Tag: ಅಜಯ್ ರಾವ್

  • ಕಿಚ್ಚ ಸುದೀಪ್ ಕಂಠಸಿರಿಯಲ್ಲಿ ‘ಕೃಷ್ಣ ಟಾಕೀಸ್’ ಹಾಡು

    ಕಿಚ್ಚ ಸುದೀಪ್ ಕಂಠಸಿರಿಯಲ್ಲಿ ‘ಕೃಷ್ಣ ಟಾಕೀಸ್’ ಹಾಡು

    ಬೆಂಗಳೂರು: ಗೋಕುಲ ಎಂಟರ್ ಟೈನರ್ ಲಾಂಛನದಲ್ಲಿ ಗೋವಿಂದರಾಜು ಎ.ಹೆಚ್ ಅವರು ನಿರ್ಮಿಸುತ್ತಿರುವ ಹಾಗೂ ಅಜಯ್ ರಾವ್ ನಾಯಕರಾಗಿ ನಟಿಸುತ್ತಿರುವ ‘ಕೃಷ್ಣ ಟಾಕೀಸ್` ಚಿತ್ರಕ್ಕಾಗಿ ಅಭಿಷೇಕ್ ಹಾಗೂ ಪ್ರಮೋದ್ ಮರವಂತೆ ಅವರು ಬರೆದಿರುವ ‘ನೈಟಿ ಮಾತ್ರ ಹಾಕೋಬೇಡ ಮೇನಕ, ನಮಗೆ ನೈಂಟಿ ಹೊಡದಂಗೆ ಆಗ್ತದೆ ಜೀವಕ್ಕ` ಎಂಬ ಹಾಡಿನ ಟ್ರ್ಯಾಕ್ ಕೇಳಿರುವ ಕಿಚ್ಚ ಸುದೀಪ್ ಈ ಹಾಡನ್ನು ತಾವೇ ಹಾಡುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ. ಸದ್ಯದಲ್ಲೇ ಈ ಹಾಡನ್ನು ಹಾಡಲಿದ್ದಾರೆ.

    ವಿಜಯಾನಂದ್ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. 20 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಿಗೆ ಸಂಭಾಷಣೆ ಬರೆದು, ಗೀತರಚನೆ ಮಾಡಿರುವ ಆನಂದ ಪ್ರಿಯ ಈ ಚಿತ್ರದ ಮೂಲಕ ತಮ್ಮ ಹೆಸರನ್ನು ವಿಜಯಾನಂದ್ ಎಂದು ಬದಲಾವಣೆ ಮಾಡಿಕೊಂಡಿದ್ದಾರೆ.


    ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಅಭಿಷೇಕ್ ಜಿ ಕಾಸರಗೋಡು ಅವರ ಛಾಯಾಗ್ರಹಣವಿದೆ. ಶ್ರೀಕಾಂತ್ ಸಂಕಲನ, ಮದನ್ – ಹರಿಣಿ, ಭೂಷಣ್ ನೃತ್ಯ ನಿರ್ದೇಶನ, ವಿಕ್ರಂ ಸಾಹಸ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಅಜಯ್ ರಾವ್, ಅಪೂರ್ವ, ಚಿಕ್ಕಣ್ಣ, ಸಿಂಧೂ ಲೋಕನಾಥ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತೂಮಿನಾಡು, ಶೋಭ್‍ರಾಜ್, ಮಂಡ್ಯ ರಮೇಶ್, ನಿರಂತ್, ಯಶ್ ಶೆಟ್ಟಿ, ಉಮೇಶ್, ಶ್ರೀನಿವಾಸ ಪ್ರಭು, ಶಾಂಭವಿ, ಲಕ್ಷ್ಮೀಗೌಡ, ಯಮುನ, ಧರ್ಮೇಂದ್ರ ಅರಸ್ ಮುಂತಾದವರಿದ್ದಾರೆ. ಲಾಸ್ಯ ನಾಗರಾಜ್ ಅತಿಥಿಪಾತ್ರದಲ್ಲಿ ಅಭಿನಯಿಸಿದ್ದಾರೆ.

  • ಇಬ್ಬರು ಮಕ್ಕಳ ಫೋಟೋ ಹಂಚಿಕೊಂಡ ರಾಧಿಕಾ

    ಇಬ್ಬರು ಮಕ್ಕಳ ಫೋಟೋ ಹಂಚಿಕೊಂಡ ರಾಧಿಕಾ

    -ಸಿಂಹಿಣಿಯಂತೆ ಗರ್ಜಿಸಿದ ಅಜಯ್ ಪುತ್ರಿ

    ಬೆಂಗಳೂರು: ಇಂದು ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಸ್ಯಾಂಡಲ್‍ವುಡ್ ಕಲಾವಿದರು ತಮ್ಮ ಮಕ್ಕಳ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗೆಯೇ ನಟಿ ರಾಧಿಕಾ ಪಂಡಿತ್ ಹಾಗೂ ನಟ ಅಜಯ್ ರಾವ್ ತಮ್ಮ ಮುದ್ದು ಮಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಮಕ್ಕಳ ದಿನಾಚರಣೆ ವಿಶೇಷವಾಗಿ ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾದಲ್ಲಿ ವಿಶೇಷ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಶುಭಕೋರಿದ್ದಾರೆ. ಈ ಫೋಟೋದಲ್ಲಿ ಕಾಣುವ ಇಬ್ಬರು ನನ್ನ ಮೊದಲ ಮಕ್ಕಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ನಟ ಯಶ್ ತಮ್ಮ ಪುತ್ರಿ ಐರಾ ಜೊತೆ ಆಟವಾಡುತ್ತಿದ್ದಾರೆ.

     

    View this post on Instagram

     

    Happy children’s day to all.. ???? Featuring in the pic are my first two kids!! ???? #radhikapandit #nimmaRP

    A post shared by Radhika Pandit (@iamradhikapandit) on

    ಇತ್ತ ಕೃಷ್ಣ ಅಜಯ್ ರಾವ್ ಅವರು ಕೂಡ ತಮ್ಮ ಮಗಳು ಸಿಂಹಿಣಿಯಂತೆ ಗರ್ಜಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ ಅಜಯ್ ಅದಕ್ಕೆ, “ಚೆರಿಷ್ಮಾ. ಈ ಭೂಮಿಯ ಮುದ್ದಾದ ಸಿಂಹಿಣಿ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಹಲವು ಕಲಾವಿದರು ತಮ್ಮ ಬಾಲ್ಯದ ಫೋಟೋಗಳನ್ನು ಹಂಚಿಕೊಂಡು ಮಕ್ಕಳ ದಿನಾಚರಣೆಯ ಶುಭ ಕೋರಿದ್ದಾರೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಕೂಡ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಮಕ್ಕಳ ನಗು ಅತ್ಯಂತ ಸುಂದರ ಧ್ವನಿ ಎಂದು ಬರೆದುಕೊಂಡಿದ್ದಾರೆ. ಇತ್ತ ನಟಿ ಸಂಯುಕ್ತ ಹೊರನಾಡು ಅವರು ಮಕ್ಕಳೊಂದಿಗೆ ಸಂತಸದಿಂದಿರುವ ವಿಡಿಯೋವನ್ನು ಇನ್‍ಸ್ಟಾದಲ್ಲಿ ಹಾಕಿ ಶುಭಕೋರಿದ್ದಾರೆ.

  • ಅಪ್ಪನಿಗೆ ಬಾಸ್ ಆಗಿ ಆರ್ಡರ್ ಮಾಡಿದ ಚೆರಿಷ್ಮಾ

    ಅಪ್ಪನಿಗೆ ಬಾಸ್ ಆಗಿ ಆರ್ಡರ್ ಮಾಡಿದ ಚೆರಿಷ್ಮಾ

    ಬೆಂಗಳೂರು: ಸ್ಯಾಂಡಲ್‍ವುಡ್ ಕೃಷ್ಣ ಎಂದೇ ಖ್ಯಾತರಾಗಿರುವ ಅಜಯ್ ರಾವ್ ತಮ್ಮ ಮಗಳು ಬಾಸ್ ಆಗಿ ಆದೇಶ ನೀಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಅಜಯ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಗಳು ಬಾಸ್ ಆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮಗಳು ಚೆರಿಷ್ಮಾ, ಅಜಯ್ ಅವರ ಕಚೇರಿಯಲ್ಲಿ ಬಾಸ್ ಕುರ್ಚಿಯ ಮೇಲೆ ಕುಳಿತು ತಮ್ಮ ತಂದೆಗೆ ಆದೇಶ ನೀಡುವಂತೆ ಪೋಸ್ ನೀಡಿದ್ದಾರೆ.

    ಈ ಫೋಟೋಗೆ ಅಜಯ್, “ನನ್ನ ಕಚೇರಿಯಲ್ಲಿ ಬಾಸ್ ನನಗೆ ಕೆಲವು ಗಂಭೀರವಾದ ಸೂಚನೆಗಳನ್ನು ನೀಡುತ್ತಿದ್ದಾರೆ. ನಾನು ಅದಕ್ಕೆ ‘ಸರಿ ಬಾಸ್’ ಎಂದು ಉತ್ತರಿಸಿದೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿ ನೆಟ್ಟಿಗರು, ಪುಟಾಣಿ ಬಾಸ್, ಕ್ಯೂಟ್, ಸೂಪರ್ ಬಾಸ್ ಎಂದು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಅಜಯ್ ತಮ್ಮ ಮಗಳ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಚೆರಿಷ್ಮಾಳಿಗೆ ಕೃಷ್ಣನ ಉಡುಪು ಧರಿಸಿ ಫೋಟೋಶೂಟ್ ಮಾಡಿಸಿದ್ದರು. ನಂತರ ಬಸವಣ್ಣಿ, ಭಾರತಾಂಬೆ ಉಡುಪು ಧರಸಿ ಫೋಟೋ ಕ್ಲಿಕ್ಕಿಸಿದ್ದರು. ಇದೀಗ ಚೆರಿಷ್ಮಾ ತನ್ನ ತಂದೆಗೆ ಬಾಸ್ ಆಗಿದ್ದಾರೆ.

    ಅಜಯ್ ಅವರು ಡಿ. 2ರಂದು ತಮ್ಮ ಮಗುವಿಗೆ ಚೆರಿಷ್ಮಾ ಎಂದು ನಾಮಕರಣ ಮಾಡಿದ್ದರು. ಅಜಯ್ ರಾವ್ ಅವರ ಪತ್ನಿ ಸ್ವಪ್ನ ರಾವ್ ನ. 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಅಜಯ್ ರಾವ್ ಅವರು ತಮ್ಮ ಪತ್ನಿ ಸ್ವಪ್ನ ಹಾಗೂ ಪುಟ್ಟ ಕಂದಮ್ಮನ ಜೊತೆ ಸೆಲ್ಫಿ ತೆಗೆದುಕೊಂಡ ಫೋಟೋ ವೈರಲ್ ಆಗಿತ್ತು.

  • ಮಗಳಿಗೆ ಕೃಷ್ಣನ ಉಡುಪು ತೊಡಿಸಿದ ಅಜಯ್ ದಂಪತಿ: ವಿಡಿಯೋ

    ಮಗಳಿಗೆ ಕೃಷ್ಣನ ಉಡುಪು ತೊಡಿಸಿದ ಅಜಯ್ ದಂಪತಿ: ವಿಡಿಯೋ

    ಬೆಂಗಳೂರು: ಸ್ಯಾಂಡಲ್‍ವುಡ್ ಕೃಷ್ಣ ಎಂದೇ ಖ್ಯಾತರಾಗಿರುವ ಅಜಯ್ ರಾವ್ ಅವರು ತಮ್ಮ ಮಗಳು ಚರಿಷ್ಮಾಳಿಗೆ ಕೃಷ್ಣನ ಉಡುಪು ಹಾಕಿದ್ದಾರೆ.

    ಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಯುಕ್ತ ನಟ ಅಜಯ್ ರಾವ್ ಹಾಗೂ ಅವರ ಪತ್ನಿ ಸ್ವಪ್ನ ಅವರು ತಮ್ಮ ಮಗಳಿಗೆ ಕೃಷ್ಣನ ಉಡುಪು ತೋಡಿಸಿ ಫೋಟೋ ಕ್ಲಿಕ್ಕಿಸಿದ್ದಾರೆ. ಬಳಿಕ ಆ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮನಿಗಳಿಗೆ “ಕೃಷ್ಣ ಜನ್ಮಾಷ್ಟಮಿ ಶುಭಾಶಯ” ತಿಳಿಸಿದ್ದಾರೆ.

    ಅಜಯ್ ಹಾಗೂ ಸ್ವಪ್ನ ಅವರು ತಮ್ಮ ಚರಿಷ್ಮಾ ಕೃಷ್ಣನ ಉಡುಪಿನಲ್ಲಿ ಬೆಣ್ಣೆ ತಿನ್ನುತ್ತಿರುವ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಬಳಿಕ ತಮ್ಮ ಮಗಳ ಜೊತೆ ಅಜಯ್ ಅವರು ಕೂಡ ಕೃಷ್ಣನಂತೆ ಪೇಟ ಧರಿಸಿ ಕೊಳಲು ಹಿಡಿದುಕೊಂಡಿದ್ದಾರೆ. ಅಜಯ್ ಹಾಗೂ ಸ್ವಪ್ನ ತಮ್ಮ ಕೃಷ್ಣನ ಕ್ಲಿಕ್ಕಿಸಿಕೊಂಡಿರುವ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

     

    View this post on Instagram

     

    ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಷಯಗಳು????

    A post shared by Krishna Ajai Rao (@krishna_ajai_rao) on

    ಇತ್ತೀಚೆಗೆ ಅಜಯ್ ಅವರ ಪತ್ನಿ ಸ್ವಪ್ನ ರಾವ್ ಅವರು ವರಮಹಾಲಕ್ಷ್ಮಿ ಹಬ್ಬದಂದು ತಮ್ಮ ಮಗಳಿಗೆ ಸಾಂಪ್ರದಾಯಿಕ ಉಡುಪು ಹಾಕಿದ್ದರು. ಅಲ್ಲದೆ ಬ್ಯಾಕ್‍ಗ್ರೌಂಡ್‍ನಲ್ಲಿ ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡು ಹಾಕಿ ಚರಿಷ್ಮಾ ನಡೆದುಕೊಂಡು ಬರುತ್ತಿರುವ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ತಿಳಿಸಿದ್ದರು.

    ಆಗಸ್ಟ್ 5ರಂದು ಸ್ವಪ್ನ ರಾವ್ ಅವರು ತಮ್ಮ ಮಗಳು ಚರಿಷ್ಮಾಗೆ ಬಸವಣ್ಣನಂತೆ ಉಡುಪು ಹಾಕಿ ಫೋಟೋ ಕ್ಲಿಕ್ಕಿಸಿದ್ದರು. ಈ ಫೋಟೋವನ್ನು ಕೂಡ ಅವರು ಇನ್‍ಸ್ಟಾಗ್ರಾಂನಲ್ಲಿ ಹಾಕಿ, “ನಮ್ಮನೆ ಪುಟ್ಟ ಬಸವಣ್ಣ” ಎಂದು ಬರೆದುಕೊಂಡಿದ್ದರು. ಸ್ವಪ್ನ ಅವರ ಈ ಪೋಸ್ಟ್ ಗೆ ಅಭಿಮಾನಿಗಳು ಫಿದಾ ಆಗಿ ಕ್ಯೂಟ್ ಪಿಕ್ ಎಂದು ಕಮೆಂಟ್ ಮಾಡಿದ್ದರು.

     

    View this post on Instagram

     

    All I see magic in you✨????❤

    A post shared by Sapna Rao (@sapnajairao) on

  • ಲಕ್ಷ್ಮಿಯಂತೆ ಎಂಟ್ರಿ ಕೊಟ್ಟ ಅಜಯ್ ರಾವ್ ಪುತ್ರಿ: ವಿಡಿಯೋ ನೋಡಿ

    ಲಕ್ಷ್ಮಿಯಂತೆ ಎಂಟ್ರಿ ಕೊಟ್ಟ ಅಜಯ್ ರಾವ್ ಪುತ್ರಿ: ವಿಡಿಯೋ ನೋಡಿ

    ಬೆಂಗಳೂರು: ಸ್ಯಾಂಡಲ್‍ವುಡ್ ಕೃಷ್ಣ ಎಂದೇ ಖ್ಯಾತರಾಗಿರುವ ನಟ ಅಜಯ್ ರಾವ್ ಅವರ ಪುತ್ರಿ ಚರಿಷ್ಮಾ ಲಕ್ಷ್ಮಿಯಂತೆ ಮನೆಗೆ ಎಂಟ್ರಿ ಕೊಟ್ಟ ವಿಡಿಯೋವೊಂದು ವೈರಲ್ ಆಗುತ್ತಿದೆ.

    ಅಜಯ್ ಅವರ ಪತ್ನಿ ಸ್ವಪ್ನ ರಾವ್ ಅವರು ವರಮಹಾಲಕ್ಷ್ಮಿ ಹಬ್ಬದಂದು ತಮ್ಮ ಮಗಳಿಗೆ ಸಾಂಪ್ರದಾಯಿಕ ಉಡುಪು ಹಾಕಿದ್ದಾರೆ. ಅಲ್ಲದೆ ಬ್ಯಾಕ್‍ಗ್ರೌಂಡ್‍ನಲ್ಲಿ ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡು ಹಾಕಿ ಚರಿಷ್ಮಾ ನಡೆದುಕೊಂಡು ಬರುತ್ತಿರುವ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬದಲ್ಲಿ ಯಶ್ ಮಗಳ ನಗುವಿನ ಮೋಡಿ

    ಸ್ವಪ್ನ ಅವರು ಚರಿಷ್ಮಾ ವಿಡಿಯೋ ಜೊತೆ ಆಕೆಯ ಫೋಟೋ ಹಾಗೂ ಫ್ಯಾಮಿಲಿ ಜೊತೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, “ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

    ಇತ್ತೀಚೆಗೆ ಸ್ವಪ್ನ ರಾವ್ ಅವರು ತಮ್ಮ ಮಗಳು ಚರಿಷ್ಮಾಗೆ ಬಸವಣ್ಣನಂತೆ ಉಡುಪು ಹಾಕಿ ಫೋಟೋ ಕ್ಲಿಕ್ಕಿಸಿದ್ದರು. ಈ ಫೋಟೋವನ್ನು ಕೂಡ ಅವರು ಇನ್‍ಸ್ಟಾಗ್ರಾಂನಲ್ಲಿ ಹಾಕಿ, “ನಮ್ಮನೆ ಪುಟ್ಟ ಬಸವಣ್ಣ” ಎಂದು ಬರೆದುಕೊಂಡಿದ್ದರು. ಸ್ವಪ್ನ ಅವರ ಈ ಪೋಸ್ಟ್ ಗೆ ಅಭಿಮಾನಿಗಳು ಫಿದಾ ಆಗಿ ಕ್ಯೂಟ್ ಪಿಕ್ ಎಂದು ಕಮೆಂಟ್ ಮಾಡಿದ್ದರು.

     

    View this post on Instagram

     

    Nammane putta Basavanna????

    A post shared by Sapna Rao (@sapnajairao) on

    ಅಜಯ್ ಅವರು ಡಿಸೆಂಬರ್ 2ರಂದು ತಮ್ಮ ಮುದ್ದಾದ ಹೆಣ್ಣು ಮಗುವಿಗೆ `ಚೆರಿಷ್ಮಾ’ ಎಂದು ನಾಮಕರಣ ಮಾಡಿದ್ದರು. ಅಜಯ್ ರಾವ್ ಅವರ ಪತ್ನಿ ಸ್ವಪ್ನ ರಾವ್ ನ. 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಅಜಯ್ ರಾವ್ ಅವರು ತಮ್ಮ ಪತ್ನಿ ಸ್ವಪ್ನ ಹಾಗೂ ಪುಟ್ಟ ಕಂದಮ್ಮನ ಜೊತೆ ಸೆಲ್ಫಿ ತೆಗೆದುಕೊಂಡ ಫೋಟೋ ವೈರಲ್ ಆಗಿತ್ತು.

  • ಮನೆಯ ಪುಟ್ಟ ಬಸವಣ್ಣನನ್ನು ಪರಿಚಯಿಸಿದ ಅಜಯ್ ಪತ್ನಿ

    ಮನೆಯ ಪುಟ್ಟ ಬಸವಣ್ಣನನ್ನು ಪರಿಚಯಿಸಿದ ಅಜಯ್ ಪತ್ನಿ

    ಬೆಂಗಳೂರು: ಸ್ಯಾಂಡಲ್‍ವುಡ್ ಕೃಷ್ಣ ಅಜಯ್ ರಾವ್ ಅವರ ಪತ್ನಿ ತಮ್ಮ ಮಗಳಿಗೆ ಬಸವಣ್ಣನಂತೆ ಉಡುಪು ಹಾಕಿ ಫೋಟೋ ಕ್ಲಿಕ್ಕಿಸಿದ್ದಾರೆ.

    ಅಜಯ್ ರಾವ್ ಅವರ ಪತ್ನಿ ಸ್ವಪ್ನ ರಾವ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಮಗಳು ಚರಿಷ್ಮಾಳ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ನಮ್ಮನೆ ಪುಟ್ಟ ಬಸವಣ್ಣ” ಎಂದು ಬರೆದುಕೊಂಡಿದ್ದಾರೆ. ಸ್ವಪ್ನ ಅವರ ಈ ಪೋಸ್ಟ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲದೆ ಕ್ಯೂಟ್ ಪಿಕ್ ಎಂದು ಹೇಳುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

     

    View this post on Instagram

     

    Nammane putta Basavanna????

    A post shared by Sapna Rao (@sapnajairao) on

    ಅಜಯ್ ಅವರು ಡಿಸೆಂಬರ್ 2ರಂದು ತಮ್ಮ ಮುದ್ದಾದ ಹೆಣ್ಣು ಮಗುವಿಗೆ `ಚೆರಿಷ್ಮಾ’ ಎಂದು ನಾಮಕರಣ ಮಾಡಿದ್ದರು. ಅಜಯ್ ರಾವ್ ಅವರ ಪತ್ನಿ ಸ್ವಪ್ನ ರಾವ್ ನ. 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಅಜಯ್ ರಾವ್ ಅವರು ತಮ್ಮ ಪತ್ನಿ ಸ್ವಪ್ನ ಹಾಗೂ ಪುಟ್ಟ ಕಂದಮ್ಮನ ಜೊತೆ ಸೆಲ್ಫಿ ತೆಗೆದುಕೊಂಡ ಫೋಟೋ ವೈರಲ್ ಆಗಿತ್ತು.

    ಮೇ 28ರಂದು ಅಜಯ್ ಅವರ ಪತ್ನಿ ಸ್ವಪ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಸ್ವಪ್ನ ಅವರ ಹುಟ್ಟುಹಬ್ಬಕ್ಕೆ ಅಜಯ್ ತಮ್ಮ ಫೇಸ್‍ಬುಕ್‍ನಲ್ಲಿ ಪತ್ನಿಗೆ ಶುಭಾಶಯ ತಿಳಿಸಿದ್ದರು. ಅಲ್ಲದೆ ಪತ್ನಿ ಜೊತೆ ಇರುವ ಮಗಳ ಫೋಟೋವನ್ನು ಕೂಡ ಹಂಚಿಕೊಂಡಿದ್ದರು.

    ಅಜಯ್ ರಾವ್ ಡಿಸೆಂಬರ್ 14, 2014ರಂದು ಸ್ವಪ್ನ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸ್ವಪ್ನ ಅವರು ಎಂಜಿನಿಯರ್ ಪದವಿ ಪಡೆದಿದ್ದು, ಅಜಯ್ ಅವರದ್ದು ಲವ್ ಕಮ್ ಅರೆಂಜ್ ಮ್ಯಾರೇಜ್. ಅಜಯ್ ಆಡಂಭರ ಇಲ್ಲದೆ ತುಂಬಾ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  • ಪತ್ನಿಗೆ ವಿಶ್ ಮಾಡಿ ನಟ ಅಜಯ್‍ರಿಂದ ಮಗಳ ಫೋಟೋ ರಿವೀಲ್

    ಪತ್ನಿಗೆ ವಿಶ್ ಮಾಡಿ ನಟ ಅಜಯ್‍ರಿಂದ ಮಗಳ ಫೋಟೋ ರಿವೀಲ್

    ಬೆಂಗಳೂರು: ಸ್ಯಾಂಡಲ್‍ವುಡ್ ಕೃಷ್ಣ ಎಂದೇ ಖ್ಯಾತರಾಗಿರುವ ಅಜಯ್ ರಾವ್ ತಮ್ಮ ಪತ್ನಿಯ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಮಗಳ ಫೋಟೋವನ್ನು ರಿವೀಲ್ ಮಾಡಿದ್ದಾರೆ.

    ಮಂಗಳವಾರ ಅಜಯ್ ಅವರ ಪತ್ನಿ ಸ್ವಪ್ನಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹಾಗಾಗಿ ನಟ ಅಜಯ್ ತಮ್ಮ ಫೇಸ್‍ಬುಕ್‍ನಲ್ಲಿ ಪತ್ನಿಗೆ ಶುಭಾಶಯ ತಿಳಿಸಿದ್ದಾರೆ. ಅಲ್ಲದೆ ಪತ್ನಿ ಜೊತೆ ಇರುವ ಮಗಳ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.

    ಅಜಯ್ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಹಾಕಿ ಅದಕ್ಕೆ, ಹುಟ್ಟುಹಬ್ಬದ ಶುಭಾಶಯಗಳು ಸ್ವಪ್ನಾ ಮುಂಬರುವ ವರ್ಷದಲ್ಲಿ ನಿನಗೆ ಖುಷಿ ಸಿಗಲಿ. ಈ ದಿನದಂದು ನಾನು ನನ್ನ ಮಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸುತ್ತಿದ್ದೇನೆ” ಎಂದು ಬರೆದು ಪೋಸ್ಟ್ ಹಾಕಿದ್ದಾರೆ.

    ಅಜಯ್ ಮಗಳ ಫೋಟೋ ನೋಡಿ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಜಯ್ ಅವರ ಪತ್ನಿ ಸ್ವಪ್ನಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಕಮೆಂಟ್ ಮಾಡಿದ್ದಾರೆ.

    ಅಜಯ್ ಡಿ. 2ರಂದು ತಮ್ಮ ಮುದ್ದಾದ ಹೆಣ್ಣು ಮಗುವಿಗೆ `ಚೆರಿಷ್ಮಾ’ ಎಂದು ನಾಮಕರಣ ಮಾಡಿದ್ದರು. ಅಜಯ್ ರಾವ್ ಅವರ ಪತ್ನಿ ಸ್ವಪ್ನಾ ರಾವ್ ನ. 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಅಜಯ್ ರಾವ್ ಅವರು ತಮ್ಮ ಪತ್ನಿ ಸ್ವಪ್ನಾ ಹಾಗೂ ಪುಟ್ಟ ಕಂದಮ್ಮನ ಜೊತೆ ಸೆಲ್ಫಿ ತೆಗೆದುಕೊಂಡ ಫೋಟೋ ವೈರಲ್ ಆಗಿತ್ತು.

    ಅಜಯ್ ರಾವ್ ಡಿ. 14, 2014ರಂದು ಸ್ವಪ್ನ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸ್ವಪ್ನಾ ಅವರು ಎಂಜಿನಿಯರ್ ಪದವಿ ಪಡೆದಿದ್ದು, ಅಜಯ್ ಅವರದ್ದು ಲವ್ ಕಮ್ ಅರೆಂಜ್ ಮ್ಯಾರೇಜ್. ಆಡಂಭರ ಇಲ್ಲದೆ ತುಂಬಾ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  • ಹುಟ್ಟುಹಬ್ಬದಂದೇ ಅಜಯ್ ರಾವ್ ವಿರುದ್ಧ ಆಕ್ರೋಶ..!

    ಹುಟ್ಟುಹಬ್ಬದಂದೇ ಅಜಯ್ ರಾವ್ ವಿರುದ್ಧ ಆಕ್ರೋಶ..!

    ಬೆಂಗಳೂರು: ಹುಟ್ಟುಹಬ್ಬದ ದಿನವೇ ಸ್ಯಾಂಡಲ್‍ವುಡ್ ನಟ ಅಜಯರಾವ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

    ಪೊಲೀಸ್ ಅಧಿಕಾರಿಯಾಗಿ ಬರೀ ಮೈಯಲ್ಲಿ ಶ್ರೀಕೃಷ್ಣನ ಅವತಾರದಲ್ಲಿರುವ ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಜಯ್ ಪೋಸ್ಟ್ ಮಾಡಿದ್ದರು. ಇದನ್ನು ಗಮನಿಸಿದ ಜಾಲತಾಣಿಗರು ನಟನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಸಿಟಿಗಾಗಿ ದೇವರನ್ನು ಅವಹೇಳನಕಾರಿ ಬಳಕೆ ಮಾಡಿ, ಶ್ರೀಕೃಷ್ಣನಿಗೆ ಅವಮಾನ ಮಾಡಲಾಗ್ತಿದೆ. ಕೂಡಲೇ ಸಾಮಾಜಿಕ ಜಾಲತಾಣದಿಂದ ಪೋಸ್ಟರ್ ಡಿಲೀಟ್ ಮಾಡುವಂತೆ ತಾಕೀತು ಮಾಡಲಾಗಿದೆ. ಇದನ್ನೂ ಓದಿ:

    ಪೋಸ್ಟರ್ ಏನು..?
    ಹುಟ್ಟುಹಬ್ಬದ ಸಂದರ್ಭದಲ್ಲಿರದ್ದ ಅಜಯ್ ರಾವ್ ಗೆ ಉಡುಗೊರೆ ಎಂಬಂತೆ ಗುರು ದೇಶ್ ಪಾಂಡೆ ಪ್ರೊಡಕ್ಷನ್ ನಿಂದ ನಿರ್ಮಾಣವಾಗಲಿರುವ 27ನೇ ಹೊಸ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿತ್ತು. ಜಿ ಸಿನಿಮಾ ಸಂಸ್ಥೆಯಿಂದ ಅಜಯ್ ಅವರ 27ನೇ ಸಿನಿಮಾ ತಯಾರಾಗುತ್ತಿದ್ದು, ಹುಟ್ಟುಹಬ್ಬದ ದಿನವೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಹಾರೈಸಿದೆ. ಈ ಪೋಸ್ಟರ್ ಅನ್ನು ಅಜಯ್ ತಮ್ಮ ಸಾಮಾಜಿಕ ಮಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.

    ಗುರು ದೇಶ್ ಪಾಂಡೆ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ. ರಾಜವರ್ಧನ್ ಶಂಕರ್ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಕಥೆ, ಚಿತ್ರಕಥೆ ಗುರು ದೇಶಪಾಂಡೆ, ಜಡೇಶ್ ಕುಮಾರ್ ಮತ್ತು ರಾಜವರ್ಧನ್ ಶಂಕರ್ ಅವರದ್ದಾಗಿದೆ. ಅಜಯ್ ಸಿನಿಮಾಕ್ಕೆ ಆರೂರ್ ಸುಧಾಕರ್ ಶೆಟ್ಟಿ ಸಿನಿಮಾಟೋಗ್ರಾಫರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದೆ.


    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗಳ ನಾಮಕರಣವನ್ನು ನೆರವೇರಿಸಿದ ನಟ ಅಜಯ್ ರಾವ್

    ಮಗಳ ನಾಮಕರಣವನ್ನು ನೆರವೇರಿಸಿದ ನಟ ಅಜಯ್ ರಾವ್

    ಬೆಂಗಳೂರು: ಸ್ಯಾಂಡಲ್‍ವುಡ್ ಕೃಷ್ಣ ಎಂದೇ ಖ್ಯಾತರಾಗಿರುವ ಅಜಯ್ ರಾವ್ ಅವರು ಇತ್ತೀಚೆಗೆ ಹೆಣ್ಣು ಮಗುವಿಗೆ ತಂದೆಯಾಗಿದ್ದು, ಈಗ ಅವರು ತಮ್ಮ ಮಗಳ ನಾಮಕರಣವನ್ನು ಮಾಡಿದ್ದಾರೆ.

    ತಮ್ಮ ಮುದ್ದಾದ ಹೆಣ್ಣು ಮಗುವಿಗೆ ‘ಚೆರಿಷ್ಮಾ’ ಎಂದು ಅಜಯ್ ರಾವ್ ದಂಪತಿ ನಾಮಕರಣ ಮಾಡಿದ್ದಾರೆ. ತಮ್ಮ ಮಗಳ ನಾಮಕರಣ ಕಾರ್ಯಕ್ರಮದ ಫೋಟೋವನ್ನು ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, “ನಾವು ಡಿ. 2ರಂದು ಅವಳಿಗೆ ಚೆರಿಷ್ಮಾ ಎಂದು ನಾಮಕರಣ ಮಾಡಿದ್ದೇವೆ. ಪೂರ್ತಿ ಹೆಸರು ಚೆರಿಷ್ಮಾ ಅಜಯ್ ರಾವ್” ಎಂದು ಟ್ವೀಟ್ ಮಾಡಿದ್ದಾರೆ.

    ಚೆರಿಷ್ಮಾ ಎಂದರೆ ಕಳೆ ಎಂಬರ್ಥ. ಅಜಯ್ ರಾವ್ ಅವರ ಪತ್ನಿ ಸ್ವಪ್ನ ರಾವ್ ನ. 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈ ವೇಳೆ ಅಜಯ್ ರಾವ್ ಅವರು ತಮ್ಮ ಪತ್ನಿ ಸ್ವಪ್ನ ಹಾಗೂ ಪುಟ್ಟ ಕಂದಮ್ಮನ ಜೊತೆ ಸೆಲ್ಫೀ ತೆಗೆದುಕೊಂಡ ಫೋಟೋವೊಂದು ವೈರಲ್ ಆಗಿತ್ತು.

    ಅಜಯ್ ರಾವ್ ಡಿ. 14, 2014ರಂದು ಸ್ವಪ್ನ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸ್ವಪ್ನ ಅವರು ಎಂಜಿನಿಯರ್ ಆಗಿದ್ದು, ಅಜಯ್ ಅವರದ್ದು ಲವ್ ಕಮ್ ಆರೆಂಜ್ ಮ್ಯಾರೇಜ್. ಆಡಂಭರ ಇಲ್ಲದೇ ತುಂಬಾ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಂದೆಯಾದ ಖುಷಿಯಲ್ಲಿ ನಟ ಅಜಯ್ ರಾವ್

    ತಂದೆಯಾದ ಖುಷಿಯಲ್ಲಿ ನಟ ಅಜಯ್ ರಾವ್

    ಬೆಂಗಳೂರು: ಸ್ಯಾಂಡಲ್‍ವುಡ್ ಕೃಷ್ಣ ಎಂದೇ ಖ್ಯಾತರಾಗಿರುವ ಅಜಯ್ ರಾವ್ ಇಂದು ಹೆಣ್ಣು ಮಗುವಿಗೆ ತಂದೆಯಾದ ಸಂತಸದಲ್ಲಿದ್ದಾರೆ.

    ಅಜಯ್ ರಾವ್ ಅವರ ಪತ್ನಿ ಸ್ವಪ್ನ ರಾವ್ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಅಜಯ್ ರಾವ್ ಅವರು ತಮ್ಮ ಪತ್ನಿ ಸ್ವಪ್ನ ಹಾಗೂ ಪುಟ್ಟ ಕಂದಮ್ಮನ ಜೊತೆ ಸೆಲ್ಫೀ ತೆಗೆದುಕೊಂಡ ಫೋಟೋವೊಂದು ವೈರಲ್ ಆಗುತ್ತಿದೆ.

    ಅಜಯ್ ಈ ಹಿಂದೆ ಗಣೇಶ ಚತುರ್ಥಿ ಹಬ್ಬದಂದು ತಮ್ಮ ಫೇಸ್‍ಬುಕ್‍ನಲ್ಲಿ ತಮ್ಮ ಪತ್ನಿ ಸ್ವಪ್ನ ಅವರು ಬಿಡಿಸಿದ ಗಣೇಶ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋದಲ್ಲಿ ಸ್ವಪ್ನ ಅವರು ಗರ್ಭಿಣಿಯಾದ ಸಂತಸದಲ್ಲಿದ್ದರು.

    ಅಜಯ್ ರಾವ್ ಡಿ. 14, 2014ರಂದು ಸ್ವಪ್ನ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸ್ವಪ್ನ ಅವರು ಎಂಜಿನಿಯರ್ ಆಗಿದ್ದು, ಅಜಯ್ ಅವರದ್ದು ಲವ್ ಕಮ್ ಆರೆಂಜ್ ಮ್ಯಾರೇಜ್ ಎಂದು ಹೇಳಲಾಗುತ್ತಿದೆ.

    ಅಜಯ್ ರಾವ್ ಆಡಂಭರ ಇಲ್ಲದೇ ತುಂಬಾ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಈಗ ಅವರು ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಈ ಸುದ್ದಿ ಕೇಳಿ ಅಜಯ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭಾಶಯ ತಿಳಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv