Tag: ಅಣ್ಣಾತೆ

  • ಅಣ್ಣಾತೆ ಸಿನಿಮಾ ಯಶಸ್ಸಿಗಾಗಿ 1 ರೂ.ಗೆ ದೋಸೆ ಮಾರಿದ ಅಭಿಮಾನಿ!

    ಅಣ್ಣಾತೆ ಸಿನಿಮಾ ಯಶಸ್ಸಿಗಾಗಿ 1 ರೂ.ಗೆ ದೋಸೆ ಮಾರಿದ ಅಭಿಮಾನಿ!

    ಚೆನ್ನೈ: ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌ ಅಭಿನಯದ ಸಿನಿಮಾ “ಅಣ್ಣಾತೆ” ಗುರುವಾರ ತೆರೆಕಂಡಿದ್ದು, ಚಿತ್ರ ಯಶಸ್ಸು ಕಾಣಲೆಂದು ಪ್ರಾರ್ಥಿಸಿ ಅಭಿಮಾನಿಯೊಬ್ಬರು ತಮ್ಮ ಅಂಗಡಿಯಲ್ಲಿ ದೋಸೆಯನ್ನು 1 ರೂ.ಗೆ ಮಾರಿದ್ದಾರೆ.

    ತಮಿಳುನಾಡಿನ ತ್ರಿಚಿ ಜಿಲ್ಲೆಯ ರಜನಿ ಅಭಿಮಾನಿಗಳ ಬಳಗದ ಕಾರ್ಯದರ್ಶಿಯಾಗಿರುವ ಕರ್ಣನ್‌ ತಮ್ಮ ಅಂಗಡಿಯಲ್ಲಿ ದೋಸೆಯನ್ನು 1 ರೂಪಾಯಿಗೆ ಮಾರಾಟ ಮಾಡಿದ್ದಾರೆ. ದೋಸೆಗೆ “ಅಣ್ಣಾತೆ ದೋಸೆ” ಎಂದೇ ಹೆಸರಿಟ್ಟು ಮಾರುತ್ತಿದ್ದಾರೆ. ಆ ಮೂಲಕ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಇದನ್ನೂ ಓದಿ: ಅವನೇ ಇಲ್ಲ, ದೂರು ಕೊಟ್ಟು ಏನು ಮಾಡೋದು: ಶಿವಣ್ಣ ಪ್ರಶ್ನೆ

    ಹೆಚ್ಚೆಚ್ಚು ಮಂದಿ ಚಿತ್ರಮಂದಿರಗಳಿಗೆ ತೆರಳಿ ಸಿನಿಮಾ ನೋಡಲಿ. ಸಿನಿಮಾ ಹಿಟ್‌ ಆಗಲಿ ಎಂದು ರಜನಿಕಾಂತ್‌ ಅಭಿಮಾನಿ ಕರ್ಣನ್‌ ಹಾರೈಸಿದ್ದಾರೆ. ಇದನ್ನೂ ಓದಿ: ಫಾರಿನ್‍ನಲ್ಲಿ ದೀಪಾವಳಿ ಆಚರಿಸಿದ ಶಾಸ್ತ್ರಿ ಚೆಲುವೆ ಮಾನ್ಯ

    ಅಣ್ಣಾತೆ ಸಿನಿಮಾ ಇಂದು ತೆರೆ ಕಂಡಿದೆ. ಸಿರುತೈ ಶಿವ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಖುಷ್ಬು, ಮೀನಾ, ಪ್ರಕಾಶ್‌ ರಾಜ್‌, ಸತೀಶ್‌ ಮತ್ತು ಸೂರಿ ಅಭಿನಯಿಸಿದ್ದಾರೆ.

  • ನಟನೆಯಿಂದ ನಿವೃತ್ತಿ ಪಡೆಯುತ್ತಾರಾ ಸೂಪರ್ ಸ್ಟಾರ್ – ಅಣ್ಣಾತೆ ಚಿತ್ರೀಕರಣದ ವೇಳೆ ರಜನಿ ಹೇಳಿದ್ದೇನು?

    ನಟನೆಯಿಂದ ನಿವೃತ್ತಿ ಪಡೆಯುತ್ತಾರಾ ಸೂಪರ್ ಸ್ಟಾರ್ – ಅಣ್ಣಾತೆ ಚಿತ್ರೀಕರಣದ ವೇಳೆ ರಜನಿ ಹೇಳಿದ್ದೇನು?

    ಚೆನ್ನೈ: ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯಿಂದ ನಿವೃತ್ತಿ ಪಡೆಯಲಿದ್ದಾರೆ ಎಂಬ ಸುದ್ದಿಯೊಂದು ಇದೀಗ ಹರಿದಾಡುತ್ತಿದೆ.

    ನಟ ರಜನಿಕಾಂತ್ ಇತ್ತೀಚೆಗೆ ಅಣ್ಣಾತೆ ಸಿನಿಮಾದ ಚಿತ್ರೀಕರಣ ಮುಗಿಸಿ ಹೈದರಾಬಾದ್‍ನಿಂದ ಚೆನ್ನೈಗೆ ಬಂದು ವ್ಯಾಕ್ಸಿನ್ ಎರಡನೇ ಡೋಸ್ ಪಡೆದು ಲಾಕ್‍ಡೌನ್‍ನಿಂದಾಗಿ ಮನೆಯಲ್ಲಿಯೇ ವಿಶ್ರಾಂತಿ ಪಡೆದು ಕಾಲ ಕಳೆಯುತ್ತಿದ್ದಾರೆ.

    ಇಲ್ಲಿಯವರೆಗೂ ಸುಮಾರು 160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ರಜನಿಕಾಂತ್‍ರವರು ತಮ್ಮ 70 ವಯಸ್ಸಿನಲ್ಲಿಯೂ ಬೆಳ್ಳಿ ಪರದೆ ಮೇಲೆ ಮಿಂಚುವ ಮೂಲಕ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.

    ಆದರೆ ಇತ್ತೀಚೆಗೆ ಅಣ್ಣಾತೆ ಚಿತ್ರೀಕರಣದ ವೇಳೆ ರಜನಿಕಾಂತ್‍ರವರು ನಿವೃತ್ತಿ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ನಟನೆಯಿಂದ ನಿವೃತ್ತಿ ಪಡೆಯುವ ಮುನ್ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದು, ಆದರೆ ಸಿನಿಮಾದಲ್ಲಿ ನಟಿಸಬೇಕಾದರೆ ಆರೋಗ್ಯ ಸರಿಯಾಗಿ ಇರಬೇಕು ಎಂದು ಹೇಳಿದ್ದಾರಂತೆ. ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ರಜನಿಕಾಂತ್‍ರವರು ಸಿದ್ದರಾಗಿ ಅನಾರೋಗ್ಯ ಕಾರಣದಿಂದ ರಾಜಕೀಯದಿಂದಲೂ ದೂರ ಸರಿದರು.

    ಸದ್ಯ ರಜನಿಕಾಂತ್‍ರವರು ಅಣ್ಣಾತ್ತೆ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಈ ಚಿತ್ರದಲ್ಲಿ ರಜನಿಕಾಂತ್‍ರವರಿಗೆ ನಯನತಾರಾ ಜೋಡಿಯಾಗಿದ್ದಾರೆ. ನಿರ್ದೇಶಕ ಶಿವಾ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಚಿತ್ರದ ಪ್ರಮುಖ ಪಾತ್ರದಲ್ಲಿ ಮೀನಾ, ಖುಷ್ಬೂ, ಕೀರ್ತಿ ಸುರೇಶ್, ಜಾಕಿ ಶ್ರಾಫ್, ಜಗಪತಿ ಬಾಬು, ಪ್ರಕಾಶ್ ರಾಜ್ ನಟಿಸಿದ್ದಾರೆ.