Tag: ಅಡುಗೆ ಸಹಾಯಕಿ

  • ಮುರುಘಾಶ್ರೀ ವಿರುದ್ಧ ಪಿತೂರಿ ಕೇಸ್- ಮಠದ ಅಡುಗೆ ಸಹಾಯಕಿ ಅರೆಸ್ಟ್

    ಮುರುಘಾಶ್ರೀ ವಿರುದ್ಧ ಪಿತೂರಿ ಕೇಸ್- ಮಠದ ಅಡುಗೆ ಸಹಾಯಕಿ ಅರೆಸ್ಟ್

    ಚಿತ್ರದುರ್ಗ: ಮುರುಘಾಶ್ರೀ (Murugha shree) ವಿರುದ್ಧ ಪಿತೂರಿ ನಡೆದಿದ್ಯಾ ಅನ್ನೋ ಅನುಮಾನ ಶುರುವಾಗಿದೆ. 2ನೇ ಪೋಕ್ಸೋ ಕೇಸ್ ದೂರು ನೀಡಿದ್ದ ಮಹಿಳೆಯನ್ನೇ ಇದೀಗ ಬಂಧಿಸಲಾಗಿದೆ.

    ಮುರುಘಾಶ್ರೀ ವಿರುದ್ಧ ದೂರು ನೀಡಿದ್ದ ಮಠದ ಅಡುಗೆ ಸಹಾಯಕಿಯನ್ನ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು (Police) ಬಂಧಿಸಿದ್ದಾರೆ. ಮುರುಘಾಶ್ರೀ ವಿರುದ್ಧ ಮೊದಲ ಕೇಸ್‍ನ ತನಿಖೆ ಮುಗಿಸಿರುವ ಪೊಲೀಸರು ಕೋರ್ಟ್‍ಗೆ ಚಾರ್ಜ್‍ಶೀಟ್ (Charge sheet) ಸಲ್ಲಿಸಿದ್ರು. ಇದರ ಬೆನ್ನಲ್ಲೇ ಜೈಲಲ್ಲಿರುವ ಮುರುಘಾಶ್ರೀ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿತ್ತು.

    ಇತ್ತೀಚೆಗೆ ವೈರಲ್ ಆಗಿದ್ದ ಮಠದ ಶಿಕ್ಷಕ ಬಸವರಾಜೆಂದ್ರ (Basavarajendra) ಹಾಗೂ ಬಾಲಕಿಯೊಬ್ಬಳು ಮುರುಘಾ ಶ್ರೀ ವಿರುದ್ಧ ಸುಳ್ಳು ಕೇಸ್ ದಾಖಲಿಸುವಂತೆ ಪ್ರಚೋದಿಸಿದ್ದ ಆಡಿಯೋ ಎಲ್ಲೆಡೆ ಭಾರೀ ಕೋಲಾಹಲ ಸೃಷ್ಟಿಸಿತ್ತು. ಹೀಗಾಗಿ ಆ ಆಡಿಯೋ (Audio) ಕೇಳಿದ್ದ ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರನ್ನು ನೀಡಿದರು.

    ಈ ಆಡಿಯೋದಲ್ಲಿ ಮುರುಘಾ ಶ್ರೀಯನ್ನು ಖೆಡ್ಡಾಗೆ ಬೀಳಿಸಲು ಷಡ್ಯಂತ್ರ ನಡೆದಿದೆ. ಹೀಗಾಗಿ ಆಡಿಯೋ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದಿದ್ರು. ಇದೀಗ ಎರಡನೇ ಕೇಸ್ ವಿಚಾರಣೆಗೆಂದು ಮೈಸೂರಿನ ಒಡನಾಡಿ ಸಂಸ್ಥೆಯಿಂದ ಕರೆತಂದಿದ್ದ ಮಠದ ಅಡುಗೆ ಸಹಾಯಕಿಯನ್ನು ವಿಚಾರಣೆ ಬಳಿಕ ಮುರುಘಾಶ್ರೀ ವಿರುದ್ಧದ ಪಿತೂರಿ ಕೇಸ್‍ನಲ್ಲಿ ದಿಢೀರ್ ಅಂತ ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಡುಗೆ ಸಹಾಯಕಿ ಜೊತೆ ಸೆಲ್ಫಿ: ಶಿಕ್ಷಕ ಅಮಾನತು

    ಅಡುಗೆ ಸಹಾಯಕಿ ಜೊತೆ ಸೆಲ್ಫಿ: ಶಿಕ್ಷಕ ಅಮಾನತು

    ದಾವಣಗೆರೆ: ಕೊರೊನಾ ಸಂದರ್ಭದಲ್ಲಿ ಶಾಲೆಗಳು ಸಂಪೂರ್ಣ ಬಾಗಿಲು ಮುಚ್ಚಿದ್ದು, ಲಾಕ್‍ಡೌನ್ ಸಡಲಿಕೆ ನಂತರ ಶಾಲೆಗಳನ್ನು ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಅದೇ ಇಲ್ಲೊಂದು ಶಾಲೆ ಈಗಾಗಲೇ ಪ್ರಾರಂಭವಾಗಿದೆ. ಶಿಕ್ಷಕನೊಬ್ಬ ಅಡುಗೆ ಸಹಾಯಕಿ ಜೊತೆ ಲವ್ವಿಡವ್ವಿ ನಡೆಸುತ್ತಿದ್ದು, ಅಕೆಯ ಜೊತೆಗೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಹಾಕಿ ಅಮಾನತು ಆಗಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಗೋಗುದ್ದಿ ಗ್ರಾಮದಲ್ಲಿ ನಡೆದಿದೆ.

    ಅಮಾನತು ಆದ ಶಿಕ್ಷಕನ ಹೆಸರು ಆಂಜನೇಯ ನಾಯ್ಕ. ಗೋಗುದ್ದಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕ. ಕೊರೊನಾ ಕಾರಣ ಶಾಲೆಗಳು ಬಂದ್ ಆಗಿವೆ. ಆದರೆ ಈತ ನಿತ್ಯ ಶಾಲೆಗೆ ಬಂದು ಅಡುಗೆ ಸಹಾಯಕಿಯರನ್ನು ಕರೆಸುತ್ತಿದ್ದ. ಅಲ್ಲದೇ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು, ಅದನ್ನು ವಿವಿಧ ಗ್ರೂಪ್‍ಗಳಿಗೆ ಹಾಕುತ್ತಿದ್ದ. ಅಲ್ಲದೆ ಶಾಲೆಗಳು ತೆರೆದಿದ್ದಾಗ ಈತ ಕುಡಿದು ಬರುತಿದ್ದ. ಅಲ್ಲದೇ ಮಕ್ಕಳಿಂದ ಗುಟ್ಕಾ ತರಿಸುತ್ತಿದ್ದ. ಹೀಗೆ ಹತ್ತಾರು ಕಾರಣಕ್ಕೆ ಈತನಿಂದ ಇಡೀ ಗ್ರಾಮಸ್ಥರಿಗೆ ಬೇಸರವಾಗುತ್ತಿತ್ತು. ಇದರ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಗ್ರಾಮಸ್ಥರು ನೇರವಾಗಿ ಶಿಕ್ಷಣ ಸಚಿವರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದರು. ಇದನ್ನೂ ಓದಿ: ನೀನು ಮರಿಯಾನೆಯೂ ಅಲ್ಲಾ, ಏನೂ ಅಲ್ಲಾ – ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ಆಕ್ರೋಶ

    ಈ ಶಿಕ್ಷಕನ ಮೇಲೆ ಎರಡು ವರ್ಷದ ಹಿಂದೆ ಓರ್ವ ಮಹಿಳೆ ಈತನ ವಿರುದ್ಧ ಜಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ. ಈ ಎಲ್ಲಾ ಕಾರಣಕ್ಕಾಗಿ ಗ್ರಾಮಸ್ಥರು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ದೂರು ನೀಡಿದ್ದರು. ಹೀಗೆ ದೂರು ನೀಡಿದ ತಕ್ಷಣವೇ ಸಚಿವವರು ಜಾಗೃತರಾಗಿ ದಾವಣಗೆರೆ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಅವರಿಗೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಆದೇಶ ನೀಡಿದ್ದರು. ಇದರಿಂದ ಡಿಡಿಪಿಐ ಪರಮೇಶ್ವರಪ್ಪ ನಡೆಸಿದ ತನಿಖೆಯಲ್ಲಿ ಗ್ರಾಮಸ್ಥರು ಮಾಡಿದ ಆರೋಪಗಳು ಸತ್ಯವಾಗಿದ್ದವು. ಜೊತೆಗೆ ಗ್ರಾಮದ ಬಹುತೇಕರು ಈತನ ವಿರುದ್ಧ ದೂರು ಹೇಳಿದರು. ಎಲ್ಲಾ ಸಾಕ್ಷಿಗಳನ್ನು ಆಧಾರಿಸಿ ಶಿಕ್ಷಕ ಆಂಜನೇಯ ನಾಯ್ಕನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.