Tag: ಅಜಯ್ ದೇವಗನ್

  • 100 ಎಕರೆ ಪ್ರದೇಶದಲ್ಲಿ ಆರ್.ಆರ್.ಆರ್  ಕನ್ನಡ ಪ್ರಿರಿಲೀಸ್ ಇವೆಂಟ್ : ಯಾರೆಲ್ಲ ಬರ್ತಾರೆ ಗೊತ್ತಾ?

    100 ಎಕರೆ ಪ್ರದೇಶದಲ್ಲಿ ಆರ್.ಆರ್.ಆರ್ ಕನ್ನಡ ಪ್ರಿರಿಲೀಸ್ ಇವೆಂಟ್ : ಯಾರೆಲ್ಲ ಬರ್ತಾರೆ ಗೊತ್ತಾ?

    ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದ ಕನ್ನಡ ಇವೆಂಟ್ ಚಿಕ್ಕಬಳ್ಳಾಪುರದಲ್ಲಿ ನಡೆಯಲಿದೆ. ಮಾರ್ಚ್ 19ರಂದು ನಡೆಯಲಿರುವ ಈ ಇವೆಂಟ್ ಗಾಗಿ 100 ಎಕರೆ ಪ್ರದೇಶ ಸಿದ್ಧಗೊಳ್ಳುತ್ತಿದೆ. 2 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಸೇರಲಿರುವ ಈ ಕಾರ್ಯಕ್ರಮದಲ್ಲಿ ತೆಲುಗು, ತಮಿಳು ಮತ್ತು ಕನ್ನಡದ ಸ್ಟಾರ್ ನಟರು ಭಾಗಿಯಾಗುತ್ತಿರುವುದು ವಿಶೇಷ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!

    ಈ ಇವೆಂಟ್ ಅನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಲು ಚಿತ್ರತಂಡ ನಿರ್ಧರಿಸಿದ್ದು, ಪುನೀತ್ ನೆನಪಿನಲ್ಲಿ ಹಲವು ಕಾರ್ಯಕ್ರಮಗಳು ಕೂಡ ನಡೆಯುತ್ತವೆ. ಇದರ ನೇತೃತ್ವವನ್ನು ಶಿವರಾಜ್ ಕುಮಾರ್ ಅವರಿಗೆ ವಹಿಸಲಾಗಿದೆಯಂತೆ.  ಇದನ್ನೂ ಓದಿ : ಉಪೇಂದ್ರ ಅವರ ಹೊಸ ಸಿನಿಮಾದ ಪೋಸ್ಟರ್ : ಅಸಲಿನಾ? ನಕಲಾ?

    ಸಿನಿಮಾ ರಂಗದ ಕಲಾವಿದರು ಮತ್ತು ತಂತ್ರಜ್ಞರು ಮಾತ್ರವಲ್ಲ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಇದೆ. ಹಾಗಾಗಿ ಎಲ್ಲ ರೀತಿಯ ಭದ್ರತೆಯನ್ನೂ ಮಾಡಿಕೊಳ್ಳಲಾಗುತ್ತಿದೆಯಂತೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ಈ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜಮೌಳಿ, ನಟರಾದ ರಾಮ್ ಚರಣ್ ತೇಜ್, ಜ್ಯೂನಿಯರ್ ಎನ್.ಟಿ.ಆರ್, ಆಲಿಯಾ ಭಟ್, ಅಜಯ್ ದೇವಗನ್,  ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಸೇರಿದಂತೆ ಚಿತ್ರತಂಡದ ಬಹುತೇಕ ಸದಸ್ಯರು ಕೂಡ ಅಂದು ಭಾಗಿಯಾಗಲಿದ್ದಾರೆ. ಮನರಂಜನೆ ಕಾರ್ಯಕ್ರಮ ಮತ್ತು ಚಿತ್ರತಂಡದೊಂದಿಗೆ ಸಂವಾದ ಕೂಡ ಈ ಸಂದರ್ಭದಲ್ಲಿ ಏರ್ಪಡಿಸಲಾಗಿದೆ.

  • ಮಾರ್ಚ್ 14ಕ್ಕೆ ಆರ್.ಆರ್.ಆರ್ ‘ಎತ್ತುವ ಜಂಡಾ’ ಸಾಂಗ್ ರಿಲೀಸ್

    ಮಾರ್ಚ್ 14ಕ್ಕೆ ಆರ್.ಆರ್.ಆರ್ ‘ಎತ್ತುವ ಜಂಡಾ’ ಸಾಂಗ್ ರಿಲೀಸ್

    ಬಾಹುಬಲಿ ಸಿನಿಮಾದ ನಂತರ ರಾಜಮೌಳಿ ಮತ್ತು ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಕಾಂಬಿನೇಷನ್ ನ ಆರ್.ಆರ್.ಆರ್ ಸಿನಿಮಾ ಸಂಗೀತದ ಕಾರಣದಿಂದಾಗಿಯೂ ಗಮನ ಸೆಳೆಯುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ‘ಜನನಿ’, ‘ದೋಸ್ತಿ’ ಹಾಗೂ ‘ಹಳ್ಳಿನಾಟು’ ಹಾಡುಗಳು ಟಾಪ್ ಲಿಸ್ಟ್ ನಲ್ಲಿವೆ. ಈಗ ಮತ್ತೊಂದು ಹಾಡು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಇದೇ ಮಾರ್ಚ್ 14 ರಂದು ‘ಎತ್ತುವ ಜಂಡಾ’ ಸಾಂಗ್ ಬಿಡುಗಡೆ ಆಗಲಿದೆ. ಇದನ್ನೂ ಓದಿ : ತಮಿಳಿಗೆ ಹೊರಟ ಬಸಣ್ಣಿ ಖ್ಯಾತಿಯ ತಾನ್ಯ ಹೋಪ್ : ಪ್ರಶಾಂತ್ ರಾಜ್ ಚಿತ್ರಕ್ಕೆ ತಾನ್ಯ ನಾಯಕಿ

    ಈ ಹಾಡಿನ ವಿಶೇಷತೆ ಅಂದರೆ, ಸ್ಫೂರ್ತಿ ತುಂಬಬಲ್ಲಂತ ಸಾಹಿತ್ಯವನ್ನು ಒಳಗೊಂಡಿದೆ. ಅಲ್ಲದೇ, ಹಲವು ಅಪರೂಪದ ವಾದ್ಯಗಳನ್ನೂ ಈ ಹಾಡಿಗೆ ಕೀರವಾಣಿ ಬಳಸಿಕೊಂಡಿದ್ದಾರಂತೆ. ಹಾಗಾಗಿ ಬೇರೆ ರೀತಿಯ ಸೌಂಡ್ ಈ ಹಾಡಿನಲ್ಲಿದೆ. ಇದನ್ನೂ ಓದಿ : ಸೋಲೊ ಟ್ರಿಪ್ ನಲ್ಲಿ ಪ್ಯಾರ್ಗೆ ಹುಡುಗಿ ಪಾರುಲ್ ಯಾದವ್

    ಬಾಹುಬಲಿ ಸಿನಿಮಾ ನಂತರ ರಾಜಮೌಳಿ ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿದ್ದು ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಜೂ.ಎನ್.ಟಿಆರ್ ಮತ್ತು ರಾಮ್ ಚರಣ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ಬಾಲಿವುಡ್ ನಟರಾದ ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ಹಲವು ಪ್ರಮುಖ ನಟರು ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ : ಸದ್ಯ ಡೇಟಿಂಗ್, ಮುಂದೆ ಮದ್ವೆ, ಹೃತಿಕ್ –ಸಬಾ ಜೋಡಿ ಪ್ರೇಮ್ ಕಹಾನಿ

    ಡಿವಿವಿ ಎಂಟರ್‌ಟೈನ್ಮೆಂಟ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಆರ್ ಆರ್ ಆರ್ ಸಿನಿಮಾಗೆ ವಿ.ವಿಜಯೇಂದ್ರ ಪ್ರಸಾದ್ ಕಥೆ, ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿರುವ ‘ಆರ್‌ಆರ್‌ಆರ್‌’ ಚಿತ್ರವು ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್‌ ಭಾಷೆಗಳಿಗೆ ಡಬ್ ಆಗಲಿದೆ.

  • ಮಹೀಂದ್ರಾ ಶೂಟ್‍ನಲ್ಲಿ ತಾಳ್ಮೆ ಕಳೆದುಕೊಂಡ ಅಜಯ್ ದೇವಗನ್!

    ಮಹೀಂದ್ರಾ ಶೂಟ್‍ನಲ್ಲಿ ತಾಳ್ಮೆ ಕಳೆದುಕೊಂಡ ಅಜಯ್ ದೇವಗನ್!

    ಮುಂಬೈ: ಬಾಲಿವುಡ್ ಸ್ಟಾರ್ ನಟ ಮತ್ತು ಮಹೀಂದ್ರಾ ಗ್ರೂಪ್‍ನ ರಾಯಭಾರಿ ಅಜಯ್ ದೇವಗನ್ ಶೂಟಿಂಗ್ ಸಮಯದಲ್ಲಿ ತಾಳ್ಮೆಯನ್ನು ಕಳೆದುಕೊಂಡಿದ್ದಾರೆ.

    ಮಹೀಂದ್ರಾ ಟ್ರಕ್ ಮತ್ತು ಬಸ್ ತಯಾರಿಕಾ ವಿಭಾಗದ ರಾಯಭಾರಿ ಅಜಯ್ ದೇವಗನ್ ಅವರನ್ನು ಒಳಗೊಂಡ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೋದಲ್ಲಿ, ಜಾಹೀರಾತನ್ನು ಚಿತ್ರೀಕರಿಸುವಾಗ ಅಜಯ್ ದೇವಗನ್ ಸಿಟ್ಟು ಮಾಡಿಕೊಳ್ಳುವ ರೀತಿಯಲ್ಲಿಯೇ ಸ್ಕ್ರಿಪ್ಟ್ ಮಾಡಲಾಗಿತ್ತು. ಇದನ್ನೂ ಓದಿ:  1.35 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಶ್ರೀಮಂತ ಪಾಟೀಲ್

    ವೀಡಿಯೋದಲ್ಲಿ ಏನಿದೆ?
    ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ, ಅಜಯ್ ‘ಯೆ ಬಾರ್ ಬಾರ್ ಸ್ಕ್ರಿಪ್ಟ್ ಕ್ಯೂನ್ ಬದಲ್ ರಹೇ ಹೋ?(ಸ್ಕ್ರಿಪ್ಟ್ ಏಕೆ ನಿರಂತರವಾಗಿ ಬದಲಾಯಿಸಲಾಗುತ್ತಿದೆ?) ಎಂದು ಸಿಟ್ಟಾಗಿ ಶೂಟಿಂಗ್ ವೇಳೆ ಗರಂ ಆಗಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆಗ ಶೂಟಿಂಗ್‍ನಲ್ಲಿದ್ದ ಒಬ್ಬರು ಸ್ಕ್ರಿಪ್ಟ್ ಕೇವಲ ನಾಲ್ಕು ಬಾರಿ ಬದಲಾಯಿಸಲಾಗಿದೆ ಎಂದು ಪ್ರತಿಕ್ರಿಯಿಸುತ್ತಾರೆ. ಆಗ ಅಜಯ್ ನಿಟ್ಟುಸಿರು ಬಿಡುತ್ತಾರೆ. ವೀಡಿಯೋ ನಂತರ ‘ವೀಕ್ಷಿಸುತ್ತಿರಿ’ ಇನ್ನೂ ಹೆಚ್ಚು ಬರಲಿದೆ ಎಂದು ಬರೆದುಕೊಳ್ಳಲಾಗಿದೆ.

    ಈ ಮೂಲಕ ಮಹೀಂದ್ರ ಗ್ರೂಪ್ ಅಜಯ್ ಸಿಟ್ಟಾಗುವ ರೀತಿಯಲ್ಲಿಯೇ ಸ್ಕ್ರಿಪ್ಟ್ ಮಾಡಿದ್ದು, ಇದನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬುದು ಈ ಮೂಲಕ ತಿಳಿಯುತ್ತೆ. ಈ ವೀಡಿಯೋ ಶೇರ್ ಮಾಡಿದ ಅವರು, ಮಹೀಂದ್ರಾ ಟ್ರಕ್ ಬಸ್ ಚಿತ್ರೀಕರಣದಲ್ಲಿ ಅಜಯ್ ದೇವಗನ್ ಅವರು ತಮ್ಮ ಶಾಂತತೆಯನ್ನು ಕಳೆದುಕೊಂಡಿದ್ದಾರೆ ಎಂದು ನನಗೆ ತಿಳಿಸಲಾಯಿತು. ಕೊನೆಗೆ ಇದು ತಮಾಷೆಗಾಗಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ಹೊಸ ರೀತಿಯ ಪ್ರಚಾರದ ವೀಡಿಯೋ ನೋಡಿದ ನೆಟ್ಟಿಗರು ಒಂದು ನಿಮಿಷ ಶಾಕ್ ಆಗಿದ್ದು, ಪೂರ್ತಿ ವೀಡಿಯೋ ನೋಡಿದ ಮೇಲೆ ಇದನ್ನು ಪ್ರಚಾರಕ್ಕೆ ಮಾಡಿದ್ದಾರೆ ಎಂಬುದು ತಿಳಿದುಬರುತ್ತೆ. ನೆಟ್ಟಿಗರು, ‘ಜಾಹೀರಾತು ಮಾಡಲು ಉತ್ತಮ ಮಾರ್ಗ’ ಎಂದು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ಇಂದಿರಾನಗರ ಕಾ ಗುಂಡಾ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ

    ಈ ಟ್ವೀಟ್ ರೀ-ಟ್ವೀಟ್ ಮಾಡಿ ಅಜಯ್, ಈ ಶೂಟ್ ಅದ್ಭುತವಾಗಿತ್ತು ಎಂದು ಬರೆದುಕೊಂಡಿದ್ದಾರೆ.

  • RRR ಸಿನಿಮಾ ದೇಹವಾದರೆ ಅಜಯ್ ಆತ್ಮ, ಆಲಿಯಾ ಶಕ್ತಿ: ರಾಜಮೌಳಿ

    RRR ಸಿನಿಮಾ ದೇಹವಾದರೆ ಅಜಯ್ ಆತ್ಮ, ಆಲಿಯಾ ಶಕ್ತಿ: ರಾಜಮೌಳಿ

    ಮುಂಬೈ: ‘ಆರ್‌ಆರ್‌ಆರ್’ ಸಿನಿಮಾ ದೇಹವಾದರೆ ಅಜಯ್ ದೇವಗನ್ ಆತ್ಮ ಮತ್ತು ಆಲಿಯಾ ಭಟ್ ಶಕ್ತಿ ಎಂದು ನಿರ್ದೇಶಕ ಎಸ್‍ಎಸ್ ರಾಜಮೌಳಿ ಹೇಳಿದ್ದಾರೆ.

    ಎಸ್‍ಎಸ್ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಆರ್‌ಆರ್‌ಆರ್’ ಜನವರಿ 7 ರಂದು ರಿಲೀಸ್ ಆಗುವುದೆಂದು ಚಿತ್ರತಂಡ ತಿಳಿಸಿದೆ. ಈ ಹಿನ್ನೆಲೆ ಚಿತ್ರತಂಡ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದೆ. ಈ ವೇಳೆ ಸಂದರ್ಶನವೊಂದರಲ್ಲಿ ವರದಿಗಾರರು, ಈ ಸಿನಿಮಾದಲ್ಲಿ ಆಲಿಯಾ ಮತ್ತು ಅಜಯ್ ದೇವಗನ್ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇದ್ಯ ಎಂದು ಪ್ರಶ್ನೆಯನ್ನು ಕೇಳಿದರು. ಇದನ್ನೂ ಓದಿ: ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ

    ಅದಕ್ಕೆ ಉತ್ತರಿಸಿದ ರಾಜಮೌಳಿ, ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಅವರ ಪಾತ್ರಗಳು ಬಹಳ ಮುಖ್ಯವಾಗಿವೆ. ನಾವು ಆರ್‌ಆರ್‌ಆರ್ ಅನ್ನು ದೇಹವಾಗಿ ನೋಡಿದರೆ, ಅಜಯ್ ಸರ್ ಈ ಚಿತ್ರದಲ್ಲಿ ಆತ್ಮ. ಈ ಸಿನಿಮಾದಲ್ಲಿ ಎರಡು ಶಕ್ತಿಗಳಿವೆ. ಅವರನ್ನು ಸಮತೋಲನಗೊಳಿಸುವ ಸಾಮರ್ಥ್ಯ ಮತ್ತು ಶಕ್ತಿಯನ್ನು ಹೊಂದಿರುವ ಒಬ್ಬ ವ್ಯಕ್ತಿ ಇದ್ದಾರೆ. ಅವರೇ ಸೀತೆ ಪಾತ್ರದಲ್ಲಿ ನಟಿಸಿರುವ ಆಲಿಯಾ ಭಟ್ ಎಂದು ಉತ್ತರಿಸಿದರು.

    ಅಜಯ್ ಮತ್ತು ಆಲಿಯಾ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾನು ಪ್ರೇಕ್ಷಕರನ್ನು ಮೋಸ ಮಾಡಲು ಹೋಗುವುದಿಲ್ಲ. ಆಲಿಯಾ ಮತ್ತು ಅಜಯ್ ಅವರ ಪಾತ್ರ ಈ ಸಿನಿಮಾದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅದು ಅಲ್ಲದೇ ಅವರಿಬ್ಬರು ನಾಯಕರಿಗಿಂತ ಹೆಚ್ಚು ಮುಖ್ಯರಾಗಿದ್ದಾರೆ ಎಂದು ಉತ್ತರಿಸಿದರು.

    ಆರ್‌ಆರ್‌ಆರ್ ಸಿನಿಮಾದಲ್ಲಿ 1920 ರ ದಶಕ ಪೌರಾಣಿಕ ಸ್ವಾತಂತ್ರ್ಯ ಹೋರಾಟಗಾರರನ್ನು ಆಧರಿಸಿದ ಕಾಲ್ಪನಿಕ ಕಥೆ ಇದೆ. ಈ ಭಾಗದಲ್ಲಿ ಸೀತಾರಾಮರಾಜು ಪಾತ್ರದಲ್ಲಿ ರಾಮ್ ಚರಣ್ ತೇಜ್, ಕೊಮ್ಮರಮ್ ಭೀಮ್ ಪಾತ್ರದಲ್ಲಿ ಜೂ.ಎನ್‍ಟಿಆರ್ ಅಭಿನಯಿಸಿದ್ದಾರೆ. ಸೀತಾ ಪಾತ್ರದಲ್ಲಿ ಆಲಿಯಾ ಕಾಣಿಸಿದ್ದಾರೆ. ಇದನ್ನೂ ಓದಿ: ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!

    ಜೂನಿಯರ್ ಎನ್‍ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್, ಒಲಿವಿಯಾ ಮೋರಿಸ್, ಸಮುದ್ರಕನಿ, ಅಲಿಸನ್ ಡೂಡಿ, ರೇ ಸ್ಟೀವನ್ಸನ್ ಒಳಗೊಂಡಂತೆ ‘ಆರ್‍ಆರ್‍ಆರ್’ ಸಿನಿಮಾ ಬಹುದೊಡ್ಡ ತಾರಾ ಬಳಗವನ್ನು ಹೊಂದಿದೆ.

    ಈ ಸಿನಿಮಾವನ್ನು ಮುಂದಿನ ವರ್ಷ ಜ.7 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ. ಆದರೆ ಪ್ರಸ್ತುತ ಕೊರೊನಾ ಹರಡುತ್ತಿರುವ ಹಿನ್ನೆಲೆ ಇದು ಇನ್ನು ಮುಂದೆ ಹೋಗುವ ಸಾಧ್ಯತೆ ಇದೆ ಎಂದು ಕೆಲವು ಮೂಲಗಳಿಂದ ತಿಳಿದುಬರುತ್ತಿದೆ.

  • ಖಾನ್ ಸಿನಿಮಾಗಳನ್ನು ಮೀರಿಸಿ ಗೆಲುವಿನ ನಗೆ ಬೀರಿದ ಅಕ್ಷಯ್ ಕುಮಾರ್

    ಖಾನ್ ಸಿನಿಮಾಗಳನ್ನು ಮೀರಿಸಿ ಗೆಲುವಿನ ನಗೆ ಬೀರಿದ ಅಕ್ಷಯ್ ಕುಮಾರ್

    ಮುಂಬೈ: ಬಾಲಿವುಡ್ ಎಂದರೆ ನಮಗೆ ನೆನಪಾಗುವುದು ಖಾನ್ ಗಳ ಸಿನಿಮಾ. ಶಾರುಖ್, ಸಲ್ಮಾನ್ ಮತ್ತು ಅಮಿರ್ ಸಿನಿಮಾಗಳ ಬಾಕ್ಸ್ ಆಫೀಸ್ ನಲ್ಲಿ ಯಾವಾಗಲೂ ಸದ್ದು ಮಾಡುತ್ತವೆ. ಆದರೆ ಇಂದು ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ.

     

    View this post on Instagra

    wrap;”>A post shared by Akshay Kumar (@akshaykumar

    ಅಕ್ಷಯ್ ಕುಮಾರ್, ಅಜಯ್ ದೇವಗನ್ ಮತ್ತು ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿ ಸಿದ್ಧವಾಗಿರುವ ‘ಸೂರ್ಯವಂಶಿ’ ಸಿನಿಮಾ ನ.5ರಂದು ರಿಲೀಸ್ ಆಗಿದ್ದು, ರಿಲೀಸ್ ಆದ 9 ದಿನಗಳಲ್ಲಿ ವಿಶ್ವಾದ್ಯಂತ 209 ಕೋಟಿ ರೂ. ಆದಾಯವನ್ನು ಗಳಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ 164.10 ಕೋಟಿ ರೂ. ಹಾಗೂ ವಿದೇಶಿ ಬಾಕ್ಸ್ ಆಫೀಸ್‍ನಲ್ಲಿ 45.40 ಕೋಟಿ ರೂ. ಆದಾಯವನ್ನು ಗಳಿಸಿದೆ. ಈ ಹಿನ್ನೆಲೆ ‘ಸೂರ್ಯವಂಶಿ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡಿದ್ದು, ಇದನ್ನು ನೋಡಿದ ಅಕ್ಕಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಇದನ್ನೂ ಓದಿ: ಮಗಳ ಹುಟ್ಟುಹಬ್ಬವನ್ನು ವಿಲ್ಲಾದಲ್ಲಿ ಆಚರಿಸುತ್ತಿರೋ ಅಭಿ, ಐಶ್ – ದಿನಕ್ಕೆ ಇದರ ಬೆಲೆ ಎಷ್ಟು ಗೊತ್ತಾ?

    ಸೂರ್ಯವಂಶಿ ಸಿನಿಮಾ ಬಿಡುಗಡೆಯಾಗಿ ವಾರ ಕಳೆದರು ಉತ್ತಮ ಪ್ರದರ್ಶನವನ್ನು ಕಾಣುತ್ತಿದ್ದು, ಈ ಹಿಂದೆ ಅಕ್ಷಯ್ ನಟನೆಯ ‘ಬೆಲ್ ಬಾಟಂ’ ಸಿನಿಮಾ ನಿರೀಕ್ಷೆ ಮಟ್ಟವನ್ನು ತಲುಪಿರಲಿಲ್ಲ. ಆದರೆ ಈ ಸಿನಿಮಾದ ಕಲೆಕ್ಷನ್ ನೋಡಿ ಅಕ್ಕಿ ಗೆಲುವಿನ ನಗೆಯನ್ನು ಬೀರಿದ್ದಾರೆ.

    ಕೊರೊನಾ ಸಮಸ್ಯೆ ಇಲ್ಲದೇ ಹೋಗಿದ್ದರೆ ಈ ಹಿಂದೆಯೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಈ ಸಿನಿಮಾವನ್ನು ಓಟಿಟಿಗೆ ಬಿಡುವಂತೆ ಕೆಲವರು ಆಫರ್ ಸಹ ಮಾಡಿದ್ದರು. ಆದರೆ ನಿರ್ಮಾಪಕರು ಇದಕ್ಕೆ ಒಪ್ಪಿಕೊಳ್ಳದೆ, ಚಿತ್ರಮಂದಿರದಲ್ಲಿಯೇ ಸಿನಿಮಾವನ್ನು ರಿಲೀಸ್ ಮಾಡಿದ್ದು, ಈಗ ತಮ್ಮ ನಿರ್ಧಾರಕ್ಕೆ ಶಭಾಷ್ ಎನ್ನುವ ಮಟ್ಟಿಗೆ ‘ಸೂರ್ಯವಂಶಿ’ ಸಿನಿಮಾ ಯಶಸ್ಸನ್ನು ಕಾಣುತ್ತಿದೆ.

     

    View this post on Instagram

     

    A post shared by Akshay Kumar (@akshaykumar)

    ಅದು ಅಲ್ಲದೇ ಈ ಸಿನಿಮಾವನ್ನು ನೋಡಲು ಹಲವು ಕಾರಣಗಳಿದ್ದು, ಅವುಗಳು, ಹಲವು ದಿನಗಳು ಬಳಿಕ ಚಿತ್ರಮಂದಿರದಲ್ಲಿ ಒಂದು ಬಿಗ್ ಬಜೆಟ್ ಸಿನಿಮಾ ರಿಲೀಸ್ ಮಾಡಲಾಗಿದ್ದು, ಈ ಪರಿಣಾಮ ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಅಕ್ಷಯ್ ಮತ್ತು ಕತ್ರಿನಾ ಕೈಫ್ ಕಾಂಬಿನೇಷನ್ ಹೇಗೆ ಇರುತ್ತೆ ಎಂಬ ಕುತೂಹಲದಿಂದಲೂ ಈ ಸಿನಿಮಾ ಯಶಸ್ಸು ಆಗಿದೆ. ಇವರಿಬ್ಬರನ್ನು ತೆರೆ ಮೇಲೆ ನೋಡಿ ಫ್ಯಾನ್ಸ್ ಗಳು ಸಹ ಫಿದಾ ಆಗಿದ್ದಾರೆ. ಇದನ್ನೂ ಓದಿ: ಬೃಂದಾವನದಲ್ಲಿ ಅನುಮತಿ ಇಲ್ಲದೇ ರಾತ್ರಿ ಶೂಟಿಂಗ್ – ಯುಟ್ಯೂಬ್ ಅಡ್ಮಿನ್ ಅರೆಸ್ಟ್

    ಈ ಸಿನಿಮಾಗೆ ರೋಹಿತ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಸಾಹಸ ದೃಶ್ಯಗಳು ಅದ್ದೂರಿಯಾಗಿ ಮೂಡಿಬಂದಿದ್ದು, ಈ ಎಲ್ಲ ಕಾರಣಗಳಿಂದ ‘ಸೂರ್ಯವಂಶಿ” ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ.

  • 60 ಕೋಟಿ ವೆಚ್ಚದ ದುಬಾರಿ ಬಂಗಲೆ ಖರೀದಿಸಿದ ಅಜಯ್ ದೇವಗನ್

    60 ಕೋಟಿ ವೆಚ್ಚದ ದುಬಾರಿ ಬಂಗಲೆ ಖರೀದಿಸಿದ ಅಜಯ್ ದೇವಗನ್

    ಮುಂಬೈ: ಬಾಲಿವುಡ್ ಬಿಗ್‍ಬಿ ಅಮಿತಾಬ್ ಬಚ್ಚನ್, ಅರ್ಜುನ್ ಕಪೂರ್ ಮತ್ತು ಜಾನ್ವಿ ಕಪೂರ್ ನಂತರ ಇದೀಗ ನಟ ಅಜಯ್ ದೇವಗನ್ ದುಬಾರಿ ಬಂಗಲೆಯನ್ನು ಖರೀದಿಸಿದ್ದಾರೆ ಎಂಬ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ನಟ ಅಜಯ್ ದೇವಗನ್‍ರವರು ಜುಹುವಿನಲ್ಲಿ 590 ಚದರ ಅಗಲದ 60 ಕೋಟಿ ರೂ. ಮೌಲ್ಯದ ಬಂಗಲೆಯನ್ನು ಖರೀದಿಸಿದ್ದು, ಈ ಬಂಗಲೆ ಪ್ರಸ್ತುತ ಅಜಯ್ ದೇವಗನ್‍ರವರ ಬಂಗಲೆ ಸಮೀಪದಲ್ಲಿದೆ. ಜುಹಿವಿನಲ್ಲಿರುವ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್ ಬಳಿ ಈ ಬಂಗಲೆಯಿದ್ದು ಈ ಪ್ರದೇಶದಲ್ಲಿ ಅಮಿತಾಬ್ ಬಚ್ಚನ್, ಹೃತಿಕ್ ರೋಷನ್, ಧರ್ಮೇಂದ್ರ ಮತ್ತು ಅಕ್ಷಯ್ ಕುಮಾರ್ ನಂತಹ ದೊಡ್ಡ ದೊಡ್ಡ ಸ್ಟಾರ್ ನಟರು ವಾಸವಾಗಿದ್ದಾರೆ.

    ಕಳೆದ ಒಂದು ವರ್ಷದಿಂದ ನಟ ಅಜಯ್ ದೇವಗನ್‍ರವರು ಹೊಸ ಬಂಗಲೆ ಖರೀದಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಡಿಸೆಂಬರ್‍ನಲ್ಲಿ ಡೀಲ್ ಮಾಡಿಕೊಂಡು ಇದೀಗ ಹೊಸ ಬಂಗಲೆಯನ್ನು ಖರೀದಿಸಿದ್ದಾರೆ ಎಂದು ರಿಯಲ್ ಎಸ್ಟೇಟ್ ಮೂಲಗಳು ತಿಳಿಸಿದೆ. ಇನ್ನೂ ಈ ಬಂಗಲೆ ಅಜಯ್‍ದೇವಗನ್ ಹಾಗೂ ತಾಯಿ ವೀಣಾ ಅವರ ಹೆಸರಿನಲ್ಲಿದ್ದು, ಸುಮಾರು 60-70 ಕೋಟಿ ರೂ. ಬೆಲೆ ಬಾಳುವ ಬಂಗಲೆಯಾಗಿದೆ. ಇದನ್ನು ಓದಿ: ನಟ ಅಜಯ್‍ರಾವ್ ಮೇಕಪ್ ಮ್ಯಾನ್ ಕೊರೊನಾಗೆ ಬಲಿ

    ಇತ್ತೀಚೆಗಷ್ಟೇ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಸ್ವಾಂಕಿಯಲ್ಲಿ 31 ಕೋಟಿಯ ಅಪಾರ್ಟ್‍ಮೆಂಟ್ ಮತ್ತು ನಟ ಅರ್ಜುನ್ ಕಪೂರ್ ಬಾಂದ್ರಾದಲ್ಲಿರುವ ಗೆಳತಿ ಮಲೈಕಾ ಅರೋರಾ ಅವರ ಮನೆಯ ಬಳಿ 20 ಕೋಟಿ ವೆಚ್ಚದ 4 ಬೆಡ್ ರೂಮ್ ಇರುವ ಅಪಾರ್ಟ್‍ಮೆಂಟ್ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ.

  • ನನ್ನ ಮೇಲೆ ಹಲ್ಲೆ ನಡೆದಿಲ್ಲ: ಅಜಯ್ ದೇವಗನ್ ಸ್ಪಷ್ಟನೆ

    ನನ್ನ ಮೇಲೆ ಹಲ್ಲೆ ನಡೆದಿಲ್ಲ: ಅಜಯ್ ದೇವಗನ್ ಸ್ಪಷ್ಟನೆ

    ಮುಂಬೈ: ನನ್ನ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಎಂದು ನಟ ಅಜಯ್ ದೇವಗನ್ ಸ್ಪಷ್ಟನೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಜಯ್ ದೇವಗನ್ ಹೋಲಿಕೆಯುಳ್ಳಿ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆದಿರುವ ವೀಡಿಯೋ ವೈರಲ್ ಆಗಿದೆ.

    ಅಜಯ್ ಸ್ಪಷ್ಟನೆ: ನನ್ನ ಹಾಗೆ ಇರೋ ವ್ಯಕ್ತಿ ಕಷ್ಟದಲ್ಲಿ ಸಿಲುಕಿರಬಹುದು. ಈ ವೀಡಿಯೋಗೆ ಸಂಬಂಧಿಸಿದಂತೆ ಹಲವರು ನನ್ನನ್ನು ಸಂಪರ್ಕಿಸಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಇನ್ನು ಕೆಲವರು ಘಟನೆ ಬಗ್ಗೆ ಸ್ಪಷ್ಟನೆ ಕೇಳುತ್ತಿದ್ದಾರೆ. ನಾನು ಯಾವುದೇ ಪ್ರವಾಸದಲ್ಲಿಲ್ಲ. ನನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ನಿರಾಧಾರ. ನಾನು ಚೆನ್ನಾಗಿದ್ದೇನೆ. ಹೋಳಿ ಹಬ್ಬದ ಶುಭಾಶಗಳು ಎಂದು ಬರೆದು ಸ್ಪಷ್ಟನೆ ನೀಡಿದ್ದಾರೆ.

    ಅಜಯ್ ದೇವಗನ್ ಮೇಲೆ ಹಲ್ಲೆ ನಡೆದಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದೆ. ಇದೆಲ್ಲ ಅಪ್ಪಟ ಸುಳ್ಳು. ಈ ಸಂಬಂಧ ನ್ಯೂಸ್ ಏಜೆನ್ಸಿ, ಪತ್ರಕರ್ತರಿಗೂ ಮಾಹಿತಿ ನೀಡಲಾಗಿದೆ. ತಮ್ಮ ತಂಡದೊಂದಿಗೆ ಮುಂಬೈನಲ್ಲಿ ‘ಮೈದಾನ್’, ‘ಮೆಡೆ’ ಮತ್ತು ‘ಗಂಗೂಬಾಯಿ ಕಾಠಿಯಾಬಾಡಿ’ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ 14 ತಿಂಗಳಿನಿಂದ ದೆಹಲಿಗೆ ಪ್ರಯಾಣ ಬೆಳೆಸಿಲ್ಲ ಎಂದು ಅಜಯ್ ದೇವಗನ್ ಆಪ್ತ ಹೇಳಿದ್ದಾರೆ. ಇದನ್ನೂ ಓದಿ: ಅಜಯ್ ದೇವಗನ್‍ರನ್ನು ಭೇಟಿಯಾದ ಕಿಚ್ಚ – ಪತಿ ಕಾಲೆಳೆದ ಪ್ರಿಯಾ

    2020 ಜನವರಿಯಲ್ಲಿ ಕೊನೆಯ ಬಾರಿ ಅಜಯ್ ದೇವಗನ್ ದೆಹಲಿಗೆ ಭೇಟಿ ನೀಡಿದ್ದರು. ಅದು ತಾನ್ಹಾಜಿ ಸಿನಿಮಾ ಪ್ರಮೋಷನ್ ಗಾಗಿ ಚಿತ್ರತಂಡದ ಜೊತೆ. ವೈರಲ್ ಆಗಿರುವ ವೀಡಿಯೋ ನಕಲಿ. ಅಲ್ಲಿರುವ ವ್ಯಕ್ತಿಯೂ ಅಜಯ್ ಅವರಿಗೂ ಹೋಲಿಕೆ ಇರಬಹುದು. ಸುದ್ದಿ ಪ್ರಸಾರಕ್ಕೂ ಮುನ್ನ ಸ್ಪಷ್ಟನೆ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಜಯ್ ದೇವಗನ್ ಕಾರು ತಡೆದು ಯುವಕ ರಂಪಾಟ – ವೀಡಿಯೋ ವೈರಲ್

  • ನಟ ಅಜಯ್ ದೇವಗನ್ ಸಹೋದರ ನಿಧನ

    ನಟ ಅಜಯ್ ದೇವಗನ್ ಸಹೋದರ ನಿಧನ

    ಮುಂಬೈ: ನಟ ಅಜಯ್ ದೇವಗನ್ ಅವರ ಸಹೋದರ, ನಿರ್ದೇಶಕ ಅನಿಲ್ ದೇವಗನ್(45) ನಿಧನರಾಗಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಅಜಯ್ ದೇವಗನ್ ಸಹೋದರ ನಿಧನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ರಾತ್ರಿ ಸಹೋದರ ಅನಿಲ್ ದೇವಗನ್ ಅವರನ್ನು ಕಳೆದುಕೊಂಡಿದ್ದೇನೆ. ಅವರ ಅಕಾಲಿಕ ನಿಧನವು ನಮ್ಮ ಕುಟುಂಬವನ್ನು ಎದೆಗುಂದಿಸಿದೆ. ಫಿಲಂ ಕಂಪನಿ ಎಡಿಎಫ್‍ಎಫ್ ಮತ್ತು ನಾನು ಅವರ ಪ್ರೀತಿಯ ಉಪಸ್ಥಿತಿಯನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ ಎಂದಿದ್ದಾರೆ.

    ಅಲ್ಲದೆ ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವೈಯಕ್ತಿಕ ಪ್ರಾರ್ಥನಾ ಸಭೆ ನಡೆಸುವುದಿಲ್ಲ ಎಂದು ಟಜಯ್ ದೇವಗನ್ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

    ಚಲನಚಿತ್ರ ನಿರ್ದೇಶಿಸುವುದರ ಜೊತೆಗೆ ಅಜಯ್ ದೇವಗನ್ ಅಭಿನಯದ ‘ಸನ್ ಆಫ್ ಸರ್ದಾರ್’ ಚಿತ್ರದ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಅಜಯ್ ದೇವಗನ್ ಅವರ ತಂದೆ ವೀರು ದೇವಗನ್ ಅವರು ಕಳೆದ ವರ್ಷ ನಿಧನರಾಗಿದ್ದರು. ಸನಿಲ್ ದೇವಗನ್ ನಿಧನಕ್ಕೆ ಬಾಲಿವು ಚಿತ್ರರಂಗ ಹಾಗೂ ಅವರ ಅಭಿಮಾನಿ ಬಳಗ ಸಂತಾಪ ಸೂಚಿಸಿದೆ.

  • ಸುಶಾಂತ್ ಪ್ರತಿಭಾವಂತ ನಟ- ಕಂಬನಿ ಮಿಡಿದ ಮೋದಿ, ಬಾಲಿವುಡ್ ನಟರು

    ಸುಶಾಂತ್ ಪ್ರತಿಭಾವಂತ ನಟ- ಕಂಬನಿ ಮಿಡಿದ ಮೋದಿ, ಬಾಲಿವುಡ್ ನಟರು

    ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಸುದ್ದಿ ಕೇಳಿ ಬಾಲಿವುಡ್ ಚಿತ್ರರಂದವರು ಶಾಕ್ ಆಗಿದ್ದು, ಎಲ್ಲರೂ ನಟನ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.

    ನಟ ಅಕ್ಷಯ್ ಕುಮಾರ್, ಅನುಪಮ್ ಖೇರ್, ಅಜಯ್ ದೇವಗನ್, ನಟಿ ಬಿಪಾಶು ಬಸು ಸೇರಿದಂತೆ ಅನೇಕರು ಸೋಶಿಯಲ್ ಮೀಡಿಯಾದ ಮೂಲಕ ಸುಶಾಂತ್ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ.

    ನಟ ಅಕ್ಷಯ್ ಕುಮಾರ್, “ಈ ಸುದ್ದಿ ನನಗೆ ಆಘಾತವನ್ನೂಂಟು ಮಾಡಿದೆ. ಸುದ್ದಿ ತಿಳಿದು ಮಾತೇ ಬರುತ್ತಿಲ್ಲ. ನಾನು ಸುಶಾಂತ್ ಸಿಂಗ್ ಅಭಿನಯಿಸಿದ್ದ ‘ಚಿಚೋರ್’ ಸಿನಿಮಾ ನೋಡಿ ತುಂಬಾ ಆನಂದಿಸಿದ್ದೆ. ಆಗ ನನ್ನ ಸ್ನೇಹಿತ, ‘ಚಿಚೋರ್’ ಸಿನಿಮಾ ನಿರ್ಮಾಪಕ ಸಾಜಿದ್‍ಗೆ ನಾನು ಸಿನಿಮಾ ನೋಡಿ ಎಷ್ಟು ಸಂತಸಪಟ್ಟೆ ಎಂದು ಹೇಳಿದ್ದೆ. ಅಲ್ಲದೇ ಆ ಸಿನಿಮಾದಲ್ಲಿ ನಾನು ಒಂದು ಭಾಗವಾಗಿ ಅಭಿನಯಿಸಬೇಕಿತ್ತು ಎಂದು ಹೇಳಿದ್ದೆ. ಸುಶಾಂತ್ ಪ್ರತಿಭಾವಂತ ನಟ. ದೇವರು ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ಕೊಡಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ದುಃಖದಿಂದ ಬರೆದುಕೊಂಡಿದ್ದಾರೆ.

    “ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುದ್ದಿ ನಿಜಕ್ಕೂ ದುಃಖಕರವಾಗಿದೆ. ಎಂತಹ ದುರಂತ, ಅವನ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಸುಶಾಂತ್ ಕುಟುಂಬದವರಿಗೆ ನಟ ಅಜಯ್ ದೇವಗನ್ ಸಂತಾಪ ಸೂಚಿಸಿದರು.

    “ನಿಜಕ್ಕೂ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಸುದ್ದಿ ಕೇಳಿ ಶಾಕ್ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ನಟಿ ಬಿಪಾಶಾ ಬಸು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

  • ಕುಕ್ಕೆ ಸುಬ್ರಹ್ಮಣ್ಯಕ್ಕೆ ಅಜಯ್ ದೇವಗನ್ ಭೇಟಿ

    ಕುಕ್ಕೆ ಸುಬ್ರಹ್ಮಣ್ಯಕ್ಕೆ ಅಜಯ್ ದೇವಗನ್ ಭೇಟಿ

    ಮಂಗಳೂರು: ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಾಲಿವುಡ್ ನಟ ಅಜಯ್ ದೇವಗನ್ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು.

    ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಜಯ್ ದೇವಗನ್ ಭೇಟಿ ನೀಡಿ, ಆಶ್ಲೇಷ ಬಲಿ ಪೂಜೆ ಮಾಡಿಸಿದರು. ವಿಶೇಷ ಪೂಜೆ ನೆರವೇರಿಸಿದ ಬಳಿಕ ಸಂಪುಟ ನರಸಿಂಹಸ್ವಾಮಿ ಮಠದ ಸ್ವಾಮೀಜಿಯವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು. ಈ ವೇಳೆ ಅವರ ಸಹಚರರು ಹಾಗೂ ಭಕ್ತರು ಅವರಿಗೆ ಸಾಥ್ ನೀಡಿದರು.

    ಅಜಯ್ ದೇವಗನ್ ಆಗಾಗ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಇದು ಅವರ ಖಾಸಗಿ ಭೇಟಿಯಾಗಿದ್ದು, ಈ ಹಿಂದೆ ಅವರ ಸ್ನೇಹಿತರೊಬ್ಬರು ಸ್ಥಳದ ಮಹಾತ್ಮೆಯನ್ನು ವಿವರಿಸಿ, ದೇವಸ್ಥಾನಕ್ಕೆ ಭೇಟಿ ನೀಡುವಂತೆ ಸಲಹೆ ನೀಡಿದ್ದರು. ಹೀಗಾಗಿ ಅಜಯ್ ದೇವಗನ್ ಆಗಾಗ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆಯುತ್ತಾರೆ.