Tag: ಅಟೋಮೊಬೈಲ್

  • ಲಕ್ಷುರಿ ಎಂಜಿ ವಿಂಡ್ಸರ್ ಕಾರಿನ ಬೆಲೆ ರಿವೀಲ್!

    ಲಕ್ಷುರಿ ಎಂಜಿ ವಿಂಡ್ಸರ್ ಕಾರಿನ ಬೆಲೆ ರಿವೀಲ್!

    MG ಮೋಟಾರ್ ಇಂಡಿಯಾ (MG Motor India) ತನ್ನ ಹೊಸ ವಿಂಡ್ಸರ್ EV ಕಾರನ್ನು ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಿತ್ತು. ಈ ಸಂದರ್ಭದಲ್ಲಿ ಪರಿಚಯಾತ್ಮಕ ಬೆಲೆಯನ್ನು ಮಾತ್ರ ಬಹಿರಂಗಪಡಿಸಿತ್ತು. ಇದೀಗ ತನ್ನ ವೇರಿಯಂಟ್​ಗಳ ಬೆಲೆಗಳನ್ನು ಘೋಷಿಸಿದೆ. MG ವಿಂಡ್ಸರ್ (MG Windsor) EV ಬೆಲೆ 13.50 ಲಕ್ಷ ರೂ (ಎಕ್ಸ್ ಶೋರೂಂ) ದಿಂದ ಆರಂಭಗೊಳ್ಳುತ್ತದೆ.

    ಎಂಜಿ ವಿಂಡ್ಸರ್ ಇವಿ ಎಕ್ಸೈಟ್, ಎಕ್ಸ್‌ಕ್ಲೂಸಿವ್ ಮತ್ತು ಎಸೆನ್ಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಇವುಗಳ ಬೆಲೆ ಕ್ರಮವಾಗಿ 13.50 ಲಕ್ಷ, 14.50 ಲಕ್ಷ ಮತ್ತು 15.50 ಲಕ್ಷ ರೂ (ಎಕ್ಸ್ ಶೋರೂಂ). ಸ್ಟಾರ್‌ಬರ್ಸ್ಟ್ ಬ್ಲ್ಯಾಕ್, ಪರ್ಲ್ ವೈಟ್, ಕ್ಲೇ ಬೀಜ್ ಮತ್ತು ಟರ್ಕೋಯಿಸ್ ಗ್ರೀನ್ ಬಣ್ಣಗಳಲ್ಲಿ ಈ ಕಾರು ಲಭ್ಯವಿದ್ದು, ಬುಕ್ಕಿಂಗ್‌ ಅಕ್ಟೋಬರ್ 3ರಿಂದ ಪ್ರಾರಂಭವಾಗಲಿದ್ದು, ಕಾರಿನ ವಿತರಣೆಯು ಅಕ್ಟೋಬರ್ 12 ರಿಂದ ಪ್ರಾರಂಭವಾಗಲಿದೆ. ಇದನ್ನೂ ಓದಿ: ಭಾರತಕ್ಕೆ ಮತ್ತೆ ವಾಪಸ್ ಬರಲಿದೆ ಫೋರ್ಡ್

    MG ವಿಂಡ್ಸರ್ EV ಕಾರಿನಲ್ಲಿ 38kWh ಬ್ಯಾಟರಿಯನ್ನು ಒಂದೇ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಜೋಡಿಸಲಾಗಿದೆ. ಇದು 134bhp ಪವರ್ ಮತ್ತು 200Nm ಟಾರ್ಕ್ ಉತ್ಪಾದಿಸುತ್ತದೆ. ಒಂದು ಸಂಪೂರ್ಣ ಚಾರ್ಜ್‌ನಲ್ಲಿ 332 ಕಿ.ಮೀ ಚಲಿಸಬಹುದು ಎಂದು ARAI ಪ್ರಮಾಣೀಕರಿಸಿದೆ. ಇಕೋ, ಇಕೋ+, ನಾರ್ಮಲ್ ಮತ್ತು ಸ್ಪೋರ್ಟ್ ಎಂಬ ನಾಲ್ಕು ಡ್ರೈವ್ ಮೋಡ್‌ಗಳನ್ನು ವಿಂಡ್ಸರ್ ಹೊಂದಿದೆ. ಈ ಕಾರು, 4,295 ಎಂಎಂ ಉದ್ದ, 1,850 ಎಂಎಂ ಅಗಲ ಮತ್ತು 1,652 ಎಂಎಂ ಎತ್ತರವಿದೆ. 2,700 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು.

    15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ವಿಥ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, 9-ಸ್ಪೀಕರ್ ಇನ್ಫಿನಿಟಿ ಆಡಿಯೊ ಸಿಸ್ಟಮ್, 256-ಬಣ್ಣದ ಆಂಬಿಯೆಂಟ್ ಲೈಟಿಂಗ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್. 8.8-ಇಂಚಿನ ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಕೀಲೆಸ್ ಎಂಟ್ರಿ ಮತ್ತು ಪುಶ್-ಬಟನ್ ಸ್ಟಾರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ವಿಂಡ್ಸರ್ EV ಒಳಗೊಂಡಿದೆ. ಇದನ್ನೂ ಓದಿ: ಟಾಟಾ ನೆಕ್ಸಾನ್ EV ಬೆಲೆ 3 ಲಕ್ಷ ರೂಪಾಯಿ ಕಡಿತ

     

    ಈ ಕಾರಿನಲ್ಲಿ ಹಿಂಬದಿಯ ಆಸನಗಳು 135 ಡಿಗ್ರಿಗಳವರೆಗೆ ಅಡ್ಜಸ್ಟ್ ಮಾಡಿಕೊಳ್ಳಬಹುದಾಗಿದ್ದು, ಆರಾಮದಾಯಕ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ. ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್, ಹಿಂಬದಿ ಪ್ರಯಾಣಿಕರಿಗೆ ಎಸಿ ವೆಂಟ್‌ಗಳು, 360-ಡಿಗ್ರಿ ಕ್ಯಾಮೆರಾ ಸಿಸ್ಟಮ್ ಮತ್ತು ಪ್ಯಾನರೋಮಿಕ್ ಸನ್ ರೂಫ್ ಕೂಡ ಇದರಲ್ಲಿ ಇದೆ.

    ವಿಂಡ್ಸರ್ ಚಾರ್ಜ್ ಮಾಡಲು, MG ಮೂರು ಆಯ್ಕೆಗಳನ್ನು ನೀಡುತ್ತದೆ: 3.3 kW CCS2 ಚಾರ್ಜರ್ ಕಾರನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 13.8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, 7.4 kW ಚಾರ್ಜರ್ 6.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು 50 kW ಚಾರ್ಜರ್ ಕೇವಲ 55 ನಿಮಿಷಗಳಲ್ಲಿ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡುತ್ತದೆ.

  • ಲುಕ್‌ಗಿಂತ ಬಿಲ್ಡ್‌ ಕ್ವಾಲಿಟಿ ಹಾಗೂ ಸೇಫ್ಟಿ ನೋಡಿ ಕಾರು ಖರೀದಿಸಿ

    ಲುಕ್‌ಗಿಂತ ಬಿಲ್ಡ್‌ ಕ್ವಾಲಿಟಿ ಹಾಗೂ ಸೇಫ್ಟಿ ನೋಡಿ ಕಾರು ಖರೀದಿಸಿ

    ತ್ತೀಚಿನ ದಿನಗಳಲ್ಲಿ ಯಾವುದೇ ವಾಹನವನ್ನು(Vehicle) ಖರೀದಿಸುವಾಗ, ಹೆಚ್ಚಿನ ಜನರು ಸುರಕ್ಷತೆಯ ವೈಶಿಷ್ಟ್ಯಗಳನ್ನು ನೋಡುವುದಕ್ಕಿಂತ, ಒಳ್ಳೆ ಲುಕ್‌ ಇರುವ ವಾಹನವನ್ನು ಖರೀದಿಸುತ್ತಾರೆ. ತಮ್ಮ ಸುರಕ್ಷತೆಗಿಂತಲೂ ಇನ್ನೊಬ್ಬರ ಮುಂದೆ ಶೋ ಮಾಡುವ ಸಲುವಾಗಿ ಔಟ್‌ಲುಕ್‌ ಚೆನ್ನಾಗಿರುವ ವಾಹನಗಳ ಖರೀದಿಗೆ ಆದ್ಯತೆಯನ್ನು ನೀಡುತ್ತಾರೆ.

    ಯಾವುದೇ ವಾಹನವಾಗಿರಲಿ ಅದರಲ್ಲಿ ಸೇಫ್ಟಿ ಫೀಚರ್‌ಗಳು ಇದ್ದಷ್ಟು ಒಳ್ಳೆಯದೇ. ಜಗತ್ತಿನಲ್ಲಿ ಕಾರುಗಳನ್ನು (Car) ತಯಾರಿಸುವ ಕಂಪನಿಗಳು ಬಹಳಷ್ಟು ಇವೆ. ಅದರಲ್ಲಿ ಒಂದಷ್ಟು ಕಂಪನಿಗಳು ಬಿಲ್ಡ್‌ ಕ್ವಾಲಿಟಿಗೆ ಆದ್ಯತೆ ನೀಡಿ ಕಾರನ್ನು ನಿರ್ಮಾಣ ಮಾಡಿದರೆ, ಇನ್ನೊಂದಷ್ಟು ಕಂಪನಿಗಳು ಲುಕ್‌ಗೆ ಆದ್ಯತೆ ನೀಡುತ್ತವೆ. ಎರಡೂ ರೀತಿಯ ವಾಹನಗಳಿಗೆ ಗ್ರಾಹಕರು (Consumers) ಇರೋದೂ ಹೌದು. ಇನ್ನೂ ಕೆಲವು ಕಂಪನಿಗಳು, ಬಿಲ್ಡ್‌ ಕ್ವಾಲಿಟಿಯ ಜೊತೆಗೆ ಎರ್‌ ಬ್ಯಾಗ್‌, ಸ್ಟೆಬಿಲಿಟಿಯಂತಹ ಸೆಫ್ಟಿ ಫೀಚರ್ಸ್ ಗಳನ್ನು ಕೂಡ ಅಳವಡಿಸಿರುತ್ತಾರೆ. ಇಂತಹ ಸೇಫ್ಟಿ ಫೀಚರ್ಸ್‌ ಗಳು ಕಾರಿಗೆ ತುಂಬಾ ಅಗತ್ಯವಾದದ್ದು. ಇದನ್ನೂ ಓದಿ: ಆಸ್ತಿ, ಅಂತಸ್ತು ನೋಡಿ ಜೈಲಿನಲ್ಲಿ ಸೌಕರ್ಯ ನೀಡಲು ಸಾಧ್ಯವಿಲ್ಲ: ದರ್ಶನ್‌ಗೆ ಜೈಲೂಟ ಫಿಕ್ಸ್‌ – ಕೋರ್ಟ್‌ ಹೇಳಿದ್ದೇನು?

    ಗಾಡಿಯ ಬಿಲ್ಡ್‌ ಕ್ವಾಲಿಟಿ ಚೆನ್ನಾಗಿರುವುದರಿಂದ ಎಷ್ಟೋ ಪ್ರಾಣ ಉಳಿದದ್ದು ಇದೆ. ಬಿಲ್ಡ್‌ ಕ್ವಾಲಿಟಿ ಸರಿಯಾಗಿ ಇಲ್ಲದಿರುವುದರಿಂದ ಎಷ್ಟೋ ಪ್ರಾಣಗಳು ಹೋಗಿದ್ದೂ ಇವೆ. ನಾವುಗಳು ಅಷ್ಟು ದುಡ್ಡು ಕೊಟ್ಟು ಒಂದು ಗಾಡಿ ಖರೀದಿ ಮಾಡುತ್ತೇವೆ ಅಂದರೆ ಒಳ್ಳೆಯ ಬಿಲ್ಡ್‌ ಕ್ವಾಲಿಟಿ ಹಾಗು ಸೇಫ್ಟಿ ಫೀಚರ್ಸ್‌ ಇರುವ ಗಾಡಿಯನ್ನು ಯಾಕೆ ಖರೀದಿಸಬಾರದು ಎಂದು ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕು.

    ಸಾಮಾನ್ಯವಾಗಿ ಒಳ್ಳೆಯ ಬಿಲ್ಡ್‌ ಕ್ವಾಲಿಟಿ ಇಲ್ಲದ ಕಾರುಗಳು ಲೈಟ್‌ ವೇಯ್ಟ್‌ ಸ್ಟೈನ್‌ಲೆಸ್‌ ಸ್ಟೀಲ್‌ ಮೆಟೀರಿಯಲ್ಸ್‌ ಗಳನ್ನು ಉಪಯೋಗಿಸುತ್ತಾರೆ. ಅದನ್ನು ಆಟೊಗ್ರೇಡ್‌ ಸ್ಟೀಲ್‌ ಎಂದು ಕರೆಯುತ್ತಾರೆ. ಅದೇ ರೀತಿ ಬಿಲ್ಡ್‌ ಕ್ವಾಲಿಟಿ ಒಳ್ಳೆಯದಿರುವ ಕಾರುಗಳಲ್ಲಿ ಅಲ್ಯುಮೀನಿಯಂ, ಮೆಗ್ನೀಸಿಯಂ ಹಾಗೂ ಸ್ಟೀಲ್‌ಗಳನ್ನು ಮಲ್ಟಿ ಲೇಯರ್‌ನಲ್ಲಿ ಬಲಿಷ್ಟವಾಗಿ ತಯಾರಿಸುತ್ತಾರೆ. ಈ ಗಾಡಿಯಯಲ್ಲಿ 55% ಉಕ್ಕು ಮತ್ತು ಕಬ್ಬಿಣವನ್ನು ಬಳಸಿದರೆ, 9% ಅಲ್ಯೂಮಿನಿಯಂ 7% ರಬ್ಬರ್‌, 11% ಪ್ಲಾಸ್ಟಿಕ್‌ ಮತ್ತು 14% ಬೇರೆ ವಸ್ತುಗಳನ್ನು ಬಳಸಲಾಗುತ್ತದೆ. ಇದನ್ನೂ ಓದಿ: 2 ವರ್ಷಗಳ ಬಳಿಕ ಭಾರೀ ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್‌ ಮುಕ್ತ – ಈ ಷರತ್ತು ಅನ್ವಯ

    ಕೆಲವು ಕಂಪನಿಗಳು, ತಾವು ತಯಾರಿಸಿದ ಕಾರುಗಳನ್ನು ಮಾರುಕಟ್ಟೆಗೆ ಬಿಡುವ ಮೊದಲೇ ಅದರ ಬಿಲ್ಡ್‌ ಕ್ವಾಲಿಟಿಯನ್ನು ಪರೀಕ್ಷಿಸಿ ಅದರ ವೀಡಿಯೋಗಳನ್ನೂ ಬಿಡುಗಡೆ ಮಾಡುತ್ತವೆ. ಹೊಸ ಕಾರು ಖರೀದಿಸುವವರು ಇಂತಹ ವೀಡಿಯೋಗಳನ್ನು ನೋಡುವುದರ ಜೊತೆಗೆ ವಿಮರ್ಶೆಗಳನ್ನು ನೋಡಿ ಖರೀದಿಸುವುದು ಉತ್ತಮ.
    – ಪ್ರಜ್ವಲ್‌ ಗೌಡ

     

  • ಗ್ರಾಹಕರಿಗೆ ಗುಡ್‌ನ್ಯೂಸ್‌ – ದರ ಕಡಿತ, ಭಾರೀ ಆಫರ್‌ ಪ್ರಕಟಿಸಿದ ಕಾರು ಕಂಪನಿಗಳು

    ಗ್ರಾಹಕರಿಗೆ ಗುಡ್‌ನ್ಯೂಸ್‌ – ದರ ಕಡಿತ, ಭಾರೀ ಆಫರ್‌ ಪ್ರಕಟಿಸಿದ ಕಾರು ಕಂಪನಿಗಳು

    ಮುಂಬೈ: ಈ ವರ್ಷ ಕಾರು ಖರೀದಿಸಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ನಿಮಗೆ ಇಲ್ಲಿದೆ ಸಿಹಿ ಸುದ್ದಿ. ಕಾರು ಉತ್ಪಾದನಾ ಕಂಪನಿಗಳು (Car Manufacturing Companies) ಈಗ ಗ್ರಾಹಕರಿಗೆ ಭಾರೀ ಡಿಸ್ಕೌಂಟ್‌ (Discounts), ಎಕ್ಸ್‌ಚೇಂಜ್‌ ಬೋನಸ್‌, ಖಾತರಿ ಗಿಫ್ಟ್‌ ನೀಡಲು ಆರಂಭಿಸಿವೆ.

    ಅಂದಾಜು 5-10% ದರವನ್ನು ಕಡಿಮೆ ಮಾಡಿದ್ದು ಕಳೆದ ಐದು ವರ್ಷಗಳಲ್ಲಿ ಇಷ್ಟೊಂದು ಆಫರ್‌ ಮೊದಲ ಬಾರಿಗೆ ನೀಡಿವೆ. ದೀಪಾವಳಿವರೆಗೂ (Deepavali) ಈ ಆಫರ್‌ ಮುಂದುವರಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

    2023-24 ಹಣಕಾಸು ವರ್ಷದಲ್ಲಿ ಕಾರು ಮಾರಾಟ ಭರ್ಜರಿ ಏರಿಕೆ ಕಂಡಿತ್ತು. ಆದರೆ ಈ ಹಣಕಾಸು ವರ್ಷದ ಆರಂಭದಲ್ಲಿ ಮಾರಾಟ ಕಡಿಮೆಯಾಗಿದೆ. ದೀರ್ಘ ಕಾಲ ನಡೆದ ಲೋಕಸಭಾ ಚುನಾವಣೆ (Lok Sabha Election) ಮತ್ತು ಬಿಸಿ ಗಾಳಿಯಿಂದ (Heat Wave) ಕಡಿಮೆ ಕಾರುಗಳು ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಕಂಪನಿಗಳು ಈಗ ರಿಯಾಯಿತಿ ಘೋಷಣೆ ಮಾಡಿವೆ.

    ಸಾಧಾರಣವಾಗಿ ಡಿಸೆಂಬರ್‌ ಅಥವಾ ಯಾವುದಾದರೂ ಹಬ್ಬಗಳ ಸಂದರ್ಭದಲ್ಲಿ ಈ ರೀತಿಯ ರಿಯಾಯಿತಿ, ಆಫರ್‌ಗಳನ್ನು ಕಂಪನಿಗಳು ಪ್ರಕಟಿಸುತ್ತವೆ. ಆದರೆ ಈ ಬಾರಿ ಜೂನ್‌ ತಿಂಗಳಿನಲ್ಲೇ ರಿಯಾಯಿತಿಗಳು ಪ್ರಕಟವಾಗಿರುವುದು ವಿಶೇಷ. ಇದನ್ನೂ ಓದಿ: ವಿಶ್ವ ಆರೋಗ್ಯಕ್ಕಾಗಿ ಯೋಗ – ʻಸ್ವಯಂ ಮತ್ತು ಸಮಾಜಕ್ಕಾಗಿ ಯೋಗʼ

    ಯಾವ ಕಂಪನಿ ಎಷ್ಟು ರಿಯಾಯಿತಿ ಘೋಷಣೆ?
    ಟಾಟಾ ಮೋಟಾರ್ಸ್‌ – 25,000 ರೂ. ನಿಂದ 1,00,000 ರೂ.ವರೆಗೆ
    ಹೋಂಡಾ ಕಾರ್ಸ್‌ – 55,000 ರೂ.ನಿಂದ 1,00,000 ರೂ.ವರೆಗೆ
    ಮಾರುತಿ ಸುಜುಕಿ – 55,000 ರೂ. ನಿಂದ 95,000 ರೂ.ವರೆಗೆ
    (ಎಕ್ಸ್‌ಚೇಂಜ್‌ ಬೋನಸ್‌, ಕ್ಯಾಶ್‌ ಡಿಸ್ಕೌಂಟ್‌, ಗಿಫ್ಟ್‌, ಇಂಧನ ಮಾದರಿ ಎಲ್ಲವೂ ಸೇರಿ)

    ಯಾವ ಕಾರಿಗೆ ಏನು ಆಫರ್‌?
    ಟಾಟಾ ಮೋಟಾರ್ಸ್ ಸೆಪ್ಟೆಂಬರ್ 2023 ರಲ್ಲಿ ಬಿಡುಗಡೆಯಾದ ಎರಡನೇ ತಲೆಮಾರಿನ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ 1 ಲಕ್ಷ ರೂ.ವರೆಗೆ ಆಫರ್‌ ಪ್ರಕಟಿಸಿದೆ. ಮಾರುತಿ ಸುಜುಕಿ ಫ್ರಾಂಕ್ಸ್‌ಗೆ 72,000 ರೂ.ವರೆಗೆ ಮತ್ತು ಗ್ರಾಂಡ್ ವಿಟಾರಾದಲ್ಲಿ 95,000 ರೂ.ವರೆಗೆ ಆಫರ್‌ ನೀಡುತ್ತಿದೆ.

    ಸ್ಕೋಡಾ ಕಂಪನಿಯ Slavia ಕಾರಿಗೆ 94,000 ರೂ. ದರ (ಎಕ್ಸ್‌ ಶೋರೂಂ ದರ 10.69 ಲಕ್ಷ ರೂ.) ಕಡಿತ ಮಾಡಿದೆ. Kushaq ಮಾದರಿಯ ಕಾರಿಗೆ 1.10 ಲಕ್ಷ ರೂ.(ಎಕ್ಸ್‌ ಶೋ ರೂಂ ದರ 11.99 ಲಕ್ಷ ರೂ.), Kushaq Monte Carlo Automatic ಕಾರಿಗೆ 2.19 ಲಕ್ಷ ರೂ.(ಎಕ್ಸ್‌ ಶೋ ರೂಂ ದರ 15.59 ಲಕ್ಷ ರೂ.) ದರ ಕಡಿತ ಮಾಡಿದೆ.

  • ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಮರಳಿ ಬಂದ ಹೀರೋ ಕರಿಜ್ಮಾ

    ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಮರಳಿ ಬಂದ ಹೀರೋ ಕರಿಜ್ಮಾ

    ಮುಂಬೈ: 2003ರಲ್ಲಿ ಬಿಡುಗಡೆಯಾಗಿ 2019ರವರೆಗೆ 16 ವರ್ಷಗಳ ಕಾಲ ಭಾರತದ ರಸ್ತೆಯನ್ನು ಆಳಿದ್ದ ಕರಿಜ್ಮಾ (Karizma) ಈಗ ಹೊಸ ಅವತಾರದಲ್ಲಿ ಮತ್ತೆ ಎಂಟ್ರಿ ಕೊಟ್ಟಿದೆ. ಬಹುನಿರೀಕ್ಷಿತ ಹೀರೋ ಕರಿಜ್ಮಾ XMR (Hero Karizma XMR) ಬೈಕನ್ನು ಬಾಲಿವುಡ್‌ ನಟ ಹೃತಿಕ್ ರೋಷನ್ (Hrithik Roshan) ಬಿಡುಗಡೆಗೊಳಿಸಿದರು. ಇದರ ಪರಿಚಯಾತ್ಮಕ ಬೆಲೆ ರೂ. 1,72,990. ಈಗಾಗಲೇ ಇದರ ಬುಕ್ಕಿಂಗ್‌ ಆರಂಭವಾಗಿದೆ.

    ಹೊಸ ಕರಿಜ್ಮಾ XMR 210 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು 9,250 ಆರ್‌ಪಿಎಂನಲ್ಲಿ 25.15 ಎಚ್‌ಪಿ ಶಕ್ತಿ ಮತ್ತು 7,250 ಆರ್‌ಪಿಎಂನಲ್ಲಿ 20.4 ನ್ಯೂಟನ್‌ ಮೀಟರ್ ಟಾರ್ಕ್‌ ಉತ್ಪಾದಿಸುತ್ತದೆ. ಈ ಎಂಜಿನ್ 6-ಸ್ಪೀಡ್‌ ಟಾನ್ಸ್‌ಮಿಷನ್‌ ಹೊಂದಿದ್ದು, ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಹೊಂದಿದೆ. ಇದರ ಟಾಪ್‌ ಸ್ಪೀಡ್ 143 KMPH ಇದ್ದು, ಒಂದು ಲೀಟರ್ ಪೆಟ್ರೋಲ್‌ಗೆ 32.8 KM ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

    ಹೊಸ ಕರಿಜ್ಮಾ XMR ಬೈಕ್‌ ಅಡ್ಜಸ್ಟೆಬಲ್ ವಿಂಡ್‌ಶೀಲ್ಡ್, ಟ್ವಿನ್ ಎಲ್‌ಇಡಿ ಡಿಆರ್‌ಎಲ್‌, ಇಂಟೆಲಿಜೆಂಟ್ ಇಲ್ಯುಮಿನೇಷನ್ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್ ಮತ್ತು 17-ಇಂಚಿನ ಆಲಾಯ್‌ ವ್ಹೀಲ್‌ಗನ್ನು ಹೊಂದಿದೆ.  ಇದನ್ನೂ ಓದಿ: ಜಮ್ಮು ಕಾಶ್ಮೀರಕ್ಕೆ ಮರಳಿ ರಾಜ್ಯ ಸ್ಥಾನಮಾನ ಯಾವಾಗ? – ಕಾಲಮಿತಿ ತಿಳಿಸುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

    ಹೊಸ ಕರಿಜ್ಮಾ XMR ಕಪ್ಪು, ಹಳದಿ ಮತ್ತು ಕೆಂಪು ಬಣ್ಣಗಳಲ್ಲಿ ಲಭ್ಯವಿದೆ. ಯಮಹಾ R15 V4, ಸುಜುಕಿ Gixxer SF 250, ಬಜಾಜ್ ಪಲ್ಸರ್ ಆರ್‌ಎಸ್ 200 ಮತ್ತು ಕೆಟಿಎಂ ಆರ್‌ಸಿ 200 ಬೈಕ್‌ಗಳು ಹೊಸ ಕರಿಜ್ಮಾಗೆ ಇರುವ ಪ್ರತಿಸ್ಪರ್ಧಿಗಳು.

     

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಾಖಲೆಯ ಬರೋಬ್ಬರಿ 122 ಕೋಟಿಗೆ ಫ್ಯಾನ್ಸಿ ನಂಬರ್‌ ಸೇಲ್‌

    ದಾಖಲೆಯ ಬರೋಬ್ಬರಿ 122 ಕೋಟಿಗೆ ಫ್ಯಾನ್ಸಿ ನಂಬರ್‌ ಸೇಲ್‌

    ದುಬೈ: ಕೋಟ್ಯಂತರ ರೂ. ನೀಡಿ ದುಬಾರಿ ಬೆಲೆಯ ಕಾರುಗಳನ್ನು ಶ್ರೀಮಂತರು ಖರೀದಿಸುವುದು ನಿಮಗೆ ಗೊತ್ತೇ ಇದೆ. ಆದರೆ ದುಬೈಯಲ್ಲಿ ವ್ಯಕ್ತಿಯೊಬ್ಬರು ಬರೋಬ್ಬರಿ 122 ಕೋಟಿ ರೂ. ನೀಡಿ ಫ್ಯಾನ್ಸಿ ನಂಬರ್‌ (Fancy Number) ಖರೀದಿ ಮಾಡಿ ವಿಶ್ವದಾಖಲೆ (World Record) ನಿರ್ಮಿಸಿದ್ದಾರೆ.

    ವಿಐಪಿ ನಂಬರ್‌ ʼP 7′ ದಾಖಲೆಯ 55 ದಶಲಕ್ಷ ದಿರ್ಹಾಮ್‌ (ಅಂದಾಜು 122.6 ಕೋಟಿ ರೂ.) ಹರಾಜಾಗಿದೆ. ಫ್ಯಾನ್ಸಿ ʼP 7′ ಸಂಖ್ಯೆಗೆ ಮೂಲಬೆಲೆ 15 ದಶಲಕ್ಷ ದಿರ್ಹಾಮ್‌ ನಿಗದಿ ಮಾಡಲಾಗಿತ್ತು. ಆರಂಭದ ಕೆಲವೇ ನಿಮಿಷಗಳಲ್ಲಿಇದು 30 ದಶಲಕ್ಷ ದಿರ್ಹಾಮ್‌ಗೆ ಹೋಗಿತ್ತು. ಕೊನೆಗೆ ಇದು 55 ದಶಲಕ್ಷ ದಿರ್ಹಾಮ್‌ ಮಾರಾಟವಾಗಿದೆ. ಇಷ್ಟೊಂದು ಹಣವನ್ನು ಖರ್ಚು ಮಾಡಿ ಬಿಡ್‌ ಗೆದ್ದವರು ಯಾರು ಎನ್ನುವುದು  ಬಹಿರಂಗವಾಗಿಲ್ಲ. ಇದನ್ನೂ ಓದಿ: Public TV Explainer – ಮೋದಿಯನ್ನು ಫಾಲೋ ಮಾಡಿದ ಮಸ್ಕ್‌: ಟೆಸ್ಲಾ ಕಾರು ಇನ್ನೂ ಭಾರತಕ್ಕೆ ಬಂದಿಲ್ಲ ಯಾಕೆ?

    ಯುಎಇ ಪ್ರಧಾನಿ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ರಂಜಾನ್‌ ಸಮಯದಲ್ಲಿ 100 ಕೋಟಿ ಉಚಿತ ಊಟ ವಿತರಣೆ ಮಾಡಲು ಮುಂದಾಗಿದ್ದು ಈ ಸೇವೆಗೆ ಸಹಾಯ ನೀಡಲು ಎಮಿರೆಟ್ಸ್‌ ಸಂಸ್ಥೆ ಫ್ಯಾನ್ಸಿ ಸಂಖ್ಯೆ ಮತ್ತು ಮೊಬೈಲ್‌ ಸಂಖ್ಯೆಗಳನ್ನು ಹರಾಜು ಹಾಕಿತ್ತು. ಈ ಹರಾಜಿನ ಮೂಲಕ ಒಟ್ಟು 100 ದಶಲಕ್ಷ ದಿರ್ಹಾಮ್‌ (ಅಂದಾಜು 220 ಕೋಟಿ ರೂ.) ಸಂಗ್ರಹಿಸಲಾಗಿದೆ.

    2008ರಲ್ಲಿ ಅಬುಧಾಬಿಯಲ್ಲಿ ʼNo. 1ʼ ಪ್ಲೇಟ್‌ 52.22 ದಶಲಕ್ಷ ದಿರ್ಹಾಮ್‌ಗೆ ಬಿಡ್‌ ಆಗಿತ್ತು. ಇದು ಇಲ್ಲಿಯವರೆಗೆ ದುಬಾರಿ ಬೆಲೆಗೆ ಹರಾಜಾದದ ಫ್ಯಾನ್ಸಿ ನಂಬರ್‌ ಆಗಿತ್ತು. ಈಗ ಈ ದಾಖಲೆಯನ್ನು ʼP 7′ ಮುರಿದಿದೆ.

  • Public TV Explainer – ಮೋದಿಯನ್ನು ಫಾಲೋ ಮಾಡಿದ ಮಸ್ಕ್‌: ಟೆಸ್ಲಾ ಕಾರು ಇನ್ನೂ ಭಾರತಕ್ಕೆ ಬಂದಿಲ್ಲ ಯಾಕೆ?

    Public TV Explainer – ಮೋದಿಯನ್ನು ಫಾಲೋ ಮಾಡಿದ ಮಸ್ಕ್‌: ಟೆಸ್ಲಾ ಕಾರು ಇನ್ನೂ ಭಾರತಕ್ಕೆ ಬಂದಿಲ್ಲ ಯಾಕೆ?

    ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲೋನ್‌ ಮಸ್ಕ್‌ (Elon Musk) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡಿದ ಬೆನ್ನಲ್ಲೇ ಟೆಸ್ಲಾ (Tesla) ಎಲೆಕ್ಟ್ರಿಕ್‌ ಕಾರು ಭಾರತದಲ್ಲಿ ಬಿಡುಗಡೆಯಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಮೋದಿ ಅವರನ್ನು ಫಾಲೋ ಮಾಡಿದ ವಿಚಾರ ತಿಳಿಯುತ್ತಿದ್ದಂತೆ ಮಸ್ಕ್‌ ಬಳಿ ನೆಟ್ಟಿಗರು ಭಾರತದಲ್ಲಿ ಇನ್ನೂ ಯಾಕೆ ಟೆಸ್ಲಾ ಕಾರು ಬಂದಿಲ್ಲ? ಕಾರು ಯಾವಾಗ ಬಿಡುಗಡೆ ಆಗಲಿದೆ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ.

    2015ರಲ್ಲಿ ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಟೆಸ್ಲಾ ಘಟಕಕ್ಕೆ ಭೇಟಿ ನೀಡಿ ಭಾರತದಲ್ಲೂ ಕಾರು ಉತ್ಪಾದನೆ ಮಾಡುವಂತೆ ಮನವಿ ಮಾಡಿದ್ದರು. ಇದಾದ ಬಳಿಕ 2016ರಲ್ಲೇ ಟೆಸ್ಲಾ ಭಾರತಕ್ಕೆ ಬರುವುದಾಗಿ ಹೇಳಿತ್ತು. 2020ರ ಅಕ್ಟೋಬರ್‌ನಲ್ಲಿ ಟೆಸ್ಲಾದ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಕಂಪನಿಯು 2021ಕ್ಕೆ ಭಾರತಕ್ಕೆ ಕಾಲಿಡಲಿದೆ ಎಂದಿದ್ದರು. ಆದರೆ ಕೇಂದ್ರ ಸರ್ಕಾರ ಮತ್ತು ಟೆಸ್ಲಾ ಕಂಪನಿ ಜೊತೆ ತೆರಿಗೆ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿರುವ ಕಾರಣ ಭಾರತದಲ್ಲಿ ಇನ್ನೂ ಟೆಸ್ಲಾ ಕಾರು ಬಿಡುಗಡೆಯಾಗಿಲ್ಲ.



    ಮಸ್ಕ್‌ ಪ್ಲ್ಯಾನ್‌ ಏನು?
    ಟೆಸ್ಲಾ ಚೀನಾದಲ್ಲಿ(China) ದೊಡ್ಡ ಫ್ಯಾಕ್ಟರಿ ತೆರೆದಿದ್ದು ಏಷ್ಯಾ ಖಂಡದ ದೇಶಗಳಿಗೆ ಇಲ್ಲಿಂದ ಕಾರುಗಳನ್ನು ರಫ್ತು ಮಾಡಲು ಮುಂದಾಗಿದೆ. ಟೆಸ್ಲಾದ ಈ ನೀತಿಗೆ ಭಾರತ ವಿರೋಧ ವ್ಯಕ್ತಪಡಿಸುತ್ತಿದೆ. ಈ ವಿಚಾರಕ್ಕೆ ಹಿಂದೆ ಪ್ರತಿಕ್ರಿಯಿಸಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಭಾರತದಲ್ಲಿ ಕಾರನ್ನು ಟೆಸ್ಲಾ ಉತ್ಪಾದಿಸಬೇಕು. ಚೀನಾ ದೇಶದಲ್ಲಿ ಉತ್ಪಾದನೆಯಾದ ಕಾರನ್ನು ಭಾರತದಲ್ಲಿ ಮಾರಾಟ ಮಾಡಬಾರದು. ಇಲ್ಲಿ ಘಟಕ ತೆರೆಯಲು ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದ್ದರು.

    ಭಾರತದ ವಾದವೇನು?
    2020ರ ಜೂನ್​ನಲ್ಲಾದ ಗಲ್ವಾನ್‌ ಘರ್ಷಣೆಯ ಬಳಿಕ ಭಾರತ ಮತ್ತು ಚೀನಾದ ಸಂಬಂಧ ಹಳಸಿದೆ. ಚೀನಾಗೆ ಸ್ಪರ್ಧೆ ನೀಡಲೆಂದೇ ಭಾರತ ಮೇಕ್‌ ಇನ್‌ ಇಂಡಿಯಾ (Make In India) ಯೋಜನೆಗೆ ಮತ್ತಷ್ಟು ವೇಗ ನೀಡುತ್ತಿದೆ. ಈ ಕಾರಣಕ್ಕೆ ಕಂಪನಿಗಳು ಭಾರತದಲ್ಲೇ ಉತ್ಪಾದನಾ ಘಟಕಗಳನ್ನು ತೆರೆಯಬೇಕು ಎಂದು ಒತ್ತಡ ಹೇರುತ್ತದೆ. ಎಲೆಕ್ಟ್ರಾನಿಕ್ಸ್‌ ಉತ್ಪನ್ನ, ಅಟೋಮೊಬೈಲ್‌ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಭಾರತ ಉತ್ಪದನಾ ಹಬ್‌ ಆಗಿ ಬೆಳೆಯಬೇಕು ಎನ್ನುವುದು ಕೇಂದ್ರದ ಕನಸು.  ಪ್ರಸ್ತುತ ವಿದೇಶದಲ್ಲಿ ಉತ್ಪಾದನೆಯಾದ ಎಲೆಕ್ಟ್ರಿಕ್‌ ಕಾರುಗಳ ಮಾರಾಟಕ್ಕೆ ಯಾವುದೇ ಸಮಸ್ಯೆಯಿಲ್ಲ. ಆದರೆ ಬಾರಿ ಆಮದು ಸುಂಕವನ್ನು ಪಾವತಿಸಿದ ಬಳಿಕ ಮಾರಾಟಕ್ಕೆ ಅನುಮತಿ ನೀಡಲಾಗುತ್ತದೆ.

    ಆಮದು ಸುಂಕ ಎಷ್ಟು?
    ಪ್ರಸ್ತುತ ಮಸ್ಕ್ ಮತ್ತು ಭಾರತ ಸರ್ಕಾರದ ಮಧ್ಯೆ ಅಮದು ತೆರಿಗೆ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿದೆ. ವಿದೇಶದಿಂದ ಭಾರತಕ್ಕೆ ಬರುವ 40 ಲಕ್ಷ ಡಾಲರ್(ಅಂದಾಜು 30 ಲಕ್ಷ ರೂ.) ಮೌಲ್ಯದ ಎಲೆಕ್ಟ್ರಿಕ್ ವಾಹನಕ್ಕೆ ಶೇ.60 ರಷ್ಟು ತೆರಿಗೆ ವಿಧಿಸಲಾಗುತ್ತದೆ. 40 ಲಕ್ಷ ಡಾಲರ್‌ಗಿಂದ ಹೆಚ್ಚಿನ ಮೌಲ್ಯದ ಎಲೆಕ್ಟ್ರಿಕ್ ವಾಹನಗಳಿಗೆ ಶೇ.100 ರಷ್ಟು ತೆರಿಗೆ ವಿಧಿಸಲಾಗುತ್ತದೆ.

    ಮಸ್ಕ್‌ ಈ ಹಿಂದೆ ಹೇಳಿದ್ದೇನು?
    ಈ ಹಿಂದೆ 2022ರ ಜನವರಿಯಲ್ಲಿ ಭಾರತೀಯ ಟ್ವಿಟ್ಟರ್ ಬಳಕೆದಾರನೊಬ್ಬನ ಪ್ರಶ್ನೆಗೆ ಎಲೋನ್ ಮಸ್ಕ್ ಪ್ರತಿಕ್ರಿಯೆ ನೀಡುವ ಮೂಲಕ ಟೆಸ್ಲಾ ಕಾರುಗಳನ್ನು ಮಾರಾಟ ಮಾಡುವ ಬಗ್ಗೆ ಅಪ್‍ಡೇಟ್ ನೀಡಿದ್ದರು. ಟೆಸ್ಲಾ ಕಂಪನಿ ಭಾರತದಲ್ಲಿ ಕಾರುಗಳನ್ನು ಮಾರಾಟ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಕಂಪನಿ ಈ ಯೋಜನೆಯ ಕುರಿತಾಗಿ ಸರ್ಕಾರದೊಂದಿಗೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದ್ದರು.

    ಕರ್ನಾಟಕದಲ್ಲಿ ಸ್ಥಾಪನೆಯಾಗುತ್ತಾ?
    ಉದ್ಯಮಿ ಎಲಾನ್‌ ಮಸ್ಕ್‌ ಮಾಲೀಕತ್ವದ ಟೆಸ್ಲಾ ಕಂಪನಿ ಕರ್ನಾಟಕದಲ್ಲಿ (Karnataka) ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು 2021ರಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದರು.

    ತುಮಕೂರು ಜಿಲ್ಲೆಯಲ್ಲಿ 7,725 ಕೋಟಿ ರೂ. ವೆಚ್ಚದಲ್ಲಿ ಟೆಸ್ಲಾ ಉತ್ಪಾದನಾ ಘಟಕವನ್ನು ತೆರೆಯಲಿದೆ. ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿ ʼಟೆಸ್ಲಾ ಇಂಡಿಯಾ ಮೋಟಾ​ರ್ಸ್‌ʼ ಹೆಸರಿನಲ್ಲಿ ಕಂಪನಿಯನ್ನು ನೋಂದಣಿ ಮಾಡುವ ಜೊತೆಗೆ ಮೂರು ನಿರ್ದೇಶಕರನ್ನೂ ನೇಮಿಸಲಾಗಿದೆ ಎಂದು ವರದಿಯಾಗಿತ್ತು.  ಇದನ್ನೂ ಓದಿ: ಭಾರತದಲ್ಲಿ ಟ್ವಿಟ್ಟರ್‌ ತುಂಬಾ ನಿಧಾನ – ಎಲೋನ್‌ ಮಸ್ಕ್‌

    ಅಮೆರಿಕ ಮತ್ತು ಚೀನಾದಲ್ಲಿನ ಉತ್ಪಾದನಾ ಕೇಂದ್ರಗಳಿಂದ ಆಮದು ಮಾಡಿಕೊಂಡ ಎಲೆಕ್ಟ್ರಿಕ್‌ ವಾಹನಗಳನ್ನು ದೇಶದಲ್ಲಿ ಮಾರಾಟ ಮಾಡುವ ಮೂಲಕ ಬೇಡಿಕೆಯ ವ್ಯಾಪ್ತಿ-ವಿಸ್ತಾರವನ್ನು ಪರೀಕ್ಷಿಸಲು ಟೆಸ್ಲಾ ಯತ್ನಿಸಿತ್ತು. ಇದಕ್ಕಾಗಿ ಆಮದು ಸುಂಕ ಕಡಿತ ಮಾಡುವಂತೆ ಸರ್ಕಾರದ ಜೊತೆ ಸತತ 1 ವರ್ಷಗಳ ಕಾಲ ಮಾತುಕತೆಯನ್ನೂ ನಡೆಸಿತ್ತು. ಆದರೆ, ಮೇಕ್ ಇನ್ ಇಂಡಿಯಾ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿರುವ ಭಾರತ ಸರ್ಕಾರ ಶೇ.100 ರಷ್ಟು ಸುಂಕ ಕಡಿಮೆ ಮಾಡುವ ಬದಲು ಸ್ಥಳೀಯವಾಗಿಯೇ ಉತ್ಪಾದನೆ ಮಾಡುವಂತೆ ಕಂಪನಿ ಮೇಲೆ ಒತ್ತಡ ಹೇರಿತ್ತು. ಈ ಕಾರಣಗಳಿಂದಾಗಿ ಟೆಸ್ಲಾ ಭಾರತದಿಂದಲೇ ದೂರ ಉಳಿಯಲು ನಿರ್ಧರಿಸಿತ್ತು.

    ಪ್ರಸ್ತುತ ವಿಶ್ವದಲ್ಲೇ ಭಾರತದ ದೊಡ್ಡ ಮಾರುಕಟ್ಟೆಯಾಗಿದ್ದು, ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಅಷ್ಟೇ ಅಲ್ಲದೇ ಚೀನಾ ಮತ್ತು ಅಮೆರಿಕದ ಸಂಬಂಧ ಮತ್ತಷ್ಟು ಹಾಳಾಗಿದೆ. ಈ ಕಾರಣಕ್ಕೆ ಮಸ್ಕ್‌ ಭಾರತದಲ್ಲಿ ಟೆಸ್ಲಾ ಘಟಕವನ್ನು ತೆರೆಯಲು ಈಗ ಆಸಕ್ತಿ ತೋರಿದ್ದಾರೆ ಎನ್ನಲಾಗುತ್ತಿದೆ.

    ಮಾಡೆಲ್‌ 3 ಕಾರಿನ ವಿಶೇಷತೆಗಳು ಏನು?
    ಇಂದಿನ ವರೆಗೆ ಟೆಸ್ಲಾದಿಂದ ಬಿಡುಗಡೆ ಹೊಂದಿದ ಕಾರುಗಳಲ್ಲಿ ಅತ್ಯಂತ ಒಳ್ಳೆಯ ಮಾದರಿ ಇದಾಗಿದ್ದು, ಈ ಕಾರನ್ನು 2017ರಲ್ಲಿ ವಿಶ್ವದಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಲಾಗಿದೆ. ವಿಶ್ವದಲ್ಲೇ ಅತೀ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆ ಈ ಕಾರಿಗೆ ಪಡೆದುಕೊಂಡಿದೆ. ಎರಡು ಮಾದರಿಯಲ್ಲಿ ಮಾಡೆಲ್ 3 ಕಾರು ಬಿಡುಗಡೆಯಾಗಿದೆ. ಲಾಂಗ್ ರೇಂಜ್ ಮಾದರಿಯ ಕಾರು ಒಮ್ಮೆ ಚಾರ್ಜ್ ಮಾಡಿದರೆ 500 ಕಿ.ಮೀ ಕ್ರಮಿಸಿದರೆ, ಸ್ಟಾಡಂರ್ಡ್ ಮಾದರಿಯ ಕಾರು 354 ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. 15 ನಿಮಿಷದಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಗರಿಷ್ಟ 162 ಕೀ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಈ ಕಾರಿಗಿದೆ.

    ಸ್ಟಾರ್‌ಲಿಂಕ್‌ಗೆ ಅನುಮತಿ ಇಲ್ಲ
    ಮಸ್ಕ್ ಅವರ ಸ್ಟಾರ್‌ಲಿಂಕ್‌ (Starlink) ಕಂಪನಿ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೇವೆ ನೀಡಲು ಮುಂದಾಗಿತ್ತು. ಆದರೆ ಕೇಂದ್ರ ಸರ್ಕಾರದ ಜೊತೆಕಂಪನಿ ಈ ಯೋಜನೆ ಜಾರಿ ಸಂಬಂಧ ಯಾವುದೇ ಮಾತುಕತೆ ನಡೆಸಿರಲಿಲ್ಲ. ಹೀಗಾಗಿ ಈ ಸೇವೆ ಆರಂಭಿಸಲು ಅನುಮತಿ ನೀಡುವುದಿಲ್ಲ ಎಂದು ತಿಳಿಸಿತ್ತು.

  • ಕ್ರ್ಯಾಶ್ ಟೆಸ್ಟ್‌ನಲ್ಲಿ ಕೇವಲ 1 ಸ್ಟಾರ್ ಪಡೆದ ವ್ಯಾಗನ್ ಆರ್ – 2 ಸ್ಟಾರ್ ಪಡೆದ ಆಲ್ಟೊ K10

    ಕ್ರ್ಯಾಶ್ ಟೆಸ್ಟ್‌ನಲ್ಲಿ ಕೇವಲ 1 ಸ್ಟಾರ್ ಪಡೆದ ವ್ಯಾಗನ್ ಆರ್ – 2 ಸ್ಟಾರ್ ಪಡೆದ ಆಲ್ಟೊ K10

    ನವದೆಹಲಿ: ಭಾರತದಲ್ಲಿ ತಯಾರಿಸಿದ ಮಾರುತಿ ಸುಜುಕಿ ವ್ಯಾಗನ್ ಆರ್ (Wagon R) ಮತ್ತು ಆಲ್ಟೊ K10 (Alto K10) ಗ್ಲೋಬಲ್ ಎನ್‌ಸಿಎಪಿ(Global NCAP) ಕ್ರ್ಯಾಶ್ ಟೆಸ್ಟ್‌(Crash Test)ನಲ್ಲಿ ಕಳಪೆ ಸಾಧನೆ ತೋರಿ ಕಾರು ಸುರಕ್ಷತೆ ವಿಷಯದಲ್ಲಿ ಭಾರೀ ನಿರಾಸೆ ಮೂಡಿಸಿವೆ.

    ವ್ಯಾಗನ್ ಆರ್
    ಸೇಫರ್ ಕಾರ್ಸ್ ಫಾರ್ ಇಂಡಿಯಾ ಅಭಿಯಾನದ (Safercarsforindia) ಅಡಿಯಲ್ಲಿ ಗ್ಲೋಬಲ್ ಎನ್‌ಸಿಎಪಿ ವ್ಯಾಗನ್ ಆರ್ ಕಾರನ್ನು ಕ್ರ್ಯಾಶ್ ಟೆಸ್ಟ್ ಮಾಡಿದೆ. ಈ ಟೆಸ್ಟ್‌ನಲ್ಲಿ ವಯಸ್ಕ ಪ್ರಯಾಣಿಕರ ರಕ್ಷಣೆಗಾಗಿ ಕೇವಲ ಒಂದು ಸ್ಟಾರ್ ರೇಟಿಂಗ್ ಮತ್ತು ಮಕ್ಕಳ ರಕ್ಷಣೆಗಾಗಿ ಸೊನ್ನೆ ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಈ ಹಿಂದೆ ವ್ಯಾಗನ್ ಆರ್ ಕಾರನ್ನು 2019ರಲ್ಲಿ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗೆ ಒಳಪಡಿಸಿತ್ತು. ಆಗ ಈ ಕಾರಿಗೆ 2 ಸ್ಟಾರ್ ರೇಟಿಂಗ್ ಸಿಕ್ಕಿತ್ತು. ಇದನ್ನೂ ಓದಿ: ಅವಘಡ ತಪ್ಪಿಸಲು ರೈಲನ್ನೇ ನಿಲ್ಲಿಸಿದ ದಿಟ್ಟ ಮಹಿಳೆ!

    ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ ವ್ಯಾಗನ್ ಆರ್ 34ಕ್ಕೆ 19.69 ಅಂಕಗಳನ್ನಷ್ಟೇ ಪಡೆಯಲು ಸಫಲವಾಯಿತು. ಈ ಕಾರು ಚಾಲಕ ಮತ್ತು ಪ್ರಯಾಣಿಕರಿಗೆ ತಲೆ ಮತ್ತು ಕುತ್ತಿಗೆ ರಕ್ಷಣೆಯ ವಿಷಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಆದರೆ ಚಾಲಕನ ಎದೆಯ ಭಾಗದ ಸುರಕ್ಷತೆಯು ತುಂಬಾ ದುರ್ಬಲವಾಗಿದೆ. ಇದನ್ನೂ ಓದಿ: ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ಪಡೆದ ಫೋಕ್ಸ್‌ವ್ಯಾಗನ್ ವರ್ಟಸ್, ಸ್ಕೋಡಾ ಸ್ಲಾವಿಯಾ

     

    ಮಕ್ಕಳ ಸುರಕ್ಷತೆಯ ವಿಭಾಗದಲ್ಲಿ ವ್ಯಾಗನ್ ಆರ್ 49 ರಲ್ಲಿ ಕೇವಲ 3.40 ಅಂಕಗಳನ್ನು ಪಡೆದುಕೊಂಡಿದೆ. ಅಂದರೆ ಈ ವಿಭಾಗದಲ್ಲಿ ಕಾರು 0 ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ (ISOFIX Child Seat Mount) ಅಥವಾ ಚೈಲ್ಡ್ ರಿಸ್ಟ್ರೈಂಟ್ ಸಿಸ್ಟಂ (Child Restraint System) ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣ.

    ಆಲ್ಟೊ K10
    ಗ್ಲೋಬಲ್ ಎನ್‌ಸಿಎಪಿ ಆಲ್ಟೊ K10 ಕಾರನ್ನೂ ಕ್ರ್ಯಾಶ್ ಟೆಸ್ಟ್ ಮಾಡಿದೆ. ಆಲ್ಟೊ ಕಾರು ವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ ವ್ಯಾಗನ್ ಆರ್ ಕಾರಿಗಿಂತ ಸ್ವಲ್ಪ ಉತ್ತಮ ಸಾಧನೆ ತೋರಿ 2 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಆದರೆ ಮಕ್ಕಳ ಸುರಕ್ಷತೆಯಲ್ಲಿ ಶೂನ್ಯ ರೇಟಿಂಗ್ ಪಡೆದಿದೆ.

    ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ ಆಲ್ಟೊ K10 34ಕ್ಕೆ 21.67 ಅಂಕಗಳನ್ನು ಗಳಿಸಿದರೆ, ಮಕ್ಕಳ ಸುರಕ್ಷತೆಯ ವಿಭಾಗದಲ್ಲಿ 49ಕ್ಕೆ 3.52 ಅಂಕಗಳನ್ನಷ್ಟೇ ಗಳಿಸಿದೆ. ಈ ಕಾರಿನಲ್ಲೂ ಕೂಡ ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಅಥವಾ ಚೈಲ್ಡ್ ರಿಸ್ಟ್ರೈಂಟ್ ಸಿಸ್ಟಂ ಇಲ್ಲ. ಮಾರುತಿ ಸುಜುಕಿ ಕಂಪನಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕಿದೆ.

  • 9,125 ಕಾರುಗಳನ್ನು ಹಿಂದಕ್ಕೆ ಪಡೆದ ಮಾರುತಿ

    9,125 ಕಾರುಗಳನ್ನು ಹಿಂದಕ್ಕೆ ಪಡೆದ ಮಾರುತಿ

    ನವದೆಹಲಿ: ಮಾರುತಿ ಸುಜುಕಿ ಇಂಡಿಯಾ(Maruti Suzuki India) ಸಿಯಾಜ್, ಬ್ರೆಝಾ, ಎರ್ಟಿಗಾ, ಎಕ್ಸ್‌ಎಲ್ 6 ಮತ್ತು ಗ್ರ್ಯಾಂಡ್ ವಿಟಾರಾ ಸೇರಿ ಒಟ್ಟು 9,125 ಕಾರುಗಳನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ತಿಳಿಸಿದೆ.

    ನವೆಂಬರ್ 2 ರಿಂದ 28ರವರೆಗಿನ ಅವಧಿಯಲ್ಲಿ ಉತ್ಪಾದನೆಯಾದ ಕಾರುಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಈ ಕಾರುಗಳನ್ನು ಹಿಂದಕ್ಕೆ ಪಡೆಯಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

    ಮುಂಭಾಗದ ಸಾಲಿನ ಸೀಟ್ ಬೆಲ್ಟ್‌ಗಳ(Seat Belt) ಭುಜದ ಎತ್ತರ ಹೊಂದಾಣಿಕೆಯ ಜೋಡಣೆಯ ಸಣ್ಣ ಭಾಗದಲ್ಲಿ ಒಂದು ಸಂಭವನೀಯ ದೋಷವಿದೆ ಎಂದು ಶಂಕಿಸಲಾಗಿದೆ. ಇದು ಅಪರೂಪದ ಸಂದರ್ಭದಲ್ಲಿ ಸೀಟ್ ಬೆಲ್ಟ್ ಬೇರ್ಪಡಿಸಬಹುದು ಎಂದು ಹೇಳಿದೆ. ಇದನ್ನೂ ಓದಿ: ಟ್ವಿಟ್ಟರ್ ಉದ್ಯೋಗಿಗಳಿಗೆ ಬಿಡುವಿಲ್ಲದ ಕೆಲಸ – ಕಚೇರಿಯಲ್ಲೇ ಮಲಗಲು ಬೆಡ್‌ರೂಂಗಳನ್ನೂ ಸಿದ್ಧಪಡಿಸಿದ ಮಸ್ಕ್

    ದೋಷಪೂರಿತ ವಾಹನಗಳನ್ನು ತಪಾಸಣೆ ಮತ್ತು ದೋಷಪೂರಿತ ಭಾಗವನ್ನು ಉಚಿತವಾಗಿ ಹಿಂಪಡೆಯಬಹುದು. ವಾಹನದ ಮಾಲೀಕರ ಜೊತೆ ಕಂಪನಿ ಸಂವಹನ ನಡೆಸಲಿದೆ ಎಂದು ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ದೇಶದ ಆರ್ಥಿಕ ಅಭಿವೃದ್ಧಿಗೆ ಜೆಕೆ ಟೈರ್‌ ಕೊಡುಗೆ ನೀಡಿದೆ: ಗೆಹ್ಲೋಟ್

    ದೇಶದ ಆರ್ಥಿಕ ಅಭಿವೃದ್ಧಿಗೆ ಜೆಕೆ ಟೈರ್‌ ಕೊಡುಗೆ ನೀಡಿದೆ: ಗೆಹ್ಲೋಟ್

    ಮೈಸೂರು: ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆಯ ವಾತಾವರಣ ನಿರ್ಮಾಣವಾಗಿದೆ. ತಂತ್ರಜ್ಞಾನವು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ತಂತ್ರಜ್ಞಾನ ಮತ್ತು ಸಂಶೋಧನೆಯನ್ನು ಬಳಸಿಕೊಂಡು ಉತ್ಪನ್ನದ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್(Thawar Chand Gehlot) ಕರೆ ನೀಡಿದರು.

    ಮೈಸೂರಿನ(Mysuru) ಮೇಟಗಳ್ಳಿಯಲ್ಲಿರುವ ವಿಕ್ರಾಂತ್ ಟೈರ್ ಪ್ಲಾಂಟ್ ನಲ್ಲಿ ಆಯೋಜಿಸಲಾಗಿದ್ದ ಜೆಕೆ ಟೈರ್(JK Tyre) ವಿಕ್ರಾಂತ್ ರಜತ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇದನ್ನೂ ಓದಿ: BJP ಸರ್ಕಾರದಿಂದ ಎಲೆಕ್ಷನ್ ಗಿಫ್ಟ್ – ಹೊಸ ವರ್ಷದಿಂದ ವಿದ್ಯುತ್ ದರ ಇಳಿಕೆ?

    ಸ್ಪರ್ಧಾತ್ಮಕ ಜಗತ್ತಿನಲ್ಲಿ ಕರ್ನಾಟಕ(Karnataka) ರಾಜ್ಯ ತನ್ನದೇ ಆದ ಛಾಪು ಮೂಡಿಸಿದೆ. ಕರ್ನಾಟಕ ರಾಜ್ಯವನ್ನು ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ಆದ್ಯತೆಯ ತಾಣವನ್ನಾಗಿ ಮಾಡಲು ಸರ್ಕಾರವು ವಿವಿಧ ಪ್ರಯತ್ನಗಳನ್ನು ಮಾಡುತ್ತಿದೆ ಎಂದರು.

    ಜೆಕೆ ಆರ್ಗನೈಸೇಶನ್‌ನ ಪ್ರಮುಖ ಕಂಪನಿಯಾಗಿದ್ದು, ಟೈರ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತದಲ್ಲಿನ ಪ್ರಮುಖ ಟೈರ್ ತಯಾರಕರಲ್ಲಿ ಒಂದಾಗಿದೆ ಮತ್ತು ವಿಶ್ವದ ಅಗ್ರ 25 ತಯಾರಕರಲ್ಲಿ ಒಂದಾಗಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದ್ದು, ಕಳೆದ ನಾಲ್ಕು ದಶಕಗಳಿಂದ, ಜೆಕೆ ಟೈರ್, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉತ್ಪನ್ನಗಳ ಪರಿಚಯದ ಮೂಲಕ ಟೈರ್ ಉದ್ಯಮದಲ್ಲಿ ನಾವೀನ್ಯತೆ ಮತ್ತು ಉತ್ಕೃಷ್ಟತೆಯನ್ನು ತರುವಲ್ಲಿ ಮುಂಚೂಣಿಯಲ್ಲಿದೆ ಎಂದು ಶ್ಲಾಘಿಸಿದರು.

    2019 ರಲ್ಲಿ, ಕಂಪನಿಯು ದೇಶದ ಅತಿದೊಡ್ಡ ಆಫ್-ರೋಡ್ ಟೈರ್ – VEM 045 ನೊಂದಿಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಅನ್ನು ಪ್ರವೇಶಿಸಿತು. ಜೆಕೆ ಟೈರ್ 1997 ರಲ್ಲಿ ಕರ್ನಾಟಕದ ಕೈಗಾರಿಕಾ ರಂಗವನ್ನು ಪ್ರವೇಶಿಸಿತು ಮತ್ತು ಕರ್ನಾಟಕ ಸರ್ಕಾರದ ಅಂಡರ್‌ಟೇಕಿಂಗ್ ವಿಕ್ರಾಂತ್ ಟೈರ್ಸ್ ಲಿಮಿಟೆಡ್‌ನ ನಿರ್ವಹಣಾ ನಿಯಂತ್ರಣಕ್ಕಾಗಿ ಅಂದಿನ ಕರ್ನಾಟಕ ಸರ್ಕಾರದೊಂದಿಗೆ ಕಾರ್ಯತಂತ್ರದ ಮೈತ್ರಿ ಪಾಲುದಾರಿಕೆಯನ್ನು ಪ್ರವೇಶಿಸಿತು. ಅಲ್ಲದೇ, ಜೆಕೆ ಟೈರ್‌ನ ನಿರ್ವಹಣೆಯ ದೃಢವಾದ ಪ್ರಯತ್ನಗಳು ಜೆಕೆ ಟೈರ್ ಮೈಸೂರು ಪ್ಲಾಂಟ್ ಅನ್ನು ವಿಶ್ವ ದರ್ಜೆಯ ಟೈರ್ ಸ್ಥಾವರವನ್ನಾಗಿ ಮಾಡಿದೆ ಎಂದರು.

    ಜೆಕೆ ವಿಕ್ರಾಂತ್ ಟೈರ್ ಪ್ಲಾಂಟ್ ತನ್ನ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಸಂತಸದ ವಿಷಯ. ಮೈಸೂರು ಕೇಂದ್ರ ಕಾರಾಗೃಹದಲ್ಲಿ ವಯಸ್ಕರ ಸಾಕ್ಷರತೆ, ಐಟಿಐ ಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೌಶಲ್ಯ ಅಭಿವೃದ್ಧಿ, ಜೀವನೋಪಾಯ ಬೆಂಬಲ, ಪ್ರಾಥಮಿಕ ಶಾಲೆಗಳ ಅಭಿವೃದ್ಧಿಯ ಮೂಲಭೂತ ಶಿಕ್ಷಣ ಸೇರಿದಂತೆ ಮೂಲಸೌಕರ್ಯ, ಸ್ವಚ್ಛ ಭಾರತ ಅಭಿಯಾನದಡಿ ರಸ್ತೆಗಳ ದತ್ತು, ಕೆರೆಗಳ ಪುನರುಜ್ಜೀವನ, ಹುಣಸೂರು ತಾಲೂಕಿನಲ್ಲಿ ಶೌಚಾಲಯಗಳ ನಿರ್ಮಾಣ ಮತ್ತು ಬಯಲು ಶೌಚ ಮುಕ್ತ ಗ್ರಾಮಗಳನ್ನಾಗಿ ಮಾಡುತ್ತಿರುವ ಕಾರ್ಯ ಪ್ರಶಂಸನೀಯ ಎಂದು ಹೇಳಿದರು.

    ಮೈಸೂರು ತಾಂತ್ರಿಕ ಶ್ರೇಷ್ಠತೆಯ ಸ್ಥಳವಾಗಿದೆ. 2016 ರಲ್ಲಿ ಡಾ. ರಘುಪತಿ ಸಿಂಘಾನಿಯಾ ಎಕ್ಸಲೆನ್ಸ್ ಸೆಂಟರ್ ಆಫ್ ಗ್ಲೋಬಲ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಅಂಡ್ ಟೆಕ್ ಸೆಂಟರ್ ಅನ್ನು ಮೈಸೂರಿನಲ್ಲಿ ಸ್ಥಾಪಿಸಲಾಯಿತು, ಇಂದು ಅದು ಮೈಸೂರಿನ ಕೈಗಾರಿಕಾ ವಲಯದಲ್ಲಿ ಒಂದು ಉದಾಹರಣೆಯಾಗಿದೆ ಎಂದು ತಿಳಿದು ಸಂತೋಷವಾಗಿದೆ. ಈ ಕೇಂದ್ರದ ಮೂಲಕ, ರಬ್ಬರ್ ಮತ್ತು ಟೈರ್ ಉದ್ಯಮಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಒದಗಿಸುವುದರೊಂದಿಗೆ ಕೌಶಲ್ಯ ಅಭಿವೃದ್ಧಿ ಮತ್ತು ಸುಸ್ಥಿರತೆಯ ಕ್ಷೇತ್ರದಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

    ಜೆಕೆ ಟೈರ್ & ಇಂಡಸ್ಟ್ರೀಸ್ ಲಿಮಿಟೆಡ್, ಡಾ. ರಘುಪತಿ ಸಿಂಘಾನಿಯಾ ಅವರ ಸಮರ್ಥ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ, ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಸ್ವಾವಲಂಬಿ ಭಾರತ ಅಭಿಯಾನದ ದಿಕ್ಕಿನಲ್ಲಿ ಸಕ್ರಿಯ ಪ್ರಯತ್ನಗಳನ್ನು ಮಾಡುತ್ತಿದೆ. ಈ ಪ್ರಯತ್ನ ಮತ್ತಷ್ಟು ಮುಂದುವರೆಯಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.

    ರಾಜ್ಯಪಾಲರು ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಜೆಕೆ ಟೈರ್ ವಿಕ್ರಾಂತ್ ಪ್ಲಾಂಟ್ ಗೆ ಭೇಟಿ ನೀಡಿ, ವಿವಿಧ ಘಟಕಗಳನ್ನು ಉದ್ಘಾಟಿಸಿ, ತಯಾರಿಕೆ ಘಟಕಗಳನ್ನು ವೀಕ್ಷಿಸಿದರು.

    ಕಾರ್ಯಕ್ರಮದಲ್ಲಿ ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಎಲ್. ನಾಗೇಂದ್ರ, ಜೆಕೆ ಟೈರ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್ ಸಿಎಂಡಿ ಡಾ.ರಘುಪತಿ ಸಿಂಘಾನಿಯಾ, ಎಂಡಿ ಅಂಶುಮಾನ್ ಸಿಂಘಾನಿಯಾ ಮುಂತಾದ ಗಣ್ಯರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • 80 ಸಾವಿರಕ್ಕೂ ಅಧಿಕ ಕಾರನ್ನು ಹಿಂದಕ್ಕೆ ಪಡೆದ ಟೆಸ್ಲಾ

    80 ಸಾವಿರಕ್ಕೂ ಅಧಿಕ ಕಾರನ್ನು ಹಿಂದಕ್ಕೆ ಪಡೆದ ಟೆಸ್ಲಾ

    ಬೀಜಿಂಗ್‌: ಎಲಾನ್‌ ಮಸ್ಕ್‌ ಒಡೆತನದ ಟೆಸ್ಲಾ(Tesla) ಕಂಪನಿಯೂ ಚೀನಾದಲ್ಲಿ ಉತ್ಪಾದನೆಯಾದ 80 ಸಾವಿರಕ್ಕೂ ಅಧಿಕ ಕಾರು ಹಿಂದಕ್ಕೆ ಪಡೆದಿದೆ.

    ಸಾಫ್ಟ್‌ವೇರ್‌ ಮತ್ತು ಸೀಟ್‌ ಬೆಲ್ಟ್‌ನಲ್ಲಿ ದೋಷ ಇರುವ ಹಿನ್ನೆಲೆಯಲ್ಲಿ ಕಾರುಗಳನ್ನು ಹಿಂದಕ್ಕೆ ಪಡೆಯುತ್ತಿದ್ದೇವೆ ಎಂದು ಚೀನಾದ ಮಾರುಕಟ್ಟೆ ನಿಯಂತ್ರಕಕ್ಕೆ(Chinese Market Regulator) ಟೆಸ್ಲಾ ತಿಳಿಸಿದೆ. ಇದನ್ನೂ ಓದಿ: ಗೂಗಲ್‌ನ 10 ಸಾವಿರ ಉದ್ಯೋಗಿಗಳು ಮನೆಗೆ

    2013ರ ಸೆ.25 ರಿಂದ 2020 ನ.21ರವರೆಗೆ ಉತ್ಪಾದನೆಯಾದ 67,698 ಮಾಡೆಲ್‌ ಎಸ್‌, ಮಾಡೆಲ್‌ ಎಕ್ಸ್‌(Model S, Model X) ಕಾರುಗಳಲ್ಲಿ ಸಾಫ್ಟ್‌ವೇರ್‌ ಸಮಸ್ಯೆಯಿಂದ ಬ್ಯಾಟರಿ ನಿರ್ವಹಣೆಯಲ್ಲಿ ಸಮಸ್ಯೆ ಬರುತ್ತಿರುವ ಹಿನ್ನೆಲೆಯಲ್ಲಿ ಟೆಸ್ಲಾ ಈ ಕ್ರಮಕ್ಕೆ ಮುಂದಾಗಿದೆ. ಹಿಂದಕ್ಕೆ ಪಡೆದ ಕಾರುಗಳ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಲಾಗುವುದು ಎಂದು ಟೆಸ್ಲಾ ಹೇಳಿದೆ.

    ಏಪ್ರಿಲ್‌ನಲ್ಲಿ ಉತ್ಪಾದನೆಯಾದ ಚೀನಾ ಮೇಡ್‌ ಮಾಡೆಲ್‌ 3 ಕಾರಿನ ಸೆಮಿಕಂಡಕ್ಟರ್‌ನಲ್ಲಿ ದೋಷ ಇರುವ ಹಿನ್ನೆಲೆಯಲ್ಲಿ ಟೆಸ್ಲಾ ಕಂಪನಿ 1,27,785 ಕಾರನ್ನು ಹಿಂದಕ್ಕೆ ಪಡೆದಿತ್ತು.

    China, Tesla, Automobile, Elon musk

    Live Tv
    [brid partner=56869869 player=32851 video=960834 autoplay=true]