Tag: ಅಣ್ಣಾಥೆ

  • ಅಣ್ಣಾಥೆ ಚಿತ್ರತಂಡದಿಂದ ಎಸ್‍ಪಿಬಿ ಅಭಿಮಾನಿಗಳಿಗೆ ಸಿಹಿಸುದ್ದಿ

    ಅಣ್ಣಾಥೆ ಚಿತ್ರತಂಡದಿಂದ ಎಸ್‍ಪಿಬಿ ಅಭಿಮಾನಿಗಳಿಗೆ ಸಿಹಿಸುದ್ದಿ

    ಚೆನ್ನೈ: ದಿವಂಗತ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರ ಅಭಿಮಾನಿಗಳಿಗೆ ‘ಅಣ್ಣಾಥೆ’ ಸಿನಿಮಾ ತಂಡ ಸಿಹಿಸುದ್ದಿ ನೀಡಿದ್ದು, ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

    ಸನ್ ಪಿಕ್ಚರ್ಸ್ ಈ ಕುರಿತು ಟ್ಚಿಟರ್ ನಲ್ಲಿ, ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿದ ರಜನಿಕಾಂತ್ ಅಭಿನಯದ ‘ಅಣ್ಣಾಥೆ’ ಚಿತ್ರದ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದೇ ಅ.4 ರಂದು ಸಂಜೆ 6 ಗಂಟೆಗೆ ಎಸ್‍ಪಿಬಿ ಹಾಡನ್ನು ಬಿಡುಗಡೆ ಮಾಡಲಾಗುವುದು ಎಂದು ಟ್ಚೀಟ್ ಮಾಡುವ ಮೂಲಕ ಖಚಿತಪಡಿಸಿದೆ.  ಇದನ್ನೂ ಓದಿ: ಬೀದಿ ಹುಡುಗನ ಡ್ಯಾನ್ಸ್ ಗೆ ವಿಸ್ಮಯಗೊಂಡ ನೆಟ್ಟಿಗರು – ವೀಡಿಯೋ ವೈರಲ್

    ಈ ಹಾಡು ನಿಜಕ್ಕೂ ವಿಶೇಷವಾಗಿದೆ ಏಕೆಂದರೆ ಇದು ರಜನಿಕಾಂತ್ ಅಭಿನಯದ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರ ಕೊನೆಯ ಹಾಡು ಆಗಿದೆ. ಈ ಹಾಡನ್ನು ಡಿ ಇಮ್ಮಾನ್ ಸಂಯೋಜಿಸಿದ್ದಾರೆ. ಇದನ್ನು ಕಳೆದ ವಾರ ಎಸ್‍ಪಿಬಿಯ ಮೊದಲ ವರ್ಷದ ಪುಣ್ಯಸ್ಮರಣೆ ಸಂದರ್ಭದಲ್ಲಿ ಬಿಡುಗಡೆ ಮಾಡಬೇಕಿತ್ತು, ಆದರೆ ತಯಾರಕರು ಅದನ್ನು ಬಿಡುಗಡೆ ಮಾಡಿರಲಿಲ್ಲ.

    ಈ ಚಿತ್ರಕ್ಕೆ ಸಿರುತೈ ಶಿವ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರೀಕರಣವು ಅಂತಿಮ ಹಂತದಲ್ಲಿದೆ. ಈ ಚಿತ್ರವನ್ನು ದೀಪಾವಳಿಯಲ್ಲಿ ಬಿಡುಗಡೆ ಮಾಡಬೇಕೆಂದು ಚಿತ್ರತಂಡ ನಿರ್ಧರಿಸಿದೆ. ಬಹಳ ದಿನಗಳ ಬಳಿಕ ಸೂಪರ್ ಸ್ಟಾರ್ ರಜನಿ ಗ್ರಾಮೀಣ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಈ ಚಿತ್ರದಲ್ಲಿ ಹಳ್ಳಿಯ ಮುಖ್ಯಸ್ಥರಾಗಿ ನಟಿಸುತ್ತಿದ್ದಾರೆ. ಇದನ್ನೂ ಓದಿ: ಕೊಪ್ಪಳದಲ್ಲಿ ಮಧುಗಿರಿ ಮೋದಿ ಹುಚ್ಚಾಟ, ಎಫ್‍ಐಆರ್ ದಾಖಲು

    ಈ ಚಿತ್ರದಲ್ಲಿ ನಯನತಾರಾ, ಕೀರ್ತಿ ಸುರೇಶ್, ಖುಷ್ಬು, ಮೀನಾ, ಪ್ರಕಾಶ್ ರಾಜ್, ಸತೀಶ್ ಮತ್ತು ಸೂರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ.

  • ದರ್ಬಾರ್ ಫ್ಲಾಪ್ ಬಳಿಕ ಅಣ್ಣಾಥೆಗೆ ಸಜ್ಜಾದ ಸೂಪರ್ ಸ್ಟಾರ್

    ದರ್ಬಾರ್ ಫ್ಲಾಪ್ ಬಳಿಕ ಅಣ್ಣಾಥೆಗೆ ಸಜ್ಜಾದ ಸೂಪರ್ ಸ್ಟಾರ್

    ಚೆನ್ನೈ: ಬಹು ನಿರೀಕ್ಷಿತ ದರ್ಬಾರ್ ಸಿನಿಮಾ ಫ್ಲಾಪ್ ನಂತರ ಇದೀಗ ತಮ್ಮ 168ನೇ ಸಿನಿಮಾಗೆ ಸೂಪರ್ ಸ್ಟಾರ್ ರಜನಿಕಾಂತ್ ತಯಾರಾಗಿದ್ದು, ರಜನಿ ಅಭಿಮಾನಿಗಳಲ್ಲಿ ಇದೀಗ ಮತ್ತೆ ಮಂದಹಾಸ ಮೂಡಿದೆ. ದರ್ಬಾರ್ ಸಿನಿಮಾ ಫ್ಲಾಪ್ ಆಗಿದ್ದರಿಂದ ಪರಿಹಾರ ನೀಡಬೇಕೆಂದು ನಿರ್ಮಾಪಕರು ಗದ್ದಲ ಎಬ್ಬಿಸಿದ್ದರು. ಇದೆಲ್ಲದರ ಮಧ್ಯೆ ರಜನಿಕಾಂತ್ ತಮ್ಮ ಮುಂದಿನ ಸಿನಿಮಾಗೆ ಭರ್ಜರಿ ತಯಾರಿ ನಡೆಸಿದ್ದು, ಇದರ ಮೋಷನ್ ಪೋಸ್ಟರ್ ಇದೀಗ ಸದ್ದು ಮಾಡುತ್ತಿದೆ.

    ರಜನಿಕಾಂತ್ ಅವರ 168ನೇ ಸಿನಿಮಾದ ಟೈಟಲ್ ತುಂಬಾ ವಿಶಿಷ್ಟವಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸಿನಿಮಾಗೆ `ಅಣ್ಣಾಥೆ’ ಎಂದು ಹೆಸರಿಡಲಾಗಿದ್ದು, ಇದನ್ನು ಕೇಳಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಈ ಚಿತ್ರವನ್ನು `ಸನ್ ಪಿಕ್ಚರ್ಸ್’ ನಿರ್ಮಿಸುತ್ತಿದ್ದು, ಮೋಷನ್ ಪೋಸ್ಟರ್ ಮೂಲಕ ಶೀರ್ಷಿಕೆಯನ್ನು ಘೋಷಣೆ ಮಾಡಲಾಗಿದೆ. ತಮಿಳಿನ ಯಶಸ್ವಿ ನಿರ್ದೇಶಕ ಸಿರುಥೈ ಸಿವಾ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನೂ ವಿಶೇಷವೆಂದರೆ ಸಿವ ಮತ್ತು ರಜನಿ ಇದೇ ಮೊದಲ ಬಾರಿಗೆ ಸಿನಿಮಾಗಾಗಿ ಒಂದಾಗುತ್ತಿದ್ದು, ಇವರಿಬ್ಬರ ಕಾಂಬಿನೇಷನ್ ನಿಂದಲೇ ಚಿತ್ರ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ.

    ಈ ಸಿನಿಮಾದಲ್ಲಿ ನಯನತಾರಾ, ಖುಷ್ಬೂ, ಕೀರ್ತಿ ಸುರೇಶ್, ಪ್ರಕಾಶ್ ರಾಜ್, ಮೀನಾ, ಸೂರಿ ಸೇರಿದಂತೆ ಬಹುತಾರಾಗಣವಿದೆ. ಡಿ ಇಮಾನ್ ಮೊದಲ ಬಾರಿಗೆ ಸೂಪರ್ ಸ್ಟಾರ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಹಿರಿಯರಿಗೆ ಅಥವಾ ಪ್ರಭಾವಿ ವ್ಯಕ್ತಿಗಳಿಗೆ ತಮಿಳಿನಲ್ಲಿ `ಅಣ್ಣಾಥೆ’ ಎಂದು ಸಂಬೋಧಿಸುತ್ತಾರೆ. ಇದೇ ಹೆಸರನ್ನು ಸಿನಿಮಾಗೆ ಇಟ್ಟಿರುವುದರಿಂದ ರಜನಿ ಯಾವ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಸಿನಿಮಾದಲ್ಲಿ ಎಷ್ಟು ಪ್ರಭಾವಿ ವ್ಯಕ್ತಿಯಾಗಿರುತ್ತಾರೆ ಎಂಬುದು ಅಭಿಮಾನಿಗಹಳ ಕುತೂಹಲವಾಗಿದೆ.

    ಅಲ್ಲದೆ ಇದೊಂದು ಕೌಟುಂಬಿಕ ಸಿನಿಮಾ ಆಗಿದ್ದು, ಅಣ್ಣನ ಪಾತ್ರದಲ್ಲಿ ರಜನಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳ ಸಹ ಕೇಳಿಬರುತ್ತಿವೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಈ ಚಿತ್ರದಲ್ಲಿ ರಜನಿಕಾಂತ್ ಪುತ್ರಿಯಾಗಿ ನಟಿಸುತ್ತಾರೆ ಎಂಬ ಸುದ್ದಿಯೂ ಹಬ್ಬಿದೆ. ಆದರೆ ಈ ಕುರಿತು ಯಾವುದೇ ಗುಟ್ಟನ್ನು ಚಿತ್ರ ತಂಡ ಬಿಟ್ಟುಕೊಟ್ಟಿಲ್ಲ. ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಶೂಟಿಂಗ್‍ನತ್ತ ಚಿತ್ರ ತಂಡ ಮುಖ ಮಾಡಿದೆ.

    ದರ್ಬಾರ್ ಸಿನಿಮಾದಲ್ಲಿ ರಜನಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸಿದ್ದರು. ಈ ಚಿತ್ರದಲ್ಲಿ ಅಂತರಾಷ್ಟ್ರೀಯ ಡ್ರಗ್ಸ್ ದಂಧೆಕೋರ ರಜನಿ ಮಗಳನ್ನು ಸಾಯಿಸುತ್ತಾನೆ, ಇದಕ್ಕೆ ರಜನಿ ಪ್ರತಿಕಾರ ತೀರಿಸಿಕೊಳ್ಳುವುದು ಸಿನಿಮಾದ ಕಥೆಯಾಗಿತ್ತು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಇದೀಗ ಅಣಾಥೆ ಮೂಲಕ ಮತ್ತೆ ಅಬ್ಬರಿಸಲು ಸೂಪರ್ ಸ್ಟಾರ್ ತಯಾರಿ ನಡೆಸಿದ್ದಾರೆ. ದರ್ಬಾರ್‍ನಲ್ಲಿ ರಜನಿಕಾಂತ್ ಜೊತೆ ತೆರೆ ಹಂಚಿಕೊಂಡಿದ್ದ ನಟಿ ನಯನತಾರಾ ಅವರೇ ಅಣ್ಣಾಥೆ ಸಿನಿಮಾದಲ್ಲಿ ರಜನಿ ಜೊತೆಯಾಗಲಿದ್ದಾರಂತೆ.