗೆ ಹಣ ಪಾವತಿಸುವಂತೆ ಘೋಷಿಸಿದ್ದೇವೆ. ಆದರೆ ನೀವು ಒಂದು ಕೇಕ್ ಪೀಸ್‍ಗೆ ಮಾತ್ರ ಹಣ ಪಾವತಿಸಿದ್ದೀರಾ, ನೀವು ತಿಂದ ಮತ್ತೊಂದಕ್ಕೆ ಹಣ ಪಾವತಿಸಲಿಲ್ಲ. ಹೀಗಾಗಿ ದಯವಿಟ್ಟು 366 ರೂ.ವನ್ನು ಆದಷ್ಟು ಬೇಗ ಕಳುಹಿಸಿಕೊಡುತ್ತೀರಾ? ಎಂದು ಮೇಸೆಜ್ ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಯೂಟ್ಯೂಬ್ ನೋಡಿ ಬೈಕ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅಂದರ್

    ಸದ್ಯ ಈ ಮೇಸೆಜ್ ನೋಡಿ ಶಾಕ್ ಆಗಿರುವ ನೆಟ್ಟಿಗರು, ನವದಂಪತಿ ಹನಿಮೂನ್‍ಗೆ ಹೋಗುವ ಬದಲು ಸಿಸಿಟಿವಿ ದೃಶ್ಯ ನೋಡಿ ಅತಿಥಿಗಳಿಗೆ ಹಣಪಾವತಿಸುವಂತೆ ಕೇಳುತ್ತಿದ್ದಾರೆ ಎಂದು ಹಾಸ್ಯ ಮಾಡಿದ್ದಾರೆ. ಇನ್ನೂ ಈ ವಿಚಾರ ಅತಿಥಿಗಳಿಗೆ ಮುಜುಗರವನ್ನುಂಟು ಮಾಡಿದೆ.

  • ಉಡುಪಿಯ ಗಣೇಶೋತ್ಸವಕ್ಕೆ ಆಗಮಿಸಿದ `ಮೋದಿ’

    ಉಡುಪಿಯ ಗಣೇಶೋತ್ಸವಕ್ಕೆ ಆಗಮಿಸಿದ `ಮೋದಿ’

    ಉಡುಪಿ: ದೇಶಾದ್ಯಂತ ಗಣೇಶೋತ್ಸವ ಸಂಭ್ರಮ ಮುಂದುವರಿದಿದೆ. ದೇವಾಲಯಗಳ ನಗರಿ ಉಡುಪಿಯಲ್ಲಿ ವಿಘ್ನ ವಿನಾಯಕನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಗರದ ದೆಂದೂರ್ ಕಟ್ಟೆಯಲ್ಲೂ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತಿದೆ.

    ಈ ವೇಳೆ ವಿಶೇಷ ಅತಿಥಿ ಬಂದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದರು. ಆ ವಿಐಪಿ ಬರುವ ಮೊದಲು ಪೊಲೀಸ್ ಎಸ್ಕಾರ್ಟ್ ವಾಹನ ಬಂತು, ಜಾಮರ್, ಮೆಟಲ್ ಡಿಟೆಕ್ಟರ್ ಜೊತೆ ಸೈರನ್ ಸೌಂಡ್ ಮಾಡಿಕೊಂಡು ಬಂದಿದೆ. ಒಂದರ ಹಿಂದೆ ಇನ್ನೊಂದು ಸಾಲು ಸಾಲು ಕಾರುಗಳು. ನೋಡ ನೋಡುತ್ತಿದ್ದಂತೆ ಕಾರಿಂದ ಇಳಿದು ಪ್ರಧಾನಿ ನರೇಂದ್ರ ಮೋದಿ ಅವರಂತೆ ಹೋಲುವ ವ್ಯಕ್ತಿಯೊಬ್ಬರು ವೇದಿಕೆಗೆ ಹೋಗಿದ್ದಾರೆ.

    ಝೆಡ್ ಪ್ಲಸ್ ಭದ್ರತೆ ನಿಯೋಜನೆಯಲ್ಲಿ, ಫಾರ್ಚೂನರ್ ಕಾರಿನಲ್ಲಿ ಬಂದ ವ್ಯಕ್ತಿಯ ಹೆಸರು ಸದಾನಂದ ನಾಯಕ್ ಆಗಿದ್ದು, ಇವರು ಉಡುಪಿಯ ಮೋದಿ. ಗಂಭೀರವಾಗಿ ಕಾರಿಂದ ಇಳಿದ ಸದಾನಂದ ನಾಯಕ್ ಥೇಟ್ ಮೋದಿಯಂತೆ ಪೋಸ್ ಕೊಟ್ಟು, ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ಜನರತ್ತ ಕೈ ಬೀಸುತ್ತಾ ವಾಪಾಸ್ ಆಗಿದ್ದಾರೆ.

    ಗಣೇಶೋತ್ಸವದ ಮೆರುಗು ಹೆಚ್ಚಿಸಲು ಸ್ಥಳೀಯ ಯುವಕರು ಡ್ಯೂಪ್ ಮೋದಿಯನ್ನು ಕರೆತಂದರು. ನಮ್ಮೂರಿಗೆ ಬಂದಿದ್ದು ಮೋದಿಯೇ ಎಂದು ಹೇಳಿಕೊಂಡು ಕೆಲವರು ಓಡಾಡುತ್ತಿದ್ದಾರೆ. ಕಳೆದ ಬಾರಿ ಟ್ಯಾಬ್ಲೋದಲ್ಲಿ ಮಿಂಚಿದ್ದ ಸದಾನಂದ ನಾಯಕ್ ರಸ್ತೆಯಲ್ಲಿ ಮೋದಿಯಂತೆ ಓಡಾಡಿದ್ದಾರೆ.

  • ವೀಲ್‌ಚೇರ್‌ನಲ್ಲಿ ಪ್ರದಕ್ಷಿಣೆ ಹಾಕಿದ ವರ – ವಧು ತಳ್ಳುತ್ತಿರೋದನ್ನು ನೋಡಿ ಭಾವುಕರಾದ ಅತಿಥಿಗಳು

    ವೀಲ್‌ಚೇರ್‌ನಲ್ಲಿ ಪ್ರದಕ್ಷಿಣೆ ಹಾಕಿದ ವರ – ವಧು ತಳ್ಳುತ್ತಿರೋದನ್ನು ನೋಡಿ ಭಾವುಕರಾದ ಅತಿಥಿಗಳು

    ಭೋಪಾಲ್: ಅಪಘಾತದಲ್ಲಿ ಕಾಲಿಗೆ ಗಂಭೀರವಾಗಿ ಗಾಯಗೊಂಡಿದ್ದ ವರ ಜೊತೆ ವೀಲ್‌ಚೇರ್‌ನಲ್ಲಿಯೇ ಏಳು ಪ್ರದಕ್ಷಿಣೆ ಹಾಕಿದ್ದು, ಈ ದೃಶ್ಯವನ್ನು ನೋಡಿದ ಅತಿಥಿಗಳು ಭಾವುಕರಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ದಿಲೀಪ್ ಸಕ್ಸೆನಾ ಹಾಗೂ ದೀಪ್ತಿ ಕಶ್ಯಪ್ ಮದುವೆ ಮೊದಲೇ ನಿಗದಿಯಾಗಿತ್ತು. ಜೂನ್ 6ರಂದು ದಿಲೀಪ್ ಆಮಂತ್ರಣ ಪತ್ರಿಕೆ ಹಂಚಲು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಪರಿಣಾಮ ದಿಲೀಪ್ ಎಡಗಾಲಿಗೆ ಹಾಗೂ ಬಲಗೈ ಮುರಿದಿತ್ತು.

    ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಿಲೀಪ್‍ನನ್ನು ನಾಲ್ಕು ದಿನ ಐಸಿಯುನಲ್ಲಿ ದಾಖಲಿಸಲಾಗಿತ್ತು. ಬಳಿಕ ದಿಲೀಪ್ ಐಸಿಯುನಿಂದ ಹೊರಬಂದ ಮೇಲೆ ಅವರ ಪೋಷಕರು ಮದುವೆಯನ್ನು ಮುಂದೂಡಲು ನಿರ್ಧರಿಸಿದ್ದರು. ಆದರೆ ವಧು ಇದಕ್ಕೆ ನಿರಾಕರಿಸಿ ನಿಗದಿಯಾದ ದಿನದಂದು ಮದುವೆ ಆಗಿದ್ದಾರೆ.

    ಮದುವೆಯ ಸಂದರ್ಭದಲ್ಲಿ ವರ ವೀಲ್‌ಚೇರ್‌ನಲ್ಲಿಯೇ ಕುಳಿತು ಎಲ್ಲಾ ಶಾಸ್ತ್ರಗಳನ್ನು ನೆರವೇರಿಸಿದ್ದಾರೆ. ಬಳಿಕ ಅಗ್ನಿಕುಂಡಕ್ಕೆ 7 ಸುತ್ತು ಪ್ರದಕ್ಷಿಣೆ ಹಾಕುವ ವೇಳೆ ಸ್ವತಃ ವಧು ವರನ ವೀಲ್ ಚೇರ್ ತಳ್ಳಿ ಅರ್ಧ ಸುತ್ತು ಸುತ್ತಿದರೆ, ವರನ ಸ್ನೇಹಿತರು ವೀಲ್‍ಚೇರ್ ತಳ್ಳಿ ಉಳಿದ ಸುತ್ತುಗಳನ್ನು ಸುತ್ತಿಸಿದ್ದಾರೆ.

    ಮದುವೆ ನಂತರ ವಧುವಿಗೆ ಬೀಳ್ಕೊಡಿಗೆ ಕೊಡುವ ಸಂದರ್ಭದಲ್ಲೂ ಸ್ವತಃ ವಧು- ವರನ ವೀಲ್‍ಚೇರ್ ತಳ್ಳಿಕೊಂಡು ಕಾರಿನವರೆಗೂ ತಲುಪಿಸಿದ್ದಾರೆ. ಇದನ್ನು ನೋಡಿ ಮದುವೆಗೆ ಬಂದು ಅತಿಥಿಗಳು ಭಾವುಕರಾಗಿದ್ದಾರೆ.

  • ಹಸಿರು ಮದ್ವೆಗೆ ಸಾಕ್ಷಿಯಾದ ಜೋಡಿಗಳು

    ಹಸಿರು ಮದ್ವೆಗೆ ಸಾಕ್ಷಿಯಾದ ಜೋಡಿಗಳು

    ಬಾಗಲಕೋಟೆ: ಹಸೆಮಣೆ ಏರಿದ ನವದಂಪತಿಗಳು ಮದುವೆಗೆ ಆಗಮಿಸಿದ ಅತಿಥಿಗಳಿಗೆ ಸಸಿ ವಿತರಿಸಿ, ಹಸಿರು ಬೆಳೆಸಿ, ಆಶೀರ್ವಾದಿಸಿ ಎನ್ನುವ ಮೂಲಕ ಮದುವೆ ಸಮಾರಂಭದಲ್ಲೂ ಪರಿಸರ ಜಾಗೃತಿ ಮೂಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದ ಲೋಕೇಶ್ವರ ದೇವಸ್ಥಾನದಲ್ಲಿ ಈ ಮದುವೆ ನಡೆದಿದ್ದು, ವಿಕ್ರಮ ಗೋಳ್ ಮತ್ತು ಪೂಜಾ ಹಾಗೂ ಹೊಳಬಸಯ್ಯ ಗೋಳ್ ಮತ್ತು ದ್ರಾಕ್ಷಾಯಿಣಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ದಂಪತಿಗಳು ತಮ್ಮ ಮದುವೆಗೆ ಬಂದ ಅಥಿತಿಗಳಿಗೆ ಸಸಿ ವಿತರಿಸಿ ಹಸಿರು ಬೆಳೆಸಿ, ಆಶೀರ್ವಾದಿಸಿ ಎನ್ನುವ ಮೂಲಕ ವಿಶಿಷ್ಟ ಮದುವೆಗೆ ಸಾಕ್ಷಿಯಾಗಿದ್ದಾರೆ.

    ಈ ನವದಂಪತಿಗಳು ಸಾವಿರ ಸಸಿಗಳನ್ನು ಮದುವೆಗೆ ಬಂದ ಅತಿಥಿಗಳಿಗೆ ವಿತರಣೆ ಮಾಡಿದ್ದು, ಖುಷಿ ಜೊತೆಗೆ ಪರಿಸರ ಪ್ರೇಮದ ಅರಿವು ಮೂಡಿಸಿದರು. ಮದುವೆಯಾದ ಜೋಡಿಗಳು ತಲಾ ಒಂದೊಂದು ಸಸಿಗಳನ್ನು ನೆಟ್ಟು ಪ್ರಕೃತಿ ದೇವತೆಯ ಆಶೀರ್ವಾದ ಪಡೆದರು.

    ಇದೇ ವೇಳೆ ಮಾತನಾಡಿದ ದಂಪಂತಿಗಳು, ನಮ್ಮ ಸ್ಮೃತಿ ಪಟಲದಲ್ಲಿ ಹಚ್ಚಹಸಿರಾಗಿರಲಿದೆ. ಸಸಿಗಳನ್ನು ನೆಟ್ಟು ಪೋಷಿಸುವ ಪರಿಸರ ಕಾಳಜಿ ಎಲ್ಲರಲ್ಲಿ ಮೂಡಬೇಕಿದೆ. ದಿನದಿಂದ ದಿನಕ್ಕೆ ಪರಿಸರ ನಾಶವಾಗುತ್ತಿದೆ. ಹೀಗಾಗಿ ನಾವು ಸಸಿ ವಿತರಣೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

  • ಪತ್ನಿ ಆಸೆಯಂತೆ ಶಿವಣ್ಣನ ಮನೆಗೆ ಬಂತು ಹೊಸ ಅತಿಥಿ

    ಪತ್ನಿ ಆಸೆಯಂತೆ ಶಿವಣ್ಣನ ಮನೆಗೆ ಬಂತು ಹೊಸ ಅತಿಥಿ

    ಬೆಂಗಳೂರು: ಪತ್ನಿ ಗೀತಾ ಅವರ ಆಸೆಯಂತೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರ ಮನೆಗೆ ಹೊಸ ಅತಿಥಿವೊಂದು ಎಂಟ್ರಿ ಕೊಟ್ಟಿದೆ.

    ಇತ್ತೀಚೆಗೆ ಗೀತಾ ಶಿವರಾಜ್‍ಕುಮಾರ್ ಅವರು ಬರೋಬ್ಬರಿ 72 ಲಕ್ಷ ರೂ. ನೀಡಿ ನೀಲಿ ಬಣ್ಣದ ವೋಲ್ವೋ ಎಸ್ 90 ಕಾರನ್ನು ಖರೀದಿಸಿದ್ದಾರೆ. ಈ ಕಾರು ಅವರ ಮನೆಗೆ ಬರುತ್ತಿದ್ದಂತೆ ಶಿವಣ್ಣ ಅದನ್ನು ಪೂಜೆ ಮಾಡಿ ಬಳಿಕ ಲಾಂಗ್ ಡ್ರೈವ್‍ಗೆ ಹೋಗಿದ್ದಾರೆ.

    ಈ ಕಾರು 18 ಕಿ.ಮೀ ಮೈಲೇಜ್ ನೀಡುತ್ತದೆ. ಸದ್ಯ ಈ ಕಾರಿನಲ್ಲಿ ಶಿವಣ್ಣ ದಂಪತಿ ಒಂದು ಜಾಲಿ ರೈಡ್ ಗೆ ಹೋಗಿ ಬಂದಿದ್ದಾರೆ.

    ಶಿವರಾಜ್‍ಕುಮಾರ್ ಅವರ ಮನೆಯಲ್ಲಿ ಈಗಾಗಲೇ 5 ದುಬಾರಿ ಕಾರುಗಳಿವೆ. ಫಾರ್ಚುನರ್, ಎರಡು ಇನೋವಾ ಹಾಗೂ ನಿಸಾನ್ ಟಿಡಾ ಕಾರುಗಳಿದ್ದು, ಈಗ ಇವುಗಳ ಜೊತೆ ವೋಲ್ವೋ ಎಸ್ 90 ಕಾರು ಸೇರ್ಪಡೆ ಆಗಿದೆ.

    ಮಹಿಳಾ ದಿನಾಚರಣೆಯ ವಿಶೇಷವಾಗಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಮಡದಿ ಅಶ್ವಿನಿಯವರಿಗೆ ಇಷ್ಟದ ಲಾಂಬೋರ್ಗಿನಿ ಕಾರನ್ನ ಉಡುಗೊರೆಯಾಗಿ ನೀಡಿದ್ದರು. ಈಗಾಗಲೇ ದರ್ಶನ್ ಹಾಗೂ ನಿಖಿಲ್ ಕುಮಾರಸ್ವಾಮಿ ಲ್ಯಾಂಬೋರ್ಗಿನಿ ಕಾರಿನ ಒಡೆಯರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 4 ವರ್ಷಗಳ ಬಳಿಕ ಕಿಚ್ಚನ ಮನೆಗೆ ಹೊಸ ಅತಿಥಿಯ ಆಗಮನ!

    4 ವರ್ಷಗಳ ಬಳಿಕ ಕಿಚ್ಚನ ಮನೆಗೆ ಹೊಸ ಅತಿಥಿಯ ಆಗಮನ!

    ಬೆಂಗಳೂರು: ಕಿಚ್ಚ ಸುದೀಪ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ನಾಲ್ಕು ವರ್ಷಗಳ ನಂತರ ಕಿಚ್ಚ ಸುದೀಪ್ ತಮಗಾಗಿ ಒಂದು ಕಾರನ್ನು ಖರೀದಿ ಮಾಡಿದ್ದಾರೆ.

    ಕೆಂಪು ಬಣ್ಣದ ವೋಲ್ವೊ ಕಂಪೆನಿಯ ಕಾರು ಸೋಮವಾರ ಕಿಚ್ಚ ಸುದೀಪ್ ಅವರ ಮನೆಗೆ ಆಗಮಿಸಿದೆ. ಸದ್ಯ ಸುದೀಪ್ ಅವರ ಹೊಸ ಕಾರಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಮೂರು ತಿಂಗಳ ಹಿಂದೆ ಸುದೀಪ್ ತನ್ನ ಅಕ್ಕನ ಮಗಳಿಗಾಗಿ ಜೀಪ್ ಖರೀದಿಸಿ ಅದನ್ನು ಗಿಫ್ಟ್ ಆಗಿ ನೀಡಿದ್ದರು. ಅದನ್ನು ಬಿಟ್ಟರೆ ಸುದೀಪ್ ತಮಗಾಗಿ ಎಂದು ನಾಲ್ಕು ವರ್ಷದಿಂದ ಯಾವುದೇ ಕಾರು ಖರೀದಿಸಿಲ್ಲ.

    ಕಿಚ್ಚ ಸುದೀಪ್ ಅವರಿಗೂ ಕೂಡ ಕಾರುಗಳ ಕ್ರೇಜ್ ಇದೆ. ಹೊಸ ಕಾರಿನಲ್ಲಿ ಅವರಿಗೆ ಏನಾದರೂ ವಿಶೇಷವೆನಿಸಿದರೆ ಹಾಗೂ ಇಷ್ಟವಾದರೆ ಮಾತ್ರ ಆ ಕಾರನ್ನು ಖರೀದಿಸುತ್ತಾರೆ.

    ಸುದೀಪ್ ಬಳಿ ಈಗಾಗಲೇ ರೇಂಜ್ ರೋವರ್, ಬಿಎಂಡಬ್ಲ್ಯೂ, ಫೋರ್ಡ್ ಸೇರಿದಂತೆ ಹಲವಾರು ಬೇರೆ ಬೇರೆ ಕಂಪೆನಿಯ ಕಾರುಗಳು ಇದೆ. ಅಲ್ಲದೇ ತಮ್ಮ ಬಳಿಯಿರುವ ಕಾರುಗಳಲ್ಲಿ ಒಂದು ಕಾರನ್ನು ಮಾರಾಟ ಮಾಡಿದ್ದರು. ನಂತರ ಅದರಿಂದ ಬಂದ ಹಣವನ್ನು ‘ವಿ ರೆಸ್ಪೆಕ್ಟ್ ಫಾರ್ಮರ್ಸ್’ ಟ್ರಸ್ಟ್ ಗೆ ಕಿಚ್ಚ ಸುದೀಪ್ ಹಣ ನೀಡಿ, ರೈತರಿಗೆ ಸಹಾಯ ಮಾಡಿದ್ದರು.

  • ವಧು ಎಸೆದ ಹೂಗುಚ್ಛಕ್ಕೆ ಮದ್ವೆಗೆ ಬಂದಿದ್ದ ಅತಿಥಿಗಳೆಲ್ಲಾ ದಿಕ್ಕಾಪಾಲು-ವಿಡಿಯೋ ನೋಡಿ

    ವಧು ಎಸೆದ ಹೂಗುಚ್ಛಕ್ಕೆ ಮದ್ವೆಗೆ ಬಂದಿದ್ದ ಅತಿಥಿಗಳೆಲ್ಲಾ ದಿಕ್ಕಾಪಾಲು-ವಿಡಿಯೋ ನೋಡಿ

    ಬೀಜಿಂಗ್: ಕ್ರಿಶ್ಚಿಯನ್ ಮದುವೆ ಸಂಪ್ರದಾಯದಲ್ಲಿ ವಧು ಮೇಲೆ ಹೂಗುಚ್ಛ ಎಸೆಯುವುದು ಒಂದು ಸಂಪ್ರದಾಯ. ಆದ್ರೆ ಚೀನಾದಲ್ಲಿ ನಡೆದ ಮದುವೆಯಲ್ಲಿ ವಧು ಮೇಲೆಸೆದ ಹೂ ಗುಚ್ಛ ಮೇಲ್ಚಾವಣಿಗೆ ತಾಗಿದೆ. ಮೇಲ್ಚಾವಣಿಗೆ ಅಲಂಕಾರಿಕವಾಗಿ ಜೋಡಿಸಲಾಗಿದ್ದ ಟೈಲ್ಸ್ ಗಳು ಕುಸಿದು ಬಿದ್ದಿದೆ.

    ವಧು ಹೂಗುಚ್ಛ ಎಸೆದ ಮೇಲ್ಚಾವಣಿ ಕುಸಿದು ಬೀಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದ್ರೆ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.

    ಸಾಂದರ್ಭಿಕ ಚಿತ್ರ

    ಟೈಲ್ಸ್ ಗಳು ಕುಸಿದು ಬೀಳುತ್ತಿದ್ದಂತೆ ವೇದಿಕೆಯ ಮುಂಭಾಗದಲ್ಲಿ ನಿಂತಿದ್ದ ಅತಿಥಿಗಳೆಲ್ಲಾ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಟೈಲ್ಸ್ ಗಳು ಬಿದ್ದಿದರಿಂದ ಕೆಲವು ಅತಿಥಿಗಳು ಗಾಯಗೊಂಡಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ವರದಿಯಾಗಿದೆ.

    ಕ್ರಿಶ್ಚಿಯನ್ ಮದುವೆ ಸಂಪ್ರದಾಯದಲ್ಲಿ, ವಧು ಕೈಯಲ್ಲಿ ಸುಂದರವಾದ ಹೂವಿನ ಗುಚ್ಛವೊಂದು ಇರುತ್ತದೆ. ವಧು ತನ್ನ ಮದುವೆ ಬಳಿಕ ಕೈಯಲ್ಲಿರುವ ಹೂಗುಚ್ಛವನ್ನು ಮೇಲೆಸೆಯುತ್ತಾರೆ. ಮೇಲೆಸೆದ ಹೂಗುಚ್ಛವನ್ನು ಹಿಡಿದವರ ಮದುವೆ ಅದೇ ವರ್ಷದಲ್ಲಿ ಆಗುತ್ತೆ ಎಂಬ ನಂಬಿಕೆ ಇದೆ.

    https://www.facebook.com/shanghaiist/videos/10156905046776030/

  • ಕಿರುತೆರೆಯಲ್ಲೂ ಒಂದಾದ್ರೂ ದಿ-ವಿಲನ್ ಸ್ಟಾರ್ಸ್!

    ಕಿರುತೆರೆಯಲ್ಲೂ ಒಂದಾದ್ರೂ ದಿ-ವಿಲನ್ ಸ್ಟಾರ್ಸ್!

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ‘ದಿ-ವಿಲನ್’ ಚಿತ್ರದಲ್ಲಿ ನಟಿಸುತ್ತಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಆದರೆ ಈ ಜೋಡಿ ಈಗ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮತ್ತೆ ಒಂದಾಗಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಶಿವರಾಜ್ ಕುಮಾರ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅತಿಥಿಯಾಗಿ ಆಗಮಿಸಿದ್ದಾರೆ. ಈಗಾಗಲೇ ಸುದೀಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಚಿಕೆಯನ್ನು ಚಿತ್ರಿಕರಿಸಲಾಗಿದ್ದು, ಕಿಚ್ಚನ ಜೊತೆ ಬೇರೆ ಯಾವ ಅತಿಥಿ ಬರಲಿದ್ದಾರೆ ಎಂಬ ಕುತೂಹಲ ಹುಟ್ಟಿಸಿದೆ.

    ಕಿಚ್ಚ ಸುದೀಪ್ ಕಾರ್ಯಕ್ರಮದಲ್ಲಿ ಭಾಗವಹಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಫೋಟೋದಲ್ಲಿ ಸುದೀಪ್ ಕಪ್ಪು ಬಣ್ಣದ ಉಡುಪಿನಲ್ಲಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೇ ಫೋಟೋದಲ್ಲಿ ಶಿವಣ್ಣ, ಕಿಚ್ಚ ಸುದೀಪ್ ಅವರಿಗೆ ಡ್ಯಾನ್ಸ್ ಹೇಳಿಕೊಡುತ್ತಿರುವುದು ಕಾಣಬಹುದು.

    ಸದ್ಯ ಶಿವಣ್ಣನ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರ ಸಂಚಿಕೆ ಇದೇ ಭಾನುವಾರ ಪ್ರಸಾರವಾಗುತ್ತಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಈ ಹಿಂದೆ ಈ ಕಾರ್ಯಕ್ರಮದಲ್ಲಿ ನಟಿ ಶೃತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಉಪೇಂದ್ರ, ಶರಣ್, ಲೂಸ್ ಮಾದ ಯೋಗಿ, ಧನಂಜಯ್, ವಸಿಷ್ಟ ಸಿಂಹ, ದಿಗಂತ್ ಅತಿಥಿಯಾಗಿ ಆಗಮಿಸಿದ್ದರು.