ಅಲ್ಲು ಅರ್ಜುನ್ (Allu Arjun) ನಟನೆಯ ಪುಷ್ಪ 2 (Pushpa 2) ಸಿನಿಮಾ ಇದೇ ಆಗಸ್ಟ್ 15ರಂದು ಬಿಡುಗಡೆ ಮಾಡುವುದಾಗಿ ಈಗಾಗಲೇ ಚಿತ್ರತಂಡ ಘೋಷಣೆ ಮಾಡಿದೆ. ಅದೇ ರೀತಿಯ ಬಾಲಿವುಡ್ ನ ಹೆಸರಾಂತ ನಟ ಅಜಯ್ ದೇವಗನ್ (Ajay Devgan) ನಟನೆಯ ಸಿಂಗಂ ಅಗೇನ್ ಚಿತ್ರ ಕೂಡ ಅದೇ ದಿನಾಂಕದಂದು ರಿಲೀಸ್ ಆಗಬೇಕಿತ್ತು. ಆದರೆ, ಸಿಂಗಂ (Singam Again) ಸೈಡ್ ಗೆ ಹೋಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.
ಪುಷ್ಪ 2 ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಸಿನಿ ಪಂಡಿತರ ಲೆಕ್ಕಾಚಾರದಂತೆ ಸಾವಿರಾರು ಕೋಟಿ ರೂಪಾಯಿ ವ್ಯಾಪಾರ ಮಾಡುವ ಶಕ್ತಿ ಈ ಚಿತ್ರಕ್ಕಿದೆಯಂತೆ. ಅಲ್ಲದೇ, ದೊಡ್ಡ ಮಟ್ಟದಲ್ಲಿ ಮತ್ತು ಹಲವು ಭಾಷೆಗಳಲ್ಲಿ ಈ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ಸಿಂಗಂ ಅಗೇನ್ ಚಿತ್ರದ ರಿಲೀಸ್ ಅನ್ನು ಮುಂದೂಡಿಕೆ ಮಾಡುವ ಯೋಚನೆ ಮಾಡಲಾಗಿದೆಯಂತೆ.
ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿಂಗಂ ಅಗೇನ್, ಅನೇಕ ಹೆಸರಾಂತ ಕಲಾವಿದರು ಇದ್ದಾರೆ. ಆದರೂ, ರೋಹಿತ್ ಶೆಟ್ಟಿ ತಮ್ಮ ಸಿನಿಮಾವನ್ನು ಪುಷ್ಪ 2 ಎದುರು ರಿಲೀಸ್ ಮಾಡಲು ಮನಸ್ಸು ಮಾಡುತ್ತಿಲ್ಲ ಎನ್ನುವುದು ಬಿಟೌನ್ ಸಮಾಚಾರ.
ಅಜಯ್ ದೇವಗನ್ (Ajay Devgan) ನಟಿಸಿರುವ ಮೈದಾನ (Maidan) ಸಿನಿಮಾ ಏಪ್ರಿಲ್ 11 ರಂದು ದೇಶಾದ್ಯಂತ ರಿಲೀಸ್ ಆಗಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈಗಾಗಲೇ ದೇಶದ ನಾನಾ ರಾಜ್ಯಗಳಲ್ಲಿ ಅಜಯ್ ದೇವಗನ್ ಅಭಿಮಾನಿಗಳು ಚಿತ್ರ ನೋಡಲು ಕಾತರದಿಂದ ಕಾಯುತ್ತಿದ್ದರು. ಇದೀಗ ಚಿತ್ರಕ್ಕೆ ತಡೆಯಾಜ್ಞೆ ತರಲಾಗಿದೆ. ಮೈಸೂರಿನ (Mysore) ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ತಡೆಯಾಜ್ಞೆಯ (Injunction) ಆದೇಶ ನೀಡಿದ್ದಾರೆ.
ಅಮಿತ್ ಶರ್ಮಾ ನಿರ್ದೇಶನದ ಈ ಚಿತ್ರವನ್ನು ಬೋನಿ ಕಪೂರ್ ಮತ್ತು ಜೀ ಸ್ಟುಡಿಯೋ ಜಂಟಿಯಾಗಿ ನಿರ್ಮಾಣ ಮಾಡಿದೆ. ಚಿತ್ರಕ್ಕಾಗಿ ಸೈವಾನ್ ಖದ್ರಾಸ್, ಆಕಾಶ್ ಜಾವ್ಲಾ ಮತ್ತು ಅರುಣವಾ ಜಾಯ್ ಸೇನ್ ಗುಪ್ತಾ ಕಥೆ ಬರೆದಿದ್ದಾರೆ. ಆದರೆ, ಆ ಕಥೆ ತಮ್ಮದು ಎಂದು ಮೈಸೂರಿನ ಸ್ಟೋರಿ ರೈಟರ್ ಅನಿಲ್ ಕುಮಾರ್ (Anil Kumar) ಎಂಬುವರು ಕೋರ್ಟ್ ಮೆಟ್ಟಿಲು ಏರಿದ್ದರು. ಅವರು ನೀಡಿರುವ ದೂರಿನ ಆಧಾರದ ಮೇಲೆ ಚಿತ್ರ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ಆದೇಶ ನೀಡಿದ ಮೈಸೂರಿನ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ.
ತಮ್ಮ ಚಿತ್ರದ ಮೂಲ ಕಥೆಯನ್ನು ಚಿತ್ರತಂಡ ಕದಿದ್ದೆ. 2019 ರ ಫೆಬ್ರವರಿಯಲ್ಲಿ ಸ್ಕ್ರೀನ್ ರೈಟ್ ಅಸೋಸಿಯೇಷನ್ ನಲ್ಲಿ ಚಿತ್ರದ ಹೆಸರನ್ನು ರಿಜಿಸ್ಟರ್ ಮಾಡಿಸಿದ್ದೇನೆ. 2018ರಲ್ಲಿ ಚಿತ್ರ ಕಥೆಯನ್ನ ಲಿಂಕ್ ಡಿನ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಕಥೆಯನ್ನ ಗಮನಿಸಿದ ಸುಕ್ ದಾಸ್ ಸೂರ್ಯವಂಶಿ ನನ್ನ ಜೊತೆ ಮಾತು ಕತೆ ನಡೆಸಿದರು. 1950 ರಲ್ಲಿ ಫೀಫಾ ವಿಶ್ವಕಪ್ ಟೂರ್ನಮೆಂಟ್ ನಿಂದ ಭಾರತ ತಂಡವನ್ನ ಹೊರಹಾಕಲಾಗಿತ್ತು. ಈ ಬಗ್ಗೆ ಚಿತ್ರ ಕಥೆಯನ್ನ ಸಿದ್ದಪಡಿಸಿದೆ. ಶಾರುಕ್ ಖಾನ್, ಸಲ್ಮಾನ್ ಖಾನ್, ಅಮಿರ್ ಖಾನ್, ಅಜಯ ದೇವಗನ್, ಅಕ್ಷರ್ ಕುಮಾರ್ ಎಲ್ಲರನ್ನ ಸೇರಿಸಿ ಚಿತ್ರ ಮಾಡಲು ನಾನೇ ಐಡಿಯಾ ಕೊಟ್ಟಿದ್ದೆ. ಪಾದ ಖಂಡುಕ ಎಂದು ಹೆಸರಿಟ್ಟಿದೆ. Players with out shoe ಎಂದು ಇಂಗ್ಲೀಷ್ ನಲ್ಲಿ ಕರೆಯುತ್ತಾರೆ. ನನ್ನ ಮೂಲ ಕಥೆಯನ್ನು ಕದ್ದು ಮೈದಾನ ಎಂದು ಹೆಸರಿಟ್ಟಿದ್ದಾರೆ. ನನಗೆ ಮೈಸೂರು ನ್ಯಾಯಾಲಯದಿಂದ ನ್ಯಾಯ ಸಿಕ್ಕಿದೆ ಎನ್ನುತ್ತಾರೆ ರೈಟರ್ ಅನಿಲ್ ಕುಮಾರ್.
ಮೈದಾನ ಚಿತ್ರಕ್ಕೆ ಮಧ್ಯಂತರ ತಡೆಯಾಜ್ಞೆ ಸಿಕ್ಕಿದೆ. ಈ ವಿಷಯ ಸಿನಿಮಾ ತಂಡದ ಗಮನಕ್ಕೆ ತಲುಪು, ಈ ಸಿನಿಮಾ ಅಂದುಕೊಂಡ ದಿನಾಂಕದಂದು ಬಿಡುಗಡೆ ಆಗತ್ತಾ? ಅಥವಾ ಬೇರೆ ಏನಾದರೂ ಉಪಾಯ ನಡೆಯತ್ತಾ ಕಾದು ನೋಡಬೇಕು.
ಅಜಯ್ ದೇವಗನ್ (Ajay Devgan) ನಟನೆಯ ಮೈದಾನ್ ಸಿನಿಮಾದ ಟ್ರೈಲರ್ ಅನ್ನು ಅವರ ಹುಟ್ಟು ಹಬ್ಬದ (Birthday) ದಿನದಂದ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ಗೆ ದಿ ಫೈನಲ್ ಟ್ರೈಲರ್ ಎಂದು ಕರೆದಿದ್ದಾರೆ. ಮೈದಾನ ಸಿನಿಮಾದ ಟ್ರೈಲರ್ ಅನ್ನು ಅವರ ಅಭಿಮಾನಿಗಳು ಮೆಚ್ಚಿಕೊಂಡು ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಈ ನಡುವೆ ಮೈದಾನ್ ಸಿನಿಮಾ ಮತ್ತೊಂದು ಭಾರೀ ಬಜೆಟ್ ಚಿತ್ರದೊಂದಿಗೆ ಪೈಪೋಟಿ ನೀಡಬೇಕಾಗಿದೆ. ಈ ಬಾರಿ ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಮತ್ತೆ ಮುಖಾಮುಖಿ ಆಗುತ್ತಿದ್ದಾರೆ. ಏಪ್ರಿಲ್ 10ರಂದು ಅಕ್ಷಯ್ ಕುಮಾರ್ ನಟನೆಯ ಬಡೆ ಮಿಯಾ ಚೋಟೆ ಮಿಯಾ ಹಾಗೂ ಅಜಯ್ ದೇವಗನ್ ಅವರ ಮೈದಾನ (Maidan) ಸಿನಿಮಾ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ. ಹೀಗೆ ಈ ಕಲಾವಿದರ ಚಿತ್ರಗಳು ಒಂದೇ ದಿನಾಂಕದಂದು ರಿಲೀಸ್ ಆಗುತ್ತಿರುವುದು 9ನೇ ಬಾರಿ ಎನ್ನುವುದು ವಿಶೇಷ.
ಮೊನ್ನೆಯಷ್ಟೇ ಅಕ್ಷಯ್ ಕುಮಾರ್ (Akshay Kumar) ಹಾಗೂ ಟೈಗರ್ ಶ್ರಾಫ್ (Tiger Shroff) ನಟನೆಯ ಬಡೆ ಮಿಯಾ ಚೋಟೆ ಮಿಯಾ (bade miyan chote miyan) ಸಿನಿಮಾದ ಟ್ರೈಲರ್ (Trailer) ರಿಲೀಸ್ ಆಗಿದೆ. ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಯಲ್ಲಿಯೂ ಮೊದಲ ನೋಟ ಅನಾವರಣಗೊಂಡಿದೆ. 3 ನಿಮಿಷ 3 ಸೆಕೆಂಡ್ ಇರುವ ಪವರ್ ಪ್ಯಾಕ್ಡ್ ಟ್ರೈಲರ್ ನಲ್ಲಿ ಅಕ್ಷಯ್ ಹಾಗೂ ಟೈಗರ್ ಭರ್ಜರಿ ಆಕ್ಷನ್ ಮೂಲಕ ಅಬ್ಬರಿಸಿದ್ದಾರೆ.
ಬಡೆ ಮಿಯಾ ಚೋಟೆ ಮಿಯಾ ಟ್ರೈಲರ್ ನಲ್ಲಿ ಮೈ ಜುಮ್ ಎನಿಸುವ ಹೈ ಆಕ್ಷನ್ ಸೀಕ್ವೆನ್ಸ್ ಹೈಲೆಟ್ ಆಗಿವೆ. ದೇಶಭಕ್ತಿ ಉಕ್ಕಿಸುವ ಈ ಝಲಕ್ ನಲ್ಲಿ ಕಿಲಾಡಿ ಟೈಗರ್ ಜುಗಲ್ ಬಂಧಿ ನೋಡುಗರಿಗೆ ಸಖತ್ ಕಿಕ್ ಕೊಡಲಿದೆ. ಖಳನಾಯಕನಾಗಿ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದು, ಆದ್ರೆ ಟ್ರೇಲರ್ ನಲ್ಲಿ ಅವರ ಮುಖವನ್ನೇ ರಿವೀಲ್ ಮಾಡದೇ ಚಿತ್ರತಂಡ ಸೀಕ್ರೆಟ್ ಕಾಯ್ದುಗೊಂಡಿದೆ. ಬಾಲಿವುಡ್ ನಟಿಮಣಿಯರಾದ ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್, ಅಲಯಾ ಎಫ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಬಾಲಿವುಡ್ ನಲ್ಲಿ ಸ್ಟಾರ್ ವಾರ್ ಹೊಸದೇನೂ ಅಲ್ಲ. ಆದರೂ, ಹೊಂದಾಣಿಕೆಯ ಮೇಲೆ ಸಿನಿಮಾಗಳನ್ನು ರಿಲೀಸ್ ಮಾಡಿಕೊಂಡು ಬರಲಾಗುತ್ತಿದೆ. ಆದರೆ, ಈ ಬಾರಿ ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಮತ್ತೆ ಮುಖಾಮುಖಿ ಆಗುತ್ತಿದ್ದಾರೆ. ಏಪ್ರಿಲ್ 10ರಂದು ಅಕ್ಷಯ್ ಕುಮಾರ್ ನಟನೆಯ ಬಡೆ ಮಿಯಾ ಚೋಟೆ ಮಿಯಾ ಹಾಗೂ ಅಜಯ್ ದೇವಗನ್ ಅವರ ಮೈದಾನ (Maidan) ಸಿನಿಮಾ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ. ಹೀಗೆ ಈ ಕಲಾವಿದರ ಚಿತ್ರಗಳು ಒಂದೇ ದಿನಾಂಕದಂದು ರಿಲೀಸ್ ಆಗುತ್ತಿರುವುದು 9ನೇ ಬಾರಿ ಎನ್ನುವುದು ವಿಶೇಷ.
ಮೊನ್ನೆಯಷ್ಟೇ ಅಕ್ಷಯ್ ಕುಮಾರ್ (Akshay Kumar) ಹಾಗೂ ಟೈಗರ್ ಶ್ರಾಫ್ (Tiger Shroff) ನಟನೆಯ ಬಡೆ ಮಿಯಾ ಚೋಟೆ ಮಿಯಾ (bade miyan chote miyan) ಸಿನಿಮಾದ ಟ್ರೈಲರ್ (Trailer) ರಿಲೀಸ್ ಆಗಿದೆ. ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಯಲ್ಲಿಯೂ ಮೊದಲ ನೋಟ ಅನಾವರಣಗೊಂಡಿದೆ. 3 ನಿಮಿಷ 3 ಸೆಕೆಂಡ್ ಇರುವ ಪವರ್ ಪ್ಯಾಕ್ಡ್ ಟ್ರೈಲರ್ ನಲ್ಲಿ ಅಕ್ಷಯ್ ಹಾಗೂ ಟೈಗರ್ ಭರ್ಜರಿ ಆಕ್ಷನ್ ಮೂಲಕ ಅಬ್ಬರಿಸಿದ್ದಾರೆ.
ಬಡೆ ಮಿಯಾ ಚೋಟೆ ಮಿಯಾ ಟ್ರೈಲರ್ ನಲ್ಲಿ ಮೈ ಜುಮ್ ಎನಿಸುವ ಹೈ ಆಕ್ಷನ್ ಸೀಕ್ವೆನ್ಸ್ ಹೈಲೆಟ್ ಆಗಿವೆ. ದೇಶಭಕ್ತಿ ಉಕ್ಕಿಸುವ ಈ ಝಲಕ್ ನಲ್ಲಿ ಕಿಲಾಡಿ ಟೈಗರ್ ಜುಗಲ್ ಬಂಧಿ ನೋಡುಗರಿಗೆ ಸಖತ್ ಕಿಕ್ ಕೊಡಲಿದೆ. ಖಳನಾಯಕನಾಗಿ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದು, ಆದ್ರೆ ಟ್ರೇಲರ್ ನಲ್ಲಿ ಅವರ ಮುಖವನ್ನೇ ರಿವೀಲ್ ಮಾಡದೇ ಚಿತ್ರತಂಡ ಸೀಕ್ರೆಟ್ ಕಾಯ್ದುಗೊಂಡಿದೆ. ಬಾಲಿವುಡ್ ನಟಿಮಣಿಯರಾದ ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್, ಅಲಯಾ ಎಫ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಾಲಿವುಡ್ ರೇಂಜ್ಗೆ ಬಿಗ್ ಬಜೆಟ್ನಲ್ಲಿ ‘ಬಡೇ ಮಿಯಾನ್ ಚೋಟೆ ಮಿಯಾನ್’ ಅನ್ನು ನಿರ್ಮಿಸಲಾಗಿದೆ. ಟೈಗರ್ ಜಿಂದಾ ಹೈ, ಸುಲ್ತಾನ್ ಸಿನಿಮಾಗಳನ್ನು ನಿರ್ದೇಶಿಸಿರುವ ಅಲಿ ಅಬ್ಬಾಸ್ ಜಫರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ವಶು ಭಗ್ನಾನಿ, ದೀಪಿಕ್ಷಾ ದೇಶ್ಮುಖ್, ಜಾಕಿ ಭಗ್ನಾನಿ, ಹಿಮಾಂಶು ಕಿಶನ್ ಮೆಹ್ರಾ, ಅಲಿ ಅಬ್ಬಾಸ್ ಜಾಫರ್ ಚಿತ್ರ ನಿರ್ಮಾಣ ಮಾಡಿದ್ದಾರೆ. ವಶು ಭಗ್ನಾನಿ ಮತ್ತು ಪೂಜಾ ಎಂಟರ್ಟೈನ್ಮೆಂಟ್ ಎಎಝೆಡ್ ಫಿಲ್ಮ್ಸ್ ಸಹಯೋಗದಡಿ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. 2024ರ ಏಪ್ರಿಲ್ – ಈದ್ ಸಂದರ್ಭ ಹಿಂದಿ, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.
ನವದೆಹಲಿ: ತಂಬಾಕು (Tobacco) ಕಂಪನಿಗಳನ್ನು ಅನುಮೋದಿಸಿದ್ದಕ್ಕೆ ನಟರಾದ ಶಾರುಖ್ ಖಾನ್ (Shah Rukh Khan), ಅಕ್ಷಯ್ ಕುಮಾರ್ (Akshay Kumar) ಹಾಗೂ ಅಜಯ್ ದೇವಗನ್ (Ajay Devgn) ಅವರಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ನೋಟಿಸ್ ನೀಡಿದೆ.
ನ್ಯಾಯಾಂಗ ನಿಂದನೆ ಅರ್ಜಿಗೆ ಪ್ರತಿಕ್ರಿಯಿಸಿದ ಡೆಪ್ಯುಟಿ ಸಾಲಿಸಿಟರ್ ಜನರಲ್ ಎಸ್‌ಬಿ ಪಾಂಡೆ ಅಕ್ಟೋಬರ್ 20 ರಂದು ತಂಬಾಕು ಕಂಪನಿಗಳನ್ನು ಅನುಮೋದಿಸಿದ್ದಕ್ಕಾಗಿ ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಅವರಿಗೆ ಸಿಸಿಪಿಎ ನೋಟಿಸ್ ನೀಡಿದೆ ಎಂದು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠಕ್ಕೆ ತಿಳಿಸಿದ್ದಾರೆ.
ಸೆಪ್ಟೆಂಬರ್ 2022ರ ಆದೇಶವನ್ನು ಪಾಲಿಸದಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಕ್ರಮವನ್ನು ಕೋರಿ ಸಲ್ಲಿಸಿದ ಮನವಿಯಲ್ಲಿ ನ್ಯಾಯಾಲಯವು ಆಗಸ್ಟ್ 2023 ರಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ, ಮುಖ್ಯ ಆಯುಕ್ತರು ಮತ್ತು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಇದರಲ್ಲಿ ಅರ್ಜಿದಾರರಿಗೆ ಭಾರತ ಸರ್ಕಾರವನ್ನು ಸಂಪರ್ಕಿಸಲು ತಿಳಿಸಲಾಗಿದೆ.
ನೋಟಿಸ್‌ಗೆ ಪ್ರತಿಕ್ರಿಯಿಸಿದ ಡೆಪ್ಯುಟಿ ಸಾಲಿಸಿಟರ್ ಜನರಲ್, ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಅವರಿಗೆ ಅಕ್ಟೋಬರ್ 20 ರಂದು ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಅವರ ಪೀಠಕ್ಕೆ ತಿಳಿಸಿದರು.
ನಟ ಅಮಿತಾಬ್ ಬಚ್ಚನ್ ಅವರು ತಮ್ಮ ಒಪ್ಪಂದವನ್ನು ರದ್ದುಗೊಳಿಸಿದ್ದರೂ, ತಮ್ಮ ಜಾಹೀರಾತು ತೋರಿಸಿದ ತಂಬಾಕು ಕಂಪನಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ನ್ಯಾಯಾಲಯ ಮುಂದಿನ ವಿಚಾರಣೆಯನ್ನು 2024ರ ಮೇ 9ಕ್ಕೆ ನಿಗದಿಪಡಿಸಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು – ಇಂದು ಸುಪ್ರೀಂನಿಂದ ತೀರ್ಪು
‘ಪಠಾಣ್’ (Pathaan) ಬ್ಯೂಟಿ ದೀಪಿಕಾ ಪಡುಕೋಣೆ (Deepika Padukone) ಇದೀಗ ಸಿನಿಮಾ ಬಗ್ಗೆ ಸಿಹಿಸುದ್ದಿ ಸಿಕ್ಕಿದೆ. ಸಿಂಗಮ್ 3ನಲ್ಲಿ (Singham 3) ಅಜಯ್ ದೇವಗನ್‌ಗೆ (Ajay Devgn) ಸಹೋದರಿಯಾಗಿ ನಟಿಸಲು ದೀಪಿಕಾ ಸಜ್ಜಾಗಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿ ಕಾಣಿಸಿಕೊಳ್ತಿದ್ದಾರೆ.
ಶಾರುಖ್ ಜೊತೆ ‘ಪಠಾಣ್’ (Pathaan) ಸಿನಿಮಾದಲ್ಲಿ ನಟಿಸಿ ಗೆದ್ದು ಬೀಗಿದ ಮೇಲೆ ಕನ್ನಡದ ಬ್ಯೂಟಿ ದೀಪಿಕಾಗೆ ಸಾಲು ಸಾಲು ಸಿನಿಮಾ ಅವಕಾಶಗಳು ಬರುತ್ತಿದೆ. ನಂಬರ್ ಒನ್ ನಾಯಕಿಯಾಗಿ ಕರಾವಳಿ ಕ್ವೀನ್ ಮಿಂಚ್ತಿದ್ದಾರೆ. ಹೀಗಿರುವಾಗ ನಿರ್ಮಾಪಕ ರೋಹಿತ್ ಶೆಟ್ಟಿ ನಿರ್ಮಾಣದ ‘ಸಿಂಗಮ್ 3’ನಲ್ಲಿ ನಟಿಸಲು ದೀಪಿಕಾ ಪಡುಕೋಣೆಗೆ ಬುಲಾವ್ ಬಂದಿದೆ.
ಸಿಂಗಮ್ 3ನಲ್ಲಿ ದೀಪಿಕಾ ಲೇಡಿ ಸಿಂಗಮ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕಥೆ ಕೇಳಿ ಥ್ರಿಲ್ ಆಗಿ, ಅಜಯ್ ದೇವಗನ್‌ಗೆ ಸಹೋದರಿಯಾಗಿ ಜೀವ ತುಂಬಲು ಓಕೆ ಎಂದಿದ್ದಾರೆ. 50 ದಿನಗಳ ಕಾಲ್‌ಶೀಟ್ ಕೂಡ ನೀಡಿದ್ದಾರೆ. ದೀಪಿಕಾ- ಅಜಯ್ ಇಬ್ಬರ ಪಾತ್ರಕ್ಕೂ ಬಹಳಷ್ಟು ಪ್ರಾಮುಖ್ಯತೆಯಿದ್ದು, ಭಿನ್ನ ಕಥೆಯನ್ನ ತೆರೆಯ ಮೇಲೆ ಹೇಳೋದಕ್ಕೆ ಚಿತ್ರತಂಡ ಸಜ್ಜಾಗಿದೆ. ಸದ್ಯದಲ್ಲೇ ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.
ಸದ್ಯ ಶಾರುಖ್ ಖಾನ್ (Sharukh Khan) ಜೊತೆ ಜವಾನ್, ಹೃತಿಕ್ ರೋಷನ್ ಜೊತೆ ಫೈಟರ್, ಪ್ರಭಾಸ್ ಜೊತೆ ಹೊಸ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ದೀಪಿಕಾ ಪಡುಕೋಣೆ ಕೈಯಲ್ಲಿವೆ.
ಬಾಲಿವುಡ್ ಸಿನಿಮಾರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕನಾಗಿ ಸೈ ಎನಿಸಿಕೊಂಡಿರುವ ಅಜಯ್ ದೇವಗನ್ (Ajay Devgn) ಅವರು ಮುಂಬೈನಲ್ಲಿ ಕೋಟಿ ಕೋಟಿ ಕೊಟ್ಟು ಆಸ್ತಿ ಖರೀದಿ ಮಾಡಿದ್ದಾರೆ. ನಟನೆಯ ಜೊತೆ ಉದ್ಯಮ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಅಜಯ್ ದೇವಗನ್ ಅವರ ಕಚೇರಿಗಾಗಿ ಕೋಟ್ಯಾಂತರ ಮೌಲ್ಯದ ಆಸ್ತಿ ಖರೀದಿ ಮಾಡಿದ್ದಾರೆ.
ಕಲಾವಿದರಾಗಿ ಕಾಜೋಲ್ (Kajol)- ಅಜಯ್ ದೇವಗನ್ ಸಕ್ಸಸ್ ಕಂಡಿದ್ದಾರೆ. ನಿರ್ದೇಶನ, ನಿರ್ಮಾಣ, ಉದ್ಯಮ ಕ್ಷೇತ್ರ ಅಂತಾ ತಮ್ಮನ್ನ ಅಜಯ್ ದೇವಗನ್ ತೊಡಗಿಸಿಕೊಂಡಿದ್ದಾರೆ. ಪತಿಯ ಕೆಲಸಕ್ಕೆ ಕಾಜೋಲ್ ಕೂಡ ಸಾಥ್ ನೀಡಿದ್ದಾರೆ. ತಮ್ಮ ಸಿನಿಮಾ ನಿರ್ಮಾಣ, ವಿತರಣೆ ಹಾಗೂ ವಿಎಫ್‌ಎಕ್ಸ್ ಸಂಸ್ಥೆಗಳ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಹಾಗೂ ಇತರೆ ನಟರ ಸಿನಿಮಾಗಳ ನಿರ್ಮಾಣ ಹಾಗೂ ವಿತರಣೆಯೆಡೆಗೂ ಗಮನ ಹರಿಸುವ ಯೋಜನೆಗಾಗಿಯೇ ದೊಡ್ಡ ಕಚೇರಿಯನ್ನು ದೇವಗನ್ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿ ಭಾರಿ ದೊಡ್ಡ ಮೊತ್ತವನ್ನೇ ತೆತ್ತು ತಮ್ಮ ಅಭಿರುಚಿಗೆ ಅನುಗುಣವಾಗಿ ಕಚೇರಿಯನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.
13,293 ಚದರ ಅಡಿಯ ದೊಡ್ಡ ಅಪಾರ್ಟ್ಮೆಂಟ್ ಅನ್ನು ದೆವಗನ್ ಖರೀದಿ ಮಾಡಿದ್ದಾರೆ. ದೇವಗನ್‌ರ ಈ ಕಚೇರಿಯು ಮುಂಬೈನ ಒಶಿವಾರದ ವೀರಾ ದೇಸಿ ರಸ್ತೆಯಲ್ಲಿದೆ. ನೊಂದಣಿ ದಾಖಲೆಗಳ ಅನ್ವಯ ಈ ಕಚೇರಿ ಸ್ಥಳಕ್ಕೆ 45.09 ಕೋಟಿ ಮೊತ್ತವನ್ನು ಅಜಯ್ ದೇವಗನ್ ನೀಡಿದ್ದಾರೆ. ಇದು ದಾಖಲಾಗಿರುವ ಮೊತ್ತವಾದರೆ ಇದಕ್ಕಿಂತಲೂ ಸುಮಾರು 30% ಹೆಚ್ಚು ಮೊತ್ತವನ್ನು ಮಾಲೀಕರಿಗೆ ದೇವಗನ್ ನೀಡಿದ್ದಾರೆ ಎನ್ನಲಾಗುತ್ತದೆ. ಇದನ್ನೂ ಓದಿ:3ನೇ ಪತ್ನಿಯಿಂದಲೂ ದೂರಾವಾದ್ರಾ ನಟ ಪವನ್ ಕಲ್ಯಾಣ್?
ಇದರ ಹೊರತಾಗಿ ಮುಂಬೈನ ಮತ್ತೊಂದು ಅಪಾರ್ಟ್ಮೆಂಟ್ ಸಮುಚ್ಛಯದಲ್ಲಿ ಫ್ಲ್ಯಾಟ್ ಒಂದನ್ನು ಖರೀದಿಸಿದ್ದು ಇದೂ ಸಹ ಕಚೇರಿಗಾಗಿಯೇ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಮನಿಕಂಟ್ರೋಲ್ ಮಾಹಿತಿ ಪ್ರಕಾರ, 8405 ಚದರ ಅಡಿಯ ದೊಡ್ಡ ಕಚೇರಿ ಸ್ಥಳವನ್ನು 30.35 ಕೋಟಿ ತೆತ್ತು ಅಜಯ್ ಖರೀದಿ ಮಾಡಿದ್ದಾರೆ. ಇದಕ್ಕೂ ಸಹ ದಾಖಲೆಗಳಲ್ಲಿ ನಮೂದಿಸಿದಕ್ಕಿಂತಲೂ ಹೆಚ್ಚಿನ ಮೊತ್ತವನ್ನೇ ಅಜಯ್ ನೀಡಿದ್ದಾರೆ. ಮೂರನೇ ಕಚೇರಿಯನ್ನು ಮುಂಬೈನ ವೀರ್ ಸಾವರ್ಕರ್ ಪ್ರಾಜೆಕ್ಟ್‌ನವರಿಂದ ಖರೀದಿ ಮಾಡಿದ್ದು 4893 ಚದರ ಅಡಿಯ ಕಚೇರಿ ಸ್ಥಳವನ್ನು 14.74 ಕೋಟಿ ನೀಡಿ ಖರೀದಿ ಮಾಡಿದ್ದಾರೆ. ಅಲ್ಲಿಗೆ ಮೂರು ಕಚೇರಿಗೆ ಸುಮಾರು 100 ಕೋಟಿಗೂ ಹೆಚ್ಚು ಹಣವನ್ನು ನೀಡಿ ಅಜಯ್ ಖರೀದಿಸಿದ್ದಾರೆ. ಇದೇ ವರ್ಷದ ಏಪ್ರಿಲ್‌ನಲ್ಲಿ ಅಜಯ್ ದೇವಗನ್ ಪತ್ನಿ ಕಾಜೋಲ್ ಮುಂಬೈನಲ್ಲಿಯೇ 16.50 ಕೋಟಿ ಹಣ ನೀಡಿ 2493 ಚದರ ಅಡಿಯ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದರು. ಈ ಫ್ಲ್ಯಾಟ್ ಜೊತೆಗೆ ನಾಲ್ಕು ಕಾರುಗಳ ಪಾರ್ಕಿಂಗ್ ಸ್ಥಳವೂ ಅವರಿಗೆ ದೊರಕಿತ್ತು. ಇದಕ್ಕಾಗಿ ಹೆಚ್ಚಿನ ಮೊತ್ತವನ್ನು ನಟಿ ತೆತ್ತಿದ್ದರು.
ನಟ ಅಜಯ್ ದೇವಗನ್ ಅವರು ನಟನೆ, ನಿರ್ದೇಶನ ಅಂತಾ ಬ್ಯುಸಿಯಾಗಿದ್ದಾರೆ. ಕಾಜೋಲ್ ಅವರು ಇತ್ತೀಚಿಗೆ ‘ಲಸ್ಟ್ ಸ್ಟೋರೀಸ್ 2’ನಲ್ಲಿ ನಟಿಸಿದ್ದರು. ‘ದಿ ಟ್ರಯಲ್’ ಸಿನಿಮಾ ರಿಲೀಸ್‌ಗೆ ಎದುರು ನೋಡ್ತಿದ್ದಾರೆ.
ಬಾಲಿವುಡ್ (Bollywood) ನಟಿ ಕಾಜೋಲ್ (Kajol) ಅವರು ತಮ್ಮ ಕೆರಿಯರ್ ಹೊಸತರಲ್ಲಿ ಸಾಕಷ್ಟು ಚಿತ್ರಗಳಲ್ಲಿ ಸ್ಟಾರ್ ನಟರಿಗೆ ನಾಯಕಿಯಾಗಿ ಮಿಂಚಿದ್ದರು. ಪೀಕ್‌ನಲ್ಲಿರುವಾಗಲೇ ಅಜಯ್ ದೇವಗನ್ ಜೊತೆ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಸಿನಿಮಾ ಸೆಲೆಕ್ಷನ್‌ನಲ್ಲಿ ಸಖತ್ ಚ್ಯುಸಿಯಾದ್ರು. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡುತ್ತಾ ವೈಯಕ್ತಿಕ ಬದುಕಿನಲ್ಲಿ ಬ್ಯುಸಿಯಾದರು. ಆದರೆ ಇತ್ತೀಚಿನ ನಟಿಯ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು. ದಾಂಪತ್ಯದಲ್ಲಿ ಬಿರುಕು(Divorce) ಉಂಟಾಗಿದ್ಯಾ.? ಎಂಬ ಅನುಮಾನ ಕಾಡಿತ್ತು. ಆದರೆ ಅಸಲಿ ವಿಚಾರವೇ ಬೇರೇ.
ತಮ್ಮ ಸಿನಿಮಾದ ಪ್ರಚಾರಕ್ಕಾಗಿ, ಬ್ರೇಕಿಂಗ್ ನ್ಯೂಸ್‌ಗಾಗಿ ನಟಿ ಹೊಸ ತಂತ್ರ ರೂಪಿಸಿದ್ದರು. ಜೀವನದ ದೊಡ್ಡ ವಿಚಾರಣೆ ಎದುರಿಸುತ್ತಿದ್ದೇನೆ. ಹಾಗಾಗಿ ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಅದು ಪ್ರಚಾರದ ಗಿಮಿಕ್ ಎಂಬುದು ಈಗ ಬಯಲಾಗಿದೆ. ಇದನ್ನೂ ಓದಿ:ಮೆಗಾ ಪ್ರಿನ್ಸ್ ವರುಣ್ ತೇಜ್- ಲಾವಣ್ಯ ತ್ರಿಪಾಠಿ ಗ್ರ್ಯಾಂಡ್ ಎಂಗೇಜ್‌ಮೆಂಟ್
ಅಮೆರಿಕದ ‘ದಿ ಗುಡ್ ವೈಫ್’ ಸರಣಿಯ ಇಂಡಿಯನ್ ವರ್ಷನ್‌ಗೆ ‘ದಿ ಟ್ರಯಲ್’ (The Trail) ಎಂದು ಶೀರ್ಷೀಕೆ ಇಡಲಾಗಿದೆ. ಇದರಲ್ಲಿ ಕಾಜೋಲ್ ಅವರು ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಅದರ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. ಜೂನ್ 12ರಂದು ‘ದಿ ಟ್ರಯಲ್’ ಟ್ರೇಲರ್ ಅನಾವರಣ ಆಗಲಿದೆ. ಈ ಟೈಟಲ್ ಜೊತೆ ‘ಪ್ರೀತಿ, ಕಾನೂನು ಮತ್ತು ಮೋಸ’ ಎಂಬ ಟ್ಯಾಗ್ ಲೈನ್ ಇದೆ. ಹಾಗಾಗಿ ಈ ವೆಬ್ ಸರಣಿ ಬಗ್ಗೆ ಹೆಚ್ಚಿನ ಕುತೂಹಲ ನಿರ್ಮಾಣ ಆಗಿದೆ. ಇದು ಕೋರ್ಟ್ ರೂಮ್ ಡ್ರಾಮಾ ಶೈಲಿಯಲ್ಲಿ ಮೂಡಿಬಂದಿದ್ದು, ಟ್ರೇಲರ್ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಜೀವನದ ದೊಡ್ಡ ವಿಚಾರಣೆ ಎದುರಿಸುತ್ತಿದ್ದೇನೆ. ಹಾಗಾಗಿ ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಕಾಜೋಲ್ ಅವರು ಪೋಸ್ಟ್ ಮಾಡಿದಾಗ ಅಪ್ಪಟ ಅಭಿಮಾನಿಗಳಿಗೆ ಅಚ್ಚರಿ ಆಗಿದ್ದು ನಿಜ. ಇದು ಡಿವೋರ್ಸ್ ಮುನ್ಸೂಚನೆ ಇರಬಹುದೇ ಕಾಜೋಲ್ ಅವರ ಸಂಸಾರದಲ್ಲಿ ಬಿರುಕು ಮೂಡಿರಬಹುದೇ ಎಂಬಿತ್ಯಾದಿ ಅನುಮಾನಗಳು ಮೂಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಕಾಜೋಲ್ ಡ್ರಾಮಾಗೆ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಿನಿಮಾ ಪ್ರಚಾರಕ್ಕೆ ಹೀಗೆ ಗಿಮಿಕ್ ಮಾಡೋದಾ ಅಂತಾ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಬಾಲಿವುಡ್ ನಟ ಅಜಯ್ ದೇವಗನ್ (Ajay Devagun)- ಕಾಜೋಲ್ (Kajal) ಮಗಳು ನಿಸಾ ದೇವಗನ್ (Nysa) ಸದಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಪಾರ್ಟಿ, ಫ್ರೆಂಡ್ಸ್, ಟ್ರಿಪ್ ಅಂತ ಓಡಾಡುವ ನಿಸಾ ಸದ್ಯ ಲಂಡನ್‌ನಲ್ಲಿದ್ದಾರೆ. ತನ್ನ ಬಾಯ್ ಫ್ರೆಂಡ್ ಜೊತೆ ನಿಸಾ ಲಂಡನ್ (London) ಹಾರಿದ್ದು, ಅಲ್ಲಿ ಮೋಜು ಮಸ್ತಿ ಮಾಡ್ತಿದ್ದಾರೆ. ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಿರುವ ಸ್ಟಾರ್ ಕಿಡ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಫೇಮಸ್ ಸ್ಟಾರ್ ಕಿಡ್‌ಗಳಲ್ಲಿ ನಿಸಾ ಕೂಡ ಒಬ್ಬರಾಗಿದ್ದು, ಅನೇಕ ಬಾರಿ ಬಾಡಿ ಶೇಮಿಂಗ್, ಮೇಕಪ್ ವಿಚಾರವಾಗಿ ಸಖತ್ ಟ್ರೋಲ್ ಆಗಿದ್ದಾರೆ. ಇದೀಗ ಲಂಡನ್‌ನಲ್ಲಿರುವ ನಿಸಾ ಬಾಯ್ ಫ್ರೆಂಡ್ ಜೊತೆಗಿನ ಫೋಟೋ ವೈರಲ್ ಆಗಿದೆ. ನಿಸಾ ಅವರ ಸ್ನೇಹಿತ ಅರ್ಹಾನ್ ಅವತ್ರಮಣಿ ಅವರು ಸಿನಿಮಾರಂಗದಲ್ಲಿ ಇಲ್ಲ. ಆದರೂ ಸ್ಟಾರ್ ಕಿಡ್‌ಗಳ ಜೊತೆ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ. ಫ್ಯಾಷನ್ ಕ್ರೇಸ್ ಅರ್ಹಾನ್- ನಿಸಾ ಇಬ್ಬರೂ ಸಿಕ್ಕಾಪಟ್ಟೆ ಕ್ಲೋಸ್ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ:ಬಾಲಯ್ಯ ಸಿನಿಮಾದಲ್ಲಿ ಸೊಂಟ ಬಳುಕಿಸಲು 5 ಕೋಟಿ ಕೇಳಿದ್ರಾ? ತಮನ್ನಾ ಸ್ಪಷ್ಟನೆ
ಅಂದಹಾಗೆ ಇಬ್ಬರ ಫೋಟೋಗಳನ್ನು ಸ್ವತಃ ಅರ್ಹಾನ್ ಅವರೇ ಶೇರ್ ಮಾಡಿದ್ದಾರೆ. ಲಂಡನ್ ಕ್ಲಬ್‌ನಲ್ಲಿ ಪಾರ್ಟಿ ಮಾಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಬಾಲಿವುಡ್‌ನ ಸ್ಟಾರ್ ಕಿಡ್ಸ್ ಸಾಮಾನ್ಯವಾಗಿ ಅಲ್ಲೇ ಪಾರ್ಟಿ ಮಾಡುತ್ತಾರೆ. ಇದೀಗ ನಿಸಾ ಕೂಡ ಅಲ್ಲೇ ಪಾರ್ಟಿ ಮಾಡಿದ್ದಾರೆ. ಎಂಜಾಯ್ ಮಾಡುತ್ತಿದ್ದಾರೆ. ನಿಸಾ ಫೋಟೋಗಳಿಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಫೋಟೋಗಳು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿವೆ.
ಅಜಯ್ ದೇವಗನ್ ದಂಪತಿ ಪುತ್ರಿ ನಿಸಾ ಸಿನಿಮಾರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಗಳ ಬಾಲಿವುಡ್ ಎಂಟ್ರಿ ಬಗ್ಗೆ ಅಜಯ್- ಕಾಜಲ್ ಜೋಡಿ ಗುಡ್ ನ್ಯೂಸ್ ಕೊಡುತ್ತಾರಾ ಎಂದು ಕಾದುನೋಡಬೇಕಿದೆ.
ದಕ್ಷಿಣ ಭಾರತದ ಹೆಸರಾಂತ ನಟಿ, ನಿರ್ಮಾಪಕಿ ಜ್ಯೋತಿಕಾ (Jyothika) ಬರೋಬ್ಬರಿ 25 ವರ್ಷಗಳ ಬಳಿಕ ಬಾಲಿವುಡ್ ಗೆ ಮರಳಿದ್ದಾರೆ. ಈ ಹಿಂದೆ ಅವರು ಹಿಂದಿ, ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ, ಆನಂತರ ಚಿತ್ರೋದ್ಯಮದಿಂದಲೇ ದೂರವಾಗಿದ್ದರು. ಇದೀಗ ಬಾಲಿವುಡ್ (Bollywood) ಸಿನಿಮಾವನ್ನು ಒಪ್ಪಿಕೊಳ್ಳುವ ಮೂಲಕ ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗುತ್ತಿದ್ದಾರೆ.
ಅಜಯ್ ದೇವಗನ್ (Ajay Devgn) ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದು, ಈ ಚಿತ್ರಕ್ಕೆ ಜ್ಯೋತಿಕಾ ನಾಯಕಿ. ಇದೊಂದು ಹಾರರ್ ಚಿತ್ರವಾಗಿದ್ದು, ಆರ್. ಮಧುವನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಚಿತ್ರತಂಡದಿಂದಲೇ ಅಧಿಕೃತ ಮಾಹಿತಿಯಾಗಿದ್ದು, ಚಿತ್ರಕ್ಕೆ ಇನ್ನೂ ಟೈಟಲ್ ಇಟ್ಟಿಲ್ಲ. ಇದೀಗ ಓದಿ: 7 ತಿಂಗಳ ಬಳಿಕ ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ ಧ್ರುವ ಸರ್ಜಾ
ಜ್ಯೋತಿಕಾ ಮತ್ತು ಪತಿ ಕಂ ನಟ ಸೂರ್ಯ ತಮಿಳಿನಲ್ಲಿ ಅತ್ಯುತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಜ್ಯೋತಿಕಾ ಬಹುತೇಕ ನಿರ್ಮಾಣದಲ್ಲೇ ಬ್ಯುಸಿಯಾಗಿದ್ದರು. ಅಭಿಮಾನಿಗಳ ಒತ್ತಾಸೆಯಂತೆ ಬಾಲಿವುಡ್ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ವಿಕಾಸ್ ಬಹ್ಲ್ (Vikas Bahl) ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಜೂನ್ ತಿಂಗಳಿಂದ ಚಿತ್ರೀಕರಣ ಶುರುವಾಗಲಿದೆ.