Tag: ಅಣ್ಣಾಸಾಹೇಬ ಜೊಲ್ಲೆ

  • DCC Bank Election|  ಲಿಂಗಾಯತ ನಾಯಕರ ಸಭೆಗೆ ಜಾರಕಿಹೊಳಿ ಬ್ರದರ್ಸ್‌ ಚೆಕ್‌ಮೇಟ್!

    DCC Bank Election| ಲಿಂಗಾಯತ ನಾಯಕರ ಸಭೆಗೆ ಜಾರಕಿಹೊಳಿ ಬ್ರದರ್ಸ್‌ ಚೆಕ್‌ಮೇಟ್!

    ಚಿಕ್ಕೋಡಿ: ಡಿಸಿಸಿ ಬ್ಯಾಂಕ್ ಚುನಾವಣೆ (Belagavi DCC Bank) ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಜಾರಕಿಹೊಳಿ ಸಹೋದರರನ್ನು ಬದಿಗಿಟ್ಟು ಡಿಸಿಸಿ ಬ್ಯಾಂಕ್ ಹತೋಟಿಗೆ ಪಡೆಯುವ ಬೆಳಗಾವಿ ಜಿಲ್ಲೆಯ ಪಕ್ಷಾತೀತ ಲಿಂಗಾಯತ ನಾಯಕರ ಪ್ಲಾನ್ ಫ್ಲಾಪ್ ಮಾಡುವಲ್ಲಿ ಜಾರಕಿಹೊಳಿ ಸಹೋದರರು (Jarkiholi Brothers) ಯಶಸ್ವಿಯಾಗಿದ್ದಾರೆ.

    ಲಿಂಗಾಯತ ನಾಯಕರ ಸಭೆಗೆ (Lingayat Leaders Meeting) ಜಾರಕಿಹೊಳಿ ಬ್ರದರ್ಸ್‌ ಚೆಕ್ ಮೇಟ್ ನೀಡಿದ್ದು ಕೊಲ್ಲಾಪೂರ ಮಠವೊಂದರಲ್ಲಿ ನಡೆದ ಬೆಳಗಾವಿ ಲಿಂಗಾಯತ ನಾಯಕರ ಸಭೆ ಬಹುತೇಕ ವಿಫಲವಾದಂತಾಗಿದೆ. ಲಿಂಗಾಯತ ನಾಯಕರ ಸಭೆ ಬೆನ್ನಲ್ಲೇ ಲಿಂಗಾಯತ ಮುಖಂಡ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಜೊತೆ ಜಾರಕಿಹೊಳಿ‌ ಸಹೋದರರು ಸಂಧಾನ ಮಾಡಿಕೊಂಡಿದ್ದಾರೆ.  ಇದನ್ನೂ ಓದಿ: ರಾಹುಲ್ ಗಾಂಧಿ ಆರೋಪ ನಿಜ, ಬೆಂ.ಗ್ರಾಮಾಂತರ ಕ್ಷೇತ್ರದ ಮತದಾನದಲ್ಲೂ ಗೋಲ್ಮಾಲ್ ನಡೆದಿದೆ ಡಿಕೆಶಿ

    ಚಿಕ್ಕೋಡಿ ತಾಲೂಕಿನ ಎಕ್ಸಂಬಾ ಪಟ್ಟಣದಲ್ಲಿರುವ ಅಣ್ಣಾಸಾಹೇಬ ಜೊಲ್ಲೆ (Annasaheb Jolle) ಮಾಲೀಕತ್ವದ ಬ್ಯಾಂಕಿನಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಜೊತೆಗೆ ಬಾಲಚಂದ್ರ ಜಾರಕಿಹೊಳಿ‌ ಸಭೆ ನಡೆಸಿದ್ದಾರೆ. ಸಚಿವ ಸತೀಶ ಜಾರಕಿಹೊಳಿ, ಶಾಸಕ ರಮೇಶ ಜಾರಕಿಹೊಳಿ, ಲಕ್ಷ್ಮಣ ಸವದಿ, ಪ್ರಭಾಕರ ಕೋರೆ, ಬಾಲಚಂದ್ರ ಜಾರಕಿಹೊಳಿ‌, ಅಣ್ಣಾಸಾಹೇಬ ಜೊಲ್ಲೆ ನೇತೃತ್ವದಲ್ಲಿ ಚುನಾವಣೆ ನಡೆಸಲು ಸಭೆಯಲ್ಲಿ ತೀರ್ಮಾನಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.  ಇದನ್ನೂ ಓದಿ: ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತೆ ಎಂದು ನಂಬಿದ್ದೇನೆ: ರಮ್ಯಾ

    ಎಲ್ಲ ಮುಖಂಡರ ಸೇರಿ ಸಮಿತಿ ಮಾಡಿ ಚುನಾವಣೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು ಕತ್ತಿ ಕುಟುಂಬ ಹೊರಗಿಟ್ಟು ಸಮಿತಿ ರಚನೆ ಮಾಡಲು ತಯಾರಿ ನಡೆಸಲಾಗುತ್ತಿದೆ.

  • ದೇಶ ಕಾಯುವ ಯೋಧರಿಂದ್ಲೇ ನಾವು ಸುರಕ್ಷಿತ- ಮೃತ ಸೈನಿಕರ ಕುಟುಂಬಗಳಿಗೆ ಜೊಲ್ಲೆ ಸಾಂತ್ವನ

    ದೇಶ ಕಾಯುವ ಯೋಧರಿಂದ್ಲೇ ನಾವು ಸುರಕ್ಷಿತ- ಮೃತ ಸೈನಿಕರ ಕುಟುಂಬಗಳಿಗೆ ಜೊಲ್ಲೆ ಸಾಂತ್ವನ

    ಚಿಕ್ಕೋಡಿ (ಬೆಳಗಾವಿ): ದೇಶ ಕಾಯುವ ಯೋಧರಿಂದಲೇ ನಮ್ಮ ದೇಶ ಸುರಕ್ಷಿತವಾಗಿದ್ದು, ಅವರಿಂದಲೇ ನಾವೆಲ್ಲ ನಿರಾಳವಾಗಿ ಜೀವನ ಸಾಗಿಸುತ್ತಿದ್ದೇವೆ ಎಂದು ಚಿಕ್ಕೋಡಿ ಲೋಕಸಭಾ ಸಂಸದ ಅಣ್ಣಾಸಾಹೇಬ ಜೊಲ್ಲೆ (Annasaheba Jolle) ಹೇಳಿದರು.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವಾಗಲೇ ಅನಾರೋಗ್ಯದಿಂದ ಸಾವನ್ನಪ್ಪಿದ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಯೋಧ (Soldier) ಶಿವಾನಂದ ಶಿರಗಾಂವಿ ಹಾಗೂ ಬೋರಗಲ್ ಗ್ರಾಮದ ಯೋಧ ಕೆಂಪಣ್ಣ ಚೌಗಲಾ ಅವರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಇದನ್ನೂ ಓದಿ: 30 ಸಾವಿರ ವಾಟ್ಸಾಪ್ ಉಸ್ತುವಾರಿಗಳ ನೇಮಕ – ಗುಜರಾತ್‍ನಲ್ಲಿ ಹೇಗಿದೆ ಬಿಜೆಪಿ ಸೋಶಿಯಲ್ ಮೀಡಿಯಾ ಮ್ಯಾನೇಜ್ಮೆಂಟ್?

    ಒಂದೇ ದಿನ ಎರಡು ಕುಟುಂಬಗಳ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದ ಸಂಸದ ಜೊಲ್ಲೆ ಯೋಧರನ್ನ ಕಳೆದುಕೊಂಡಿರುವುದು ಕುಟುಂಬಸ್ಥರಿಗೆ ಅಷ್ಟೇ ನೋವು ತಂದಿಲ್ಲ. ನನ್ನನ್ನ ಸೇರಿ ಇಡೀ ಗ್ರಾಮವೇ ದುಃಖದಲ್ಲಿದೆ. ಯೋಧರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ನಿಮ್ಮ ನೋವಿನಲ್ಲಿ ನಾವು ಭಾಗಿಯಾಗಿದ್ದೇವೆ ಎಂದರು.

    ಯೋಧರ ಕುಟುಂಬಗಳಿಗೆ ಯಾವುದೇ ತೊಂದರೆಗಳಿದ್ದರೆ ನಾನು ಸಹಾಯ ಮಾಡಲು ಸಿದ್ಧ ಎಂದರು. ಈ ಸಂದರ್ಭದಲ್ಲಿ ಬಿಜೆಪಿ (BJP) ಮುಖಂಡರಾದ ಶಶಿಕಾಂತ ನಾಯಿಕ, ರವಿ ಹಂಜಿ, ಪರಗೌಡ ಪಾಟೀಲ, ಮಹಾವೀರ ಭಾಗಿ, ಚಿದಾನಂದ ಕಿಲ್ಲೇದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕೊಟ್ಟ ಮಾತಿನಂತೆ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಂಡ ಅಣ್ಣಾಸಾಹೇಬ ಜೊಲ್ಲೆ

    ಕೊಟ್ಟ ಮಾತಿನಂತೆ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಂಡ ಅಣ್ಣಾಸಾಹೇಬ ಜೊಲ್ಲೆ

    ಚಿಕ್ಕೋಡಿ: ಕೊಟ್ಟ ಮಾತಿನಂತೆ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಚಿಕ್ಕೋಡಿ ಲೋಕಸಭೆ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಒತ್ತು ನೀಡಿದ್ದಾರೆ.

    ಲೋಕಸಭಾ ವ್ಯಾಪ್ತಿಯ ಶಮನೇವಾಡಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಮಂಜೂರಾದ ಸುಮಾರು 80 ಲಕ್ಷ ರೂ. ಮೊತ್ತದಲ್ಲಿ ಚಿಕ್ಕೋಡಿ-ಇಂಚಲಕರಂಜಿ ರಸ್ತೆಯಿಂದ ಶಮನೇವಾಡಿ ಗ್ರಾಮದವರೆಗೆ 1.5 ಕಿ.ಮೀ. ರಸ್ತೆ ಅಗಲೀಕರಣ ಮತ್ತು ಸುಧಾರಣಾ ಕಾಮಗಾರಿಗಳಿಗೆ ಅಣ್ಣಾಸಾಹೇಬ ಜೊಲ್ಲೆಯವರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಭಾಗದ ಜನರ ಮನವಿಗೆ ಸ್ಪಂದಿಸಿ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ರಸ್ತೆಗಳನ್ನು ಅಭಿವೃದ್ಧಿ ಮಾಡುತ್ತಿದ್ದೇವೆ. ಇದೇ ರೀತಿ ಮುಂದಿನ ದಿನಗಳಲ್ಲಿ ಕ್ಷೇತ್ರದ ಮತ್ತಷ್ಟು ರಸ್ತೆಗಳಲ್ಲಿ ಪ್ರಗತಿ ಕಾರ್ಯ ಮಾಡಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ವಸಿಷ್ಠರೂ ಅಲ್ಲ, ವಿಶ್ವಾಮಿತ್ರನೂ ಅಲ್ಲ: ಸಿ.ಟಿ.ರವಿ

    ಈ ವೇಳೆ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಜಯಕುಮಾರ ಖೋತ, ಅಣ್ಣಾಸಾಹೇಬ ಭೆಂಡವಾಡೆ, ಜಯಕುಮಾರ ಹೆರಗೆ, ಜಿತೇಂದ್ರ ಖೋತ, ಪಿಂಟು ಖೋತ, ರವಿ ಸಾವಜಿ, ಭರತ ಖೋತ, ಅಭಿಷೇಕ ಖೋತ, ಮಂಜು ಕಾಂಬಳೆ, ಸಂಜನಾ ಕಾಂಬಳೆ, ಶ್ರೀ ಮಹಾವೀರ ಪೂಜಾರಿ, ಮಾಳಪ್ಪ ಗಾವಡೆ, ಅಣ್ಣಾಸಾಬ ತಾರದಾಳೆ, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಇದನ್ನೂ ಓದಿ: 8 ಲಕ್ಷಕ್ಕೆ ಹೆಣ್ಣು ಮಕ್ಕಳನ್ನು ಮಾರಾಟ ಮಾಡಿದ ತಂದೆ ಅರೆಸ್ಟ್

  • ಜೊಲ್ಲೆ ದಂಪತಿ ವಿರುದ್ಧ ಹರಿಹಾಯ್ದ ಪ್ರಕಾಶ್ ಹುಕ್ಕೇರಿ

    ಜೊಲ್ಲೆ ದಂಪತಿ ವಿರುದ್ಧ ಹರಿಹಾಯ್ದ ಪ್ರಕಾಶ್ ಹುಕ್ಕೇರಿ

    ಬೆಳಗಾವಿ: ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಸದ ಅಣ್ಣಾಸಾಹೇಬ ಜೊಲ್ಲೆ ಚುನಾವಣೆಯಲ್ಲಿ ಎಲ್ಲಿಯೂ ಸಹ ಪ್ರಚಾರದಲ್ಲಿ ಭಾಗಿಯಾಗಿಲ್ಲ. ಕೇವಲ ಯಕ್ಸಂಬಾ ಹಾಗೂ ಬೋರಗಾಂವ ಪಟ್ಟಣ ಪಂಚಾಯ್ತಿಗೆ ಮಾತ್ರ ಒತ್ತು ನೀಡಿದ್ದಾರೆ. ಆದರೂ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಸೋತಿರುವುದು ದುರ್ದೈವ. ಬೋರಗಾಂವ ಪಟ್ಟಣ ಪಂಚಾಯ್ತಿಯಲ್ಲಿ ಒಂದು ಸ್ಥಾನ ಆಯ್ಕೆಯಾಗಿಲ್ಲ. ಯಕ್ಸಂಬಾ ಪಟ್ಟಣ ಪಂಚಾಯ್ತಿಯಲ್ಲಿ ಕೇವಲ ಒಬ್ಬರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ ಎಂದು ಸಿಡಿದರು. ಇದನ್ನೂ ಓದಿ: ನಾಳೆಯ ಕರ್ನಾಟಕ ಬಂದ್ ವಾಪಸ್

    ಸಂಸದ ಹಾಗೂ ಸಚಿವೆ ತಮ್ಮ ಕಾರ್ಯ ವೈಖರಿ ಬಗ್ಗೆ ಚಿಂತನೆ ಮಾಡಬೇಕು. ಅವರ ಹೆಸರು ತೆಗೆದುಕೊಳ್ಳಲು ನನಗೆ ಮರ್ಯಾದೆ ಅನಿಸುವುದಿಲ್ಲ. ಜೊಲ್ಲೆ ದಂಪತಿ ಕ್ಷೇತ್ರದ ಜನರಿಂದ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಜನವರಿ 1 ರಿಂದ ಜಿಎಸ್‍ಟಿ ನಿಯಮಗಳ ಬದಲಾವಣೆ – ಹೀಗಿದೆ ಮುಖ್ಯ ಬೆಲೆ ಏರಿಕೆಗಳ ಪಟ್ಟಿ

  • ಆಪರೇಷನ್ ಕಮಲ ಸಕ್ಸಸ್ – ಹುಕ್ಕೇರಿ ಪುರಸಭೆ ಬಿಜೆಪಿ ಮಡಿಲಿಗೆ

    ಆಪರೇಷನ್ ಕಮಲ ಸಕ್ಸಸ್ – ಹುಕ್ಕೇರಿ ಪುರಸಭೆ ಬಿಜೆಪಿ ಮಡಿಲಿಗೆ

    – ಕತ್ತಿ ಬದ್ರರ್ಸ್ ಪ್ಲಾನ್ ಯಶಸ್ವಿ
    – 12 ರಲ್ಲಿ 11 ‘ಕೈ’ ಸದಸ್ಯರು ಬಿಜೆಪಿ ಸೇರ್ಪಡೆ

    ಬೆಳಗಾವಿ/ಚಿಕ್ಕೋಡಿ: ಜಿಲ್ಲೆಯ ಹುಕ್ಕೇರಿ ಪುರಸಭೆಗೆ ಇಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಮುಖಭಂಗವಾಗಿದೆ. ಸ್ಥಳೀಯ ಮಟ್ಟದಲ್ಲಿ ಆಪರೇಷನ್ ಕಮಲದ ಮೂಲಕ ಹುಕ್ಕೇರಿ ಪುರಸಭೆಯನ್ನ ಬಿಜೆಪಿ ವಶಕ್ಕೆ ಪಡೆದಿದೆ.

    ಹುಕ್ಕೇರಿ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಒಟ್ಟು 23 ಸದಸ್ಯ ಬಲದ ಪುರಸಭೆಗೆ ಕಾಂಗ್ರೆಸ್ ನಿಂದ 12, ಬಿಜೆಪಿಯಿಂದ 8 ಹಾಗೂ 3 ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆದರೆ ಚುನಾವಣೆ ಕೊನೆ ಗಳಿಗೆಯಲ್ಲಿ ಭಾರೀ ಹೈಡ್ರಾಮಾ ನಡದು ಹುಕ್ಕೇರಿ ಬಿಜೆಪಿ ಶಾಸಕ ಉಮೇಶ್ ಕತ್ತಿ ಮಾಸ್ಟರ್ ಪ್ಲಾನ್ ಯಶಸ್ವಿಯಾಯಿತು.

    ಕೊನೆ ಕ್ಷಣದಲ್ಲಿ ಕಾಂಗ್ರೆಸ್ ತೊರೆದು ನಾಲ್ಕು ಜನ ಪುರಸಭೆ ಸದಸ್ಯರು ಬಿಜೆಪಿ ಸೇರಿದ್ದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಾಲಾಯಿತು. ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕ ಉಮೇಶ್ ಕತ್ತಿ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಬಿಜೆಪಿ ಸೇರ್ಪಡೆಯಾದರು.

    ಕಾಂಗ್ರೆಸ್ ತೊರೆದು ಬಂದ ಅಣ್ಣಪ್ಪಾ ಪಾಟೀಲರಿಗೆ ಅಧ್ಯಕ್ಷ ಸ್ಥಾನ, ಪಕ್ಷೇತರ ಅಭ್ಯರ್ಥಿ ಆನಂಸ್ ಗಂಧ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಬಿಜೆಪಿ ಅಭ್ಯರ್ಥಿ ಅಣ್ಣಪ್ಪಾ ಪಾಟೀಲ್ ಅವರಿಗೆ 23 ಮತಗಳು ಚಲಾವಣೆಗೆಯಾಗುವ ಮೂಲಕ ಕಾಂಗ್ರೆಸ್ ಗೆ ಭಾರಿ ಮುಖಭಂಗವಾಯಿತು. ಚುನಾವಣೆಯಲ್ಲಿ 12 ಜನ ಕಾಂಗ್ರೆಸ್ ಸದಸ್ಯರ ಪೈಕಿ 11 ಜನ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿ ಎಲ್ಲರೂ ಬಿಜೆಪಿ ಸೇರ್ಪಡೆಯಾದರು.

    ಈ ವೇಳೆ ಮಾತನಾಡಿದ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಉಮೇಶ್ ಕತ್ತಿ, ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ನ ನಾಲ್ವರು ಸದಸ್ಯರು ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್, ಬಿಜೆಪಿ ಎಲ್ಲ ಸದಸ್ಯರು ಕೂಡಿಕೊಂಡು ಹುಕ್ಕೇರಿ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುವುದು ಎಂದರು.

  • ಚಿಕ್ಕೋಡಿಯಲ್ಲಿ ಹುಕ್ಕೇರಿಗೆ ಸೋಲು – ಅಣ್ಣಾಸಾಹೇಬ ಜೊಲ್ಲೆ ಭರ್ಜರಿ ಗೆಲುವು

    ಚಿಕ್ಕೋಡಿಯಲ್ಲಿ ಹುಕ್ಕೇರಿಗೆ ಸೋಲು – ಅಣ್ಣಾಸಾಹೇಬ ಜೊಲ್ಲೆ ಭರ್ಜರಿ ಗೆಲುವು

    ಬೆಳಗಾವಿ: ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಬ್ಬರ ಜೋರಾಗಿದೆ. ಮೈತ್ರಿ ಅಭ್ಯರ್ಥಿ, ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ ವಿರುದ್ಧ ಅಣ್ಣಾಸಾಹೇಬ ಜೊಲ್ಲೆ 1,16,361 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.

    ಅಣ್ಣಾಸಾಹೇಬ ಜೊಲ್ಲೆ 6,41,232 ಮತಗಳನ್ನು ಪಡೆದರೆ, ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಪ್ರಮೋದ್ ಮಧ್ವರಾಜ್ 5,24,871 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

    ಬಿಜೆಪಿ ಗೆದ್ದಿದ್ದು ಹೇಗೆ?
    ಚಿಕ್ಕೋಡಿಯಲ್ಲಿ ಪ್ರಧಾನಿ ಮೋದಿ ಅಲೆ ಜೋರಾಗಿದೆ. ನಿಪ್ಪಾಣಿ ಶಾಶಕಿ ಹಾಗೂ ಪತ್ನಿ ಶಶಿಕಲಾ ಜೊಲ್ಲೆ, ಅಣ್ಣಾಜೊಲ್ಲೆಗೆ ಬಲವಾಗಿದ್ದರು. ಪಕ್ಷದಲ್ಲಿನ ಕತ್ತಿ ಸಹೋದರರ ವಿರೋಧಿಗಳ ಒಗ್ಗಟ್ಟು ಹಾಗೂ ಕಾಂಗ್ರೆಸ್‍ನ ಕೆಲ ಮುಖಂಡರ ಅಸಮಧಾನದಿಂದ ಅಣ್ಣಾಸಾಹೇಬ್ ಗೆಲುವು ಕಂಡಿದ್ದಾರೆ.

    ಪ್ರಕಾಶ್ ಹುಕ್ಕೇರಿ ಸೋತಿದ್ದು ಯಾಕೆ?
    ತಮ್ಮ ಮಗನ ಕ್ಷೇತ್ರದಲ್ಲಿ ಮಾತ್ರ ಅಭಿವೃದ್ಧಿ ದೃಷ್ಟಿ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ರಾಜಕಾರಣದಲ್ಲಿ ಮುತ್ಸದಿಯಾದರೂ ಸಹ ಕ್ಷೇತ್ರ ಬಿಟ್ಟು ಇನ್ನು ಹೊರಬಂದಿರಲಿಲ್ಲ. ಚಿಕ್ಕೋಡಿಯಲ್ಲಿ ಇನ್ನೂ ಅಧಿಕೃತವಾಗಿ ಸಂಸದರ ಕಚೇರಿಯನ್ನು ಮಾಡಿಕೊಂಡಿಲ್ಲ. ಪ್ರಕಾಶ್ ಚಿಕ್ಕೋಡಿ ಬಿಟ್ಟು ಬೇರೆ ಮತಕ್ಷೇತ್ರಗಳತ್ತ ಗಮನ ಹರಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

    ಚಿಕ್ಕೋಡಿ ಲೋಕಸಭಾ ಅಭ್ಯರ್ಥಿಗಳ ಪರ ಕಾಂಗ್ರೆಸ್‍ನಿಂದ ರಾಹುಲ್ ಗಾಂಧಿ ಚಿಕ್ಕೋಡಿಗೆ ಬಂದು ಪ್ರಚಾರ ಮಾಡಿದ್ದರೆ, ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಪ್ರಧಾನಿ ಮೋದಿ ಚಿಕ್ಕೋಡಿಗೆ ಬಂದು ಪ್ರಚಾರ ಮಾಡಿದ್ದರು.

  • ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಫ್ಯಾಮಿಲಿ ವಾರ್

    ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಫ್ಯಾಮಿಲಿ ವಾರ್

    ಚಿಕ್ಕೋಡಿ/ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸದ್ಯಕ್ಕೆ ಫ್ಯಾಮಿಲಿ ವಾರ್ ಪ್ರಾರಂಭವಾಗಿದೆ. ಒಂದು ಕಡೆ ಅಪ್ಪ ಗೆಲ್ಲಬೇಕು ಅಂತ ಕಾಂಗ್ರೆಸ್ ಗಣೇಶ್ ಮತಯಾಚನೆ ಮಾಡುತ್ತಿದ್ದರೆ, ಇನ್ನೊಂದು ಕಡೆ ಪತಿ ಗೆಲ್ಲಬೇಕು ಎಂದು ಶಶಿಕಲಾ ಜೊಲ್ಲೆ ಪ್ರಚಾರ ಮಾಡುತ್ತಿದ್ದಾರೆ.

    ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮತ್ತು ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ರಾಜ್ಯದಲ್ಲಿ ಚಿಕ್ಕೋಡಿ ಮತಕ್ಷೇತ್ರ ಗಮನ ಸೆಳೆಯುತ್ತಿದೆ. ಯಾಕೆಂದರೆ ಇಲ್ಲಿರುವ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಯ ಹಿಂದೆ ನಿಂತು ಮನೆಯಲ್ಲಿನ ಎಂಎಲ್‍ಎಗಳು ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಸಂಸದ ಪ್ರಕಾಶ್ ಹುಕ್ಕೇರಿ ಪರವಾಗಿ ಮಗ ಗಣೇಶ್ ಹುಕ್ಕೇರಿ ಗ್ರಾಮ ಗ್ರಾಮಗಳನ್ನು ಸುತ್ತಿ ತಂದೆಯ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇತ್ತ ಬಿಜೆಪಿಯ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಪತ್ನಿ ಶಶಿಕಲಾ ಜೊಲ್ಲೆಯವರು ಕೂಡ ಪ್ರಚಾರ ಕಾರ್ಯ ಪ್ರಾರಂಭಿಸಿದ್ದಾರೆ.

    ಈ ಬಗ್ಗೆ ಶಾಸಕಿ ಶಶಿಕಲಾ ಜೊಲ್ಲೆ ಅವರಿಗೆ ಕೇಳಿದರೆ, ನನಗೆ ಹೆಗಲಿಗೆ ಹೆಗಲು ಕೊಟ್ಟು ಬೆಳೆಸಿದ ಪತಿ ಅಣ್ಣಾಸಾಹೇಬ ಜೊಲ್ಲೆ ಅವರ ಪರವಾಗಿ ಪ್ರಚಾರ ನಡೆಸಿದ್ದೇನೆ. ನಾನು ಹೆಂಡತಿಯಾಗಿಯೂ ಮತ್ತು ಪಕ್ಷದ ಒಬ್ಬ ಶಾಸಕಿಯಾಗಿಯೂ ಕೆಲಸ ಮಾಡುತ್ತಿದ್ದೇನೆ. ಅವರಿಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇತ್ತ ನಮ್ಮ ತಂದೆಯ ಹೆಗಲಿಗೆ ಹೆಗಲು ಕೊಟ್ಟು ದುಡಿದು ಅವರನ್ನ ಆರಿಸಿ ಮತ್ತೆ ಪಾರ್ಲಿಮೆಂಟ್‍ಗೆ ಕಳುಹಿಸುತ್ತೀನಿ ಎಂದು ಗಣೇಶ್ ಹುಕ್ಕೇರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಇನ್ನು ಕಳೆದ ಬಾರಿ ನಡೆದ ವಿಧಾನಸಭೆ ಚುಣಾವಣೆಯಲ್ಲಿಯೂ ಸಹ ಬೆಳಗಾವಿ ಜಿಲ್ಲೆಯ ಈ ಪ್ರತಿಷ್ಠಿತ ಎರಡು ಮನೆತನಗಳು ಎದುರಾಗಿದ್ದವು. ಆಗ ಶಾಸಕ ಪ್ರಕಾಶ್ ಹುಕ್ಕೇರಿ ವಿರುದ್ಧ ಅಣ್ಣಾಸಾಹೇಬ ಜೊಲ್ಲೆ ಎದುರಾಳಿಯಾಗಿ ಸ್ಪರ್ಧಿಸಿದ್ದರು. ಈಗ ಲೋಕಸಭೆ ಚುಣಾವಣೆಯಲ್ಲೂ ಸಹ ಅದೇ ರೀತಿಯ ವಾತಾವರಣ ಮುಂದುವರೆದಿದ್ದು, ಗಣೇಶ್ ಹುಕ್ಕೇರಿಯವರ ತಂದೆ ಸಂಸದ ಪ್ರಕಾಶ್ ಹುಕ್ಕೇರಿ ವಿರುದ್ಧ ಅಣ್ಣಾಸಾಹೇಬ ಜೊಲ್ಲೆ ಸೆಣಸಲು ರೆಡಿಯಾಗಿದ್ದಾರೆ.

  • ಯುಗಾದಿ ಹಬ್ಬದ ನಿಮಿತ್ತ ಜೊಲ್ಲೆ ದಂಪತಿ ಭರ್ಜರಿ ಪ್ರಚಾರ!

    ಯುಗಾದಿ ಹಬ್ಬದ ನಿಮಿತ್ತ ಜೊಲ್ಲೆ ದಂಪತಿ ಭರ್ಜರಿ ಪ್ರಚಾರ!

    ಬೆಳಗಾವಿ(ಚಿಕ್ಕೋಡಿ): ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಇಂದು ಭರ್ಜರಿ ಪ್ರಚಾರ ಆರಂಭಿಸಿದ್ದು, ಅವರಿಗೆ ಪತ್ನಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಕೂಡ ಯುಗಾದಿ ಹಬ್ಬದ ದಿನಂದಂದು ಸಾಥ್ ನೀಡಿದ್ದಾರೆ.

    ಭರ್ಜರಿ ಪ್ರಚಾರದ ನಡುವೆಯೇ ಯುಗಾದಿ ಹಬ್ಬದ ನಿಮಿತ್ತ ಇಂದು ಜೊಲ್ಲೆ ದಂಪತಿ ಟೆಂಪಲ್ ರನ್ ನಡೆಸಿದ್ದಾರೆ. ರಾಯಬಾಗ ತಾಲೂಕಿನ ಸುಪ್ರಸಿದ್ದ ಚಿಂಚಲಿ ಮಾಯಕ್ಕ ದೇವಿ ದೇವಾಲಯ, ಮುಗಳಖೋಡ ಮಠ, ನಿಡಸೋಷಿ ದುರದುಂಡೇಶ್ವರ ಮಠ ಹಾಗೂ ಅಲಕನೂರು ಅರಣ್ಯಸಿದ್ದೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಜೊಲ್ಲೆ ದಂಪತಿ ದರ್ಶನ ಪಡೆದರು.

    ಶಾಸಕ ಪಿ. ರಾಜೀವ್ ಹಾಗೂ ಕುಡಚಿ ಕ್ಷೇತ್ರದ ಮುಖಂಡರ ಮನೆಗಳಿಗೆ ಭೇಟಿ ನೀಡಿ, ಜೋಡಿಯಾಗಿ ಮತಯಾಚನೆ ನಡೆಸಿದರು. ಅಲ್ಲದೆ ಈ ಬಾರಿ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಕ್ಷೇತ್ರದ ಮತದಾರರ ಬಳಿ ಮನವಿ ಮಾಡಿಕೊಂಡರು.