Tag: ಅಜೀಂ

  • ‘ಬಿಗ್ ಬಾಸ್’ ಮನೆಯಲ್ಲಿ ಚಪ್ಪಲಿ ಎಸೆತ: ಹಿಂಸಾಚಾರಕ್ಕೆ ತಿರುಗಿದ ಮಾತು

    ‘ಬಿಗ್ ಬಾಸ್’ ಮನೆಯಲ್ಲಿ ಚಪ್ಪಲಿ ಎಸೆತ: ಹಿಂಸಾಚಾರಕ್ಕೆ ತಿರುಗಿದ ಮಾತು

    ಸಾಮಾನ್ಯವಾಗಿ ಬಿಗ್ ಬಾಸ್ (Bigg Boss) ಮನೆಯಲ್ಲಿ ಪ್ರೇಮ ಸಲ್ಲಾಪಗಳೇ ಕೇಳಿ ಬರುವುದು ಕಾಮನ್. ಸಣ್ಣಪುಟ್ಟ ಮನಸ್ತಾಪ, ಕಿರಿಕಿರಿ ನಡುವೆಯೂ ತೀರಾ ಹೊಡೆದಾಡಿಕೊಳ್ಳುವ ಮಟ್ಟಕ್ಕೆ ಯಾರೂ ಹೋಗುವುದಿಲ್ಲ. ಹಾಗೊಂದು ವೇಳೆ ತೀರಾ ಅತಿರೇಕಗಳು ನಡೆದಾಗ ಅಂತಹ ಸ್ಪರ್ಧಿಗಳನ್ನು ಮನೆಯಿಂದ ಹೊರ ಹಾಕಲಾಗತ್ತೆ. ಈ ಹಿಂದಿ ಪ್ರಥಮ್ (Pratham)ಮೇಲೆ ಹುಚ್ಚ ವೆಂಕಟ್ (Venkat) ಹಲ್ಲೆ ಮಾಡಿದಾಗ, ವೆಂಕಟ್ ಅವರನ್ನು ಮನೆಯಿಂದ ಆಚೆ ಕಳುಹಿಸಲಾಗಿತ್ತು. ಅದು ಬಿಗ್ ಬಾಸ್ ನಿಯಮ. ಇದೀಗ ಅಂತಹದ್ದೇ ಘಟನೆ ತಮಿಳು ಬಿಗ್ ಬಾಸ್ ನಿಂದ ಬಂದಿದೆ.

    ಕಿರುತೆರೆ ಲೋಕದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಆಗಿರುವುದರಿಂದ, ಬಿಗ್ ಬಾಸ್ ಮನೆಯಲ್ಲಿ ಇರುವವರು ಎಚ್ಚರಿಕೆಯಿಂದ ಇರಬೇಕಾಗತ್ತೆ. ಆದರೆ, ತಮಿಳಿನಲ್ಲಿ ಅದೆಲ್ಲವನ್ನೂ ಗಾಳಿಗೆ ತೂರಿ ಕಿತ್ತಾಡಿಕೊಂಡಿದ್ದಾರೆ ಬಿಗ್ ಬಾಸ್ ಮನೆಯ ಸದಸ್ಯರಾದ ಅಜೀಂ ಮತ್ತು ಆಯೇಷಾ. ಈ ಗಲಾಟೆ ಯಾವ ಮಟ್ಟಿಕ್ಕೆ ಹೋಗಿದೆ ಎಂದರೆ, ಜಗಳ ಹಿಂಸಾಚಾರಕ್ಕೆ ತಿರುಗಿದ್ದು, ಶೋ ಮೇಲೆ ಭಾರೀ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಭೇಟಿ ಮಾಡಿ ಕಣ್ಣೀರಿಟ್ಟ ಜಪಾನ್ ಫ್ಯಾನ್ಸ್

    ತಮಿಳಿನಲ್ಲಿ (Tamil) ಬಿಗ್ ಬಾಸ್ ಸೀಸನ್ 6 ಶುರುವಾಗಿದೆ. ಕಮಲ್ ಹಾಸನ್ ಈ ರಿಯಾಲಿಟಿ ಶೋ ನಡೆಸಿಕೊಡುತ್ತಾರೆ. ಎರಡು ವಾರಗಳಿಂದ ಸ್ಪರ್ಧಿಗಳ ಸಖತ್ ಮನರಂಜನೆಯನ್ನೇ ಕೊಡುತ್ತಿದ್ದರು. ಆದರೆ, ಎರಡು ದಿನಗಳ ಹಿಂದೆ ಅಜೀಂ (Azim) ಮತ್ತು ಆಯೇಷಾ (Ayesha) ನಡುವಿನ ಕಿತ್ತಾಟ ತಾರಕಕ್ಕೇರಿ, ಅನಾಹುತವೇ ನಡೆದು ಹೋಗಿದೆ. ಮಹಿಳಾ ಸ್ಪರ್ಧಿಗಳನ್ನು ಅಜೀಂ ಕೆಟ್ಟ ಭಾಷೆಯಿಂದ ನಿಂದಿಸಿದ ಎನ್ನುವ ಕಾರಣಕ್ಕಾಗಿ ಆಯೇಷಾ ಸಿಟ್ಟಿಗೆದ್ದಿದ್ದಾರೆ. ಕೋಪದಿಂದ ಶೂ (Shoo) ತಗೆದು ಅಜೀಂ ಮೇಲೆ ಎಸೆದಿದ್ದಾರೆ.

    ತಮಿಳು ಬಿಗ್ ಬಾಸ್ ಮನೆಯಲ್ಲಿ ಈ ಘಟನೆ ಭಾರೀ ಆಘಾತವನ್ನು ಮೂಡಿಸಿದೆ. ಮನೆಯ ಸದಸ್ಯರು ದಂಗಾಗಿದ್ದಾರೆ. ಆಯೇಷಾ ಬೇರೆ ರೀತಿಯಲ್ಲಿ ಹೇಳಬಹುದಿತ್ತು ಎಂದೂ ಕೆಲವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಆದರೆ, ಆಯೇಷಾ ಮಾತ್ರ ತಮ್ಮ ನಿರ್ಧಾರ ಸರಿ ಇದೆ ಎಂದೇ ವಾದಿಸುತ್ತಿದ್ದಾರೆ. ಇಂಥದ್ದೊಂದು ಘಟನೆ ನಡೆಯಬಾರದಿತ್ತು, ನಡೆದು ಹೋಗಿದೆ. ವಾರಾಂತ್ಯದ ಎಪಿಸೋಡ್ ನಲ್ಲಿ ಕಮಲ್ ಹಾಸನ್ ಈ ಘಟನೆಯ ಬಗ್ಗೆ ಏನು ಹೇಳುತ್ತಾರೆ, ಯಾವ ನಿರ್ಧಾರ ತಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಕ್ರಾಂತಿ ಅಸೋಸಿಯೇಷನ್‍ನಿಂದ ಹಸಿವು ಮುಕ್ತ ಕ್ರಾಂತಿ – ವಿಜಯಪುರದ ಮಹ್ಮದ್ ಅಜೀಂ ಪಬ್ಲಿಕ್ ಹೀರೋ

    ಕ್ರಾಂತಿ ಅಸೋಸಿಯೇಷನ್‍ನಿಂದ ಹಸಿವು ಮುಕ್ತ ಕ್ರಾಂತಿ – ವಿಜಯಪುರದ ಮಹ್ಮದ್ ಅಜೀಂ ಪಬ್ಲಿಕ್ ಹೀರೋ

    ವಿಜಯಪುರ: ಪ್ರತಿ ನಿತ್ಯ ಅದೆಷ್ಟೋ ನಿರ್ಗತಿಕ, ಅಸಾಹಯಕ ಜನರು ಒಪ್ಪತ್ತು ಊಟಕ್ಕೂ ಗತಿ ಇಲ್ಲದೆ ಕಡು ಬಡತನದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಮತ್ತೊಂದೆಡೆ ಒಂದು ಹೊತ್ತು ಮಾತ್ರ ಊಟ ಮಾಡಿ ಜೀವನ ಸಾಗಿಸುವವರು ಇದ್ದಾರೆ. ಹಾಗೆಯೇ ಅದೆಷ್ಟೋ ಜನರು ಪ್ರತಿ ನಿತ್ಯ ಆಹಾರ ಹಾಳು ಮಾಡಿ ತಿಪ್ಪೆಗೆ ಎಸೆಯುವ ಜನರು ನಮ್ಮೊಂದಿಗೆ ಇದ್ದಾರೆ. ಆದರೆ ಈ ವಿಷಯದಲ್ಲಿ ವಿಜಯಪುರದ ನಿರ್ಗತಿಕರು ಮಾತ್ರ ಲಕ್ಕಿ ಅನ್ನಬೇಕು. ವಿಜಯಪುರದ ನಿರ್ಗತಿಕ ಜನರಿಗೆ ಅನ್ನದಾತರಾಗಿ ಸಂಸ್ಥೆಯೊಂದು ನಿಂತಿದ್ದು, ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

    ಹೌದು. ವಿಜಯಪುರದ ಸಕಫ್‍ರೋಜಾ ಬಡಾವಣೆ ಜನರು ನಿರ್ಗತಿಕರ ಹೊಟ್ಟೆ ತುಂಬಿಸಲು ಅಡುಗೆ ಮಾಡುತ್ತಿದ್ದಾರೆ. ಬಡಾವಣೆ ವಿದ್ಯಾರ್ಥಿಗಳು, ಕೂಲಿ ಮಾಡೋ ಮಂದಿ ಸಂಜೆ ಆಗುತ್ತಿದ್ದಂತೆಯೇ ಮಹ್ಮದ್ ಅಜೀಂ ಇನಾಂದಾರ್ ಮನೆಯಲ್ಲಿ ಸೇರುತ್ತಾರೆ. ಒಬ್ಬರು ತರಾಕಾರಿ ಹೆಚ್ಚಿದ್ದರೆ, ಇನ್ನೊಬ್ಬರು ಒಗ್ಗರಣೆ ಹಾಕುತ್ತಾರೆ. ಎಲ್ಲರೂ ಸೇರಿ ಪೊಟ್ಟಣ ಕಟ್ಟುತ್ತಾರೆ. ಬೈಕ್‍ಗಳಲ್ಲಿ ನಿರ್ಗತಿಕರ ಬಳಿ ತೆರಳಿ ಊಟ ನೀಡಿ ಬರುತ್ತಾರೆ. ಇದು ಅವರ ನಿತ್ಯದ ಕಾಯಕವಾಗಿದೆ.

    ವರ್ಷದ ಹಿಂದೊಮ್ಮೆ ಅಜೀಂ ಹೊರಗೆ ಹೋಗಿದ್ದಾಗ ನಿರ್ಗತಿಕನೋರ್ವ ರಸ್ತೆ ದಾಟಲು ಪರದಾಡುತ್ತಿದ್ದರು. ಆಗ ಅವರನ್ನ ರಸ್ತೆ ದಾಟಿಸಿದ ಅಜೀಂ, ಊಟ ಆಯ್ತಾ ತಾತಾ ಅಂತ ಕೇಳಿದ್ದರಂತೆ. ನಮ್ಮಂತಹವರಿಗೆಲ್ಲ ಎಲ್ಲಿ ಊಟ, ನಿಮ್ಮಂತಹವರು ಏನಾದರು ಕೊಟ್ಟರೆ ಮಾತ್ರ ಊಟ ಅಂದಿದ್ದರಂತೆ. ಅಂದು ನಿರ್ಗತಿಕರಿಗೆ ಆಸರೆ ಆಗಲು ಪಣ ತೊಟ್ಟ ಅಜೀಂ, ಕ್ರಾಂತಿ ಅಸೋಸಿಯೇಷನ್‍ ಹುಟ್ಟು ಹಾಕಿದರು, ಅದರ ಫಲವಾಗಿ ಇಂದು ನೂರಾರು ನಿರ್ಗತಿಕರ ಹಸಿವು ನೀಗುತ್ತಿದೆ.

    ಪ್ರತಿನಿತ್ಯ 4 ರಿಂದ 5 ಸಾವಿರ ರೂ. ಇದಕ್ಕೆ ಖರ್ಚಾಗುತ್ತದೆ. ಅಜೀಂ ಒಳ್ಳೆಯ ಕಾರ್ಯಕ್ಕೆ ನಗರದ ಸಹೃದಯ ದಾನಿಗಳ ನೆರವಿದೆ. ಯಾವುದೇ ಕಾರ್ಯಕ್ರಮದಲ್ಲಿ ಅಡುಗೆ ಉಳಿದರೆ ಅದನ್ನು ನಿರ್ಗತಿಕರಿಗೆ ತಲುಪಿಸುತ್ತಾರೆ.