Tag: ಅಟಾರ್ನಿ ಜನರಲ್

  • ಹಿರಿಯ ವಕೀಲ ಮುಕುಲ್ ರೋಹಟಗಿ ಭೇಟಿಯಾದ ಡಿಸಿಎಂ

    ಹಿರಿಯ ವಕೀಲ ಮುಕುಲ್ ರೋಹಟಗಿ ಭೇಟಿಯಾದ ಡಿಸಿಎಂ

    ನವದೆಹಲಿ: ಸುಪ್ರೀಂಕೋರ್ಟ್ (Supreme Court) ಹಿರಿಯ ವಕೀಲ, ಮಾಜಿ ಅಟಾರ್ನಿ ಜನರಲ್ (Attorney General) ಮುಕುಲ್ ರೋಹಟಿಗೆ (Mukul Rohatgi) ಅವರನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನವದೆಹಲಿಯಲ್ಲಿ (New Delhi) ಭೇಟಿಯಾಗಿದ್ದು, ಕೆಲಹೊತ್ತು ಚರ್ಚಿಸಿದ್ದಾರೆ.

    ಮುಕುಲ್ ರೋಹಟಗಿ ಈ ಹಿಂದೆ ಇಡಿ, ಸಿಬಿಐ ಕೇಸ್‌ಗಳಿಗೆ ಸಂಬಂಧಪಟ್ಟಂತೆ ಡಿಕೆ ಶಿವಕುಮಾರ್ ಪರವಾಗಿ ವಾದಿಸಿದ್ದಾರೆ. ಭೇಟಿಯ ಸಂದರ್ಭದಲ್ಲಿ ಅವರ ವಿರುದ್ಧ ನಡೆಯುತ್ತಿರುವ ಪ್ರಕರಣಗಳ ಪ್ರಸ್ತುತ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಆಟೋದಲ್ಲಿ ಬಂದಿದ್ದಕ್ಕೆ ಬಿರಿಯಾನಿ ವಾಪಸ್ – ಬೆಂಜ್ ಕಾರ್‌ಗೆ ಶಿಫ್ಟ್ ಮಾಡಿ ಸಿಎಂ ನಿವಾಸಕ್ಕೆ ಕಳುಹಿಸಿದ ಜಮೀರ್

    ಬುಧವಾರ ರಾತ್ರಿ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು, ವರಿಷ್ಠರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭ ಪರಿಷತ್ ಸದಸ್ಯರ ಆಯ್ಕೆ, ನಿಗಮ ಮಂಡಳಿ ನೇಮಕ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಮೇಕೆದಾಟು ಸಂಬಂಧ ಟ್ರಿಬ್ಯುನಲ್ ರಚಿಸುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಭಾರತ್ ಜೋಡೊ ಯಾತ್ರೆ 2.O ಆರಂಭಿಸಿದ್ರಾ ರಾಹುಲ್ ಗಾಂಧಿ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎರಡನೇ ಬಾರಿಗೆ ಅಟಾರ್ನಿ ಜನರಲ್ ಆಗಿ ಮುಕುಲ್ ರೊಹಟಗಿ ಆಯ್ಕೆ

    ಎರಡನೇ ಬಾರಿಗೆ ಅಟಾರ್ನಿ ಜನರಲ್ ಆಗಿ ಮುಕುಲ್ ರೊಹಟಗಿ ಆಯ್ಕೆ

    ನವದೆಹಲಿ: ಸೆಪ್ಟೆಂಬರ್ 30ಕ್ಕೆ ಹಾಲಿ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ (KK Venugopal ) ಅವಧಿ ಅಂತ್ಯ ಹಿನ್ನೆಲೆ ಹಿರಿಯ ವಕೀಲ ಮುಕುಲ್ ರೋಹಟಗಿ(Mukul Rohatgi) ಅವರನ್ನು ಭಾರತದ ಹದಿನಾಲ್ಕನೇ ಅಟಾರ್ನಿ ಜನರಲ್ ಆಗಿ ನೇಮಕಗೊಳಿಸಲು ನಿರ್ಧರಿಸಲಾಗಿದೆ.

    ಮುಕುಲ್ ರೊಹಟಗಿ ಎರಡನೇ ಬಾರಿಗೆ ಅಟಾರ್ನಿ ಜನರಲ್(Attorney General) ಹುದ್ದೆ ಅಲಂಕರಿಸುತ್ತಿದ್ದು, ಈ ಹಿಂದೆ ಜೂನ್ 2014 ರಿಂದ ಜೂನ್ 2017ರ ಅವಧಿಯಲ್ಲಿ ಮೊದಲ ಬಾರಿಗೆ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ಮದ್ಯಪಾನ ತಡೆ ನೀತಿ ಜಾರಿಗೆ ತರಲು ಮನವಿ – ಈ ವಿಷಯವನ್ನು ಮುಟ್ಟುವುದಿಲ್ಲ ಎಂದ ಸುಪ್ರೀಂಕೋರ್ಟ್

    ಕಳೆದ ಜೂನ್ ಅಂತ್ಯಕ್ಕೆ ಕೆ.ಕೆ ವೇಣುಗೋಪಾಲ್ ಅಧಿಕಾರಾವಧಿ ಅಂತ್ಯವಾಗಿತ್ತು. ಸರ್ಕಾರ ಮೂರು ತಿಂಗಳ ಅವಧಿಗೆ ಅವರ ಸೇವೆಯನ್ನು ವಿಸ್ತರಿಸಲಾಗಿತ್ತು. ಈ ವಿಸ್ತರಣೆಯು ಸೆಪ್ಟೆಂಬರ್ 30 ರಂದು ಅಂತ್ಯಗೊಳ್ಳಲಿದೆ. ಈ ಹಿಂದೆ ಕೆ.ಕೆ ವೇಣುಗೋಪಾಲ್ ಅವರನ್ನು ಮೂರು ವರ್ಷಗಳ ಅವಧಿಗೆ ಅಟಾರ್ನಿ ಜನರಲ್ ಆಗಿ ನೇಮಿಸಲಾಯಿತ್ತು. ನಂತರ ಅವರ ಎರಡು ಬಾರಿ ಅವಧಿಯನ್ನು ವಿಸ್ತರಿಸಲಾಗಿತ್ತು. ಇದನ್ನೂ ಓದಿ: ವಾಹನದಲ್ಲಿ ಕುಳಿತಿದ್ದ ಪೊಲೀಸರ ಮುಂದೆಯೇ ಕಳ್ಳತನ- ಖದೀಮನಿಗೆ ಜನ ಗೂಸಾ ಕೊಟ್ರೂ ಡೋಂಟ್‍ಕೇರ್!

    Live Tv
    [brid partner=56869869 player=32851 video=960834 autoplay=true]

  • ಪದ್ಮವಿಭೂಷಣ ಪ್ರಶಸ್ತಿ ವಿಜೇತ, ಮಾಜಿ ಅಟಾರ್ನಿ ಜನರಲ್ ಸೊರಾಬ್ಜಿ ಕೊರೊನಾಗೆ ಬಲಿ

    ಪದ್ಮವಿಭೂಷಣ ಪ್ರಶಸ್ತಿ ವಿಜೇತ, ಮಾಜಿ ಅಟಾರ್ನಿ ಜನರಲ್ ಸೊರಾಬ್ಜಿ ಕೊರೊನಾಗೆ ಬಲಿ

    ನವದೆಹಲಿ: ಪದ್ಮವಿಭೂಷಣ ಪ್ರಶಸ್ತಿ ವಿಜೇತ, ಹಿರಿಯ ವಕೀಲ, ಮಾಜಿ ಅಟಾರ್ನಿ ಜನರಲ್ ಸೋಲಿ ಜೆಹಾಂಗಿರ್ ಸೊರಬ್ಜಿ (91) ಕೊರೊನಾಗೆ ಬಲಿಯಾಗಿದ್ದಾರೆ.

    ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೊರಬ್ಜಿ ಅವರು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

    1930ರಲ್ಲಿ ಮುಂಬೈನಲ್ಲಿ ಜನಿಸಿರುವ ಸೊರಬ್ಜಿ 1953ರಲ್ಲಿ ಬಾಂಬೆ ಹೈಕೋರ್ಟಿನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ್ದರು. ನಂತರ 1971ರಲ್ಲಿ ಸುಪ್ರೀಂ ಕೋರ್ಟ್ ನ ಹಿರಿಯ ಕೌನ್ಸಿಲ್ ಆಗಿ ಪದೋನ್ನತಿ ಪಡೆದಿದ್ದರು. 1989-90ರಲ್ಲಿ ಮೊದಲ ಬಾರಿ ಅಟಾರ್ನಿ ಜನರಲ್ ಆಗಿ ನೇಮಕಗೊಂಡರು. 1998-2000ರ ವರೆಗೆ ಅವರು ಭಾರತದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.

    2002ರ ಮಾರ್ಚ್ ತಿಂಗಳಲ್ಲಿ ಸೊರಬ್ಜಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸದ್ಯ ಸೊರಬ್ಜಿ ನಿಧನಕ್ಕೆ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.