Tag: ಅಟ್ಲಿ

  • `ಕಾಂತಾರ’ ಮೆಚ್ಚಿದ ಅಟ್ಲಿ – ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ನೆನೆದ ಖ್ಯಾತ ನಿರ್ದೇಶಕ

    `ಕಾಂತಾರ’ ಮೆಚ್ಚಿದ ಅಟ್ಲಿ – ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ನೆನೆದ ಖ್ಯಾತ ನಿರ್ದೇಶಕ

    `ಪಿಕಲ್ಬಾಲ್ ಲೀಗ್ ಬೆಂಗಳೂರು ಒಪನ್ 2025’ನಲ್ಲಿ ಅಟ್ಲಿ (Filmmaker Atlee) ಮಾಲಿಕತ್ವದ ಬೆಂಗಳೂರು ಜವಾನ್ಸ್ ತಂಡ ಆಡುತ್ತಿದೆ. ಈ ಕಾರ್ಯಕ್ರಮವನ್ನ ಇಂದು ಬೆಂಗಳೂರಿನ ಪಿಕಲ್ ಬಾಲ್ ಕ್ಲಬ್ ನಲ್ಲಿ ಚಾಲನೆ ನೀಡಲಾಯಿತು. ಕಳೆದ ಬಾರಿ ಭಾರತದ ಮೊಟ್ಟ ಮೊದಲ ಪಿಕಲ್ ಬಾಲ್ ಲೀಗ್ ಅನ್ನು (World Pickleball League) ಕರ್ನಾಟಕ ಸ್ಟೇಟ್ ಪಿಕಲ್ ಬಾಲ್ ಅಸೋಸಿಯೇಷನ್ ಸಾರಥ್ಯದಲ್ಲಿ ಯಶಸ್ವಿಯಾಗಿ ಮಾಡಲಾಗಿತ್ತು. ಇದೀಗ ಎರಡನೇ ಪಿಕಲ್ ಬಾಲ್ ಲೀಗ್ ಆವೃತ್ತಿಗೆ ಚಾಲನೆ ನೀಡಲಾಗಿದೆ. ಅದ್ರಂತೆ ಅಕ್ಟೋಬರ್ 10ರಿಂದ 12ರ ವರೆಗೆ ರೋಚಕ ಪಂದ್ಯಾವಳಿ ನಡೆಯಲಿವೆ.

    ಈ ವಿಚಾರವಾಗಿ ಬೆಂಗಳೂರಿಗೆ ಆಗಮಿಸಿದ ತಮಿಳು ಸಿನಿಮಾರಂಗದ (Tamil Cinema) ಹೆಸರಾಂತ ನಿರ್ದೇಶಕ ಜವಾನ್ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ಅಟ್ಲಿ ಕುಮಾರ್ ಬೆಂಗಳೂರು ಜವಾನ್ಸ್ ಹೆಸರಿನ ತಂಡವನ್ನು ಖರೀದಿ ಮಾಡಿದ್ದಾರೆ. ಕಳೆದ ವರ್ಷ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಐಪಿಎಲ್ ಟ್ರೋಫಿ ಗೆದ್ದಿತ್ತು. ಬೆಂಗಳೂರು ಜವಾನ್ಸ್ ಕೂಡ ಪಿಕಲ್‌ಬಾಲ್‌ನಲ್ಲಿ ಚಾಂಪಿಯನ್ಸ್ ಆಗಿತ್ತು.

    ಬೆಂಗಳೂರು ಓಪನ್‌ 2025 ವರ್ಲ್ಡ್ ಪಿಕಲ್ ಬಾಲ್ ಲೀಗ ಉದ್ಘಾಟಿಸಿ, ಸ್ಫರ್ಧಾಳುಗಳ ಜತೆ ಸ್ನೇಹಪೂರ್ವಕ ಮ್ಯಾಚ್ ಆಡಿದ ಅಟ್ಲಿ ಕುಮಾರ್, ನಾನು ಆರ್‌ಸಿಬಿ ಫ್ಯಾನ್‌, ಕಳೆದ ಬಾರಿ ಐಪಿಎಲ್‌ ಚಾಂಪಿಯನ್‌ ಆದಂತೆ ನಮ್ಮ ತಂಡ ಬೆಂಗಳೂರು ಜವಾನ್ಸ್ ತಂಡ ಕೂಡ ಗೆದ್ದಿತ್ತು. ಬೆಂಗಳೂರು ಸಿಟಿ ಅಂದ್ರೆ ನಂಗೆ ತುಂಬಾ ಇಷ್ಟ. ಇಲ್ಲಿನ ಸಿನಿಮಾ ನಟರಾದ ಯಶ್, ರಿಷಬ್ ಶೆಟ್ಟಿ ಮುಂತಾದವರ ಜೊತೆಗೆ ನನಗೆ ಉತ್ತಮ ಸ್ನೇಹವಿದೆ. ಎಲ್ಲರೂ ಅದ್ಭುತವಾಗಿ ಕೆಲಸ ಮಾಡ್ತಾ ಇದ್ದಾರೆ.

    ಕಾಂತಾರ ಚಾಪ್ಟರ್‌-01ರ ಬಗ್ಗೆ ಮಾತನಾಡಿದ ಅಟ್ಲಿ ʻಕಾಂತಾರ ನಿಜಕ್ಕೂ ಅದ್ಭುತ ಸಿನಿಮಾʼನಾನು ನೋಡಿ ಬೆರಗಾಗಿದ್ದೇನೆ ಎಂದು ಮೆಚ್ಚಿಗೆ ವ್ಯಕ್ತ ಪಡಿಸಿದ್ದಾರೆ. ಮೂಲತಃ ತಮಿಳು ನಾಡಿನವರಾಗಿದ್ದರು ಅಟ್ಲಿಗೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಅಂದ್ರೆ ಸಖತ್ ಭಕ್ತಿ ಅಂತೆ. ಆಗಾಗ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದರ್ಶನ ಪಡೆಯುತ್ತೀನಿ ಎಂದರು. ʻಜವಾನ್ʼ ಸಿನಿಮಾ ಸೂಪರ್ ಹಿಟ್ ಆದ ಕಾರಣ ನಾನು ಖರೀದಿ ಮಾಡಿರುವ ಪಿಕಲ್ ಬಾಲ್ ತಂಡಕ್ಕೆ ಬೆಂಗಳೂರು ಜವಾನ್ಸ್ ಎಂದು ಹೆಸರಿಟ್ಟಿರುವೆ ಎಂದಿದ್ದಾರೆ.

  • ಅಟ್ಲಿ ಸಿನಿಮಾಗೆ ಮತ್ತೆ ಒಂದಾದ ಪುಷ್ಪ ಹಿಟ್ ಜೋಡಿ..!

    ಅಟ್ಲಿ ಸಿನಿಮಾಗೆ ಮತ್ತೆ ಒಂದಾದ ಪುಷ್ಪ ಹಿಟ್ ಜೋಡಿ..!

    ಲ್ಲು ಅರ್ಜುನ್ (Allu Arjun) ಹಾಗೂ ಅಟ್ಲಿ (Atlee) ಕಾಂಬಿನೇಷನ್‌ನ ಇನ್ನೂ ಹೆಸರಿಡದ ಎಎ26-ಎ6 ಸಿನಿಮಾ ಒಂದಿಲ್ಲೊಂದು ವಿಶೇಷತೆಗಳಿಂದ ಸದ್ದು ಮಾಡುತ್ತಿದೆ. ಈ ಸಿನಿಮಾದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಮಾಡಿದಾಗಲೇ ಐಕಾನ್‌ಸ್ಟಾರ್ ಅಭಿಮಾನಿಗಳು ದಿಲ್‌ಖುಷ್ ಆಗಿದ್ದರು. ಈ ಸಿನಿಮಾ ದಿನದಿಂದ ದಿನಕ್ಕೆ ದೊಡ್ಡ ಸ್ಟಾರ್‌ಕ್ಯಾಸ್ಟ್ನಿಂದ ಭಾರೀ ಹವಾ ಕ್ರಿಯೇಟ್ ಮಾಡುತ್ತಿದೆ.

    ಬಹುಕೋಟಿ ಬಜೆಟ್‌ನಲ್ಲಿ ತಯಾರಾಗ್ತಿರುವ, ಸೂಪರ್ ಮ್ಯಾನ್ ಕಾನ್ಸೆಪ್ಟ್‌ನ ಇಂಡಿಯನ್ ಸಿನಿಮಾದಲ್ಲಿ ತುಂಬಾ ವಿಶೇಷತೆಗಳಿಂದ ಕೂಡಿದ ಸಿನಿಮಾ ಇದಾಗಿರಲಿದ್ದು, ಈ ಸಿನಿಮಾದಲ್ಲಿ ಒಬ್ಬೊಬ್ಬ ಕಲಾವಿದರು ಸೇರಿಕೊಳ್ತಿದ್ದಾರೆ. ಅದರಲ್ಲೂ ಸ್ಪೆಷಲ್ ಅಂದ್ರೆ ಈ ಸಿನಿಮಾದಲ್ಲಿ ನಟಿ ರಶ್ಮಿಕಾರನ್ನ ಆಯ್ಕೆ ಮಾಡಿಕೊಂಡಿದೆಯಂತೆ ಚಿತ್ರತಂಡ. ಪುಷ್ಪಾ ಪಾರ್ಟ್-1 ಹಾಗೂ ಪಾರ್ಟ್-2 ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ಶ್ರೀವಲ್ಲಿಯಾಗಿ ಕಾಣಿಸಿಕೊಂಡ ರಶ್ಮಿಕಾ ಮತ್ತೆ ಅಲ್ಲು ಅರ್ಜುನ್ ಜೊತೆ ತೆರೆಹಂಚಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಇದನ್ನೂ ಓದಿ: ಹೆಣ್ಣು ಯಾವ ಬಟ್ಟೆ ಹಾಕ್ಬೇಕು, ಹೇಗೆ ತಾಯಿ ಆಗ್ಬೇಕು ಅನ್ನೋದು ಅವಳ ಆಯ್ಕೆ – ಭಾವನರನ್ನು ಬೆಂಬಲಿಸಿದ ರಾಗಿಣಿ

    ಮತ್ತೊಂದು ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಮೃಣಾಲ್ ಠಾಕೂರ್, ಜಾನವಿ ಕಪೂರ್ ಹಾಗೂ ರಶ್ಮಿಕಾ ಇವರೆಲ್ಲರನ್ನ ಒಂದೇ ಸಿನಿಮಾದಲ್ಲಿ ಒಟ್ಟಿಗೆ ಸೇರಿಸುವ ಪ್ಲ್ಯಾನ್ ಕೂಡಾ ಮಾಡಿದೆಯಂತೆ ಚಿತ್ರತಂಡ. ಪುಷ್ಪ ಸಿನಿಮಾ ಹಿಟ್ ಪೇರ್ ಮತ್ತೊಮ್ಮೆ ಒಂದಾಗಲಿದ್ದು, ಈ ಸಿನಿಮಾದ ಮೇಲೆ ಮತ್ತಷ್ಟು ಕ್ಯೂರಿಯಾಸಿಟಿ ಹೆಚ್ಚಾಗ್ತಿದೆ. ಅಲ್ಲು ಅರ್ಜುನ್ ಕೂಡಾ ಪುಷ್ಪ ಸಿನಿಮಾದ ಸಕ್ಸಸ್‌ನ ಪೀಕ್‌ನಲ್ಲಿದ್ದಾರೆ.

    ಕೊರೊನಾ ಬಳಿಕ ಬಾಲಿವುಡ್‌ನಲ್ಲಿ ಶಾರುಖ್ ಖಾನ್‌ಗೆ ಬಿಗ್ ಬ್ರೇಕ್ ಕೊಟ್ಟ ಜವಾನ್ ಸಿನಿಮಾವನ್ನ ನಿರ್ದೇಶನ ಮಾಡಿದ್ದ ನಿರ್ದೇಶಕ ಅಟ್ಲಿ ಐಕಾನ್ ಸ್ಟಾರ್‌ಗೆ ವಿಭಿನ್ನವಾದ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಸಿನಿಮಾದ ಬಜೆಟ್ ಹಾಗೂ ಸ್ಟಾರ್‌ಕಾಸ್ಟ್ ಕೂಡಾ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಇನ್ನು ಈ ಚಿತ್ರಕ್ಕೆ ಯಾರೆಲ್ಲ ಬಂದು ಸೇರಿಕೊಳ್ತಾರೋ ಕಾದು ನೋಡಬೇಕಿದೆ. ಇದನ್ನೂ ಓದಿ: ಬೆಟ್ಟಿಂಗ್‌ ಆ್ಯಪ್ ಹಗರಣ ಪ್ರಕರಣ; ಪ್ರಣೀತಾ, ಪ್ರಕಾಶ್‌ ರಾಜ್‌, ದೇವರಕೊಂಡ ಸೇರಿ 29 ಸೆಲೆಬ್ರಿಟಿಗಳ ವಿರುದ್ಧ ED ಕೇಸ್‌

  • ಅಟ್ಲಿ-ಅಲ್ಲು ಸಿನಿಮಾ ವಿಎಫ್‌ಎಕ್ಸ್‌ಗೆ ಬರೋಬ್ಬರಿ 350 ಕೋಟಿ ಖರ್ಚು !

    ಅಟ್ಲಿ-ಅಲ್ಲು ಸಿನಿಮಾ ವಿಎಫ್‌ಎಕ್ಸ್‌ಗೆ ಬರೋಬ್ಬರಿ 350 ಕೋಟಿ ಖರ್ಚು !

    ಐಕಾನ್‌ಸ್ಟಾರ್ ಅಲ್ಲು ಅರ್ಜುನ್ ಹಾಗೂ ಅಟ್ಲಿ ಕಾಂಬಿನೇಷನ್‌ನಲ್ಲಿ ಸಿನಿಮಾ ತಯಾರಾಗ್ತಿದೆ. ಒಂದೊಂದು ವಿಶೇಷತೆಗಳಿಂದ ಭಾರತೀಯ ಸಿನಿಮಾರಂಗದಲ್ಲಿ ಈ ಚಿತ್ರತಂಡ ಸದ್ದು ಗದ್ದಲ ಮಾಡುತ್ತಿದೆ. ಇನ್ನು ಹೆಸರಿಡದ ಅಲ್ಲು ಅರ್ಜುನ್ ನಟನೆಯ 22ನೇ ಸಿನಿಮಾ ಇದಾದ್ರೆ, ಅಟ್ಲಿ ನಿರ್ದೇಶನದ 6ನೇ ಚಿತ್ರ ಇದಾಗಿದ್ದು, ಈ ತಂಡದಿಂದ ಅಚ್ಚರಿ ಸುದ್ದಿಯೊಂದು ಹೊರಬಿದ್ದಿದೆ.

    ಸದ್ಯಕ್ಕೆ ವರ್ಕಿಂಗ್ ಟೈಟಲ್ ಆಗಿ ಎಎ22*ಎ6 ಎಂದು ನಾಮಕರಣ ಮಾಡಲಾಗಿದೆ. ವಿಶೇಷ ಅಂದ್ರೆ ಈ ಸಿನಿಮಾದ ವಿಎಫ್‌ಎಕ್ಸ್‌ಗಾಗಿಯೇ 350-400 ಕೋಟಿ ಖರ್ಚಾಗಲಿದೆಯಂತೆ. ಇನ್ನೂ ಈ ಸಿನಿಮಾದ ಬಜೆಟ್ ಎಲ್ಲಿಗೆ ಹೋಗಿ ಮುಟ್ಟಲಿದೆ ಅಂತಾ ನೀವೇ ಅಂದಾಜು ಮಾಡಿ. ಸನ್ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ.

    ಸೂಪರ್ ಮ್ಯಾನ್ ಕಾನ್ಸೆಪ್ಟ್‌ನಲ್ಲಿ ರೆಡಿಯಾಗ್ತಿರುವ ಭಾರತೀಯ ಸಿನಿಮಾ ಇದಾಗಿದ್ದು, ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಪುಷ್ಪಾ ಪಾರ್ಟ್-1 ಹಾಗೂ ಪಾರ್ಟ್-2 ಸಿನಿಮಾದ ಬಿಗ್ ಸಕ್ಸಸ್‌ನ ಬಳಿಕ ಅಲ್ಲು ಅರ್ಜುನ್ ಒಪ್ಪಿಕೊಂಡ ಸಿನಿಮಾ ಇದಾಗಿದ್ದು, ಈ ಚಿತ್ರದ ಮೇಲೆ ಐಕಾನ್ ಸ್ಟಾರ್ ಫ್ಯಾನ್ಸ್ ಬೆಟ್ಟದಷ್ಟು ನಿರೀಕ್ಷೆಯನ್ನ ಇಟ್ಟುಕೊಂಡಿದ್ದಾರೆ.

    ಬಾಲಿವುಡ್‌ನ ಬ್ಲಾಕ್‌ಬಸ್ಟರ್ ಜವಾನ್ ಸಿನಿಮಾದ ಬಳಿಕ ಅಟ್ಲಿ ಕೈಗೆತ್ತಿಕೊಂಡಿರುವ ಸಿನಿಮಾ ಇದಾಗಿದೆ. ಐಕಾನ್‌ಸ್ಟಾರ್ ಅಲ್ಲು ಅರ್ಜುನ್‌ಗೆ ಈ ಸಿನಿಮಾ ಯಾವ ರೀತಿ ಇಮೇಜ್ ತಂದುಕೊಡುತ್ತೆ ಕಾದು ನೋಡಬೇಕಿದೆ.

  • ಅಟ್ಲಿ ಜೊತೆಗಿನ ಚಿತ್ರಕ್ಕಾಗಿ ಅಲ್ಲು ಅರ್ಜುನ್ ತಯಾರಿ ಹೇಗಿದೆ?- ಹೊರಬಿತ್ತು ಅಪ್‌ಡೇಟ್

    ಅಟ್ಲಿ ಜೊತೆಗಿನ ಚಿತ್ರಕ್ಕಾಗಿ ಅಲ್ಲು ಅರ್ಜುನ್ ತಯಾರಿ ಹೇಗಿದೆ?- ಹೊರಬಿತ್ತು ಅಪ್‌ಡೇಟ್

    ‘ಪುಷ್ಪ 2′ ಸಕ್ಸಸ್ ಬಳಿಕ ಡೈರೆಕ್ಟರ್ ಅಟ್ಲಿ (Atlee) ಜೊತೆಗಿನ ಸಿನಿಮಾಗಾಗಿ ಅಲ್ಲು ಅರ್ಜುನ್ (Allu Arjun) ಭರ್ಜರಿ ತಯಾರಿ ಮಾಡಿಕೊಳ್ತಿದ್ದಾರೆ. ಫಿಟನೆಸ್ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಅದಕ್ಕಾಗಿ ಪ್ರಖ್ಯಾತ ಫಿಟ್ನೆಸ್ ಟ್ರೈನರ್ ಲಾಯ್ಡ್ ಸ್ಟೀವನ್ಸ್ (Lloyd Stevens) ಅವರನ್ನು ನಟ ನೇಮಿಸಿಕೊಂಡಿದ್ದಾರೆ. ಇದನ್ನೂ ಓದಿ:ಸಮಂತಾ ನಿರ್ಮಾಣದ ‘ಶುಭಂ’ ಚಿತ್ರದ ಸಾಂಗ್ ರಿಲೀಸ್

    ಅಟ್ಲಿ ಜೊತೆಗಿನ ಸಿನಿಮಾದಲ್ಲಿ ಅಲ್ಲು ಅರ್ಜುನ್ ತ್ರಿಬಲ್ ರೋಲ್‌ನಲ್ಲಿ ನಟಿಸಲಿದ್ದಾರೆ. ಅವರ ಪಾತ್ರಕ್ಕೆ ವರ್ಕೌಟ್, ಫಿಟ್‌ನೆಸ್ ಅಗತ್ಯವಿದೆ. ಅದಕ್ಕಾಗಿ ಅವರು ದೇಹವನ್ನು ಹುರಿಗೊಳಿಸುವ ಅಗತ್ಯವಿದೆ. ಹೀಗಾಗಿ ಮಹೇಶ್ ಬಾಬು, ಜ್ಯೂ.ಎನ್‌ಟಿಆರ್‌ಗೆ ಫಿಟ್‌ನೆಸ್ ಟ್ರೈನರ್ ಆಗಿದ್ದ ಲಾಯ್ಡ್ ಸ್ಟೀವನ್ಸ್ ಅವರನ್ನು ಅಲ್ಲು ಅರ್ಜುನ್ ನೇಮಿಸಿಕೊಂಡಿದ್ದಾರೆ. ಲಾಯ್ಡ್ ಸ್ಟೀವನ್ಸ್ (Lloyd Stevens) ಅವರು ನಟನ ಜೊತೆಗಿನ ಫೋಟೋಗೆ ಲೋಡಿಂಗ್‌ ಎಂದು ಅಡಿಬರಹ ನೀಡಿದ್ದಾರೆ. ಈ ಮೂಲಕ ಅಪ್‌ಡೇಟ್ ಹೊರಬಿದ್ದಿದೆ. ಇದನ್ನೂ ಓದಿ:‘ಟೋಬಿ’ ನಟಿಗೆ ಬೇಡಿಕೆ- ಸೌತ್‌ ಸಿನಿಮಾಗಳಲ್ಲಿ ಚೈತ್ರಾ ಆಚಾರ್‌ ಬ್ಯುಸಿ

     

    View this post on Instagram

     

    A post shared by Lloyd Stevens (@lloydstevenspt)

    ಅಂದಹಾಗೆ, ಅಲ್ಲು ಅರ್ಜುನ್ ಹೊಸ ಸಿನಿಮಾದಲ್ಲಿ 3 ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಿದ್ದಾರೆ. ಹೀಗಾಗಿ ಅವರ ಚಿತ್ರದಲ್ಲಿ ಜಾನ್ವಿ ಕಪೂರ್, ಮೃಣಾಲ್ ಠಾಕೂರ್, ಅನನ್ಯಾ ಪಾಂಡೆ ನಾಯಕಿಯರಾಗಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತವಾಗಿ ಚಿತ್ರತಂಡವೇ ತಿಳಿಸಬೇಕಿದೆ.

  • ಅಟ್ಲಿ, ಅಲ್ಲು ಅರ್ಜುನ್ ಸಿನಿಮಾಗೆ ಸಮಂತಾ ನಾಯಕಿ?

    ಅಟ್ಲಿ, ಅಲ್ಲು ಅರ್ಜುನ್ ಸಿನಿಮಾಗೆ ಸಮಂತಾ ನಾಯಕಿ?

    ಲ್ಲು ಅರ್ಜುನ್ (Allu Arjun) ‘ಪುಷ್ಪ 2’ (Pushpa 2) ಸಕ್ಸಸ್ ಬಳಿಕ ‘ಜವಾನ್’ ಡೈರೆಕ್ಟರ್ ಅಟ್ಲಿ ಜೊತೆ ಕೈಜೋಡಿಸಿದ್ದಾರೆ. ಇಬ್ಬರ ಪ್ರಾಜೆಕ್ಟ್ ಬಗ್ಗೆ ಈಗಾಗಲೇ ಅಧಿಕೃತವಾಗಿ ಘೋಷಣೆ ಕೂಡ ಆಗಿದೆ. ಈ ಬೆನ್ನಲ್ಲೇ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ಸಮಂತಾ (Samantha) ಜೊತೆಯಾಗ್ತಿದ್ದಾರೆ ಎನ್ನಲಾದ ಸುದ್ದಿಯೊಂದು ಈಗ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:800 ಕೋಟಿ ಬಜೆಟ್‌ನಲ್ಲಿ ಮೂಡಿ ಬರಲಿದೆ ಅಲ್ಲು ಅರ್ಜುನ್, ಅಟ್ಲಿ ಸಿನಿಮಾ

    ಅಲ್ಲು ಅರ್ಜುನ್‌ಗಾಗಿ ಭಿನ್ನವಾಗಿರೋ ಕಥೆಯನ್ನೇ ಅಟ್ಲಿ ಹೆಣೆದಿದ್ದಾರೆ. ಎಂದೂ ನಟಿಸಿರದ ವಿಭಿನ್ನ ಪಾತ್ರದ ಮೂಲಕ ಬರಲು ನಟ ರೆಡಿಯಾಗಿದ್ದಾರೆ. 800 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಆಗ್ತಿದೆ. ಹೀಗಿರುವಾಗ ಈ ಚಿತ್ರಕ್ಕೆ ಸಮಂತಾ ಹೀರೋಯಿನ್ ಎಂದು ಗುಸು ಗುಸು ಶುರುವಾಗಿದೆ. ಅದಕ್ಕೆ ಪೂರಕವೆಂಬಂತೆ ಚೆನ್ನೈನಲ್ಲಿರುವ ಡೈರೆಕ್ಟರ್ ಅಟ್ಲಿ ಆಫೀಸ್‌ಗೆ ಸಮಂತಾ ಭೇಟಿ ಕೊಟ್ಟಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹೀಗಾಗಿ ಅಲ್ಲು ಅರ್ಜುನ್‌ಗೆ ಸಮಂತಾ ನಾಯಕಿ ಎಂಬ ವಿಚಾರ ಫ್ಯಾನ್ಸ್‌ಗೆ ದಟ್ಟವಾಗಿದೆ.ಇದನ್ನೂ ಓದಿ:ಹಳ್ಳಿ ಹುಡುಗಿ ಗೆಟಪ್‌ನಲ್ಲಿ ‘ಕಿಸ್’ ನಟಿ- ಅಖಿಲ್ ಅಕ್ಕಿನೇನಿಗೆ ಶ್ರೀಲೀಲಾ ಜೋಡಿ

    ಈ ಹಿಂದೆ ಅಲ್ಲು ಅರ್ಜುನ್ ಜೊತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಸಮಂತಾ ನಟಿಸಿದ್ದಾರೆ. ಡೈರೆಕ್ಟರ್ ಅಟ್ಲಿ ಜೊತೆಗೆ ಕೆಲಸ ಮಾಡಿ ಕೂಡ ಅವರು ಪಳಗಿದ್ದಾರೆ. ಹೀಗಾಗಿ ಈ ಮೂವರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಲಿದೆ ಎಂದು ಫ್ಯಾನ್ಸ್ ನಿರೀಕ್ಷಿಸುತ್ತಿದ್ದಾರೆ. ಆದರೆ ಈ ಕುರಿತು ಚಿತ್ರತಂಡ ಅಧಿಕೃತವಾಗಿ ತಿಳಿಸಿಲ್ಲ. ತಂಡ ಅಧಿಕೃತವಾಗಿ ಹೇಳುವವರೆಗೂ ಕಾದುನೋಡಬೇಕಿದೆ.

    ಅಂದಹಾಗೆ, ಬಾಲಿವುಡ್ ಪ್ರಾಜೆಕ್ಟ್ ಜೊತೆ ಕೆಲ ಆ್ಯಡ್ ಶೂಟ್‌ಗಳಲ್ಲಿ ಸಮಂತಾ ಬ್ಯುಸಿಯಾಗಿದ್ದಾರೆ. ಅವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.

  • 800 ಕೋಟಿ ಬಜೆಟ್‌ನಲ್ಲಿ ಮೂಡಿ ಬರಲಿದೆ ಅಲ್ಲು ಅರ್ಜುನ್, ಅಟ್ಲಿ ಸಿನಿಮಾ

    800 ಕೋಟಿ ಬಜೆಟ್‌ನಲ್ಲಿ ಮೂಡಿ ಬರಲಿದೆ ಅಲ್ಲು ಅರ್ಜುನ್, ಅಟ್ಲಿ ಸಿನಿಮಾ

    ‘ಜವಾನ್’ ಡೈರೆಕ್ಟರ್ ಅಟ್ಲಿ (Atlee) ಜೊತೆ ಅಲ್ಲು ಅರ್ಜುನ್ (Allu Arjun) ಸಿನಿಮಾ ಮಾಡೋದರ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಈ ಬೆನ್ನಲ್ಲೇ ಸಿನಿಮಾದ ಬಜೆಟ್ ಬಗ್ಗೆ ಚರ್ಚೆ ಶುರುವಾಗಿದೆ. ಅಲ್ಲು ಅರ್ಜುನ್ ಸಿನಿಮಾವನ್ನು ಅದ್ಧೂರಿಯಾಗಿ 800 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಿದ್ದಾರೆ ಎನ್ನಲಾದ ವಿಚಾರವೊಂದು ಈಗ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಗಾಯಗಳಾಗಿದೆ: ಪುತ್ರನ ಹೆಲ್ತ್ ಬಗ್ಗೆ ಅಪ್‌ಡೇಟ್‌ ಕೊಟ್ಟ ಪವನ್ ಕಲ್ಯಾಣ್

    ‘ಪುಷ್ಪ 2’ ಸಕ್ಸಸ್ ಬಳಿಕ ಅಟ್ಲಿ ಜೊತೆ ಸಿನಿಮಾ ಮಾಡಲು ಅಲ್ಲು ಅರ್ಜುನ್ ಮುಂದಾಗಿದ್ದಾರೆ. ಅದಕ್ಕಾಗಿ ಅಟ್ಲಿ ಜೊತೆ ವಿದೇಶಕ್ಕೆ ತೆರಳಿ VFX ತಂತ್ರಜ್ಞರೊಂದಿಗೆ ಅಲ್ಲು ಅರ್ಜುನ್ ಮಾತನಾಡಿದ್ದಾರೆ. ವಿಎಫ್‌ಎಕ್ಸ್‌ಗಾಗಿ ನಟನ ಮುಖದ ಮತ್ತು ದೇಹದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಹಾಗಾಗಿ ಹಾಲಿವುಡ್ ರೇಂಜ್‌ನಲ್ಲಿ ಅದ್ಧೂರಿಯಾಗಿ ಗ್ರಾಫಿಕ್ಸ್ ಮೂಡಿ ಬರಲಿದೆ ಎಂಬ ಸುಳಿವು ಸಿಕ್ಕಿದೆ. ಇದನ್ನೂ ಓದಿ:ಭರತನಾಟ್ಯ ಪ್ರವೀಣೆ ಚರಿತ್ರಾಗೀಗ ಇಂಟರ್ವಲ್‌ನದ್ದೇ ಧ್ಯಾನ!

     

    View this post on Instagram

     

    A post shared by Sun Pictures (@sunpictures)

    ಹೀಗಿರುವಾಗ ಅಟ್ಲಿ ಜೊತೆಗಿನ ಅಲ್ಲು ಅರ್ಜುನ್ ಸಿನಿಮಾ 800 ಕೋಟಿ ರೂ. ಬಜೆಟ್‌ನಲ್ಲಿ ಬರಲಿದೆ ಎಂಬ ಸುದ್ದಿ ಈಗ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಅದರಲ್ಲಿ 175 ಕೋಟಿ ರೂ. ಸಂಭಾವನೆಯನ್ನು ಅಲ್ಲು ಅರ್ಜುನ್ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ. ಒಟ್ನಲ್ಲಿ ದುಬಾರಿ ವೆಚ್ಚದಲ್ಲಿ ಸಿನಿಮಾ ಬರುತ್ತಿದೆ ಎಂದು ಕೇಳಿಯೇ ಫ್ಯಾನ್ಸ್ ದಂಗಾಗಿದ್ದಾರೆ. ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

  • ‘ಜನ ನಾಯಗನ್’ ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಮೂವರು ಸ್ಟಾರ್ ನಿರ್ದೇಶಕರು

    ‘ಜನ ನಾಯಗನ್’ ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಮೂವರು ಸ್ಟಾರ್ ನಿರ್ದೇಶಕರು

    ಕಾಲಿವುಡ್‌ನ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ (Jana Nayagan) ಸಿನಿಮಾದಲ್ಲಿ ತಮಿಳಿನ ಖ್ಯಾತ ನಿರ್ದೇಶಕರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೋಡಿ- ಕನ್ನಡಕ್ಕೆ ಬಂದ ‘ಹನುಮಾನ್’ ಖ್ಯಾತಿಯ ಅಮೃತಾ ಅಯ್ಯರ್

    ‘ಜನ ನಾಯಗನ್’ ಸಿನಿಮಾದಲ್ಲಿ ಲೋಕೇಶ್ ಕನಕರಾಜ್ (Lokesh Kanagaraj), ನೆಲ್ಸನ್ ದಿಲೀಪ್ ಕುಮಾರ್ (Nelson Dileep Kumar), ‘ಜವಾನ್’ ಡೈರೆಕ್ಟರ್ ಅಟ್ಲಿ (Atlee Kumar) ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ವಿಶೇಷ ಗೀತೆಯೊಂದರಲ್ಲಿ ಈ ಮೂರು ಮಂದಿ ಸ್ಟಾರ್ ನಿರ್ದೇಶಕರು ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

    ವಿಜಯ್ ಆಪ್ತರಾಗಿರುವ ಈ ನಿರ್ದೇಶಕರು ನಟನ ಕೊನೆಯ ಚಿತ್ರಕ್ಕೆ ಸಾಥ್ ನೀಡುತ್ತಿದ್ದಾರೆ. ಕೆವಿಎನ್‌ ಸಂಸ್ಥೆ ನಿರ್ಮಾಣದ ಈ ಚಿತ್ರಕ್ಕೆ ಹೆಚ್. ವಿನೋದ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕರಾವಳಿ ಬೆಡಗಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮೂಲಕ ವಿಜಯ್‌ಗೆ 2ನೇ ಬಾರಿ ಜೋಡಿಯಾಗಿ ನಟಿಸುತ್ತಿದ್ದಾರೆ. 2026ರಲ್ಲಿ ಚಿತ್ರ ರಿಲೀಸ್ ಆಗಲಿದೆ.

  • ಸಲ್ಮಾನ್ ಖಾನ್ ಸಿನಿಮಾದಲ್ಲಿ ಕಮಲ್ ಹಾಸನ್- ಅಟ್ಲಿ ಆ್ಯಕ್ಷನ್ ಕಟ್

    ಸಲ್ಮಾನ್ ಖಾನ್ ಸಿನಿಮಾದಲ್ಲಿ ಕಮಲ್ ಹಾಸನ್- ಅಟ್ಲಿ ಆ್ಯಕ್ಷನ್ ಕಟ್

    ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಸಕ್ಸಸ್‌ಗಾಗಿ ಹೊಸ ತಂತ್ರ ರೂಪಿಸಿದ್ದಾರೆ. ಸೌತ್ ನಿರ್ದೇಶಕರ ಜೊತೆ ಕೆಲಸ ಮಾಡಲು ಸಲ್ಮಾನ್ ಉತ್ಸಾಹ ತೋರಿಸುತ್ತಿದ್ದಾರೆ. ಸದ್ಯ ತಮಿಳು ಡೈರೆಕ್ಟರ್ ಅಟ್ಲಿ (Atlee) ನಿರ್ದೇಶನದಲ್ಲಿ ಮೂಡಿ ಬರಲಿರುವ ಸಲ್ಮಾನ್ ಖಾನ್ ಹೊಸ ಸಿನಿಮಾಗೆ ಕಮಲ್ ಹಾಸನ್ ಸಾಥ್‌ ನೀಡಲಿದ್ದಾರೆ.

    ಶಾರುಖ್ ಖಾನ್ ನಟಿಸಿದ್ದ ‘ಜವಾನ್’ ಚಿತ್ರಕ್ಕೆ ನಿರ್ದೇಶನ ಮಾಡಿ ಗೆದ್ದಿದ್ದ ತಮಿಳು ನಿರ್ದೇಶಕ ಅಟ್ಲಿ ಜೊತೆ ಸಿನಿಮಾ ಮಾಡಲು ಸಲ್ಮಾನ್ ಕೈಜೋಡಿಸಿದ್ದಾರೆ. ಇದೇ ಸಿನಿಮಾದಲ್ಲಿ ಪವರ್‌ಫುಲ್ ಪಾತ್ರವೊಂದರಲ್ಲಿ ಕಮಲ್ ಹಾಸನ್ (Kamal Haasan) ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಮತ್ತೆ ಸಿನಿಮಾಗೆ ದೀಪಿಕಾ ದಾಸ್ ಕಮ್‌ಬ್ಯಾಕ್- ‘ಪಾರು ಪಾರ್ವತಿ’ ಸಿನಿಮಾದಲ್ಲಿ ನಟಿ

    ಸಲ್ಮಾನ್ ಮತ್ತು ಕಮಲ್ ಹಾಸನ್ ಇಬ್ಬರಿಗೂ ಸಮಾನವಾದ ಪಾತ್ರವಿದೆಯಂತೆ. ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ತಾರೆ ಎಂಬುದು ಲೇಟೆಸ್ಟ್ ನ್ಯೂಸ್. ಆದರೆ ಕಮಲ್ ಹಾಸನ್ ಈ ಸಿನಿಮಾದಲ್ಲಿ ನಟಿಸುವ ಕುರಿತು ಸುದ್ದಿ ನಿಜನಾ? ಎಂಬುದನ್ನು ನಟನಾಗಲಿ ಅಥವಾ ಡೈರೆಕ್ಟರ್ ಅಟ್ಲಿ ಆಗಲಿ ಅಧಿಕೃತವಾಗಿ ತಿಳಿಸಿಲ್ಲ. ಸದ್ಯ ಈ ಸುದ್ದಿ ತಿಳಿದು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಕೇಳಿದ ಸುದ್ದಿ ನಿಜವಾಗಲಿ ಎಂದು ಫ್ಯಾನ್ಸ್‌ ಎದುರು ನೋಡ್ತಿದ್ದಾರೆ.

    ಇನ್ನೂ ಸಾಲು ಸಾಲು ಸಿನಿಮಾಗಳು ಸೋತ ಬೆನ್ನಲ್ಲೇ ಸೌತ್‌ನ ಸ್ಟಾರ್ ನಿರ್ದೇಶಕ ಎ.ಆರ್ ಮುರುಗದಾಸ್ ಜೊತೆ ಸಲ್ಮಾನ್ ಖಾನ್ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. `ಸಿಖಂದರ್’ ಆಗಿ ಸಲ್ಮಾನ್ ಮಿಂಚಲಿದ್ದು, ಈ ಸಿನಿಮಾದ ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ.

  • ಅಂಬಾನಿ ಮದುವೆಯಲ್ಲಿ ಯಶ್ ಜೊತೆ ‘ಜವಾನ್’ ಡೈರೆಕ್ಟರ್ ಮಾತುಕತೆ- ವಿಡಿಯೋ ವೈರಲ್

    ಅಂಬಾನಿ ಮದುವೆಯಲ್ಲಿ ಯಶ್ ಜೊತೆ ‘ಜವಾನ್’ ಡೈರೆಕ್ಟರ್ ಮಾತುಕತೆ- ವಿಡಿಯೋ ವೈರಲ್

    ಚಿತ್ರರಂಗದಲ್ಲಿ ಸದ್ಯ ಭಾರೀ ಸುದ್ದಿಯಾಗ್ತಿರುವ ವಿಚಾರ ಅಂದರೆ ಅನಂತ್ (Anant Ambani) ಮತ್ತು ರಾಧಿಕಾ (Radhika Merchant) ಅದ್ಧೂರಿ ಮದುವೆ ಮ್ಯಾಟರ್. ಈ ಸಂಭ್ರಮದಲ್ಲಿ ಬಾಲಿವುಡ್ ಸ್ಟಾರ್ಸ್ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು.‌ ಹಾಗಾಗಿ ಹೆಚ್ಚುಚ್ಚು ಈ ವಿಚಾರ ಹೈಲೆಟ್‌ ಆಗ್ತಿದೆ. ಇದರ ನಡುವೆ ಯಶ್ (Yash) ಜೊತೆ ಜವಾನ್ ಡೈರೆಕ್ಟರ್ ಅಟ್ಲಿ ಮಾತುಕತೆ ಮಾಡಿರುವ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

    ಹೈಪ್ರೊಪೈಲ್ ಅತಿಥಿಗಳ ಪಟ್ಟಿಯಲ್ಲಿ ಇರುವ ಏಕೈಕ ಕನ್ನಡದ ನಟ ಯಶ್‌ಗೆ ಅಂಬಾನಿ ಮಗನ ಮದುವೆಗೆ ವಿಶೇಷವಾಗಿ ಆಮಂತ್ರಣ ನೀಡಿದ್ದು, ಪತ್ನಿ ರಾಧಿಕಾ ಪಂಡಿತ್ (Radhika Pandit) ಜೊತೆ ಯಶ್ ಹೊಸ ಲುಕ್‌ನಲ್ಲಿ ಮಿಂಚಿದ್ದಾರೆ. ಇದನ್ನೂ ಓದಿ:ದರ್ಶನ್ ಬಿಡುಗಡೆಗಾಗಿ ದೇವರ ಮೊರೆ ಹೋದ ಫ್ಯಾನ್ಸ್

     

    View this post on Instagram

     

    A post shared by YASH BOSS FAN’S (@yashfansnetwork)

    ಇದರ ನಡುವೆ ಯಶ್ ಮತ್ತು ‘ಜವಾನ್’ (Jawan) ನಿರ್ದೇಶಕ ಅಟ್ಲಿ (Director Atlee) ಕೆಲ ಸಮಯ ಒಟ್ಟಿಗೆ ಕುಳಿತು ಮಾತುಕತೆ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಒಟ್ನಲ್ಲಿ ಯಶ್ ಈ ಮಟ್ಟಿಗೆ ಬೆಳೆದಿರುವ ಪರಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

    ಇನ್ನೂ ಯಶ್ ‘ಟಾಕ್ಸಿಕ್’ (Toxic) ಸಿನಿಮಾ ಮತ್ತು ‘ರಾಮಾಯಣ’ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ‘ಕೆಜಿಎಫ್ 2’ (KGF 2) ನಂತರದ ‘ಟಾಕ್ಸಿಕ್’ ಸಿನಿಮಾ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

  • ಇಬ್ಬರೂ ಸ್ಟಾರ್ ನಟಿಯರ ಜೊತೆ ಅಲ್ಲು ಅರ್ಜುನ್ ರೊಮ್ಯಾನ್ಸ್

    ಇಬ್ಬರೂ ಸ್ಟಾರ್ ನಟಿಯರ ಜೊತೆ ಅಲ್ಲು ಅರ್ಜುನ್ ರೊಮ್ಯಾನ್ಸ್

    ‘ಪುಷ್ಪ’ ಹೀರೋ ಅಲ್ಲು ಅರ್ಜುನ್ (Allu Arjun) ಜೊತೆ ಜವಾನ್ (Jawan) ಡೈರೆಕ್ಟರ್ ಹೊಸ ಸಿನಿಮಾ ಮಾಡುವ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಐಕಾನ್ ಸ್ಟಾರ್ ಜೊತೆ ಸಮಂತಾ (Samantha) ರೊಮ್ಯಾನ್ಸ್ ಮಾಡುತ್ತಾರೆ ಎಂಬ ವಿಚಾರ ಹೊರಬಿದ್ದಿತ್ತು. ಇದೀಗ ಸ್ಯಾಮ್ ಒಬ್ಬರೇ ಅಲ್ಲ, ತ್ರಿಶಾ ಕೂಡ ಈ ಚಿತ್ರಕ್ಕೆ ಸಾಥ್ ನೀಡುತ್ತಿದ್ದಾರೆ.

    ಕಳೆದ ಎರಡ್ಮೂರು ದಿನಗಳಿಂದ ಅಲ್ಲು ಅರ್ಜುನ್ ಮುಂದಿನ ಸಿನಿಮಾಗೆ ಸಮಂತಾ ನಾಯಕಿಯಾಗ್ತಾರೆ ಎಂಬ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಸಲಿಗೆ ಸಮಂತಾ ಅಟ್ಲಿ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಾರಾ? ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಈ ಬೆನ್ನಲ್ಲೇ ಸ್ಟಾರ್ ನಟಿ ತ್ರಿಶಾ ಹೆಸರು ಕೂಡ ಚಾಲ್ತಿಯಲ್ಲಿದೆ.

    ಅಲ್ಲು ಅರ್ಜುನ್ ಮುಂಬರುವ ಸಿನಿಮಾದಲ್ಲಿ ಸಮಂತಾ ಮತ್ತು ತ್ರಿಶಾ ಕೃಷನ್ (Trisha) ಇಬ್ಬರೂ ತೆರೆಹಂಚಿಕೊಳ್ತಾರೆ ಎನ್ನಲಾಗುತ್ತಿದೆ. ಇಬ್ಬರ ಜೊತೆ ಅಲ್ಲು ಅರ್ಜುನ್ ಡ್ಯುಯೇಟ್ ಹಾಡೋಕೆ ರೆಡಿಯಾಗುತ್ತಿದ್ದಾರಂತೆ. ತ್ರಿಶಾ ಕೃಷ್ಣನ್ ಅವರಿಗೂ ಕೂಡ ಸಿನಿಮಾದಲ್ಲಿ ಉತ್ತಮ ಪಾತ್ರವಿದೆಯಂತೆ. ಇದನ್ನೂ ಓದಿ:ಟರ್ಕಿಯಲ್ಲಿ ಚಿಟ್ಟೆಯಾದ ದೀಪಿಕಾ ದಾಸ್

    ಅಲ್ಲು ಅರ್ಜುನ್ ಜೊತೆ ಸಮಂತಾ, ತ್ರಿಶಾ ನಟಿಸುವ ಸುದ್ದಿ ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಒಂದು ವೇಳೆ, ಈ ಸುದ್ದಿ ನಿಜವೇ ಆಗಿದ್ದಲ್ಲಿ ಟ್ರಯೋ ಜೋಡಿಯನ್ನು ಫ್ಯಾನ್ಸ್ ನೋಡೋದೇ ಹಬ್ಬ ಎನ್ನಬಹುದು.

    ಸದ್ಯ ಅಲ್ಲು ಅರ್ಜುನ್ ಸದ್ಯ ಪುಷ್ಪ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ನಂತರ ಅಟ್ಲಿ ಸಿನಿಮಾವನ್ನು ಅವರು ಕೈಗೆತ್ತಿಕೊಳ್ಳಲಿದ್ದಾರೆ. ಇನ್ನೂ ಚಿತ್ರತಂಡದಿಂದ ಏನೆಲ್ಲಾ ತಾಜಾ ಸಮಾಚಾರ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.