Tag: ಅಡ್ಮಿನ್

  • ಗ್ರೂಪ್ ಅಡ್ಮಿನ್‍ಗೆ ಪರಮಾಧಿಕಾರ ಕೊಟ್ಟ ವಾಟ್ಸಪ್: ಏನಿದು ಹೊಸ ಫೀಚರ್?

    ಗ್ರೂಪ್ ಅಡ್ಮಿನ್‍ಗೆ ಪರಮಾಧಿಕಾರ ಕೊಟ್ಟ ವಾಟ್ಸಪ್: ಏನಿದು ಹೊಸ ಫೀಚರ್?

    ಕ್ಯಾಲಿಫೋರ್ನಿಯಾ: ವಿಶ್ವದ ನಂಬರ್ ಒನ್ ಮೆಸೆಂಜಿಂಗ್ ಅಪ್ಲಿಕೇಶನ್ ವಾಟ್ಸಪ್ ಗ್ರೂಪ್ ಅಡ್ಮಿನ್ ಗಳಿಗೆ ಪರಮಾಧಿಕಾರ ನೀಡುವ ಫೀಚರ್ ಬಿಡುಗಡೆ ಮಾಡಿದೆ.

    ಈ ಹೊಸ ಫೀಚರ್ ನಲ್ಲಿ ಒಂದು ಗ್ರೂಪ್‍ನಲ್ಲಿರುವ ಸದಸ್ಯರಿಗೆ ಆ ನಿರ್ದಿಷ್ಟ ಗ್ರೂಪ್‍ಗೆ ಸಂದೇಶ ಕಳುಹಿಸುವ ಹಕ್ಕನ್ನು ನೀಡಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸುವ ಅಧಿಕಾರಿವನ್ನು ಅಡ್ಮಿನ್ ಗಳಿಗೆ ಕೊಟ್ಟಿದೆ.

    ಗ್ರೂಪ್ ಚಾಟಿಂಗ್‍ಗಳಲ್ಲಿ ಕಿರಿಕಿರಿ ಉಂಟು ಮಾಡುವ ಹಾಗೂ ಅನಗತ್ಯ ಸಂದೇಶಗಳನ್ನು ಹಾಕುವುದರಿಂದ ಗ್ರೂಪ್ ಅಡ್ಮಿನ್‍ಗಳು ಬೇಸತ್ತು ಹೋಗಿದ್ದಾರೆ. ಈ ಹೊಸ ಫೀಚರ್ ಇಂತಹ ಗ್ರೂಪ್ ಅಡ್ಮಿನ್‍ಗಳಿಗೆ ವರದಾನವಾಗಿದೆ. ಆದರೆ ಗ್ರೂಪ್‍ನಲ್ಲಿ ಒಬ್ಬ ಅಥವಾ ಇಬ್ಬರು ಸದಸ್ಯರನ್ನು ಮಾತ್ರವೇ ಬ್ಲಾಕ್ ಮಾಡಲು ಈ ಫೀಚರ್ ನಲ್ಲಿ ಸಾಧ್ಯವಿಲ್ಲ.

    ಈ ಹೊಸ ಫೀಚರ್ ನಲ್ಲಿ ಗ್ರೂಪ್‍ನ ಎಡಿಟ್, ಐಕಾನ್ ಚೇಂಜ್ ಹಾಗೂ ವಿಷಯಗಳನ್ನು ಬದಲಾವಣೆಗೊಳಿಸುವ ಅಧಿಕಾರ ಕೇವಲ ಗ್ರೂಪ್ ಅಡ್ಮಿನ್‍ಗೆ ಮಾತ್ರವೇ ಸೀಮಿತವಾಗಿರುವ ಆಯ್ಕೆಯನ್ನು ಒಳಗೊಂಡಿದೆ. ವಾಟ್ಸಪ್‍ನ ಒಂದು ನಿರ್ದಿಷ್ಟ ಗ್ರೂಪ್ ಅಡ್ಮಿನ್ ಆಯ್ಕೆ ಮಾಡಿದ ಸದಸ್ಯರನ್ನು ಇತರೆ ಅಡ್ಮಿನ್‍ಗಳು ತೆಗೆದು ಹಾಕದಂತೆ ಆಯ್ಕೆಯನ್ನು ಸಹ ಕಲ್ಪಿಸಿದೆ.

    ಎಲ್ಲಿ ಚೆಂಜ್ ಮಾಡಬಹುದು?
    ವಾಟ್ಸಪ್‍ನ ಹೊಸ ಆವೃತ್ತಿಯನ್ನು ಅಪ್ ಡೇಟ್ ಮಾಡಿಕೊಂಡ ನಂತರ, ವಾಟ್ಸಪ್ ನ ಒಂದು ನಿರ್ದಿಷ್ಟ ಗ್ರೂಪ್ ಸೆಟ್ಟಿಂಗ್ಸ್‍ನಲ್ಲಿ `ಗ್ರೂಪ್ ಇನ್ಫೋ’ ಮೇಲೆ ಕ್ಲಿಕ್ ಮಾಡಿದಾಗ `ಗ್ರೂಪ್ ಸೆಟ್ಟಿಂಗ್ಸ್’ ಎಂಬ ಹೊಸ ಆಯ್ಕೆ ನೀಡಲಾಗಿದೆ. ಇದರಲ್ಲಿ `ಸೆಂಡ್ ಮೆಸೇಜ್’ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡಾಗ `ಆಲ್ ಪಾರ್ಟಿಸಿಪಂಟ್ಸ್’ ಅಥವಾ `ಓನ್ಲಿ ಅಡ್ಮಿನ್ಸ್’ ಎಂಬ ಎರಡು ಆಯ್ಕೆಗಳಿರುತ್ತವೆ. `ಓನ್ಲಿ ಅಡ್ಮಿನ್ಸ್’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೇ ಉಳಿದ ಸದಸ್ಯರಿಗೆ ಸಂದೇಶ ಕಳುಹಿಸುವ ಅಧಿಕಾರವೇ ಇರುವುದಿಲ್ಲ. ಅಡ್ಮಿನ್‍ಗಳು ಹಾಕಿದ್ದನ್ನಷ್ಟೇ ವೀಕ್ಷಿಸಬಹುದಾಗಿದೆ.  ಇದನ್ನೂ ಓದಿ: ವಾಟ್ಸಪ್ ಬಳಕೆದಾರರಿಗೆ ಗುಡ್‍ನ್ಯೂಸ್: ಮೆಮೊರಿ ಉಳಿಸಲು ಹೊಸ ಫೀಚರ್

    ಎಲ್ಲರನ್ನು ಅಡ್ಮಿನ್ ಮಾಡಬೇಕಾಗುತ್ತೆ!
    ಒಂದು ವೇಳೆ ಈ ಆಯ್ಕೆಯನ್ನು ಬಳಸಿದರೆ ಎಲ್ಲ ಸದಸ್ಯರ ಹಕ್ಕನ್ನೂ ಕಸಿದು ಕೊಳ್ಳಬೇಕಾಗುತ್ತದೆ. ಹೀಗಾಗಿ ಕಿರಿಕ್ ಮಾಡುವ ಸದಸ್ಯರನ್ನು ಬಿಟ್ಟು ಉಳಿದ ಸದಸ್ಯರನ್ನು ಅಡ್ಮಿನ್ ಮಾಡಿದರೆ ಮಾತ್ರ ಈ ವಿಶೇಷತೆಯನ್ನು ಬಳಸಬಹುದಾಗಿದೆ.

  • ಮಕ್ಕಳ ಪೋರ್ನ್ ವಿಡಿಯೋಗಳನ್ನು ಅಪ್ಲೋಡ್ ಮಾಡ್ತಿದ್ದ ವಾಟ್ಸಪ್ ಗ್ರೂಪ್ ಅಡ್ಮಿನ್ ಅರೆಸ್ಟ್

    ಮಕ್ಕಳ ಪೋರ್ನ್ ವಿಡಿಯೋಗಳನ್ನು ಅಪ್ಲೋಡ್ ಮಾಡ್ತಿದ್ದ ವಾಟ್ಸಪ್ ಗ್ರೂಪ್ ಅಡ್ಮಿನ್ ಅರೆಸ್ಟ್

    ನವದೆಹಲಿ: ಮಕ್ಕಳ ಪೋರ್ನ್ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಸೆಂಡ್ ಮಾಡ್ತಿದ್ದ ವಾಟ್ಸಪ್ ಗ್ರೂಪ್ ಒಂದರ ಮುಖ್ಯ ಅಡ್ಮಿನ್ ನನ್ನು ಸಿಬಿಐ ಬಂಧಿಸಿದೆ.

    ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67-ಬಿ ಅಡಿ 5 ಮಂದಿ ಅಡ್ಮಿನ್ ಮತ್ತು 119 ಮಂದಿ ಸದಸ್ಯರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಈ ಗುಂಪಿನಲ್ಲಿ ಭಾರತ ಅಲ್ಲದೇ, ಅಮೆರಿಕ, ಪಾಕಿಸ್ತಾನ, ಚೀನಾ, ಬ್ರೆಜಿಲ್ ದೇಶದ ಸದಸ್ಯರು ಇದ್ದರು ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

    ಈ ಗ್ರೂಪ್ ನ ಮುಖ್ಯ ಅಡ್ಮಿನ್ ಆಗಿದ್ದ ಉತ್ತರಪ್ರದೇಶ ಕನೌಜ್ ನಿವಾಸಿ 20 ವರ್ಷದ ನಿಖಿಲ್ ವರ್ಮಾ ನನ್ನು ಸಿಬಿಐ ಬಂಧಿಸಿದೆ. ಈತನ ಜೊತೆ ಸತ್ಯೇಂದ್ರ ಚೌಹಾಣ್, ನಫೀಸ್ ರಾಜ, ಜಾಹೀದ್ ಮತ್ತು ಆದರ್ಶ್ ಅವರು ಅಡ್ಮಿನ್ ಗಳಾಗಿದ್ದು ದೆಹಲಿ, ಉತ್ತರಪ್ರದೇಶ, ಮಹರಾಷ್ಟ್ರದಲ್ಲಿ ಇವರ ಬಂಧನಕ್ಕೆ ಶೋಧ ಕಾರ್ಯ ಆರಂಭವಾಗಿದೆ.

    “KidsXXX” ಹೆಸರಿನಲ್ಲಿ ಗ್ರೂಪ್ ಇದಾಗಿದ್ದು ಕಂಪ್ಯೂಟರ್ ನಲ್ಲಿದ್ದ ಹಾರ್ಡ್ ಡಿಸ್ಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೂಟ್ ಮಾಡಿ ಮಕ್ಕಳ ವಿಡಿಯೋವನ್ನು ಇವರು ಅಪ್ಲೋಡ್ ಮಾಡುತ್ತಿದ್ದರು ಎನ್ನುವ ಶಂಕೆ ವ್ಯಕ್ತವಾಗಿದ್ದು, ಎಲ್ಲ ಕೋನದಲ್ಲಿ ತನಿಖೆ ನಡೆಸಲಾಗುವುದು ಎಂದು ಸಿಬಿಐ ತಿಳಿಸಿದೆ.

    ಸಿಬಿಐ ಅಮೆರಿಕ, ಪಾಕಿಸ್ತಾನ, ಬ್ರೆಜಿಲ್, ಅಫ್ಘಾನಿಸ್ತಾನ, ಶ್ರೀಲಂಕಾ, ಕೀನ್ಯಾ, ನೈಜಿರಿಯಾ, ಮೆಕ್ಸಿಕೋ, ನ್ಯೂಜಿಲೆಂಡ್ ದೇಶಗಳಿಗೆ ಪತ್ರ ಬರೆದು ತನಿಖೆಗೆ ಸಹಕಾರ ನೀಡುವಂತೆ ಕೋರಲಿದೆ. ಎರಡು ವರ್ಷಗಳ ಹಿಂದೆ ಈ ಗ್ರೂಪ್ ಕ್ರಿಯೆಟ್ ಆಗಿದ್ದು, ವಿಡಿಯೋದಲ್ಲಿ ಸೆರೆಯಾಗಿರುವ ಮಕ್ಕಳು ಯಾರು ಎನ್ನುವುದು ತಿಳಿದು ಬಂದಿಲ್ಲ ಎಂದು ಸಿಬಿಐ ತಿಳಿಸಿದೆ.

    ಗುಪ್ತಚರ ಇಲಾಖೆಯೊಂದು ವಾಟ್ಸಪ್ ಗ್ರೂಪಿಗೆ ವಿವಿಧ ದೇಶಗಳಿಂದ ಬರುತ್ತಿರುವ ಟ್ರಾಫಿಕ್ ಆಧಾರಿಸಿ ಸಿಬಿಐಗೆ ಮಾಹಿತಿ ನೀಡಿತ್ತು. ಈ ಮಾಹಿತಿಯ ಆಧಾರದಲ್ಲಿ ಸಿಬಿಐ ಐಪಿ ಅಡ್ರೆಸ್ ಆಧಾರಸಿ ಆರೋಪಿಯ ಸ್ಥಳವನ್ನು ಪತ್ತೆ ಹಚ್ಚಿ ಬಂಧಿಸಿತ್ತು. ಇದನ್ನೂ ಓದಿ: ಈಗ ವಾಟ್ಸಪ್ ನಲ್ಲೂ ಹಣವನ್ನು ಸೆಂಡ್ ಮಾಡಿ!

  • ಗ್ರೂಪ್ ಅಡ್ಮಿನ್‍ಗಳಿಗೆ ಸುಪ್ರೀಂ ಪವರ್ ಕೊಟ್ಟ ವಾಟ್ಸಪ್!

    ಗ್ರೂಪ್ ಅಡ್ಮಿನ್‍ಗಳಿಗೆ ಸುಪ್ರೀಂ ಪವರ್ ಕೊಟ್ಟ ವಾಟ್ಸಪ್!

    ಕ್ಯಾಲಿಫೋರ್ನಿಯಾ: ವಾಟ್ಸಪ್ ಗ್ರೂಪ್ ನಲ್ಲಿರುವ ಸದಸ್ಯನೊಬ್ಬ ಸಮಾಜದ ಸಾಮರಸ್ಯ ಕೆಡಿಸುವ, ವೈಯಕ್ತಿಕವಾಗಿ ನಿಂದಿಸುವ ಮೆಸೇಜ್ ಕಳುಹಿಸಿದ್ರೆ ಗ್ರೂಪ್ ಅಡ್ಮಿನ್ ಗಳು ಜೈಲಿಗೆ ಹೋಗಿರುವುದನ್ನು ನೀವು ಕೇಳಿರಬಹುದು. ಆದರೆ ಈಗ ಗ್ರೂಪ್ ಅಡ್ಮಿನ್‍ಗಳಿಗೆ ಸುಪ್ರೀಂ ಪವರ್ ನೀಡುವ ವಿಶೇಷತೆಯನ್ನು ಸೇರಿಸಲು ವಾಟ್ಸಪ್ ಮುಂದಾಗಿದೆ.

    ಹೌದು, ಫೇಸ್ ಬುಕ್ ಮಾಲೀಕತ್ವದ ವಾಟ್ಸಪ್ ನಲ್ಲಿ ಹೊಸ ಸೆಟ್ಟಿಂಗ್ಸ್ ‘ರಿಸ್ಟ್ರಿಕ್ಟೆಡ್ ಗ್ರೂಪ್ಸ್’ ನೀಡಲು ಮುಂದಾಗಿದೆ. ಈ ಹೊಸ ಸೆಟ್ಟಿಂಗ್ಸ್ ಆಯ್ಕೆ ಮಾಡಿದ್ರೆ ಆ ಗ್ರೂಪ್ ನಲ್ಲಿ ಅಡ್ಮಿನ್ ಬಿಟ್ಟು ಬೇರೆ ಸದಸ್ಯರು ಯಾವುದೇ ಮೆಸೇಜ್ ಕಳುಹಿಸಲು ಸಾಧ್ಯವಿಲ್ಲ.

    ಒಂದು ವೇಳೆ ಈ ಆಯ್ಕೆ ಮಾಡಿದರೆ ಅಡ್ಮಿನ್ ಕಳುಹಿಸಿದ ಮೆಸೇಜ್ ಗಳನ್ನು ಮೆಂಬರ್ ಗಳು ವೀಕ್ಷಿಸಬಹುದೇ ವಿನಾಃ ಅದಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಒಂದು ವೇಳೆ ಸದಸ್ಯರು ಮೆಸೇಜ್ ಸೆಂಡ್ ಮಾಡಿದ್ರೂ ಅಡ್ಮಿನ್ ಅನುಮತಿ ಇಲ್ಲದೇ ಇದ್ದರೆ ಅದು ಯಾರಿಗೂ ಕಾಣಿಸುವುದಿಲ್ಲ.

    ಈ ಸುದ್ದಿ ಅಡ್ಮಿನ್ ಗಳಿಗೂ ಸಂತೋಷವಾದರೂ ಈಗಲೇ ಈ ಸೇವೆ ಬಳಕೆ ಸಿಗುವುದಿಲ್ಲ. ವಾಟ್ಸಪ್ ಬೀಟಾ ಆವೃತ್ತಿಯನ್ನು ಬಳಸುತ್ತಿರುವ ಮಂದಿಗೆ ಈ ವಿಶೇಷತೆ ಮೊದಲು ಲಭ್ಯವಾಗಲಿದೆ. ಬಳಿಕ ಎಲ್ಲ ಬಳಕೆದಾರರಿಗೆ ಇದು ಲಭ್ಯವಾಗಲಿದೆ. (ಇದನ್ನೂ ಓದಿ: ಕರ್ನಾಟಕದಲ್ಲಿ ಫಸ್ಟ್: ಅವಹೇಳನಕಾರಿ ಪೋಸ್ಟ್ ಪ್ರಕಟವಾಗಿದ್ದಕ್ಕೆ ವಾಟ್ಸಪ್ ಅಡ್ಮಿನ್ ಅರೆಸ್ಟ್ )

    ಫೇಸ್ ಬುಕ್ ಗ್ರೂಪ್ ನಲ್ಲಿ ಈಗಾಗಲೇ ಈ ವಿಶೇಷತೆ ಇದೆ. ಅಡ್ಮಿನ್ ಗಳು ಅನುಮೋದನೆ ಕೊಟ್ಟರೆ ಮಾತ್ರ ಆ ಗ್ರೂಪಿನಲ್ಲಿ ಪೋಸ್ಟ್ ಪ್ರಕಟವಾಗುತ್ತದೆ.

    ಕೆಲ ದಿನಗಳ ಹಿಂದೆ ವಾಟ್ಸಪ್ ಪಿಕ್ಚರ್ ಇನ್ ಪಿಕ್ಚರ್ (ಪಿಐಪಿ) ಮೋಡ್ ನೀಡಿತ್ತು. ಇದರಲ್ಲಿ ಬಳಕೆದಾರರಿಗೆ ವಾಟ್ಸಪ್ ನಲ್ಲಿ ಯೂ ಟ್ಯೂಬ್ ಲಿಂಕ್ ಬಂದಲ್ಲೇ ಪ್ರತ್ಯೇಕವಾಗಿ ಯೂಟ್ಯೂಬ್ ಆ್ಯಪ್/ ಬ್ರೌಸರ್ ನಲ್ಲಿ ಓಪನ್ ಆಗದೇ ಅಲ್ಲೇ ಪ್ಲೇ ಆಗುವ ವಿಶೇಷತೆಯನ್ನು ನೀಡಿತ್ತು. (ಇದನ್ನೂ ಓದಿ: ವಾಟ್ಸಪ್‍ನಲ್ಲಿ ಸ್ಮೈಲೀ ಕಳುಹಿಸಿದ್ರೆ ಬೀಳುತ್ತೆ ಕೇಸ್!  )