Tag: ಅಡ್ಡಂಡ ಕಾರ್ಯಪ್ಪ

  • ಮೈಸೂರು ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಕಾರ್ಯಪ್ಪ ರಾಜೀನಾಮೆ

    ಮೈಸೂರು ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಕಾರ್ಯಪ್ಪ ರಾಜೀನಾಮೆ

    ಮೈಸೂರು: ಚುನಾವಣೆಯಲ್ಲಿ ಕಾಂಗ್ರೆಸ್ (Congress) ಸ್ಪಷ್ಟ ಬಹುಮತ ಸಾಧಿಸಿದ ಬೆನ್ನಲ್ಲೇ ಮೈಸೂರಿನ ರಂಗಾಯಣ (Mysuru Rangayana) ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಕಾರ್ಯಪ್ಪ (Addanda C Cariappa) ರಾಜೀನಾಮೆ (Resignation) ನೀಡಿದ್ದಾರೆ.

    ಅಡ್ಡಂಡ ಕಾರ್ಯಪ್ಪ ಮೈಸೂರು ರಂಗಾಯಣದ ನಿರ್ದೇಶಕರಾದ ಮೇಲೆ ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ‘ಟಿಪ್ಪು ನಿಜಕನಸುಗಳು’ ನಾಟಕ ರಚಿಸಿ ವಿವಾದವನ್ನು ಸೃಷ್ಟಿಸಿ ಬಳಿಕ ‘ಸಿದ್ದರಾಮಯ್ಯ ನಿಜ ಕನಸುಗಳು’ ಪುಸ್ತಕ ಬಿಡುಗಡೆ ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದರು.

    ಚುನಾವಣೆಗೆ ಮುನ್ನ ಉರಿಗೌಡ ಹಾಗೂ ನಂಜೇಗೌಡ ಪಾತ್ರಗಳನ್ನು ಮುನ್ನಲೆಗೆ ತಂದು ಒಕ್ಕಲಿಗ ಹಾಗೂ ಮುಸ್ಲಿಮರನ್ನು ಎತ್ತಿಕಟ್ಟುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪಿಸಿತ್ತು. ಇದನ್ನೂ ಓದಿ: ಕೌನ್ ಬನೇಗಾ ರಾಜ್ಯದ ಮುಖ್ಯಮಂತ್ರಿ? ಹೈಕಮಾಂಡ್ ಲೆಕ್ಕಾಚಾರ ಏನು?

    ನನ್ನನ್ನು ನಿರ್ದೇಶಕನನ್ನಾಗಿ ನೇಮಿಸಿದ ಸರ್ಕಾರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿದೆ. ಇದು ಜನಾದೇಶ, ಇದನ್ನು ಗೌರವಿಸುತ್ತೇನೆ. ಈ ಕಾರಣದಿಂದ ನೈತಿಕ ಜವಾಬ್ದಾರಿಯಿಂದ ನನ್ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅಡ್ಡಂಡ ಕಾರ್ಯಪ್ಪ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಮನೆಗೆ ವಿಜಯೇಂದ್ರ ಭೇಟಿ – ಕುಟುಂಬಸ್ಥರಿಗೆ ಸಾಂತ್ವನ

  • ನಾಟಕ ಟಿಪ್ಪು ವಿರುದ್ಧ ಅಲ್ಲ, ತುಕ್ಡೆ ತುಕ್ಡೆ ಅನ್ನೋರ ವಿರುದ್ಧ- ಅಡ್ಡಂಡ ಕಾರ್ಯಪ್ಪ

    ನಾಟಕ ಟಿಪ್ಪು ವಿರುದ್ಧ ಅಲ್ಲ, ತುಕ್ಡೆ ತುಕ್ಡೆ ಅನ್ನೋರ ವಿರುದ್ಧ- ಅಡ್ಡಂಡ ಕಾರ್ಯಪ್ಪ

    ಕೋಲಾರ: ನನ್ನ ನಾಟಕ ಟಿಪ್ಪು ವಿರುದ್ಧ ಅಲ್ಲ, ಮುಸ್ಲಿಂ ವಿರುದ್ಧ ಅಲ್ಲ. ತುಕ್ಡೆ ತುಕ್ಡೆ ಅನ್ನೋರು, ಪೊಲೀಸ್ ಠಾಣೆಗೆ ಬೆಂಕಿ ಹಾಕುವವರ ವಿರುದ್ಧವಾಗಿದೆ ಎಂದು ರಂಗಾಯಣ (Rangayana) ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ (Addanda Cariappa) ತಿಳಿಸಿದ್ದಾರೆ.

    ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕಷ್ಟು ಜನರು ವಿರೋಧ ಮಾಡುತ್ತಿದ್ದಾರೆ. ರಣ ಹೇಡಿಯ ನಿಜ ರೂಪ ಬಯಲು ಮಾಡುವುದು ನನ್ನ ಉದ್ದೇಶ. ನಾಟಕ ಅಂದ್ರೆ ಕಲ್ಪನೆ ಅಲ್ಲ, ಸತ್ಯದ ಅನಾವರಣ. ಟಿಪ್ಪು ವೀರನಲ್ಲ. ಆತನ ಮತ್ತೊಂದು ಮುಖವಾಡವೆ ಟಿಪ್ಪು ನಿಜ ಕನಸುಗಳು (Tippu Nija Kanasugalu) ನಾಟಕ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನ ಸ್ಥಿತಿ ಯಾರಿಗೂ ಬೇಡ- ಅಪ್ಪನ ನೆನಪಿಗಾಗಿ ಕ್ಯಾಂಟೀನ್ ಮಂಜಣ್ಣನಿಂದ ಉಚಿತ ಅಂಬುಲೆನ್ಸ್ ಸೇವೆ

    ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನದ ಮೂಲಕ ಟಿಪ್ಪುವಿನ ಬಗ್ಗೆ ಮರೆಮಾಚಿದ್ದ ಮತ್ತೊಂದು ಮುಖವಾಡ ಬಯಲಾಗುತ್ತಿದೆ. ಮರೆಮಾಚಿದ್ದ ವಿಚಾರಗಳನ್ನು ಜನರ ಮುಂದೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಮಾ.7 ರಂದು ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಾಟಕ ಪ್ರದರ್ಶನವಾಗಲಿದೆ. ಈಗಾಗಲೇ ರಾಜ್ಯದಲ್ಲಿ 55 ಪ್ರದರ್ಶನಗಳನ್ನ ಮಾಡಲಾಗಿದೆ. ಆದ್ರೆ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನನ್ನ ವಾಕ್ ಸ್ವಾತಂತ್ರ್ಯ ಬಳಸಿಕೊಂಡು ನಾನು ನಾಟಕ ರೂಪಿಸಿದ್ದೇನೆ. ರಫಿವುಲ್ಲಾ ಎಂಬಾತ ನನ್ನ ವಿರುದ್ಧ ಬೆಂಗಳೂರಿನಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದಾನೆ. ನ್ಯಾಯಾಲಯದಲ್ಲಿ ನನ್ನ ಪರವಾಗಿ ತೀರ್ಪು ಬರಲಿದೆ. ನನ್ನ ನಾಟಕ ಪ್ರತಿನಿತ್ಯ ರಂಗಭೂಮಿಯಲ್ಲಿ ಸದ್ದು ಮಾಡುತ್ತದೆ. ನಾನು ಬಂದಾಗ ನನ್ನ ವಿರುದ್ಧ ಮಾತನಾಡುವುದು, ಫ್ಲೆಕ್ಸ್‍ಗಳನ್ನ ಹರಿದು ಹಾಕುವ ಕೆಲಸವನ್ನು ಮುಸ್ಲಿಂ ಮುಖಂಡರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಬರಗೂರು ರಾಮಚಂದ್ರಪ್ಪ (Baraguru Ramachandrappa), ಗಿರೀಶ್ ಕಾರ್ನಾಡ್ (Girish Karnad) ಅವರು ಬರೆದ ನಾಟಕಗಳಿಗೆ ವಿರೋಧ ಇಲ್ಲ. ಆದ್ರೆ ನನ್ನ ನಾಟಕಕ್ಕೆ ಮಾತ್ರ ವಿರೋಧ ಇದೆ. ಯಾಕೆ ಅವರೆಲ್ಲಾ ದೊಡ್ಡವರು ಅಂತ ಪ್ರಶ್ನೆ ಮಾಡುತ್ತಿಲ್ವಾ? ಅವರೆಲ್ಲಾ ಎಡಪಂಥೀಯರು, ಬ್ರಾಹ್ಮಣರು ಸೇರಿದಂತೆ ಬೇರೆ ಬೇರೆಯವರನ್ನ ಹಲವು ರೀತಿಯಲ್ಲಿ ವರ್ಣಿಸಿದಾಗ ಖುಷಿ ಪಡ್ತಾರೆ. ಆದ್ರೆ ಟಿಪ್ಪು ಬಗ್ಗೆ ಅವರ ನಿಜ ರೂಪ ಬಯಲಾಗುತ್ತೆ ಅನ್ನೋ ಕಾರಣಕ್ಕೆ ವಿರೋಧ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ

  • ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಜೀವ ಬೆದರಿಕೆ

    ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಜೀವ ಬೆದರಿಕೆ

    ಮೈಸೂರು: ರಂಗಾಯಣದ (Rangayana) ನಿರ್ದೇಶಕ ಅಡ್ಡಂಡ ಕಾರ್ಯಪ್ಪ (Addanda Cariappa) ಅವರಿಗೆ ಜೀವ ಬೆದರಿಕೆ (Life Threat) ಒಡ್ಡಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಅಡ್ಡಂಡ ಕಾರ್ಯಪ್ಪ ಪೊಲೀಸ್ ಠಾಣೆಗೆ ಲಿಖಿತ ದೂರನ್ನು ನೀಡಿದ್ದಾರೆ.

    ಅಡ್ಡಂಡ ಸಿ ಕಾರ್ಯಪ್ಪ ಅವರು ‘ಟಿಪ್ಪು ನಿಜಕನಸು’ ನಾಟಕ ಕೃತಿಯನ್ನು ರಚಿಸಿದ್ದರು. ಇದರ ನಾಟವನ್ನೂ ಅವರು ನಿರ್ದೇಶಿಸಿದ್ದಾರೆ. ಇದೀಗ ಕಾರ್ಯಪ್ಪ ಅವರಿಗೆ ಶಿವಮೊಗ್ಗ ಬ್ರಾಹ್ಮಣ ಬೀದಿಯ ವಿಳಾಸದಿಂದ ಬೆದರಿಕೆ ಪತ್ರ ಬಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.

    ನೀವೀಗ ಕೊಲೆಯಾಗುವ ಹಂತ ತಲುಪಿದ್ದೀರಿ. ನೀವು ನಂಬಿರುವ ದೇವರು ಕೂಡಾ ನಿಮ್ಮನ್ನು ಉಳಿಸುವುದಿಲ್ಲ ಎಂದು ಕಿಡಿಗೇಡಿಗಳು ಪತ್ರದಲ್ಲಿ ಬರೆದಿದ್ದಾರೆ.

    ಈ ಬೆದರಿಕೆ ಹಿನ್ನೆಲೆ ಕಾರ್ಯಪ್ಪ ಅವರು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ತಮಗೆ ರಕ್ಷಣೆ ನೀಡುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಆರೋಪಿ ಜೀಪ್‌ನಿಂದ ಬಿದ್ದು ಸಾವು ಪ್ರಕರಣ- ಮೂವರು ಪೊಲೀಸರ ವಿರುದ್ಧ FIR

    Live Tv
    [brid partner=56869869 player=32851 video=960834 autoplay=true]

  • ವಿಧಾನಸೌಧ ಕಟ್ಟಡದಲ್ಲಿ ವಾಸ್ತು ದೋಷವಿದೆ: ಪ್ರತಾಪ್ ಸಿಂಹ

    ವಿಧಾನಸೌಧ ಕಟ್ಟಡದಲ್ಲಿ ವಾಸ್ತು ದೋಷವಿದೆ: ಪ್ರತಾಪ್ ಸಿಂಹ

    ಮೈಸೂರು: ವಿಧಾನಸೌಧದ ಕಟ್ಟಡದಲ್ಲಿ ವಾಸ್ತು ದೋಷವಿದೆ. ಸಿಎಂ ಬಿಟ್ಟು ಉಳಿದ 223 ಜನರಿಗೂ ಸಿಎಂ ಆಗಬೇಕೆಂಬ ಆಸೆ ಇರುತ್ತದೆ. ಇದೇ ಕಾರಣಕ್ಕೆ ಇಂತಹ ಮಾತುಗಳು ಕೇಳಿ ಬರುತ್ತವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

    ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರಿಗೆ ಮಂಡಿ ನೋವು ಎಂದು ಸಿಎಂ ಬದಲಾಯಿಸಲು ಸಾಧ್ಯವಿಲ್ಲ. ಮಂಡಿ ನೋವಿಗೆ ಚಿಕಿತ್ಸೆ ಕೊಡಿಸುತ್ತೇವೆ ಹೊರತು ಸಿಎಂ ಬದಲಾಯಿಸುವುದಿಲ್ಲ ಎಂದ ಅವರು, ಮಾಜಿ ಪ್ರಧಾನಿ ವಾಜಪೇಯಿ ಅವರ ಉದಾಹರಣೆ ನೀಡಿದರು. ವಾಜಪೇಯಿ ಅವರಿಗೆ ಎರಡು ಮಂಡಿ ನೋವಿತ್ತು. ಆದರೂ ಪ್ರಧಾನಿಯನ್ನು ಬದಲಿಸಲಿಲ್ಲ. ಅಂತಹದರಲ್ಲಿ ನಾವು ಸಿಎಂ ಬದಲಾಯಿಸುತ್ತೇವಾ..? ಇದೆಲ್ಲಾ ಕೇವಲ ಊಹಾಪೋಹ ಅಷ್ಟೇ ಎಂದು ಹೇಳಿದರು.

    ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಜಾ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಂಗಾಯಣದಲ್ಲಿ ಬಹುಕಾಲದಿಂದಲೂ ಎಡಚರ ಹಾವಳಿ ಆಗಿತ್ತು. ಇದು ಎಡಪಂಥಿಯರ ಸ್ವತ್ತು ಅನ್ನುವ ರೀತಿಯ ಆಗಿತ್ತು. ಇಂತಹ ಮಾರ್ಕ್ಸ್ ವಾದ, ಟೆರಿಸ್ಟ್ ಮನಸ್ಥಿತಿಯನ್ನು ಬಿಟ್ಟು, ಈ ರೀತಿಯ ಅಪಪ್ರಚಾರ ಮಾಡಬೇಡಿ ಎಂದು ಸಲಹೆ ನೀಡಿದರು.

    ರಂಗಾಯಣದಲ್ಲಿ ಎಡಪಂಥ, ಬಲಪಂಥ, ಮಧ್ಯಪಂಥ ಎಲ್ಲದಕ್ಕೂ ಅವಕಾಶ ಸಿಗಬೇಕು ಎಂದ ಅವರು, ರಂಗಾಯಣದ ನಿರ್ದೇಶಕರ ವಿರುದ್ಧ ಪ್ರತಿಭಟನೆಗೆ ಕಾಂಗ್ರೆಸ್ ನಾಯಕರ ಬೆಂಬಲ ವಿಚಾರವಾಗಿ ಮಾತನಾಡಿ, ಟೆರರಿಸ್ಟ್ ಗಳಿಗೆ ಬೆಂಬಲ ಕೊಟ್ಟವರು. ಅಂತವರು ಇವರಿಗೆ ಬೆಂಬಲ ಕೊಡದೆ ಇರುತ್ತಾರಾ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಜಾರ್ಖಂಡ್‍ನಲ್ಲಿ ಪೆಟ್ರೋಲ್ ದರ 25 ರೂ. ಇಳಿಕೆ – ದ್ವಿಚಕ್ರ ವಾಹನಗಳಿಗೆ ಮಾತ್ರ ಈ ಆಫರ್!

    ಎಲ್ಲಾ ದೇಶ ವಿರೋಧಿ ಚಟುವಟಿಕೆ ಹಿಂದೆ ಕಾಂಗ್ರೆಸ್ ಇರುತ್ತದೆ. ಅಡ್ಡಂಡ ಕಾರ್ಯಪ್ಪ ಬಂದ ಮೇಲೆ ರಂಗಾಯಣ ಕ್ರಿಯಾಶೀಲವಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪರ ವಹಿಸಿದರು. ಇದನ್ನೂ ಓದಿ: ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ಮೇಲೆಯೇ ಚಪ್ಪಲಿ ಎಸೆದ ಅತ್ಯಾಚಾರ ಅಪರಾಧಿ!

    ಮತಾಂತರ ಕಾಯ್ದೆ ಜಾರಿಗೆ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಜನರನ್ನು ಮಂಗನನ್ನಾಗಿ ಮಾಡುವ ಮತಾಂತರಕ್ಕೆ ಬ್ರೇಕ್ ಹಾಕಲಾಗಿದೆ. ಚಿಕಿತ್ಸೆ ಕೊಡಿಸಿ ರೋಗ ವಾಸಿ ಮಾಡಿಸುತ್ತಾರೆ. ನಂತರ ಏಸುವಿನ ಪ್ರಾರ್ಥನೆ ಮಾಡಿಸುತ್ತಾರೆ. ಏಸುವಿನಿಂದ ಗುಣ ಆಯ್ತು ಅಂತಾ ಮೋಸದಿಂದ ಮತಾಂತರ ಮಾಡಿಸುತ್ತಾರೆ. ಹಾಗಾದರೆ ಎಲ್ಲಾ ಆರೋಗ್ಯ ಕೇಂದ್ರಗಳನ್ನು ಬಂದ್ ಮಾಡಿ, ಬರೀ ಏಸುವಿನ ದೇವಾಲಯ ಕಟ್ಟಿಸಬಹುದು ಎಂದ ಅವರು, ಫಾದರ್ ಸೇರಿ ಕಾಯ್ದೆ ವಿರೋಧಿಸುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನೀರಿನ ಮುಂದೆ ʼಕಪಟ ನಾಟಕʼ ಮಾಡುವ ಸಿದ್ದಹಸ್ತ, ಕಲ್ಲುಬಂಡೆಗಳನ್ನೇ ನುಂಗಿದ ʼರಕ್ಕಸ ರಾಜಕಾರಣ’

    ಯೂರೋಪಿಯನ್ ದೇಶಗಳಲ್ಲಿ ಕ್ರೈಸ್ತ ಧರ್ಮ ನೆಲ ಕಚ್ಚುತ್ತಿದೆ. ಅಲ್ಲಿ ಚರ್ಚ್ ಗಳಿಗೆ ಯಾರೂ ಹೋಗುತ್ತಿಲ್ಲ. ಚರ್ಚ್ ಗಳು ಅಲ್ಲಿ ಮಾರಾಟಕ್ಕಿವೆ. ಅದಕ್ಕಾಗಿ ಇಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನವೇ ಮತಾಂತರವಾಗಿದೆ ಎಂದರು. ಇದನ್ನೂ ಓದಿ: ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರು, ಪತ್ರಕರ್ತರ ಸಂಘದ ಕೊಡುಗೆ ಅನನ್ಯ: ವೇದವ್ಯಾಸ ಕಾಮತ್

    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಯ್ದೆ ವಾಪಸ್ ಪಡೆಯುತ್ತೇವೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಇಂತಹ ಮನಸ್ಥಿತಿಯಿಂದಲೇ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನ್ ಮಾದರಿ ಸರ್ಕಾರವನ್ನು ಜನರು ನೋಡುತ್ತಾರೆ. ಇದು ಜನರಿಗೆ ಗೊತ್ತಿದೆ. ಆದ್ದರಿಂದ ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. 2023ರಲ್ಲೂ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ. ಕಾಯ್ದೆಯನ್ನು ವಾಪಸ್ ಪಡೆಯುವ ಅವಕಾಶ ಜನ ನಿಮಗೆ ಕೊಡುವುದಿಲ್ಲ. ಕಾಂಗ್ರೆಸ್ ನಾಯಕರು ಪ್ರತಿ ಬಾರಿ ಹೊಸ ಹೊಸ ಕ್ಷೇತ್ರ ಹುಡುಕುವ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಅಧ್ಯಯನ ಶೀಲತೆಯಿಂದ ಪರಿಪೂರ್ಣ ವರದಿಗಾರಿಕೆ ಸಾಧ್ಯ: ಮನೋಹರ್ ಪ್ರಸಾದ್

    ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಬರೀ ಹಿಟ್ ಅಂಡ್ ರನ್ ಮಾಡುತ್ತಾರೆ. ಒಂದು ವಿಚಾರ ತೆಗೆದುಕೊಳ್ಳುತ್ತಾರೆ ಅರ್ಧಕ್ಕೆ ಬಿಡುತ್ತಾರೆ. ಮತ್ತೆ ಅಲ್ಲಿಂದ ಓಡಿ ಹೋಗುತ್ತಾರೆ. ಮತಾಂತರ ನಿಷೇಧ ಕಾಯ್ದೆಗೆ ಅವರೇ ಸಹಿ ಹಾಕಿದ್ದರು. ಇಲ್ಲ ಅಂತಾ ಹೇಳಿ ಅಲ್ಲೂ ಸಿಕ್ಕಿಕೊಂಡರು. ನಂತರ ಕಣ್ಣು ತಪ್ಪಿನಿಂದ ಅದು ಇದು ಅಂತಾ ಹೇಳಿದರು. ಸಿದ್ದರಾಮಯ್ಯ ಯಾವುದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದಿಲ್ಲ. ಮಹಾರಾಷ್ಟ್ರಕ್ಕೆ ಹೆದರಿಕೊಳ್ಳುವ ಕಾಂಗ್ರೆಸ್‌ನಿಂದ ನಮಗೆ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

  • ಬಿಜೆಪಿ ವಕ್ತಾರನಾಗಿದ್ದೇ ರಂಗಾಯಣ ನಿರ್ದೇಶಕನಾಗಲೂ ಕಾರಣ ಇರಬಹುದು: ಅಡ್ಡಂಡ ಕಾರ್ಯಪ್ಪ

    ಬಿಜೆಪಿ ವಕ್ತಾರನಾಗಿದ್ದೇ ರಂಗಾಯಣ ನಿರ್ದೇಶಕನಾಗಲೂ ಕಾರಣ ಇರಬಹುದು: ಅಡ್ಡಂಡ ಕಾರ್ಯಪ್ಪ

    ಮೈಸೂರು: ಮೈಸೂರಿನ ರಂಗಾಯಣ ಸಂಸ್ಥೆಯ ನೂತನ ನಿರ್ದೇಶಕರಾಗಿ ನಾಡಿನ ಹಿರಿಯ ರಂಗಕರ್ಮಿ ಹಾಗೂ ಸಾಹಿತಿ ಅಡ್ಡಂಡ ಕಾರ್ಯಪ್ಪ ಇಂದು ಮೈಸೂರಿನ ಕಲಾಮಂದಿರದ ರಂಗಾಯಣದ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.

    ಕೊಡಗು ಮೂಲದ ಹಿರಿಯ ರಂಗಕರ್ಮಿ ಹಾಗೂ ಸಾಹಿತಿಯಾಗಿರುವ ಅಡ್ಡಂಡ ಕಾರ್ಯಪ್ಪ, ಕಳೆದ ಮೂರು ತಿಂಗಳಿನಿಂದ ಖಾಲಿ ಇದ್ದ ರಂಗಾಯಣದ ನಿರ್ದೇಶಕ ಹುದ್ದೆ ಅಲಂಕರಿಸಿದರು. ಅಧಿಕಾರ ಸ್ವೀಕಾರ ಮಾಡಿದ ವೇಳೆ ಹಿರಿಯ ರಂಗಕರ್ಮಿಗಳು ಹಾಗೂ ರಂಗಾಯಣದ ಕಲಾವಿದರು ಪುಷ್ಪಗುಚ್ಚ ನೀಡಿ ಶುಭ ಹಾರೈಸಿದರು.

    ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಡ್ಡಂಡ ಕಾರ್ಯಪ್ಪ, ರಂಗಾಯಣದ ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡಿದ್ದು ಸಂತಸ ತಂದಿದೆ. ರಂಗಾಯಣದ ಏಳಿಗೆಗಾಗಿ ಸಾಕಷ್ಟು ಕನಸುಗಳನ್ನು ಕಂಡಿದ್ದೇನೆ. ಹಿರಿಯ ರಂಗಕರ್ಮಿ ಬಿ. ವಿ ಕಾರಂತರು ಸ್ಥಾಪಿಸಿರುವ ರಂಗಾಯಣವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ. ಪ್ರತಿವರ್ಷ ಸಂಕ್ರಾತಿಯ ದಿನ ಆರಂಭವಾಗುತ್ತಿದ್ದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಈ ಬಾರಿ ಮುಂದೂಡಿಕೆ ಆಗಲಿದೆ. ನಿಧಾನವಾಗಿಯಾದರೂ ಪ್ರಧಾನವಾಗಿ ಬಹುರೂಪಿ ನಾಟಕೋತ್ಸವನ್ನು ಆಯೋಜನೆ ಮಾಡುತ್ತೇವೆ ಎಂದರು.

    ಸಾಂಸ್ಕೃತಿಕ ಸಂಸ್ಥೆಗಳಿಗೆ ನಿರ್ದೇಶಕರನ್ನು ಆಯ್ಕೆ ಮಾಡುವ ಸರ್ಕಾರಗಳು, ನಿರ್ದೇಶಕರು ಅಧಿಕಾರವನ್ನು ಪೂರೈಸಲು ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಪರಿಗಣಿಸಬೇಕು. ಸರ್ಕಾರಗಳು ಬದಲಾದಾಗ ಸಾಂಸ್ಕೃತಿಕ ಸಂಸ್ಥೆಗಳ ನಿರ್ದೇಶಕರನ್ನು ಬದಲಾವಣೆ ಮಾಡುವುದು ಸರಿಯಾದ ಕ್ರಮವಲ್ಲ. ಇದರಿಂದ ಸಂಬಂಧಪಟ್ಟ ಸಾಂಸ್ಕೃತಿಕ ಸಂಸ್ಥೆಯ ಮೇಲೂ ಪರಿಣಾಮ ಬೀರುತ್ತದೆಯಲ್ಲದೆ ಅದರ ಚಟುವಟಿಕೆಗಳಿಗೆ ಹಿನ್ನಡೆ ಆಗುತ್ತದೆ. ಯಾವುದೇ ಸಾಂಸ್ಕೃತಿಕ ಸಂಸ್ಥೆಯ ನಿರ್ದೇಶಕರನ್ನು ಮೂರು ವರ್ಷ ಪೂರ್ತಿ ಅಧಿಕಾರ ಪೂರೈಸಲು ಅನುವು ಮಾಡಿಕೊಡಬೇಕು ಎಂದು ಹೇಳಿದರು.

    ರಂಗಾಯಣದ ನಿರ್ದೇಶಕರಾಗಿರುವುದಕ್ಕೆ ನಾನು ಬಿಜೆಪಿ ವಕ್ತಾರನಾಗಿದ್ದು ಕಾರಣವಾಗಿರಲೂಬಹುದು. ನಾನು ರಂಗಾಯಣದ ನಿರ್ದೇಶಕನಾಗಬೇಕೆಂದು ಪ್ರಯತ್ನ ಪಟ್ಟಿದ್ದೆ. ಆದರೆ ಈ ಹುದ್ದೆ ನಿರೀಕ್ಷೆಯಲ್ಲಿ ಇರಲಿಲ್ಲ. ಆದರೂ ಕೂಡ ಸರ್ಕಾರ ನನ್ನ ಮೇಲೆ ನಂಬಿಕೆಯಿಟ್ಟು ಈ ಹುದ್ದೆ ನೀಡಿದೆ. ನನಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.