Tag: ಅಟ್ಟಾರಿ- ವಾಘಾ ಗಡಿ

  • ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು – ಪಾಕ್ ಬಂಧಿಸಿದ್ದ ಬಿಎಸ್‌ಎಫ್ ಯೋಧ ತಾಯ್ನಾಡಿಗೆ ವಾಪಸ್

    ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು – ಪಾಕ್ ಬಂಧಿಸಿದ್ದ ಬಿಎಸ್‌ಎಫ್ ಯೋಧ ತಾಯ್ನಾಡಿಗೆ ವಾಪಸ್

    – 20 ದಿನಗಳ ಬಳಿಕ ಯೋಧನನ್ನು ಭಾರತಕ್ಕೆ ಹಸ್ತಾಂತರಿಸಿದ ಪಾಕ್
    – ಆಕಸ್ಮಿಕವಾಗಿ ಗಡಿ ದಾಟಿದ್ದ ಸೈನಿಕನನ್ನು ಬಂಧಿಸಿದ್ದ ಪಾಕಿಸ್ತಾನ

    ಚಂಡೀಗಢ: ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆ ಸಕ್ಸಸ್ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಪಾಕಿಸ್ತಾನ (Pakistan) ಬಂಧಿಸಿದ್ದ ಬಿಎಸ್‌ಎಫ್ ಯೋಧ (BSF Army) ಭಾರತಕ್ಕೆ ವಾಪಸ್ ಆಗಿದ್ದಾರೆ.

    ಆಕಸ್ಮಿಕವಾಗಿ ಫಿರೋಜ್‌ಪುರ ವಲಯದಲ್ಲಿ ಗಡಿ ದಾಟಿದ್ದ ಬಿಎಸ್‌ಎಫ್ ಯೋಧನನ್ನು ಬಂಧಿಸಿದ್ದ ಪಾಕ್ ರೇಂಜರ್‌ಗಳು 20 ದಿನಗಳ ಬಳಿಕ ಇಂದು ಅಟ್ಟಾರಿ ಗಡಿ ಮೂಲಕ ಬಿಡುಗಡೆಗೊಳಿಸಿದೆ.ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಬಿ.ಆರ್ ಗವಾಯಿ ಪ್ರಮಾಣವಚನ ಸ್ವೀಕಾರ

    ಬಿಎಸ್‌ಎಫ್ ಮಾಹಿತಿ ಪ್ರಕಾರ, ಇಂದು ಬೆಳಗ್ಗೆ 10:30ರ ಸುಮಾರಿಗೆ ಅಟ್ಟಾರಿ – ವಾಘಾ ಗಡಿಯಲ್ಲಿ ಬಿಎಸ್‌ಎಫ್ ಯೋಧ ಪೂರ್ಣಮ್ ಕುಮಾರ್ ಶಾ ಅವರನ್ನು ಬಿಡುಗಡೆಗೊಳಿಸಿದೆ.

    ಬಿಎಸ್‌ಎಫ್ ತನ್ನ ಸೈನಿಕರಿಗೆ ಗಡಿಯಲ್ಲಿ ಗಸ್ತು ತಿರುಗುವಾಗ ಜಾಗರೂಕರಾಗಿರಲು ಕಟ್ಟುನಿಟ್ಟಿನ ಸಲಹೆಯನ್ನು ನೀಡುತ್ತದೆ. ಏ.23ರಂದು ಪಂಜಾಬ್‌ನ ಫಿರೋಜ್‌ಪುರ ಬಳಿ ಕರ್ತವ್ಯದಲ್ಲಿದ್ದ 182ನೇ ಬೆಟಾಲಿಯನ್ ಕಾನ್‌ಸ್ಟೇಬಲ್ ಪೂರ್ಣಮ್ ಕುಮಾರ್ ಶಾ ಅವರು ವಿಶ್ರಾಂತಿ ಪಡೆಯಲು ಮರದ ಕೆಳಗೆ ಕುಳಿತುಕೊಳ್ಳಲು ಹೊರಟಾಗ ಆಕ್ಮಸಿಕವಾಗಿ ಗಡಿದಾಟಿದ್ದರು. ಈ ವೇಳೆ ಅವರನ್ನು ಪಾಕಿಸ್ತಾನ ರೇಂಜರ್‌ಗಳು ಬಂಧಿಸಿದ್ದರು.

    ಅದಾದ ಬಳಿಕ ಬಿಎಸ್‌ಎಫ್ ಯೋಧನ ಬಿಡುಗಡೆಗಾಗಿ ಪಾಕ್ ರೇಂಜರ್‌ಗಳೊಂದಿಗೆ ನಿರಂತರ ಸಭೆ ನಡೆಸಲಾಗಿತ್ತು. ಮಾತುಕತೆಯ ಹೊರತಾಗಿಯೂ ರೇಂಜರ್‌ನನ್ನ ಭಾರತಕ್ಕೆ ಹಸ್ತಾಂತರಿಸಲು ನಿರಾಕರಿಸಿದ್ದರು.ಇದನ್ನೂ ಓದಿ: ನಮಗೆ ಯಾರಾದ್ರು ತೊಂದರೆ ಕೊಟ್ಟರೆ, ಸುಮ್ಮನೆ ಬಿಡಲ್ಲ: ಪಾಕ್‌ ವಿರುದ್ಧ ಗುಡುಗಿದ ಯೋಗಿ ಆದಿತ್ಯನಾಥ್‌

  • ಅಟ್ಟಾರಿ- ವಾಘಾ ಗಡಿಯಲ್ಲಿ ಯೋಧರಿಗೆ ರಾಕಿ ಕಟ್ಟಿ ಸಂಭ್ರಮಿಸಿದ ಮಹಿಳೆಯರು

    ಅಟ್ಟಾರಿ- ವಾಘಾ ಗಡಿಯಲ್ಲಿ ಯೋಧರಿಗೆ ರಾಕಿ ಕಟ್ಟಿ ಸಂಭ್ರಮಿಸಿದ ಮಹಿಳೆಯರು

    ಚಂಡೀಗಢ: ಈ ಬಾರಿ ಸ್ವಾತಂತ್ರ್ಯ ದಿನ ಹಾಗೂ ರಕ್ಷಾಬಂಧನ ಹಬ್ಬ ಒಟ್ಟಿಗೆ ಬಂದಿದೆ. ಹೀಗಾಗಿ ಅಟ್ಟಾರಿ- ವಾಘಾ ಗಡಿ ಪ್ರದೇಶದಲ್ಲಿ ಇಂದು ಬಿಎಸ್‍ಎಫ್ ಯೋಧರಿಗೆ ಮಹಿಳೆಯರು ರಾಕಿ ಕಟ್ಟುವ ಮೂಲಕ ರಕ್ಷಾ ಬಂಧನ್ ಹಬ್ಬವನ್ನು ಖುಷಿಯಿಂದ ಆಚರಿಸಿದ್ದಾರೆ.

    ಇಂದು ದೇಶದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಾಗೆಯೇ ಇಂದು ರಕ್ಷಾಬಂಧನ ಹಬ್ಬ ಕೂಡ ಬಂದಿರುವುದು ವಿಶೇಷವಾಗಿದೆ. ಹೀಗಾಗಿ ದೇಶದ ವಿವಿಧ ಕಡೆಗಳಿಂದ ವಾಘಾ ಗಡಿಗೆ ಆಗಮಿಸಿದ್ದ ಮಹಿಳೆಯರು ಭದ್ರತಾ ಪಡೆ ಸಿಬ್ಬಂದಿಗೆ ರಾಕಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬದ ಶುಭಾಶಯ ಕೋರಿದರು.

    ಈ ವೇಳೆ ಪುಣೆಯಿಂದ ಬಂದಿದ್ದ ಮಹಿಳೆಯೊಬ್ಬರು ಮಾತನಾಡಿ, ಗಡಿ ಭಾಗದಲ್ಲಿ ರಕ್ಷಾ ಬಂಧನ ಆಚರಿಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ದೇಶಕ್ಕಾಗಿ ಹಗಲಿರುಳು ಶ್ರಮಪಟ್ಟು ಸೇವೆ ಸಲ್ಲಿಸುವ ಯೋಧರಿಗೆ ಧನ್ಯವಾದ ಎಂದು ಸಂತೋಷ ಹಂಚಿಕೊಂಡರು.

    ಅಷ್ಟೇ ಅಲ್ಲದೆ ಮಹಿಳೆಯರಿಂದ ರಾಕಿ ಕಟ್ಟಿಸಿಕೊಂಡ ಯೋಧರು ಕೂಡ ಪ್ರೀತಿಯಿಂದ ಸಿಹಿ ನೀಡಿ ಮಹಿಳೆಯರಿಗೆ ಶುಭಕೋರಿ ಸಂತಸಪಟ್ಟರು.