Tag: ಅಜಯ್ ದೇವಗನ್

  • `ನಾಟು ನಾಟು’ ಸಾಂಗ್ ಆಸ್ಕರ್ ಗೆಲ್ಲೋಕೆ ನಾನೇ ಕಾರಣ: ಅಜಯ್ ದೇವಗನ್

    `ನಾಟು ನಾಟು’ ಸಾಂಗ್ ಆಸ್ಕರ್ ಗೆಲ್ಲೋಕೆ ನಾನೇ ಕಾರಣ: ಅಜಯ್ ದೇವಗನ್

    ರಾಜಮೌಳಿ (Rajamouli) ನಿರ್ದೇಶನದ RRR ಸಿನಿಮಾದ `ನಾಟು ನಾಟು’ (Naatu Naatu Song)  ಹಾಡಿಗೆ ಆಸ್ಕರ್ ಬಂದಿರೋದು ವಿಶ್ವದೆಲ್ಲೆಡೆಯಿಂದ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ನಾಟು ನಾಟು ಸಾಂಗ್ ಆಸ್ಕರ್ ಗೆದ್ದಿರೋದ್ದಕ್ಕೆ ಇಡೀ ತಂಡದ ಶ್ರಮವಿದೆ. ಹೀಗಿರುವಾಗ ಹಿಂದಿ ನಟ ಅಜಯ್ ದೇವಗನ್ ಅವರು ʻನಾಟು ನಾಟು ಆಸ್ಕರ್ ಗೆದ್ದಿದ್ದಕ್ಕೆ ನಾನೇ ಕಾರಣʼ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ದೇವರಾಜ್ ನಟನೆಯ ‘ವೀರಂ’ ಟ್ರೈಲರ್ ರಿಲೀಸ್

    ಬಾಲಿವುಡ್ ನಟ ಅಜಯ್ ದೇವಗನ್ (Ajay Devgan) ನಟಿಸಿ, ನಿರ್ದೇಶಿಸಿರುವ `ಭೋಲಾ’ (Bhola) ಸಿನಿಮಾ ಮಾರ್ಚ್ 30ರಂದು ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಸದ್ಯ ಈ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ನಟ ಬ್ಯುಸಿಯಾಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ನಾಟು ನಾಟು ಹಾಡಿನ ಬಗ್ಗೆ ಅಜಯ್ ದೇವಗನ್ ತಮಾಷೆ ಮಾಡಿದ್ದಾರೆ.

    `ನಾಟು ನಾಟು’ ಹಾಡು ಆಸ್ಕರ್ ಗೆಲ್ಲೋಕೆ ಹಲವು ವಿಚಾರ ಕಾರಣ ಆಗಿದೆ. ಚಿತ್ರದ ಸಂಗೀತವೂ ಕಮಾಲ್ ಮಾಡಿದೆ. ಒಟ್ಟಾರೆ ಹಾಡಿನಲ್ಲಿರುವ ಪ್ರತಿ ವಿಚಾರವೂ ಆಸ್ಕರ್ ಗೆಲ್ಲೋಕೆ ಸಹಕಾರಿ ಆಗಿದೆ. ಈಗ ಅಜಯ್ ದೇವಗನ್ ಈ ವಿಚಾರದಲ್ಲಿ ಜೋಕ್ ಮಾಡಿದ್ದಾರೆ. ನಾಟು ನಾಟು’ ಆಸ್ಕರ್ ಗೆಲ್ಲೋಕೆ ನಾನೇ ಕಾರಣ, ಏಕೆಂದರೆ ನಾನು ಆ ಹಾಡಿನಲ್ಲಿ ಡ್ಯಾನ್ಸ್ ಮಾಡಿಲ್ಲವಲ್ಲ ಎಂದಿದ್ದಾರೆ. ಈ ಮೂಲಕ ತಮಗೆ ಡ್ಯಾನ್ಸ್ ಮಾಡೋಕೆ ಬರಲ್ಲ ಎಂದಿದ್ದಾರೆ.

    ಇದೀಗ ಅಜಯ್ ದೇವಗನ್ ಅವರ ಜೋಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಮೊದಲ ಬಾರಿಗೆ ಅವರು ನಗೋದನ್ನ ನೋಡಿದೆವು ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.

  • ಕಾಜೊಲ್ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ ಕಿಚ್ಚ ಸುದೀಪ್

    ಕಾಜೊಲ್ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ ಕಿಚ್ಚ ಸುದೀಪ್

    ಬಾಲಿವುಡ್ ಖ್ಯಾತನಟಿ ಕಾಜೊಲ್ ಜೊತೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಕಿಚ್ಚ ಸುದೀಪ್. ಆದರೆ, ಕೆಲವು ಷರತ್ತುಗಳನ್ನೂ ಅವರು ಹಾಕಿದ್ದಾರೆ. ಕಾಜೊಲ್ ಪತಿ, ಬಾಲಿವುಡ್ ನಟ ಅಜಯ್ ದೇವಗನ್ ಈ ವಿಷಯದಲ್ಲಿ ತಮ್ಮನ್ನು ದ್ವೇಷಿಸಬಾರದು ಎಂದು ತಮಾಷೆ ಮಾಡಿದ್ದಾರೆ. ಜೊತೆಗೆ ಅಜಯ್ ದೇವಗನ್ ತಮ್ಮಿಷ್ಟದ ನಟ ಎಂದೂ ಕಿಚ್ಚ ಹೇಳಿಕೊಂಡಿದ್ದಾರೆ.

    ಭಾಷಾ ವಿಷಯದಲ್ಲಿ ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ಟ್ವೀಟ್ ವಾರ್ ನಡೆದಿತ್ತು. ಹಿಂದಿ ಭಾಷೆಯನ್ನು ಅಜಯ್ ದೇವಗನ್ ರಾಷ್ಟ್ರ ಭಾಷೆ ಎಂದು ಕರೆದಿದ್ದರೆ, ಕನ್ನಡವೂ ಕೂಡ ರಾಷ್ಟ್ರ ಭಾಷೆ ಎಂದು ಹೇಳುವ ಮೂಲಕ ಕಿಚ್ಚ ಕನ್ನಡ ಪ್ರೇಮವನ್ನು ಮೆರೆದಿದ್ದರು. ಇದು ಸಾಕಷ್ಟು ಸುದ್ದಿ ಮಾಡಿತ್ತು. ಕೊನೆಗೆ ಒಬ್ಬರಿಗೊಬ್ಬರು ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ಸುಖಾಂತ್ಯ ಹಾಡಿದ್ದರು. ಇದೀಗ ಕಾಜೊಲ್ ಬಗ್ಗೆ ಸುದೀಪ್ ಮಾತಾಡುವ ಮೂಲಕ ತಮ್ಮಗೆ ಯಾರ ಮೇಲೂ ದ್ವೇಷವಿಲ್ಲ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಇದನ್ನೂ ಓದಿ: ಶರಣ್ ಜೊತೆ ತೆರೆಹಂಚಿಕೊಳ್ಳಲಿದ್ದಾರೆ ಅಮೃತಾ ಅಯ್ಯಂಗಾರ್

    ಮಾಧ್ಯಮದೊಂದಿಗೆ ಮಾತನಾಡಿರುವ ಸುದೀಪ್, ‘ನಾನು ಕಾಜೊಲ್ ಜೊತೆ ನಟಿಸಲು ಕಾಯುತ್ತಿದ್ದೇನೆ. ಅಂಥದ್ದೊಂದು ಅವಕಾಶ ಸಿಗಲಿ. ಅವಕಾಶ ಸಿಕ್ಕಾಗಿ ಅಜಯ್ ದೇವಗನ್ ಕೋಪಿಸಿಕೊಳ್ಳದಿರಲಿ ಎಂದು ತಮಾಷೆ ಮಾಡಿದ್ದಾರೆ. ವೈಯಕ್ತಿಕ  ವಿಚಾರಕ್ಕೆ ಅಜಯ್ ಅವರ ಜೊತೆ ತಾವು ವಾದ ಮಾಡಲಿಲ್ಲ ಎನ್ನುವುದನ್ನು ಕಿಚ್ಚ ಸ್ಪಷ್ಟ ಪಡಿಸಿದ್ದಾರೆ. ಎಲ್ಲವೂ ಪ್ರೀತಿಯಿಂದ ಸುಖಾಂತ್ಯವಾಗಿದ್ದನ್ನೂ ಅವರು ನೆನಪಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಕೆಜಿಎಫ್ 2′ ನಟಿ ರವೀನಾ ಟಂಡನ್ ಪುತ್ರಿ ರಾಶಾ ಬಾಲಿವುಡ್‌ಗೆ ಎಂಟ್ರಿ

    `ಕೆಜಿಎಫ್ 2′ ನಟಿ ರವೀನಾ ಟಂಡನ್ ಪುತ್ರಿ ರಾಶಾ ಬಾಲಿವುಡ್‌ಗೆ ಎಂಟ್ರಿ

    ಬಾಲಿವುಡ್‌ನ (Bollywood) ಸ್ಟಾರ್ ಕಲಾವಿದರ ಮಕ್ಕಳು ಒಬ್ಬಬ್ಬರೇ ಸಿನಿರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಇದೀಗ ಈ ಸಾಲಿಗೆ ʻಕೆಜಿಎಫ್‌ 2ʼ ಖ್ಯಾತಿಯ ರವೀನಾ ಟಂಡನ್ (Raveena Tandon) ಮುದ್ದಿನ ಮಗಳು ರಾಶಾ (Rasha) ಬಿಟೌನ್‌ಗೆ ಲಗ್ಗೆ ಇಡ್ತಿದ್ದಾರೆ.

    ಚಿತ್ರರಂಗದಲ್ಲಿ ನಟ- ನಟಿಯರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿವೆ. ಇದೀಗ ಮತ್ತೊಬ್ಬ ಸ್ಟಾರ್‌ಕಿಡ್ ನಟನೆಗೆ ಪದಾರ್ಪಣೆ ಮಾಡುವ ಸುದ್ದಿ ಕೇಳಿ ಬರುತ್ತಿದೆ. ಬಾಲಿವುಡ್‌ನ ಜನಪ್ರಿಯ ನಟಿ ರವೀನಾ ಟಂಡನ್ (Raveena Tandon) ಮತ್ತು ಅನಿಲ್ ಥಡಾನಿ (Anil Thadani) ಅವರ ಪುತ್ರಿ ರಾಶಾ ಶೀಘ್ರದಲ್ಲಿಯೇ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ.

     

    View this post on Instagram

     

    A post shared by Rasha (@rashathadani)

    ರಾಶಾಗೆ ಈಗ 17ರ ಹರೆಯ. ಈಕೆ ಈಗ ತಾಯಿ ರವೀನಾ ಅವರಂತೆಯೇ ಸಾಗಲು ಸಿದ್ಧತೆ ನಡೆಸಿದ್ದಾಳೆ. ರವೀನಾ ಅವರ ಮಗಳು ಸದ್ಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೇ ಇದ್ದರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಈಕೆಗೆ 2 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳು ಇದ್ದಾರೆ. ಇದನ್ನೂ ಓದಿ: ಬಳ್ಳಾರಿ ಉತ್ಸವದಲ್ಲಿ ಮಂಗ್ಲಿ ಕಾರು ಒಡೆದ ಕಿಡಿಗೇಡಿಗಳು- ಮೇಕಪ್‌ ರೂಂಗೆ ನುಗ್ಗಿ ದಾಂಧಲೆ

    ನಿರ್ದೇಶಕ ಅಭಿಷೇಕ್ ಕಪೂರ್ (Abhishek Kapoor) ತಮ್ಮ ಮುಂದಿನ ಚಿತ್ರದಲ್ಲಿ, ರವೀನಾ ಟಂಡನ್ ಮತ್ತು ಅನಿಲ್ ಥಡಾನಿ ಅವರ ಪುತ್ರಿ ರಾಶಾ ಅವರನ್ನು ಪರಿಚಯಿಸಲಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ಇನ್ನೂ ಹೆಸರಿಡಲಿಲ್ಲ. ಆದರೆ ಇದೊಂದು ಆ್ಯಕ್ಷನ್ ಓರಿಯೆಂಟೆಡ್ ಚಿತ್ರವಾಗಿದ್ದು, ಅಜಯ್ ದೇವಗನ್ (Ajay Devgan) ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಅಜಯ್ ದೇವಗನ್ ಅವರ ಸೋದರಳಿಯ ಅಮನ್ ದೇವಗನ್ (Aman Devgan) ಕೂಡ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಅಜಯ್ ದೇವಗನ್ ಅವರು ಹಿಂದೆಂದೂ ಮಾಡಿರದಂಥ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

    ರಾಶಾ ಮತ್ತು ಅಮನ್ ದೇವಗನ್ ಸಿನಿಮಾ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರದ ಮೂಲಕ  ಬಾಲಿವುಡ್‌ಗೆ ಪಾದಾರ್ಪಾಣೆ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪನೋರಮಾ ಸ್ಟುಡಿಯೋ ತೆಕ್ಕೆಗೆ ಝೈದ್ ಖಾನ್ ನಟನೆಯ ‘ಬನಾರಸ್’ ಸಿನಿಮಾ

    ಪನೋರಮಾ ಸ್ಟುಡಿಯೋ ತೆಕ್ಕೆಗೆ ಝೈದ್ ಖಾನ್ ನಟನೆಯ ‘ಬನಾರಸ್’ ಸಿನಿಮಾ

    ಝೈದ್ ಖಾನ್ (Zaid Khan) ನಟನೆಯ ಮತ್ತು ಸೋನಲ್ (Sonal) ಕಾಂಬಿನೇಷನ್ ನ ‘ಬನಾರಸ್’ ಸಿನಿಮಾ ತಂಡದಿಂದ ದಿನಕ್ಕೊಂದು ಹೊಸ ಹೊಸ ಅಚ್ಚರಿಗಳು ಎದುರುಗೊಳ್ಳುತ್ತಿವೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಹಾಗಾಗಿ ಈಗಿನಿಂದಲೇ ಬಿಡುಗಡೆಗೆ ಭರ್ಜರಿ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ.

    ನವೆಂಬರ್ 4ರಂದು ಬನಾರಸ್ (Banaras) ಸಿನಿಮಾ ದೇಶಾದ್ಯಂತ ರಿಲೀಸ್ ಆಗುತ್ತಿದ್ದು, ಸಿನಿಮಾದ ಬಗ್ಗೆ ಸಹಜವಾಗಿಯೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆಗಳು ಮೂಡಿವೆ. ಅದಕ್ಕೆ ಕಾರಣ ಟ್ರೇಲರ್ ನಲ್ಲಿ ಕಂಡ ಅದ್ಭುತ ಪ್ರಪಂಚ. ಮಾಯಗಂಗೆ ಹಾಡಿನಲ್ಲಿ ಕಂಡ ಸುಂದರ ಕಾಶಿ. ಇದು ಯಾವ ಜಾನರಿನ ಸಿನಿಮಾ ಅಂತ ಊಹೆ ಮಾಡಿಕೊಳ್ಳುವುದಕ್ಕು ಮೊದಲೇ ನಿರ್ದೇಶಕ ಜಯತೀರ್ಥ ಅವರು ಇದು ಎಲ್ಲಾ ಜಾನರಿನ ಸಿನಿಮಾ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. ಇದೀಗ ರಿಲೀಸ್ ಗೆ ರೆಡಿಯಾಗಿರುವ ಬನಾರಸ್ ಕಡೆಯಿಂದ ಬ್ಯಾಕ್ ಟು ಬ್ಯಾಕ್ ಖುಷಿಯ ಸಂದೇಶಗಳು ರವಾನೆಯಾಗುತ್ತಿವೆ.

    ಬನಾರಸ್ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ. ಐದು ಭಾಷೆಯಲ್ಲಿ ರೆಡಿಯಾಗಿರುವ ಈ ಸಿನಿಮಾವನ್ನು ದೊಡ್ಡ ದೊಡ್ಡ ಸಂಸ್ಥೆಗಳೇ ವಿತರಣೆ ಮಾಡುತ್ತಿರುವುದು ದೊಡ್ಡ ಪ್ಲಸ್ ಪಾಯಿಂಟ್ ಎಂದೇ ಹೇಳಬಹುದು. ಕರ್ನಾಟಕದಲ್ಲಿ ಡಿ ಬೀಟ್ಸ್, ಕೇರಳದಲ್ಲಿ ಮುಲಕುಪ್ಪಡಂ ಇತ್ತೀಚೆಗೆ ವಿತರಣಾ ಹಕ್ಕು ಪಡೆದ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿತ್ತು. ಇದಾದ ಬಳಿಕ ಎಲ್ಲರ ಚಿತ್ತ ಹರಿದಿದ್ದು ಉತ್ತರ ಭಾರತದಲ್ಲಿ ಯಾರು ಹಂಚಿಕೆ ಮಾಡುತ್ತಾರೆ ಎಂಬುದರತ್ತ.

    ಈಗಾಗಲೇ ಎರಡು ದೊಡ್ಡ ದೊಡ್ಡ ಸಂಸ್ಥೆಗಳು ಅಸ್ತು ಎಂದಾಗ ಮತ್ತೊಂದು ದೊಡ್ಡ ಸಂಸ್ಥೆಯೇ ಆಗಿರಬೇಕು ಎಂಬ ಊಹೆ ಎಲ್ಲರಲ್ಲೂ ಇತ್ತು. ಅದೀಗ ನಿಜವಾಗಿದೆ. ಉತ್ತರ ಭಾರತದಾದ್ಯಂತ ಬನಾರಸ್ ವಿತರಿಸಲು ಪನೋರಮಾ ಸ್ಟುಡಿಯೋ (Panorama Studio) ಅಸ್ತು ಎಂದಿದೆ. ಖ್ಯಾತ ನಟ ಅಜಯ್ ದೇವಗನ್ (Ajay Devgn) ಕೂಡ ಪನೋರಮಾ ಸ್ಟುಡಿಯೋದ ಪಾಲುದಾರರಾಗಿದ್ದಾರೆ. ಇದೀಗ ಇಂಥ ದೊಡ್ಡ ಸ್ಟಾರ್ ಬನಾರಸ್ ಸಿನಿಮಾ ರಿಲೀಸ್ ಮಾಡುತ್ತಿರುವುದು ಸಹಜವಾಗಿಯೇ ಮತ್ತೊಂದು ಮಗ್ಗುಲಿನಲ್ಲಿ ನಿರೀಕ್ಷೆ ದೊಡ್ಡ ಮಟ್ಟದಲ್ಲಿ ಶುರುವಾಗಿದೆ.

    ಸದ್ಯ ಬನಾರಸ್ ಸಿನಿಮಾ ನವೆಂಬರ್ 4ಕ್ಕೆ ತೆರೆಗೆ ಬರಲಿದ್ದು, ಪ್ರಚಾರ ಕಾರ್ಯದಲ್ಲಿ ತಂಡ ಬ್ಯುಸಿಯಾಗಿದೆ. ಝೈದ್ ಖಾನ್ ಮೊದಲ ಬಾರಿಗೆ ನಾಯಕ ನಟನಾಗಿ ಎಂಟ್ರಿಯಾಗುತ್ತಿದ್ದು, ಸೋನಲ್ ಜೋಡಿಯಾಗಿದ್ದಾರೆ. ತಿಲಕ್ ರಾಜ್ ಬಲ್ಲಾಳ್ ಅದ್ದೂರಿಯಾಗಿ ಬನಾರಸ್ ಅನ್ನು ನಿರ್ಮಾಣ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿಂದೂ ದೇವರ ಅಪಹಾಸ್ಯ: ಅಜಯ್ ದೇವಗನ್ ನಟನೆಯ ‘ಥ್ಯಾಂಕ್ ಗಾಡ್’ ಸಿನಿಮಾ ನಿಷೇಧಕ್ಕೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯ

    ಹಿಂದೂ ದೇವರ ಅಪಹಾಸ್ಯ: ಅಜಯ್ ದೇವಗನ್ ನಟನೆಯ ‘ಥ್ಯಾಂಕ್ ಗಾಡ್’ ಸಿನಿಮಾ ನಿಷೇಧಕ್ಕೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯ

    ಬಾಲಿವುಡ್ ನಟ ಅಜಯ ದೇವಗನ್ (Ajay devgan)ನಟನೆಯ ‘ಥ್ಯಾಂಕ್ ಗಾಡ್’ ಸಿನಿಮಾವನ್ನು ನಿಷೇಧಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಒತ್ತಾಯಿಸಿದೆ. ಈ ಸಿನಿಮಾದಲ್ಲಿ ಹಿಂದೂ ದೇವರನ್ನು ಅಪಹಾಸ್ಯ ಮಾಡಲಾಗಿದ್ದು, ಇಂತಹ ಚಿತ್ರಗಳನ್ನು ಸೆನ್ಸಾರ್ ಮಂಡಳಿಯವರು ಬಿಡುಗಡೆ ಮಾಡಲು ಹೇಗೆ ಅನುಮತಿ ನೀಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಟ್ರೈಲರ್ ಗೂ ಕೂಡ ಸರ್ಟಿಫಿಕೇಟ್ ನೀಡಲಾಗುತ್ತದೆ. ಈ ಸಿನಿಮಾದ ದೃಶ್ಯವನ್ನು ನೋಡುವಾಗ ಸೆನ್ಸಾರ್ ಮಂಡಳಿ ನಿದ್ದೆ ಮಾಡುತ್ತಿತ್ತೆ? ಎಂದಿದ್ದಾರೆ ಹಿಂದೂ ಜನ ಜಾಗತಿ ಸದಸ್ಯರು.

    ಬಿಡುಗಡೆಯಾದ ಟ್ರೇಲರ್ ನಲ್ಲಿ ಹಿಂದೂ ಧರ್ಮದಲ್ಲಿ ಮೃತ್ಯುವಿನ ನಂತರ ಪ್ರತಿಯೊಬ್ಬರ ಪಾಪ-ಪುಣ್ಯಗಳನ್ನು ಲೆಕ್ಕ ಹಾಕುವ ‘ಚಿತ್ರಗುಪ್ತ’ ದೇವರು ಮತ್ತು ಮೃತ್ಯುವಿನ ನಂತರ ಆತ್ಮವನ್ನು ತೆಗೆದುಕೊಂಡು ಹೋಗುವ ಯಮದೇವನನ್ನು ಆಧುನಿಕ ರೂಪದಲ್ಲಿ ತೋರಿಸಲಾಗಿದೆ. ಅವರನ್ನು ನಿಷ್ಪ್ರಯೋಜಕ ಹಾಸ್ಯದ ಮಾತುಗಳನ್ನಾಡುವಂತೆ ಚಿತ್ರಿಸಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮದ ಚಿತ್ರಗುಪ್ತ ಮತ್ತು ಯಮ ದೇವರ ಅಪಹಾಸ್ಯವನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದಿದ್ದಾರೆ ಹಿಂದೂ ಜನ ಜಾಗೃತಿಯ ಸದಸ್ಯರು. ಇದನ್ನೂ ಓದಿ:ಬಂಧನದ ಭೀತಿಯಿಂದ ಕೇರಳಕ್ಕೆ ಎಸ್ಕೇಪ್ ಆದ್ರಾ ನಟಿ ಶ್ರೀಲೀಲಾ ತಾಯಿ?: ಮನೆಗೆ ಬೀಗ, ಮೊಬೈಲ್ ಆಫ್

    ನಿನ್ನೆಯಷ್ಟೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಬಾಲಿವುಡ್ ನಟ ಅಜಯ್ ದೇವಗನ್ ಸೇರಿದಂತೆ ಮೂವರು ಮೇಲೆ ದೂರು (Complaint) ದಾಖಲಾಗಿದೆ. ಇನ್ನೆಷ್ಟೇ ರಿಲೀಸ್ ಆಗಬೇಕಿರುವ ಅಜಯ್ ದೇವಗನ್ ನಟನೆಯ ‘ಥ್ಯಾಂಕ್ ಗಾಡ್’ (Thank god) ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಅದರಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸನ್ನಿವೇಶವಿದೆ ಎಂದು ಹಿಮಾಂಶು ಶ್ರೀವಾಸ್ತವ್ ಎನ್ನುವವರು ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಮೋನಿಕಾ ಮಿಶ್ರಾ ಅವರ ನ್ಯಾಯಾಲದಲ್ಲಿ (Court) ಪ್ರಕರಣ ದಾಖಲಾಗಿದೆ.

    ಥ್ಯಾಂಕ್ ಗಾಡ್ ಸಿನಿಮಾದಲ್ಲಿ ಚಿತ್ರಗುಪ್ತ ದೇವರನ್ನು ಪೂಜಿಸುವ ಕಾಯಸ್ಥ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಹಿಮಾಂಶು 9Himanshu Srivastav) ಆರೋಪ ಮಾಡಿದ್ದು, ಚಿತ್ರದ ನಟ ಅಜಯ್ ದೇವಗನ್, ಸಿದ್ಧಾರ್ಥ ಮಲ್ಹೋತ್ರಾ ಹಾಗೂ ಇಂದ್ರ ಕುಮಾರ್ ಮೇಲೆ ದೂರು ನೀಡಿದ್ದರು. ಹಿಮಾಂಶು ಅವರ ಹೇಳಿಕೆಯನ್ನು ದಾಖಲಿಸಲು ನ್ಯಾಯಾಧೀಶರು ನವೆಂಬರ್ 18 ದಿನಾಂಕ ನಿಗದಿ ಮಾಡಿದ್ದಾರೆ.

    ಅಜಯ್ ದೇವಗನ್ ಮುಖ್ಯ ಭೂಮಿಕೆಯ ಥ್ಯಾಂಕ್ ಗಾಡ್ ಸಿನಿಮಾ ತನ್ನದೇ ಆದ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಖತ್ ಮನರಂಜನೆ ಜೊತೆಗೆ ಒಂದೊಳ್ಳೆ ಸಂದೇಶವನ್ನು ನೀಡುವಂತಹ ಸಿನಿಮಾ ಇದಾಗಿದೆ. ಅಜಯ್ ದೇವಗನ್ ಕೂಡ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಅಕ್ಟೋಬರ್ 25ಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಟ್ರೈಲರ್ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ‘ಥ್ಯಾಂಕ್ ಗಾಡ್’ ಚಿತ್ರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ: ನಟ ಅಜಯ್ ದೇವಗನ್ ವಿರುದ್ಧ ದೂರು ದಾಖಲು

    ‘ಥ್ಯಾಂಕ್ ಗಾಡ್’ ಚಿತ್ರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ: ನಟ ಅಜಯ್ ದೇವಗನ್ ವಿರುದ್ಧ ದೂರು ದಾಖಲು

    ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಬಾಲಿವುಡ್ ನಟ ಅಜಯ್ ದೇವಗನ್ (Ajay Devgan) ಸೇರಿದಂತೆ ಮೂವರು ಮೇಲೆ ದೂರು ದಾಖಲಾಗಿದೆ. ಇನ್ನೆಷ್ಟೇ ರಿಲೀಸ್ ಆಗಬೇಕಿರುವ ಅಜಯ್ ದೇವಗನ್ ನಟನೆಯ ‘ಥ್ಯಾಂಕ್ ಗಾಡ್’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಅದರಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸನ್ನಿವೇಶವಿದೆ ಎಂದು ಹಿಮಾಂಶು ಶ್ರೀವಾಸ್ತವ್ ಎನ್ನುವವರು ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಮೋನಿಕಾ ಮಿಶ್ರಾ ಅವರ ನ್ಯಾಯಾಲದಲ್ಲಿ ಪ್ರಕರಣ (Complaint)  ದಾಖಲಾಗಿದೆ.

    ಥ್ಯಾಂಕ್ ಗಾಡ್ (Thank God) ಸಿನಿಮಾದಲ್ಲಿ ಚಿತ್ರಗುಪ್ತ ದೇವರನ್ನು ಪೂಜಿಸುವ ಕಾಯಸ್ಥ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಹಿಮಾಂಶು ಆರೋಪ ಮಾಡಿದ್ದು, ಚಿತ್ರದ ನಟ ಅಜಯ್ ದೇವಗನ್, ಸಿದ್ಧಾರ್ಥ ಮಲ್ಹೋತ್ರಾ ಹಾಗೂ ಇಂದ್ರ ಕುಮಾರ್ ಮೇಲೆ ದೂರು ನೀಡಿದ್ದರು. ಹಿಮಾಂಶು (Himanshu Srivastav) ಅವರ ಹೇಳಿಕೆಯನ್ನು ದಾಖಲಿಸಲು ನ್ಯಾಯಾಧೀಶರು ನವೆಂಬರ್ 18 ದಿನಾಂಕ ನಿಗದಿ ಮಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಟಿವಿ ಸೀಸನ್‌ನಲ್ಲಿ ಮತ್ತೆ ಪ್ರಶಾಂತ್‌ ಸಂಬರಗಿ, ಅನುಪಮಾ ಗೌಡ, ದೀಪಿಕಾ ದಾಸ್‌

    ಅಜಯ್ ದೇವಗನ್ ಮುಖ್ಯ ಭೂಮಿಕೆಯ ಥ್ಯಾಂಕ್ ಗಾಡ್ ಸಿನಿಮಾ ತನ್ನದೇ ಆದ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಖತ್ ಮನರಂಜನೆ ಜೊತೆಗೆ ಒಂದೊಳ್ಳೆ ಸಂದೇಶವನ್ನು ನೀಡುವಂತಹ ಸಿನಿಮಾ ಇದಾಗಿದೆ. ಅಜಯ್ ದೇವಗನ್ ಕೂಡ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಅಕ್ಟೋಬರ್ 25ಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಟ್ರೈಲರ್ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ:ಅತ್ಯುತ್ತಮ ಚಲನಚಿತ್ರ ʻಸೂರರೈ ಪೊಟ್ರುʼ

    68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ:ಅತ್ಯುತ್ತಮ ಚಲನಚಿತ್ರ ʻಸೂರರೈ ಪೊಟ್ರುʼ

    2020ನೇ ಸಾಲಿನ ಸಿನಿಮಾಗಳಿಗೆ ಇಂದು ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 68ನೇ ನ್ಯಾಷನಲ್ ಫಿಲ್ಮ್ಂ ಫೆಸ್ಟಿವಲ್‌ಗೆ 30 ಭಾಷೆಗಳಲ್ಲಿ 400ಕ್ಕೂ ಅಧಿಕ ಸಿನಿಮಾಗಳ ಅರ್ಜಿ ಸಲ್ಲಿಸಿದ್ದವು. ಇಂದು ನವದೆಹಲಿಯಲ್ಲಿ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭೆಗಳಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    1954ರಿಂದ ರಾಷ್ಟ್ರ ಪ್ರಶಸ್ತಿ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು, ಈಗ 68ನೇ ನ್ಯಾಷನಲ್ ಫಿಲ್ಮ್ಂ ಫೆಸ್ಟಿವಲ್ ಅವಾರ್ಡ್ ನೀಡಿ ಗೌರವಿಸಲಾಗಿದೆ. ಭಾರತ ಸರ್ಕಾರವು ಚಲನಚಿತ್ರೋತ್ಸವ ಜವಬ್ದಾರಿ ಹೊತ್ತುಕೊಂಡಿದೆ. ಕೋವಿಡ್‌ನಿಂದ ರಾಷ್ಟ್ರ ಪ್ರಶಸ್ತಿ ಕಾರ್ಯವನ್ನ ಮುಂದೂಡಲಾಗಿತ್ತು. 2020ರ ಸಾಲಿನಲ್ಲಿ ಸಾಧನೆ ಮಾಡಿದ ಪ್ರತಿಭೆಗೆ ಗುರುತಿಸಿ, ಗೌರವಿಸಲಾಗಿದೆ. ಇದನ್ನೂ ಓದಿ: Breaking- 68ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿ : ಡೊಳ್ಳು, ತಲೆದಂಡ, ನಾದದ ನವನೀತ ಸಿನಿಮಾಗಳಿಗೆ ರಾಷ್ಟ್ರ ಗರಿ

    ಚಲನಚಿತ್ರ ನಿರ್ಮಾಪಕರಾದ ವಿಪುಲ್ ಶಾ ಮತ್ತು ಅನುರಾಗ್ ಠಾಕೂರ್ ಅವರನ್ನ ಭೇಟಿ ಮಾಡಿ, 68ನೇ ರಾಷ್ಟ್ರ ಪ್ರಶಸ್ತಿಯ ಕುರಿತು ವರದಿ ಸಲ್ಲಿಸಲಾಯಿತು. ಯಾರಿಗೆಲ್ಲಾ ರಾಷ್ಟ್ರ ಪ್ರಶಸ್ತಿ ಬಂದಿದೆ. ಈ ಕುರಿತ ಡಿಟೈಲ್ಸ್ ಇಲ್ಲಿದೆ.

    ಅತ್ಯುತ್ತಮ ಚಲನಚಿತ್ರ: ಸೂರರೈ ಪೋಟ್ರು

    ಅತ್ಯುತ್ತಮ ನಿರ್ದೇಶಕ: ಸಚಿ, ಅಯ್ಯಪ್ಪನಂ ಕೊಶಿಯಮ್

    ಅತ್ಯುತ್ತಮ ಮನರಂಜನೆ ಚಿತ್ರ: ತಾನ್ಹಾಜಿ

    ಅತ್ಯುತ್ತಮ ನಟ: ಸೂರ್ಯ (ಸೂರರೈ ಪೋಟ್ರು)
    ಅಜಯ್ ದೇವಗನ್ ( ತಾನ್ಹಾಜಿ)

    ಅತ್ಯುತ್ತಮ ನಟಿ: ಅಪರ್ಣಾ ಬಾಲಮುರಳಿ( ಸೂರರೈ ಪೋಟ್ರು)

    ಅತ್ಯುತ್ತಮ ಪೋಷಕ ನಟಿ: ಬಿಜು ಮೆನನ್( ಅಯ್ಯಪ್ಪನಂ ಕೋಶಿಯಂ)

    Live Tv
    [brid partner=56869869 player=32851 video=960834 autoplay=true]

  • ಮತ್ತೆ ನಿರ್ದೇಶನದತ್ತ ಮುಖ ಮಾಡಿದ ಅಜಯ್ ದೇವಗನ್

    ಮತ್ತೆ ನಿರ್ದೇಶನದತ್ತ ಮುಖ ಮಾಡಿದ ಅಜಯ್ ದೇವಗನ್

    ಬಾಲಿವುಡ್ ನಟ ಅಜಯ್ ದೇವಗನ್ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. `ರನ್‌ವೇ ೩೪’ ನಂತರ ಮತ್ತೆ `ಭೋಲಾ’ ಚಿತ್ರಕ್ಕೆ ಆ್ಯಕ್ಷನ್ ಕಟ್‌ ಹೇಳಲು ಸಜ್ಜಾಗಿದ್ದಾರೆ.

    ಹಿಂದಿ ಚಿತ್ರರಂಗದಲ್ಲಿ ನಟ,ನಿರ್ದೇಶಕ, ನಿರ್ಮಾಪಕನಾಗಿ ಗಮನ ಸೆಳೆದಿರುವ ಅಜಯ್ ದೇವಗನ್ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಇತ್ತೀಚೆಗೆ `ರನ್‌ವೇ 34′ ನಟಿಸಿ, ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು. ಈ ಹಿಂದೆ `ಶಿವಾಯ್’, ಯು,ಮಿ ಔರ್ ಹಮ್ ಕೂಡ ಅಜಯ್ ನಿರ್ದೇಶನ ಮಾಡಿದ್ದರು. ಮುಂದಿನ ಪ್ರಾಜೆಕ್ಟ್ `ಭೋಲಾ’ಗೆ ನಿರ್ದೇಶಿಸಲು ರೆಡಿಯಾಗಿದ್ದಾರೆ. ಇದನ್ನೂ ಓದಿ:‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022’ ಸುಂದರಿ ಸಿನಿ ಶೆಟ್ಟಿಯ ಸಂಪೂರ್ಣ ಪರಿಚಯ : ನಮ್ಮೂರು, ನಮ್ಮೂರು ಹುಡುಗಿ

     

    View this post on Instagram

     

    A post shared by Ajay Devgn (@ajaydevgn)

    ಕಾರ್ತಿ ನಟನೆಯ `ಕೈತಿ’ ಚಿತ್ರವನ್ನ ಹಿಂದಿಯಲ್ಲಿ ರಿಮೇಕ್ ಮಾಡಲಾಗಿದ್ದು, `ಭೋಲಾ’ ಚಿತ್ರದ ಪ್ರಮುಖ ಪಾತ್ರದಲ್ಲಿ ಅಜಯ್ ದೇವಗನ್ ಕಾಣಿಸಿಕೊಳ್ತಿದ್ದಾರೆ. ತಮಿಳಿನಲ್ಲಿ ಕೈತಿ ಚಿತ್ರ ಸೌಂಡ್‌ ಮಾಡಿತ್ತು. ಈಗ ಬಾಲಿವುಡ್‌ನಲ್ಲಿ ʻಭೋಲಾʼ ಚಿತ್ರ ಕಮಾಲ್ ಮಾಡುತ್ತಾ ಜತೆಗೆ ಅಜಯ್ ದೇವಗನ್ ನಿರ್ದೇಶನಕ್ಕೆ ಫ್ಯಾನ್ಸ್ ಎಷ್ಟು ಮಾರ್ಕ್ಸ್ ಕೊಡುತ್ತಾರೆ ಅಂತಾ ಕಾದು ನೋಡಬೇಕಿದೆ. ಮುಂದಿನ ವರ್ಷ ಮಾರ್ಚ್‌ 30ಕ್ಕೆ ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ಕಿಚ್ಚನ ಆರ್ಭಟಕ್ಕೆ ಸೈಡಿಗೆ ಹೋದ ಅಜಯ್ ದೇವಗನ್

    ಕಿಚ್ಚನ ಆರ್ಭಟಕ್ಕೆ ಸೈಡಿಗೆ ಹೋದ ಅಜಯ್ ದೇವಗನ್

    ರಾಷ್ಟ್ರ ಭಾಷಾ ವಿಚಾರವಾಗಿ ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ಮಧ್ಯೆ ಟ್ವಿಟ್ ವಾರ್ ನಡೆದಿತ್ತು. ಹಿಂದಿ ರಾಷ್ಟ್ರ ಭಾಷೆ ಎಂದು ಒಪ್ಪಲು ಸಾಧ್ಯವೇ ಇಲ್ಲ, ಕನ್ನಡವೇ ನಮ್ಮ ಭಾಷೆ ಎಂದು ಸುದೀಪ್ ಹೇಳಿಕೆ ನೀಡಿದ್ದರು. ಇದರ ಬೆನ್ನೆಲ್ಲೆ ಅಜಯ್ ದೇವಗನ್, ಹಾಗಾದರೆ, ಹಿಂದಿಗೆ ಡಬ್ ಮಾಡಿ ಸಿನಿಮಾವನ್ನು ಯಾಕೆ ಬಿಡುಗಡೆ ಮಾಡುತ್ತೀರಿ ಎಂದು ಟಾಂಗ್ ಕೊಟ್ಟಿದ್ದರು. ಇದನ್ನೂ ಓದಿ : ತೆರೆಯ ಮೇಲೂ ನಿರ್ದೇಶಕನಾಗಿ ನಟಿಸಿದ ಯೋಗರಾಜ್ ಭಟ್

    ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ಟ್ವಿಟ್ ವಾರ್ ನಾನಾ ತಿರುವುಗಳನ್ನು ಪಡೆದುಕೊಂಡಿತು. ನಂತರ ಇದೊಂದು ಅರೆ ತಿಳುವಳಿಕೆಯಿಂದ ಆದ ಪ್ರಮಾದ ಎನ್ನುವಂತೆ ಅಜಯ್ ದೇವಗನ್ ತಿಪ್ಪೆ ಸಾರಿಸುವುದರ ಮೂಲಕ ವಿವಾದಕ್ಕೆ ಸುಖಾಂತ್ಯ ಮಾಡಿದರೆ, ಆದರೂ, ಈ ಕಿಚ್ಚು ಅಲ್ಲಿಗೆ ನಿಲ್ಲಲಿಲ್ಲ. ಇದನ್ನೂ ಓದಿ : ಪೊಲೀಸ್ ಪೇದೆ ನನ್ನನ್ನು ಸೆಕ್ಸ್ ವರ್ಕರ್ ರೀತಿ ನೋಡಿದ : ಮಲಯಾಳಿ ನಟಿ ಅರ್ಚನಾ ಆರೋಪ

    ಕಿಚ್ಚ ಸುದೀಪ್ ಅವರ ನಟನೆಯ ವಿಕ್ರಾಂತ್ ರೋಣ ಸಿನಿಮಾ ಜುಲೈ 28 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ ಎಂದು ಹೇಳಲಾಯಿತು. ಅಧಿಕೃತವಾಗಿ ಡೇಟ್ ಕೂಡ ಅನೌನ್ಸ್ ಮಾಡಿದರು ನಿರ್ಮಾಪಕರು. ಅದೇ ವೇಳೆಯಲ್ಲೇ ಅಜಯ್ ದೇವಗನ್ ನಟನೆಯ ಥ್ಯಾಂಕ್ ಗಾಡ್ ಚಿತ್ರ ಕೂಡ ರಿಲೀಸ್ ಆಗಲಿದೆ ಎಂದು ಹೇಳಲಾಯಿತು. ಕಿಚ್ಚ ಮತ್ತು ಅಜಯ್ ಮತ್ತೊಂದು ಸುತ್ತಿನ ಪೈಪೋಟಿಗೆ ಇಳಿಯಲಿದ್ದಾರೆ ಎಂದು ಬಿಂಬಿಸಲಾಯಿತು. ಇದನ್ನೂ ಓದಿ : ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

    ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಆ ದಿನ ಅಜಯ್ ದೇವಗನ್ ನಟನೆಯ ಥ್ಯಾಂಕ್ ಗಾಡ್ ಸಿನಿಮಾ ಬಿಡುಗಡೆ ಆಗುವುದಿಲ್ಲವಂತೆ. ಸಿನಿಮಾಗಳ ನಡುವೆ ಪೈಪೋಟಿ ಬೇಡವೆಂದು ಈ ಸಿನಿಮಾದ ದಿನಾಂಕವನ್ನು ಬದಲಿಸುತ್ತಿದೆಯಂತೆ ಚಿತ್ರತಂಡ. ಹಾಗಾಗಿ ಜುಲೈ 28 ರಂದು ಕೇವಲ ವಿಕ್ರಾಂತ್ ರೋಣ ಮಾತ್ರ ಬಿಡುಗಡೆ ಆಗುತ್ತಿದೆ ಎನ್ನಲಾಗುತ್ತಿದೆ.

  • ಬಾಲಿವುಡ್ ದಿಗ್ಗಜ ನಟರ ವಿರುದ್ಧ ದೂರು ದಾಖಲು

    ಬಾಲಿವುಡ್ ದಿಗ್ಗಜ ನಟರ ವಿರುದ್ಧ ದೂರು ದಾಖಲು

    ಮಾಜಕ್ಕೆ ಹಾನಿ ಮಾಡುವಂತಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟ, ನಟಿಯರು ಹಾಗೂ ಸಿಲೆಬ್ರಿಟಿಗಳ ಬಗ್ಗೆ ಅಲ್ಲಲ್ಲಿ ವಿರೋಧಗಳು ವ್ಯಕ್ತವಾಗುತ್ತಿವೆ. ಕನ್ನಡ ಸಿನಿಮಾ ರಂಗದಲ್ಲಿ ಹಣಕ್ಕಾಗಿ ಆನ್‌ಲೈನ್ ಆಟಗಳಿಗೆ ರೂಪದರ್ಶಿಯಾಗಿ ಕೆಲಸ ಮಾಡುತ್ತಿದ್ದ ಕಲಾವಿದರ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಈಗಲೂ ಅದು ಮುಂದುವರಿದಿದೆ. ಇದನ್ನೂ ಓದಿ : ಓಟಿಟಿಯಲ್ಲೂ ದಾಖಲೆ ಬರೆದ ‘ದಿ ಕಾಶ್ಮೀರ್ ಫೈಲ್ಸ್’

    ಹಾಗೆಯೇ ಈ ವಿರೋಧದ ಅಲೆಯು ಬಾಲಿವುಡ್‌ನಲ್ಲೂ ಮುಂದುವರಿದಿದೆ. ಆನ್‌ಲೈನ್ ಜೂಜು, ತಂಬಾಕು ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟರ ಮೇಲೆ ಮುಂಬೈನಲ್ಲಿ ದೂರು ಕೊಟ್ಟಿದ್ದು, ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಈ ನಟರ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ : ಯಶ್ ಆಸೆ ಈಡೇರಿಸುತ್ತಾರಾ ತಮಿಳಿನ ಖ್ಯಾತ ನಿರ್ದೇಶಕ ಶಂಕರ್

    ಮುಂಬೈ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಹೋರಾಟಗಾರ ತಮನ್ನಾ ಹಶ್ಮಿ ಎನ್ನುವವರು ದೂರು ನೀಡಿದ್ದು, ತಂಬಾಕು ಉತ್ಪನ್ನಗಳ ಜಾಹೀರಾತಿನಲ್ಲಿ ನಟರು ಭಾಗಿಯಾಗಿ ಯುವ ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ. ಹಾಗಾಗಿ ಅಮಿತಾಭ್ ಬಚ್ಚನ್, ಅಜಯ್ ದೇವಗನ್, ಶಾರುಖ್ ಖಾನ್, ರಣವೀರ್ ಸಿಂಗ್, ಅಕ್ಷಯ್ ಕುಮಾರ್ ಸೇರಿದಂತೆ ಹಲವು ಕಲಾವಿದರ ಹೆಸರನ್ನು ದೂರಿನಲ್ಲಿ ಹೆಸರಿಸಿ, ಕ್ರಮ ತಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ ಹಶ್ಮಿ. ಇದನ್ನೂ ಓದಿ : ಪ್ರಾದೇಶಿಕ ಭಾಷಾ ಮಹತ್ವ ಪ್ರಧಾನಿ ಮೋದಿ ಮಾತಿಗೆ ಸಂತಸ ವ್ಯಕ್ತ ಪಡಿಸಿದ ಕಿಚ್ಚ ಸುದೀಪ್

    ಈ ಹಿಂದೆಯೂ ಬಾಲಿವುಡ್‌ನಲ್ಲಿ ಇಂಥದ್ದೊಂದು ಅಭಿಯಾನ ಶುರುವಾಗಿತ್ತು. ಐಎಎಸ್ ಅಧಿಕಾರಿಯೊಬ್ಬರು ನಡೆಸಿದ ಅಭಿಯಾನದಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದರು. ಇದೀಗ ಹಶ್ಮಿ ಅವರ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ದೂರು ಕೊಟ್ಟ ಕೆಲವೇ ಗಂಟೆಗಳಲ್ಲೇ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 467, 468, 439 ಮತ್ತು 120 ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇದರ ವಿಚಾರಣೆ ನಡೆಸಲು ಕೋರ್ಟ್ ಒಪ್ಪಿಕೊಂಡಿದೆ. ವಿಚಾರಣೆಯನ್ನು ಮೇ 27ಕ್ಕೆ ನಗದಿ ಪಡಿಸಿದೆ ಎಂದು ಹಶ್ಮಿ ತಿಳಿಸಿದ್ದಾರೆ.