Tag: ಅಜ್ಜಯ್ಯ

  • ಯೋಗರಾಜ್ ಭಟ್ಟರು ಮೀಸೆ ತೆಗೆದಿದ್ದಕ್ಕೆ ಅಜ್ಜಯ್ಯ ಕಾರಣ

    ಯೋಗರಾಜ್ ಭಟ್ಟರು ಮೀಸೆ ತೆಗೆದಿದ್ದಕ್ಕೆ ಅಜ್ಜಯ್ಯ ಕಾರಣ

    ನಿರ್ದೇಶಕ ಯೋಗರಾಜ್ ಭಟ್ (Yogaraj Bhatt) ಮೀಸೆ ತೆಗೆದಿದ್ದಾರೆ. ಮೀಸೆ (Meese) ಹೊತ್ತ ಗಂಡಸಿಗೆ ಡಿಮಾಂಡ್ ಅಪ್ಪೋ ಡಿಮಾಂಡೋ ಅಂತ ಹಾಡು ಫೇಮಸ್ ಆಗಿರುವಾಗಲೂ, ಭಟ್ಟರು ಏಕೆ ಮೀಸೆ ತೆಗೆದರು ಎನ್ನುವ ಅನುಮಾನ ಎಲ್ಲರಲ್ಲೂ ಮೂಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಮೀಸೆ ತೆಗೆದಿದ್ದಕ್ಕೆ ಅವರು ಕಾರಣವನ್ನೂ ಕೊಟ್ಟಿದ್ದಾರೆ.

    ಯೋಗರಾಜ್ ಭಟ್ ಗರಡಿ ಸಿನಿಮಾ ನಂತರ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಕಾಂಬಿನೇಷನ್ ನಲ್ಲಿ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಭಟ್ಟರು ಮಹತ್ವದ ಪಾತ್ರವೊಂದನ್ನು ಮಾಡುತ್ತಿದ್ದಾರೆ. ಅಜ್ಜಯ್ಯ (Ajjaiah) ಎಂಬ ಹೆಸರಿನ ಪಾತ್ರಕ್ಕಾಗಿ ಅವರು ಗಡ್ಡ ತಗೆದಿದ್ದಾರಂತೆ. ಅವರೇ ನಿರ್ದೇಶನ ಮಾಡುತ್ತಾ, ಅವರೇ ಆಕ್ಟ್ ಮಾಡುತ್ತಿರುವ ಸಿನಿಮಾ ಇದಾಗಿದೆ. ಇದನ್ನೂ ಓದಿ:‘ದೇವರ ಆಟ ಬಲ್ಲವರಾರು’ ಎನ್ನುತ್ತಾ 3 ವರ್ಷಗಳ ನಂತರ ಬಣ್ಣ ಹಚ್ಚಿದ ಸಿಂಧೂ ಲೋಕನಾಥ

    ಈ ಸಿನಿಮಾ ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ತಯಾರಾಗುತ್ತಿದ್ದು, ವಿಚಿತ್ರವಾಗಿರುವಂಥ ಶೀರ್ಷಿಕೆ ಇಡಲಾಗಿದೆ. ಈವರೆಗೂ ಟೈಟಲ್ ವಿಷಯದಲ್ಲಿ ಉಪೇಂದ್ರ ಮಾತ್ರ ತಲೆಕೆಡಿಸುತ್ತಿದ್ದರು. ಇದೀಗ ಆ ಸಾಲಿಗೆ ಯೋಗರಾಜ್ ಭಟ್ಟರು ಕೂಡ ಸೇರ್ಪಡೆಗೊಂಡಿದ್ದಾರೆ. ಟೈಟಲ್ ನೋಡಿದವರು, ಏನ್ ಗುರು ಇದರ ಅರ್ಥ ಎಂದು ಕೇಳುವಂತಾಗಿದೆ.

     

    ಈಗಾಗಲೇ ಬೆಂಗಳೂರಿನಲ್ಲಿ ಈ ಸಿನಿಮಾದ ಚಿತ್ರೀಕರಣ ಶುರುವಾಗಿದ್ದು, ಪ್ರಭುದೇವ್ ಮತ್ತು ಶಿವರಾಜ್ ಕುಮಾರ್ ಪಾಲ್ಗೊಂಡಿದ್ದಾರೆ. ಶೂಟಿಂಗ್ ನಡುವೆಯೇ ಚಿತ್ರಕ್ಕೆ ‘K ಕರಟಕ D ದಮನಕ’ (Karataka Damanaka) ಎಂದು ವಿಭಿನ್ನ ಶೀರ್ಷಿಕೆ ಇಟ್ಟಿದ್ದಾರೆ. ಹಲವು ದಿನಗಳಿಂದ ಈ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ರಾಕ್ ಲೈನ್ ವೆಂಕಟೇಶ್ ಕೂಡ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಅವರು ಈ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಪಾತ್ರ ನಿರ್ವಹಿಸುತ್ತಿದ್ದಾರೆ.

  • ಅಜ್ಜಯ್ಯನ ದರ್ಶನ ಪಡೆದ ಡಿಕೆಶಿ

    ಅಜ್ಜಯ್ಯನ ದರ್ಶನ ಪಡೆದ ಡಿಕೆಶಿ

    ತುಮಕೂರು: ಅಕ್ರಮ ಹಣ ವರ್ಗಾವಣೆಯ ಆರೋಪದ ಮೇಲೆ ಇಡಿ ಅಧಿಕಾರಿಗಳ ಕೈಗೆ ಸಿಲುಕಿ ತಿಹಾರ್ ಜೈಲು ಸೇರಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಜಾಮೀನಿನ ಮೇಲೆ ಹೊರಬಂದು ಶನಿವಾರ ಬೆಂಗಳೂರಿಗೆ ಆಗಮಿಸಿದ್ದರು. ಇದೀಗ ಕನಕಪುರ ಬಂಡೆ ಡಿ.ಕೆ.ಶಿವಕುಮಾರ್ ಇಂದು ಟೆಂಪಲ್ ರನ್ ಮಾಡುತ್ತಿದ್ದಾರೆ. ಜೊತೆಗೆ ತಮ್ಮ ಇಷ್ಟ ದೈವ ಅಜ್ಜಯ್ಯನ ದರ್ಶನ ಮಾಡಿದ್ದಾರೆ.

    ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ಡಿಕೆಶಿ ಅಲ್ಲಿಂದ  ನೇರವಾಗಿ ಹೊರಟು ತುಮಕೂರಿನ ತಿಪಟೂರಿನಲ್ಲಿರುವ ನೊಣವಿನ ಕೆರೆಗೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದರು. ಗುರುಭವನದಲ್ಲಿ ಶಿವಯೋಗೀಶ್ವರ ಸ್ವಾಮೀಜಿಯನ್ನು ಭೇಟಿ ಮಾಡಿದ್ದು, ಅವರ ಜೊತೆ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಅಲ್ಲಿಂದ ಅಜ್ಜಯ್ಯನ ದರ್ಶನ ಮಾಡುಲು ತೆರಳಿದ್ದರು. ಈ ವೇಳೆ ಅಭಿಮಾನಿಗಳು ಡಿಕೆಶಿಯನ್ನು ಸುತ್ತುವರಿದಿದ್ದರು. ಇದನ್ನೂ ಓದಿ: ಎಲ್ಲರ ಕಮೆಂಟ್‍ಗಳಿಗೆ ಮುಂದೆ ಉತ್ತರಿಸುತ್ತೇನೆ: ಡಿಕೆಶಿ

    ಸುಮಾರು 20 ನಿಮಿಷಗಳ ಕಾಲ ಅಜ್ಜಯ್ಯನ ಪೀಠಕ್ಕೆ ವಿಶೇಷವಾಗಿ ಪೂಜೆ ಮಾಡಿಸಿದ್ದಾರೆ. ಡಿಕೆಶಿ ಮತ್ತು ಸಹೋದರ ಸುರೇಶ್ ಅವರಿಗೆ ಮಾತ್ರ ಗರ್ಭ ಗುಡಿಗೆ ಪ್ರವೇಶ ನೀಡಲಾಗಿತ್ತು. ಶ್ರೀಮಠದ ಕರಿಬಸವ ದೇಶಿಕೇಂದ್ರ ಶಿವಯೋಗೇಶ್ವರ್ ಸ್ವಾಮೀಜಿ ನೇತೃತ್ವದಲ್ಲಿ ಅಜ್ಜಯ್ಯನ ಪೀಠಕ್ಕೆ ವಿಶೇಷ ಪೂಜೆ ನೆರವೇರಿಸಿದ್ದಾರೆ.

  • ಡಿಕೆ ಶಿವಕುಮಾರ್ ವಿದೇಶಕ್ಕೆ ತೆರಳದಂತೆ ನಿರ್ಬಂಧ!

    ಡಿಕೆ ಶಿವಕುಮಾರ್ ವಿದೇಶಕ್ಕೆ ತೆರಳದಂತೆ ನಿರ್ಬಂಧ!

    ಬೆಂಗಳೂರು: ಕಳೆದ ಮೂರು ದಿನಗಳಿಂದ ಇಂಧನ ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ನಡೆಯುತ್ತಿದ್ದ ಐಟಿ ದಾಳಿ ಇದೀಗ ಅಂತ್ಯವಾಗಿದ್ದು, ಯಾವುದೇ ಕಾರಣಕ್ಕೂ ವಿದೇಶಕ್ಕೆ ತೆರಳದಂತೆ ಐಟಿ ಸೂಚನೆ ನೀಡಿದೆ.

    ಸಚಿವ ಡಿಕೆಶಿ ಮೇಲೆ ನಿಗಾ ಇಡುವಂತೆ ಹಾಗೂ ಎಲ್ಲಾ ವಿಮಾನ ನಿಲ್ದಾಣಗಳಿಗೂ ಆದಾಯ ತೆರಿಗೆ ಇಲಾಖೆ ಖಡಕ್ ಸೂಚನೆ ನೀಡಿದೆ.

    ದೆಹಲಿಯಲ್ಲೂ ಕೂಡ ಐಟಿ ದಾಳಿ ಅಂತ್ಯವಾಗಿದ್ದು, ಆಂಜನೇಯ ಮನೆಯಲ್ಲಿ ಕೂಡ ಐಟಿ ಅಧಿಕಾರಿಗಳು ದಾಳಿ ಅಂತ್ಯಗೊಳಿಸಿದ್ದಾರೆ. ಕಳೆದ ಮೂರು ದಿನಗಳಿಂದ ದೆಹಲಿಯ ಮೂರು ಮನೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕಡತಗಳ ತಪಾಸಣೆ ಮಾಡಿದ್ದಾರೆ. ನಿನ್ನೆಯೇ ಎರಡು ಮನೆಯ ಮೇಲಿನ ದಾಳಿ ಅಂತ್ಯಗೊಳಿಸಿದ್ದ ಅಧಿಕಾರಿಗಳು ಇಂದು ಆಂಜನೇಯ ಮನೆ ಮೇಲೆ ದಾಳಿಯಲ್ಲಿ ಅಂತ್ಯಗೊಳಿಸಿದ್ದಾರೆ.

    ದೇವಸ್ಥಾನಕ್ಕೆ ಭೇಟಿ: ಐಟಿ ದಾಳಿ ಬಳಿಕ ಇಂಧನ ಸಚಿವ ಡಿಕೆ ಶಿವಕುಮಾರ್ ತುಮಕೂರು ಜಿಲ್ಲೆ, ನೊಣವಿಕೆರೆಯಕಲ್ಲಿರುವ ಕೆರೆಯ ಕಾಡು ಸಿದ್ದೇಶ್ವರ ಅವರ ವಿಜಯನಗರದಲ್ಲಿರೋ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ್ದಾರೆ.

    ಆತ್ಮದೊಂದಿಗಿನ ಸಂವಾದವನ್ನು ಹಾಳೆಯಲ್ಲಿ ಬರೆದುಕೊಡುವ ಕಾಡು ಸಿದ್ದೇಶ್ವರ ಅಜ್ಜನ ಅಣತಿಯಂತೆ ನಡೆದುಕೊಳ್ಳುವ ಡಿಕೆಶಿ, ಅಜ್ಜಯ್ಯ ಹಾಳೆಯಲ್ಲಿ ಬರೆದಿದ್ದು ಫಲಿಸುತ್ತದೆ ಎಂಬುದು ಅವರ ನಂಬಿಕೆ. ಹೀಗಾಗಿ ಅಜ್ಜಯ್ಯನ ಭಕ್ತರಾಗಿರೋ ಡಿಕೆಶಿ ಸದ್ಯ ಅವರನ್ನು ಭೇಟಿ ಮಾಡಿ ಪಾದ ಪೂಜೆ ಮಾಡಿದ್ದಾರೆ. ಈ ವೇಳೆ ನಿನಗೆ ಯಾವುದೇ ಸಂಕಷ್ಟ ಎದುರಾಗುವುದಿಲ್ಲ. ನೀನು ನೆಮ್ಮದಿಯಿಂದಿರು ಅಂತ ಅಜ್ಜಯ್ಯ ಆಶೀರ್ವದಿಸಿದ್ದಾರೆ. ಈ ಹಿಂದೆಯೂ ಅಜ್ಜಯ್ಯನನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಈ ವೇಳೆ ಸಚಿವರಿಗೆ ನರೇಂದ್ರಬಾಬು ಸಾಥ್ ನೀಡಿದ್ದಾರೆ.

    ಬಳಿಕ ಅಲ್ಲಿಂದ ನೇರವಾಗಿ ರಾಜಭವನಕ್ಕೆ ತೆರಳಿರುವ ಡಿಕೆಶಿ, ಇದೀಗ ಗುಜರಾತ್ ಶಾಕೆ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಈ ಮಧ್ಯೆ ಕುಟುಂಬಸ್ಥರು ಕನಕಪುರ ತಾಲೂಕಿನಲ್ಲಿರುವ ಶಕ್ತಿದೇವತೆ ಕಬ್ಬಾಳಮ್ಮನಿಗೆ ಪೂಜೆ ಸಲ್ಲಿಸಿದ್ದಾರೆ.