Tag: ಅಟ್ಲಿ

  • ಮಗುವಿನ ನಿರೀಕ್ಷೆಯಲ್ಲಿ ದಕ್ಷಿಣದ ಖ್ಯಾತ ನಿರ್ದೇಶಕ ಅಟ್ಲಿ

    ಮಗುವಿನ ನಿರೀಕ್ಷೆಯಲ್ಲಿ ದಕ್ಷಿಣದ ಖ್ಯಾತ ನಿರ್ದೇಶಕ ಅಟ್ಲಿ

    ಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಲ್ಲೊಬ್ಬರು ಅಟ್ಲಿ. ಕಮರ್ಷಿಯಲ್​ ಸಿನಿಮಾದ ಮುಖ ಬದಲಿಸುವುದರ ಜತೆಗೆ ಅತ್ಯಂತ ಯಶಸ್ವಿ ನಿರ್ದೇಶಕ ಎಂಬ ಖ್ಯಾತಿ ಇರುವ ಅಟ್ಲಿ, ತಮಿಳಿನಲ್ಲಿ ಖ್ಯಾತ ನಟ ‘ಇಳಯ ದಳಪತಿ’ ವಿಜಯ್​ ಅಭಿನಯದಲ್ಲಿ ‘ಥೇರಿ’, ‘ಮರ್ಸಲ್​’, ‘ಬಿಜಿಲ್​’ ಮುಂತಾದ ಯಶಸ್ವಿ ಮತ್ತು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿದವರು. ಇದೀಗ ಶಾರೂಖ್​ ಅಭಿನಯದ ‘ಜವಾನ್’ ಚಿತ್ರವನ್ನು ಅವರು ನಿರ್ದೇಶಿಸುತ್ತಿದ್ದು, ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗುತ್ತಿದೆ.

    ತಮ್ಮ ಬಹುವರ್ಷಗಳ ಗೆಳತಿ ಕೃಷ್ಣ ಪ್ರಿಯಾ ಅವರನ್ನು 2014ರಲ್ಲಿ ಮದುವೆಯಾದ ಅಟ್ಲಿ, ಅವರೊಂದಿಗೆ ನೆಮ್ಮದಿಯ ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಈ ದಂಪತಿಯು ಎ ಫಾರ್ ಆಪಲ್ ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿ, ಅದರಡಿ ಎರಡು ಯಶಸ್ವಿ ಚಿತ್ರಗಳನ್ನು ನಿರ್ಮಿಸಿದೆ. ಮದುವೆಯಾಗಿ ಎಂಟು ವರ್ಷಗಳ ನಂತರ, ಇದೀಗ ಅಟ್ಲಿ ಮತ್ತು ಪ್ರಿಯಾ ಹೊಸ ಅನುಭವಕ್ಕೆ ತಯಾರಾಗುತ್ತಿದ್ದಾರೆ. ಪುಟ್ಟ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: IMDB 2022ರ ಜನಪ್ರಿಯ ಭಾರತೀಯ ಸಿನಿಮಾ ಪಟ್ಟಿಯಲ್ಲಿ ಕನ್ನಡದ ಟಾಪ್‌ 3 ಚಿತ್ರಗಳು

    ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿರುವ ಅವರು, ‘ಇಷ್ಟು ವರ್ಷಗಳ ಕಾಲ ನಮ್ಮ ಮೇಲೆ ಜನ ತೋರಿದ ಎಲ್ಲಾ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ, ನಿಮ್ಮ ಹಾರೈಕೆ ಮತ್ತು ಪ್ರೀತಿ ನಮ್ಮ ಪುಟ್ಟ ಮಗುವಿನ ಮೇಲೆಯೂ ಇರಬೇಕು ಎಂದು ನಾವು ಬಯಸುತ್ತೇವೆ. ನಿಮ್ಮೆಲ್ಲರ ಆಶೀರ್ವಾದದಿಂದ ನಮ್ಮ ಪುಟ್ಟ ಮಗುವಿನ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದೇವೆ’ ಎಂದು ಅಟ್ಲಿ ಮತ್ತು ಪ್ರಿಯಾ ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೊಸಬರ ‘ಅಟ್ಲಿ’ ಚಿತ್ರಕ್ಕೆ ರಿಷಬ್ ಶೆಟ್ಟಿ ಸಾಥ್: ಅಕ್ಟೋಬರ್ 27ರಿಂದ ಆರಂಭ

    ಹೊಸಬರ ‘ಅಟ್ಲಿ’ ಚಿತ್ರಕ್ಕೆ ರಿಷಬ್ ಶೆಟ್ಟಿ ಸಾಥ್: ಅಕ್ಟೋಬರ್ 27ರಿಂದ ಆರಂಭ

    ನ್ನಡ ಚಿತ್ರರಂಗದಲ್ಲಿ ಈಗ ಸಂಭ್ರಮದ ವಾತಾವರಣ. ಒಂದುಕಡೆ ಹಲವು ಚಿತ್ರಗಳು ಯಶಸ್ವಿಯಾಗಿ ಜನಮನಸೂರೆಗೊಳ್ಳುತ್ತಿದೆ. ಮತ್ತೊಂದು ಕಡೆ ಅಷ್ಟೇ ಸಂಖ್ಯೆಯ ಚಿತ್ರಗಳು ಪ್ರಾರಂಭವಾಗುತ್ತಿದೆ.ಆರ್ ಜಿ ವಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ರಂಗನಾಥ್ ಆರ್ ನಿರ್ದೇಶನದ “ಅಟ್ಲಿ” (Atlee) ಚಿತ್ರದ ಚಿತ್ರೀಕರಣ ಇದೇ 27ರಿಂದ ಆರಂಭವಾಗುತ್ತಿದೆ. ತುಮಕೂರಿನ ಶ್ರೀಸಿದ್ದಗಂಗಾ ಮಠದಲ್ಲಿ ಮೂರುದಿನಗಳ ಚಿತ್ರೀಕರಣ ನಡೆಯಲಿದೆ. ಇತ್ತೀಚಿಗೆ ನಿರ್ಮಾಣ ಸಂಸ್ಥೆಯ ಲಾಂಛನವನ್ನು ಶ್ರೀ ಸಿದ್ದಗಂಗಾ ಮಠದ ಶ್ರೀಗಳು ಅನಾವರಣಗೊಳಿಸಿದರು. ಚಿತ್ರದ ಶೀರ್ಷಿಕೆಯನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಬಿಡುಗಡೆ ಮಾಡಿದರು.

    “ಅಟ್ಲಿ” ಕಾಸರಗೋಡಿನಲ್ಲಿ ನಡೆಯುವ ಕಥೆ. ನಿರ್ದೇಶಕ ರಂಗನಾಥ್ (Ranganath) ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಈ ಹಿಂದೆ “ಅರಿವು”, “ಪ್ರಭುತ್ವ” ಚಿತ್ರಗಳನ್ನು ನಿರ್ದೇಶಿಸಿದ್ದ ರಂಗನಾಥ್ ಅವರಿಗೆ ಇದು ಮೂರನೇ ಚಿತ್ರ. ಲವ್, ಕ್ರಾಂತಿ ಪೊಲಿಟಿಕಲ್ ಡ್ರಾಮಾ  ಎಲ್ಲಾ ಅಂಶಗಳಿರುವ ಮಾಸ್ ಚಿತ್ರ “ಅಟ್ಲಿ” ಈ ಚಿತ್ರಕ್ಕೆ ಅರವತ್ತು ದಿನಗಳ ಚಿತ್ರೀಕರಣ ಮೂರು ಹಂತಗಳಲ್ಲಿ ನಡೆಯಲಿದೆ.‌ ಪೂಜಾ ಜನಾರ್ದನ್ (Pooja Janardhan)  ನಾಯಕಿಯಾಗಿ ನಟಿಸುತ್ತಿದ್ದಾರೆ. ಕೆ.ಜಿ.ಎಫ್ ಅನ್ ಮೋಲ್,  ಶೃತಿ, ಅಭಿಜಿತ್, ಅತುಲ್ ಕುಲಕರ್ಣಿ, ರವಿಕಾಳೆ, ನಾಜರ್, ಸುಪ್ರೀತ್, ಮನು ಮಯೂರ,ಲಲಿತಾ  ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ: ಕಾಂತಾರ ನೋಡಿ, ಆದ್ರೆ ಓ.. ಎಂದು ಕೂಗ್ಬೇಡಿ – ಆಚಾರಕ್ಕೆ ಧಕ್ಕೆಯಾಗುತ್ತೆ ಎಂದ ರಿಷಬ್

    ಚಿತ್ರದ ಮೂರು ಹಾಡುಗಳನ್ನು ಯೋಗರಾಜ್ ಭಟ್, ಡಾ|ವಿ.ನಾಗೇಂದ್ರಪ್ರಸಾದ್ ಹಾಗೂ ಬಹದ್ದೂರ್ ಚೇತನ್ ಕುಮಾರ್ ಬರೆದಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ. ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ವಿನಯ್ ಮೂರ್ತಿ ಸಂಭಾಷಣೆ ಬರೆದಿದ್ದಾರೆ..

    Live Tv
    [brid partner=56869869 player=32851 video=960834 autoplay=true]