Tag: ಅಡಿಕೆ ಬೆಳೆ

  • ವಿಶೇಷ ಬೇಡಿಕೆ ಇಟ್ಟು ಅಯೋಧ್ಯೆ ರಾಮನಿಗೆ ಹಿಂಗಾರ ಸಮರ್ಪಣೆಗೆ ಮುಂದಾದ ಮಲೆನಾಡಿಗರು

    ವಿಶೇಷ ಬೇಡಿಕೆ ಇಟ್ಟು ಅಯೋಧ್ಯೆ ರಾಮನಿಗೆ ಹಿಂಗಾರ ಸಮರ್ಪಣೆಗೆ ಮುಂದಾದ ಮಲೆನಾಡಿಗರು

    ಚಿಕ್ಕಮಗಳೂರು: ಅಯೋಧ್ಯೆಯ (Ayodhya) ಬಾಲಕರಾಮನಿಗೆ ಮಲೆನಾಡಿನ ರೈತರು ವಿಶೇಷ ಬೇಡಿಕೆ ಪತ್ರದೊಂದಿಗೆ ಅಡಿಕೆ ಹಿಂಗಾರ (Betel Nut Flower) ಸಮರ್ಪಣೆಗೆ ಮುಂದಾಗಿದ್ದಾರೆ.

    ಮಲೆನಾಡಿನಲ್ಲಿ ಅಡಿಕೆಗೆ ಹಳದಿ ಎಲೆ ರೋಗದ ಸಮಸ್ಯೆ ಇದೆ. ಕಸ್ತೂರಿ ರಂಗನ್ ವರದಿಯ ಭೀತಿ, ಬಫರ್ ಜೋನ್ ಹಾಗೂ ಮೀಸಲು ಅರಣ್ಯದ ಹೆಸರಲ್ಲಿ ಆಳುವ ವರ್ಗದ ಕಾನೂನಿನ ಕುಣಿಕೆಗೆ ಬೆಲೆ ತೆರುವಂತಾಗಿದೆ. ಕೃಷಿಯನ್ನೇ ನಂಬಿ ಜೀವನ ನಡೆಸುವವರ ಜೀವನ ಉಳಿಯಲಿ ಎಂಬ ಪ್ರಾರ್ಥನೆಯ ಪತ್ರದೊಂದಿಗೆ ಮಲೆನಾಡಿನ ಅಡಿಕೆ ಹಿಂಗಾರ ಸರ್ಮಪಿಸಲು ಮಲೆನಾಡಿನ ಶ್ರೀರಾಮನ ಭಕ್ತರು ಮುಂದಾಗಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಜನಸಾಗರ- ರಾಮಲಲ್ಲಾನ ದರ್ಶನಕ್ಕೆ ಓಡೋಡಿ ಬರುತ್ತಿರೋ ಭಕ್ತರು

    ಬಾಳೆಹೊನ್ನೂರಿನ (Balehonnur) ಖಾಂಡ್ಯ ಮಾಕರ್ಂಡೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು, ಅಯೋಧ್ಯೆಗೆ ಶ್ರೀರಾಮನ ಭಕ್ತರು ತೆರಳಲು ತಯಾರಿ ನಡೆಸಿದ್ದಾರೆ. ಸೋಮವಾರ ಅಥವಾ ಮಂಗಳವಾರ ರಾಮಲಲ್ಲನಿಗೆ ಅಡಿಕೆ ಹಿಂಗಾರ ಸಮರ್ಪಣೆಯಾಗಲಿದೆ. ಇದನ್ನೂ ಓದಿ: ಸಿಎಂ ಆಗಿದ್ದೀರಿ, ಪಿಎಂ ಕೂಡ ಆಗಿದ್ದೀರಿ.. ಈಗ ಆರಾಮಾಗಿರಿ ಅಂತ ಹಿರಿಯ ನಾಯಕರು ಹೇಳಿದ್ದರು: ಮೋದಿ

  • ಅಡಿಕೆ ಮರಗಳಿಗೆ ಎಲೆಚುಕ್ಕಿ ರೋಗಭಾದೆ – ಸಿಎಂ ನೆರವು ಕೋರಿದ ನಿರ್ಮಲಾನಂದನಾಥ ಸ್ವಾಮೀಜಿ

    ಅಡಿಕೆ ಮರಗಳಿಗೆ ಎಲೆಚುಕ್ಕಿ ರೋಗಭಾದೆ – ಸಿಎಂ ನೆರವು ಕೋರಿದ ನಿರ್ಮಲಾನಂದನಾಥ ಸ್ವಾಮೀಜಿ

    ಬೆಂಗಳೂರು: ಅಡಿಕೆ ಮರಗಳಿಗೆ (Arecanut Crop) ಎಲೆ ಚುಕ್ಕಿರೋಗ ಹರಡುತ್ತಿದ್ದು, ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿ ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ (Government Of Karnataka) ಅವರ ನೆರವಿಗೆ ಧಾವಿಸಬೇಕೆಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji) ಅವರು ಸಿಎಂ ಬೊಮ್ಮಾಯಿ (Basavaraj Bommai) ಅವರಿಗೆ ಮನವಿ ಮಾಡಿದ್ದಾರೆ.

    ಶ್ರೀಗಳು ಬರೆದ ಪತ್ರದಲ್ಲಿ ಏನಿದೆ?
    ಮಲೆನಾಡು ಪ್ರಾಂತ್ಯವಾದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಲ್ಲಿ ಅತಿಯಾದ ಮಳೆಯಾಗುತ್ತಿದೆ. ಇದರಿಂದ ಈ ಭಾಗದ ರೈತರ ಜೀವನಾಧಾರವಾಗಿರುವ ಅಡಿಕೆ, ಕಾಫಿ (Coffe), ಮೆಣಸು ಬೆಳೆಗಳು ಶೇ.90ರಷ್ಟು ಹಾನಿಗೊಳಗಾಗಿವೆ. ಅಡಿಕೆ ಮರಗಳಿಗೆ ದಶಕಗಳಿಂದಲೂ ಭಾದಿಸುತ್ತಿರುವ ಹಳದಿ ರೋಗದಿಂದ ಅಡಿಕೆ ಬೆಳೆ ಸಂಪೂರ್ಣ ನಾಶವಾಗಿ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.

    ಈಗ ಅಡಿಕೆ ಮರಗಳಿಗೆ ಎಲೆಚುಕ್ಕಿ ರೋಗ ತುಂಬ ವೇಗವಾಗಿ ಹರಡುತ್ತಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಸಣ್ಣ ಹಿಡುವಳಿದಾರರು, ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಮಲೆನಾಡು ಕೃಷಿಕರಿಗೆ ಭವಿಷ್ಯದ ಬದುಕಿನ ಬಗ್ಗೆ ಹತಾಷ ಮನೋಭಾವ ಉಂಟಾಗಿದೆ.

    ಅಡಿಕೆ ಬೆಳೆಯ ಮೇಲೆ ಅವಲಂಬಿತರಾಗಿರುವ ರೈತರ ಬದುಕು ಜರ್ಝರಿತವಾಗಿದ್ದು, ರೈತರು, ಕೃಷಿ ತಜ್ಞರು ಅಡಿಕೆ ಬೆಳೆರೋಗಗಳ ಸಂಶೋಧನಾಕಾರಿಗಳಿಂದ ಸಲಹೆ ಪಡೆದು ಅಡಿಕೆ ಮರಗಳಿಗೆ ರೋಗ ನಿರೋಧಕ ಔಷಧಗಳನ್ನು ಸಿಂಪಡಿಸುತ್ತಿದ್ದಾರೆ. ಆದರೂ ಈ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಹಾನಿಕಾರಕ ಔಷಧಗಳಿಂದ ಪರಿಸರಕ್ಕೂ ಹಾನಿಯಾಗುವ ಆತಂಕ ಉಂಟಾಗುತ್ತಿದೆ.

    ಈ ಹಿನ್ನೆಲೆಯಲ್ಲಿ ಮಲೆನಾಡಿನ ರೈತರ ಪರಿಸ್ಥಿತಿ ಅವಲೋಕಿಸಿ ಅಡಿಕೆ ಮರಗಳಿಗೆ ತಗುಲಿರುವ ರೋಗಗಳಿಗೆ ಸೂಕ್ತ ಔಷಧ ಒದಗಿಸಿಕೊಡಬೇಕು. ಅಡಿಕೆ ಬೆಳೆಗಾರರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಬೇಕು ಎಂದು ಮುಖ್ಯಮಂತ್ರಿಯವರಿಗೆ ಪತ್ರದಲ್ಲಿ ಕೋರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಣ್ಣ ತಮ್ಮನ ಜಗಳ, ಪೊಲೀಸರಿಗೆ ಲಾಭ – ಖಾಕಿ ಪಾಲಾದ ಅಡಿಕೆ ಬೆಳೆ

    ಅಣ್ಣ ತಮ್ಮನ ಜಗಳ, ಪೊಲೀಸರಿಗೆ ಲಾಭ – ಖಾಕಿ ಪಾಲಾದ ಅಡಿಕೆ ಬೆಳೆ

    – ಆತ್ಮಹತ್ಯೆಯೊಂದೇ ದಾರಿ ಎನ್ನುತ್ತಿರುವ ರೈತ

    ಬೆಂಗಳೂರು: ಅಣ್ಣ ತಮ್ಮನ ಜಗಳದಿಂದ ಪೊಲೀಸರು ಲಾಭ ಪಡೆದಿದ್ದು, ಖಾಕಿ ದರ್ಪದಿಂದ ರೈತರೊಬ್ಬರು ಕಂಗಾಲಾಗಿರುವ ಘಟನೆ ನೆಲಮಂಗಲ ತಾಲೂಕಿನ ಹಲ್ಕೂರು ಗ್ರಾಮದಲ್ಲಿ ನಡೆದಿದೆ.

    ಅನ್ನದಾತನ ಮೇಲೆ ಪೊಲೀಸರು ದರ್ಪ ಮೆರೆದಿರುವ ಆರೋಪ ಕೇಳಿಬರುತ್ತಿದೆ. ಗ್ರಾಮದ ಹನುಮಂತರಾಯಪ್ಪ ಮತ್ತು ಸಿದ್ದಗಂಗಯ್ಯ ಇಬ್ಬರು ಅಣ್ಣ ತಮ್ಮಂದಿರು. ಈ ಇಬ್ಬರು ಸಹೋದರರ ಜಗಳ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನ್ಯಾಯ ತೀರ್ಮಾನಕ್ಕೆಂದು ಬಂದಿದ್ದ ನೆಲಮಂಗಲ ಗ್ರಾಮಾಂತರ ಪೊಲೀಸರು ಕೈಗೆ ಬಂದಿದ್ದ ಅಡಿಕೆ ಫಸಲನ್ನು ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ತೀವ್ರ ನಷ್ಟಕ್ಕೆ ತುತ್ತಾದ ರೈತ ಹನುಮಂತಪ್ಪ ನನಗೆ ಆತ್ಮಹತ್ಯೆಯೊಂದೇ ಉಳಿದಿರೋ ದಾರಿ ಎಂದು ಗೋಳಾಡುತ್ತಿದ್ದಾರೆ.

    ಜಮೀನಿನ ವಿಚಾರಕ್ಕೆ ಹನುಮಂತರಾಯಪ್ಪ ಮತ್ತು ಸಿದ್ದಗಂಗಯ್ಯ ನಡುವೆ ಜಗಳ ನಡೆಯುತ್ತಿತ್ತು. ಈ ಸಂಬಂಧ ಹಿಂದೆ ತಹಶೀಲ್ದಾರ್ ಅವರು ಜಗಳ ಇತ್ಯರ್ಥಗೊಳಿಸಿ ಈ ಜಮೀನು ಹನುಮಂತರಾಯಪ್ಪ ಅವರಿಗೆ ಸೇರಿದ್ದು, ಅವರಿಗೆ ಯಾವುದೇ ತೊಂದರೆ ಕೊಡುವ ಹಾಗಿಲ್ಲ ಎಂದು ಸಿದ್ದಗಂಗಯ್ಯನಿಗೆ ಎಚ್ಚರಿಸಿದ್ದರು. ಹಠ ಬಿಡದ ಸಿದ್ದಗಂಗಯ್ಯ ಅಣ್ಣನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದನು. ಹೀಗಾಗಿ ಅಣ್ಣ ತಮ್ಮನ ಸಮಸ್ಯೆ ಬಗೆಹರಿಸಲು ಪೊಲೀಸರು ಬಂದಿದ್ದರು.

    ಕಟಾವು ವೇಳೆ ಬೇಕಾಬಿಟ್ಟಿ ಜಮೀನಿನಲ್ಲಿ ಅಡಿಕೆ ಸುರಿದು ಮೊದಲೇ ರೈತ ನಷ್ಟ ಅನುಭವಿಸುತ್ತಿದ್ದರು. ಈ ವೇಳೆ ಹನುಮಂತರಾಯಪ್ಪ ಅವರ ಜಮೀನಿಗೆ ಬಂದ ಪೊಲೀಸರು ಸಹೋದರರ ಸಮಸ್ಯೆ ಬಗೆಹರಿಸುವ ಬದಲು ಹನುಮಂತರಾಯಪ್ಪ ಮಾರಾಟ ಮಾಡಿದ 4 ಲಕ್ಷದ ಅಡಿಕೆ ಬೆಳೆ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಕಂಗಾಲಾಗಿರು ರೈತ ಕಣ್ಣೀರು ಹಾಕುತ್ತಿದ್ದಾರೆ. ತಮ್ಮನ ಜೊತೆ ಪೊಲೀಸರು ಕೈಜೋಡಿಸಿ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.