Tag: ಅಜಯ್ ವಾರಿಯರ್

  • ವಾರಿಯರ್ ಧ್ವನಿಯಲ್ಲಿ ‘ಭೈರವ’ ಚಿತ್ರದ ಮೊದಲ ಹಾಡು

    ವಾರಿಯರ್ ಧ್ವನಿಯಲ್ಲಿ ‘ಭೈರವ’ ಚಿತ್ರದ ಮೊದಲ ಹಾಡು

    ಭೈರವ (Bhairava) ಸಿನಿಮಾದ ಮೊದಲ ಹಾಡು (Song) ರಿಲೀಸ್ ಆಗಿದೆ.  ಸಾಯಿ ಸರ್ವೇಶ್ ಸಾಹಿತ್ಯ, ಚೇತನ್ ಕೃಷ್ಣ ಸಂಗೀತ ಹೊಂದಿರುವ ‘ಹೇ ಮಂದಾರ’ ಹಾಡಿಗೆ ಅಜಯ್ ವಾರಿಯರ್ (Ajay Warrier) ಧ್ವನಿಯಾಗಿದ್ದಾರೆ. ಉತ್ತರ ಪ್ರದೇಶದ ಸುಂದರ ಸ್ಥಳಗಳಲ್ಲಿ ಚಿತ್ರೀಕರಣಗೊಂಡ ಹಾಡಿಗೆ ಬಿ. ಧನಂಜಯ್ ಅವರು ನೃತ್ಯ ಸಂಯೋಜನೆವಿದೆ. ವಿಸಿಕ ಫಿಲಂಸ್ ಹಾಗೂ ಹನಿ ಚೌದ್ರಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಹಾಗೂ ಶೀರ್ಷಿಕೆಯಿಂದಲೇ ಸಾಕಷ್ಟು ಸದ್ದು ಮಾಡಿರುವ ಭೈರವ ಚಿತ್ರ ಇದೀಗ ತಮ್ಮ ಮೊದಲ ಹಾಡನ್ನು ಬಿಡುಗಡೆಗೊಳಿಸಿ ಸಿನಿ ರಸಿಕರಿಗೆ ವಿಶೇಷ ಕೊಡುಗೆಯನ್ನು ನೀಡಿದ್ದಾರೆ.

    ಹನಿ ಚೌದ್ರಿ ಹಾಗೂ  ಶ್ರೀನಿವಾಸ್ ಬೆಟ್ಟದಪುರ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಚರಣ್ ಸುವರ್ಣ (Charan Suvarna) ಬರೆದಿರುವ ಕಥೆಗೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ರಾಮ್ ತೇಜ ಅವರು ವಹಿಸಿದ್ದಾರೆ. ಚಿತ್ರದ ಮುಖ್ಯ ಭೂಮಿಯಲ್ಲಿ ಕಮರೊಟ್ಟು ಚೆಕ್ ಪೋಸ್ಟ್ ಖ್ಯಾತಿಯ ಸನತ್, ಒಂದು ಮೊಟ್ಟೆಯ ಕಥೆ ಖ್ಯಾತಿಯ ಶೈಲಾಶ್ರೀ ಮುಲ್ಕಿ ಹಾಗೂ ಬನ್- ಟಿ ಖ್ಯಾತಿಯ ಉಮೇಶ್ ಸಕ್ಕರೆನಾಡು ಹಾಗು ಇನ್ನೂ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

    ಉತ್ತರ ಪ್ರದೇಶದ ಗೋವಿಂದಪುರಿ, ಹರಿದ್ವಾರ, ರಿಷಿಕೇಶ್, ಕಾಶಿ, ಬೆಂಗಳೂರು ಇನ್ನು ಹಲವು ವಿಭಿನ್ನ ಸ್ಥಳಗಳಲ್ಲಿ ಚಿತ್ರವು ಚಿತ್ರೀಕರಣ ಗೊಂಡಿದೆ ಎಂದು ಚಿತ್ರದ ನಿರ್ದೇಶಕ ರಾಮ್ ತೇಜ ಹೇಳಿದ್ದಾರೆ. ಚಿತ್ರದ ಕಥೆಯನ್ನು ಎಲ್ಲೂ ಬಿಟ್ಟುಕೊಡದೆ ಚಿತ್ರದ ಬಗ್ಗೆ ಕುತೂಹಲವನ್ನು ಹಾಗೆ ಕಾಯ್ದಿರಿಸಿದ್ದಾರೆ.

     

    ಸದ್ಯ ಈ ಚಿತ್ರದ ಮೊದಲ ಹಾಡನ್ನು ಖ್ಯಾತ ನಿರ್ದೇಶಕರುಗಳಾದ ದಿನಕರ್ ತೂಗುದೀಪ್, ಭರ್ಜರಿ ಚೇತನ್ ಕುಮಾರ್, ಹಾಗೂ ಗರಡಿ ಚಿತ್ರದ ನಾಯಕರಾದ ಸೂರ್ಯ, ವಸಿಷ್ಠ ಸಿಂಹ ಹಾಗೂ ವಿಕ್ರಂ ರವಿಚಂದ್ರನ್, ಜಾಯಿದ್ ಖಾನ್, ಸೋನಲ್ ಮಾಂತೇರೋ, ಧರ್ಮಣ್ಣ ಕಡೂರ್ ಬಿಡುಗಡೆ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರು ರಸ್ತೆಯ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡ ಖ್ಯಾತ ಗಾಯಕ ಅಜಯ್ ವಾರಿಯರ್

    ಬೆಂಗಳೂರು ರಸ್ತೆಯ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡ ಖ್ಯಾತ ಗಾಯಕ ಅಜಯ್ ವಾರಿಯರ್

    ಬೆಂಗಳೂರು ರಸ್ತೆಗಳು ಗುಂಡಿಗಳಿಂದಲೇ ತುಂಬಿ ಹೋಗಿವೆ. ಹೀಗಾಗಿ ನಿತ್ಯವೂ ಒಂದಿಲ್ಲೊಂದು ಅಪಘಾತಗಳು ನಡೆಯುತ್ತಲೇ ಇವೆ. ಎರಡು ದಿನಗಳ ಹಿಂದೆಯಷ್ಟೇ ಕಿರುತೆರೆ ನಟಿ ಸುನೇತ್ರ ಪಂಡಿತ್, ಅವೈಜ್ಞಾನಿಕ ಹಂಪಿನಿಂದಾಗಿ ಬಿದ್ದು ಆಸ್ಪತ್ರೆ ಸೇರಿಕೊಂಡಿದ್ದರು. ಇದೀಗ ಗುಂಡಿಗೆ ಬಿದ್ದು ಕನ್ನಡದ ಖ್ಯಾತ ಗಾಯಕ ಅಜಯ್ ವಾರಿಯರ್ ಕಾಲು ಮುರಿದುಕೊಂಡಿದ್ದಾರೆ. ಸರಿಯಾಗಿ ರಸ್ತೆ ನಿರ್ವಹಣೆ ಮಾಡದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

    ಕಳೆದ ಎರಡ್ಮೂರು ವಾರದಿಂದ ಬೆಂಗಳೂರಿನಲ್ಲಿ ವಿಪರೀತ ಮಳೆ ಆಗುತ್ತಿದೆ. ಹೀಗಾಗಿ ರಸ್ತೆ ತುಂಬಾ ಗುಂಡಿಗಳೇ ತುಂಬಿಕೊಂಡಿವೆ. ಅದರ ಜತೆ ಫುಟ್ ಪಾತ್ ನಲ್ಲಿರುವ ಡ್ರೈನ್ ಹೋಲ್ ಗಳನ್ನು ಮುಚ್ಚದೇ ಹಾಗೆಯೇ ಬಿಟ್ಟಿದ್ದರಿಂದ ಅಲ್ಲಿಯೂ ಅಪಘಾತ ಸಂಭವಿಸುತ್ತಿವೆ. ಒಟ್ಟಿನಲ್ಲಿ ಬೆಂಗಳೂರು ರಸ್ತೆಗಳು ಎಂದರೆ, ಅವುಗಳು ಅಪಘಾತಕ್ಕೆ ಆಹ್ವಾನ ನೀಡುವ ಅತಿಥಿಗಳಂತಾಗಿವೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    ಅಜಯ್ ವಾರಿಯರ್ ಕೇರಳಕ್ಕೆ ಹೋಗಲು ರೈಲು ನಿಲ್ದಾಣಕ್ಕೆ ಹೊರಟಿದ್ದರು. ವಿಪರೀತ ಮಳೆ ಬಂದಿತ್ತು. ಹೀಗಾಗಿ ಓಲಾ ಹಿಡಿಯಲು ಮುಖ್ಯರಸ್ತೆ ಕಡೆಗೆ ನಡೆಯ ತೊಡಗಿದರು. ಮೆಟ್ರೊ ನಿಲ್ದಾಣದ ಮುಖ್ಯರಸ್ತೆಯಲ್ಲಿ ವಿಪರೀತ ಮಳೆ ನೀರು ತುಂಬಿಕೊಂಡಿದ್ದರಿಂದ ಫುಟ್ ಪಾತ್ ಏರಿದರು. ಒಂದೆರಡು ಹೆಜ್ಜೆ ಮುಂದಿಡುತ್ತಿದ್ದಂತೆಯೇ ಅವರು ಗುಂಡಿಗೆ ಬಿದ್ದು, ಆಯಾತಪ್ಪಿ ಕೆಳಗೂ ಬಿದ್ದಿದ್ದಾರೆ. ಆಗ ಕಾಲು ಮುರಿದಿದೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ಗುಂಡಿಗೆ ಅಜಯ್ ಬಿದ್ದಾಗ ಎದೆಯೊರೆಗೂ ನೀರು ಬಂತಂತೆ. ಕೈಯಲ್ಲಿ ಸೂಟ್ ಕೇಸ್ ಇದ್ದ ಕಾರಣ, ಅವರು ಭಾರೀ ಅಪಘಾತದಿಂದ ತಪ್ಪಿಸಿಕೊಂಡಿದ್ದಾರಂತೆ. ಸೂಟ್ ಕೇಸ್ ಇಲ್ಲದೇ ಹೋದರೆ, ಗುಂಡಿಯಲ್ಲಿ ಮುಳುಗುವ ಅಪಾಯವಿತ್ತು ಎಂದು ಅವರು ಬರೆದುಕೊಂಡಿದ್ದಾರೆ. ಅಪಘಾತವಾದ ತಕ್ಷಣವೇ ಅವರು ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದು, ಕಾಲಿಗೆ ಹಲವಾರು ಹೊಲಿಗೆಗಳನ್ನು ಹಾಕಲಾಗಿದೆಯಂತೆ.