Tag: ಅಟ್ಲೀ

  • ಎರಡೂವರೆ ಗಂಟೆ ಕಾರು ಚಲಾಯಿಸಿಕೊಂಡು ಹೋಗಿ ‘ಕಾಂತಾರ ಚಾಪ್ಟರ್‌ 1’ ನೋಡಿದ ಅಟ್ಲೀ

    ಎರಡೂವರೆ ಗಂಟೆ ಕಾರು ಚಲಾಯಿಸಿಕೊಂಡು ಹೋಗಿ ‘ಕಾಂತಾರ ಚಾಪ್ಟರ್‌ 1’ ನೋಡಿದ ಅಟ್ಲೀ

    – ರಿಷಬ್‌ ಶೆಟ್ಟಿಗೆ ಮತ್ತೆ ರಾಷ್ಟ್ರೀಯ ಪ್ರಶಸ್ತಿ ಸಿಗಬೇಕು ಎಂದ ಖ್ಯಾತ ನಿರ್ದೇಶಕ

    ಶಾರುಖ್‌ ಖಾನ್‌ ಅಭಿನಯದ ‘ಜವಾನ್’‌ ಸಿನಿಮಾ ಅದ್ಭುತ ಯಶಸ್ಸಿನ ನಂತರ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಿರ್ದೇಶಕರಾಗಿರುವ ಅಟ್ಲೀ, ಕಾಂತಾರ ಚಾಪ್ಟರ್‌ 1 (Kantara Chapter 1) ಸಿನಿಮಾವನ್ನು ಹಾಡಿಹೊಗಳಿಸಿದ್ದಾರೆ. ಎರಡೂವರೆ ಗಂಟೆಗಳ ಕಾಲ ನಾನೇ ಕಾರು ಚಲಾಯಿಸಿಕೊಂಡು ಹೋಗಿ ಕಾಂತಾರ ಸಿನಿಮಾ ನೋಡಿದ್ದೇನೆಂದು ಅಟ್ಲೀ ಹೇಳಿಕೊಂಡಿದ್ದಾರೆ.

    ‘ಪುಷ್ಪ’ ತಾರೆ ಅಲ್ಲು ಅರ್ಜುನ್ ಅವರೊಂದಿಗಿನ ತಮ್ಮ ಮುಂಬರುವ ಚಿತ್ರದ ಕೆಲಸದಲ್ಲಿ ಅಟ್ಲೀ (Atlee) ಬ್ಯುಸಿಯಾಗಿದ್ದಾರೆ. ಈ ಸಂದರ್ಭದಲ್ಲೇ, ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ‘ಕಾಂತಾರ ಚಾಪ್ಟರ್‌ 1’ ಸಿನಿಮಾ ನೋಡಲು ಆಮ್ಸ್ಟರ್‌ಡ್ಯಾಮ್‌ನಲ್ಲಿ ಎರಡೂವರೆ ಗಂಟೆಗಳ ಕಾಲ ತಾನೇ ಕಾರು ಚಲಾಯಿಸಿದ್ದಾಗಿ ಅಟ್ಲೀ ತಿಳಿಸಿದ್ದಾರೆ. ಇದನ್ನೂ ಓದಿ: ಬಾಕ್ಸಾಫೀಸ್‌ನಲ್ಲಿ ಕಾಂತಾರ ಚಾಪ್ಟರ್‌ 1 ಮಿಂಚಿನ ಓಟ – ಸಿದ್ಧಿವಿನಾಯಕನ ದರ್ಶನ ಪಡೆದ ರಿಷಬ್‌

    ಚಿತ್ರ ಬಿಡುಗಡೆಯಾದಾಗ ನಾನು ಆಮ್ಸ್ಟರ್‌ಡ್ಯಾಮ್‌ನಲ್ಲಿದ್ದೆ. ಮೊದಲ ದಿನವೇ ನಾನು ಅದನ್ನು ಚಿತ್ರಮಂದಿರದಲ್ಲಿ ನೋಡಿದೆ. ಸಿನಿಮಾ ನೋಡಬೇಕು ಅಂತ ಸುಮಾರು ಎರಡೂವರೆ ಗಂಟೆಗಳ ಕಾಲ ನಾನೇ ಕಾರು ಚಲಾಯಿಸಿಕೊಂಡು ಥಿಯೇಟರ್‌ಗೆ ಹೋದೆ. ಸಿನಿಮಾ ನೋಡಿದ ಬಳಿಕ ತಕ್ಷಣ ನಾನು ರಿಷಬ್‌ಗೆ ಕರೆ ಮಾಡಿದೆ. ಅವರು ನನ್ನ ಒಳ್ಳೆಯ ಸ್ನೇಹಿತ. ನಾನು ತುಂಬಾ ಗೌರವಿಸುವ ವ್ಯಕ್ತಿ ಎಂದು ಅಟ್ಲೀ ಪ್ರತಿಕ್ರಿಯಿಸಿದ್ದಾರೆ.

    ರಿಷಬ್‌ ಅವರು ಇತರೆ ಸಿನಿಮಾ ನಿರ್ದೇಶಕರಿಗೆ ಸ್ಫೂರ್ತಿ. ಅವರ ಸಾಧನೆ ಊಹಿಸಲು ಅಸಾಧ್ಯ. ಒಬ್ಬ ನಿರ್ದೇಶಕನಾಗಿ ಅಂತಹ ಚಿತ್ರವನ್ನು ನಿರ್ವಹಿಸುವುದು ತುಂಬಾ ಕಷ್ಟ. ಅವರು ನಾಯಕ ನಟನಾಗಷ್ಟೇ ಪಾತ್ರವನ್ನು ನಿರ್ವಹಿಸಿಲ್ಲ. ಇಂತಹ ಸಿನಿಮಾ ಹೊರತರಲು ನಿಮ್ಮೊಳಗೆ ಸಾಕಷ್ಟು ಲಯ ಬೇಕಾಗುತ್ತದೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: `ಕಾಂತಾರ’ ಮೆಚ್ಚಿದ ಅಟ್ಲಿ – ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ನೆನೆದ ಖ್ಯಾತ ನಿರ್ದೇಶಕ

    ಅದ್ಭುತ ಸಿನಿಮಾ ಕೊಟ್ಟ ರಿಷಬ್‌ಗೆ ಹ್ಯಾಟ್ಸ್ ಆಫ್! ಅವರು ರಾಷ್ಟ್ರೀಯ ಪ್ರಶಸ್ತಿಯನ್ನು ಗೆಲ್ಲಬೇಕೆಂದು ನಾನು ಬಯಸುತ್ತೇನೆ. ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಮತ್ತೊಮ್ಮೆ ರಾಷ್ಟ್ರೀಯ ಪ್ರಶಸ್ತಿಗಳಿಗೆ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದು ತಿಳಿಸಿದ್ದಾರೆ.

    ಅ.2 ರಂದು ದೇಶ-ವಿದೇಶದಾದ್ಯಂತ ತೆರೆ ಕಂಡ ಕಾಂತಾರ ಚಾಪ್ಟರ್‌ 1 ಬ್ಲಾಕ್‌ಬಸ್ಟರ್‌ ಹಿಟ್‌ ಕಾಣುತ್ತಿದೆ. ಒಂದು ವಾರದಲ್ಲೇ ಗಲ್ಲಾಪೆಟ್ಟಿಗೆಯಲ್ಲಿ 509 ಕೋಟಿ ಕೊಳ್ಳೆ ಹೊಡೆದಿದೆ. ಕಾಂತಾರಗೆ ಎಲ್ಲೆಡೆ ಪ್ರೇಕ್ಷಕರಿಂದ ಮೆಚ್ಚುಗೆ ಮಹಾಪೂರವೇ ಹರಿದುಬರುತ್ತಿದೆ. ಸಿನಿಮಾರಂಗದ ಸ್ಟಾರ್‌ ನಟರು, ನಿರ್ದೇಶಕರು ಹಾಗೂ ಗಣ್ಯರು ರಿಷಬ್‌ ಶೆಟ್ಟಿಯ ಕಾಂತಾರ ಸಿನಿಮಾವನ್ನು ಹಾಡಿಹೊಗಳಿಸಿದ್ದಾರೆ.

  • ಅಲ್ಲು ಹೊಸ ಸಿನಿಮಾ ಡ್ಯೂನ್‌ ಕಾಪಿ? – ಕಿಡಿ ಕಿಡಿ ಕ್ಲಾರಿಟಿ ಕೊಟ್ಟ ಅಟ್ಲೀ

    ಅಲ್ಲು ಹೊಸ ಸಿನಿಮಾ ಡ್ಯೂನ್‌ ಕಾಪಿ? – ಕಿಡಿ ಕಿಡಿ ಕ್ಲಾರಿಟಿ ಕೊಟ್ಟ ಅಟ್ಲೀ

    ಪುಷ್ಪ ಬಳಿಕ ಅಲ್ಲು ಅರ್ಜುನ್ (Allu Arjun) ಒಪ್ಪಿಕೊಂಡಿರುವ ಬಿಗ್ ಪ್ರಾಜೆಕ್ಟ್ AA22xA6. ಈ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ ಆದರೆ ಈಗಾಗ್ಲೇ ಅನೌನ್ಸ್ಮೆಂಟ್ ಟೀಸರ್‌ನಿಂದಲೇ ಭಾರೀ ನಿರೀಕ್ಷೆ ಹುಟ್ಟಿಸಿದೆ.

    ಇದು ಬಿಗ್ ಪ್ರಾಜೆಕ್ಟ್ ಚಿತ್ರವಾಗಿದ್ದು ಸನ್‌ಪಿಚ್ಚರ್ಸ್‌ ಇದನ್ನು ನಿರ್ಮಾಣ ಮಾಡುತ್ತಿದೆ. ಬಿಗ್ ಮಹತ್ವದ ಪ್ರಾಜೆಕ್ಟ್ ತಮಿಳು ನಿರ್ದೇಶಕ ಅಟ್ಲೀ (Atlee) ನಿರ್ದೇಶನದಲ್ಲಿ ಬರುತ್ತಿದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಅಭಿನಯಿಸುತ್ತಿರುವುದು ವಿಶೇಷ. ಆದರೆ ಟೀಸರ್ ರಿಲೀಸ್ ಆದ ಬೆನ್ನಲ್ಲೇ ಇದನ್ನ ಹಾಲಿವುಡ್‌ನ `ಡ್ಯೂನ್’ ಚಿತ್ರದ ಕಾಪಿ ಎಂದು ಟೀಕೆ ಮಾಡಲಾಗಿತ್ತು. ಹೌದು ಎನ್ನುವಂತೆ ಹಾಲಿವುಡ್‌ನಲ್ಲೇ ಮುಖವಾಡವನ್ನೂ ತಯಾರು ಮಾಡುವ ವೀಡಿಯೋ ಹಂಚಿಕೊಂಡಿದ್ರು ಅಲ್ಲು ಅರ್ಜುನ್. ಕಾಪಿ ಮಾಡಿದ್ದಾರೆ ಅನ್ನೋ ವಿಚಾರಕ್ಕೆ ಅಟ್ಲೀ ಇದೀಗ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾಗೆ ದೇವರೇ ದಿಕ್ಕು – ರವೀನಾ ಟಂಡನ್

    ಹಾಲಿವುಡ್‌ನ ಡ್ಯೂನ್ ಕಾಪಿ ಎಂದು ಟೀಕೆ ಬರುತ್ತಿರುವ ಹಿನ್ನೆಲೆ ನಿರ್ದೇಶಕ ಅಟ್ಲೀ ಸ್ಪಷ್ಟನೆ ಕೊಟ್ಟಿದ್ದಾರೆ. ನಮ್ಮ ಕೆಲಸಕ್ಕೆ ಆಗಾಗ್ಗೆ ಹೀಗೆಯೇ ಹೇಳಲಾಗುತ್ತೆ, ಎಷ್ಟು ಬಾರಿ ಅಂತ ಈ ಥರ ಕಲ್ಪಿಸಿಕೊಳ್ಳುತ್ತಾರೆ ಎಂದಿದ್ದಾರೆ ಅಟ್ಲೀ. ಅಲ್ಲಿಗೆ ಪೋಸ್ಟರ್ ಕಾಪಿ ವಿಚಾರವನ್ನ ಅಟ್ಲಿ ತಳ್ಳಿಹಾಕಿದ್ದಾರೆ.

    ನಿರ್ದೇಶಕ ಅಟ್ಲೀ ಚೆನ್ನೈನಲ್ಲಿರುವ ಸತ್ಯಭಾಮಾ ಇನ್ಸ್ಸ್ಟಿಟ್ಯೂಟ್ ಆಫ್ ಸೈನ್ಸ್ & ಟೆಕ್ನಾಲಜಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. ಈ ವೇಳೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸುವ ವೇಳೆ ಮುಂದಿನ ಬಿಗ್‌ಪ್ರಾಜೆಕ್ಟ್ ಹಾಗೂ ವೈರಲ್ ಆಗಿರುವ ಡ್ಯೂನ್ ಪೋಸ್ಟರ್ ಕಾಪಿ ಬಗ್ಗೆ ಪ್ರತಿಕ್ರಿಯೆ ನೀಡಿದರು.

  • ವಿಜಯ್ ಕೊನೆಯ ಚಿತ್ರಕ್ಕೆ ಸಮಂತಾ ನಾಯಕಿ

    ವಿಜಯ್ ಕೊನೆಯ ಚಿತ್ರಕ್ಕೆ ಸಮಂತಾ ನಾಯಕಿ

    ಕಾಲಿವುಡ್ ಸ್ಟಾರ್ ನಟ ದಳಪತಿ ವಿಜಯ್ (Vijay Thalapathy) ಅವರು ರಾಜಕೀಯಕ್ಕೆ (Politics) ಎಂಟ್ರಿ ಕೊಡುವ ಬಗ್ಗೆ ಇತ್ತೀಚೆಗೆ ಮಾಹಿತಿ ನೀಡಿದ್ದರು. ತಮ್ಮದೇ ಸ್ವಂತ ಪಕ್ಷ ಕಟ್ಟಿ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಇದರ ನಡುವೆ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ಕೂಡ ವಿಜಯ್ ಮುಗಿಸಿ ಕೊಡ್ತಿದ್ದಾರೆ. ಸದ್ಯ ವಿಜಯ್ ನಟನೆಯ ಕೊನೆಯ ಚಿತ್ರದ ನಾಯಕಿ, ಪ್ರಾಜೆಕ್ಟ್ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ.

    ‘ಲಿಯೋ’ (Leo) ಚಿತ್ರದ ನಂತರ ವಿಜಯ್ 68ನೇ ಚಿತ್ರಕ್ಕೆ ವೆಂಕಟ್ ಪ್ರಭು ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಈ ಚಿತ್ರದ ಶೂಟಿಂಗ್‌ನಲ್ಲಿ ವಿಜಯ್ ಸಕ್ರಿಯರಾಗಿದ್ದಾರೆ. ಈ ಬೆನ್ನಲ್ಲೇ ವಿಜಯ್ ನಟನೆಯ ಕೊನೆಯ ಚಿತ್ರದ ಬಗ್ಗೆ ಚರ್ಚೆ ಆಗುತ್ತಿದೆ. 69ನೇ ಸಿನಿಮಾ ವಿಜಯ್ ನಟಿಸಲಿರುವ ಕೊನೆಯ ಪ್ರಾಜೆಕ್ಟ್ ಎನ್ನಲಾಗುತ್ತಿದೆ. ಇದನ್ನೂ ಓದಿ:ಪುತ್ರ ಅನಂತ್ ಪ್ರೀ-ವೆಡ್ಡಿಂಗ್‌ನಲ್ಲಿ ನೀತಾ ಅಂಬಾನಿ ಡ್ಯಾನ್ಸ್

    ವಿಜಯ್ ಕೊನೆ ಸಿನಿಮಾಗೆ ‘ಜವಾನ್’ (Jawan) ಸ್ಟಾರ್ ಡೈರೆಕ್ಟರ್ ಅಟ್ಲೀ (Atlee Kumar) ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಇದೆ. ಈ ಹಿಂದೆ ಇಬ್ಬರ ಕಾಂಬೋದಲ್ಲಿ ಮೆರ್ಸಲ್, ಬಿಗಿಲ್, ಹಾಗೂ ತೇರಿ, ಚಿತ್ರಗಳು ಮೂಡಿ ಬಂದಿತ್ತು. ಈಗ ಮತ್ತೆ ಈ ಜೋಡಿ ಒಂದಾಗಲು ನಿರ್ಧರಿಸಿದ್ದಾರಂತೆ.

    ವಿಜಯ್ 69ನೇ ಚಿತ್ರಕ್ಕೆ ಸಮಂತಾ (Samantha) ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ಖ್ಯಾತ ನಿರ್ಮಾಣ ಸಂಸ್ಥೆಯೊಂದು ನಿರ್ಮಾಣದ ಹೊಣೆ ಹೊತ್ತಿದೆ. ಈ ಸುದ್ದಿ ನಿಜನಾ? ಚಿತ್ರತಂಡ ಅಧಿಕೃತ ಘೋಷಣೆ ಮಾಡುವವರೆಗೂ ಕಾಯಬೇಕಿದೆ.

    ಈ ಹಿಂದೆ ಕೂಡ ವಿಜಯ್-ಸಮಂತಾ ಕಾಂಬೋದಲ್ಲಿ ಮೆರ್ಸಲ್, ತೇರಿ ಸಿನಿಮಾ ಮೂಡಿ ಬಂದಿತ್ತು. ಇಬ್ಬರ ಕೆಮಿಸ್ಟ್ರಿ ಚಿತ್ರದಲ್ಲಿ ಮೋಡಿ ಮಾಡಿತ್ತು. ಸಿನಿಮಾಗಾಗಿ ಈಗ ಮತ್ತೆ ಈ ಜೋಡಿ ಒಂದಾಗುತ್ತಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

  • ಅಲ್ಲು ಅರ್ಜುನ್‌ಗೆ ‘ಜವಾನ್’ ಡೈರೆಕ್ಟರ್ ಆ್ಯಕ್ಷನ್ ಕಟ್

    ಅಲ್ಲು ಅರ್ಜುನ್‌ಗೆ ‘ಜವಾನ್’ ಡೈರೆಕ್ಟರ್ ಆ್ಯಕ್ಷನ್ ಕಟ್

    ಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅವರು ಸದ್ಯ ‘ಪುಷ್ಪ 2’ (Pushpa 2) ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅವರ ಮುಂಬರುವ ಪ್ರಾಜೆಕ್ಟ್ ಬಗ್ಗೆ ಸಖತ್ ಸುದ್ದಿ ಆಗುತ್ತಿದೆ. ‘ಜವಾನ್’ (Jawan) ಡೈರೆಕ್ಟರ್ ಅಟ್ಲೀ ಜೊತೆ ಸಿನಿಮಾ ಮಾಡುವ ಬಗ್ಗೆ ಚರ್ಚೆಯಾಗುತ್ತಿದೆ. ಇದನ್ನೂ ಓದಿ:ಮಕ್ಕಳ ಕಲ್ಯಾಣಕ್ಕೆ 1 ಲಕ್ಷ ದೇಣಿಗೆ ನೀಡಿದ ರಣ್‌ಬೀರ್ ಕಪೂರ್

    ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್‌ಗೆ (Sharukh Khan) ಅಟ್ಲೀ ನಿರ್ದೇಶನ ಮಾಡಿದ ಮೇಲೆ ಅವರ ರೇಂಜ್ ಬದಲಾಗಿದೆ. ನಿರ್ದೇಶನದ ಮೊದಲ ಹಿಂದಿ ಸಿನಿಮಾ ಜವಾನ್ ಸೂಪರ್ ಡೂಪರ್ ಹಿಟ್ ಆಗಿದೆ. ಇದೀಗ ಜವಾನ್ ಸಕ್ಸಸ್ ಬೆನ್ನಲ್ಲೇ ಮುಂದಿನ ಚಿತ್ರಕ್ಕೆ ಅಲ್ಲು ಅರ್ಜುನ್ ಜೊತೆ ಅಟ್ಲೀ (Atlee) ಕೈಜೋಡಿಸಲಿದ್ದಾರೆ ಎನ್ನಲಾಗುತ್ತಿದೆ.

    ಹೈದರಾಬಾದ್‌ಗೆ ತೆರಳಿ ಅಲ್ಲು ಅರ್ಜುನ್‌ಗೆ (Allu Arjun) ಕಥೆ ಹೇಳಿ ಬಂದಿದ್ದಾರಂತೆ ಅಟ್ಲೀ. ಇಬ್ಬರೂ ಕೂಡ ಹೊಸ ಪ್ರಾಜೆಕ್ಟ್ ಬಗ್ಗೆ ಗ್ರೀನ್ ಸಿಗ್ನಲ್ ಕೊಡದೇ ಗಪ್‌ಚುಪ್ ಆಗಿದ್ದಾರೆ. ‘ಜವಾನ್’ (Jawan) ಸಿನಿಮಾಗಿಂತ ವಿಭಿನ್ನ ಕಥೆಯನ್ನೇ ಅಟ್ಲೀ ರೆಡಿ ಮಾಡಿದ್ದಾರಂತೆ.‌ ಮೂಲಗಳ ಪ್ರಕಾರ, ಪುಷ್ಪ 2 ನಂತರ ಅಟ್ಲೀ ಜೊತೆ ಅಲ್ಲು ಅರ್ಜುನ್‌ ಸಿನಿಮಾ ಮಾಡ್ತಾರೆ ಅನ್ನೋದು ಇನ್‌ಸೈಡ್‌ ಸುದ್ದಿ.

    ಒಂದು ವೇಳೆ ಅಟ್ಲೀ ಜೊತೆ ಕೈಜೋಡಿಸಿದ್ರೆ ಇಬ್ಬರ ಕಾಂಬಿನೇಷನ್‌ ಹೇಗೆ ಮೂಡಿ ಬರಬಹುದು ಎಂಬ ಕುತೂಹಲ ಈಗಾಗಲೇ ಅಭಿಮಾನಿಗಳಲ್ಲಿ ಮೂಡಿದೆ.

  • `ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ

    `ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ

    ಶಾರುಖ್ ಖಾನ್ `ಜೀರೋ’ ಚಿತ್ರದ ಸೋಲಿನ ನಂತರ ಜವಾನ್ ಆಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಜವಾನ್ ಆರ್ಭಟಕ್ಕೆ ಡೇಟ್ ಕೂಡ ಫಿಕ್ಸ್ ಆಗಿದೆ. ಅಷ್ಟೇ ಅಲ್ಲ, ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಶಾರುಖ್ ಎಂಟ್ರಿ ಕೊಡ್ತಿದ್ದಾರೆ.

    2018ರ `ಜೀರೋ’ ಸಿನಿಮಾ ನೆಲಕಚ್ಚಿದ ಮೇಲೆ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ. ಒಂದಿಷ್ಟು ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದು ಬಿಟ್ಟರೆ ಶಾರುಖ್ ನಟನೆಯ ಚಿತ್ರಗಳು ರಿಲೀಸ್ ಆಗಿಲ್ಲ. ಈಗ ತೆರೆಮರೆಯಲ್ಲಿ ಭರ್ಜರಿ ಕಸರತ್ತು ಮಾಡಿಕೊಂಡು, ಬಾಲಿವುಡ್ ಬಾದಷಾ ಶಾರುಖ್ ಖಾನ್ ಜವಾನ್ ಆಗಿ ಅವತಾರವೆತ್ತಲು ರೆಡಿಯಾಗಿದ್ದಾರೆ. ಚಿತ್ರದಲ್ಲಿ ದ್ವಿಪಾತ್ರಕ್ಕೆ ಶಾರುಖ್ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ: ಯೋಗರಾಜ್ ಭಟ್ ಮಾವ, ನಟ ಸತ್ಯ ಉಮ್ಮತ್ತಾಲ್ ನಿಧನ

    ಅಟ್ಲೀ ಮತ್ತು ಶಾರುಖ್ ಕಾಂಬಿನೇಷನ್ `ಜವಾನ್’ ಸಿನಿಮಾ ಜೂನ್ 2ರಂದು 2023ಕ್ಕೆ ತೆರೆಗೆ ಅಬ್ಬರಿಸಲು ಮುಹೂರ್ತ ಫಿಕ್ಸ್ ಆಗಿದೆ. ಶಾರುಖ್‌ಗೆ ನಯನತಾರಾ ಜೋಡಿಯಾಗಿ ನಟಿಸಿದ್ದಾರೆ. ಹಿಂದಿ, ತಮಿಳು,ತೆಲುಗು, ಸೇರಿದಂತೆ ಕನ್ನಡದಲ್ಲೂ ಜವಾನ್ ಸಿನಿಮಾ ತೆರೆ ಕಾಣಲಿದೆ. ಟೀಸರ್ ಮೂಲಕಕ ಶಾರುಖ್ ಲುಕ್ ಕೂಡ ರಿವೀಲ್ ಮಾಡಿದ್ದು, 2023ಕ್ಕೆ ಬೆಳ್ಳಿಪರದೆಯಲ್ಲಿ ರಾರಾಜಿಸೋದು ಗ್ಯಾರೆಂಟಿ.

    ಇದೊಂದು ಪಕ್ಕಾ ಆ್ಯಕ್ಷನ್ ಓರಿಯೆಂಟೆಡ್ ಚಿತ್ರವಾಗಿದ್ದು, ಶಾರುಖ್ ಹೊಸ ಲುಕ್ಕಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಗೆಲುವಿಗಾಗಿ ಕಾಯ್ತಿರೋ ಬಾದಷಾ ಶಾರುಖ್‌ಗೆ ಜವಾನ್ ಸಿನಿಮಾ ಕೈಹಿಡಿಯುತ್ತಾ ಅಂತಾ ಕಾದುನೋಡಬೇಕಿದೆ.

  • ಅಟ್ಲೀ ಸಂಭಾವನೆ ಕೇಳಿ ಅಲ್ಲು ಅರ್ಜುನ್ ಶಾಕ್

    ಅಟ್ಲೀ ಸಂಭಾವನೆ ಕೇಳಿ ಅಲ್ಲು ಅರ್ಜುನ್ ಶಾಕ್

    ಕಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ನಿರ್ದೇಶಕ ಅಟ್ಲೀ ಸಂಚಲನ ಮೂಡಿಸಿದ್ದಾರೆ. ರಾಜಾ ರಾಣಿ, ಮರ್ಸೆಲ್, ಬಿಗಿಲ್‌ನಂತರ ಸಾಲು ಸಾಲು ಹಿಟ್ ಚಿತ್ರಗಳನ್ನೇ ನೀಡುತ್ತಾ ಬಂದಿದ್ದಾರೆ. ಇದೀಗ ಶಾರುಖ್ ಖಾನ್‌ಗೆ ಆ್ಯಕ್ಷನ್ ಕಟ್ ಹೇಳಿದ ನಂತರ ಅಲ್ಲು ಅರ್ಜುನ್‌ಗೆ ಡೈರೆಕ್ಷನ್ ಮಾಡುವುದಕ್ಕೆ ಅಟ್ಲೀ ರೆಡಿಯಾಗಿದ್ದಾರೆ. ಈಗ ಅಟ್ಲೀ ಸಂಭಾವನೆ ಕೇಳಿ ಅಲ್ಲು ಅರ್ಜುನ್ ಫುಲ್ ಶಾಕ್ ಆಗಿದ್ದಾರೆ.

    ಅಟ್ಲೀ ಟ್ಯಾಲೆಂಟ್ ನೋಡಿ ಬಾಲಿವುಡ್ ಸ್ಟಾರ್‌ಗಳು ರೆಡ್ ಕಾರ್ಪೆಟ್ ಹಾಕಿ ವೆಲ್‌ಕಮ್ ಮಾಡ್ತಿದ್ದಾರೆ. ಇತ್ತೀಚೆಗಷ್ಟೇ ಅಟ್ಲೀ ಪ್ರತಿಭೆ ನೋಡಿ ಶಾರುಖ್ ಖಾನ್ ತಮಗೆ ಸಿನಿಮಾ ಮಾಡಿಕೊಂಡುವಂತೆ ಕೇಳಿದ್ರು. ಅದರಂತೆ ಶೂಟಿಂಗ್ ಭರದಿಂದ ಸಾಗುತ್ತಿದೆ. ಹಾಗಾಗಿ ನಿರ್ದೇಶಕ ಅಟ್ಲೀಗೆ ಚಿತ್ರರಂಗದಲ್ಲಿ ಭಾರೀ ಬೇಡಿಕೆಯಿದೆ. ಇನ್ನು ಇತ್ತೀಚೆಗಷ್ಟೇ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಜತೆ ಸಿನಿಮಾ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ.

    `ಪುಷ್ಪ’ ಗ್ರ್ಯಾಂಡ್ ಸಕ್ಸಸ್ ನಂತರ ಅಲ್ಲು ಅರ್ಜುನ್ ಅಟ್ಲೀ ಜತೆಗೆ ಸಿನಿಮಾ ವಿಷ್ಯವಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅಟ್ಲೀ 35 ಕೋಟಿ ರೂಪಾಯಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದರಂತೆ. `ಬಿಗಿಲ್’ ನಿರ್ದೇಶಕನ ಸಂಭಾವನೆ ಕೇಳಿನೇ ಅಲ್ಲು ಅರ್ಜುನ್ ಬೆರಗಾಗಿದ್ದಾರಂತೆ. ಇದೀಗ ಸಂಭಾವನೆ ಕೇಳಿ ಸಿನಿಮಾ ಮಾಡುವುದನ್ನೇ ಅಲ್ಲು ಅರ್ಜನ್ ಕೈಬಿಟ್ಟಿದ್ದಾರಂತೆ. ಈ ಸುದ್ದಿ ಇದೀಗ ಸೌತ್ ಗಲ್ಲಿಯಲ್ಲಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ. ಇದನ್ನೂ ಓದಿ:ಕಾನ್ ಫೆಸ್ಟಿವಲ್‌ನಲ್ಲಿ ತಾರೆಯರ ದಂಡು

    ಅಲ್ಲು ಅರ್ಜುನ್ ಅವರು ಅಟ್ಲೀ ಅವರೊಂದಿಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಮುಂದಾಗಿದ್ದರು. ಲೈಕಾ ಬ್ಯಾನರ್‌  ನಿರ್ಮಾಣಕ್ಕೆ ಮುಂದಾಗಿತ್ತು. ಇದೀಗ ಅಟ್ಲೀ ಸಂಭಾವನೆ ಕೇಳಿ ಶಾಕ್ ಆಗಿರುವ ಅಲ್ಲು ಅರ್ಜುನ್ ಆ್ಯಂಡ್ ಟೀಮ್ ಸಿನಿಮಾ ಯೋಜನೆ ಮುಂದುವರೆಯುತ್ತಾ ಅಥವಾ ಕೈಬೀಡುತ್ತಾರಾ ಅಂತಾ ಕಾದುನೋಡಬೇಕಿದೆ.