Tag: ಅಣ್ಣಾವ್ರ ಕುಟುಂಬ

  • ಗಾಜನೂರಿನ ಅಣ್ಣಾವ್ರ ಮನೆಯಲ್ಲಿ ಶಿವಣ್ಣ ಜೊತೆ `ಬೈರಾಗಿ’ ಚಿತ್ರತಂಡ

    ಗಾಜನೂರಿನ ಅಣ್ಣಾವ್ರ ಮನೆಯಲ್ಲಿ ಶಿವಣ್ಣ ಜೊತೆ `ಬೈರಾಗಿ’ ಚಿತ್ರತಂಡ

    ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ ಸದ್ಯ `ಬೈರಾಗಿ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ತಮ್ಮ ಹುಟ್ಟೂರು ಗಾಜನೂರಿಗೆ ಶಿವಣ್ಣ ಮತ್ತು ಗೀತಾ ದಂಪತಿ ಭೇಟಿ ನೀಡಿದ್ದಾರೆ. ಶಿವಣ್ಣ ಜೊತೆ ‘ಬೈರಾಗಿ’ ಚಿತ್ರತಂಡ ಕೂಡ ಗಾಜನೂರಿಗೆ ಭೇಟಿ ಕೊಟ್ಟಿದ್ದಾರೆ.

    ಅಪ್ಪು ಅಗಲಿಕೆಯ ನಂತರ ಮತ್ತಷ್ಟು ಸಿನಿಮಾ ಕಾರ್ಯಗಳಲ್ಲಿ ಶಿವಣ್ಣ ಆಕ್ಟೀವ್ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳಿಗೆ ಶಿವಣ್ಣ ಓಕೆ ಅಂದಿದ್ದಾರೆ. ಸಿನಿಮಾ ಜತೆ ರಿಯಾಲಿಟಿ ಶೋಗೆ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ `ಬೈರಾಗಿ’ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಿರುವ ಶಿವಣ್ಣ ಮತ್ತು ಚಿತ್ರತಂಡ ಈಗ ಗಾಜನೂರಿಗೆ ಭೇಟಿ ನೀಡಿದ್ದು, ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೃಥ್ವಿ ಅಂಬರ್ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಸರ್ಜರಿಗಾಗಿ ಸುನೀಲ್ ಶೆಟ್ಟಿ ಪುತ್ರಿ ಜೊತೆ ಜರ್ಮನಿಗೆ ಹಾರಿದ ಕ್ರಿಕೆಟಿಗ ಕೆ.ಎಲ್ ರಾಹುಲ್

    `ಬೈರಾಗಿ’ ಚಿತ್ರದ ಲುಕ್, ಸಾಂಗ್‌ನಿಂದ ಮೋಡಿ ಮಾಡುತ್ತಿದ್ದು ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ. ಚಿತ್ರದಲ್ಲಿ ಶಿವಣ್ಣ ಜತೆ ಡಾಲಿ, ಪೃಥ್ವಿ ಅಂಬರ್, ಅಂಜಲಿ ನಟಿಸಿದ್ದಾರೆ.

    Live Tv