Tag: ಅಜಯ್ ರಾವ್

  • ಹೈಟೆನ್ಷನ್ ವೈರ್ ತಗುಲಿದ್ದರಿಂದ ಫೈಟರ್ ಸಾವಾಯ್ತು: ನಟ ಅಜಯ್ ರಾವ್

    ಹೈಟೆನ್ಷನ್ ವೈರ್ ತಗುಲಿದ್ದರಿಂದ ಫೈಟರ್ ಸಾವಾಯ್ತು: ನಟ ಅಜಯ್ ರಾವ್

    – ಹೈಟೆನ್ಷನ್ ವೈರ್ ಇರೋದು ಫೈಟರ್ ಮಾಸ್ಟರ್​​​ಗೆ ಗೊತ್ತಿರಬೇಕಿತ್ತು

    ಬೆಂಗಳೂರು: ಹೈಟೆನ್ಷನ್ ವೈರ್ ತಗುಲಿದ್ದರಿಂದ ಫೈಟರ್ ಸಾವಾಯ್ತು. ಸಾಹಸ ದೃಶ್ಯಗಳ ಚಿತ್ರೀಕರಣ ಮಾಡುವಾಗ ಫೈಟ್ ಮಾಸ್ಟರ್ ವಿನೋದ್ ಗಮನಿಸಬೇಕಿತ್ತು. ಈ ಮೊದಲು ಅಲ್ಲಿ ಹೈಟೆನ್ಷನ್ ವೈರ್ ಇದ್ದಿದ್ದರಿಂದ ನಾನು ಆ ದೃಶ್ಯ ಮಾಡಲ್ಲ ಅಂತ ಹೇಳಿದ್ದೆ ಎಂದು ಲವ್ ಯು ರಚ್ಚು ಸಿನಿಮಾದ ನಾಯಕ ನಟ ಅಜಯ್ ರಾವ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಜಯ್ ರಾವ್, ಅಲ್ಲಿ ನನ್ನ ಸೀನ್ ಇರದ ಕಾರಣ ದೂರದಲ್ಲಿ ಕುಳಿತಿದ್ದೆ. ಇದ್ದಕ್ಕಿದ್ದಂತೆ ಶಾರ್ಟ್ ಸಕ್ರ್ಯೂಟ್ ರೀತಿಯಲ್ಲಿ ಸೌಂಡ್ ಕೇಳಿಸಿದಾಗ, ನನ್ನ ಹುಡುಗರು ಬಂದು ವಿಷಯ ಹೇಳಿದರು. ಕಳೆದ ಐದು ದಿನಗಳಿಂದ ಈಗಲ್ ಟನ್ ಬಳಿಯಲ್ಲಿ ಸಾಹಸ ಚಿತ್ರೀಕರಣ ನಡೆಯುತ್ತಿತ್ತು. ಕೋವಿಡ್ ಸಂದರ್ಭದಲ್ಲಿ ಚಿತ್ರೀಕರಣ ನಡೆಸೋದು ಕಷ್ಟದ ಕೆಲಸ. ನಮ್ಮ ಟೀಂ ನಿರ್ಮಿಸಿದ ವಾಟರ್ ಟ್ಯಾಂಕ್ ಬಳಿ ಫೈಟ್ ಸೀನ್ ಇತ್ತು. ಆದ್ರೆ ನಾನು ಬೇಡ ಅಂತ ಹೇಳಿದ್ದಕ್ಕೆ ಅಜಯ್ ಎಲ್ಲದಕ್ಕೂ ಹಿಂದೇಟು ಹಾಕ್ತಾರೆ ಅನ್ನೋ ಮಾತುಗಳು ಕೇಳಿ ಬಂದವು ಎಂದು ಬೇಸರದ ಮಾತುಗಳನ್ನಾಡಿದರು.

    ಒಬ್ಬ ಹುಡುಗ ಹೈಟೆನ್ಷನ್ ವೈರ್ ಬಳಿಯಲ್ಲಿದ್ದನಾ ಅಥವಾ ರೂಪ್ ಎಳೆಯುತ್ತಿದ್ದನಾ ಅಂತ ಸ್ಪಷ್ಟವಾಗಿ ಗೊತ್ತಿಲ್ಲ. ಮತ್ತೋರ್ವ ಹುಡುಗ ಬಿದ್ದು ಗಾಯಗೊಂಡಿದ್ದು ಮಾತ್ರ ಕಾಣಿಸಿತು. ಸದ್ಯ ಆ ಹುಡುಗ ಹುಷಾರಾಗಿದ್ದಾನೆ. ಅಷ್ಟರಲ್ಲಿ ಫೈಟರ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈಗಲೂ ಕೂಡ ನನ್ನ ಕೈಕಾಲು ನಡಗುತ್ತಿದೆ. ಇದಾದ ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಫೈಟ್ ಮಾಸ್ಟರ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ನನ್ನಿಂದ ಏನಾದ್ರೂ ಸಹಾಯ ಬೇಕಾದ್ರೆ ಬರುತ್ತೇನೆ ಎಂದು ಹೇಳಿ ಮನೆಗೆ ಬಂದಿದ್ದೇನೆ ಎಂದು ತಿಳಿಸಿದರು.

    ಏನಿದು ಘಟನೆ?:
    ಬಿಡದಿಯ ಈಗಲ್‍ಟನ್ ರೆಸಾರ್ಟ್ ಬಳಿಯಲ್ಲಿ ಅಜಯ್ ರಾವ್ ಮತ್ತು ರಚಿತಾ ರಾಮ್ ಅಭಿನಯಿಸುತ್ತಿರುವ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಫೈಟ್ ಮಾಸ್ಟರ್ ವಿನೋದ್ ಸಾಹಸ ನಿರ್ದೇಶನದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರಕ್ಕೆ ಗುರುದೇಶಪಾಂಡೆ ನಿರ್ಮಾಣವಿದೆ. ಇಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಹೈಟೆನ್ಷನ್ ವೈರ್ ತಗುಲಿ 35 ವರ್ಷದ ವಿವೇಕ್ ಎಂಬವವರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

  • ‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ದುರಂತ – ಹೈಟೆನ್ಷನ್ ವೈರ್ ತಗುಲಿ ಫೈಟರ್ ಸಾವು

    ‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ದುರಂತ – ಹೈಟೆನ್ಷನ್ ವೈರ್ ತಗುಲಿ ಫೈಟರ್ ಸಾವು

    – ಅಜಯ್ ರಾವ್, ರಚಿತಾ ರಾಮ್ ಅಭಿನಯದ ಚಿತ್ರ

    ಬೆಂಗಳೂರು: ಲವ್ ಯು ರಚ್ಚು ಸಿನಿಮಾ ಶೂಟಿಂಗ್ ವೇಳೆ ದುರಂತ ಸಂಭವಿಸಿದ್ದು, ಹೈಟೆನ್ಷನ್ ವೈರ್ ತಗುಲಿ ಫೈಟರ್ ಸಾವನ್ನಪ್ಪಿದ್ದಾರೆ.

    35 ವರ್ಷದ ವಿವೇಕ್ ಮೃತ ಫೈಟರ್. ಬಿಡದಿಯ ಈಗಲ್‍ಟನ್ ರೆಸಾರ್ಟ್ ಬಳಿಯಲ್ಲಿ ಅಜಯ್ ರಾವ್ ಮತ್ತು ರಚಿತಾ ರಾಮ್ ಅಭಿನಯಿಸುತ್ತಿರುವ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಫೈಟ್ ಮಾಸ್ಟರ್ ವಿನೋದ್ ಸಾಹಸ ನಿರ್ದೇಶನದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರಕ್ಕೆ ಗುರುದೇಶಪಾಂಡೆ ನಿರ್ಮಾಣವಿದೆ.

    ಕಳೆದ ಐದು ದಿನಗಳಿಂದ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರೀಕರಣದ ವೇಳೆ ಮುಂಜಾಗ್ರತ ಕ್ರಮಗಳ ತೆಗೆದುಕೊಂಡಿದ್ರಾ ಅಥವಾ ಇಲ್ಲವಾ ಎಂಬುದರ ಮಾಹಿತಿ ಲಭ್ಯವಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಫೈಟ್ ಮಾಸ್ಟರ್ ವಿನೋದ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • ಸ್ಪೆಷಲ್ ಕೇಕ್ ಚಪ್ಪರಿಸಿ ತಿಂದು ಅಜಯ್ ಪತ್ನಿಗೆ ರಚಿತಾ ಧನ್ಯವಾದ

    ಸ್ಪೆಷಲ್ ಕೇಕ್ ಚಪ್ಪರಿಸಿ ತಿಂದು ಅಜಯ್ ಪತ್ನಿಗೆ ರಚಿತಾ ಧನ್ಯವಾದ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಚಿತಾ ರಾಮ್‍ಗಾಗಿ ನಟರೊಬ್ಬರು ತಮ್ಮ ಪತ್ನಿಯ ಕೈಯಾರೆ ಕೇಕ್ ಮಾಡಿ ಕೊಟ್ಟಿದ್ದಾರೆ. ಈ ಕೇಕ್ ಅನ್ನು ರಚಿತಾ ನಾಲಿಗೆ ಚಪ್ಪರಿಸಿ ತಿಂದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗುತ್ತಿದೆ.

     

    View this post on Instagram

     

    A post shared by Rachita Ram (@rachita_instaofficial)

    ಹೌದು. ಈ ಕೇಕ್ ಅನ್ನು ಅಜಯ್ ರಾವ್ ಪತ್ನಿ ಸ್ವಪ್ನಾ ರಾವ್ ತಯಾರಿಸಿದ್ದಾರೆ. ರಚಿತಾ ಅವರು ವೀಡಿಯೋವನ್ನು ಇನ್ ಸ್ಟಾ ದಲ್ಲಿ ಹಂಚಿಕೊಂಡು, ಬಾಯಲ್ಲಿ ನೀರೂರಿಸುವ ಕೇಕ್ ಕಳುಹಿಸಿದ್ದೀರಾ, ಇದು ತುಂಬಾ ತುಂಬಾ ಚೆನ್ನಾಗಿದೆ ಎಂದು ಹೇಳುತ್ತಾ ನಾಲಿಗೆ ಚಪ್ಪರಿಸಿಕೊಂಡು ತಿನ್ನುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಈ ವರ್ಷದಲ್ಲಿ ದೇಶದಲ್ಲೇ ಮೊದಲು- ಹಕ್ಕಿ ಜ್ವರಕ್ಕೆ 12ರ ಬಾಲಕ ಬಲಿ

     

    View this post on Instagram

     

    A post shared by Rachita Ram (@rachita_instaofficial)

    ‘ಲವ್ ಯೂ ರಚ್ಚು’ ಸಿನಿಮಾದಲ್ಲಿ ರಚಿತಾ ರಾಮ್ ಹಾಗೂ ಅಜಯ್ ರಾವ್ ನಟಿಸುತ್ತಿದ್ದಾರೆ. ಮೊಗ್ಗಿನ ಮನಸ್ಸು ಖ್ಯಾತಿಯ ಶಶಾಂಕ್ ಕಥೆ ಬರೆದಿರುವ ಈ ಸಿನಿಮಾವನ್ನು ಶಂಕರ್ ಎಸ್ ರಾಜ್ ಡೈರೆಕ್ಷನ್ ಮಾಡುತ್ತಿದ್ದಾರೆ. ಇದೇ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಹಾಡೊಂದರ ಚಿತ್ರೀಕರಣದಲ್ಲಿ ಅಜಯ್ ರಾವ್, ರಚಿತಾ ಪಾಲ್ಗೊಂಡಿದ್ದರು. ಈ ವೇಳೆ ಅಜಯ್ ಅವರ ಪತ್ನಿ ಸ್ವಪ್ನಾ ಅವರು ಕಳುಹಿಸಿಕೊಟ್ಟಿರುವ ಸ್ಪೆಷಲ್ ಕೇಕ್ ಅನ್ನು ರಚಿತಾ ಟೇಸ್ಟ್ ಮಾಡಿದ್ದಾರೆ.

  • ನಟ ಅಜಯ್‍ರಾವ್ ಮೇಕಪ್ ಮ್ಯಾನ್ ಕೊರೊನಾಗೆ ಬಲಿ

    ನಟ ಅಜಯ್‍ರಾವ್ ಮೇಕಪ್ ಮ್ಯಾನ್ ಕೊರೊನಾಗೆ ಬಲಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಜಯ್‍ರಾವ್ ಅವರ ಮೇಕಪ್ ಮ್ಯಾನ್ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕನಸಿನ ಸಿನಿಮಾ ತೆರೆಗೆ ಬರೋ ಮುನ್ನವೇ ನಿರ್ದೇಶಕ ಸಾವು

    ಜಯ್‍ರಾಮ್ ನನ್ನ ಪರ್ಸನಲ್ ಮೇಕಪ್ ಮ್ಯಾನ್ ಆಗಿದ್ದರು. ಕಳೆದ 11 ವರ್ಷದಗಳಿಂದ ನನ್ನ ಜೊತೆಗೆ ಇದ್ದರು. ಇಂದು ಕೊರೊನಾ ಸೋಂಕಿನಿಂದ ಸಾವನ್ನಪಿದ್ದಾರೆ ಎಂದು ಬರೆದುಕೊಂಡು ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಜಯ್‍ರಾವ್ ಹಂಚಿಕೊಂಡು ಬೇಸರವನ್ನು ಹೊರಹಾಕಿದ್ದಾರೆ. ಇದನ್ನೂ ಓದಿ: ಅಣ್ಣಾವ್ರ ಯೋಗ ಗುರು ಹೊನ್ನಪ್ಪ ಫಕೀರಪ್ಪ ನಾಯ್ಕರ್ ಇನ್ನಿಲ್ಲ

    ಮಹಾಮಾರಿ ಕೊರೊನಾ ವೈರಸ್‍ಗೆ ಸಾಮಾನ್ಯ ಜನರೂ ಸೇರಿದಂತೆ ಹಲವಾರು ಮಂದಿ ಸೆಲೆಬ್ರಿಟಿಗಳು ಕೂಡ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಂತೆಯೇ ಡಾ. ರಾಜ್ ಕುಮಾರ್ ಅವರ ಯೋಗ ಗುರು ಹೊನ್ನಪ್ಪ ಫಕೀರಪ್ಪ ಕೂಡ ಕೋವಿಡ್ 19 ನಿಂದ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿಗೆ ಸ್ಯಾಂಡಲ್‍ವುಡ್‍ನ ತಾರೆಯರು ಅವರ ಆಪ್ತರನ್ನು ಕಳೆದುಕೊಂಡಿದ್ದಾರೆ. ನಿರ್ದೇಶಕ ಅಭಿರಾಮ್, ಹಿರಿಯ ನಟ ಶಂಖನಾದ ಅರವಿಂದ್ ಹಾಗೂ ನಿರ್ದೇಶಕ ರೇಣುಕಾ ಶರ್ಮಾ ಸೇರಿದಂತೆ ಹೀಗೆ ಹಲವು ಸೆಲೆಬ್ರಿಟಿ ಸ್ಟಾರ್‌ಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಹಾಗೂ ತಮ್ಮವರನ್ನು ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಯಾವ ಅಕ್ಷರದಿಂದ ನೊಂದವರ ಮನಸ್ಸಿಗೆ ಸಾಂತ್ವನ ಹೇಳಲಿ: ಜಗ್ಗೇಶ್

    ಭಾರತದಲ್ಲಿ ಕಳೆದ 19 ದಿನಗಳಿಂದ ಸೋಂಕು ಇಳಿಮುಖವಾಗುತ್ತಿದ್ದು, ಮಂಗಳವಾರ 1,27,510 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದು ಕಳೆದ 51 ದಿನಗಳ ಕನಿಷ್ಠ ಸಂಖ್ಯೆಯಾಗಿದೆ. ಈ ಅವಧಿಯಲ್ಲಿ 2,795 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,81,75,044ಕ್ಕೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 3,31,895ಕ್ಕೆ ತಲುಪಿದೆ.

  • ಕುತೂಹಲ ಹುಟ್ಟಿಸೋ ತಿರುವುಗಳು, ರೋಚಕ ಸಂಗತಿಗಳು: ಪ್ರೇಕ್ಷಕರಿಗೆ ಥ್ರಿಲ್ ನೀಡಿದ ‘ಕೃಷ್ಣ ಟಾಕೀಸ್’

    ಕುತೂಹಲ ಹುಟ್ಟಿಸೋ ತಿರುವುಗಳು, ರೋಚಕ ಸಂಗತಿಗಳು: ಪ್ರೇಕ್ಷಕರಿಗೆ ಥ್ರಿಲ್ ನೀಡಿದ ‘ಕೃಷ್ಣ ಟಾಕೀಸ್’

    ರೇಟಿಂಗ್: 3.5/5

    ಚಿತ್ರ: ಕೃಷ್ಣ ಟಾಕೀಸ್
    ನಿರ್ದೇಶನ: ವಿಜಯಾನಂದ್
    ನಿರ್ಮಾಪಕ: ಗೋವಿಂದರಾಜು. ಎ.ಹೆಚ್ ಆಲೂರು
    ಸಂಗೀತ ನಿರ್ದೇಶನ: ವಿ. ಶ್ರೀಧರ್ ಸಂಭ್ರಮ್
    ಛಾಯಾಗ್ರಹಣ: ಅಭಿಷೇಕ್ ಜಿ ಕಾಸರಗೋಡು
    ತಾರಾಬಳಗ: ಅಜಯ್ ರಾವ್, ಅಪೂರ್ವ, ಸಿಂಧು ಲೋಕನಾಥ್, ಮಂಡ್ಯ ರಮೇಶ್, ನಿರಂತ್, ಚಿಕ್ಕಣ್ಣ, ಪ್ರಕಾಶ್ ತುಮಿನಾಡು, ಇತರರು

    ಜಯ್ ರಾವ್ ನಟನೆಯ ವಿಜಯಾನಂದ್ ನಿರ್ದೇಶನದ ಕೃಷ್ಣ ಟಾಕೀಸ್ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಕಂಡಿದ್ದು, ಪ್ರೇಕ್ಷಕ ಪ್ರಭುಗಳ ಮೆಚ್ಚುಗೆಗೆ ಸಿನಿಮಾ ಪಾತ್ರವಾಗಿದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದು ನಿರ್ದೇಶಕರು ಈ ಸಿನಿಮಾ ಮಾಡಿದ್ದು, ಲಖನೌದ ಚಿತ್ರಮಂದಿರದಲ್ಲಿ ನಡೆದ ಘಟನೆ ಈ ಸಿನಿಮಾದ ಕಥಾವಸ್ತು. ಅಜಯ್ ರಾವ್ ಅವರದ್ದು ಚಿತ್ರದಲ್ಲಿ ಪತ್ರಕರ್ತನ ಪಾತ್ರ. ಈ ಹಿಂದಿನ ಕೃಷ್ಣ ಸೀರೀಸ್ ನಾಲ್ಕು ಸಿನಿಮಾಗಳಲ್ಲಿ ಲವರ್ ಬಾಯ್ ಇಮೇಜಾದ್ರೆ ಇಲ್ಲಿ ಸೀರಿಯಸ್ ರೋಲ್. ಮೊದಲ ಬಾರಿ ಹಾರಾರ್ ಥ್ರಿಲ್ಲರ್ ಜಾನರ್ ನಲ್ಲಿ ನಟಿಸಿರುವ ಅಜಯ್ ರಾವ್, ಪತ್ರಕರ್ತನ ಪಾತ್ರದಲ್ಲಿ ಸಾಮಾನ್ಯ ಹುಡುಗನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

    ‘ಕೃಷ್ಣ ಟಾಕೀಸ್’ ಎಂಬ ಚಿತ್ರಮಂದಿರದ ಮೇಲೆ ಹೆಣೆಯಲಾದ ಕಥೆಯೇ ‘ಕೃಷ್ಣ ಟಾಕೀಸ್’. ಕೃಷ್ಣ ಟಾಕೀಸ್ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಮೇಲೆ ಒಬ್ಬರಲ್ಲ ಒಬ್ಬರು ನಾಪತ್ತೆಯಾಗುತ್ತಿರುತ್ತಾರೆ. ಒಮ್ಮೆ ನಾಯಕನ ಸ್ನೇಹಿತ ಸೂರಿ ಕೃಷ್ಣ ಟಾಕೀಸ್ ನಲ್ಲಿ ಸಿನಿಮಾ ನೋಡಲು ಹೋದ ಮೇಲೆ ಎಲ್ಲೂ ಕಾಣಸಿಗೋದಿಲ್ಲ. ತನ್ನ ಸ್ನೇಹಿತನ ಸಾವಿಗೆ ಕಾರಣ ಹುಡುಕಲು ಹೊರಟ ನಾಯಕನಿಗೆ ಹಲವು ಮಜಲುಗಳು ಸಿಗುತ್ತವೆ. ಕೃಷ್ಣ ಟಾಕೀಸ್ ನಲ್ಲಿ ಸಿನಿಮಾ ನೋಡಿದ ಮೇಲೆ ಕಾಣೆಯಾಗಲು ನಿಜವಾದ ಕಾರಣ ಏನು ಎಂಬುದನ್ನು ನಾಯಕ ಹೇಗೆ ಕಂಡು ಹಿಡಿಯುತ್ತಾನೆ ಎನ್ನುವುದರ ಸುತ್ತ ಸಿನಿಮಾ ಹೆಣೆಯಲಾಗಿದೆ. ಇದನ್ನು ರೋಚಕವಾಗಿ, ಹಾರಾರ್ ಥ್ರಿಲ್ಲರ್ ಸಬ್ಜೆಕ್ಟ್ ನೊಂದಿಗೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಿಜಯಾನಂದ್. ಹಾರಾರ್ ಥ್ರಿಲ್ಲರ್ ಚಿತ್ರವಾಗಿರೋದ್ರಿಂದ ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಅಂಡ್ ಟರ್ನ್ ಗಳು ಸಿನಿಮಾದಲ್ಲಿದೆ. ಚಿತ್ರಕಥೆಯನ್ನು ಇಂಟ್ರಸ್ಟಿಂಗ್ ಆಗಿ ಹೆಣೆದಿರೋ ನಿರ್ದೇಶಕರು, ಪ್ರೇಕ್ಷಕರನ್ನು ಸೆಳೆಯೋದ್ರಲ್ಲಿ ಯಶಸ್ವಿಯಾಗಿದ್ದಾರೆ.

    ಎಲ್ಲ ಕಮರ್ಶಿಯಲ್ ಸಿನಿಮಾಗಳಂತೆ ಇಲ್ಲೂ ಲವ್, ಆಕ್ಷನ್, ಫ್ಯಾಮಿಲಿ ಸೆಂಟಿಮೆಂಟ್ ಬೆರೆತಿದ್ದು, ಪ್ರೇಕ್ಷಕರಿಗೆ ಮನರಂಜನೆ ನೀಡಿದೆ. ಈ ಹಿಂದಿನ ಕೃಷ್ಣ ಸೀರೀಸ್ ಸಿನಿಮಾಗಳಂತೆ ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಹಾಗೂ ಅಜಯ್ ರಾವ್ ಹಿಟ್ ಕಾಂಬೋ ಈ ಸಿನಿಮಾದಲ್ಲೂ ಕಮಾಲ್ ಮಾಡಿದೆ. ಅಭೀಷೇಕ್ ಜಿ ಕಾಸರಗೋಡು ಛಾಯಾಗ್ರಹಣ ಕೂಡ ಮೆಚ್ಚುವಂತದ್ದು. ಪತ್ರಕರ್ತನಾಗಿ ಅಜಯ್ ರಾವ್ ಅಭಿನಯ ನೈಜವಾಗಿ ಮೂಡಿ ಬಂದಿದ್ದು, ನಾಯಕಿಯ ಪಾತ್ರದಲ್ಲಿ ಅಪೂರ್ವ ನಟನೆ ಗಮನ ಸೆಳೆಯುತ್ತದೆ. ವಿಶೇಷ ಪಾತ್ರದಲ್ಲಿ ಸಿಂಧು ಲೋಕನಾಥ್ ಅಭಿನಯ ಚಿತ್ರಕ್ಕೆ ತಿರುವು ನೀಡುವುದರ ಜೊತೆ ಥ್ರಿಲ್ ನೀಡುತ್ತದೆ. ಉಳಿದಂತೆ ಎಲ್ಲಾ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

  • ‘ಕೃಷ್ಣ ಟಾಕೀಸ್’ನಲ್ಲೂ ಮುಂದುವರಿದ ಅಜಯ್ ರಾವ್- ಶ್ರೀಧರ್ ವಿ ಸಂಭ್ರಮ್ ಜುಗಲ್ಬಂದಿ..!

    ‘ಕೃಷ್ಣ ಟಾಕೀಸ್’ನಲ್ಲೂ ಮುಂದುವರಿದ ಅಜಯ್ ರಾವ್- ಶ್ರೀಧರ್ ವಿ ಸಂಭ್ರಮ್ ಜುಗಲ್ಬಂದಿ..!

    ಜಯ್ ರಾವ್ ನಟನೆಯ ವಿಜಯಾನಂದ್ ನಿರ್ದೇಶನದ ‘ಕೃಷ್ಣ ಟಾಕೀಸ್’ ಈ ಸಿನಿ ಶುಕ್ರವಾರ ತೆರೆಗೆ ಬರುತ್ತಿದೆ. ಹಾರಾರ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಈ ಸಿನಿಮಾ ಅಜಯ್ ರಾವ್ ಅವರಿಗೂ ತುಂಬಾ ಸ್ಪೆಷಲ್. ಮೊದಲ ಬಾರಿ ಹಾರಾರ್, ಥ್ರಿಲ್ಲರ್ ಸಬ್ಜೆಕ್ಟ್ ಸಿನಿಮಾದಲ್ಲಿ ನಟಿಸುತ್ತಿರುವ ಅಜಯ್ ರಾವ್ ಸಿನಿಮಾಗೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುತೂಹಲದಲ್ಲಿದ್ದಾರೆ. ಟ್ರೇಲರ್ ಹಾಗೂ ಹಾಡುಗಳಿಗೆ ಸಿನಿರಸಿಕರಿಂದ ಸಿಕ್ಕಿರುವ ರೆಸ್ಪಾನ್ಸ್ ಕಂಡು ಚಿತ್ರತಂಡ ಥ್ರಿಲ್ ಆಗಿದ್ದು ಸಿನಿಮಾ ಮೇಲೂ ಇದೇ ರೀತಿಯ ಪ್ರೀತಿ ಸಿಗುವ ಭರವಸೆಯಲ್ಲಿದೆ ಕೃಷ್ಣ ಟಾಕೀಸ್ ಚಿತ್ರತಂಡ.

    ‘ಕೃಷ್ಣ ಟಾಕೀಸ್’ ಸಿನಿಮಾದ ಪ್ರತಿ ಹಾಡುಗಳು ಹಿಟ್ ಆಗಿವೆ. ಕೇಳುಗ ಪ್ರಿಯರು ಹಾಡುಗಳಿಗೆ ಮನಸೋತಿದ್ದಾರೆ. ಈ ಹಿಟ್ ಹಾಡುಗಳ ಹಿಂದೆ ಇರುವ ಸಂಗೀತ ಸಂಯೋಜನೆ ಖ್ಯಾತ ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಅವರದ್ದು. ಹಲವಾರು ಹಿಟ್ ಹಾಡುಗಳನ್ನು ನೀಡಿರುವ ಶ್ರೀಧರ್ ವಿ ಸಂಭ್ರಮ್ ‘ಕೃಷ್ಣ ಟಾಕೀಸ್’ ಸಿನಿಮಾದಲ್ಲಿಯೂ ಒಂದಕ್ಕಿಂತ ಒಂದು ವೆರೈಟಿ ಹಾಡುಗಳನ್ನು ನೀಡಿದ್ದಾರೆ. ‘ಕೃಷ್ಣ ಟಾಕೀಸ್’ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ಅಜಯ್ ರಾವ್ ಹಾಗೂ ಶ್ರೀಧರ್ ವಿ ಸಂಭ್ರಮ್ ಜುಗಲ್ಬಂದಿ ಕೃಷ್ಣ ಸೀರೀಸ್ ಐದು ಸಿನಿಮಾಗಳಲ್ಲೂ ಮುಂದುವರಿದಂತಾಗಿದೆ. ಈ ಬಗ್ಗೆ ಮಾತನಾಡಿರುವ ಶ್ರೀಧರ್ ವಿ ಸಂಭ್ರಮ್, ‘ಅಜಯ್ ರಾವ್ ಅವರ ಕೃಷ್ಣ ಸೀರೀಸ್ ನಲ್ಲಿ ನಾನು ನಾಲ್ಕು ಸಿನಿಮಾಗಳಿಗೆ ಸಂಗೀತ ನೀಡಿದ್ದೇನೆ. ನಾಲ್ಕು ಸಿನಿಮಾ ಹಾಡುಗಳು ಹಿಟ್ ಆಗಿವೆ. ಇದೀಗ ಕೃಷ್ಣ ಸೀರೀಸ್ ಐದನೇ ಸಿನಿಮಾಕ್ಕೂ ಸಂಗೀತ ನೀಡಿದ್ದು ಈ ಸಿನಿಮಾ ಹಾಡುಗಳು ಕೂಡ ಹಿಟ್ ಲಿಸ್ಟ್ ಸೇರಿದ್ದು ಸಂತಸ ತಂದಿದೆ. ಅಜಯ್ ರಾವ್ ಹಾಗೂ ನನ್ನ ಜುಗಲ್ಬಂದಿ ಐದನೇ ಬಾರಿಯೂ ಮುಂದುವರೆದಿದ್ದು, ಒಂದೊಳ್ಳೆ ಅನುಭವವನ್ನು ‘ಕೃಷ್ಣ ಟಾಕೀಸ್’ ಸಿನಿಮಾ ನೀಡಿದೆ’ ಎಂದಿದ್ದಾರೆ.

    ಏಪ್ರಿಲ್ 16ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ‘ಕೃಷ್ಣ ಟಾಕೀಸ್’ ಸಿನಿಮಾ ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫೀಕೇಟ್ ಪಡೆದುಕೊಂಡಿದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದು ನಿರ್ದೇಶಕ ವಿಜಯಾನಂದ್ ಸಿನಿಮಾ ಕಥೆ ಹೆಣೆದಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಹಾರಾರ್ ಎಲಿಮೆಂಟ್ ಇರುವ ಕೃಷ್ಣ ಟಾಕೀಸ್ ನಲ್ಲಿ ಪತ್ರಕರ್ತನಾಗಿ ಅಜಯ್ ರಾವ್ ಬಣ್ಣ ಹಚ್ಚಿದ್ದಾರೆ. ಗೋಕುಲ್ ಎಂಟರ್ ಟೈನ್ಮೆಂಟ್ ಬ್ಯಾನರ್‍ನಲ್ಲಿ ಗೋವಿಂದರಾಜು ಎ.ಹೆಚ್ ಆಲೂರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಅಪೂರ್ವ ನಾಯಕಿಯಾಗಿ ನಟಿಸಿದ್ದು, ನಟಿ ಸಿಂಧೂ ಲೋಕನಾಥ್ ವಿಶೇಷ ಪಾತ್ರದಲ್ಲಿ ಸಿನಿಮಾದಲ್ಲಿ ಕಾಣಸಿಗಲಿದ್ದಾರೆ. ಚಿಕ್ಕಣ್ಣ, ಶೋಭರಾಜ್, ಪ್ರಮೋದ್ ಶೆಟ್ಟಿ, ಮಂಡ್ಯ ರಮೇಶ್, ನಿರಂತ್, ಪ್ರಕಾಶ್ ತುಮಿನಾಡು ಚಿತ್ರದ ತಾರಾಗಣದಲ್ಲಿದ್ದಾರೆ. ಚಿತ್ರ್ಕಕೆ ಅಭಿಷೇಕ್ ಜಿ.ಕಾಸರಗೋಡು ಛಾಯಾಗ್ರಹಣವಿದೆ.

  • ‘ಕೃಷ್ಣ ಟಾಕೀಸ್’ ಮನಮೋಹನ ರೊಮ್ಯಾಂಟಿಕ್ ವೀಡಿಯೋ ಸಾಂಗ್ ರಿಲೀಸ್

    ‘ಕೃಷ್ಣ ಟಾಕೀಸ್’ ಮನಮೋಹನ ರೊಮ್ಯಾಂಟಿಕ್ ವೀಡಿಯೋ ಸಾಂಗ್ ರಿಲೀಸ್

    ಜಯ್ ರಾವ್ ನಟನೆಯ ‘ಕೃಷ್ಣ ಟಾಕೀಸ್’ ಸಿನಿಮಾ ಏಪ್ರಿಲ್ 16ಕ್ಕೆ ಚಿತ್ರಮಂದಿರದ ಅಂಗಳಕ್ಕೆ ಬರುತ್ತಿದೆ. ಚಿತ್ರದ ಪ್ರಚಾರ ಚಟುವಟಿಕೆಯಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಇದೀಗ ಸಿನಿಮಾದ ಬಹು ನಿರೀಕ್ಷಿತ ರೊಮ್ಯಾಂಟಿಕ್ ವೀಡಿಯೋ ಸಾಂಗ್ ಬಿಡುಗಡೆ ಮಾಡಿ ಮತ್ತಷ್ಟು ಗಮನ ಸೆಳೆದಿದೆ. ವಿಜಯಾನಂದ್ ಸಾಹಿತ್ಯದಲ್ಲಿ ಮೂಡಿ ಬಂದ ಮನಮೋಹನ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜನೆಯಲ್ಲಿ ಈ ಹಾಡಿಗೆ ಅನ್ವೇಷ, ವಿಹಾನ್ ಆರ್ಯ ದನಿಯಾಗಿದ್ದಾರೆ. ಈ ಮೊದಲು ಚಿತ್ರತಂಡ ಮನಮೋಹನ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿತ್ತು. ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ರೆಸ್ಪಾನ್ಸ್ ಪಡೆದ ಹಿನ್ನೆಲೆ ಹಾಡಿನ ವಿಡಿಯೋವನ್ನು ಬಿಡುಗಡೆ ಮಾಡಿದೆ ‘ಕೃಷ್ಣ ಟಾಕೀಸ್’ ಚಿತ್ರತಂಡ.

    ವಿಜಯಾನಂದ್ ಕಥೆ ಬರೆದು ನಿರ್ದೇಶನ ಮಾಡಿರುವ ಹಾರಾರ್ ಥ್ರಿಲ್ಲರ್ ಕಹಾನಿ ಒಳಗೊಂಡ ಸಿನಿಮಾ ‘ಕೃಷ್ಣ ಟಾಕೀಸ್’. ನೈಜ ಘಟನೆಯಿಂದ ಸ್ಪೂರ್ತಿ ಪಡೆದು ಸಿನಿಮಾ ಕಥೆ ಹೆಣೆಯಲಾಗಿದ್ದು, ಆಕ್ಷನ್, ಥ್ರಿಲ್ಲರ್, ಸೆಂಟಿಮೆಂಟ್ ಎಲ್ಲಾ ಎಲಿಮೆಂಟ್ಗಳು ಚಿತ್ರದಲ್ಲಿವೆ. ಅಜಯ್ ರಾವ್ ಪತ್ರಕರ್ತನ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ಮೊದಲ ಬಾರಿ ಹಾರಾರ್ ಥ್ರಿಲ್ಲರ್ ಕಹಾನಿ ಸಿನಿಮಾದಲ್ಲಿ ನಟಿಸಿದ್ದಾರೆ. ಅಜಯ್ ರಾವ್ ಗೆ ನಾಯಕ ನಟಿಯಾಗಿ ಅಪೂರ್ವ ತೆರೆ ಮೇಲೆ ಮಿಂಚಿದ್ದಾರೆ.

    ‘ಕೃಷ್ಣ ಟಾಕೀಸ್’ ಸಿನಿಮಾದಲ್ಲಿ ಚಿಕ್ಕಣ್ಣ ನಟಿಸಿದ್ದು. ಅಜಯ್ ರಾವ್ ಚಿಕ್ಕಣ್ಣ ಕಾಂಬಿನೇಷನ್ ಮೊದಲ ಬಾರಿಗೆ ತೆರೆ ಮೇಲೆ ಒಂದಾಗಿದೆ. ಚಿತ್ರಕ್ಕೆ ನಿರ್ದೇಶಕ ವಿಜಯಾನಂದ್ ಸಾಹಿತ್ಯ ರಚಿಸಿದ್ದು, ಶ್ರೀಧರ್ ವಿ. ಸಂಭ್ರಮ್ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಮೂಡಿ ಬಂದಿವೆ. ಗೋವಿಂದರಾಜು ಎ.ಹೆಚ್ ಆಲೂರು ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದ್ದು, ಸಿಂಧೂ ಲೋಕನಾಥ್, ಪ್ರಕಾಶ್ ತುಮಿನಾಡು, ಮಂಡ್ಯ ರಮೇಶ್, ಶೋಭರಾಜ್, ಯಶ್ ಶೆಟ್ಟಿ ಒಳಗೊಂಡಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ

  • ಮೊದಲ ಬಾರಿ ಹಾರರ್ ಥ್ರಿಲ್ಲರ್ ಸಿನಿಮಾಕ್ಕೆ ಬಣ್ಣ ಹಚ್ಚಿದ ಖುಷಿಯಲ್ಲಿ ನಟ ಅಜಯ್ ರಾವ್

    ಮೊದಲ ಬಾರಿ ಹಾರರ್ ಥ್ರಿಲ್ಲರ್ ಸಿನಿಮಾಕ್ಕೆ ಬಣ್ಣ ಹಚ್ಚಿದ ಖುಷಿಯಲ್ಲಿ ನಟ ಅಜಯ್ ರಾವ್

    ನಿರ್ದೇಶಕ ವಿಜಯಾನಂದ್ ನಿರ್ದೇಶನದಲ್ಲಿ ಅಜಯ್ ರಾವ್ ನಟಿಸಿರುವ ‘ಕೃಷ್ಣ ಟಾಕೀಸ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ವಿಜಯಾನಂದ್ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿರುವ ವಿಜಯಾನಂದ್ ಸುಮಾರು ಅರವತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆ ಹಾಗೂ ನಲವತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಿತ್ಯ ಬರೆದಿದ್ದಾರೆ. ಓಳ್ ಮುನ್ಸಾಮಿ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದ ಇವರು ಎರಡನೇ ಸಿನಿಮಾ ‘ಕೃಷ್ಣ ಟಾಕೀಸ್’ನಲ್ಲಿ ಅಜಯ್ ರಾವ್ ಅವರಿಗೆ ಆಕ್ಷನ್ ಕಟ್ ಹೇಳಿದ್ದಾರೆ.

    ನೈಜ ಘಟನೆಯಿಂದ ಸ್ಪೂರ್ತಿ ಪಡೆದ ಈ ಚಿತ್ರ ಸಸ್ಪೆನ್ಸ್, ಥ್ರಿಲ್ಲರ್, ಹಾರಾರ್ ಸಬ್ಜೆಕ್ಟ್ ಒಳಗೊಂಡಿದೆ. ‘ಕೃಷ್ಣನ್ ಲವ್‍ಸ್ಟೋರಿ, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ, ‘ಕೃಷ್ಣ ಲೀಲಾ, ‘ಕೃಷ್ಣ ರುಕ್ಕು ಹೀಗೆ ಕೃಷ್ಣ ಹೆಸರಿನ ಸರಣಿ ಸಿನಿಮಾಗಳಲ್ಲಿ ನಟಿಸಿದ್ದ ಅಜೇಯ್ ರಾವ್ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಬಗ್ಗೆ ನಟ ಅಜಯ್ ರಾವ್ ಮಾತನಾಡಿದ್ದು ಮೊದಲ ಬಾರಿಗೆ ಈ ಸಿನಿಮಾದಲ್ಲಿ ಜರ್ನಲಿಸ್ಟ್ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದು ನನ್ನ ಸಿನಿ ಕೆರಿಯರ್ ನ 26ನೇ ಸಿನಿಮಾ. ಹಾರಾರ್ ಥ್ರಿಲ್ಲರ್ ಸಬ್ಜೆಕ್ಟ್ ಸಿನಿಮಾ ಹಿಂದೆಂದೂ ಮಾಡಿರಲಿಲ್ಲ. ಸಿನಿಮಾ ಮತ್ತು ನನ್ನ ಪಾತ್ರ ಎರಡೂ ಪೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ಭರವಸೆ ಇದೆ ಎನ್ನುತ್ತಾರೆ.

    ಅಜಯ್ ಜೋಡಿಯಾಗಿ ಅಪೂರ್ವ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ನಟಿ ಸಿಂಧು ಲೋಕನಾಥ್ ಕೂಡ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಮಿಂಚಿದ್ದಾರೆ. ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ಅಭಿಷೇಕ್ ಜಿ. ಕಾಸರಗೋಡು ಕ್ಯಾಮೆರಾ ನಿರ್ದೇಶನದಲ್ಲಿ ಸಿನಿಮಾ ಸೆರೆಯಾಗಿದೆ. ವಿಕ್ರಂ ಅವರ ಸಾಹಸ ನಿರ್ದೇಶನವಿದಲ್ಲಿ ಸಾಹಸ ದೃಶ್ಯಗಳು ಮೂಡಿ ಬಂದಿವೆ. ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡು, ಶೋಭರಾಜ್, ಮಂಡ್ಯ ರಮೇಶ್, ನಿರಂತ್, ಯಶ್ ಶೆಟ್ಟಿ, ಉಮೇಶ್, ಶ್ರೀನಿವಾಸ ಪ್ರಭು, ಶಾಂಭವಿ, ಲಕ್ಷ್ಮಿಗೌಡ, ಯಮುನಾ, ಧರ್ಮೇಂದ್ರ ಅರಸ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಗೋಕುಲ್ ಎಂಟಟೈನರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಗೋವಿಂದರಾಜು ಎ.ಹೆಚ್ ಆಲೂರು ಬಂಡವಾಳ ಹಾಕಿದ್ದಾರೆ. ಏಪ್ರಿಲ್ 16ರಂದು ‘ಕೃಷ್ಣ ಟಾಕೀಸ್’ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.

  • ಸ್ಯಾಂಡಲ್‍ವುಡ್ ಕೃಷ್ಣನಿಗೆ ಸಿಕ್ರು ಹೊಸ ಜಿಮ್ ಪಾರ್ಟ್ನರ್

    ಸ್ಯಾಂಡಲ್‍ವುಡ್ ಕೃಷ್ಣನಿಗೆ ಸಿಕ್ರು ಹೊಸ ಜಿಮ್ ಪಾರ್ಟ್ನರ್

    ಬೆಂಗಳೂರು: ಸ್ಯಾಂಡಲ್‍ವುಡ್ ಕೃಷ್ಣ ಅಜಯ್ ರಾವ್ ಅವರಿಗೆ ಹೊಸ ಜಿಮ್ ಪಾರ್ಟ್ನರ್ ಸಿಕ್ಕಿದ್ದು, ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಹೌದು, ಅಜಯ್ ರಾವ್‍ಗೆ ಸಿಕ್ಕಿರುವ ಹೊಸ ಜಿಮ್ ಪಾರ್ಟ್ನರ್ ಅವರ ಮುದ್ದಿನ ಮಗಳು ಚೆರ್ರಿ. ಜಿಮ್ ನಲ್ಲಿ ಮಗಳ ಜೊತೆ ವರ್ಕೌಟ್ ಮಾಡುತ್ತಿರುವ ಕ್ಯೂಟ್ ಫೋಟೋ ಹಂಚಿಕೊಂಡಿದ್ದಾರೆ. ಮುದ್ದು ಚೆರ್ರಿ ತನ್ನ ಕೋಮಲ ಕೈಗಳಿಂದ ಡಂಬಲ್ಸ್ ಎತ್ತಲು ಪ್ರಯತ್ನಿಸುತ್ತಿರೋದನ್ನ ಫೋಟೋಗಳನ್ನ ನೋಡಬಹುದು. ಸದ್ಯ ಮಗಳ ಜೊತೆ ಜಿಮ್ ಮಾಡುತ್ತಿರುವ ಫೋಟೋಗಳು ವೈರಲ್ ಆಗ್ತಿದೆ.

    ಅಜಯ್ ರಾವ್ ಮಗಳಿಗೆ ಚೆರಿಷ್ಮಾ ಎಂದು ಹೆಸರಿಟ್ಟಿದ್ದು, ಪ್ರೀತಿಯಿಂದ ಚೆರ್ರಿ ಅಂತ ಕರೆಯುತ್ತಾರೆ. ನವೆಂಬರ್ 22ರಂದು ಮುದ್ದು ಚೆರ್ರಿಯ ಎರಡನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿದ್ದರು. ಬರ್ತ್ ಡೇ ಫೋಟೋಗಳು ಸಹ ವೈರಲ್ ಆಗಿದ್ದವು. ಅಜಯ್ ರಾವ್ ಸಿನಿಮಾ ಜೊತೆಗೆ ಮಗಳ ಮುದ್ದು ಫೋಟೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ.

    ತಂದೆ ಮತ್ತು ಮಗಳ ನಡುವಿನ ಬಾಂಧವ್ಯದ ಬಗ್ಗೆ ಹೇಳಲು ಪದಗಳೇ ಸಾಲಲ್ಲ. ಮಗಳು ತಂದೆಗೆ ಎರಡನೇ ತಾಯಿ ಆಗ್ತಾಳೆ ಅನ್ನೋ ಮಾತಿದೆ. ಅಮ್ಮನಿಗಿಂತಲೂ ಮಗಳಿಗೆ ಅಪಪ್ಪ ಹೆಚ್ಚು ಇಷ್ಟ. ತಂದೆಯ ಪ್ರೀತಿಯ ಮಗಳು, ಡ್ಯಾಡಿಯ ಏಂಜೆಲ್ ಅಂತ ಹೆಣ್ಣು ಮಕ್ಕಳು ಹೇಳಿಕೊಳ್ಳುತ್ತಿರುತ್ತಾರೆ. ಒಂದು ಹೆಣ್ಣು ಹತ್ತು ಗಂಡು ಮಕ್ಕಳಿಗೆ ಸಮ ಅನ್ನೋ ಮಾತು ಇದೆ.

  • ಸಚಿವ ಆನಂದ್ ಸಿಂಗ್ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಅಜಯ್ ರಾವ್!

    ಸಚಿವ ಆನಂದ್ ಸಿಂಗ್ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಅಜಯ್ ರಾವ್!

    ಬಳ್ಳಾರಿ: ನಟ ಅಜಯ್ ರಾವ್ ಅವರು ಅರಣ್ಯ ಸಚಿವ ಆನಂದ್ ಸಿಂಗ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

    ಹೌದು. ವಿಜಯನಗರ ಜಿಲ್ಲೆಯಾಗುತ್ತಿರುವುದಕ್ಕೆ ನಟ ಅಜಯ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿರುವ ಆನಂದ್ ಸಿಂಗ್ ಅಚೇರಿಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.

    ಮೂಲತಃ ಹೊಸಪೇಟೆಯ ನಿವಾಸಿಯಾಗಿರುವ ಅಜಯ್ ರಾವ್, ಹೊಸಪೇಟೆ ಕೇಂದ್ರಿತ ವಿಜಯನಗರ ಜಿಲ್ಲೆ ರಚನೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಜಿಲ್ಲೆ ಘೋಷಣೆಯಾಗುವ ಮೂಲಕ ವಿಜಯನಗರ ಗತವೈಭವ ಮರಳಿ ಬಂದಂತಾಗಿದೆ. ನಾನು ಕೂಡ ಹೊಸಪೇಟೆ ನಗರದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.

    ನನ್ನ ಹೂಟ್ಟೂರು ಹೊಸಪೇಟೆ ಈಗ ವಿಜಯನಗರ ಜಿಲ್ಲೆಯಾಗುತ್ತಿರುವುದು ಹೆಮ್ಮೆಯ ವಿಷಯ. ಸರ್ಕಾರ ಆದಷ್ಟು ಬೇಗ ಫೈನಲ್ ನೋಟಿಫಿಕೇಷನ್ ಸಹ ಹೊರಡಿಸಲಿ. ಫೈನಲ್ ನೋಟಿಫಿಕೇಷನ್ ಗಾಗಿ ಎದುರು ನೋಡುತ್ತಿರುವೆ. ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ನಾನು ಕೂಡ ಕೈ ಜೋಡಿಸುವೆ ಎಂದು ನಟ ಭರವಸೆ ನೀಡಿದ್ದಾರೆ.