Tag: ಅಡಿಲೇಡ್

  • ‘ಶಾರ್ಟ್ ರನ್’ – ಧೋನಿ ತಪ್ಪಿಲ್ಲ: ಅಭಿಮಾನಿಯ ಡೌಟ್ ಕ್ಲಿಯರ್ ಮಾಡಿದ ಗಿಲ್‍ಕ್ರಿಸ್ಟ್

    ‘ಶಾರ್ಟ್ ರನ್’ – ಧೋನಿ ತಪ್ಪಿಲ್ಲ: ಅಭಿಮಾನಿಯ ಡೌಟ್ ಕ್ಲಿಯರ್ ಮಾಡಿದ ಗಿಲ್‍ಕ್ರಿಸ್ಟ್

    ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಪಡೆದು ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಆದರೆ ಪಂದ್ಯದ ವೇಳೆ ಧೋನಿ ರನ್ ಪೂರ್ಣಗೊಳಿಸದೇ ಇರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಆಸೀಸ್ ಮಾಜಿ ಆಟಗಾರ, ವಿಕೆಟ್ ಕೀಪರ್ ಗಿಲ್‍ಕ್ರಿಸ್ಟ್ ಘಟನೆಯಲ್ಲಿ ಧೋನಿ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ತಿಳಿಸಿದ್ದಾರೆ.

    ಧೋನಿ ಶಾರ್ಟ್ ರನ್ ಕುರಿತು ಅಭಿಮಾನಿಯೊಬ್ಬರು ಟ್ವೀಟ್ ಮಾಡಿ ಗಿಲ್‍ಕ್ರಿಸ್ಟ್ ಅಭಿಪ್ರಾಯವನ್ನು ಕೇಳಿದ್ದು, ಈ ಟ್ವೀಟ್‍ಗೆ ಗಿಲ್‍ಕ್ರಿಸ್ಟ್ ಪ್ರತಿಕ್ರಿಯೆ ನೀಡಿದ್ದಾರೆ. ಧೋನಿ ನಿಯಮಗಳ ವಿರುದ್ಧ ಏನೂ ಮಾಡಿಲ್ಲ. ಇದು ಸಾಮಾನ್ಯವಾಗಿ ಕಂಡುಬಾರದ ಸಂದರ್ಭ ಎಂದು ಹೇಳಿ ಧನ್ಯವಾದ ತಿಳಿಸಿದ್ದಾರೆ.

    ಧೋನಿ ಶಾರ್ಟ್ ರನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಗಿಲ್‍ಕ್ರಿಸ್ಟ್ ಅವರನ್ನು ಪ್ರಶ್ನಿಸಿರುವ ದರ್ಶಕ್ ಪಟೇಲ್ ಎಂಬವರು, ಪಂದ್ಯದಲ್ಲಿ ಬ್ಯಾಟ್ಸ್ ಮನ್ 2ನೇ ರನ್ ಅಥವಾ ಅದಕ್ಕಿಂತ ಹೆಚ್ಚಿನ ರನ್ ಪಡೆಯುವ ಸಂದರ್ಭದಲ್ಲಿ ಶಾರ್ಟ್ ರನ್ ಸಂಭವಿಸಿದರೆ ಮಾತ್ರ ಅದನ್ನು ಪರಿಗಣಿಸಲಾಗುತ್ತದೆ. ಒಮ್ಮೆ ಬ್ಯಾಟ್ಸ್ ಮನ್ ಮೊದಲ ರನ್ ಪೂರ್ಣಗೊಳಿಸಿದ ವೇಳೆ ಬಳಿಕ ಫೀಲ್ಡಿಂಗ್ ತಂಡ ಏನನ್ನು ಮಾಡಬಾರದು ಎಂದು ನಿರ್ಧರಿಸಿದರೆ ಅದು ರನ್ ಆಗುತ್ತದೆ ಅಲ್ಲವೇ? ಇದನ್ನು ಬಗೆಹರಿಸಿ ಎಂದು ಗಿಲ್‍ಕ್ರಿಸ್ಟ್ ಅವರಲ್ಲಿ ಕೇಳಿದ್ದರು.

    ನಡೆದಿದ್ದೇನು?
    ಅಡಿಲೇಡ್ ಏಕದಿನ ಪಂದ್ಯದ 45ನೇ ಓವರಿನಲ್ಲಿ ಧೋನಿ ಒಂದು ರನ್ ಪಡೆದು ಮುಂದಿನ ಓವರಿಗೆ ಬ್ಯಾಟಿಂಗ್ ಕಾಯ್ದುಕೊಳ್ಳಲು ನಿರ್ಧರಿಸಿದ್ದರು. ಆದರೆ ಈ ವೇಳೆ ರನ್ ಪೂರ್ಣಗೊಳಿಸದೆ ಕೆಲವೇ ಇಂಚುಗಳ ಅಂತರದಲ್ಲಿ ಮರಳಿ ಹಿಂದಕ್ಕೆ ತೆರಳಿದ್ದರು. ಧೋನಿ ಅವರ ಈ ಎಡವಟ್ಟನ್ನು ಅಂಪೈರ್ ಹಾಗೂ ಎದುರಾಳಿ ತಂಡದ ಆಟಗಾರರು ಕೂಡ ಗಮನಿಸಿರಲಿಲ್ಲ.

    ಪಂದ್ಯದ ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಹಲವರು, ತಂಡಕ್ಕೆ 18 ಎಸೆತಗಳಲ್ಲಿ 25ರನ್ ಬೇಕಿತ್ತು. ಒಂದೊಮ್ಮೆ ಧೋನಿ ಬ್ಯಾಟಿಂಗ್ ಸ್ಟ್ರೈಕ್ ಪಡೆಯದಿದ್ದರೆ, ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

    https://twitter.com/ALL_IN_ONE_MAN/status/1085528833183236096

    ನಿಯಮ ಏನು ಹೇಳುತ್ತೆ: ಮೆಲ್ಬರ್ನ್ ಕ್ರಿಕೆಟ್ ಕ್ಲಬ್(ಎಂಸಿಸಿ) ಕ್ರಿಕೆಟ್ ನಿಯಮವಾಳಿಯ (18.4.1) ಪ್ರಕಾರ ಆಟಗಾರ 2ನೇ ರನ್ ಪಡೆಯುವ ಅಥವಾ ಚೆಂಡು ಬೌಂಡರಿ ಗೆರೆದಾಟಿದೆ ಎಂದು ಭಾವಿಸಿ ರನ್ ಶಾಟ್ ರನ್ ಮಾಡಿದರೆ ಮಾತ್ರ ಅದನ್ನು ಅಂಪೈರ್ ಪರಿಗಣಿಸಬಹುದಾಗಿದೆ. ಆದರೆ ಧೋನಿ ಹಾಗೂ ದಿನೇಶ್ ಕಾರ್ತಿಕ್ ಇಬ್ಬರು 2ನೇ ರನ್ ಪಡೆಯಲು ಯತ್ನಿಸದಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆನ್‌ಫೀಲ್ಡ್‌ ನಲ್ಲೇ ಖಲೀಲ್ ಅಹ್ಮದ್ ವಿರುದ್ಧ ಗರಂ ಆದ ಧೋನಿ – ವೈರಲ್ ವಿಡಿಯೋ

    ಆನ್‌ಫೀಲ್ಡ್‌ ನಲ್ಲೇ ಖಲೀಲ್ ಅಹ್ಮದ್ ವಿರುದ್ಧ ಗರಂ ಆದ ಧೋನಿ – ವೈರಲ್ ವಿಡಿಯೋ

    ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಾಳ್ಮೆ ಕಳೆದು ಕೊಂಡು ಯುವ ಆಟಗಾರ ಖಲೀಲ್ ಅಹ್ಮದ್ ವಿರುದ್ಧ ಕೋಪಗೊಂಡಿರುವ ಘಟನೆ ನಡೆದಿದೆ.

    ಅಡಿಲೇಡ್ ಏಕದಿನ ಪಂದ್ಯದ ಅಂತಿಮ ಹಂತದ ಓವರ್ ವೇಳೆ ತಂಡದ ರನ್ ಗಳಿಸುವ ಒತ್ತಡದಲ್ಲಿತ್ತು. ಈ ಹಂತದಲ್ಲಿ ಬೌಂಡರಿ, ಸಿಕ್ಸರ್ ಸಿಡಿಸುವ ಪ್ರಯತ್ನ ನಡೆಸದ ಧೋನಿ, ತಮ್ಮ ಅನುಭವಿ ಆಟದ ಮೂಲಕ ಪ್ರತಿ ಎಸೆತದಲ್ಲಿ 2, 3 ರನ್ ಗಳಿಸಿ ತಂಡವನ್ನು ಗೆಲುವಿನ ಸನಿಹ ಕೊಂಡ್ಯೊಯುವ ಪ್ರಯತ್ನವನ್ನು ಮಾಡಿದ್ದರು.

    ಪಂದ್ಯದಲ್ಲಿ ವಾಟರ್ ಬಾಯ್ ಆಗಿದ್ದ ಖಲೀಲ್ ಅಹ್ಮದ್ ಓವರಿನ ವಿರಾಮದ ವೇಳೆ ನೀರಿನ ಬಾಟಲ್ ತರುವ ಸಮಯದಲ್ಲಿ ಪಿಚ್ ಮೇಲೆಯೇ ನಡೆದು ಬಂದರು. ಇದನ್ನು ಕಂಡ ಧೋನಿ ಗರಂ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದಾರೆ.

    ಧೋನಿ ಆ ಕ್ಷಣದಲ್ಲಿ ಹೆಚ್ಚು ಕೋಪಗೊಳ್ಳಲು ಕಾರಣವೂ ಇದ್ದು, ಶೂ ಧರಿಸಿದ್ದ ಖಲೀಲ್ ಪಿಚ್ ಮೇಲೆ ನಡೆದ ಪರಿಣಾಮ ಪಿಚ್ ಹಾನಿಗೊಳಗಾಗಿ ಬ್ಯಾಟ್ಸ್ ಮನ್‍ಗೆ ಮಾರಕವಾಗುವ ಸಾಧ್ಯತೆ ಇತ್ತು. ಪರಿಣಾಮ ರನ್ ಸಿಡಿಸುವ ಒತ್ತಡದಲ್ಲಿದ್ದ ಧೋನಿ ಗರಂ ಆಗಿದ್ದರು. ಇದನ್ನು ಮನಗಂಡ ಮತ್ತೊಬ್ಬ ಆಟಗಾರ ಯಜುವೇಂದ್ರ ಚಹಲ್ ದೂರದಿಂದಲೇ ಧೋನಿಗೆ ಹೆಲ್ಮೆಟ್ ಎಸೆದಿರುವುದನ್ನು ವಿಡಿಯೋದಲ್ಲಿ ಕಾರಣಬಹುದಾಗಿದೆ.

    ತಮ್ಮ ವಿರುದ್ಧ ಟೀಕೆ ಮಾಡಿದವರಿಗೆ ಬ್ಯಾಟ್ ಮೂಲಕವೇ ತಿರುಗೇಟು ನೀಡಿದ್ದ 37 ವರ್ಷದ ಧೋನಿ, ಅಂತಿಮ ಓವರಿನಲ್ಲಿ ಸಿಕ್ಸರ್ ಸಿಡಿಸಿದ್ದರು. ಅಲ್ಲದೇ ಪಂದ್ಯದಲ್ಲಿ 54 ಎಸೆತಗಳಲ್ಲಿ 55 ರನ್ ಸಿಡಿಸಿ ಆಜೇಯರಾಗಿ ಉಳಿದರು. ಈ ಮೂಲಕ ವಯಸ್ಸಿನ ಕಾರಣ ನೀಡಿ ಟೀಕೆ ಮಾಡುತ್ತಿದ್ದ ಹಲವರಿಗೆ ಉತ್ತರಿಸಿ ಭಾರತಕ್ಕೆ ಗೆಲುವನ್ನು ತಂದುಕೊಟ್ಟಿದ್ದಾರೆ.

    https://twitter.com/premchoprafan/status/1085135731457224705?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸೀಸ್‍ಗೆ ಟೀಂ ಇಂಡಿಯಾ ಬೌಲರ್‌ಗಳ ತಿರುಗೇಟು – ತಲೆನೋವಾದ `ಹೆಡ್’

    ಆಸೀಸ್‍ಗೆ ಟೀಂ ಇಂಡಿಯಾ ಬೌಲರ್‌ಗಳ ತಿರುಗೇಟು – ತಲೆನೋವಾದ `ಹೆಡ್’

    ಅಡಿಲೇಡ್: ಆಸೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಭಾರತೀಯ ಬೌಲರ್ ಗಳು ಮೇಲುಗೈ ಸಾಧಿಸಿದ ಹೊರತಾಗಿಯೂ ಆಸ್ಟ್ರೇಲಿಯಾ ತಂಡದ ಪರ ಟ್ರಾವಿಸ್ ಹೆಡ್ ಅರ್ಧ ಶತಕ ಸಿಡಿಸಿ ಆಸರೆಯಾಗಿದ್ದಾರೆ.

    ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್‍ನ 250 ರನ್ ಗಳಿಗೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಆಸೀಸ್ 2ನೇ ದಿನದಾಟದ ಅಂತ್ಯಕ್ಕೆ 88 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 191 ರನ್ ಗಳಿಸಿತು.

    ಇದಕ್ಕೂ ಮುನ್ನ 9 ವಿಕೆಟ್ ಕಳೆದುಕೊಂಡು 250 ರನ್ ಗಳಿಗೆ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಅಷ್ಟೇ ಮೊತ್ತಕ್ಕೆ ಅಲೌಟ್ ಆಯ್ತು. ಭಾರತ 250 ರನ್ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಆಸೀಸ್ ತಂಡಕ್ಕೆ ವೇಗಿ ಇಶಾಂತ್ ಶರ್ಮಾ ಮೊದಲ ಓವರಿನಲ್ಲಿಯೇ ಫಿಂಚ್ (0 ರನ್) ವಿಕೆಟ್ ಪಡೆದು ಅಘಾತ ನೀಡಿದರು. ಬಳಿಕ ಬಂದ ಹ್ಯಾರಿಸ್ ಭಾರತಕ್ಕೆ ಮುಳುವಾಗುವ ಸೂಚನೆ ನೀಡಿದರು. ಆದರೆ ಆರ್ ಅಶ್ವಿನ್ ಹ್ಯಾರಿಸ್ ವಿಕೆಟ್ ಪಡೆದರು. ಈ ವೇಳೆ ಆಸೀಸ್ 45 ರನ್ ಗಳಿಗೆ ಆರಂಭಿಕರಿಬ್ಬರನ್ನು ಕಳೆದುಕೊಂಡಿತ್ತು. ಮತ್ತೊಂದು ಬದಿಯಲ್ಲಿ 25 ರನ್ ಗಳಿಸಿದ್ದ ಉಸ್ಮಾನ್ ಖವಾಜಾ ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಮತ್ತೆ ಮಿಂಚಿದರು.

    ಟೀ ವಿರಾಮದ ವೇಳೆಗೆ ಆಸೀಸ್ 117 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ವಿರಾಮ ಬಳಿಕ ಬೌಲಿಂಗ್ ದಾಳಿ ನಡೆಸಿದ ಬುಮ್ರಾ 34 ರನ್ ಗಳಿಸಿದ್ದ ಹ್ಯಾಂಡ್ಸ್ ಕಾಂಬ್ ವಿಕೆಟ್ ಪಡೆದರು. ಇದರ ಬೆನ್ನಲ್ಲೇ ಇಶಾಂತ್ ಶರ್ಮಾ 5 ರನ್ ಗಳಿಸಿದ್ದ ಪೆನ್‍ಗೆ ಪೆವಿಲಿಯನ್ ಹಾದಿ ತೋರಿದರು. ಆದರೆ ಒಂದು ಬದಿಯಲ್ಲಿ ವಿಕೆಟ್ ಉರುಳುತ್ತಿದ್ದರು ತಾಳ್ಮೆಯಿಂದ ಭಾರತ ಬೌಲರ್ ಗಳನ್ನು ಎದುರಿಸಿದ ಹೆಡ್ ಅರ್ಧ ಶತಕ ಪೂರೈಸಿ ತಂಡಕ್ಕೆ ನೆರವಾದರು. ಅಲ್ಲದೇ ಕಮಿನ್ಸ್ ರೊಂದಿಗೆ 7 ವಿಕೆಟ್‍ಗೆ 50 ರನ್ ಜೊತೆಯಾಟ ನೀಡಿದರು. ದಿನದಾಟದ ಅಂತ್ಯದ ವೇಳೆ ಮತ್ತೆ ಮಿಂಚಿನ ದಾಳಿ ನಡೆಸಿದ ಬುಮ್ರಾ ಇಬ್ಬರ ಜೋಡಿಯನ್ನು ಬೇರ್ಪಡಿಸಲು ಯಶಸ್ವಿಯಾದರು. ಇದರೊಂದಿಗೆ ಆಸ್ಟ್ರೇಲಿಯಾ ಇನ್ನಿಂಗ್ಸ್ ಮುನ್ನಡೆಗಾಗಿ ಇನ್ನು 59 ರನ್ ಗಳಿಸಬೇಕಿದೆ.

    ಟೀಂ ಇಂಡಿಯಾ ಪರ ಸ್ಪಿನ್ನರ್ ಆರ್ ಅಶ್ವಿನ್ 3 ವಿಕೆಟ್ ಪಡೆದು ಮಿಂಚಿದರೆ, ವೇಗಿಗಳಾದ ಇಶಾಂತ್ ಶರ್ಮಾ, ಬುಮ್ರಾ ತಲಾ ವಿಕೆಟ್ ಪಡೆದರು. ಪಂದ್ಯದಲ್ಲಿ 16 ಓವರ್ ಬೌಲ್ ಮಾಡಿದ ಮೊಹಮ್ಮದ್ ಶಮಿ ವಿಕೆಟ್ ಪಡೆಯಲು ವಿಫಲವಾದರು.

    ಕೊಹ್ಲಿ ಸಂಭ್ರಮ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸೀಸ್ ಟೂರ್ನಿಯಲ್ಲಿ ತಮ್ಮ ಆಕ್ರಮಣಕಾರಿ ಪ್ರವೃತ್ತಿಯನ್ನ ಮುಂದುವರಿಸಿದ್ದು, ಇಶಾಂತ್ ಶರ್ಮಾ ಆಸೀಸ್ ಮೊದಲ ವಿಕೆಟ್ ಪಡೆದ ವೇಳೆ ಕೊಹ್ಲಿ ನಡೆಸಿದ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://twitter.com/__chirag_/status/1070836805040250886?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಿಷಬ್ ಪಂತ್ ವಿರುದ್ಧ ಸ್ಲೆಡ್ಜಿಂಗ್ ಅಸ್ತ್ರ ಪ್ರಯೋಗಿಸಿದ ಆಸೀಸ್ ಆಟಗಾರ! ವಿಡಿಯೋ

    ರಿಷಬ್ ಪಂತ್ ವಿರುದ್ಧ ಸ್ಲೆಡ್ಜಿಂಗ್ ಅಸ್ತ್ರ ಪ್ರಯೋಗಿಸಿದ ಆಸೀಸ್ ಆಟಗಾರ! ವಿಡಿಯೋ

    ಅಡಿಲೇಡ್: ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ವಿರುದ್ಧ ಆಸೀಸ್ ಆಟಗಾರ ಪ್ಯಾಟ್ ಕಮಿನ್ಸ್ ಸ್ಲೆಡ್ಜಿಂಗ್ ಮಾಡಿ ಆಟದ ಮೇಲಿನ ಗಮನ ಬೇರೆಡೆ ಸೆಳೆಯಲು ಯತ್ನಿಸಿದ ಘಟನೆ ಮೊದಲ ಟೆಸ್ಟ್ ಪಂದ್ಯದ ವೇಳೆ ನಡೆದಿದೆ.

    ಟೆಸ್ಟ್ ಪಂದ್ಯದ ಮೊದಲ ದಿನದಾಟದ 2ನೇ ಸೆಷನ್ ವೇಳೆ ಘಟನೆ ನಡೆದಿದ್ದು, ಪ್ಯಾಟ್ ಕಮಿನ್ಸ್ ಬೌಲಿಂಗ್ ನಲ್ಲಿ ರಿಷಬ್ ಬ್ಯಾಟಿಂಗ್ ನಡೆಸುತ್ತಿದ್ದರು. ಆದರೆ ಈ ವೇಳೆ ಪಂತ್ ಬಳಿ ಬಂದ ಪ್ಯಾಟ್ ಮಾತನಾಡಲು ಯತ್ನಿಸಿ ಸ್ಲೆಡ್ಜಿಂಗ್ ಮಾಡಿದ್ದಾರೆ. ಆದರೆ ಪ್ಯಾಟ್ ಮಾತಿಗೆ ತಲೆ ಕೆಡಿಸಿಕೊಳ್ಳದ ಪಂತ್ ಬೌಲರ್ ಮಾತನ್ನು ನಿರ್ಲಕ್ಷ್ಯ ಮಾಡಿ ಮುಂದೇ ಸಾಗಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಆಸೀಸ್ ಬೌಲರ್ ನ ಈ ಕೃತ್ಯದ ವಿಡಿಯೋ ವೈರಲ್ ಆಗಿದೆ. ಆಸೀಸ್ ಪ್ರವಾಸ ಕೈಗೊಳ್ಳುವ ಯಾವುದೇ ತಂಡ ಯುವ ಆಟಗಾರರ ಮೇಲೆ ಸಾಮಾನ್ಯವಾಗಿ ಕಾಂಗರೂ ಬಳಗ ಸ್ಲೆಡ್ಜಿಂಗನ್ನು ಅಸ್ತ್ರವಾಗಿ ಪ್ರಯೋಗಿಸುತ್ತದೆ. ಇದರ ಹಿಂದಿನ ಉದ್ದೇಶ ಯುವ ಆಟಗಾರರ ಗಮನವನ್ನು ಆಟದಿಂದ ಬೇರೆಡೆ ಸೆಳೆದು ಅವರನ್ನು ಬಹುಬೇಗ ಔಟ್ ಮಾಡುವುದಾಗಿದೆ. ಆದರೆ ಪಂದ್ಯದಲ್ಲಿ ಇದಕ್ಕೆ ಅವಕಾಶ ನೀಡದ ಪಂತ್ ಮುಗುಳ್ನಗುತ್ತ ಮುಂದೇ ಸಾಗಿದ್ದಾರೆ.

    ಪಂತ್ ಎಂದಿನಂತೆ ತಮ್ಮ ಆಸೀಸ್ ವಿರುದ್ಧ ಪಂದ್ಯದಲ್ಲೂ ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರೆಸಿದ್ದರು. ಪಂದ್ಯದಲ್ಲಿ 38 ಎಸೆತಗಳಲ್ಲಿ 25 ರನ್ ಗಳಿಸಿದ ಪಂತ್ ನ್ಯಾಥನ್ ಲಯನ್ ಬೌಲಿಂಗ್ ನಲ್ಲಿ ಔಟಾಗುವ ಮೂಲಕ ಪೆವಿಲಿಯನ್ ಸೇರಿದರು. ಆದರೆ ಇದಕ್ಕೂ ಮುನ್ನ ಚೇತೇಶ್ವರ ಪೂಜಾರಗೆ ಉತ್ತಮ ಸಾಥ್ ನೀಡಿದ ಪಂತ್ ನೀಡಿ 6ನೇ ವಿಕೆಟ್ ಗೆ 41 ರನ್ ಕಾಣಿಕೆ ನೀಡಿದರು. ಇದನ್ನು ಓದಿ : ಗಲ್ಲಿಯಲ್ಲಿ ಉಸ್ಮಾನ್ ಖವಾಜ ಅತ್ಯುತ್ತಮ ಕ್ಯಾಚ್ – ಕೊಹ್ಲಿ ಔಟಾಗುತ್ತಿರೋ ವಿಡಿಯೋ ನೋಡಿ

    ಪಂದ್ಯದಲ್ಲಿ ಆಕರ್ಷಕ 123 ರನ್ (246 ಎಸೆತ, 7 ಬೌಂಡರಿ, 2 ಸಿಕ್ಸರ್) ಸಿಡಿಸಿದ ಪೂಜಾರ ಟೆಸ್ಟ್ ಕ್ರಿಕೆಟ್‍ನಲ್ಲಿ 16ನೇ ಶತಕ ಪೂರೈಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ 5 ಸಾವಿರ ರನ್ ಗಡಿದಾಟಿದರು. ಪೂಜಾರ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 87.5 ಓವರ್ ಗಳಲ್ಲಿ 9 ವಿಕೆಟ್ ನಕಷ್ಟಕ್ಕೆ 250 ರನ್ ಗಳಿಸಿ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.

    https://twitter.com/premchoprafan/status/1070535549113397248?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv