Tag: ಅಣಬೆ

  • ಮನೆಯಲ್ಲೇ ಮಾಡಿ ಸವಿಯಿರಿ ರುಚಿ, ಶುಚಿ, ಸ್ವಾದಭರಿತ `ಮಶ್ರೂಮ್ ಫ್ರೈಡ್‌ ರೈಸ್‌ʼ

    ಮನೆಯಲ್ಲೇ ಮಾಡಿ ಸವಿಯಿರಿ ರುಚಿ, ಶುಚಿ, ಸ್ವಾದಭರಿತ `ಮಶ್ರೂಮ್ ಫ್ರೈಡ್‌ ರೈಸ್‌ʼ

    ಮನೆಯಿಂದ ಹೊರಗೆ ಹೋದ್ರೆ ಸಾಕು ಕಣ್ಣು ಹಾಯಿಸಿದಲ್ಲೆಲ್ಲಾ ಬರೀ ಫಾಸ್ಟ್‌ಫುಡ್‌ಗಳದ್ದೇ ಕಾರುಬಾರು. ಅಲ್ಲಿನ ಬಗೆ ಬಗೆಯ ತಿನಿಸುಗಳು ಬಾಯಲ್ಲಿ ನೀರೂರಿಸುತ್ತವೆ. ಅದರಲ್ಲೂ ಬೇಬಿಕಾರ್ನ್‌ ಫ್ರೈಡ್‌ರೈಸ್‌, ಪನ್ನೀರ್‌ ಫ್ರೈಡ್‌ರೈಸ್‌, ಮಶ್ರೂಮ್‌ ಫ್ರೈಡ್‌ರೈಸ್‌ ಯುವಕ-ಯುವತಿರ ನೆಚ್ಚಿನ ತಿನಿಸುಗಳು. ಇದಕ್ಕಾಗಿ ಕಿಲೋ ಮೀಟರ್‌ಗಟ್ಟಲೆ ಹುಡುಕಿಕೊಂಡು ಬಂದು, ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ತಿಂದು ಹೋಗುತ್ತಾರೆ. ಇನ್ಮುಂದೆ ಗಂಟೆಗಟ್ಟಲೇ ನಿಂತು ಕಾಯಬೇಕಿಲ್ಲ. 15 ರಿಂದ 20 ನಿಮಿಷ ಸಮಯವಿದ್ದರೆ ಸಾಕು ರುಚಿ, ಶುಚಿ, ಸ್ವಾದಭರಿತ ಮಶ್ರೂಮ್‌ ಫ್ರೈಡ್‌ರೈಸ್‌ ಅನ್ನು ಮನೆಯಲ್ಲೇ ಮಾಡಿ ಸವಿಯಬಹುದಾಗಿದೆ. ಅದರ ಸಿಂಪಲ್‌ ಟ್ರಿಕ್ಸ್‌ ಇಲ್ಲಿದೆ ನೋಡಿ…

    ಬೇಕಾಗಿರುವ ಪದಾರ್ಥಗಳು:

    • ಅನ್ನ – 1 ಕಪ್
    • ಕಟ್ ಮಾಡಿದ ಬಿಳಿ ಅಣಬೆಗಳು – 150 ಗ್ರಾಂ
    • ಸಣ್ಣದಾಗಿ ಕಟ್ ಮಾಡಿದ ಬೆಳ್ಳುಳ್ಳಿ – ಅರ್ಧ ಟೀಸ್ಪೂನ್
    • ಕಟ್ ಮಾಡಿದ ಈರುಳ್ಳಿ – 1 ಕಪ್
    • ಸ್ಪ್ರಿಂಗ್ ಈರುಳ್ಳಿ – ಅರ್ಧ ಕಪ್
    • ಬೀನ್ಸ್ – ಅರ್ಧ ಕಪ್
    • ಕಟ್ ಮಾಡಿದ ಕೊತ್ತಂಬರಿ ಸೊಪ್ಪು – ಅರ್ಧ ಕಪ್
    • ಆಲಿವ್ ಎಣ್ಣೆ – 2 ಟೀಸ್ಪೂನ್
    • ಕರಿಮೆಣಸಿನ ಪುಡಿ – 1 ಟೀಸ್ಪೂನ್
    • ಅಗತ್ಯಕ್ಕೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:

    • ಒಂದು ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇರಿಸಿ ಮಧ್ಯಮ ಉರಿಯಲ್ಲಿ 2 ನಿಮಿಷಗಳ ಕಾಲ ಹುರಿಯಿರಿ.
    • ನಂತರ ಅದಕ್ಕೆ ಅಣಬೆಗಳನ್ನು ಸೇರಿಸಿ ಕಂದು ಬಣ್ಣ ಬರುವವರೆಗೆ ಹೆಚ್ಚಿನ ಉರಿಯಲ್ಲಿ 5-6 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಹುರಿಯಿರಿ.
    • ಅಣಬೆಯಲ್ಲಿರುವ ನೀರಿನಾಂಶ ಹೋಗುವವರೆಗೂ ಹುರಿಯಿರಿ.
    • ಅಣಬೆಗಳು ತಿಳಿ ಗೋಲ್ಡನ್ ಬಣ್ಣಕ್ಕೆ ತಿರುಗುತ್ತಿದ್ದಂತೆ ಕೊತ್ತಂಬರಿ ಸೊಪ್ಪು ಸೇರಿಸಿ ಒಂದು ನಿಮಿಷ ಫ್ರೈ ಮಾಡಿ.
    • ಈ ಮಿಶ್ರಣಕ್ಕೆ ಅಗತ್ಯದಷ್ಟು ಕರಿಮೆಣಸು ಮತ್ತು ಉಪ್ಪು ಹಾಕಿ ಅದಕ್ಕೆ ಅನ್ನವನ್ನು ಮಿಕ್ಸ್ ಮಾಡಿ. 2-3 ನಿಮಿಷಗಳ ಕಾಲ ಹುರಿಯಿರಿ.

    – ಈಗ `ಮಶ್ರೂಮ್ ಫ್ರೈಡ್ ರೈಸ್’ ಸವಿಯಲು ಸಿದ್ಧವಾಗಿದ್ದು, ಅದಕ್ಕೆ ಕೊತ್ತಂಬರಿ ಮತ್ತು ಸ್ಪ್ರಿಂಗ್ ಈರುಳ್ಳಿಯಿಂದ ಅಲಂಕರಿಸಿ ಬಿಸಿಯಾಗಿ ಬಡಿಸಿ.

    Live Tv

  • ಮಶ್ರೂಮ್ ಸೇವಿಸಿ ಆರೋಗ್ಯಕರವಾದ ಪ್ರೋಟಿನ್‌ ಪಡೆದುಕೊಳ್ಳಿ

    ಮಶ್ರೂಮ್ ಸೇವಿಸಿ ಆರೋಗ್ಯಕರವಾದ ಪ್ರೋಟಿನ್‌ ಪಡೆದುಕೊಳ್ಳಿ

    ಣಬೆ ಬಾಯಿಗೆ ರುಚಿ ಮಾತ್ರವಲ್ಲ, ಅದರಲ್ಲಿ ದೇಹಕ್ಕೆ ಅಗತ್ಯವಿರುವ ಅನೇಕ ಅಂಶಗಳೂ ತುಂಬಿಕೊಂಡಿವೆ. ಅಣಬೆಯಲ್ಲಿನ ಪ್ರೊಟೀನ್ ವಿಟಮಿನ್, ಮಿನರಲ್, ಅಮಿನೊ ಆಸಿಡ್, ಆಂಟಿ ಬಯಾಟಿಕ್, ಮತ್ತು ಆಂಟಿ ಯಾಕ್ಸಿಡಂಟ್ ಅಂಶಗಳು ಆರೋಗ್ಯಕ್ಕೆ ಪೂರಕವಾಗಿದೆ. ಈ ಎಲ್ಲಾ ಅಂಶಗಳನ್ನು ಅಣಬೆ ಒಳಗೊಂಡಿದೆ.

    ಮಶ್ರೂಮ್ ನಿತ್ಯದ ಆಹಾರವಾಗಿ ಬಳಸಿದರೆ ಅದ್ಭುತ ಆರೋಗ್ಯ ಹೊಂದುವುದರಲ್ಲಿ ಸಂಶಯವೇ ಇಲ್ಲ. ಡಯಟ್‍ನಲ್ಲಿ ಅಣಬೆಗೆ ಮೊದಲ ಆದ್ಯತೆ ನೀಡಿದರೆ ಎಷ್ಟೋ ರೋಗಗಳನ್ನು ತಡೆಯಬಹುದಾಗಿದೆ. ಇದನ್ನೂ ಓದಿ: ಅಕ್ಕಿ ತೊಳೆದ ನೀರಿನಿಂದ ನಿಮ್ಮ ಸೌಂದರ್ಯ ಹೆಚ್ಚಿಸಬಹುದು

    * ದೇಹದ ಆರೋಗ್ಯ ಸುಧಾರಣೆಗೆ ಸಹಾಯ ಮಾಡು ಅಂಶಗಳನ್ನು ಅಣಬೆ ಒಳಗೊಂಡಿದೆ. ಆರೋಗ್ಯ ಪ್ರಜ್ಞೆ ಜೊತೆಗೆ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರು ಅಣಬೆಯನ್ನು ತಪ್ಪದೆ ಸೇವಿಸಬೇಕು. ಇದನ್ನೂ ಓದಿ: ಅನ್ನದಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು ಗೊತ್ತಾ?

    * ಅಣಬೆಯಲ್ಲಿ ವಿಟಮಿನ್ ಡಿ ಅಧಿಕವಾಗಿರುತ್ತದೆ. ಇದು ಮೊಡವೆಯನ್ನು ಕಡಿಮೆ ಮಾಡಲು ಸಹಾಯವನ್ನು ಮಾಡುತ್ತದೆ.

    * ಅಣಬೆಗಳು ಕರುಳಿನ ಆರೋಗ್ಯಕ್ಕೆ ಅತ್ಯುತ್ತಮ ಆಹಾರ. ಒಳ್ಳೆಯ ಬ್ಯಾಕ್ಟೀರಿಯಾಗಖನ್ನು ಒಳಗೊಂಡಿದ್ದು, ಅವುಗಳ ಸೇವನೆಯಿಂದ ನಮ್ಮ ದೇಹದಲ್ಲಿಯೂ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಪೋಷಣೆ ಮಾಡುತ್ತದೆ.

    * ಕಬ್ಬಿಣಾಂಶದ ಪರಿಣಾಮ ಹೇರವಾಗಿದ್ದು, ರಕ್ತ ಹೀನತೆಯಿಂದ ಬಳಲುತ್ತಿರುವವರಿಗೆ ವರದಾನ ಎನ್ನ ಬಹುದಾಗಿದೆ. ಕೆಂಪು ರಕ್ತಕಣಗಳ ಉತ್ಪಾದನೆ ಪ್ರಮಾಣ ಹೆಚ್ಚಿಸುತ್ತದೆ. ಇದನ್ನೂ ಓದಿ:  ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ

    * ಕ್ಯಾಲ್ಸಿಯಂ ಅಂಶ ಹೆಚ್ಚಾಗಿದ್ದು, ಸಂದು ನೋವಿಗೆ ಶಮನಕಾರಿಯಾಗಿದೆ.

    * ಕ್ಯಾನ್ಸರ್ ನಿರೋಧಕ ಅಂಶಗಳನ್ನು ಒಳಗೊಂಡಿದ್ದು, ಪ್ರಮುಖವಾಗಿ ಸ್ತನ   ಕ್ಯಾನ್ಸರ್‌ ಬಾರದಂತೆ ತಡೆಯುತ್ತದೆ.

  • ನೀವು ಮಾಡಿ ಮಶ್ರೂಮ್ ಪೆಪ್ಪರ್ ಫ್ರೈ

    ನೀವು ಮಾಡಿ ಮಶ್ರೂಮ್ ಪೆಪ್ಪರ್ ಫ್ರೈ

    ಶ್ರೂಮ್‍ನಿಂದ ತಯಾರಿಸದ ಆಹಾರಗಳನ್ನು ನಾವು ಹೆಚ್ಚಾಗಿ ಹೋಟೆಲ್‍ಗಳಲ್ಲಿ ಸವಿಯುತ್ತೇವೆ. ಆದರೆ ಇಂದು ನೀವು ಮನೆಯಲ್ಲಿಯೇ ಸರಳವಾಗಿ ಪೆಪ್ಪರ್ ಫ್ರೈ ಮಾಡಿ ಸವಿಯಲು ಮಾಡುವವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:

    * ತೆಂಗಿನಕಾಯಿ ಎಣ್ಣೆ_ 2 ಟೀ ಸ್ಪೂನ್
    * ಸಾಸಿವೆ- 1 ಟೀ ಸ್ಪೂನ್
    * ಶುಂಠಿ
    * ಕರಿಬೇವು
    * ಒಣ ಮೆಣಸು- 3 ರಿಂದ4
    * ಈರುಳ್ಳಿ 2
    * ಟೊಮೆಟೊ ಪೇಸ್ಟ್ – 3 ಟೀ ಸ್ಪೂನ್
    * ದನಿಯಾ ಪುಡಿ – 2 ಟೀ ಸ್ಪೂನ್
    * ಜೀರಿಗೆ ಪುಡಿ- 1 ಟೀ ಸ್ಪೂನ್
    * ಖಾರದ ಪುಡಿ- 1 ಟೀ ಸ್ಪೂನ್
    * ಗರಂ ಮಸಾಲ- 1 ಟೀ ಸ್ಪೂನ್
    * ಕಾಳು ಮೆಣಸಿನ ಪುಡಿ- 2 ಟೀ ಸ್ಪೂನ್
    * ಅಣಬೆ
    * ರುಚಿಗೆ ತಕ್ಕಷ್ಟು ಉಪ್ಪು


    ಮಾಡುವ ವಿಧಾನ:
    * ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಸಾಸಿವೆ, ಶುಂಠಿ, ಬೆಳ್ಳುಳ್ಳಿ, ಕರಿಬೇವು, ಒಣ ಮೆಣಸು ಹಾಕಿ 2 ನಿಮಿಷ ಚೆನ್ನಾಗಿ ಪ್ರೈ ಮಾಡಬೇಕು.

    * ನಂತರ ಈರುಳ್ಳಿ ಹಾಕಿ ಅದು ಮೆತ್ತಗಾಗುವವರೆಗೆ ಫ್ರೈ ಮಾಡಿ. ನಂತರ ಟೊಮೆಟೊ ಪೇಸ್ಟ್, ದನಿಯಾ ಪುಡಿ, ಗರಂ ಮಸಾಲ ಹಾಕಿ 2-3 ನಿಮಿಷ ಬೇಯಿಸಬೇಕು.

     

    * ಈಗ ಅಣಬೆ ಹಾಕಿ 2 ನಿಮಿಷ ಫ್ರೈ ಮಾಡಿ. ನಂತರ ಕಾಳು ಮೆಣಸಿನ ಪುಡಿ, ಉಪ್ಪು ಸೇರಿಸಿ ಅಧಿಕ ಉರಿಯಲ್ಲಿ ಫ್ರೈ ಮಾಡಿ. ಅಣಬೆ ಚೆನ್ನಾಗಿ ಬೇಯುವವರೆಗೆ ಫ್ರೈ ಮಾಡಿದರೆ ರುಚಿಯಾದ ಮಶ್ರೂಮ್ ಪೆಪ್ಪರ್ ಫ್ರೈ ಸವಿಯಲು ಸಿದ್ಧವಾಗುತ್ತದೆ.

  • ಮೋದಿ ತೈವಾನ್ ಅಣಬೆ ತಿಂದು ಬೆಳ್ಳಗಾಗಿದ್ದಾರೆ- ಅದಕ್ಕಾಗೇ ತಿಂಗಳಿಗೆ ಇಷ್ಟು ಕೋಟಿ ರೂಪಾಯಿ ಖರ್ಚು!

    ಮೋದಿ ತೈವಾನ್ ಅಣಬೆ ತಿಂದು ಬೆಳ್ಳಗಾಗಿದ್ದಾರೆ- ಅದಕ್ಕಾಗೇ ತಿಂಗಳಿಗೆ ಇಷ್ಟು ಕೋಟಿ ರೂಪಾಯಿ ಖರ್ಚು!

    ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಸಮಾವೇಶವೊಂದರಲ್ಲಿ, ನನ್ನ ಹಾಗೆ ಕಪ್ಪಗಿದ್ದ ಪ್ರಧಾನಿ ನರೇಂದ್ರ ಮೋದಿ ತೈವಾನ್ ನಿಂದ ಆಮದಾಗುವ ಅಣಬೆ ತಿಂದು ಬೆಳ್ಳಗಾಗಿದ್ದಾರೆ ಎಂದು ಕಾಂಗ್ರೆಸ್ ಯುವ ನಾಯಕ ಅಲ್ಪೇಶ್ ಠಾಕೂರ್ ವ್ಯಂಗ್ಯ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ತೈವಾನ್ ದೇಶದ ಒಂದು ಅಣಬೆ 80 ಸಾವಿರ ರೂ. ಬೆಲೆಯನ್ನು ಹೊಂದಿದೆ. ಪ್ರಧಾನಿ ಮೋದಿ ಒಂದು ದಿನಕ್ಕೆ 5 ಅಣಬೆಗಳನ್ನು ತಿನ್ನುತ್ತಾರೆ. ಮೋದಿ ಅವರು ಸೇವಿಸುವಂತಹ ಆಹಾರ ನಮ್ಮಿಂದ ಸೇವನೆ ಮಾಡಲಾಗುವುದಿಲ್ಲ. ಕಾರಣ ನಾವು ಬಡವರು ನಮ್ಮಲ್ಲಿ ಅಷ್ಟು ಹಣವಿಲ್ಲ ಅಂತಾ ಪರೋಕ್ಷವಾಗಿ ಮೋದಿ ಅವರನ್ನು ಟೀಕಿಸಿದ್ದಾರೆ.

    ಪಿಎಂ ಅಣಬೆಗಾಗಿ ಒಂದು ತಿಂಗಳಿಗೆ 1 ಕೋಟಿ 20 ಲಕ್ಷ ರೂ. ಹಣವನ್ನು ಖರ್ಚು ಮಾಡುತ್ತಾರೆ. ಅವರು ನಮ್ಮ ಹಾಗೆ ರೋಟಿ, ಅನ್ನ ತಿನ್ನುವುದಿಲ್ಲ. ಕೇವಲ ನಾನು ಸಾಮನ್ಯ ವ್ಯಕ್ತಿಯೆಂದು ನಾಟಕ ಮಾಡುತ್ತಾರೆ. ಹಾಗಾದ್ರೆ ಮೋದಿ ಹಿಂಬಾಲಕರು ಎಷ್ಟು ಕೋಟಿ ಮೌಲ್ಯದ ಅಣಬೆಗಳನ್ನು ತಿನ್ನುತ್ತಾರೆ ಎಂದು ಮೂದಲಿಸಿದ್ದಾರೆ.

    ಗುಜರಾತ್ ಸಿಎಂ ಆದ ನಂತರ ಮೋದಿ ತೈವಾನ್ ಅಣಬೆಗಳನ್ನು ತಿನ್ನಲು ಆರಂಭಿಸಿದ್ದಾರೆ ಎಂದು ಅಲ್ಪೇಶ್ ಹೇಳಿದ್ದಾರೆ.