Tag: ಅಜಯ್ ಹಿಲೋರಿ

  • ನಿಂಬಾಳ್ಕರ್, ಅಜಯ್ ಹಿಲೋರಿ ಸೇರಿ 9 ಮಂದಿಯ ಮೇಲೆ ಸಿಬಿಐ ದಾಳಿ

    ನಿಂಬಾಳ್ಕರ್, ಅಜಯ್ ಹಿಲೋರಿ ಸೇರಿ 9 ಮಂದಿಯ ಮೇಲೆ ಸಿಬಿಐ ದಾಳಿ

    ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ಸೇರಿದಂತೆ 9 ಮಂದಿ ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ.

    ಇಂದು ಬೆಳಗ್ಗೆಯೇ ಬೆಂಗಳೂರಿನ 11 ಕಡೆ, ಮಂಡ್ಯ, ರಾಮನಗರ ಮತ್ತು ಉತ್ತರ ಪ್ರದೇಶದ ಮೀರತ್ ನಗರದ ಒಂದೊಂದು ಕಡೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಕಲೆ ಹಾಕಿದ್ದಾರೆ.

    ಯಾರ ಮೇಲೆ ದಾಳಿ ನಡೆದಿದೆ?
    ಸಿಐಡಿ ಆರ್ಥಿಕ ಅಪರಾಧ ವಿಭಾಗದ ಐಜಿ ಹೇಮಂತ್ ನಿಂಬಾಳ್ಕರ್, ಸಿಐಡಿ ಪೊಲೀಸ್ ಉಪವರಿಷ್ಠಾಧಿಕಾರಿ ಇ.ಬಿ. ಶ್ರೀಧರ್, ಪೂರ್ವ ವಲಯ ಡಿಸಿಪಿ ಅಜಯ್ ಹಿಲೋರಿ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾಧಿಕಾರಿ ಎಂ. ರಮೇಶ್, ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ಉಪನಿರೀಕ್ಷಕ ಗೌರಿ ಶಂಕರ್, ಬೆಂಗಳೂರು ಉತ್ತರ ಉಪವಿಭಾಗದ ಎಸಿಪಿ ಹಾಗೂ ಕೆಪಿಐಡಿ ಕಾಯ್ದೆಯ ಅಧಿಕಾರಿ ಎಲ್.ಸಿ. ನಾಗರಾಜ್, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ವಿಜಯ್ ಶಂಕರ್, ಉತ್ತರ ಉಪವಿಭಾಗದ ಲೆಕ್ಕಿಗ ಮಂಜುನಾಥ್, ಬಿಡಿಎ ಮುಖ್ಯ ಎಂಜಿನಿಯರ್ ಪಿಡಿ ಕುಮಾರ್, ಬೆಂಗಳೂರು ಉತ್ತರ ವಿಭಾಗದ ಲೆಕ್ಕಿಗ ಮಂಜುನಾಥ್ ನಿವಾಸದ ಮೇಲೆ ದಾಳಿ ನಡೆದಿದೆ.

    ಅಜಯ್ ಹಿಲೋರಿ ಮೂಲತಃ ಉತ್ತರ ಪ್ರದೇಶದ ಮೀರತ್‍ನವರಾಗಿದ್ದು ಅವರ ಅಲ್ಲಿನ ನಿವಾಸದ ಮೇಲೆ ದಾಳಿ ನಡೆದಿದೆ. ದಾಳಿ ಮುಗಿಸಿ ಪಂಚನಾಮೆ ಮಾಡಿ ಸಿಬಿಐ ಅಧಿಕಾರಿಗಳು ತೆರಳಿದ್ದಾರೆ. ಸಿಬಿಐ ವಿಚಾರಣೆ ಸಮಯದಲ್ಲಿ ಐಎಂಐ ಮುಖ್ಯಸ್ಥ ಮನ್ಸೂರ್ ಖಾನ್ ಹೇಳಿಕೆಯ ಆಧಾರದ ಮೇಲೆ ಈ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆದಿದೆ.

    ಸರ್ಕಾರಿ ಅಧಿಕಾರಿಗಳು ತನಿಖೆಯ ಸಂದರ್ಭದಲ್ಲಿ ಐಎಂಎ ಪರವಾಗಿ ವರದಿ ನೀಡಲು ಸಹಕರಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಸಿಬಿಐ ಹೇಳಿದೆ.

    ಯಾರ ಮೇಲೆ ಏನು ಆರೋಪ?
    ನಿಂಬಾಳ್ಕರ್ – ಹಣ ಪಡದು ಕ್ಲೀನ್‍ಚಿಟ್ ಕೊಟ್ಟಿದ್ಧಾರೆ ಎಂಬ ಆರೋಪ
    ಅಜಯ್ ಹಿಲೋರಿ – ಪೂರ್ವ ವಲಯ ಡಿಸಿಪಿಯಾಗಿದ್ದಾಗ 20 ಕೋಟಿ ಹಣ 25 ಕೆಜಿ ಚಿನ್ನ ಪಡೆದಿದ್ದಾರೆಂಬ ಆರೋಪ
    ಶ್ರೀಧರ್ – ಸಿಐಡಿಯಲ್ಲಿ ಕ್ಲೀನ್‍ಚಿಟ್ ಕೊಟ್ಟ ತನಿಖಾಧಿಕಾರಿ
    ಎಸಿಪಿ ರಮೇಶ್ – ಪ್ರಕರಣ ದಾಖಲಿಸಿಕೊಳ್ಳದೇ ಪರವಾಗಿ ಕೆಲಸ ಮಾಡಿದ್ದು

    ರಮೇಶ್ – ಪ್ರಕರಣ ದಾಖಲಿಸಿಕೊಳ್ಳದೇ ಪರವಾಗಿ ಕೆಲಸ ಮಾಡಿದ್ದು
    ಗೌರಿಶಂಕರ್ – ಪ್ರಕರಣ ದಾಖಲಿಸಿಕೊಳ್ಳದೇ ಪರವಾಗಿ ಕೆಲಸ ಮಾಡಿದ್ದು
    ಎಸಿ ನಾಗರಾಜ್ – ಸರ್ಕಾರಿ ಇಲಾಖೆಯಲ್ಲಿ ಕ್ಲೀನ್‍ಚಿಟ್ ಕೊಡೊಕೆ 5 ಕೋಟಿ ಪಡೆದಿದ್ದಾರೆಂಬ ಆರೋಪ
    ವಿಜಯ್‍ಕುಮಾರ್ – 3 ಕೋಟಿ ಪಡೆದಿದ್ದಾರೆಂಬ ಆರೋಪ
    ಮಂಜುನಾಥ್ – 2 ಕೋಟಿ ಪಡೆದಿದ್ದಾರೆಂಬ ಆರೋಪ