Tag: ಅಡಿಕೆ ಮರ

  • 3,000ಕ್ಕೂ ಅಧಿಕ ಅಡಿಕೆ ಮರ, 200ಕ್ಕೂ ಅಧಿಕ ತೆಂಗಿನ ಮರಗಳು ನೆಲಸಮ

    3,000ಕ್ಕೂ ಅಧಿಕ ಅಡಿಕೆ ಮರ, 200ಕ್ಕೂ ಅಧಿಕ ತೆಂಗಿನ ಮರಗಳು ನೆಲಸಮ

    – ಬೆಳೆ ಹಾನಿ ಪ್ರದೇಶಕ್ಕೆ ರೇಣುಕಾಚಾರ್ಯ ಭೇಟಿ

    ದಾವಣಗೆರೆ: ಜಿಲ್ಲೆಯ ಹೊನ್ನಾಳಿ (Honnali) ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ (Rain) 3000ಕ್ಕೂ ಅಧಿಕ ಅಡಿಕೆ ಮರಗಳು ಹಾಗೂ 200ಕ್ಕೂ ಅಧಿಕ ತೆಂಗಿನ ಮರಗಳು ಧರೆಗುರುಳಿವೆ. ಬೆಳೆ ಹಾನಿ ಪ್ರದೇಶಕ್ಕೆ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (MP Renukacharya) ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಶನಿವಾರ ಸುರಿದ ಧಾರಾಕಾರ ಮಳೆಗೆ ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮವೊಂದರಲ್ಲೇ 3 ಸಾವಿರಕ್ಕೂ ಅಧಿಕ ಅಡಿಕೆ ಮರ ಹಾಗೂ 200ಕ್ಕೂ ಅಧಿಕ ತೆಂಗಿನ ಮರಗಳು ಧರೆಗುರುಳಿವೆ. ಪ್ರತೀ ಎಕರೆಗೆ 50 ರಿಂದ 100 ಮರಗಳು ಧರೆಗೆ ಉರುಳಿವೆ. ಹಾಗೆಯೇ ಪ್ರತಿ ಎಕರೆಗೆ 4 ರಿಂದ 5 ಲಕ್ಷ ರೂ. ಮೌಲ್ಯದ ಅಡಿಕೆ ಬೆಳೆ ಹಾನಿಯಾಗಿದೆ. ಇದನ್ನೂ ಓದಿ: TB Dam – ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿ – ತಾಂತ್ರಿಕ ತಂಡಕ್ಕೆ 2 ಲಕ್ಷ ಬಹುಮಾನ

    ಫಲಕ್ಕೆ ಬಂದ ಅಡಿಕೆ ಮರ ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲ 16 ವರ್ಷಗಳ ಕಾಲ ಮಕ್ಕಳಂತೆ ಸಾಕಿದ್ದ ಅಡಿಕೆ ಮರ ಧರೆಗುರುಳಿದ್ದನ್ನು ಕಂಡು ರೈತರು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ನಾಳೆ ಬಿಜೆಪಿ-ಜೆಡಿಎಸ್ ಪ್ರತಿಭಟನೆ

    ಬೆಳೆ ಹಾನಿಯಾದ ತೋಟಗಳಿಗೆ ರೈತರೊಂದಿಗೆ ರೇಣುಕಾಚಾರ್ಯ ಭೇಟಿ ನೀಡಿ, ರೈತರಿಗೆ ಧೈರ್ಯ ತುಂಬಿದ್ದಾರೆ. ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಡೆಂಗ್ಯೂ ಬಳಿಕ ಬೆಂಗಳೂರಲ್ಲಿ ಝಿಕಾ ವೈರಸ್ ಕಾಟ – ಜಿಗಣಿಯಲ್ಲಿ 5 ಪ್ರಕರಣ ಪತ್ತೆ

  • ಅತ್ತೆ, ಮಾವನ ಮೇಲಿನ‌ ಸಿಟ್ಟಿಗೆ ಅಡಿಕೆ ಮರಗಳನ್ನು ಕಡಿದು ಹಾಕಿದ ಸೊಸೆ!

    ಅತ್ತೆ, ಮಾವನ ಮೇಲಿನ‌ ಸಿಟ್ಟಿಗೆ ಅಡಿಕೆ ಮರಗಳನ್ನು ಕಡಿದು ಹಾಕಿದ ಸೊಸೆ!

    ದಾವಣಗೆರೆ: ಐನಾತಿ ಸೊಸೆಯೊಬ್ಬಳು ತನ್ನ ಅತ್ತೆ ಹಾಗೂ ಮಾವನ ಮೇಲಿನ ಸಿಟ್ಟಿನಿಂದ ಅಡಿಕೆ ಮರಗಳನ್ನೇ ಕಡಿದು ಹಾಕಿದ ಪ್ರಸಂಗವೊಂದು ದಾವಣಗೆರೆಯಲ್ಲಿ (Davanagere) ನಡೆದಿದೆ.

    ದಾವಣಗೆರೆ ತಾಲೂಕಿನ ಅವರಗೊಳ್ಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೂಪಾ ಕುಮಾರಸ್ವಾಮಿ ಅಡಿಕೆ ಮರಗಳನ್ನು (Arecanut Tree) ಕಡಿದು ಹಾಕಿದ ಆರೋಪಿ ಸೊಸೆ.

    ಘಟನೆ ವಿವರ: ಚಿದಾನಂದ ಸ್ವಾಮಿ ಹಾಗೂ ಶಿವನಾಗಮ್ಮ ದಂಪತಿಗೆ ಮೂವರು ಪುತ್ರರಿದ್ದಾರೆ. ಹಿರಿಯ ಪುತ್ರ ಕುಮಾರಸ್ವಾಮಿಗೆ ರೂಪಾಳೊಂದಿಗೆ ಮದುವೆ ಮಾಡಿಸಲಾಗಿತ್ತು. ಆದರೆ ಮದುವೆಯಾದ ಬಳಿಕ ರೂಪಾ, ಹಲವಾರು ಬಾರಿ ಆಸ್ತಿಯಲ್ಲಿ ಪಾಲು ಕೇಳಿತ್ತಿದ್ದಳು. ಅಲ್ಲದೇ ಮಾವ ಚಿದಾನಂದಸ್ವಾಮಿ ಬಳಿ 8 ಲಕ್ಷ ರೂಪಾಯಿ ‌ಪಡೆದು ಮನೆ ಕೂಡ ಕಟ್ಟಿಸಿಕೊಂಡಿದ್ದಳು. ಸದ್ಯ ಈಕೆ ಮೂರು ವರ್ಷದ 40ಕ್ಕೂ ಹೆಚ್ಚು ಅಡಿಕೆ ಮರ ಕಡಿದು ಹಾಕುವ ಮೂಲಕ ಸಿಟ್ಟು ಹೊರಹಾಕಿದ್ದಾಳೆ. ಇದನ್ನೂ ಓದಿ: ಬೀದಿಬದಿ ವ್ಯಾಪಾರಿಗಳ ಮೇಲೆ ಪೊಲೀಸ್ ದರ್ಪ- ಸೊಪ್ಪನ್ನ ರಸ್ತೆಗೆ ಚೆಲ್ಲಿ ವಿಕೃತಿ!

    ಈ ಸಂಬಂಧ ಚಿದಾನಂದ ಸ್ವಾಮಿಯವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ, ನಮಗೆ ವಯಸ್ಸಾಗಿದೆ. ನಮ್ಮನ್ನ ಸರಿಯಾಗಿ ನೋಡಿಕೊಳ್ಳದೆ ಸೊಸೆ ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾಳೆ. ಸಾಲದು ಎಂಬಂತೆ ಮಚ್ಚು ತಂದು ಅಡಿಕೆ ಮರಗಳನ್ನು ಕಡಿದು ಹಾಕಿದ್ದಾಳೆ ಎಂದು ಆರೋಪಿಸಿದ್ದಾರೆ.

    ಘಟನೆ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜೊತೆಗೆ ಆರೋಪಿ ರೂಪಾಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

  • ದುಷ್ಕರ್ಮಿಗಳಿಂದ 52 ಅಡಿಕೆ ಗಿಡಗಳ ನಾಶ- ಜಮೀನಿನಲ್ಲಿಯೇ ಹೊರಳಾಡಿ ರೈತ ಕಣ್ಣೀರು

    ದುಷ್ಕರ್ಮಿಗಳಿಂದ 52 ಅಡಿಕೆ ಗಿಡಗಳ ನಾಶ- ಜಮೀನಿನಲ್ಲಿಯೇ ಹೊರಳಾಡಿ ರೈತ ಕಣ್ಣೀರು

    ಹಾವೇರಿ: ಮೂರು ವರ್ಷಗಳಿಂದ ಕಷ್ಟಪಟ್ಟು ಬೆಳೆದಿದ್ದ ಅಡಿಕೆ ಗಿಡ (Arecanut Tree) ಗಳನ್ನ ದುಷ್ಕರ್ಮಿಗಳು ಕಡಿದು ಹಾಕಿದ್ದು, ದುಷ್ಕರ್ಮಿಗಳ ಕೃತ್ಯದಿಂದ ಜಮೀನಿನಲ್ಲಿ ಬಿದ್ದು ಹೊರಳಾಡಿ ರೈತ ಕಣ್ಣೀರು ಹಾಕಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೂಸನೂರು ಗ್ರಾಮದಲ್ಲಿ ನಡೆದಿದೆ.

    ರಾತ್ರಿ ವೇಳೆಯಲ್ಲಿ ತೋಟಕ್ಕೆ ನುಗ್ಗಿ 52 ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿದ್ದಾರೆ. ತುಂಡಾಗಿ ಬಿದ್ದಿರೋ ಅಡಿಕೆ ಗಿಡಗಳನ್ನು ತಬ್ಬಿಕೊಂಡು, ಜಮೀನಿನಲ್ಲಿ ರೈತ (Farmer) ಉರುಳಾಡಿ ಕಣ್ಣೀರು ಹಾಕಿದ್ದಾನೆ. ಈ ಕೃತ್ಯವನ್ನ ಎಸಗಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಕೊಡಿಸುವಂತೆ ರೈತ ಅಡಿವೆಪ್ಪ ಒತ್ತಾಯಿಸಿದ್ದಾನೆ. ಇದನ್ನೂ ಓದಿ: ಕೋಲಾರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಕಾರ್ಯಕರ್ತರು ಒತ್ತಾಯ

    ಅಡಿವೆಪ್ಪ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅಡಿಕೆ ಗಿಡಗಳನ್ನ ಬೆಳೆಸಿದ್ದ, ಇನ್ನೂ ಎರಡು ವರ್ಷಕ್ಕೆ ಫಸಲು ಪ್ರಾರಂಭವಾಗುತಿತ್ತು. ಅದರೆ ದುಷ್ಕರ್ಮಿಗಳ ಕೃತ್ಯದಿಂದ ಅನ್ನದಾತ ಕಂಗಾಲಾಗಿದ್ದಾನೆ. ಅಡಿಕೆ ಗಿಡಗಳನ್ನು ಕಡಿದು ಹಾಕಿರೋ ದುಷ್ಕರ್ಮಿಗಳ ವಿರುದ್ಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಫಸಲಿಗೆ ಬಂದಿದ್ದ 700 ಅಡಿಕೆ ಮರ ಕಡಿದು ಹಾಕಿದ ದುಷ್ಕರ್ಮಿಗಳು

    ಫಸಲಿಗೆ ಬಂದಿದ್ದ 700 ಅಡಿಕೆ ಮರ ಕಡಿದು ಹಾಕಿದ ದುಷ್ಕರ್ಮಿಗಳು

    ಹಾವೇರಿ: ಫಸಲಿಗೆ ಬಂದಿದ್ದ 700 ಅಡಿಕೆ ಮರಗಳನ್ನು ರಾತ್ರೋರಾತ್ರಿ ದುಷ್ಕರ್ಮಿಗಳು ಕಡಿದು ಹಾಕಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರೈತ ಖಲೀಲ್ ಅಹಮ್ಮದ್ ವಾಲೀಕಾರ ಎಂಬವರಿಗೆ ಸೇರಿದ ಒಂದೂವರೆ ಎಕರೆ ಜಮೀನಿನಲ್ಲಿದ್ದ ಅಡಿಕೆ ಮರಗಳನ್ನು ಕಡಿದು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. 700 ಕ್ಕೂ ಅಧಿಕ ಅಡಿಕೆ ಮರಗಳನ್ನು ಕಡಿದು ದುಷ್ಕರ್ಮಿಗಳು ಪರಾರಿಯಾಗಿದ್ದು, ಜಮೀನಿನಲ್ಲಿ ಯಾರೂ ಇಲ್ಲದ್ದನ್ನು ನೋಡಿಕೊಂಡು ರಾತ್ರೋರಾತ್ರಿ ಕಡಿದು ಹಾಕಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಖಲೀಲ್ ಅಹಮ್ಮದ್ ವಾಲೀಕಾರ ಆರು ವರ್ಷಗಳಿಂದ ಕಷ್ಟಪಟ್ಟು ಅಡಿಕೆ ಮರಗಳನ್ನು ಬೆಳೆಸಿದ್ದರು, ಇನ್ನೇನು ಫಸಲು ಕೊಡಬೇಕು ಎನ್ನುವಷ್ಟರಲ್ಲಿ ಅಡಿಕೆ ಮರಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ಇದನ್ನೂ ಓದಿ: ಕೋವಿಡ್ ಭೀತಿ ಮರೆತು ಕೋಟೆನಾಡಲ್ಲಿ ಮಟನ್ ಖರೀದಿಸಲು ಮುಗಿಬಿದ್ದ ಮಾಂಸ ಪ್ರಿಯರು

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಡೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ರೈತನ ಕುಟುಂಬ ಸದಸ್ಯರು ಅಡಿಕೆಯ ಮರಗಳ ಸ್ಥಿತಿ ನೋಡಿ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಭೀಮಾ ನದಿ ಪ್ರವಾಹ ಆತಂಕ – ನದಿ ತೀರಕ್ಕೆ ತೆರಳದಂತೆ ಡಿಸಿ ರಾಗಪ್ರಿಯಾ ಸೂಚನೆ

  • ಅಡಿಕೆ ಮರದಲ್ಲಿ ಮೂಡಿ ಬಂದ ಗಣಪತಿ

    ಅಡಿಕೆ ಮರದಲ್ಲಿ ಮೂಡಿ ಬಂದ ಗಣಪತಿ

    ದಾವಣಗೆರೆ: ಹೊನ್ನಾಳಿ ತಾಲೂಕಿನ ಕೃಷಿಕರ ತೋಟದಲ್ಲಿರುವ ಅಡಿಕೆ ಮರದ ಹೊಂಬಾಳೆಯಲ್ಲಿ ಗಣೇಶ ಮೂಡಿ ಬಂದಿದ್ದಾನೆ.

    ಗಿರೀಶ್ ಎಂಬವರ ಅಡಿಕೆ ತೋಟದಲ್ಲಿರುವ ಅಡಿಕೆ ಮರದಲ್ಲಿಗಣೇಶ ಮೂಡಿ ಬಂದಿದ್ದು, ಇದನ್ನು ವೀಕ್ಷಿಸಲು ಎರೇಹಳ್ಳಿ ಅಕ್ಕಪಕ್ಕದ ಗ್ರಾಮಸ್ಥರು ಮುಗಿಬೀಳುತ್ತಿದ್ದಾರೆ. ಮರದಲ್ಲಿ ಮೂಡಿರುವ ಗಣೇಶನನ್ನು ಕಣ್ತುಂಬಿಕೊಳ್ಳಲು ಭಕ್ತಿಯಿಂದ ಭಕ್ತರು ಆಗಮಿಸುತ್ತಿದ್ದಾರೆ.

    ಅಡಿಕೆ ಮರದಲ್ಲಿ ಮೂಡಿ ಬಂದಿರುವ ಈ ಗಣೇಶನ ಫೋಟೋ ಹಾಗೂ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ದಾಯಾದಿಗಳ ಕಲಹ- ಅಡಿಕೆ ಗಿಡಗಳ ಮಾರಣಹೋಮ

    ದಾಯಾದಿಗಳ ಕಲಹ- ಅಡಿಕೆ ಗಿಡಗಳ ಮಾರಣಹೋಮ

    ದಾವಣಗೆರೆ: ದಾವಣಗೆರೆ ತಾಲೂಕಿನ ಅಲೂರು ಗ್ರಾಮದಲ್ಲಿ ದಾಯಾದಿಗಳ ಜಗಳಕ್ಕೆ ಬೆಳೆದು ನಿಂತ 800ಕ್ಕೂ ಹೆಚ್ಚು ಅಡಿಕೆ ಗಿಡಗಳು ಬಲಿಯಾಗಿವೆ.

    ಅಲೂರು ಗ್ರಾಮದ ನಟರಾಜ್ ಎಂಬವರಿಗೆ ಸೇರಿದ್ದ 800ಕ್ಕೂ ಹೆಚ್ಚು ಅಡಿಕೆ ಗಿಡಗಳು ನಾಶವಾಗಿವೆ. ನಟರಾಜ್ ಮೂರು ಎಕರೆ ಭೂಮಿಗೆ 8 ತಿಂಗಳ ಅಡಿಕೆ ಗಿಡಗಳನ್ನು ಹಾಕಿ, ಅವುಗಳಿಗೆ ಡ್ರಿಪ್ ಮೂಲಕ ನೀರು ಹಾಕಿ ಬೆಳೆಸುತ್ತಿದ್ದರು. ಜಮೀನು ವ್ಯಾಜ್ಯದಲ್ಲಿದ್ದ ಹಿನ್ನಲೆ ನಟರಾಜ್ ಅವರ ಚಿಕ್ಕಪ್ಪ ಪಾಲಾಕ್ಷಪ್ಪ ಗಿಡಗಳನ್ನು ಕಿತ್ತು ಹಾಕಿದ್ದಾರೆ. ಪಾಲಾಕ್ಷಪ್ಪ ಧಾರವಾಡ ವಿವಿಯಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದು, ಬೆಳೆದು ನಿಂತ ಅಡಿಕೆ ಗಿಡಗಳನ್ನು ತಮ್ಮದ ಕೈಯಾರೇ ಕಿತ್ತು ಹಾಕಿದ್ದಾರೆ ಎಂದು ನಟರಾಜ್ ಆರೋಪಿಸುತ್ತಿದ್ದಾರೆ.

    ಕಷ್ಟ ಪಟ್ಟು ಅಡಿಕೆ ಗಿಡಗಳನ್ನು ಬೆಳೆಸಿದ್ದು, ಈಗ ದಾಯಾದಿಗಳೇ ನಾಶ ಮಾಡಿದ್ದಕ್ಕೆ ಜಮೀನು ಮಾಲೀಕರು ಕಣ್ಣೀರು ಹಾಕುತ್ತಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಾಲಾಕ್ಷಪ್ಪ ವಿರುದ್ಧ ದೂರು ದಾಖಲು ಮಾಡಲು ಜಮೀನು ಮಾಲೀಕರು ಮುಂದಾಗಿದ್ದಾರೆ.

  • ದಾಯಾದಿಗಳ ಕಲಹಕ್ಕೆ 200 ಅಡಿಕೆ ಮರಗಳು ಬಲಿ!

    ದಾಯಾದಿಗಳ ಕಲಹಕ್ಕೆ 200 ಅಡಿಕೆ ಮರಗಳು ಬಲಿ!

    ದಾವಣಗೆರೆ: ದಾಯಾದಿಗಳ ದ್ವೇಷಕ್ಕೆ ನೂರಾರು ಅಡಿಕೆ ಮರಗಳು ಬಲಿಯಾದ ಅಮಾನವೀಯ ಘಟನೆಯೊಂದು ದಾವಣಗೆರೆಯಲ್ಲಿ ನಡೆದಿದೆ.

    ಈ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನವಿಲೇಹಾಳ್ ಗ್ರಾಮದಲ್ಲಿ ನಡೆದಿದೆ. ಚಿಕ್ಕರಾಜು ಹಾಗೂ ಆತನ ತಮ್ಮನ ನಡುವೆ ಆಸ್ತಿ ವಿವಾದವಿತ್ತು. ಆಸ್ತಿ ವಿವಾದ ಕೋರ್ಟ್ ಮೆಟ್ಟಲೇರಿತ್ತು.

    ಕೆಲ ದಿನಗಳ ಹಿಂದೆ ಚನ್ನಗಿರಿ ಕೋರ್ಟ್ ನಲ್ಲಿ ಚಿಕ್ಕರಾಜು ಸಹೋದರನಿಗೆ ಜಮೀನು ಉಳುಮೆ ಮಾಡುವಂತೆ ಆದೇಶವಾಗಿತ್ತು. ಇದರಿಂದ ಚಿಕ್ಕರಾಜು ಜಿಲ್ಲಾ ಕೋರ್ಟ್ ನಿಂದ ಇಂಜೆಕ್ಷನ್ ಆರ್ಡರ್ ತಂದಿದ್ದರು. ಅದನ್ನು ಲೆಕ್ಕಿಸದೆ ಚಿಕ್ಕರಾಜು ಸಹೋದರ 17 ವರ್ಷದ ಫಲಕ್ಕೆ ಬಂದಿರುವ 200 ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಜೆಸಿಬಿಯಿಂದ ನಾಶ ಮಾಡಿದ್ದಾರೆ.

    ದಾಯಾದಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv