Tag: ಅಜಯ್ ರೈ

  • ವಾರಣಾಸಿಯಲ್ಲಿ ಮೋದಿಗೆ ಹ್ಯಾಟ್ರಿಕ್‌ ಜಯ – ಕಡಿಮೆಯಾಯ್ತು ಗೆಲುವಿನ ಅಂತರ

    ವಾರಣಾಸಿಯಲ್ಲಿ ಮೋದಿಗೆ ಹ್ಯಾಟ್ರಿಕ್‌ ಜಯ – ಕಡಿಮೆಯಾಯ್ತು ಗೆಲುವಿನ ಅಂತರ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ವಾರಣಾಸಿ ಕ್ಷೇತ್ರದಿಂದ (Varanasi Lok Sabha Constituency) ಹ್ಯಾಟ್ರಿಕ್‌ ಜಯ ಸಾಧಿಸಿದ್ದಾರೆ. ಆದರೆ ಈ ಬಾರಿ ಗೆಲುವಿನ ಅಂತರ ಭಾರೀ ಕಡಿಮೆಯಾಗಿದೆ.

    ಮೋದಿ ಅವರು 1,52,513 ಮತಗಳ ಅಂತರದಿಂದ ಕಾಂಗ್ರೆಸ್‌ ಅಜಯ್‌ ರೈ ಅವರನ್ನು ಸೋಲಿಸಿದ್ದಾರೆ. ಮೋದಿ ಅವರು 6,12,970 ಮತಗಳನ್ನು ಪಡೆದರೆ ಅಜಯ್‌ ರೈ ಅವರು 4,60,457 ಮತಗಳನ್ನು ಪಡೆದರು.

    2014 ರಂದು ಮೊದಲ ಬಾರಿಗೆ ವಾರಣಾಸಿಯಿಂದ (Ajay Rai) ಸ್ಪರ್ಧೆ ಮಾಡಿದಾಗ ಮೋದಿ 5,81,022 ಮತಗಳನ್ನು ಪಡೆದು 3,71,784 ಮತಗಳ ಅಂತರದಿಂದ ಜಯಗಳಿಸಿದ್ದರು.

     

    2019 ರಲ್ಲಿ ಎರಡನೇ ಬಾರಿ ಮೋದಿ ಸ್ಪರ್ಧಿಸಿ 6,74,664 ಮತಗಳನ್ನು ಪಡೆದು 4,79,505 ಮತಗಳ ಅಂತರದಿಂದ ವಿಜಯಿ ಆಗಿದ್ದರು. ಇದನ್ನೂ ಓದಿ: ಡಿಕೆ ಬ್ರದರ್ಸ್‌ಗೆ ಠಕ್ಕರ್‌; ಜನರ ಹೃದಯ ಗೆದ್ದ ಡಾಕ್ಟರ್‌ – ಮಂಜುನಾಥ್‌ಗೆ ಯಾವ ಕ್ಷೇತ್ರದಲ್ಲಿ ಎಷ್ಟು ವೋಟ್‌?

    ವಿಜಯಗಳಿಸಿದ ಬೆನ್ನಲ್ಲೇ ಮೋದಿ ಸಾಮಾಜಿಕ ಜಾಲತಾಣದಲ್ಲಿ, ದೇಶದ ಜನತೆ ಸತತ ಮೂರನೇ ಬಾರಿಗೆ ಎನ್‌ಡಿಎ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಇತಿಹಾಸದಲ್ಲಿ ಇದೊಂದು ಅಭೂತಪೂರ್ವ ಕ್ಷಣ. ಈ ಪ್ರೀತಿ ಮತ್ತು ಆಶೀರ್ವಾದಕ್ಕಾಗಿ ನಾನು ತಲೆಬಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ.

     


    ನಾವು ಹೊಸ ಶಕ್ತಿ, ಹೊಸ ಉತ್ಸಾಹ ಮತ್ತು ಅವರ ಆಕಾಂಕ್ಷೆಗಳನ್ನು ಪೂರೈಸಲು ಹೊಸ ಸಂಕಲ್ಪಗಳೊಂದಿಗೆ ಮುನ್ನಡೆಯುತ್ತೇವೆ ಎಂದು ನಾನು ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ.. ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಎಲ್ಲಾ ಕಾರ್ಯಕರ್ತರನ್ನು ನಾನು ಅಭಿನಂದಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.

  • ಮೋದಿ ವಿರುದ್ಧ ಕಣಕ್ಕೆ ಇಳಿಯಲಿರುವ ಅಜಯ್‌ ರೈ ಯಾರು?

    ಮೋದಿ ವಿರುದ್ಧ ಕಣಕ್ಕೆ ಇಳಿಯಲಿರುವ ಅಜಯ್‌ ರೈ ಯಾರು?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಉತ್ತರಪ್ರದೇಶದ ವಾರಣಾಸಿ ಕ್ಷೇತ್ರದಿಂದ (Varanasi Lok Sabha Constituency) ಕಾಂಗ್ರೆಸ್‌ನ (Congress) ಅಜಯ್‌ ರೈ (Ajai Rai) ಅವರನ್ನು ಕಾಂಗ್ರೆಸ್‌ ಕಣಕ್ಕೆ ಇಳಿಸಿದೆ.

    ಉತ್ತರ ಪ್ರದೇಶ ಕಾಂಗ್ರೆಸ್‌ (Congress) ಅಧ್ಯಕ್ಷರಾಗಿರುವ ಅಜಯ್‌ ರೈ ಈ ಹಿಂದೆ ಎರಡು ಬಾರಿ ಮೋದಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಈಗ ಕಾಂಗ್ರೆಸ್‌ ಮೂರನೇ ಬಾರಿ ಅಜಯ್‌ ರೈ ಅವರಿಗೆ ವಾರಣಾಸಿ ಟಿಕೆಟ್‌ ನೀಡಿದೆ.

    ಯಾರು ಅಜಯ್‌ ರೈ?
    ಬಿಜೆಪಿಯ (BJP) ವಿದ್ಯಾರ್ಥಿ ಘಟಕ ಎಬಿವಿಪಿಯೊಂದಿಗೆ (ABVP) ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು 1996 ಮತ್ತು 2007 ರ ನಡುವೆ ಸತತ ಮೂರು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಕೋಲಾಸ್ಲಾ ಕ್ಷೇತ್ರದಿಂದ ಯುಪಿ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು.  ಇದನ್ನೂ ಓದಿ: ತೈಮೂರ್‌, ಬಾಬರ್‌ ಕಾಲದಲ್ಲಿ ಹಿಂದೂಗಳೇ ಇರಲಿಲ್ಲ: ಟಿಎಂಸಿ ಅಭ್ಯರ್ಥಿ

    ಬಿಜೆಪಿಯಿಂದ ಲೋಕಸಭೆ ಟಿಕೆಟ್ ಸಿಗದಕ್ಕೆ ಅಸಮಾಧಾನಗೊಂಡು ಸಮಾಜವಾದಿ ಪಕ್ಷ ಸೇರಿದರು. 2012 ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಇವರು ವಿಧಾನಸಭಾ ಚುನಾವಣೆಯಲ್ಲಿ ಪಿಂದ್ರಾ ಕ್ಷೇತ್ರದಿಂದ ಆಯ್ಕೆಯಾದರು. 2017 ರಲ್ಲಿ ರಾಯ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಪಿಂದ್ರಾದಿಂದ ಸ್ಪರ್ಧಿಸಿ ಸೋತಿದ್ದರು. ಇದನ್ನೂ ಓದಿ: ಹಣವಿಲ್ಲದೇ ರಾಜಕೀಯ ಪಕ್ಷ ನಡೆಸುವುದು ಸುಲಭವಲ್ಲ: ನಿತಿನ್‌ ಗಡ್ಕರಿ

    ಆಗಸ್ಟ್ 2023 ರಲ್ಲಿ ದಲಿತ ನಾಯಕ ಬ್ರಿಜ್‌ಲಾಲ್ ಖಾಬ್ರಿ ಬದಲಿಗೆ ಅವರನ್ನು ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ಎಐಸಿಸಿ ನೇಮಿಸಿತು.

    2014ರ ಚುನಾವಣೆಯಲ್ಲಿ ಮೋದಿಗೆ 5,81,022 ಮತಗಳು ಬಿದ್ದರೆ ಅಜಯ್‌ ರೈಗೆ 75,614 ಮತಗಳು ಬಿದ್ದಿದ್ದವು. 2019ರ ಚುನಾವಣೆಯಲ್ಲಿ ಮೋದಿಗೆ 6,74,664 ಮತಗಳು ಬಿದ್ದಿದ್ದರೆ ಅಜಯ್‌ ರೈಗೆ 1,52,548 ಮತಗಳು ಬಿದ್ದಿದ್ದವು.

     

  • ಮೋದಿ ವಿರುದ್ಧ ಅಜಯ್ ರೈ ಸ್ಪರ್ಧೆ – ಕಾಂಗ್ರೆಸ್‌ನ ನಾಲ್ಕನೇ ಪಟ್ಟಿ ರಿಲೀಸ್

    ಮೋದಿ ವಿರುದ್ಧ ಅಜಯ್ ರೈ ಸ್ಪರ್ಧೆ – ಕಾಂಗ್ರೆಸ್‌ನ ನಾಲ್ಕನೇ ಪಟ್ಟಿ ರಿಲೀಸ್

    – ರಾಜಘಡ್‌ನಿಂದ ಮಾಜಿ ಸಿಎಂ ದ್ವಿಗಿಜಯ್ ಸಿಂಗ್ ಕಣಕ್ಕೆ
    – ಕರ್ನಾಟಕದಲ್ಲಿ ಐಎಎಸ್ ಅಧಿಕಾರಿಯಾಗಿದ್ದ ಸೆಂಥಿಲ್‌ಗೆ ಟಿಕೆಟ್

    ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election) ಕಾಂಗ್ರೆಸ್ (Congress) ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದ್ದು, ವಾರಣಾಸಿಯಲ್ಲಿ (Varanasi) ಪ್ರಧಾನಿ ನರೇಂದ್ರ ಮೋದಿ (narendra Modi) ವಿರುದ್ಧ ಅಜಯ್ ರೈ (Ajay Rai) ಸ್ಪರ್ಧೆ ಮಾಡಲಿದ್ದಾರೆ.

    ವಿವಿಧ ರಾಜ್ಯಗಳ 46 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸಿ ಕಾಂಗ್ರೆಸ್ ನಾಲ್ಕನೇ ಪಟ್ಟಿ ರಿಲೀಸ್ ಮಾಡಿದೆ. ಕಳೆದ ಎರಡು ಬಾರಿ ಅಜಯ್ ರೈ ಮೋದಿ ವಿರುದ್ಧ ಸ್ಪರ್ಧಿಸಿದ್ದರು. ಇದೀಗ ಮೂರನೇ ಬಾರಿಗೆ ಅಜಯ್ ರೈಗೆ ಟಿಕೆಟ್ ನೀಡಲಾಗಿದೆ. ಇನ್ನು ಶಿವಗಂಗಾದಿಂದ ಕಾರ್ತಿ ಚಿದಂಬರಂಗೆ ಟಿಕೆಟ್ ಘೋಷಣೆಯಾಗಿದೆ. ರಾಜಘಡ್‌ನಿಂದ ಮಾಜಿ ಮುಖ್ಯಮಂತ್ರಿ ದ್ವಿಗಿಜಯ್ ಸಿಂಗ್‌ಗೆ ಟಿಕೆಟ್ ನೀಡಲಾಗಿದೆ. ಇದನ್ನೂ ಓದಿ: Exclusive: ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು: ಕುಕ್ಕರ್‌, ಸೀರೆ ಆರೋಪಕ್ಕೆ ಡಿ.ಕೆ.ಸುರೇಶ್‌ ಟಾಂಗ್‌

    ತಿರುವಳ್ಳೂರಿನಿಂದ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್‌ಗೆ ಟಿಕೆಟ್ ನೀಡಲಾಗಿದೆ. ಸೆಂಥಿಲ್ ಕರ್ನಾಟಕದ ಮಾಜಿ ಐಎಎಸ್ ಅಧಿಕಾರಿಯಾಗಿದ್ದು, ಸದ್ಯ ಕಾಂಗ್ರೆಸ್ ವಾರ್ ರೂಂ ಮುಖ್ಯಸ್ಥರಾಗಿದ್ದಾರೆ. ಇದನ್ನೂ ಓದಿ: Exclusive: ಕ್ಷೇತ್ರದ ಜನರ ನಾಡಿಮಿಡಿತ ನನಗೆ ಗೊತ್ತು.. ಡಾ.ಮಂಜುನಾಥ್‌ ಮಿಡಿತ ಬೇಕಾಗಿಲ್ಲ: ಡಿ.ಕೆ.ಸುರೇಶ್‌

  • ವಾರಣಾಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ

    ವಾರಣಾಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಧ್ರ ಅವರು ಲೋಕಸಮರದಲ್ಲಿ ವಾರಣಾಸಿ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿಲ್ಲ.

    ಅಯೋಧ್ಯೆಯಲ್ಲಿ ಪ್ರಚಾರದ ವೇಳೆ ಕಾಂಗ್ರೆಸ್ ನನಗೆ ಟಿಕೆಟ್ ನೀಡಿದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನನ್ನ ಸಹೋದರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನನಗೆ ವಾರಣಾಸಿಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದರೆ ನನಗೆ ಖುಷಿಯಾಗುತ್ತೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದರು. ಹೀಗಾಗಿ ವಾರಣಾಸಿಯಲ್ಲಿ ಪ್ರಿಯಾಂಕಾ ಸ್ಪರ್ಧಿಸುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಈಗ ಈ ಎಲ್ಲ ಸುದ್ದಿಗಳಿಗೆ ತೆರೆ ಬಿದ್ದಿದ್ದು, ಕಳೆದ ಬಾರಿ ಮೋದಿ ವಿರುದ್ಧ ಸ್ಪರ್ಧಿಸಿದ್ದ ಅಜಯ್ ರಾಯ್ ಅವರಿಗೆ ಪಕ್ಷ ಈ ಬಾರಿಯೂ ಟಿಕೆಟ್ ನೀಡಿದೆ.

    ಕಳೆದ ವಾರ ರಾಹುಲ್ ಗಾಂಧಿಗೆ ನಿಮ್ಮ ಸಹೋದರಿಯನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಸುವ ಯೋಚನೆ ಇದೆಯೇ ಎಂದು ಮಾಧ್ಯಮಗಳು ಪ್ರಶ್ನಿಸಿದ್ದಾಗ, ಈ ಬಗ್ಗೆ ನಾನು ಏನು ಹೇಳುವುದಿಲ್ಲ. ಈ ವಿಷಯವನ್ನು ನಾನು ಸಸ್ಪೆನ್ಸ್ ಆಗಿ ಇಡುತ್ತೇನೆ. ಪ್ರತಿ ಬಾರಿಯೂ ಸಸ್ಪೆನ್ಸ್ ಕೆಟ್ಟದಾಗಿರಲ್ಲ ಎಂದಿದ್ದರು.

    2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ 371,784 ಮತಗಳ ಅಂತರದಿಂದ ಗೆದ್ದಿದ್ದರು. ಮೋದಿ 5,81,022 ಮತಗಳನ್ನು ಪಡೆದರೆ ಆಪ್ ಮುಖ್ಯಸ್ಥ ಕೇಜ್ರಿವಾಲ್ 2,09,238, ಅಜಯ್ ರಾಯ್ 75,614 ಮತಗಳನ್ನು ಪಡೆದಿದ್ದರು. ಒಟ್ಟು 10,30,685 ಮಂದಿ ಮತವನ್ನು ಚಲಾವಣೆ ಮಾಡಿದ್ದರು.