Tag: ಅಜ್ಮೀರ್ ದರ್ಗಾ

  • ಶಿವ ದೇವಾಲಯದ ಮೇಲೆ ಅಜ್ಮೀರ್‌ ದರ್ಗಾ ನಿರ್ಮಾಣ – ಕೋರ್ಟ್‌ ನೋಟಿಸ್‌

    ಶಿವ ದೇವಾಲಯದ ಮೇಲೆ ಅಜ್ಮೀರ್‌ ದರ್ಗಾ ನಿರ್ಮಾಣ – ಕೋರ್ಟ್‌ ನೋಟಿಸ್‌

    – ದೇವಸ್ಥಾನದ ಕುರುಹು ಇರೋ ಜಾಗದಲ್ಲಿ ಮತ್ತೆ ಪೂಜೆಗೆ ಅವಕಾಶ ಕೋರಿ ಅರ್ಜಿ

    ಜೈಪುರ: ಶಿವ ದೇವಾಲಯದ (Shiva Temple) ಮೇಲೆ ಅಜ್ಮೀರ್‌ ದರ್ಗಾ ನಿರ್ಮಿಸಲಾಗಿದೆ ಎಂದು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

    ಅಜ್ಮೀರ್‌ನಲ್ಲಿರುವ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ಅವರ ದರ್ಗಾದಲ್ಲಿ ಶಿವ ದೇವಾಲಯವಿದೆ ಎಂದು ಅರ್ಜಿ ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಅಜ್ಮೀರ್‌ನ ನ್ಯಾಯಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ. ಸೆಪ್ಟೆಂಬರ್‌ನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ, ಮತ್ತೆ ಸ್ಥಳದಲ್ಲಿ ಪೂಜೆಗೆ ಅವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಲಾಗಿದೆ. ಇದನ್ನೂ ಓದಿ: ಸಂಸತ್‌ನಲ್ಲಿ ಅಮ್ಮ-ಅಣ್ಣ-ತಂಗಿ; ಇಂದು ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ ಸ್ವೀಕಾರ

    ಸಿವಿಲ್ ನ್ಯಾಯಾಧೀಶ ಮನಮೋಹನ್ ಚಾಂಡೆಲ್ ಅವರು ಅಜ್ಮೀರ್ ದರ್ಗಾ ಸಮಿತಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ನವದೆಹಲಿಯಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಕಚೇರಿಗೆ ಪ್ರತಿಕ್ರಿಯೆ ಕೋರಿ ನೋಟಿಸ್‌ಗೆ ಆದೇಶಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಯೋಗೇಶ್ ಸಿರೋಜಾ ತಿಳಿಸಿದ್ದಾರೆ.

    ವಾರಣಾಸಿ, ಮಥುರಾ ಮತ್ತು ಧಾರ್‌ನಲ್ಲಿರುವ ಭೋಜಶಾಲಾ ಸೇರಿದಂತೆ ದೇಶದಾದ್ಯಂತದ ಪ್ರಮುಖ ದೇಗುಲಗಳಿಗೆ ಇದೇ ರೀತಿಯ ಆರೋಪ ಮಾಡಲಾಗಿದೆ. ಇದನ್ನೂ ಓದಿ: ಮೀಸಲಾತಿ ಲಾಭಕ್ಕಾಗಿ ಮರು ಮತಾಂತರ ಆಗೋದು ಸಂವಿಧಾನಕ್ಕೆ ಮಾಡುವ ವಂಚನೆ: ಸುಪ್ರೀಂ

    ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಮಸೀದಿ ಸಮೀಕ್ಷೆಗೆ ವಿರೋಧಿಸಿ ಈಚೆಗೆ ಘರ್ಷಣೆ ನಡೆಯಿತು. ಸ್ಥಳೀಯ ನ್ಯಾಯಾಲಯ ಮಸೀದಿ ಸಮೀಕ್ಷೆಗೆ ಆದೇಶಿಸಿತ್ತು. ಸರ್ವೇ ತಂಡ ಆಗಮಿಸುತ್ತಿದ್ದಂತೆ ಜನರು ವಿರೋಧಿಸಿದರು. ಈ ವೇಳೆ ಪೊಲೀಸರು ಮತ್ತು ಗುಂಪಿನ ನಡುವೆ ಘರ್ಷಣೆ ನಡೆಯಿತು. ಘರ್ಷಣೆಗೆ ನಾಲ್ವರು ಬಲಿಯಾಗಿದ್ದಾರೆ. ಹಳೆಯ ದೇವಸ್ಥಾನವನ್ನು ಧ್ವಂಸಗೊಳಿಸಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದರು.

    ಅಜ್ಮೀರ್ ಷರೀಫ್ ಅವರ ಪ್ರಕರಣದಲ್ಲಿ ಅರ್ಜಿದಾರರಾಗಿರುವ ಬಲಪಂಥೀಯ ಗುಂಪು ಹಿಂದೂ ಸೇನೆಯ ಮುಖ್ಯಸ್ಥ ವಿಷ್ಣು ಗುಪ್ತಾ, ಅಜ್ಮೀರ್ ದರ್ಗಾವನ್ನು (Ajmer Dargah) ಸಂಕಷ್ಟ ಮೋಚನ್ ಮಹಾದೇವ ದೇವಾಲಯ ಎಂದು ಘೋಷಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು ಎಂದಿದ್ದರು.

  • ಅಜ್ಮೀರ್ ದರ್ಗಾಗೆ ರೆಡ್ಡಿ ಭೇಟಿ – ಕಾಂಗ್ರೆಸ್ ಪಾಳಯಕ್ಕೆ ಮರ್ಮಾಘಾತ

    ಅಜ್ಮೀರ್ ದರ್ಗಾಗೆ ರೆಡ್ಡಿ ಭೇಟಿ – ಕಾಂಗ್ರೆಸ್ ಪಾಳಯಕ್ಕೆ ಮರ್ಮಾಘಾತ

    ಕೊಪ್ಪಳ: ಚುನಾವಣೆ ಹೊಸ್ತಿಲಲ್ಲೇ ಕೆಆರ್‌ಪಿಪಿ (KRPP) ಸಂಸ್ಥಾಪಕ ಜನಾರ್ದನ ರೆಡ್ಡಿ (Janardhana Reddy) ದರ್ಗಾಗೆ ಭೇಟಿ ನೀಡಿದ್ದು, ಕಾಂಗ್ರೆಸ್ (Congress) ಪಾಳಯದಲ್ಲಿ ಆತಂಕ ಸೃಷ್ಟಿಸಿದ್ದಾರೆ. ಮುಸ್ಲಿಂ (Muslim) ಮತ ಭೇಟೆಗೆ ರೆಡ್ಡಿ ಮತ್ತೊಂದು ದಾಳ ಉರುಳಿಸಿದ್ರಾ ಎಂಬ ಪ್ರಶ್ನೆ ಮೂಡಿದ್ದು, ರೆಡ್ಡಿ ನಡೆಯಿಂದ ಕಾಂಗ್ರೆಸ್ ಪಾಳಯದಲ್ಲೂ ಸಂಚಲನ ಮೂಡಿಸಿದೆ.

    ಜನಾರ್ದನ ರೆಡ್ಡಿ ಪತ್ನಿ ಸಮೇತ ರಾಜಸ್ಥಾನದ (Rajasthan) ಅಜ್ಮೀರ್ ದರ್ಗಾಗೆ (Ajmer Dargah) ಭೇಟಿ ನೀಡಿದ್ದಾರೆ. ಅಜಮೀರ್‌ನಲ್ಲಿನ ಖಾಜಾ ಗರೀಬ್ ನವಾಜ್ ದರ್ಗಾಗೆ ತೆರಳಿ ಚಾದರ ಮತ್ತು ಹೂ ಸಮರ್ಪಣೆ ಮಾಡಿ, ವಿವಿಧ ಧಾರ್ಮಿಕ ವಿಧಿ-ವಿಧಾನ ಪೂರೈಸಿದ್ದಾರೆ. ವಿಶೇಷ ಪೂಜೆ ಸಲ್ಲಿಸಿರುವ ಜನಾರ್ದನ ರೆಡ್ಡಿ ಹಾಗೂ ಪತ್ನಿ ಲಕ್ಷ್ಮೀ ಅರುಣಾ, ನಾಡಿನ ಜನರ ನೆಮ್ಮದಿಯ ಜೀವನಕ್ಕಾಗಿ ಪ್ರಾರ್ಥಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲಿ ತ್ರಿ ಸದಸ್ಯ ಪೀಠದಲ್ಲಿ ಹಿಜಬ್ ಪ್ರಕರಣದ ವಿಚಾರಣೆ ನಡೆಸಲಾಗುವುದು: ಸಿಜೆಐ

    ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನಿರ್ಧರಿಸಿರುವ ಜನಾರ್ದನ ರೆಡ್ಡಿ, ಪತ್ನಿ ಲಕ್ಷ್ಮೀ ಅರುಣಾರನ್ನು ಬಳ್ಳಾರಿ ಅಥವಾ ಸಿಂಧನೂರು ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಹೊನ್ನಾ ನಾಯಕ ಮಾತಿಗೆ ತೀವ್ರ ಅಸಮಾಧಾನ- ಸಭೆ ಮಧ್ಯದಲ್ಲೇ ಹೊರಟು ಹೋದ ಶಾಸಕ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಜ್ಮೀರ್ ದರ್ಗಾ ದೇವಾಲಯವಾಗಿತ್ತು – ಸಮೀಕ್ಷೆಗೆ ಹಿಂದೂ ಸಂಘಟನೆ ಆಗ್ರಹ

    ಅಜ್ಮೀರ್ ದರ್ಗಾ ದೇವಾಲಯವಾಗಿತ್ತು – ಸಮೀಕ್ಷೆಗೆ ಹಿಂದೂ ಸಂಘಟನೆ ಆಗ್ರಹ

    ಜೈಪುರ: ರಾಜಸ್ಥಾನದ ಅಜ್ಮೀರ್‌ನಲ್ಲಿರುವ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ಅವರ ಸಮಾಧಿ ಒಂದು ಕಾಲದಲ್ಲಿ ದೇವಾಲಯವಾಗಿತ್ತು ಎಂದು ಹಿಂದೂ ಸಂಘಟನೆ ವಾದಿಸುತ್ತಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ)ಗೆ ಸಮೀಕ್ಷೆ ನಡೆಸುವಂತೆ ಒತ್ತಾಯಿಸುತ್ತಿದೆ.

    ಕಾಶಿಯ ಜ್ಞಾನವಾಪಿ ಮಸೀದಿ, ಮಥುರಾದ ಶಾಹೀ ಈದ್ಗಾ ಮಸೀದಿಯ ಬಳಿಕ ಇದೀಗ ರಾಜಸ್ಥಾನದ ಅಜ್ಮೀರ್ ದರ್ಗಾ ಬಗ್ಗೆ ವಿವಾದ ಎದ್ದಿದೆ. ಹಿಂದೂ ಸಂಘಟನೆ ಮಹಾರಾಣಾ ಪ್ರತಾಪ್ ಸೇನೆಯ ರಾಜವರ್ಧನ್ ಸಿಂಗ್ ಪರ್ಮಾರ್ ಅವರು ದರ್ಗಾದ ಗೋಡೆಗಳು ಹಾಗೂ ಕಿಟಕಿಗಳ ಮೇಲೆ ಹಿಂದೂ ಚಿಹ್ನೆಗಳು ಇವೆ ಎಂದು ವಾದಿಸಿದ್ದಾರೆ. ಇದನ್ನೂ ಓದಿ: ದಾಳಿ ವೇಳೆ ಸಿಬಿಐ ನನ್ನ ವೈಯಕ್ತಿಕ ದಾಖಲೆಗಳನ್ನು ವಶಪಡಿಸಿಕೊಂಡಿದೆ – ಕಾರ್ತಿ ಚಿದಂಬರಂ ಆರೋಪ

    ಈ ಬಗ್ಗೆ ಪ್ರತಿಕ್ರಿಸಿದ ಅಂಜುಮನ್ ಸೈಯದ್ ಝಡ್ಗಾನ್‌ನ ಅಧ್ಯಕ್ಷ ಮೊಯಿನ್ ಚಿಸ್ತಿ, ದರ್ಗಾದಲ್ಲಿ ಯಾವುದೇ ಹಿಂದೂ ಅಥವಾ ಸ್ವಸ್ತಿಕ್ ಚಿನ್ಹೆಗಳು ಇಲ್ಲ ಎಂಬುದನ್ನು ನಾನು ಜವಾಬ್ದಾರಿಯುತವಾಗಿ ಹೇಳುತ್ತಿದ್ದೇನೆ. ಈ ದರ್ಗಾ ಸುಮಾರು 850 ವರ್ಷಗಳಿಂದ ಇದೆ. ಪ್ರತಿ ವರ್ಷ ಲಕ್ಷಾಂತರ ಹಿಂದೂ ಹಾಗೂ ಮುಸ್ಲಿಮರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿಯವರೆಗೆ ಅಂತಹ ಯಾವುದೇ ಪ್ರಶ್ನೆ ಉದ್ಭವಿಸಿರಲಿಲ್ಲ. ಹಿಂದೂ ಸಂಘಟನೆಯವರು ನಿರಾಧಾರ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮ್ರಿನ್ ಭಟ್‌ ಹತ್ಯೆಗೈದಿದ್ದ ಇಬ್ಬರು ಸೇರಿ ನಾಲ್ವರು ಲಷ್ಕರ್ ಉಗ್ರರ ಹತ್ಯೆ

    ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಸಮಾಧಿ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವುದು ಎಂದರೆ, ಇಲ್ಲಿ ಅವರ ಧರ್ಮವನ್ನು ಲೆಕ್ಕಿಸದೇ ಪ್ರಾರ್ಥನೆ ಸಲ್ಲಿಸುವ ಕೋಟ್ಯಂತರ ಜನರ ಭಾವನೆಯನ್ನು ನೋಯಿಸುತ್ತಿರುವುದು ಎಂದರ್ಥ. ಇಂತಹ ವಿವಾದಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಇತ್ತ ಅಜ್ಮೀರ್ ದರ್ಗಾ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಕಾರ್ಯದರ್ಶಿ ವಾಹಿದ್ ಹುಸೇನ್ ಚಿಸ್ತಿ, ಇದು ಕೋಮು ಸೌಹಾರ್ದತೆಯನ್ನು ಕದಡುವ ಪ್ರಯತ್ನವಾಗಿದೆ ಎಂದು ಹೇಳಿದರು.