Tag: ಅತಿಕ್ ಅಹ್ಮದ್

  • ಪತಿಯನ್ನು ಹತ್ಯೆಗೈದವರು ಈಗ ಸಮಾಧಿಯಾಗಿದ್ದಾರೆ – ಯೋಗಿಯನ್ನು ಹೊಗಳಿದ್ದಕ್ಕೆ ಪಕ್ಷದಿಂದಲೇ ಎಸ್‌ಪಿ ಶಾಸಕಿ ಉಚ್ಚಾಟನೆ

    ಪತಿಯನ್ನು ಹತ್ಯೆಗೈದವರು ಈಗ ಸಮಾಧಿಯಾಗಿದ್ದಾರೆ – ಯೋಗಿಯನ್ನು ಹೊಗಳಿದ್ದಕ್ಕೆ ಪಕ್ಷದಿಂದಲೇ ಎಸ್‌ಪಿ ಶಾಸಕಿ ಉಚ್ಚಾಟನೆ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಅವರನ್ನು ಸದನದಲ್ಲೇ ಹೊಗಳಿದ್ದಕ್ಕೆ ಸಮಾಜವಾದಿ ಪಕ್ಷದ ಶಾಸಕಿ ಪೂಜಾ ಪಾಲ್ (Pooja Pal) ಅವರನ್ನು ಅಖಿಲೇಶ್‌ ಯಾದವ್‌ ಪಕ್ಷದಿಂದಲೇ ಹೊರಹಾಕಿದ್ದಾರೆ.

    ನೀವು ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ್ದೀರಿ. ಎಚ್ಚರಿಕೆ ನೀಡಿದ ನಂತರವೂ ನೀವು ಈ ಚಟುವಟಿಕೆಗಳನ್ನು ಮುಂದುವರಿಸಿದ್ದೀರಿ. ನೀವು ಮಾಡಿದ ಕೆಲಸ ಪಕ್ಷ ವಿರೋಧಿ ಮತ್ತು ಗಂಭೀರ ಅಶಿಸ್ತಿನ ಕೃತ್ಯವಾಗಿದೆ. ಆದ್ದರಿಂದ ನಿಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಮಾಜವಾದಿ ಪಕ್ಷದಿಂದ (SP) ಉಚ್ಚಾಟಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

    ಪಕ್ಷದಿಂದ ಉಚ್ಚಾಟಿಸಿದ ಬಳಿಕವೂ ಪೂಜಾ ಪಾಲ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಯೋಗಿ ಸರ್ಕಾರ ಬಂದ ನಂತರ ರಾಜ್ಯದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪ್ರಯಾಗ್‌ರಾಜ್‌ನಲ್ಲಿ ನನಗಿಂತ ಹೆಚ್ಚು ನೋವನ್ನು ಅನುಭವಿಸಿದ ಮಹಿಳೆಯರ ಧ್ವನಿಯನ್ನು ನೀವು ಕೇಳಲು ಸಾಧ್ಯವಾಗದಿರಬಹುದು. ಆದರೆ ನಾನು ಅವರ ಧ್ವನಿ. ನನ್ನನ್ನು ಶಾಸಕಿಯಾಗಿ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಲಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ತಾಯಂದಿರು ಮತ್ತು ಸಹೋದರಿಯರ ಧ್ವನಿ ನಾನು. ಪ್ರಯಾಗ್‌ರಾಜ್‌ನಲ್ಲಿರುವ ಪೂಜಾ ಪಾಲ್‌ಗೆ ಮಾತ್ರವಲ್ಲದೆ ಅತಿಕ್ ಅಹ್ಮದ್‌ನಿಂದ ತೊಂದರೆಗೊಳಗಾದ ಎಲ್ಲಾ ಜನರಿಗೆ ಮುಖ್ಯಮಂತ್ರಿಗಳು ನ್ಯಾಯ ಒದಗಿಸಿದ್ದಾರೆ. ನಾನು ಪಕ್ಷದಲ್ಲಿ ಇದ್ದರೂ ಮೊದಲ ದಿನದಿಂದಲೇ ಇದನ್ನೇ ಹೇಳುತ್ತಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್ಅತೀಕ್ಅಹ್ಮದ್ತಲೆಗೆ 1, ದೇಹಕ್ಕೆ 8 ಗುಂಡೇಟು

     

    ಪೂಜಾ ಪಾಲ್ ಯಾರು?
    ಪೂಜಾ ಪಾಲ್ ಅಲಹಾಬಾದ್ ನಗರದ ಪಶ್ಚಿಮ ಕ್ಷೇತ್ರದ ಬಿಎಸ್‌ಪಿ ಶಾಸಕ ರಾಜು ಪಾಲ್ ಅವರ ಪತ್ನಿ. 2005 ರಲ್ಲಿ ಪೂಜಾ ಪಾಲ್ ಮದುವೆಯಾದ 10 ದಿನದಲ್ಲೇ ರಾಜು ಪಾಲ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮಾಫಿಯಾ ಡಾನ್ ಅತಿಕ್ ಅಹ್ಮದ್ (Atiq Ahmed) ಸಹೋದರ ಅಶ್ರಫ್ ಮೇಲೆ ಈ ಹತ್ಯೆ ಮಾಡಿದ ಆರೋಪ ಬಂದಿತ್ತು. ನಂತರ ಈ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಅತಿಕ್ ಅಹ್ಮದ್ ಸಹೋದರ ಖಾಲಿದ್ ಅಜೀಮ್ ವಿರುದ್ಧ ಬಿಎಸ್‌ಪಿಯಿಂದ ಪೂಜಾ ಪಾಲ್ ಸ್ಪರ್ಧಿಸಿದ್ದರು. ಆದರೆ ಈ ಚುನಾವಣೆಯಲ್ಲಿ ಪೂಜಾ ಸೋತಿದ್ದರು. ನಂತರ 2007 ಮತ್ತು 2012 ರ ಚುನಾವಣೆಯಲ್ಲಿ ಪೂಜಾ ಪಾಲ್ ಈ ಕ್ಷೇತ್ರದಿಂದ ಜಯಗಳಿಸಿದ್ದರು.

    ಈ ಮಧ್ಯೆ ಬಿಜೆಪಿ ನಾಯಕ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರನ್ನು ಭೇಟಿಯಾಗಿದ್ದಕ್ಕೆ ಫೆಬ್ರವರಿ 2018 ರಲ್ಲಿ ಬಿಎಸ್‌ಪಿಯಿಂದ ಉಚ್ಚಾಟಿಸಲಾಗಿತ್ತು. 2019 ರಲ್ಲಿ ಸಮಾಜವಾದಿ ಪಕ್ಷವನ್ನು ಸೇರಿದ್ದ ಪೂಜಾ ಪಾಲ್ ಕೌಶಂಬಿ ಜಿಲ್ಲೆಯ ಚೈಲ್ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕಿಯಾಗಿ ಆಯ್ಕೆಯಾಗಿದ್ದರು.

    ಪೂಜಾ ಪಾಲ್‌ ಹೇಳಿದ್ದೇನು?
    ನನ್ನ ಪತಿಯನ್ನು ಹತ್ಯೆ ಮಾಡಿದವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿತ್ತು. ಯಾರಿಂದಲೂ ನ್ಯಾಯ ಸಿಗದೇ ಇದ್ದಾಗ ನನ್ನ ಮಾತು ಕೇಳಿ ನನಗೆ ನ್ಯಾಯ ಒದಗಿಸಿದ್ದಕ್ಕೆ ಯೋಗಿ ಆದಿತ್ಯನಾಥ್‌ ಅವರಿಗೆ ಧನ್ಯವಾದಗಳು. ಅಪರಾಧಿಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಗಳನ್ನು ತರುವ ಮೂಲಕ ಮುಖ್ಯಮಂತ್ರಿ ಪ್ರಯಾಗ್‌ರಾಜ್‌ನಲ್ಲಿ ನನ್ನಂತಹ ಅನೇಕ ಇತರ ಮಹಿಳೆಯರಿಗೆ ನ್ಯಾಯ ಒದಗಿಸಿದ್ದಾರೆ. ಇಂದು ಇಡೀ ರಾಜ್ಯವೇ ಸಿಎಂ ಅವರನ್ನು ವಿಶ್ವಾಸದಿಂದ ನೋಡುತ್ತಿದೆ. ಮುಖ್ಯಮಂತ್ರಿಗಳು ನನ್ನ ಪತಿಯ ಕೊಲೆಗಾರ ಅತಿಕ್ ಅಹ್ಮದ್‌ನನ್ನು ಸಮಾಧಿ ಮಾಡಿದ್ದಾರೆ ಎಂದು ಶ್ಲಾಘಿಸಿದ್ದರು.

    ಗುಂಡಿಕ್ಕಿ ಹತ್ಯೆ:
    ರಾಜು ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರನ್ನು ಫೆಬ್ರವರಿ 2023 ರಲ್ಲಿ ಪ್ರಯಾಗ್‌ರಾಜ್‌ನ ಸುಲೇಮ್ ಸರಾಯ್ ಪ್ರದೇಶದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

    ಈ ಪ್ರಕರಣದ ಪ್ರಮುಖ ಆರೋಪಿಗಳಾದ ಅತಿಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅಹ್ಮದ್‌ನನ್ನು ಪೊಲೀಸರು ಬಂಧಿಸಿದ್ದರು. ಏಪ್ರಿಲ್ 15, 2023 ರಂದು ಇಬ್ಬರನ್ನು ಪ್ರಯಾಗ್‌ರಾಜ್‌ನಲ್ಲಿ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಪತ್ರಕರ್ತರಂತೆ ನಟಿಸಿದ್ದ ಇಬ್ಬರು ಇವರ ಮೇಲೆ ಗುಂಡಿನ ದಾಳಿ ನಡೆಸಿ ಅಣ್ಣ, ತಮ್ಮನನ್ನು ಹತ್ಯೆ ಮಾಡಿದ್ದರು.

  • ಉಮೇಶ್ ಪಾಲ್ ಹತ್ಯೆ ಕೇಸ್ – ಗ್ಯಾಂಗ್‍ಸ್ಟರ್ ಅತೀಕ್ ಅಹ್ಮದ್‍ನ ವಕೀಲ ಅರೆಸ್ಟ್

    ಉಮೇಶ್ ಪಾಲ್ ಹತ್ಯೆ ಕೇಸ್ – ಗ್ಯಾಂಗ್‍ಸ್ಟರ್ ಅತೀಕ್ ಅಹ್ಮದ್‍ನ ವಕೀಲ ಅರೆಸ್ಟ್

    ಲಕ್ನೋ: ಬಿಎಸ್‍ಪಿ ಮಾಜಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೀಡಾದ ದರೋಡೆಕೋರ ಅತೀಕ್ ಅಹ್ಮದ್‍ನ (Atiq Ahmed) ವಕೀಲನನ್ನು ಉತ್ತರ ಪ್ರದೇಶ (Uttar Pradesh) ಪೊಲೀಸರು (Police) ಬಂಧಿಸಿದ್ದಾರೆ.

    ಆರೋಪಿ ವಿಜಯ್ ಮಿಶ್ರಾ ಹತ್ಯೆಗೀಡಾದ ಉಮೇಶ್ ಪಾಲ್ ಇರುವ ಸ್ಥಳದ ಮಾಹಿತಿಯನ್ನು ಹಂತಕರಿಗೆ ನೀಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಲಕ್ನೋದ ಹೋಟೆಲ್ ಒಂದರಲ್ಲಿ ಮಿಶ್ರಾನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಗ್ರೆನೇಡ್ ಮೇಲಿನ ಮೇಡ್ ಇನ್ ವಿವರವನ್ನೇ ಅಳಿಸಿ ಹಾಕಿರುವ ಶಂಕಿತ ಉಗ್ರರು

    ಅಲ್ಲದೇ ವಕೀಲ ವಿಜಯ್ ಮಿಶ್ರಾ 3 ಕೋಟಿ ರೂ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ ಎಂದು ಉದ್ಯಮಿಯೊಬ್ಬರು ಆರೋಪಿಸಿದ್ದಾರೆ. ಈ ಸಂಬಂಧ ಆತನ ವಿರುದ್ಧ ಪ್ರಯಾಗ್‍ರಾಜ್‍ನ ಅತ್ತರ್ಸುಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದರೋಡೆಕೋರ ಅತೀಕ್ ಅಹ್ಮದ್ ಹತ್ಯೆಯ ನಂತರ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಮೊಹಮ್ಮದ್ ಸಯೀದ್ ಎಂಬ ಪ್ಲೈವುಡ್ ವ್ಯಾಪಾರಿ ಪೊಲೀಸ್ ಠಾಣೆಗೆ ಬಂದು ವಿಜಯ್ ಮಿಶ್ರಾ ಬೇಡಿಕೆಗಳ ಬಗ್ಗೆ ಮಾಹಿತಿ ನೀಡಿದ್ದರು. ಹಣ ನೀಡದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಿಶ್ರಾ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

    ಹಗಲಿನ ವೇಳೆಯಲ್ಲೇ ಉಮೇಶ್ ಪಾಲ್ ಹತ್ಯೆ ನಡೆದಿತ್ತು. ಹತ್ಯೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಘಟನೆಯ ನಂತರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಮಾಫಿಯಾ ವನ್ನು ಸಂಪೂರ್ಣವಾಗಿ ಮಟ್ಟ ಹಾಕುವುದಾಗಿ ವಿಧಾನಸಭೆಯಲ್ಲಿ ಪ್ರತಿಜ್ಞೆ ಮಾಡಿದ್ದರು. ಇದನ್ನೂ ಓದಿ: ಆಸ್ಪತ್ರೆಯಲ್ಲಿ ಬೆಂಕಿ ಅವಘಡ – 125 ರೋಗಿಗಳ ಸ್ಥಳಾಂತರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅತಿಕ್ ಸಮಾಧಿಗೆ ತ್ರಿವರ್ಣ ಧ್ವಜ ಹಾಕಿದ ಕಾಂಗ್ರೆಸ್ ನಾಯಕ ಅರೆಸ್ಟ್

    ಅತಿಕ್ ಸಮಾಧಿಗೆ ತ್ರಿವರ್ಣ ಧ್ವಜ ಹಾಕಿದ ಕಾಂಗ್ರೆಸ್ ನಾಯಕ ಅರೆಸ್ಟ್

    ಲಕ್ನೋ: ಹತ್ಯೆಯಾದ ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತಿಕ್ ಅಹ್ಮದ್ (Atiq Ahmed) ಸಮಾಧಿ (Grave) ಮೇಲೆ ರಾಷ್ಟ್ರ ಧ್ವಜವನ್ನು (Tricolor) ಇರಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದ ಕಾಂಗ್ರೆಸ್‌ನ ನಾಯಕನನ್ನು (Congress Leader) ಅಧಿಕಾರಿಗಳು ಬಂಧಿಸಿದ್ದಾರೆ.

    ಓಲ್ಡ್ ಸಿಟಿ ಪ್ರದೇಶದ ಕಸರಿ ಮಸಾರಿ ಸ್ಮಶಾನದಲ್ಲಿ ಅತಿಕ್ ಸಮಾಧಿಯಿದೆ. ಅಲ್ಲಿನ ಸ್ಥಳೀಯ ಕಾಂಗ್ರೆಸ್ ನಾಯಕ ರಾಜ್‌ಕುಮಾರ್ ಸಿಂಗ್ ರಜ್ಜು (Rajkumar Singh Rajju) ಅತಿಕ್ ಸಮಾಧಿ ಮೇಲೆ ರಾಷ್ಟ್ರಧ್ವಜವನ್ನು ಇರಿಸುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಧೂಮಗಂಜ್ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಅತಿಕ್ ಮತ್ತು ಆತನ ಕಿರಿಯ ಸಹೋದರ ಅಶ್ರಫ್ ಏಪ್ರಿಲ್ 15 ರಂದು ರಾತ್ರಿ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಮೂವರು ಬಂದೂಕುಧಾರಿಗಳು ಗುಂಡಿಕ್ಕಿ ಅವರಿಬ್ಬರನ್ನೂ ಕೊಂದಿದ್ದರು. ಬಳಿಕ ಏಪ್ರಿಲ್ 16ರ ಸಂಜೆ ತಡವಾಗಿ ಅತಿಕ್ ಮತ್ತು ಅಶ್ರಫ್‌ನ ಸಮಾಧಿ ಮಾಡಲಾಯಿತು. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ವೀಡಿಯೊದಲ್ಲಿ ರಾಜ್‌ಕುಮಾರ್ ಸಿಂಗ್ ಅತಿಕ್‌ನನ್ನು ಹುತಾತ್ಮ ಎಂದು ಕರೆದಿದ್ದಾನೆ. ಅತಿಕ್‌ಗೆ ಭಾರತ ರತ್ನ ನೀಡಬೇಕೆಂದು ಎಂದು ಹೇಳಿ ಸಮಾಧಿಯ ಮೇಲೆ ತ್ರಿವರ್ಣ ಧ್ವಜವನ್ನು ಹರಡಿರುವುದು ಕಂಡುಬಂದಿದೆ. ಆದರೆ ಈ ವೀಡಿಯೋ ಕ್ಲಿಪ್‌ನ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ. ಇದನ್ನೂ ಓದಿ: ಗ್ಯಾಂಗ್‍ಸ್ಟಾರ್ ಅತೀಕ್ ಅಹ್ಮದ್ ಬೆಂಬಲಿಗ ಕಾಂಗ್ರೆಸ್ ಸ್ಟಾರ್ ಪ್ರಚಾರಕ – ಕರಂದ್ಲಾಂಜೆ ಖಂಡನೆ

    ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ವೀಡಿಯೋದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬುಧವಾರ ಆರೋಪಿ ಕಾಂಗ್ರೆಸ್ ನಾಯಕನನ್ನು ಬಂಧಿಸಿದ್ದಾರೆ. ಈ ನಡುವೆ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರದೀಪ್ ಮಿಶ್ರಾ ಅಂಶುಮಾನ್ ಮಾತನಾಡಿ, ರಾಜ್‌ಕುಮಾರ್‌ನನ್ನು 6 ವರ್ಷಗಳ ಕಾಲ ಪಕ್ಷದಿಂದ ಹೊರಹಾಕಲಾಗಿದೆ. ಅತಿಕ್ ಬಗೆಗಿನ ರಜ್ಜು ಹೇಳಿಕೆಗಳು ಹಾಗೂ ಕೃತ್ಯಗಳು ಆತನ ವೈಯಕ್ತಿಕ ದೃಷ್ಟಿಕೋನದ್ದಾಗಿದೆ. ಇದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅತೀಕ್ ಅಹ್ಮದ್ ಪ್ರಕರಣ – ಐವರು ಪೊಲೀಸರ ಅಮಾನತು

  • ಅತಿಕ್ ಅಹ್ಮದ್ ಸಹಚರ ಗುಡ್ಡು ಮುಸ್ಲಿಂ ಲೊಕೇಶನ್ ಕರ್ನಾಟಕದಲ್ಲಿ ಪತ್ತೆ

    ಅತಿಕ್ ಅಹ್ಮದ್ ಸಹಚರ ಗುಡ್ಡು ಮುಸ್ಲಿಂ ಲೊಕೇಶನ್ ಕರ್ನಾಟಕದಲ್ಲಿ ಪತ್ತೆ

    ಲಕ್ನೋ: ಗ್ಯಾಂಗ್‌ಸ್ಟರ್, ರಾಜಕಾರಣಿ ಅತಿಕ್ ಅಹ್ಮದ್‌ನ (Atiq Ahmed) ಸಹಚರ ಹಾಗೂ ಉಮೇಶ್ ಪಾಲ್ (Umesh Pal) ಹತ್ಯೆ ಪ್ರಕರಣದಲ್ಲಿ ಬದುಕುಳಿದಿರುವ ಆರೋಪಿ ಗುಡ್ಡು ಮುಸ್ಲಿಂನ (Guddu Muslim) ಟವರ್ ಲೊಕೇಶನ್ ಕೊನೆಯದಾಗಿ ಕರ್ನಾಟಕದಲ್ಲಿ (Karnataka) ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    2005ರಲ್ಲಿ ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆ (Raju Pal) ಪ್ರಕರಣದಲ್ಲಿ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿಗಳಲ್ಲಿ ಗುಡ್ಡು ಮುಸ್ಲಿಂ ಕೂಡಾ ಒಬ್ಬನಾಗಿದ್ದ. ಆತ ಉಮೇಶ್ ಪಾಲ್ ಹತ್ಯೆಯಾದ ದಿನ ಫೆಬ್ರವರಿ 24 ರಂದು ತಲೆಮರೆಸಿಕೊಂಡಿದ್ದಾನೆ.

    ಉಮೇಶ್ ಪಾಲ್ ಹತ್ಯೆಯಾದ ಒಂದು ದಿನದ ನಂತರ ಫೆಬ್ರವರಿ 25 ರಂದು ಪ್ರಯಾಗರಾಜ್‌ನ ಧೂಮ್‌ಗಂಜ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ 10 ಜನ ಆರೋಪಿಗಳಲ್ಲಿ ಗುಡ್ಡು ಮುಸ್ಲಿಂ ಸೇರಿದ್ದಾನೆ. ಉಮೇಶ್ ಪಾಲ್ ಹತ್ಯೆಯ ವೇಳೆ ಅವರ ನಿವಾಸದ ಹೊರಗಿನಿಂದ ಗುಡ್ಡು ಮುಸ್ಲಿಂ ಸ್ಫೋಟಕ ವಸ್ತುವನ್ನು ಎಸೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ತಲೆಗೆ 1, ದೇಹಕ್ಕೆ 8 ಗುಂಡೇಟು

    ಉಮೇಶ್ ಪಾಲ್ ಹತ್ಯೆಯ ಬಳಿಕ 2 ತಿಂಗಳೊಳಗೆ ಅತಿಕ್ ಅಹ್ಮದ್ ಸೇರಿದಂತೆ ಒಟ್ಟು 6 ಆರೋಪಿಗಳನ್ನು ಕೊಲ್ಲಲಾಗಿದೆ. 10 ಆರೋಪಿಗಳ ಪೈಕಿ ಹತ್ಯೆಯಾಗಿರುವ 6 ಜನರೆಂದರೆ, ಅತಿಕ್ ಅಹ್ಮದ್, ಆತನ ಪುತ್ರ ಅಸದ್, ಸಹೋದರ ಅಶ್ರಫ್, ಸಹಚರರಾದ ಅರ್ಬಾಜ್, ವಿಜಯ್ ಚೌಧರಿ ಅಲಿಯಾಸ್ ಉಸ್ಮಾನ್ ಹಾಗೂ ಗುಲಾಮ್ ಹಸನ್. ಇದೀಗ ಬದುಕುಳಿದಿರುವ ಆರೋಪಿಗಳಾದ ಗುಡ್ಡು ಮುಸ್ಲಿಂ, ಅರ್ಮಾನ್ ಹಾಗೂ ಸಬೀರ್ ತಲೆಮರೆಸಿಕೊಂಡಿದ್ದಾರೆ. ಇದನ್ನೂ ಓದಿ: ಕೇರಳ ರೈಲಿಗೆ ಬೆಂಕಿ – ಇಸ್ಲಾಮಿಕ್ ಮತೀಯವಾದ ಬೆಳೆಸಿಕೊಂಡಿದ್ದ ಆರೋಪಿ

  • ಅತಿಕ್, ಅಶ್ರಫ್ ಹತ್ಯೆ – ಮೂವರು ಹಂತಕರ ಬಂಧನ, ಯುಪಿಯಲ್ಲಿ ಹೈ ಅಲರ್ಟ್

    ಅತಿಕ್, ಅಶ್ರಫ್ ಹತ್ಯೆ – ಮೂವರು ಹಂತಕರ ಬಂಧನ, ಯುಪಿಯಲ್ಲಿ ಹೈ ಅಲರ್ಟ್

    ಲಕ್ನೋ: ಮಾಜಿ ಸಂಸದ, ಗ್ಯಾಂಗ್‌ಸ್ಟರ್ ಅತಿಕ್ ಅಹ್ಮದ್ (Atiq Ahmed) ಹಾಗೂ ಆತನ ಸಹೋದರ ಅಶ್ರಫ್‌ನನ್ನು (Ashraf) ಶನಿವಾರ ಪ್ರಯಾಗ್‌ರಾಜ್‌ನಲ್ಲಿ (Prayagraj) ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಉತ್ತರ ಪ್ರದೇಶದಾದ್ಯಂತ (Uttar Pradesh) ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.

    ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿಗಳಾದ ಅತಿಕ್ ಹಾಗೂ ಅಶ್ರಫ್‌ನನ್ನು ಶನಿವಾರ ಪ್ರಯಾಗ್‌ರಾಜ್ ಆಸ್ಪತ್ರೆಗೆ ಮೆಡಿಕಲ್ ಚೆಕಪ್‌ಗೆಂದು ಕರೆದುಕೊಂಡು ಹೋಗುತ್ತಿದ್ದ ವೇಳೆ ಅವರಿಬ್ಬರ ಮೇಲೆ ಗುಂಡು ಹಾರಿಸಲಾಗಿದೆ. ಅತಿಕ್ ಹಾಗೂ ಅಶ್ರಫ್ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ವೇಳೆಯೇ ಪತ್ರಕರ್ತರ ರೂಪದಲ್ಲಿ ಬಂದಿದ್ದ ಬಂದೂಕುಧಾರಿಗಳು ಅವರಿಬ್ಬರ ಮೇಲೆ ಗುಂಡು ಹಾರಿಸಿ ಹತ್ಯೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

    ಘಟನೆಗೆ ಸಂಬಂಧಿಸಿದಂತೆ ಮೂವರು ಹಂತಕರನ್ನು ತಕ್ಷಣವೇ ಅಧಿಕಾರಿಗಳು ಬಂಧಿಸಿದ್ದು, ಅವರನ್ನು ಲವ್ಲೇಶ್, ಸನ್ನಿ ಹಾಗೂ ಅರುಣ್ ಮೌರ್ಯ ಎಂದು ಪೊಲೀಸರು ಗುರುತಿಸಿದ್ದಾರೆ. ಇವರು ಪತ್ರಕರ್ತರಂತೆ ಬಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅತಿಕ್ ಹಾಗೂ ಅಶ್ರಫ್ ಮೇಲೆ ಗುಂಡು ಹಾರಿಸಿದ್ದಾರೆ.

    ಘಟನೆಯ ಬಳಿಕ ಮಥುರಾ, ಅಯೋಧ್ಯೆ ಸೇರಿದಂತೆ ಉತ್ತರಪ್ರದೇಶದಾದ್ಯಂತ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಪ್ರಮುಖ ನಗರಗಳಲ್ಲಿ ಭದ್ರತಾ ಅಧಿಕಾರಿಗಳು ಗುಸ್ತು ತಿರುಗುತ್ತಿದ್ದಾರೆ. ಉತ್ತರ ಪ್ರದೇಶ ಸರ್ಕಾರ ಭಾನುವಾರ ಎಲ್ಲಾ ಜಿಲ್ಲೆಗಳಲ್ಲಿ ಸಿಆರ್‌ಪಿಸಿಯ ಸೆಕ್ಷನ್ 144 ಅನ್ನು ವಿಧಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಏನಿದು ಪ್ರಕರಣ?
    2005ರಲ್ಲಿ ಅಲಹಾಬಾದ್ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ನಾಯಕ ರಾಜು ಪಾಲ್ ಗೆದ್ದಿದ್ದರು. ಇದಾದ 1 ತಿಂಗಳಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ಫೆ.24 ರಂದು ಉಮೇಶ್ ಪಾಲ್ ಅವರನ್ನು ಪ್ರಯಾಗ್‌ರಾಜ್‌ನಲ್ಲಿರುವ ಅವರ ನಿವಾಸದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.

    ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 40 ಜನರನ್ನು ಆರೋಪಿಗಳೆಂದು ಪೊಲೀಸರು ಹೆಸರಿಸಿದ್ದಾರೆ. ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತಿಕ್ ಅಹ್ಮದ್, ಆತನ ಸಹೋದರ ಮತ್ತು ಮಾಜಿ ಶಾಸಕ ಅಶ್ರಫ್ ರಾಜು ಪಾಲ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದು ಇವರಿಬ್ಬರೂ ಜೈಲಿನಲ್ಲಿದ್ದರು. ಇದನ್ನೂ ಓದಿ: ಪೊಲೀಸರ ಕಸ್ಟಡಿಯಲ್ಲಿದ್ದಾಗಲೇ ರೌಡಿ ಅತಿಕ್‌ ಅಹ್ಮದ್‌, ಸಹೋದರ ಗ್ಯಾಂಗ್‌ವಾರ್‌ಗೆ ಬಲಿ

    ಕಳೆದ ಕೆಲ ದಿನಗಳ ಹಿಂದಷ್ಟೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಅತಿಕ್ ಅಹ್ಮದ್‌ನ ಪುತ್ರ ಅಸದ್‌ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಇದಕ್ಕೂ ಮುನ್ನವೇ ತಮ್ಮನ್ನು ಜೈಲಿನಿಂದ ಹೊರಗಡೆ ಕರೆದುಕೊಂಡು ಹೋಗುವ ವೇಳೆ ಯಾರಾದರೂ ತಮ್ಮನ್ನು ಗುಂಡಿಕ್ಕಿ ಕೊಲ್ಲಬಹುದು ಎಂದು ಅಶ್ರಫ್ ಭೀತಿ ವ್ಯಕ್ತಪಡಿಸಿದ್ದ. ಹಾಗೂ ತಮ್ಮನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಹೋಗದಂತೆ ಮನವಿ ಮಾಡಿಕೊಂಡಿದ್ದ. ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಕೇಸ್‌ – ಗ್ಯಾಂಗ್‌ ಸ್ಟಾರ್‌ ಅತಿಕ್‌ ಪುತ್ರ ಎನ್‌ಕೌಂಟರ್‌ಗೆ ಬಲಿ

  • ಪೊಲೀಸರ ಕಸ್ಟಡಿಯಲ್ಲಿದ್ದಾಗಲೇ ರೌಡಿ ಅತಿಕ್‌ ಅಹ್ಮದ್‌, ಸಹೋದರ ಗ್ಯಾಂಗ್‌ವಾರ್‌ಗೆ ಬಲಿ

    ಪೊಲೀಸರ ಕಸ್ಟಡಿಯಲ್ಲಿದ್ದಾಗಲೇ ರೌಡಿ ಅತಿಕ್‌ ಅಹ್ಮದ್‌, ಸಹೋದರ ಗ್ಯಾಂಗ್‌ವಾರ್‌ಗೆ ಬಲಿ

    ಲಕ್ನೋ: ಮಾಜಿ ಸಂಸದ, ಗ್ಯಾಂಗ್‌ ಸ್ಟಾರ್‌ ಅತಿಕ್‌ ಅಹ್ಮದ್‌ (Atiq Ahmed) ಮತ್ತು ಸಹೋದರ ಅಶ್ರಫ್‌ ಅಹ್ಮದ್‌ ಗ್ಯಾಂಗ್‌ವಾರ್‌ಗೆ ಬಲಿಯಾಗಿದ್ದಾರೆ.

    ಇಬ್ಬರನ್ನು ಇಂದು ಪ್ರಯಾಗ್‌ರಾಜ್‌ ಆಸ್ಪತ್ರೆಗೆ ಮೆಡಿಕಲ್‌ ಚೆಕಪ್‌ಗೆಂದು ಕರೆದುಕೊಂಡು ಹೋಗಲಾಗುತ್ತಿತ್ತು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಲು ಮುಂದಾಗುತ್ತಿದ್ದಾಗ ಎಲ್ಲಿಂದಲೋ ಬಂದ ಇಬ್ಬರು ಅನಾಮಿಕ ವ್ಯಕ್ತಿಗಳು ಪಿಸ್ತೂಲ್‌ನಿಂದ ಶೂಟ್‌ ಮಾಡಿ ಹತ್ಯೆ ಮಾಡಿದ್ದಾರೆ.

    ಏಪ್ರಿಲ್‌ 13 ರಂದು ಅತಿಕ್‌ ಅಹ್ಮದ್‌ ಪುತ್ರ ಅಸಾದ್‌ (Asad) ಮತ್ತು ಗುಲಾಂನನ್ನು ಉತ್ತರ ಪ್ರದೇಶ (Uttar pradesh) ಪೊಲೀಸರು ಎನ್‌ಕೌಂಟರ್‌ (Encounter) ಮಾಡಿ ಹತ್ಯೆ ಮಾಡಿದ್ದರು.

    https://twitter.com/ANI/status/1647291564136308737

    ಉಮೇಶ್ ಪಾಲ್ ಹತ್ಯೆ ಪ್ರಕರಣದ (Umesh Pal Murder Case) ಪ್ರಮುಖ ಆರೋಪಿಗಳಾದ ಅಸಾದ್‌ ಮತ್ತು ಗುಲಾಂ ಅವರ ಬಗ್ಗೆ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಣೆಯಾಗಿತ್ತು. ನಾಪತ್ತೆಯಾಗಿದ್ದ ಈ ಇಬ್ಬರನ್ನು ಝಾನ್ಸಿಯಲ್ಲಿ ಎನ್‌ಕೌಂಟರ್‌ ಮಾಡಿ ಹತ್ಯೆ ಮಾಡಲಾಗಿದೆ.

    2005ರ ಬಹುಜನ ಸಮಾಜ ಪಾರ್ಟಿಯ (Bahujan Samaj Party) ಶಾಸಕ ರಾಜುಪಾಲ್ (Raju Pal) ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ (Umesh Pal) ಅವರನ್ನು ಫೆ.24 ರಂದು ಅತಿಕ್ ಅಹಮ್ಮದ್ ಗ್ಯಾಂಗ್ ಸದಸ್ಯರು ಗುಂಡಿಟ್ಟು ಹತ್ಯೆ ಮಾಡಿದ್ದರು. ಹತ್ಯೆಯಾದ ಇಬ್ಬರಿಂದ ಅತ್ಯಾಧುನಿಕ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು.

    ಈ ಹಿಂದೆ ಗುಜರಾತಿನ ಸಬರಮತಿ (Sabarmati) ಜೈಲಿನಿಂದ ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ಗೆ (Prayagraj) ಕರೆದೊಯ್ಯುವ ವೇಳೆ ಪತ್ರಕರ್ತರು ಜೀವ ಭಯವಿದೆಯೇ ಎಂದು ಕೇಳಿದ್ದರು. ಈ ಪ್ರಶ್ನೆಗೆ ಅತಿಕ್ ನ್ಯಾಯಾಲಯಕ್ಕೆ ಕರೆದೊಯ್ಯುವುದು ಪೊಲೀಸರು ನನ್ನನ್ನು ಕೊಲ್ಲಲು ಇರುವ ನೆಪವಾಗಿದೆ ಎಂದಿದ್ದ.

    2005ರ ಬಹುಜನ ಸಮಾಜ ಪಾರ್ಟಿಯ (Bahujan Samaj Party) ಶಾಸಕ ರಾಜುಪಾಲ್ (Raju Pal) ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ (Umesh Pal) ಅವರನ್ನು ಫೆ.24 ರಂದು ಅತಿಕ್ ಅಹಮ್ಮದ್ ಗ್ಯಾಂಗ್ ಸದಸ್ಯರು ಗುಂಡಿಟ್ಟು ಹತ್ಯೆ ಮಾಡಿದ್ದರು.  ಹತ್ಯೆಯಾದ ಇಬ್ಬರಿಂದ ಅತ್ಯಾಧುನಿಕ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು.

    ಏನಿದು ಪ್ರಕರಣ?
    2005ರಲ್ಲಿ ಅಲಹಾಬಾದ್ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ನಾಯಕ ರಾಜು ಪಾಲ್ ಗೆದ್ದಿದ್ದರು. ಇದಾದ 1 ತಿಂಗಳಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ಫೆ.24 ರಂದು ಉಮೇಶ್ ಪಾಲ್ ಅವರನ್ನು ಪ್ರಯಾಗ್‌ರಾಜ್‌ನಲ್ಲಿರುವ ಅವರ ನಿವಾಸದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಕೇಸ್ – ಮತ್ತೊಂದು ಎನ್‌ಕೌಂಟರ್‌ಗೆ ಗುಂಡು ಹಾರಿಸಿದ್ದ ವ್ಯಕ್ತಿಯೂ ಸಾವು

    ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 40 ಜನರನ್ನು ಆರೋಪಿಗಳೆಂದು ಪೊಲೀಸರು ಹೆಸರಿಸಿದ್ದಾರೆ. ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತಿಕ್ ಅಹ್ಮದ್, ಆತನ ಸಹೋದರ ಮತ್ತು ಮಾಜಿ ಶಾಸಕ ಅಶ್ರಫ್ ರಾಜು ಪಾಲ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದು ಇವರಿಬ್ಬರೂ ಜೈಲಿನಲ್ಲಿದ್ದರು.

  • ಉಮೇಶ್ ಪಾಲ್ ಹತ್ಯೆ ಕೇಸ್‌ – ಗ್ಯಾಂಗ್‌ ಸ್ಟಾರ್‌ ಅತಿಕ್‌ ಪುತ್ರ ಎನ್‌ಕೌಂಟರ್‌ಗೆ ಬಲಿ

    ಉಮೇಶ್ ಪಾಲ್ ಹತ್ಯೆ ಕೇಸ್‌ – ಗ್ಯಾಂಗ್‌ ಸ್ಟಾರ್‌ ಅತಿಕ್‌ ಪುತ್ರ ಎನ್‌ಕೌಂಟರ್‌ಗೆ ಬಲಿ

    ಲಕ್ನೋ: ಮಾಜಿ ಸಂಸದ, ಗ್ಯಾಂಗ್‌ ಸ್ಟಾರ್‌ ಅತಿಕ್‌ ಅಹ್ಮದ್‌ (Atiq Ahmed) ಪುತ್ರ ಅಸಾದ್‌ (Asad)  ಉತ್ತರ ಪ್ರದೇಶ (Uttar pradesh) ಪೊಲೀಸರ ಎನ್‌ಕೌಂಟರ್‌ಗೆ (Encounter) ಬಲಿಯಾಗಿದ್ದಾನೆ.

    ಉಮೇಶ್ ಪಾಲ್ ಹತ್ಯೆ ಪ್ರಕರಣದ ( Umesh Pal Murder Case ) ಪ್ರಮುಖ ಆರೋಪಿಗಳಾದ ಅಸಾದ್‌ ಮತ್ತು ಗುಲಾಂ ತಲೆಗೆ 5 ಲಕ್ಷ ರೂ. ಬಹುಮಾನ ಘೋಷಣೆಯಾಗಿತ್ತು. ನಾಪತ್ತೆಯಾಗಿದ್ದ ಈ ಇಬ್ಬರನ್ನು ಇಂದು ಝಾನ್ಸಿಯಲ್ಲಿ ಎನ್‌ಕೌಂಟರ್‌ ಮಾಡಿ ಹತ್ಯೆ ಮಾಡಲಾಗಿದೆ.

    2005ರ ಬಹುಜನ ಸಮಾಜ ಪಾರ್ಟಿಯ (Bahujan Samaj Party) ಶಾಸಕ ರಾಜುಪಾಲ್ (Raju Pal) ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ (Umesh Pal) ಅವರನ್ನು ಫೆ.24 ರಂದು ಅತಿಕ್ ಅಹಮ್ಮದ್ ಗ್ಯಾಂಗ್ ಸದಸ್ಯರು ಗುಂಡಿಟ್ಟು ಹತ್ಯೆ ಮಾಡಿದ್ದರು.

    ಹತ್ಯೆಯಾದ ಇಬ್ಬರಿಂದ ಅತ್ಯಾಧುನಿಕ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಯುಪಿ ಪೊಲೀಸರಿಂದ ಹತ್ಯೆಯಾಗುವ ಭಯವಿದೆ – ಬಂಧನದಲ್ಲಿರುವ ಮಾಜಿ ಸಂಸದ ಅತಿಕ್ ಅಹಮ್ಮದ್

    ಏನಿದು ಪ್ರಕರಣ?
    2005ರಲ್ಲಿ ಅಲಹಾಬಾದ್ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ನಾಯಕ ರಾಜು ಪಾಲ್ ಗೆದ್ದಿದ್ದರು. ಇದಾದ 1 ತಿಂಗಳಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ಫೆ.24 ರಂದು ಉಮೇಶ್ ಪಾಲ್ ಅವರನ್ನು ಪ್ರಯಾಗ್‌ರಾಜ್‌ನಲ್ಲಿರುವ ಅವರ ನಿವಾಸದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಕೇಸ್ – ಮತ್ತೊಂದು ಎನ್‌ಕೌಂಟರ್‌ಗೆ ಗುಂಡು ಹಾರಿಸಿದ್ದ ವ್ಯಕ್ತಿಯೂ ಸಾವು

    ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 40 ಜನರನ್ನು ಆರೋಪಿಗಳೆಂದು ಪೊಲೀಸರು ಹೆಸರಿಸಿದ್ದಾರೆ. ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತಿಕ್ ಅಹ್ಮದ್, ಆತನ ಸಹೋದರ ಮತ್ತು ಮಾಜಿ ಶಾಸಕ ಅಶ್ರಫ್ ರಾಜು ಪಾಲ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ. ಇವರಿಬ್ಬರೂ ಸದ್ಯ ಜೈಲಿನಲ್ಲಿದ್ದಾರೆ.

    ಉಮೇಶ್ ಪಾಲ್ ಅವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ ಮಾಡಿ ಹತ್ಯೆ ಮಾಡಿದ್ದರು.

  • ಗ್ಯಾಂಗ್‍ಸ್ಟರ್ ಅತೀಕ್‍ನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ಬೆಂಗಾವಲು ವಾಹನಕ್ಕೆ ಹಸು ಡಿಕ್ಕಿ

    ಗ್ಯಾಂಗ್‍ಸ್ಟರ್ ಅತೀಕ್‍ನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ಬೆಂಗಾವಲು ವಾಹನಕ್ಕೆ ಹಸು ಡಿಕ್ಕಿ

    ಲಕ್ನೋ: ಗ್ಯಾಂಗ್‍ಸ್ಟರ್ ಹಾಗೂ ರಾಜಕಾರಣಿ ಅತಿಕ್ ಅಹ್ಮದ್‍ನನ್ನು (Atiq Ahmed) ಉತ್ತರ ಪ್ರದೇಶಕ್ಕೆ (Uttar Pradesh) ಸ್ಥಳಾಂತರಿಸುವಾಗ ಬೆಂಗಾವಲು ವಾಹನಕ್ಕೆ (Vehicle) ಹಸುವೊಂದು (Cow) ಡಿಕ್ಕಿ ಹೊಡೆದ ಘಟನೆ ನಡೆದಿದೆ.

    ಉತ್ತರ ಪ್ರದೇಶದ ಶಿವಪುರಿಯಲ್ಲಿ ಬೆಂಗಾವಲು ಪಡೆ ಪ್ರಯೋಜ್‍ರಾಜ್‍ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅಪಘಾತದ ನಂತರ ಹಸು ಸ್ಥಳದಲ್ಲೇ ಸಾವನ್ನಪ್ಪಿದೆ.

    ಅತಿಕ್ ಅಹ್ಮದ್ ಅವರನ್ನು ಗುಜರಾತ್‍ನ ಸಬರಮತಿ ಜೈಲಿನಿಂದ ಹೊರಗೆ ಕರೆದೊಯ್ಯಲಾಯಿತು. ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳ ನಡುವೆ ಸೋಮವಾರ ಸಂಜೆಯೊಳಗೆ ಪ್ರಯಾಗ್‍ರಾಜ್ ತಲುಪಲಿದೆ.

    ಅತಿಕ್ ಅಹ್ಮದ್‍ನ ಜೈಲಿನಲ್ಲಿದ್ದಾಗ ರಿಯಲ್ ಎಸ್ಟೇಟ್ ಉದ್ಯಮಿ ಮೋಹಿತ್ ಜೈಸ್ವಾಲ್ ಅವರನ್ನು ಅಪಹರಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ʻಫುಟ್ಬಾಲ್ʼ ಚಿಹ್ನೆ ತೆಗೆದುಕೊಂಡ ಕಥೆ ವಿವರಿಸಿದ ಜನಾರ್ದನ ರೆಡ್ಡಿ

    ಇತ್ತೀಚೆಗೆ ಉಮೇಶ್ ಪಾಲ್ ಹತ್ಯೆ ಪ್ರಕರಣ ಸೇರಿದಂತೆ 100ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಈತನ ಹೆಸರಿದೆ. ಈ ವರ್ಷ ಫೆಬ್ರವರಿ 24 ರಂದು ಪ್ರಯಾಗ್‍ರಾಜ್‍ನಲ್ಲಿರುವ ಅವರ ನಿವಾಸದ ಹೊರಗೆ ಉಮೇಶ್ ಪಾಲ್‍ನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇದನ್ನೂ ಓದಿ: ಮಾಡಾಳ್‌ ವಿರೂಪಾಕ್ಷಪ್ಪ ಜಾಮೀನು ಅರ್ಜಿ ವಜಾ: ಯಾವುದೇ ಕ್ಷಣದಲ್ಲಿ ಬಂಧನ