Tag: ಅಜಯ್ ದೇವಗನ್

  • ಶಾರ್ಟ್ಸ್​​ನಲ್ಲಿ ದೇಗುಲಕ್ಕೆ ತೆರೆಳಿದ್ದ ಅಜಯ್ ದೇವಗನ್ ಟ್ರೋಲ್

    ಶಾರ್ಟ್ಸ್​​ನಲ್ಲಿ ದೇಗುಲಕ್ಕೆ ತೆರೆಳಿದ್ದ ಅಜಯ್ ದೇವಗನ್ ಟ್ರೋಲ್

    ಮುಂಬೈ: ಶಾರ್ಟ್ಸ್ ಧರಸಿ ದೇಗುಲಕ್ಕೆ ತೆರಳಿದ್ದ ಬಾಲಿವುಡ್ ನಟ ಅಜಯ್ ದೇವಗನ್ ಅವರನ್ನು ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಅಜಯ್ ಕಾಲೆಳೆದು ಮಜಾ ಪಡೆಯುತ್ತಿದ್ದಾರೆ.

    ಹೌದು. ದೇವರ ದರ್ಶಕ್ಕೆ ದೇವಾಲಯಗಳಿಗೆ ತೆರೆಳುವಾಗ ಸಾಮಾನ್ಯವಾಗಿ ಸಾಪ್ರದಾಯಿಕವಾಗಿ ಹೋಗುತ್ತಾರೆ. ಆದರೆ ನಟ ಅಜಯ್ ಅವರು ಶಾರ್ಟ್ಸ್​​ನಲ್ಲಿ ದೇಗುಲಕ್ಕೆ ಹೋಗಿ ಟ್ರೋಲ್ ಆಗುತ್ತಿದ್ದಾರೆ. ಮಾಂಧ್ವಿಯ ಶ್ರೀ ರಂಗನಾಥ ಮಹಾದೇವ ದೇವಾಲಯಕ್ಕೆ ಅಜಯ್ ಅವರು ಭೇಟಿ ನೀಡಿದ್ದರು. ಈ ವೇಳೆ ಸಾಂಪ್ರದಾಯಿಕ ಉಡುಗೆಯಲ್ಲಿ ಧರಿಸಿ ದೇವರ ದರ್ಶನ ಪಡೆದಿದ್ದರೆ ತೊಂದರೆಯಾಗುತ್ತಿರಲಿಲ್ಲ. ಆದರೆ, ಅವರು ಶಾರ್ಟ್ಸ್​​ ಹಾಕಿಕೊಂಡು ದೇವರ ದರ್ಶನ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿವಾದ ಸೃಷ್ಟಿಸಿದೆ. ಅಲ್ಲದೆ ನೆಟ್ಟಿಗರಿಗೂ ಟ್ರೋಲ್ ಮಾಡಲು ಹೊಸ ವಿಷಯ ಸಿಕ್ಕಿದಂತಾಗಿದೆ.

    ನೀಲಿ ಟೀ ಶರ್ಟ್ ಮತ್ತು ಡೆನಿಮ್ ಶಾರ್ಟ್ಸ್​​ ಧರಿಸಿ ಶಿವ ಲಿಂಗದ ಮುಂದೆ ಕುಳಿತು ಅಜಯ್ ಪೂಜೆ ನೆರವೇರಿಸಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ಅಜಯ್ ಅವರ ಈ ನಡೆಗೆ ಕೆಲವರು ವ್ಯಂಗ್ಯವಾಡಿದ್ದರೆ, ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

    ಅಜಯ್ ದೇವಗನ್ ಅವರು ಯಾವುದೇ ಉಡುಪು ಧರಿಸಿ ಕುಳಿತು ಪೂಜೆ ಮಾಡುವ ಸ್ವಾತಂತ್ರ್ಯ ಅವರಿಗೆ ಇದೆ. ಆದರೆ, ಇದೇ ದೇವಾಲಯದಲ್ಲಿ ಜನಸಾಮಾನ್ಯರಿಗೆ ಇಂತಹ ಹಕ್ಕು ಇರುವುದಿಲ್ಲ. ಇದು ಸತ್ಯದ ಸಂಗತಿಯಾಗಿದ್ದು, ನೋವುಂಟು ಮಾಡುತ್ತದೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೊಬ್ಬರು ಅಜಯ್ ಅವರು ಶಾರ್ಟ್ಸ್​​ ಧರಿಸಿ ಮಹದೇವನ ಪೂಜೆ ನೆರವೇರಿಸಿರುವುದರಿಂದ ಪಾಪ ಬರುತ್ತದೆ. ಕನಿಷ್ಠ ಪಕ್ಷವಾದರೂ ಅವರು ದೇವರಿಗೆ ಗೌರವ ಕೊಡಬೇಕಿತ್ತು ಎಂದು ಕಿಡಿಕಾರಿದ್ದಾರೆ.

  • ಅಜಯ್ ದೇವಗನ್‍ರನ್ನು ಭೇಟಿಯಾದ ಕಿಚ್ಚ – ಪತಿ ಕಾಲೆಳೆದ ಪ್ರಿಯಾ

    ಅಜಯ್ ದೇವಗನ್‍ರನ್ನು ಭೇಟಿಯಾದ ಕಿಚ್ಚ – ಪತಿ ಕಾಲೆಳೆದ ಪ್ರಿಯಾ

    ಮುಂಬೈ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಾಲಿವುಡ್ ನಟ ಅಜಯ್ ದೇವಗನ್ ಅವರನ್ನು ಭೇಟಿ ಮಾಡಿದ್ದಾರೆ. ಸುದೀಪ್ ಅವರು ಅಜಯ್ ಅವರ ಫೋಟೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಕ್ಕೆ, ಪತ್ನಿ ಪ್ರಿಯಾ ಸುದೀಪ್ ಅವರ ಕಾಲೆಳೆದಿದ್ದಾರೆ.

    ಸುದೀಪ್ ನಟ ಅಜಯ್ ದೇವಗನ್ ಅವರ ಜೊತೆಗಿರುವ ಫೋಟೋವನ್ನು ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, “ನಿಜವಾದ ಜೆಂಟೆಲ್‍ಮೆನ್. ನಿಮ್ಮನ್ನು ಭೇಟಿ ಮಾಡಿ ನನಗೆ ಖುಷಿಯಾಯಿತು. ಇದು ಅಮೂಲ್ಯವಾದ ಕ್ಷಣ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಈ ಟ್ವೀಟ್‍ಗೆ ಪ್ರಿಯಾ ಸುದೀಪ್ ಅವರು, “ನೀವು ಅಜಯ್ ಅವರ ಪತ್ನಿಯನ್ನು ಭೇಟಿ ಮಾಡಿದ್ರೆ ಖುಷಿಪಡುತ್ತಿದ್ದೀರಿ. ನನಗೆ ಗೊತ್ತು ನೀವು ಕಾಜೋಲ್ ಅವರು ದೊಡ್ಡ ಅಭಿಮಾನಿ” ಎಂದು ರೀ-ಟ್ವೀಟ್ ಮಾಡುವ ಮೂಲಕ ಸುದೀಪ್ ಅವರ ಕಾಲೆಳೆದಿದ್ದಾರೆ. ಪತ್ನಿಯ ಟ್ವೀಟ್‍ಗೆ ಪ್ರಿಯಾ ಅವರು ‘ಶ್’ ಎನ್ನುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

    ಸುದೀಪ್ ಅವರು ಈಗ ‘ಕೋಟಿಗೊಬ್ಬ-3’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಬಾಲಿವುಡ್ ಭಾಯ್‍ಜಾನ್ ನಟನೆಯ ‘ದಬಾಂಗ್-3’ ಚಿತ್ರದ ಶೂಟಿಂಗ್‍ನಲ್ಲಿ ಭಾಗವಹಿಸುತ್ತಿದ್ದಾರೆ. ಸದ್ಯ ಸುದೀಪ್, ಸಲ್ಮಾನ್ ಅವರ ಜೊತೆ ಕಾಲ ಕಳೆದ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

  • ಕ್ಯಾನ್ಸರ್ ಪೀಡಿತ ಅಪ್ಪಟ ಅಭಿಮಾನಿಯಿಂದ ನಟ ಅಜಯ್ ದೇವಗನ್‍ಗೆ ಮನವಿ

    ಕ್ಯಾನ್ಸರ್ ಪೀಡಿತ ಅಪ್ಪಟ ಅಭಿಮಾನಿಯಿಂದ ನಟ ಅಜಯ್ ದೇವಗನ್‍ಗೆ ಮನವಿ

    ಜೈಪುರ: ಸಮಾಜದ ಏಳಿಗೆಗೋಸ್ಕರ ದಯಮಾಡಿ ತಂಬಾಕು ಉತ್ಪನ್ನದ ಬಗ್ಗೆ ಜಾಹೀರಾತು ನೀಡಬೇಡಿ ಎಂದು ಕಟ್ಟ ಅಭಿಮಾನಿಯೊಬ್ಬರು ಬಾಲಿವುಡ್ ನಟ ಅಜಯ್ ದೇವಗನ್ ಬಳಿ ಮನವಿ ಮಾಡಿದ್ದಾರೆ.

    ಅಭಿಮಾನಿಯಾಗಿರುವ 40 ವರ್ಷದ ನನಕ್ರಮ್ ಜಾಹೀರಾತುಗಳಲ್ಲಿ ಅಭಿನಯಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮೂಲತಃ ರಾಜಸ್ಥಾನದವರಾಗಿರುವ ಇವರು ಜೈಪುರದ ಸಂಗನೆರ್ ಪಟ್ಟಣದಲ್ಲಿ ವಾಸವಾಗಿದ್ದು, ಸದ್ಯ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.

    ನನಕ್ರಮ್ ಅವರು ಅಜಯ್ ದೇವಗನ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಹೀಗಾಗಿ ತನ್ನ ನೆಚ್ಚಿನ ನಟ ನೀಡುತ್ತಿರುವ ತಂಬಾಕು ಜಾಹೀರಾತು ನೋಡಿ ಅದನ್ನು ಪ್ರತಿನಿತ್ಯ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಇದು ಅವರ ದೇಹದ ಮೇಲೆ ಪರಿಣಾಮ ಬೀರಿದೆ ಎಂದು ರೋಗಿಯ ಕುಟುಂಬಸ್ಥರು ತಿಳಿಸಿದ್ದಾರೆ.

    ನಟ ದೇವಗನ್ ಅವರು ಜಾಹೀರಾತು ನೀಡುತ್ತಿರುವ ತಂಬಾಕನ್ನೇ ಕಳೆದ ಕೆಲ ವರ್ಷಗಳ ಹಿಂದೆಯಿಂದ ನನ್ನ ತಂದೆ ಸೇವನೆ ಮಾಡಲು ಆರಂಭಿಸಿದ್ದಾರೆ. ದೇವಗನ್ ಅವರು ನೀಡುತ್ತಿರುವ ಜಾಹೀರಾತಿನಿಂದ ತಂದೆ ಪ್ರಭಾವಿತರಾಗಿದ್ದರು. ಆದರೆ ಇದೀಗ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಹೀಗಾಗಿ ಒಬ್ಬ ದೊಡ್ಡ ನಟ ಮನುಷ್ಯನ ಜೀವನಕ್ಕೆ ಕುತ್ತು ತರುವಂತಹ ಜಾಹೀರಾತುಗಳನ್ನು ನೀಡಿ ಜನರನ್ನು ಪ್ರೇರೇಪಣೆಗೊಳಿಸಬಾರದು ಅಂತ ತಂದೆ ಹೇಳುತ್ತಿದ್ದಾರೆಂದು ಮಗ ದಿನೇಶ್ ಮೀನಾ ತಿಳಿಸಿದ್ದಾರೆ.

    ಮದ್ಯಪಾನ, ಸಿಗರೇಟ್ ಹಾಗೂ ತಂಬಾಕು ಮನುಷ್ಯನ ದೇಹದ ಮೇಲೆ ಅಡ್ಡಪರಿಣಾಮ ಬೀರುತ್ತವೆ. ಹೀಗಾಗಿ ಕುತ್ತು ತರುವಂತಹ ಉತ್ಪನ್ನಗಳ ಜಾಹೀರಾತುಗಳನ್ನು ನಟರು ಕೊಡಬಾರದೆಂದು ನನಕ್ರಮ್ ಮೀನಾ ಮನವಿ ಮಾಡಿಕೊಂಡಿದ್ದಾರೆ.

    ಒಟ್ಟಿನಲ್ಲಿ ಇಬ್ಬರು ಮಕ್ಕಳ ತಂದೆಯಾಗಿರುವ ನನಕ್ರಮ್ ಅವರು ಟೀ ಸ್ಟಾಲ್ ಇಟ್ಟುಕೊಂಡು ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಇದೀಗ ಅವರು ಕ್ಯಾನ್ಸರ್ ರೋಗಿಯಾಗಿದ್ದು ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ.

  • ಅಜಯ್ ದೇವಗನ್ ಡೇಂಜರಸ್ ಸ್ಟಂಟ್ ನಕಲು ಮಾಡಿದ ಗಿಳಿ

    ಅಜಯ್ ದೇವಗನ್ ಡೇಂಜರಸ್ ಸ್ಟಂಟ್ ನಕಲು ಮಾಡಿದ ಗಿಳಿ

    ಮುಂಬೈ: ಬಾಲಿವುಡ್ ಸಿಂಗಂ ಅಜಯ್ ದೇವಗನ್ ಅವರ ಪ್ರತಿ ಸಿನಿಮಾಗಳಲ್ಲಿ ಸ್ಪೆಷಲ್ ಸ್ಟಂಟ್ ಸೀನ್ ಇದ್ದೇ ಇರುತ್ತದೆ. ನೋಡಲು ಸರಳವಾಗಿ ಕಂಡರೂ, ಸ್ಟಂಟ್ ಪ್ರಯತ್ನ ಮಾಡಲು ಹೋದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಸಿನಿಮಾಗಳಿಂದ ಪ್ರೇರಿತಗೊಂಡ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಫಾಲೋ ಮಾಡುತ್ತಾರೆ. ಇದೀಗ ಗಿಳಿಯೊಂದು ಅಜಯ್ ದೇವಗನ್ ಅವರನ್ನ ನಕಲು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅಜಯ್ ದೇವಗನ್ ತಮ್ಮ ಮೊದಲ ಸಿನಿಮಾದಲ್ಲಿ ಎರಡು ಬೈಕ್ ಗಳ ಮೇಲೆ ನಿಂತು ಎಂಟ್ರಿ ನೀಡಿದ್ದರು. ಹಾಗೆಯೇ ಮುಂದಿನ ಕೆಲವು ಚಿತ್ರಗಳಲ್ಲಿ ಇದೇ ರೀತಿಯ ಎಂಟ್ರಿ ಪಡೆದಿದ್ದರು. ಕೆಲವು ವರ್ಷಗಳ ಹಿಂದೆ ಬಿಡುಗಡೆಗೊಂಡ ಸನ್ ಆಫ್ ಸರ್ದಾರ್ ಸಿನಿಮಾದಲ್ಲಿ ಎರಡು ಕುದುರೆಗಳ ಮೇಲೆ ನಿಂತು ಸ್ಟಂಟ್ ಮಾಡುವ ಮೂಲಕ ನೋಡುಗರ ಹುಬ್ಬೇರುವಂತೆ ಮಾಡಿದ್ದರು. ಗೋಲ್ಮಾಲ್ ಸಿನಿಮಾದಲ್ಲಿ ಎರಡು ಕಾರುಗಳ ಮೇಲೆ ನಿಂತು ಅಜಯ್ ಎಂಟ್ರಿ ನೀಡಿದ್ದರು.

    ಏನದು ವಿಡಿಯೋ?
    ಗಿಳಿಯೊಂದು ಎರಡು ಪುಟಾಣಿ ಕಾರುಗಳ ಮೇಲೆ ನಿಂತು ಹೋಗುತ್ತದೆ. ಇದು ಅಜಯ್ ದೇವಗನ್ ಗಿಳಿ ಎಂದು ಬರೆದು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಈ ವಿಡಿಯೋವನ್ನು ರಿಟ್ವೀಟ್ ಮಾಡಿಕೊಂಡಿರುವ ಅಜಯ್ ದೇವಗನ್, ಮೆಚ್ಚುಗೆ ಸೂಚಿಸಿದ್ದಾರೆ. ಗಿಳಿ ಕಾರಿನ ಮೇಲೆ ಸ್ಟಂಟ್ ಮಾಡಿದ್ದನ್ನು, ಹಾರೋದನ್ನ ಮರೆತ ಹಾಗಿದೆ ಎಂದು ಬರೆದುಕೊಂಡಿದ್ದಾರೆ.

    ಅಜಯ್ ದೇವಗನ್ ಅಭಿನಯದ ‘ದೇ ದೇ ಪ್ಯಾರ್ ದೇ’ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಚಿತ್ರದಲ್ಲಿ 50 ವರ್ಷದ ಉದ್ಯಮಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಜಯ್ ದೇವಗನ್‍ಗೆ 24 ವರ್ಷದ ಯುವತಿಯೊಂದಿಗೆ ಪ್ರೇಮಾಂಕುರವಾಗುತ್ತದೆ. ಈ ಸಿನಿಮಾದಲ್ಲಿ ಅಜಯ್ ದೇವಗನ್ ಅವರ ಮಾಜಿ ಪತ್ನಿ ಪಾತ್ರದಲ್ಲಿ ತಬ್ಬು ಕಾಣಿಸಿಕೊಂಡಿದ್ದಾರೆ.

  • ಮಗಳನ್ನು ಟ್ರೋಲ್ ಮಾಡಿದವರ ಚಳಿ ಬಿಡಿಸಿದ ನಟ ಅಜಯ್

    ಮಗಳನ್ನು ಟ್ರೋಲ್ ಮಾಡಿದವರ ಚಳಿ ಬಿಡಿಸಿದ ನಟ ಅಜಯ್

    ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ತನ್ನ ಮಗಳನ್ನು ಟ್ರೋಲ್ ಮಾಡಿದವರ ಚಳಿ ಬಿಡಿಸಿದ್ದಾರೆ.

    ಇತ್ತೀಚೆಗೆ ಅಜಯ್ ದೇವಗನ್ ಮಗಳು ನೈಸಾ ಅವರು ನೀಲಿ ಬಣ್ಣದ ಉದ್ದದ ಹೂಡೀಸ್ ಮತ್ತು ಶಾರ್ಟ್ಸ್ ಧರಿಸಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಳು. ನೈಸಾ ಧರಿಸಿದ್ದ ಹೂಡೀಸ್ ಉದ್ದ ಇದ್ದ ಕಾರಣ ಆಕೆ ಧರಿಸಿದ ಶಾರ್ಟ್ಸ್ ಕಾಣಿಸಿರಲಿಲ್ಲ. ಇದನ್ನು ನೋಡಿದ ಟ್ರೋಲರ್ಸ್ ನೈಸಾಳನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

    ಈ ವಿಚಾರದ ಬಗ್ಗೆ ಸಂದರ್ಶನಲ್ಲಿ ಪ್ರತಿಕ್ರಿಯಿಸಿದ ಅಜಯ್ ದೇವಗನ್, ಆಕೆಗೆ ಕೇವಲ 14 ವರ್ಷ. ಜನರು ಇದನ್ನು ಮರೆತು ತಮಗೆ ಇಷ್ಟ ಬಂದ ಹಾಗೆ ಮಾತನಾಡುತ್ತಾರೆ. ಆಕೆ ಲಾಂಗ್ ಟಿ-ಶರ್ಟ್ ಹಾಗೂ ಶಾರ್ಟ್ಸ್ ಧರಿಸಿದ್ದಳು. ಟಿ-ಶರ್ಟ್ ಉದ್ದವಿದ್ದ ಕಾರಣ ಶಾರ್ಟ್ಸ್ ಕಾಣಿಸಲಿಲ್ಲ. ಅದಕ್ಕೆ ಜನರು ಟ್ರೋಲ್ ಮಾಡಲು ಶುರು ಮಾಡಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ನನ್ನ, ಕಾಜೋಲ್‍ನ ಜಡ್ಜ್ ಮಾಡಿ, ನನ್ನ ಮಕ್ಕಳನ್ನ ಅಲ್ಲ: ಟ್ರೋಲರ್ಸ್ ವಿರುದ್ಧ ಸಿಡಿದ ಅಜಯ್

    ಯಾವ ರೀತಿ ಜನರು ಇದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಫೋಟೋಗ್ರಾಫರ್ ಗಳನ್ನು ಒಂದು ಹೇಳಲು ಇಷ್ಟಪಡುತ್ತೇನೆ. ಕಲಾವಿದರ ಮಕ್ಕಳನ್ನು ಅವರ ಪಾಡಿಗೆ ಬಿಟ್ಟು ಬಿಡಿ. ಪೋಷಕರು ಸ್ಟಾರ್ ಆಗಿರುವ ಕಾರಣ ಅದರ ಶಿಕ್ಷೆ ಮಕ್ಕಳು ಏಕೆ ಸಹಿಸಕೊಳ್ಳಬೇಕು. ನನ್ನ ಮಗಳು ಯಾವಾಗಲೂ ಅಲಂಕಾರ ಮಾಡಿಕೊಂಡು ಇರುವುದಕ್ಕೆ ಆಗಲ್ಲ. ಈ ರೀತಿಯ ವಿಷಯಗಳು ತುಂಬಾ ನೋವನ್ನು ಮಾಡುತ್ತದೆ ಎಂದು ಅಜಯ್ ಪ್ರತಿಕ್ರಿಯಿಸಿದ್ದಾರೆ.

    ಸದ್ಯ ಅಜಯ್ ದೇವಗನ್ ಅವರು ‘ದೇ ದೇ ಪ್ಯಾರ್ ದೇ’, ‘ತಾನಾಜಿ’, ‘ಬೂಜ್’ ಹಾಗೂ ‘ಆರ್‍ಆರ್‍ಆರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾದ ‘ಟೋಟಲ್ ಧಮಾಲ್’ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಸಖತ್ ಸೌಂಡ್ ಮಾಡಿದೆ.

  • ನನ್ನ, ಕಾಜೋಲ್‍ನ ಜಡ್ಜ್ ಮಾಡಿ, ನನ್ನ ಮಕ್ಕಳನ್ನ ಅಲ್ಲ: ಟ್ರೋಲರ್ಸ್ ವಿರುದ್ಧ ಸಿಡಿದ ಅಜಯ್

    ನನ್ನ, ಕಾಜೋಲ್‍ನ ಜಡ್ಜ್ ಮಾಡಿ, ನನ್ನ ಮಕ್ಕಳನ್ನ ಅಲ್ಲ: ಟ್ರೋಲರ್ಸ್ ವಿರುದ್ಧ ಸಿಡಿದ ಅಜಯ್

    ಮುಂಬೈ: ತಮ್ಮ ಮಕ್ಕಳನ್ನು ಟ್ರೋಲ್ ಮಾಡುತ್ತಿದ್ದ ಟ್ರೋಲರ್ಸ್ ವಿರುದ್ಧ ಬಾಲಿವುಡ್ ನಟ ಅಜಯ್ ದೇವಗನ್ ರೊಚ್ಚಿಗೆದ್ದಿದ್ದಾರೆ.

    ಅಜಯ್ ದೇವಗನ್ ಹಾಗೂ ಕಾಜೋಲ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 15 ವರ್ಷದ ಮಗಳು ನೈಸಾ ಹಾಗೂ 8 ವರ್ಷದ ಮಗ ಯುಗ್‍ನನ್ನು ಟ್ರೋಲ್ ಮಾಡುತ್ತಿದ್ದಕ್ಕೆ ಅಜಯ್ ದೇವಗನ್ ಗರಂ ಆಗಿದ್ದಾರೆ.

    ವಿಮಾನ ನಿಲ್ದಾಣದಲ್ಲಿ ನೈಸಾ ಧರಿಸಿದ ಉಡುಪಿನ ಬಗ್ಗೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದರು. ಈ ಬಗ್ಗೆ ದೆಹಲಿಯಲ್ಲಿ ‘ಟೋಟಲ್ ಧಮಾಲ್’ ಚಿತ್ರದ ಪ್ರಮೋಶನ್ ವೇಳೆ ಮಾಧ್ಯಮದೊಂದಿಗೆ ಅಜಯ್ ದೇವಗನ್ ಮಾತನಾಡಿ. “ನೀವು ಬೇಕಾದರೆ ನನ್ನ ಮತ್ತು ಕಾಜೋಲ್ ಬಗ್ಗೆ ಜಡ್ಜ್ ಮಾಡಿ. ಅದನ್ನು ಬಿಟ್ಟು ನಮ್ಮ ಮಕ್ಕಳನ್ನು ಜಡ್ಜ್ ಮಾಡಬೇಡಿ. ನಾನು ಹಾಗೂ ಕಾಜೋಲ್ ಕಲಾವಿದರಾದ ಕಾರಣ ನಮ್ಮ ಮಕ್ಕಳು ಕ್ಯಾಮೆರಾಗೆ ಕಾಣಿಸಿಕೊಳ್ಳುತ್ತಿರುತ್ತಾರೆ” ಎಂದು ಹೇಳಿದ್ದಾರೆ.

     

    View this post on Instagram

     

    Thank you babies for 57k ????????❤️ • #nysadevgan

    A post shared by nysa devgan ♡ (@nysadevganx) on

    ಒಬ್ಬರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ನಾನು ಬೇರೆ ವ್ಯಕ್ತಿಗಳ ಬಗ್ಗೆ ಮಾತನಾಡಲು ಶುರು ಮಾಡಿದರೆ, ಆ ವ್ಯಕ್ತಿ ಹೇಗೆ ಬೇಸರವಾಗುತ್ತೋ, ಹಾಗೆ ನನ್ನ ಮಕ್ಕಳಿಗೂ ಬೇಸರವಾಗುತ್ತೆ. ನಿಜ ಹೇಳಬೇಕೆಂದರೆ ನಾನು ಟ್ರೋಲ್ ಮಾಡುವ ವ್ಯಕ್ತಿಗಳ ಬಗ್ಗೆ ಯೋಚಿಸುವುದಿಲ್ಲ. ಆದರೆ ನನ್ನ ಮಕ್ಕಳು ಇಂತಹ ಟ್ರೋಲ್‍ಗೆ ಒಳಗಾಗುವುದು ನನಗೆ ಇಷ್ಟವಿಲ್ಲ. ಅದು ನನಗೆ ಬೇಸರವಾಗುತ್ತದೆ ಎಂದು ತಿಳಿಸಿದ್ದಾರೆ.

     

    View this post on Instagram

     

    ???????? • #nysadevgan

    A post shared by nysa devgan ♡ (@nysadevganx) on

    ಆರಂಭದಲ್ಲಿ ನನ್ನ ಮಗಳು ಮೊದಲಿಗೆ ಈ ಟ್ರೋಲ್‍ಗಳನ್ನು ನೋಡಿ ಬೇಸರಪಡುತ್ತಿದ್ದಳು. ಆದರೆ ಈಗ ಆಕೆ ಇಂತಹ ಟ್ರೋಲ್‍ಗಳಿಗೆ ಹೆಚ್ಚು ಗಮನ ಕೊಡುವುದಿಲ್ಲ. ನನ್ನ ಮಗಳಿಗೆ ಇದನ್ನು ಹೇಗೆ ನಿಭಾಯಿಸಬೇಕು ಎನ್ನುವುದು ತಿಳಿದಿದೆ. ನಾವು ಏನೇ ಮಾಡಿದರೂ ಕೆಲವರು ನಮ್ಮನ್ನು ಜಡ್ಜ್ ಮಾಡಲು ಕಾಯುತ್ತಿರುತ್ತಾರೆ. ನಾವು ಪ್ರತಿಕ್ರಿಯೆ ನೀಡಿದರೆ, ಅವರು ಇನ್ನಷ್ಟು ಹೆಚ್ಚಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಅಜಯ್ ತಮ್ಮ ಮಗಳ ಬಗ್ಗೆ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿಮಾನಿಗಳಿಗೆ ಕಾಜೋಲ್ ವಾಟ್ಸಪ್ ನಂಬರ್ ಕೊಟ್ಟ ಅಜಯ್ ದೇವಗನ್!

    ಅಭಿಮಾನಿಗಳಿಗೆ ಕಾಜೋಲ್ ವಾಟ್ಸಪ್ ನಂಬರ್ ಕೊಟ್ಟ ಅಜಯ್ ದೇವಗನ್!

    ನವದೆಹಲಿ: ಬಾಲಿವುಡ್ ನಟ ಅಜಯ್ ದೇವಗನ್ ಅಭಿಮಾನಿಗಳ ಕಾಳೆಯಲು ಹೋಗಿ ಪತ್ನಿ ಕಾಜೋಲ್ ಅವರ ವಾಟ್ಸಪ್ ನಂಬರ್ ಅನ್ನು ಟ್ವಿಟ್ಟರ್‌ನಲ್ಲಿ ಹರಿಬಿಟ್ಟಿದ್ದಾರೆ.

    ಅಭಿಮಾನಿಗಳ ಜೊತೆಗಿನ ಚರ್ಚೆಯ ವೇಳೆ ಅಜಯ್, ಕಾಜೋಲ್ ಈಗ ದೇಶದಲ್ಲಿ ಇಲ್ಲ. ಅವರನ್ನು ಸಂಪರ್ಕಿಸಲು ಈ ನಂಬರ್ ಬಳಸಿ ಎಂದು ವಾಟ್ಸಪ್ ನಂಬರ್ ಟೈಪ್ ಮಾಡಿ ಎಂದು  ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದರು.

    ಅಭಿಮಾನಿಗಳು ಕಾಜೋಲ್ ನಂಬರ್ ಸಿಕ್ಕಿದ್ದೇ ತಡ ಟ್ವೀಟ್ ಮಾಡಿದ್ದನ್ನು ಸ್ಕ್ರೀನ್‍ಶಾರ್ಟ್ ಮಾಡಿಕೊಂಡು ಕಾಜೋಲ್ ಅವರಿಗೆ ನಿಮ್ಮ ಪತಿ ನಂಬರ್ ನೀಡಿದ್ದಾರೆ ಎಂದು ಫೋಟೋವನ್ನು ಸೆಂಡ್ ಮಾಡಿದ್ದಾರೆ.

    ಸಿನಿಮಾ ಸೆಟ್‍ನಲ್ಲಿ ತಮಾಷೆಗಳು ಮಾಡಿ ಸಾಕಾಗಿತ್ತು. ಹೀಗಾಗಿ ಅಭಿಮಾನಿಗಳ ಮೂಲಕ ಕಾಲೆಳೆಯಲು ಪತ್ನಿಯ ನಂಬರ್ ಹಾಕಿದ್ದೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕಾಜೋಲ್ ಪ್ರತಿಕ್ರಿಯಿಸಿ, ನಿಮ್ಮ ಚೇಷ್ಟೆಗಳು ಸಿನಿಮಾ ಸೆಟ್‍ನಿಂದ ಹೊರಗೆ ಬಂದಂತೆ ಕಾಣುತ್ತಿದೆ. ಈ ರೀತಿಯ ಚೇಷ್ಟೆಗಳಿಗೆ ಮನೆಯಲ್ಲಿ ಪ್ರವೇಶವಿಲ್ಲ ಎಂದು ಬರೆದು ಕೊನೆಯಲ್ಲಿ ಕೋಪದ ಎಮೋಜಿಯನ್ನು ಹಾಕಿದ್ದಾರೆ.

    ಸದ್ಯ ಅಜಯ್ ದೇವಗಾನ್ ಅವರು ‘ತಾನಾಜೀ’ ಎಂಬ ಹೊಸ ಸಿನಿಮಾ ಚಿತ್ರಿಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಕಾಜೋಲ್ ಅವರು ಕೂಡಾ ಬಹಳ ದಿನಗಳ ನಂತರ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಭಿಮಾನಿಗಳಿಗೆ ದಸರಾ ಗಿಫ್ಟ್ ಕೊಡಲಿದ್ದಾರೆ ಅಜಯ್ ದೇವಗನ್!

    ಮುಂಬೈ: ನಟ ಅಜಯ್ ದೇವಗನ್ ತಮ್ಮ ದಸರಾ ಹಬ್ಬದಂದು ತಮ್ಮ ಮುಂಬರುವ `ಗೋಲ್ಮಾಲ್ ಅಗೇನ್’ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಹಬ್ಬದ ಗಿಫ್ಟ್ ಕೊಡಲಿದ್ದಾರೆ.

    ಕಳೆದ ವಾರ ತೆರೆಕಂಡಿರೋ ಅಜಯ್ ನಟನೆಯ `ಬಾದ್ ಶಾಹೋ’ ಬಾಕ್ಸ್ ಆಫೀಸ್ ನಲ್ಲಿ ಹಣ ದೋಚುತ್ತಿದೆ. ಸಿನಿಮಾ ಇದೂವರೆಗೂ ಬರೋಬ್ಬರಿ 70 ಕೋಟಿ ರೂ.ಗೆ ಅಧಿಕ ಸಂಪಾದನೆ ಮಾಡಿದೆ ಎಂದು ಚಿತ್ರದ ಮೂಲಗಳು ಸ್ಪಷ್ಟಪಡಿಸಿವೆ.

    ಈಗಾಗಲೇ ಮೂರು ಆವೃತ್ತಿಗಳಲ್ಲಿ ತೆರೆಕಂಡಿರೋ ಗೋಲ್ಮಾಲ್ ಈಗ ನಾಲ್ಕನೇಯ ಬಾರಿಗೆ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲು ಬರಲಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಕುತೂಹಲ ಹುಟ್ಟಿಸಿರುವ ಚಿತ್ರದ ಮೊದಲ ಟ್ರೇಲರ್ ಸೆಪ್ಟಂಬರ್ 29ರಂದು ಬಿಡುಗಡೆಯಾಗಲಿದೆ. 2006ರಲ್ಲಿ ಮೊದಲ ಬಾರಿಗೆ ಗೋಲ್ಮಾಲ್ ತೆರೆಕಂಡು ನೋಡುಗರನ್ನು ನಗಿಸುವ ಮೂಲಕ ಯಶಸ್ವಿಯಾಗಿತ್ತು. ಮುಂದೆ ಗೋಲ್ಮಾಲ್ ರಿಟರ್ನ್ (2008) ಮತ್ತು ಗೋಲ್ಮಾಲ್ (2010) ರಲ್ಲಿ ತೆರೆಕಂಡಿದ್ದವು. ಈಗ ಇದೇ ಸಿನಿಮಾದ ಮುಂದುವರೆದ ಭಾಗ ದೀಪಾವಳಿಯಂದು ದೇಶಾದ್ಯಂತ ಬಿಡುಗೆಯಗಾಲಿದೆ.

    ಗೋಲ್ಮಾಲ್ ಅಗೇನ್ ಸಿನಿಮಾದಲ್ಲಿ ಅಜಯ್ ದೇವಗನ್‍ಗೆ ಜೊತೆಯಾಗಿ ಪರಿಣೀತಿ ಚೋಪ್ರಾ ಜೋಡಿಯಾಗಿದ್ದಾರೆ. ಇನ್ನುಳಿದಂತೆ ಮೊದಲಿನ ಆವೃತ್ತಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಅರ್ಷದ್ ವಾರ್ಸಿ, ತುಶಾರ್ ಕಪೂರ್, ಕುನಾಳ್ ಕೇಮು ಸೇರಿದಂತೆ ದೊಡ್ಡ ತಾರಗಣವನ್ನು ಚಿತ್ರ ಹೊಂದಿದೆ. ಗೋಲ್ಮಾಲ್ ಅಗೇನ್‍ಗೆ ರೋಹಿತ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳುವ ಜೊತೆಗೆ ಅಜಯ್ ದೇವಗನ್ ಜೊತೆಗೆ ಬಂಡವಾಳನ್ನೂ ಹೂಡಿದ್ದಾರೆ.

    https://www.instagram.com/p/BY93WjHFs_9/?tagged=golmaalagain

    https://www.instagram.com/p/BY9_5HJgSEz/?tagged=golmaalagain

    https://www.instagram.com/p/BXuocLljX-c/?tagged=golmaalagain

    https://www.instagram.com/p/BY5yGhPH5io/?tagged=golmaalagain

    https://www.instagram.com/p/BY52bHEDCLo/?tagged=golmaalagain

    https://www.instagram.com/p/BY1bgkYDLZm/?tagged=golmaalagain

    https://www.instagram.com/p/BYtZV6slBaO/?tagged=golmaalagain

    https://www.instagram.com/p/BYflPLODeFW/?tagged=golmaalagain

    https://www.instagram.com/p/BYOIx7_Fef6/?tagged=golmaalagain

  • ಅಮೀರ್ ಜೊತೆ ನಟಿಸುತ್ತೀರ ಎಂದು ಅಭಿಮಾನಿ ಕೇಳಿದ ಪ್ರಶ್ನೆಗೆ ಅಜಯ್ ಉತ್ತರಿಸಿದ್ದು ಹೀಗೆ!

    ಅಮೀರ್ ಜೊತೆ ನಟಿಸುತ್ತೀರ ಎಂದು ಅಭಿಮಾನಿ ಕೇಳಿದ ಪ್ರಶ್ನೆಗೆ ಅಜಯ್ ಉತ್ತರಿಸಿದ್ದು ಹೀಗೆ!

    ನವದೆಹಲಿ: ಅಮೀರ್ ಖಾನ್ ಜೊತೆ ನಾನು ನಟಿಸುತ್ತೇನೆ ಎಂದು ನಟ ಅಜಯ್ ದೇವಗನ್ ಹೇಳಿದ್ದಾರೆ.

    ಸೋಮವಾರ ಟ್ವಿಟ್ಟರ್ ಲೈವ್‍ನಲ್ಲಿ ಅಜಯ್ ದೇವಗನ್ ಅಭಿಮಾನಿಗಳ ಜೊತೆ ಪರಸ್ಪರ ಸಂಭಾಷಣೆ ನಡೆಸುತ್ತಿದ್ದರು. ಅಭಿಮಾನಿಗಳು ಹಲವು ಪ್ರಶ್ನೆಗಳು ಕೇಳುತ್ತಿದ್ದರು. ಅದರಲ್ಲಿ ಕೆಲವು ಪ್ರಶ್ನೆಗಳು ತುಂಬಾ ಇನ್ ಟ್ರೆಸ್ಟಿಂಗ್ ಆಗಿತ್ತು.

    ದಂಗಲ್ ಚಿತ್ರದ ನಟ ಅಮೀರ್ ಜೊತೆ ನಟಿಸುತ್ತೀರ ಎಂದು ಕೇಳಿದ ಅಭಿಮಾನಿ ಪ್ರಶ್ನೆಗೆ ಅಜಯ್ ದೇವಗನ್ ನಾನು ಖಂಡಿತ ನಟಿಸುತ್ತೇನೆ ಎಂದು ತಿಳಿಸಿದ್ದಾರೆ. ಇದಕ್ಕೆ ಅಮೀರ್ ಖಾನ್ ಹಾಗೂ ಅಜಯ್ ಇಬ್ಬರು ಚಿತ್ರದಲ್ಲಿ ನಟಿಸಲು ಒಪ್ಪಿದ್ದರೆ 1997ನ ಬ್ಲಾಕ್ ಬಸ್ಟರ್ ಚಿತ್ರ `ಇಶ್ಕ್’ ಜೊಡಿಯನ್ನು ಮತ್ತೇ ಪರದೆ ಮೇಲೆ ನೋಡಿದಂತಾಗುತ್ತದೆ ಎಂದು ಅಭಿಮಾನಿ ಪ್ರತಿಕ್ರಿಯಿಸಿದರು.

    ಕಾಜೋಲ್ ನಟಿಸಿದ ವೆಲೈಲಾ ಪಟ್ಟದಾರಿ-2 (ವಿಐಪಿ 2) ನೋಡಿದ್ದೀರ ಎಂದು ಮತ್ತೊಬ್ಬ ಅಭಿಮಾನಿಯ ಪ್ರಶ್ನೆಗೆ, ಅಜಯ್ ಇನ್ನೂ ಇಲ್ಲ ಆದಷ್ಟು ಬೇಗ ನೋಡುತ್ತೀನಿ ಎಂದು ಉತ್ತರಿಸಿದರು.

    ಅಜಯ್ ನಟನೆಯ ಬಾದ್‍ಶಾವೋ ಚಿತ್ರ ಬಿಡುಗಡೆಯಾಗಿ 4 ದಿನಗಳಲ್ಲಿ 50 ಕೋಟಿ ರೂ. ಗಳಿಸಿದೆ. ಚಿತ್ರದಲ್ಲಿ ಇಲಿಯಾನ ಡಿಕ್ರೂಸ್, ಇಮ್ರಾನ್ ಅಶ್ಮಿ, ವಿದ್ಯುತ್ ಜಮ್ವಾಲ್, ಸಂಜಯ್ ಮಿಶ್ರಾ ಹಾಗೂ ಇಶಾ ಗುಪ್ತಾ ನಟಿಸಿದ್ದಾರೆ.

    ರೋಹಿತ್ ಶೆಟ್ಟಿ ನಿರ್ದೇಶನದ ಗೋಲ್ ಮಾಲ್ ಅಗೇನ್ ಚಿತ್ರದಲ್ಲಿ ಅಜಯ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ತುಷಾರ್ ಕಪೂರ್, ಶ್ರೇಯಸ್ ತಲ್ ಪಾಡೆ, ಅರ್ಷದ್ ವಾರ್ಸಿ, ಕುನಾಲ್ ಕೇಮು, ನೀಲ್ ನಿತಿನ್ ಮುಕೇಶ್, ಪರಿಣೀತಿ ಚೋಪ್ರ ಮತ್ತು ತಬು ಕಾಣಿಸಿಕೊಳ್ಳುತ್ತಿದ್ದಾರೆ.