Tag: ಅಜಯ್ ಸಿಂಗ್

  • ಪ್ರಚಾರಕ್ಕಾಗಿ 15 ಲಕ್ಷ ರೂ. ಖರ್ಚು ಮಾಡಿದ್ದೇನೆ – ಕೊಟ್ಟ ಮಾತಂತೆ ಕಾಸು ವಾಪಸ್ ಕೊಡಿ – ಕಾಂಗ್ರೆಸ್ ಶಾಸಕನಿಗೆ ಬೆಂಬಲಿಗನ ಆಗ್ರಹ

    ಪ್ರಚಾರಕ್ಕಾಗಿ 15 ಲಕ್ಷ ರೂ. ಖರ್ಚು ಮಾಡಿದ್ದೇನೆ – ಕೊಟ್ಟ ಮಾತಂತೆ ಕಾಸು ವಾಪಸ್ ಕೊಡಿ – ಕಾಂಗ್ರೆಸ್ ಶಾಸಕನಿಗೆ ಬೆಂಬಲಿಗನ ಆಗ್ರಹ

    ಬೆಂಗಳೂರು: ಕಲಬುರಗಿ ಜಿಲ್ಲೆಯ ಜೇವರ್ಗಿ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಇದರ ಮೂಲಕ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲ್ಲು ಬೆಂಬಲಿಗರೊಬ್ಬರಿಂದ ದುಡ್ಡು ಖರ್ಚು ಮಾಡಿಸಿದ್ರಾ ಎಂಬ ಪ್ರಶ್ನೆಯೊಂದು ಹುಟ್ಟುಕೊಂಡಿದೆ.

    ನಿಮಗಾಗಿ ನಾನು ಎಲೆಕ್ಷನ್‍ನಲ್ಲಿ 15 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ. ಆ ದುಡ್ಡನ್ನು ವಾಪಸ್ ಕೊಡಿ ಅಂತ ಆಂದೋಲ ಗ್ರಾಮದ ಶಿವಶರಣ ರೆಡ್ಡಿ ಎಂಬವರು ಅಜಯ್ ಸಿಂಗ್ ಅವರಿಗೆ ಪದೇ ಪದೇ ಮೆಸೇಜ್ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ರೋಸಿ ಹೋಗಿರುವ ಶಾಸಕರು ಬೆಂಬಲಿಗನ ವಿರುದ್ಧವೇ ಕೇಸ್ ಹಾಕುವ ಧಮ್ಕಿ ಹಾಕುತ್ತಿದ್ದಾರೆ ಎನ್ನಲಾಗಿದೆ.

    ಚುನಾವಣೆ ಸಂದರ್ಭದಲ್ಲಿ ಮೆಸೇಜ್ ಮಾಡಿದ್ದ ಶಿವಶರಣ ರೆಡ್ಡಿ, ಬಿಜೆಪಿಯವರು ನನಗೆ ಪದೇ ಪದೇ ಫೋನ್ ಮಾಡುತ್ತಿದ್ದು, ನೀವು ದುಡ್ಡು ಕೊಡುತ್ತೀನಿ ಅಂತ ಮಾತು ಕೊಟ್ರೆ ನಿಮ್ಮ ಜೊತೆಗೆ ಮುಂದುವರಿಯುತ್ತೇನೆ. ಇಲ್ಲ ಅಂದರೆ ಬಿಜೆಪಿ ಪರ ಪ್ರಚಾರಕ್ಕೆ ಹೋಗುತ್ತೇನೆ ಅಂತ ಶಾಸಕರಿಗೆ ಮೆಸೇಜ್ ಹಾಕಿದ್ದರು. ಆಗ ಒಪ್ಪಿದ್ದ ಅಜಯ್ ಸಿಂಗ್ ಈಗ ಪಕ್ಷಕ್ಕಾಗಿ ಕೆಲಸ ಮಾಡು, ಆಮೇಲೆ ಕೊಡೋಣ ಅಂತ ರಿಪ್ಲೈ ಮಾಡಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಶಿವಶರಣ ರೆಡ್ಡಿ ಜೊತೆಗೆ ಶಾಸಕರ ಆಪ್ತರ ದೂರವಾಣಿ ಸಂಭಾಷಣೆಯ ಆಡಿಯೋ ಪಬ್ಲಿಕ್ ಟಿವಿಗೆ ಲಭಿಸಿದೆ.

  • ರಾಹುಲ್ ಸಂಚರಿಸೋ ಮಾರ್ಗದಲ್ಲಿ ಕೃತಕ ಹಸಿರೀಕರಣ- ರಸ್ತೆ ಮಧ್ಯೆ ಬೆಳೆದ ಪಾಮ್ ಗಿಡ ನೆಡೆಸಲು ಮುಂದಾದ ಅಜಯ್ ಸಿಂಗ್

    ರಾಹುಲ್ ಸಂಚರಿಸೋ ಮಾರ್ಗದಲ್ಲಿ ಕೃತಕ ಹಸಿರೀಕರಣ- ರಸ್ತೆ ಮಧ್ಯೆ ಬೆಳೆದ ಪಾಮ್ ಗಿಡ ನೆಡೆಸಲು ಮುಂದಾದ ಅಜಯ್ ಸಿಂಗ್

    ಕಲಬುರಗಿ: ಫೆಬ್ರವರಿ 12 ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಲಬುರಗಿಯ ಜೇವರ್ಗಿ ಪಟ್ಟಣಕ್ಕೆ ಆಗಮಿಸುತ್ತಿದ್ದು, ಈ ಹಿನ್ನಲೆಯಲ್ಲಿ ಅವರು ಆಗಮಿಸುವ ರಸ್ತೆ ಮಾರ್ಗದಲ್ಲಿ ಅಲಂಕಾರಿಕ ಗಿಡಗಳನ್ನು ನೆಡಲಾಗುತ್ತಿದೆ.

    ಈ ಮೂಲಕ ಕೃತಕ ಹಸಿರೀಕರಣ ಮಾಡಲು ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಮುಂದಾಗಿದ್ದಾರೆ. ರಾಹುಲ್ ಗಾಂಧಿ ಸಂಚರಿಸುವ ಮಾರ್ಗ ಮಧ್ಯದ ಉದ್ದಕ್ಕೂ ಸುಮಾರು 14 ಸಾವಿರ ರೂಪಾಯಿ ಬೆಲೆಯ, ಬೆಳೆದು ನಿಂತ ಪಾಮ್ ಗಿಡಗಳನ್ನು ನೆಡಲಾಗುತ್ತಿದೆ.

    ಯಾವ ಯೋಜನೆ ಅಥವಾ ಯಾರ ಅನುದಾನದಲ್ಲಿ ಈ ದುಂದುವೆಚ್ಚ ಮಾಡಲಾಗುತ್ತಿದೆ ಎಂಬುದು ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

  • ಧರಂ ಸಿಂಗ್ ಜೇವರ್ಗಿ ಕ್ಷೇತ್ರದ ಮತ ಪ್ರಭುಗಳಿಗೆ ಕೊನೇ ಬಾರಿ ನಮನ ಸಲ್ಲಿಸಿದ್ದು ಹೀಗೆ

    ಧರಂ ಸಿಂಗ್ ಜೇವರ್ಗಿ ಕ್ಷೇತ್ರದ ಮತ ಪ್ರಭುಗಳಿಗೆ ಕೊನೇ ಬಾರಿ ನಮನ ಸಲ್ಲಿಸಿದ್ದು ಹೀಗೆ

    ಕಲಬುರಗಿ: 2014ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಧರಂ ಸಿಂಗ್ ಪುತ್ರ ಅಜಯ್ ಸಿಂಗ್ ಜೇವರ್ಗಿ ಕ್ಷೇತ್ರದಿಂದ 37 ಸಾವಿರ ಮತಗಳಿಂದ ಜಯಗಳಿಸಿದ್ದರು. ಪುತ್ರನ ಗೆಲುವಿನ ಬಳಿಕ ಮಾತನಾಡಿದ್ದ ಧರಂ ಸಿಂಗ್ ಇದು ನನ್ನ ಕೊನೆಯ ಭಾಷಣ ಎಂದು ಕಣ್ಣೀರು ಹಾಕಿದ್ದರು.

    2014ರ ಚುನಾವಣೆಯಲ್ಲಿ ಧರಂ ಸಿಂಗ್ ಪುತ್ರ ಅಜಯ್ ಸಿಂಗ್ 37 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು. ನಂತರ ಕ್ಷೇತ್ರದ ಜನರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಧರಂಸಿಂಗ್ ಇದು ನನ್ನ ಕೊನೆಯ ಭಾಷಣ, ಇನ್ನು ಮುಂದೆ ಕ್ಷೇತ್ರದ ಜನ ನನ್ನ ಪುತ್ರ ಅಜಯ್ ಸಿಂಗ್ ಅವರಿಗೆ ಆರ್ಶಿರ್ವಾದ ಮಾಡಬೇಕು ಅಂತಾ ಕಣ್ಣೀರು ಹಾಕಿದ್ದರು.

    ಧರಂಸಿಂಗ್ ಅವರ ಮಾತು ಕೇಳಿದ ಅವರ ಪುತ್ರ ಅಜಯ್ ಸಿಂಗ್ ಹಾಗು ಕ್ಷೇತ್ರದ ಜನರಲ್ಲಿ ಸಹ ಕಣ್ಣಿರು ತುಂಬಿ ಬಂದಿತ್ತು. ಧರಂಸಿಂಗ್ ನಂತರ ಅವರ ಪುತ್ರ ಅಜಯ್ ಸಿಂಗ್ ತಂದೆಯ ಮಾತಿಗೇ ಕಣ್ಣಿರಿನಲ್ಲಿಯೇ ಉತ್ತರ ಕೊಟ್ಟಿದ್ದರು.