Tag: ಅಡ್ಡಂಡ ಸಿ.ಕಾರ್ಯಪ್ಪ

  • ಉರಿಗೌಡ, ನಂಜೇಗೌಡ ಹೆಸರುಗಳನ್ನು ನಾನು ಸೃಷ್ಟಿ ಮಾಡಿಲ್ಲ : ಅಡ್ಡಂಡ ಕಾರ್ಯಪ್ಪ

    ಉರಿಗೌಡ, ನಂಜೇಗೌಡ ಹೆಸರುಗಳನ್ನು ನಾನು ಸೃಷ್ಟಿ ಮಾಡಿಲ್ಲ : ಅಡ್ಡಂಡ ಕಾರ್ಯಪ್ಪ

    ಹಾಸನ: ಉರಿಗೌಡ, ನಂಜೇಗೌಡ ಆ ಎರಡು ಹೆಸರುಗಳನ್ನು ನಾನು ಸೃಷ್ಟಿ ಮಾಡಿದ್ದಲ್ಲ. ಉರಿಗೌಡ, ನಂಜೇಗೌಡ ವಿಚಾರ ಈಗ ಚರ್ಚೆಗೆ ಬಂದಿದ್ದು ನನ್ನ ದುರದೃಷ್ಟ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ (Addanda Cariappa) ಹೇಳಿದರು.

    ಹಾಸನದಲ್ಲಿ ಬೇಲೂರಿನ ಶ್ರೀ ಚನ್ನಕೇಶವನಿಗೆ ಬೇಕಿಲ್ಲ ಕುರಾನ್ ಪಠಣ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1996ರಲ್ಲಿ ರಾಜೇಶ್‌ಗೌಡ ಎನ್ನುವವರು ಮುನ್ನಲೆಗೆ ತಂದಿದ್ದಾರೆ. ಆದರೆ ಈಗ ರಾಜೇಶ್‌ಗೌಡ ಇಲ್ಲ, ಅವರು ನಿಧನ ಹೊಂದಿದ್ದಾರೆ. ಅವರು ಸುವರ್ಣ ಮಂಡ್ಯ ಅನ್ನುವ ಪುಸ್ತಕದಲ್ಲಿ ಇದನ್ನು ದಾಖಲಿಸಿದ್ದಾರೆ. ಟಿಪ್ಪು ಸುಲ್ತಾನ್ ಯಾರು ಕೊಂದರು ಅನ್ನುವುದು ಗೊಂದಲದಲ್ಲಿದೆ‌. ನಾನು ನಾಟಕವನ್ನು ಬರೆಯುವುದರೊಳಗೆ ಅದನ್ನು ಅಧ್ಯಯನ ಮಾಡಿದ್ದೇನೆ ಎಂದು ತಿಳಿಸಿದರು.‌

    ಬ್ರಿಟಿಷರು ಟಿಪ್ಪುವನ್ನು ಹತ್ಯೆ ಮಾಡಿಲ್ಲ ಅಂತಾರೆ, ಇನ್ನೊಂದು ಕಡೆ ಬ್ರಿಟಿಷರು ಟಿಪ್ಪುವನ್ನು ಹತ್ಯೆ ಮಾಡಿದರು ಅಂಥ ಹೇಳಿಕೊಂಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಹಾಕಿರುವ ಶಿಲಾ‌ಸ್ತಂಭಗಳಲ್ಲಾಗಲಿ ಎಲ್ಲಿಯೂ ಇಲ್ಲ. ಶ್ರೀರಂಗಪಟ್ಟಣ ವಾಟರ್‌ಗೇಟ್ ಬಳಿ ಆತ ಬಿದ್ದಿದ್ದ ಅಂತ ಹೇಳಲಾಗಿದೆ.‌ ಅಲ್ಲಿಂದ ಮುನ್ನೂರು ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿತ್ತು ಎನ್ನುವ ಅನೇಕ ಗೊಂದಲಗಳಿವೆ. ಆ ಪಾತ್ರಗಳು ನನ್ನ ಸೃಷ್ಟಿಯಲ್ಲ, 1996ರಲ್ಲೇ ದಾಖಲಾಗಿದೆ. ಈ ಬಗ್ಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಆ ಪುಸ್ತಕ ಬಿಡುಗಡೆಯೂ ಆಗಿದೆ.‌ ಆ ಪುಸ್ತಕದ ದಾಖಲೆಗಳನ್ನು ತೆಗೆದುಕೊಂಡು, ಲಾವಣಿಗಳಲ್ಲಿ ಒಂದು ಲೈನ್ ಬಂದಿರುವುದನ್ನು ನೋಡಿ ನಾನು ದಾಖಲಿಸಿದ್ದೇನೆ ಎಂದರು.

    ನಿರ್ಮಲಾನಂದನಾಥ ಸ್ವಾಮೀಜಿಯವರು ಈ ನಾಡಿನ ಸಂತ. ಅದರಲ್ಲೂ ನಿರ್ಮಲಾನಂದನಾಥ ಸ್ವಾಮೀಜಿಯವರು ಎಂಟೆಕ್ ಮಾಡಿಕೊಂಡು ವಿಜ್ಞಾನಿ ಆಗಿರುವವರು. ಅವರಿಗೆ ಅವರದ್ದೇ ಆದ ಗೌರವವಿದೆ. ನಾನು ಅವರ ಬಗ್ಗೆ ಅವಹೇಳನಕಾರಿಯಾಗಿ ಅಥವಾ ನೋವಾಗುವ ರೀತಿ ಮಾತನಾಡಿಲ್ಲ. ಆದರೆ ಸಮಾಜದ ಪ್ರಮುಖರು ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆಯೇ ಅವರಿಗೆ ಕ್ಷಮೆ ಕೇಳಿದ್ದೇನೆ, ಅದು ಮುಗಿದ ಅಧ್ಯಾಯ, ಮತ್ತೆ ಕೆದಕುವುದು ಬೇಡ. ಒಕ್ಕಲಿಗರು ಅಂದರೆ ಅದು ಗಂಗರಸರು, ವೀರರು. ಮಲ್ಲಗೌಡ ಎನ್ನುವ ಪಾತ್ರ, ಶಾಸನ ಇದೆ ಅವರಲ್ಲಿ ಅನೇಕ ಐತಿಹ್ಯಗಳಿವೆ. ನಮ್ಮ ನಾಡಿನಲ್ಲಿ ದೇವೇಗೌಡರು, ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದವರು. ನಾಡಿಗೆ ಬಹಳ ಕೊಡುಗೆಯನ್ನು ಕೊಟ್ಟಿದ್ದಾರೆ. ನಾನು ಆ ಜನಾಂಗವನ್ನು ಎಲ್ಲಿಯೂ ದೂಷಿಸಿಲ್ಲ ಎಂದು ಸ್ಪಷ್ಟಪಡಿಸಿದರು.

    ಪ್ರೊ. ಕೃಷ್ಣೇಗೌಡರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅದು ಅವರ ಅಭಿಪ್ರಾಯ, ರಾಜಕೀಯ ಮಾತನಾಡಬಾರದು ಅಂತ ಎಲ್ಲೂ ಇಲ್ಲ. ರಾಜಕೀಯ ಅದೊಂದು ಪವಿತ್ರವಾದ ಫೀಲ್ಡ್. ರಾಜಕೀಯವನ್ನು ಕೆಲವರು ಗಬ್ಬು ಎಬ್ಬಿಸಿದ್ದಕ್ಕೆ ಅದರ ಬಗ್ಗೆ ಅಹಸ್ಯ ಹುಟ್ಟಿದೆ.‌ ಅದು ಅವರ ಸ್ವಂತ ಅಭಿಪ್ರಾಯ, ಅವರನ್ನು ರಂಗಾಯಣಕ್ಕೆ ಕರೆಸಿದ್ದೇನೆ, ಅವರ ಬಗ್ಗೆ ಗೌರವವಿದೆ ಎಂದರು. ನಾನು 2012 ರಲ್ಲೇ ಟಿಪ್ಪು ಸುಲ್ತಾನ್ ಬಗ್ಗೆ ಪುಸ್ತಕ ಬರೆದು ಟಿಪ್ಪು ಮತ್ತು ಕೊಡವರು ಅಂತ ಪ್ರಕಟ ಮಾಡಿದ್ದೇನೆ. ಇದು ಚುನಾವಣೆ ಹೊತ್ತಿನಲ್ಲಿ ಕಾಕತಾಳೀಯವಾಗಿ ಬಂದುಬಿಡ್ತು. ಅದೇ ಎಫೆಕ್ಟ್ ಆಗ್ತಿರೋದು, ಚುನಾವಣೆ ಬಂದರುವುದರಿಂದ ಎಲ್ಲಾ ಮಾತಗಳು ರಾಜಕೀಯಕರಣಗೊಳ್ಳುತ್ತಿದೆ. ಸ್ವಾಮೀಜಿಯವರ ಹೇಳಿಕೆಗೆ ನನ್ನ ಸಹಮತವಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲೇ ತಂದೆ, ಮಕ್ಕಳಿಗೆ ಟಿಕೆಟ್

    ಉರಿಗೌಡ (Urigowda), ನಂಜೇಗೌಡ (Nanjegowda) ಬಗ್ಗೆ ಸಂಶೋಧನೆ ನಡೆಯಬೇಕು ಅಂತ ಸ್ವಾಮೀಜಿ ಹೇಳಿದ್ದಾರೆ, ಅದಕ್ಕೆ ನನ್ನ ಸಹಮತವಿದೆ. ಸಂಶೋಧನೆ ನಡೆಯಲಿ ಅಂತ ನಾನು ಹೇಳುತ್ತಿದ್ದೇನೆ‌. ಉರಿಗೌಡ, ನಂಜೇಗೌಡ ಚಿತ್ರಗಳು ನಾಟಕದ್ದು, ಅದನ್ನು ನಾನು ತಿರಸ್ಕರಿಸುತ್ತೇನೆ.‌ ಆ ಫೋಟೋಗಳನ್ನು ಯಾರು ವ್ಯಾಟ್ಸ‌ಪ್‌ ಅಲ್ಲಿ ಹಾಕಿದ್ದಾರೆ ಅದು ಸುಳ್ಳು. ಅದು ತಮಿಳುನಾಡಿನ ಚಿತ್ರಗಳು. ನಾನು ನನ್ನ ನಾಟಕದ ಅನೇಕ ಫೋಟೋಗಳನ್ನು ಹಾಕಿದ್ದೇನೆ.‌ ಅದರಲ್ಲಿ ನನ್ನ ನಾಟಕದಲ್ಲಿ ಬರುವ ಪಾತ್ರಧಾರಿಗಳ ಫೋಟೋ ಇದೆ.‌ ಟಿಪ್ಪುವನ್ನು ಕೊಂದಿರುವುದು ಉರಿಗೌಡ, ನಂಜೇಗೌಡ ಅಂತ ನನ್ನ ನಾಟಕದಲ್ಲಿ ಬಂದಿದೆ. ಇನ್ನಷ್ಟು ಸಂಶೋಧನೆ ನಡೆಯಲಿ. ನಾನು ಆ ಎರಡು ಪಾತ್ರಗಳನ್ನು ತಂದಿರುವುದಕ್ಕೆ ಅನೇಕ ಕಾರಣಗಳಿವೆ. ಆ ಹೆಸರುಗಳು ನನ್ನ ಸೃಷ್ಟಿ ಅಲ್ಲ ಎಂದು ಹೇಳಿದರು. ಇದನ್ನೂ ಓದಿ: ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 12 ಲಕ್ಷ ರೂ. ಹಣ ಜಪ್ತಿ

  • ಮೈಸೂರು ರಂಗಾಯಣದಲ್ಲಿ ಟಿಪ್ಪು ವಿರುದ್ಧ ನಾಟಕ ರೆಡಿ

    ಮೈಸೂರು ರಂಗಾಯಣದಲ್ಲಿ ಟಿಪ್ಪು ವಿರುದ್ಧ ನಾಟಕ ರೆಡಿ

    ಮೈಸೂರು: ರಾಜ್ಯದಲ್ಲಿ ಮತ್ತೆ ಟಿಪ್ಪು ವಿವಾದ (Tippu Sultan Controversy) ಗರಿಗೆದರುವ ಸೂಚನೆ ಸ್ಪಷ್ಟವಾಗಿದೆ. ಈ ವಿವಾದಕ್ಕೆ ಮತ್ತೆ ಮೈಸೂರಿನ ರಂಗಾಯಣವೇ (Mysore Rangayana) ವೇದಿಕೆ ಆಗ್ತಿದೆ. ಇದೇ ತಿಂಗಳ ನವೆಂಬರ್ 20 ರಿಂದ ಮೈಸೂರಿನ ರಂಗಾಯಣದಲ್ಲಿ `ಟಿಪ್ಪು ನಿಜ ಕನಸುಗಳು’ ಎಂಬ ನಾಟಕ (Drama) ಪ್ರದರ್ಶನವಾಗಲಿದೆ.

    ಟಿಪ್ಪುವನ್ನು ಹೆಜ್ಜೆ ಹೆಜ್ಜೆಗೂ ವಿರೋದಿ ಸುತ್ತಾ ಬಂದಿರುವ ಮೈಸೂರು ರಂಗಾಯಣದ (Mysore Rangayana) ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ (Addanda C Cariappa) `ಟಿಪ್ಪು ನಿಜ ಕನಸುಗಳು’ ಎಂಬ ನಾಟಕ ಬರೆದು ರಂಗಾಯಣ ಕಲಾವಿದರ ಮೂಲಕ ಅದನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ನವೆಂಬರ್ 20 ರಿಂದ ಇದರ ಪ್ರಥಮ ಪ್ರದರ್ಶನ ಶುರುವಾಗಲಿದೆ. ಒಟ್ಟು ಮೂರುವರೆ ತಾಸಿನ ನಾಟಕ ಇದು. ನಾಟಕ ಪ್ರದರ್ಶನಕ್ಕೆ ಮುನ್ನ ಈ ನಾಟಕ ಕೃತಿಯನ್ನು ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ (SL Bhyrappa) ಕೃತಿ ಬಿಡುಗಡೆ ಮಾಡಲಿದ್ದಾರೆ. ಇದನ್ನೂ ಓದಿ: ದೈವ ನರ್ತಕರ ಪವಿತ್ರ ಆಚರಣೆ ಗೌರವಿಸಿ- ಲಲಿತಾ ನಾಯಕ್‌ಗೆ ಖಾದರ್ ತಿರುಗೇಟು

    ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಅಡ್ಡಂಡ ಸಿ. ಕಾರ್ಯಪ್ಪ, ಕನ್ನಡವನ್ನು ಕೊಂದ ಮುಸ್ಲಿಂ (Muslims) ಸುಲ್ತಾನ ಟಿಪ್ಪುವನ್ನು ಕನ್ನಡ ಪ್ರೇಮಿ ಎಂದು ಕೆಲವರು ಬಣ್ಣಿಸಿದ್ದಾರೆ. ಟಿಪ್ಪು ವಿಶ್ವಧರ್ಮ ಪ್ರೇಮಿ ಎಂಬಂತೆ ಡೋಂಗಿ ಬುದ್ದಿಜೀವಿಗಳು ಬಿಂಬಿಸಿದ್ದಾರೆ. ಟಿಪ್ಪು ಬಗ್ಗೆ ಅತಿ ರಂಜಿತ ಸುಳ್ಳು ಚರಿತ್ರೆ ಸೃಷ್ಟಿಸಿದ್ದಾರೆ. ಇಂತಹ ಸುಳ್ಳಿನ ಚರಿತ್ರೆಯ ಅಸಲಿಯತ್ತನ್ನು ಬಯಲು ಮಾಡುವುದು ಈ ನಾಟಕದ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]