Tag: ಅಣ್ಣನ ಮಗ

  • ಚಲುವರಾಯಸ್ವಾಮಿ ಸಂಬಂಧಿಕರಿಂದ ಟ್ರ್ಯಾಕ್ಟರ್ ಹತ್ತಿಸಿ ರೈತರ ಹತ್ಯೆಗೆ ಯತ್ನ?

    ಚಲುವರಾಯಸ್ವಾಮಿ ಸಂಬಂಧಿಕರಿಂದ ಟ್ರ್ಯಾಕ್ಟರ್ ಹತ್ತಿಸಿ ರೈತರ ಹತ್ಯೆಗೆ ಯತ್ನ?

    ಮಂಡ್ಯ: ಜಿಲ್ಲೆಯ ನಾಗಮಂಗಲ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಚಲುವರಾಯಸ್ವಾಮಿ ಅವರ ಸಂಬಂಧಿಕರು ಎನ್ನಲಾದವರಿಂದ ಟ್ರ್ಯಾಕ್ಟರ್ ಹತ್ತಿಸಿ ರೈತರ ಕುಟುಂಬವನ್ನು ಹತ್ಯೆ ಮಾಡಲು ಯತ್ನಿಸಿ ದರ್ಪ ಮೆರೆದಿರುವ ಘಟನೆಯೊಂದು ನಡೆದಿದೆ.

    ಕೋರೆ ನಡೆಸಲು ಜಮೀನು ಕೊಡಲಿಲ್ಲ ಎಂದು ಟ್ರ್ಯಾಕ್ಟರ್ ಹತ್ತಿಸಿ ರೈತ ಕುಟುಂಬವನ್ನು ಕೊಲ್ಲಲು ಮುಂದಾಗಿದ್ದಾರೆ. ಬುಧವಾರ ಜಿಲ್ಲೆಯ ನಾಗಮಂಗಲ ತಾಲೂಕಿನ ಇಜ್ಜಲಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಜ್ಜಲಘಟ್ಟ ಗ್ರಾಮದ ರೈತ ಮರಿಗೌಡ ಹಾಗೂ ಅವರ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

    ಮರಿಗೌಡ ಅವರ ಜಮೀನಿನ ಪಕ್ಕದಲ್ಲಿ ಗಣಿಗಾರಿಕೆ ಮಾಡಲು ಅನುಮತಿ ತೆಗೆದುಕೊಳ್ಳಲಾಗಿತ್ತು. ಹಾಗೆಯೇ ಮರಿಗೌಡರ ಜಮೀನಿನ ಮೇಲೂ ಕಣ್ಣು ಇಟ್ಟಿದ್ದ ಅವರು, ಜಮೀನನ್ನು ಬಿಟ್ಟು ಕೊಡಿ ಎಂದು ಕಿರಿಕ್ ತೆಗೆದಿದ್ದಾರೆ. ಆದರೆ ನಾನು ನನ್ನ ಜಮೀನಿನಲ್ಲಿ ತೆಂಗಿನ ಗಿಡ ನೆಟ್ಟಿದ್ದೇನೆ, ನಾನು ಇದನ್ನು ಬಿಟ್ಟು ಕೊಡಲ್ಲ ಎಂದು ಮರಿಗೌಡರು ನಿರಾಕರಿಸಿದ್ದರು.

    ಇಷ್ಟಕ್ಕೆ ಕೋಪಗೊಂಡ  ಮಾಜಿ ಶಾಸಕರ ಸಂಬಂಧಿಕರು ಎನ್ನಲಾದವರು ತಮ್ಮ ಬೆಂಬಲಿಗರೊಂದಿಗೆ ಜಮೀನಿಗೆ ಬಂದು ಗಲಾಟೆ ಮಾಡಿದ್ದಾರೆ. ಜಮೀನಿನಲ್ಲಿದ್ದ ತೆಂಗಿನ ಗಿಡಗಳು ಮತ್ತು ಡ್ರಿಪ್ ಪೈಪ್‍ಗಳನ್ನು ಕಿತ್ತು ಹಾಕಿ ದರ್ಪ ಮೆರೆದಿದ್ದಾರೆ. ಇದಾದ ಬಳಿಕ ಮರಿಗೌಡರಿಗೆ ಹಾಗೂ ಅವರ ಮಗ, ಮಗಳು, ತಾಯಿ, ಹೆಂಡತಿ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆಗೆ ಮಾಡಲು ಯತ್ನಿಸಿದ್ದಾರೆ.

    ರೈತ ಕುಟುಂಬದ ಮೇಲೆ ದರ್ಪ ಮೆರೆದಿರುವ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ಸಂಬಂಧ ರೈತ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಈ ಬಗ್ಗೆ ಮಾಜಿ ಶಾಸಕ ಚಲುವರಾಯ ಸ್ವಾಮಿ ಅವರ ಅಣ್ಣನ ಮಗ  ಉಮೇಶ್ ಪ್ರತಿಕ್ರಿಯಿಸಿ, ನನಗೂ ಅದಕ್ಕೂ ಸಂಬಂಧವಿಲ್ಲ. ನಾನು ರಾಜಿ ಪಂಚಾಯ್ತಿ ಮಾಡಲೆಂದು ಸ್ಥಳಕ್ಕೆ ತೆರಳಿದ್ದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಚಿಕ್ಕಮ್ಮನ ಜೊತೆ ಅಕ್ರಮ ಸಂಬಂಧಕ್ಕಾಗಿ ಅಣ್ಣನ ಮಗನಿಂದಲೇ ಚಿಕ್ಕಪ್ಪನ ಹತ್ಯೆ

    ಚಿಕ್ಕಮ್ಮನ ಜೊತೆ ಅಕ್ರಮ ಸಂಬಂಧಕ್ಕಾಗಿ ಅಣ್ಣನ ಮಗನಿಂದಲೇ ಚಿಕ್ಕಪ್ಪನ ಹತ್ಯೆ

    ಹಾವೇರಿ: ತನಗೆ ಮೂವರು ಮಕ್ಕಳಿದ್ದರೂ ಅಣ್ಣನ ಮಗನನ್ನು ತನ್ನ ಸ್ವಂತ ಮಗ ಅನ್ನೋದಕ್ಕಿಂತಲೂ ಹೆಚ್ಚಾಗಿ ಬೆಳೆಸಿದ್ದ. ಆದರೆ ಆ ಅಣ್ಣನ ಮಗ ಚಿಕ್ಕಮ್ಮನಿಗಾಗಿ ಚಿಕ್ಕಪ್ಪನನ್ನೇ ಕೊಲೆ ಮಾಡಿ ಅರೆಸ್ಟ್ ಆಗಿದ್ದಾನೆ.

    ಹತ್ಯೆಯಾದ ವ್ಯಕ್ತಿಯನ್ನು ನಾಗೇಂದ್ರಮಟ್ಟಿಯ ನಿವಾಸಿಯಾದ 40 ವರ್ಷ ಯಲ್ಲಪ್ಪ ಎಂದು ಗುರುತಿಸಲಾಗಿದೆ. ಈತ ಮೂರು ಮಕ್ಕಳು ಮಡದಿ ಜೊತೆ ಆಟೋರಿಕ್ಷಾ ಓಡಿಸಿಕೊಂಡು ಜೀವನ ಮಾಡುತ್ತಿದ್ದ ಮತ್ತು ಅನಾಥ ಎಂದು ತನ್ನ ಅಣ್ಣನ ಮಗ ಮಂಜುನಾಥ್(20) ಜೊತೆಯಲ್ಲೇ ಬೆಳೆಸುತ್ತಿದ್ದ.

    ಚಿಕ್ಕಮ್ಮ ಉಷಾಳ ಜೊತೆ ಮಂಜುನಾಥ್ ಕದ್ದುಮುಚ್ಚಿ ಲವ್ವಿಡವ್ವಿ ಶುರುವಿಟ್ಟಕೊಂಡಿದ್ದ. ಇದು ಯಲ್ಲಪ್ಪನಿಗೆ ಗೊತ್ತಾದ ನಂತರ ಇಬ್ಬರು ಸೇರಿ ಯಲ್ಲಪ್ಪ ಕೊಲೆ ಮಾಡಿ ಹಾವೇರಿಯ ಹೆಗ್ಗೇರಿ ಕೆರೆಯ ಬಳಿ ಐದು ಲೀಟರ್ ಪೆಟ್ರೋಲ್ ಹಾಕಿ ಸುಟ್ಟು, ಮೃತ ದೇಹವನ್ನು ಬಾವಿಯಲ್ಲಿ ಹಾಕಿ ಬಂದಿದ್ದಾರೆ.

    ಡಿಸೆಂಬರ್ 10 ರಂದು ರಾತ್ರಿ ಕುಡಿದ ಮತ್ತಿನಲ್ಲಿ ಮನೆಗೆ ಬಂದಿದ್ದ ಯಲ್ಲಪ್ಪನನ್ನು ಮಂಜುನಾಥ್ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಅದಕ್ಕೆ ಯಲ್ಲಪ್ಪನ ಪತ್ನಿ ಚಿಕ್ಕಮ್ಮ ಉಷಾ ಸಹ ಸಾಥ್ ನೀಡಿದ್ದಾಳೆ. ನಂತರ ಕಳೆದ ಆರು-ಏಳು ತಿಂಗಳಿನಿಂದ ಗಂಡ ಮನೆ ಬಿಟ್ಟು ಹೋಗಿದ್ದಾನೆ ಎಂದು ಗ್ರಾಮಸ್ಥರ ಬಳಿ ಹೇಳಿದ್ದಳು.

    6 ತಿಂಗಳ ನಂತರ ಸ್ಥಳೀಯರಿಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಈಗ ಚಿಕ್ಕಮ್ಮ ಉಷಾ ಹಾಗೂ ಮಂಜುನಾಥನನ್ನು ಪೊಲೀಸರು ಬಂಧಿಸಿದ್ದಾರೆ.

  • ಚಿಕ್ಕಪ್ಪನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮಗ

    ಚಿಕ್ಕಪ್ಪನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮಗ

    ತುಮಕೂರು: ರೈಲ್ವೆ ಇಲಾಖೆಯಿಂದ ಪರಿಹಾರ ತೆಗೆದುಕೊಳ್ಳಲು ಸಹಿ ಹಾಕದ ಹಿನ್ನೆಲೆ ಚಿಕ್ಕಪ್ಪನ ಮೇಲೆ ಅಣ್ಣನ ಮಗನೇ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಮಲ್ಲೇಶಪುರ ಗ್ರಾಮದಲ್ಲಿ ನಡೆದಿದೆ.

    ವೀರಭದ್ರಯ್ಯ (50) ಹಲ್ಲೆಗೊಳಗಾದ ವ್ಯಕ್ತಿ. ವೀರಭದ್ರಯ್ಯನ ಅಣ್ಣನ ಮಗ ಮಹೇಶ್ ಹಾಗೂ ಆತನ 6 ಜನ ಸಹಚರು ಹಲ್ಲೆ ನಡೆಸಿರುವ ಆರೋಪಿಗಳು. ಶುಕ್ರವಾರ ರಾತ್ರಿ ವೀರಭದ್ರಯ್ಯ ಡೈರಿಗೆ ಹಾಲು ಹಾಕಿ ಬರುವ ವೇಳೆ ಮಹೇಶ್ ಹಾಗೂ ಆತನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ. ತುಮಕೂರು-ರಾಯದುರ್ಗ ರೈಲ್ವೇ ಯೋಜನೆ ನಡೆಯುತ್ತಿದ್ದ ವೇಳೆ ವೀರಭದ್ರಯ್ಯ ಹಾಗೂ ಅವರ ಅಣ್ಣನಿಗೆ ಸೇರಿದ ಎರಡು ಎಕರೆ ಜಮೀನನ್ನು ರೈಲ್ವೆ ಇಲಾಖೆ ಸ್ವಾಧೀನ ಪಡಿಸಿಕೊಂಡಿತ್ತು. ಈ ಜಮೀನು ವಿಚಾರವಾಗಿ ಪರಿಹಾರ ತೆಗೆದುಕೊಳ್ಳಲು ಕೋರ್ಟ್‍ಗೆ ಅರ್ಜಿ ಹಾಕಲು ಸಹಿ ಹಾಕುವಂತೆ ಒತ್ತಾಯಿಸಿ ವೀರಭದ್ರಯ್ಯನ ಮೇಲೆ ಮಹೇಶ್ ಹಲ್ಲೆ ಮಾಡಿದ್ದಾನೆ.

    ಸದ್ಯ ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ವೀರಭದ್ರಯ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಕುರಿತು ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ವೀರಭದ್ರಯ್ಯರ ಪತ್ನಿ ಶೈಲಜಾ ದೂರು ದಾಖಲಿಸಿದ್ದು, ಆರೋಪಿ ಮಹೇಶ್ ಹಾಗೂ ಆತನ 6 ಮಂದಿ ಸಹಚರರ ಮೇಲೆ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕಾರ್ ಅಪಘಾತಕ್ಕೀಡಾಗಿ ತಲೆ, ಬಲಗಣ್ಣಿಗೆ ಗಾಯ- ದೂರು ದಾಖಲಾದ್ರೂ ಕ್ರಮ ಕೈಗೊಳ್ಳದ ಪೊಲೀಸ್ರು

    ಕಾರ್ ಅಪಘಾತಕ್ಕೀಡಾಗಿ ತಲೆ, ಬಲಗಣ್ಣಿಗೆ ಗಾಯ- ದೂರು ದಾಖಲಾದ್ರೂ ಕ್ರಮ ಕೈಗೊಳ್ಳದ ಪೊಲೀಸ್ರು

    – ಮಾಜಿ ಶಾಸಕರ ಒತ್ತಡಕ್ಕೆ ಮಣಿಯಿತಾ ಖಾಕಿ?

    ಬೆಂಗಳೂರು: ಮಾಜಿ ಶಾಸಕ ವರ್ತೂರು ಪ್ರಕಾಶ್ ಅಣ್ಣನ ಮಗನಿಂದ ಕಾರು ಅಪಘಾತವಾಗಿ, ಯುವಕನೊಬ್ಬ ಗಂಭೀರ ಗಾಯಗೊಂಡು ದೂರು ದಾಖಲಾದ್ರೂ ಪೊಲೀಸರು ಯಾವುದೇ ಕ್ರಮ ಜರುಗಿಸದ ಘಟನೆ ಸಿಲಿಕಾನ್ ಸಿಸಿಟಿಲ್ಲಿ ನಡೆದಿದೆ.

    ಬೆಂಗಳೂರಿನ ದೇವನಹಳ್ಳಿಯ ಕನ್ನಮಂಗಲ ಗೇಟ್ ಬಳಿ ಆಗಸ್ಟ್ 10 ರಂದು ಕಾರ್ ಅಪಘಾತ ನಡೆದಿತ್ತು. ಆದ್ರೆ ಇದೂವರೆಗೂ ಆರೋಪಿ ವಿರುದ್ಧ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳದಿದ್ದುದರಿಂದ ಮಾಜಿ ಶಾಸಕ ವರ್ತೂರ್ ಪ್ರಕಾಶ್ ಒತ್ತಡಕ್ಕೆ ಪೊಲೀಸರು ಮಣಿದ್ರಾ ಎಂಬ ಅನುಮಾನವೊಂದು ಮೂಡಿದೆ.

    ವರ್ತೂರು ಪ್ರಕಾಶ್ ಅಣ್ಣನ ಮಗ ರಕ್ಷಿತ್ ಕಾರ್ ಚಲಾಯಿಸುತ್ತಿದ್ದು, ದೇವನಹಳ್ಳಿಯಿಂದ ಬೆಂಗಳೂರಿನ ಕಡೆಗೆ ಕಾರ್ ಅತಿ ವೇಗವಾಗಿ ಬರುತ್ತಿತ್ತು. ಈ ವೇಳೆ ಸರ್ವಿಸ್ ರೋಡ್‍ನಲ್ಲಿ ನಡೆದು ಬರ್ತಿದ್ದ ಸೈಯದ್ ಸಾದ್ವಿಕ್ ಪಾಷ ಎಂಬವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸಾದ್ವಿಕ್ ತಲೆಗೆ ಪೆಟ್ಟು, ಬಲಗಣ್ಣಿಗೂ ಹಾನಿ ಹಾನಿಯಾಗಿತ್ತು.

    ಮನೆಗೆ ಆಧಾರ ಸ್ತಂಭವಾಗಿದ್ದ ಸಾದ್ವಿಕ್ ಈಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಚಿಕಿತ್ಸೆಗಾಗಿ 9 ಲಕ್ಚ ಖರ್ಚು ಮಾಡಿದ್ದು, ಇನ್ನೂ ಚಿಕಿತ್ಸೆ ಕೊಡಿಸಲು ಹಣವಿಲ್ಲದೇ ಮನೆಗೆ ವಾಪಸ್ ಕರೆ ತಂದಿದ್ದೇವೆ. ಒಟ್ಟಿನಲ್ಲಿ ದೂರು ದಾಖಲಾಗಿ ಒಂದು ತಿಂಗಳಾದ್ರು ಪೊಲೀಸರು ಕ್ರಮ ಜರುಗಿಸದೇ ಇರುವುದರಿಂದ ಪಾಷಾ ಪೋಷಕರು ನಮಗೆ ನ್ಯಾಯ ಕೊಡಿಸಿ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

    ಇದೀಗ ಪಾಷಾ ಪೋಷಕರ ಬೆಂಬಲಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ನಿಂತಿದ್ದು, ಅಪಘಾತ ಮಾಡಿದರವರನ್ನು ಕೂಡಲೇ ಬಂಧಿಸಬೇಕು ಅಂತ ಆರೋಪಿ ಪರ ರಕ್ಷಣೆ ನಿಂತಿರುವ ಪೊಲೀಸರ ವಿರುದ್ಧ ಕರವೇ ಆಕ್ರೋಶ ಹೊರಹಾಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv