Tag: ಅಜಯ್ ದೇವಗನ್

  • ಸನ್ ಆಫ್ ಸರ್ದಾರ್‌ -2 ರಿಲೀಸ್ ಡೇಟ್ ಮುಂದೂಡಿಕೆ

    ಸನ್ ಆಫ್ ಸರ್ದಾರ್‌ -2 ರಿಲೀಸ್ ಡೇಟ್ ಮುಂದೂಡಿಕೆ

    13 ವರ್ಷಗಳ ನಂತರ ಮತ್ತೆ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ ಸನ್ ಆಫ್ ಸರ್ದಾರ್‌ (S0n Of Sardaar-2). 2012ರಲ್ಲಿ ತೆರೆಕಂಡು ಅದ್ಭುತ ರೆಸ್ಪಾನ್ಸ್ ಪಡೆದುಕೊಂಡ ಸನ್ ಆಫ್ ಸರ್ದಾರ್‌ ಚಿತ್ರದ ಸಿಕ್ವೇಲ್ ತೆರೆಗೆ ಬರೋಕೆ ರೆಡಿಯಾಗಿದೆ. ಕಾಮಿಡಿ ಎಂಟರ್‌ಟೈನ್ಮೆಂಟ್‌ನಿಂದ ಗಮನ ಸೆಳೆದ ಸನ್ ಆಫ್ ಸರ್ದಾರ್‌ ಚಿತ್ರದ ಪಾರ್ಟ್‌-2 ಆಗಷ್ಟ್ 1ಕ್ಕೆ ತೆರೆಗೆ ಬರ್ತಿದೆ.

    ಅಜಯ್ ದೇವಗನ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸನ್ ಆಫ್ ಸರ್ದಾರ್‌ ಸಿನಿಮಾದ ಸಿಕ್ವೇಲ್ ಇದೇ ಜುಲೈ 25ಕ್ಕೆ ತೆರೆಕಾಣಬೇಕಿತ್ತು. ಆದ್ರೆ ಸಿನಿಮಾದ ರಿಲೀಸ್ ಡೇಟ್ ಅನ್ನು ಚಿತ್ರತಂಡ ಮುಂದೂಡಿದೆ. ಅಂದಹಾಗೆ ಸನ್ ಆಫ್ ಸರ್ದಾರ್‌-2 ಸಿನಿಮಾ ಆಗಷ್ಟ್ 1ಕ್ಕೆ ತೆರೆ ಕಾಣಲಿದ್ದು, ಸಿನಿ ರಸಿಕರ ಹೊಟ್ಟೆ ಹುಣ್ಣಾಗಿಸೋಕೆ ಮತ್ತಷ್ಟು ಎಂಟರ್‌ಟೈನ್ಮೆಂಟ್ ಎಲಿಮೆಂಟ್‌ನಿಂದ ಎಂಟ್ರಿ ಕೊಡುತ್ತಿದೆ. ಇದನ್ನೂ ಓದಿ: ʻಡೆವಿಲ್ʼ ಮೋಷನ್ ಪೋಸ್ಟರ್‌ ರಿಲೀಸ್‌ – ಖದರ್‌ ಲುಕ್‌ನಲ್ಲಿ ದರ್ಶನ್‌, ಡಿಬಾಸ್‌ ಫ್ಯಾನ್ಸ್‌ಗೆ ಹಬ್ಬ

    ಸನ್ ಆಫ್ ಸರ್ದಾರ್‌-2 ಸಿನಿಮಾದಲ್ಲಿ ಅಜಯ್ ದೇವಗನ್ (Ajay Devgn), ಮೃಣಾಲ್ ಠಾಕೂರ್, ರವಿ ಕಿಶನ್, ಸಂಜಯ್ ಮಿಶ್ರಾ, ನೀರು ಭಾಜ್ವಾ ಸೇರಿದಂತೆ ಅತಿದೊಡ್ಡ ತಾರಾಗಣವಿದೆ. ಜುಲೈ 25ಕ್ಕೆ ಮನರಂಜನೆಯನ್ನ ಸ್ವಾಗತಿಸಲು ತಯಾರಾಗಿದ್ದ ಫ್ಯಾನ್ಸ್ ಕೊಂಚ ನಿರಾಶರಾಗಿದ್ದಾರೆ. ಆದರೆ ಮನರಂಜನೆಯ ಮಹಾಪೂರ ಆಗಷ್ಟ್ 1ಕ್ಕೆ ಶಿಫ್ಟ್ ಆಗಿದೆ.

  • ಐಟಂ ಸಾಂಗ್‌ನಲ್ಲಿ ಪಡ್ಡೆಹುಡುಗರ ನಶೆ ಏರಿಸಿದ ತಮನ್ನಾ ಭಾಟಿಯಾ

    ಐಟಂ ಸಾಂಗ್‌ನಲ್ಲಿ ಪಡ್ಡೆಹುಡುಗರ ನಶೆ ಏರಿಸಿದ ತಮನ್ನಾ ಭಾಟಿಯಾ

    ಸೌತ್ ಸುಂದರಿ ತಮನ್ನಾ ಭಾಟಿಯಾಗೆ (Tamannaah Bhatia) ಐಟಂ ಹಾಡೇನು ಹೊಸದಲ್ಲ. ಇದೀಗ ಮತ್ತೊಂದು ಐಟಂ ಹಾಡಿನಲ್ಲಿ ಸೆಕ್ಸಿಯಾಗಿ ಹೆಜ್ಜೆ ಹಾಕುವ ಮೂಲಕ ಪಡ್ಡೆಹುಡುಗರ ನಶೆ ಏರಿಸಿದ್ದಾರೆ. ‘ರೇಡ್ 2’ (Raid 2) ಸಿನಿಮಾದಲ್ಲಿ ಅವರು ಸೊಂಟ ಬಳುಕಿಸಿದ್ದಾರೆ. ಇದನ್ನೂ ಓದಿ:ಸುಶ್ಮಿತಾ ಸೇನ್ ಮಾಜಿ ಅತ್ತಿಗೆಗೆ ಆರ್ಥಿಕ ಸಂಕಷ್ಟ- ಆನ್‌ಲೈನ್‌ನಲ್ಲಿ ನಟಿ ಸೀರೆ ಮಾರಾಟ

    ‘ರೇಡ್ 2’ ಸಿನಿಮಾದಲ್ಲಿ ನಶಾ ಸಾಂಗ್‌ಗೆ ಮಿಲ್ಕಿ ಬ್ಯೂಟಿ ತಮನ್ನಾ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ರಾಜ್‌ಕುಮಾರ್ ಗುಪ್ತಾ ನಿರ್ದೇಶನದ ಈ ಚಿತ್ರದಲ್ಲಿ ಅಜಯ್ ದೇವಗನ್, ರಿತೇಶ್ ದೇಶ್‌ಮುಖ್ ಹಾಗೂ ವಾಣಿ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ನಟಿಯ ಹಾಡು ರಿಲೀಸ್ ಆಗಿದ್ದು, ಪಡ್ಡೆಹುಡುಗರ ಹಾರ್ಟ್‌‌ ಬೀಟ್ ಹೆಚ್ಚಿಸಿದೆ. ಇದನ್ನೂ ಓದಿ:ಮತ್ತೆ ಹೃತಿಕ್ ರೋಷನ್‌ಗೆ ಜೊತೆಯಾದ ಪ್ರಿಯಾಂಕಾ ಚೋಪ್ರಾ

     

    View this post on Instagram

     

    A post shared by T-Series (@tseries.official)

    ಅಜಯ್ ದೇವಗನ್ ನಟನೆಯ ‘ರೇಡ್ 2’ ಸಿನಿಮಾ ಇದೇ ಮೇ 1ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. 2018ರಲ್ಲಿ ‘ರೇಡ್’ ಸಿನಿಮಾ ರಿಲೀಸ್ ಆಗಿತ್ತು. ಅದರ ಸೀಕ್ವೆಲ್ ಚಿತ್ರ ಇದಾಗಿದೆ.

  • ಬ್ರೇಕಪ್ ಬೆನ್ನಲ್ಲೇ ಸಿನಿಮಾದಲ್ಲಿ ತಮನ್ನಾ ಆ್ಯಕ್ಟೀವ್- ಬಾಲಿವುಡ್‌ನಲ್ಲಿ ಬಿಗ್ ಚಾನ್ಸ್

    ಬ್ರೇಕಪ್ ಬೆನ್ನಲ್ಲೇ ಸಿನಿಮಾದಲ್ಲಿ ತಮನ್ನಾ ಆ್ಯಕ್ಟೀವ್- ಬಾಲಿವುಡ್‌ನಲ್ಲಿ ಬಿಗ್ ಚಾನ್ಸ್

    ಟಿ ತಮನ್ನಾ ಭಾಟಿಯಾ (Tamannaah Bhatia) ಇತ್ತೀಚೆಗೆ ವಿಜಯ್ ವರ್ಮಾ (Vijay Varma) ಜೊತೆ ಬ್ರೇಕಪ್ ಆದ ಬೆನ್ನಲ್ಲೇ ಸಿನಿಮಾದಲ್ಲಿ ಮತ್ತೆ ಆ್ಯಕ್ಟೀವ್ ಆಗಿದ್ದಾರೆ. ಸಿನಿಮಾದತ್ತ ನಟಿ ಫೋಕಸ್ ಮಾಡ್ತಿದ್ದಾರೆ. ಬಾಲಿವುಡ್‌ನಲ್ಲಿ ಬಿಗ್ ಪ್ರಾಜೆಕ್ಟ್‌ವೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ:ಅಪ್ಪು ಕಂದ ಒಂದ್ಸಲ ಬಂದು ನನ್ನ ನೋಡ್ಕೊಂದು ಹೋಗು: ಪುನೀತ್ ಬಗ್ಗೆ ಸೋದರತ್ತೆ ಮಾತು

    ಸದಾ ಹೊಸ ಬಗೆಯ ಪಾತ್ರದಲ್ಲಿ ಮಿಂಚೋ ತಮನ್ನಾಗೆ ಈಗ ಬಂಪರ್‌ ಆಫರ್‌ವೊಂದು ಸಿಕ್ಕಿದೆ. ಬಾಲಿವುಡ್‌ ನಟರಾದ ಅಜಯ್ ದೇವಗನ್ (Ajay Devgn) ಹಾಗೂ ಸಂಜಯ್ ದತ್ (Sanjay Dutt) ಜೊತೆ ನಟಿಸುವ ಅವಕಾಶ ತಮನ್ನಾಗೆ ಅರಸಿ ಬಂದಿದೆ. ‘ಮಿಷನ್ ಮಂಗಲ್’ ಡೈರೆಕ್ಟರ್ ಜಗನ್ ಶಕ್ತಿ ನಿರ್ದೇಶನದ ‘ರೇಂಜರ್’ ಚಿತ್ರಕ್ಕೆ ಅವರು ಆಯ್ಕೆಯಾಗಿದ್ದಾರೆ.

    ಇನ್ನೂ ಅಜಯ್ ದೇವಗನ್‌ಗೆ (Ajay Devgn) ವಿಲನ್ ಆಗಿ ‘ಕೆಜಿಎಫ್ 2’ ಖ್ಯಾತಿಯ ಸಂಜಯ್ ದತ್ (Sanjay Dutt) ಅಬ್ಬರಿಸಲಿದ್ದಾರೆ. ತಮನ್ನಾ ನಾಯಕಿಯಾಗಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಏಪ್ರಿಲ್ ಮೊದಲ ವಾರದಲ್ಲಿ ಶೂಟಿಂಗ್‌ ಶುರುವಾಗಲಿದೆ. ಚಿತ್ರೀಕರಣಕ್ಕೆ ಸ್ಟಾರ್‌ ನಟರೊಂದಿಗೆ ತಮನ್ನಾ ಕೂಡ ಭಾಗಿಯಾಗ್ತಿದ್ದಾರೆ. ಇನ್ನೂ 2026ರಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್‌ ಚಿತ್ರತಂಡಕ್ಕಿದೆ.

    ಇನ್ನೂ ಒಡೆಲಾ 2, ವೇದ ಸೇರಿದಂತೆ ಹಲವು ಸಿನಿಮಾಗಳು ನಟಿಯ ಕೈಯಲ್ಲಿವೆ. ತೆಲುಗು ಹಾಗೂ ಬಾಲಿವುಡ್ ನಟಿ ಸಕ್ರಿಯರಾಗಿದ್ದಾರೆ.

  • ಕಣ ಕಣದಲ್ಲಿ ಕೇಸರಿ ಎಂದ ಮೂವರು ಬಾಲಿವುಡ್ ಸ್ಟಾರ್ ನಟರಿಗೆ ನೋಟಿಸ್

    ಕಣ ಕಣದಲ್ಲಿ ಕೇಸರಿ ಎಂದ ಮೂವರು ಬಾಲಿವುಡ್ ಸ್ಟಾರ್ ನಟರಿಗೆ ನೋಟಿಸ್

    ಜೈಪುರ: ಕಣ ಕಣದಲ್ಲಿ ಕೇಸರಿ ಎಂದು ಗುಟ್ಕಾ ಜಾಹೀರಾತು ನೀಡುತ್ತಿದ್ದ ಬಾಲಿವುಡ್ ನಟರಾದ ಶಾರುಖ್ ಖಾನ್ (Shah Rukh Khan), ಅಜಯ್ ದೇವಗನ್ (Ajay Devgn) ಮತ್ತು ಟೈಗರ್ ಶ್ರಾಫ್‌ಗೆ (Tiger Shroff) ಸಂಕಷ್ಟ ಎದುರಾಗಿದೆ. ಗಂಭೀರ ಕಾನೂನು ಪ್ರಕರಣವೊಂದರಲ್ಲಿ ಜೈಪುರ ಜಿಲ್ಲಾ ಗ್ರಾಹಕ ಆಯೋಗ ಸಂಖ್ಯೆ-2 ಮೂವರು ನಟರಿಗೆ ನೋಟಿಸ್ ಜಾರಿ ಮಾಡಿದೆ.

    ಮೂವರು ನಟರ ಜೊತೆಗೆ ಗುಟ್ಕಾ ತಯಾರಿಕಾ ಕಂಪನಿ ಜೆಬಿ ಇಂಡಸ್ಟ್ರೀಸ್‌ಗೆ ಸಹ ಸಮನ್ಸ್ ಕಳುಹಿಸಲಾಗಿದೆ. ಆಯೋಗವು ಎಲ್ಲರೂ ಇದೇ ಮಾರ್ಚ್ 19ರಂದು ಹಾಜರಾಗುವಂತೆ ಸೂಚನೆ ನೀಡಿದೆ.ಇದನ್ನೂ ಓದಿ: ನಾರಿ ಶಕ್ತಿಗೆ ನನ್ನ ನಮನ – ಮಹಿಳೆಯರಿಗೆ ಪ್ರಧಾನಿ ಸೇರಿ ಗಣ್ಯರಿಂದ ಶುಭಾಶಯ

    ಗುಟ್ಕಾ ಉತ್ಪನ್ನವು ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೂ ಅದರಲ್ಲಿ ಕೇಸರಿ ಇದೆ ಎಂದು ದಾರಿತಪ್ಪಿಸುವ ಹೇಳಿಕೆಗಳನ್ನು ನೀಡುವ ಜಾಹೀರಾತು ಪ್ರಕಟಿಸಲಾಗುತ್ತಿದೆ ಎಂದು ಆರೋಪಿಸಿ ಜೈಪುರ ನಿವಾಸಿ ಯೋಗೇಂದ್ರ ಸಿಂಗ್ ಬಡಿಯಾಲ್ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದು, ದೂರಿನ ಅನ್ವಯ ನೋಟಿಸ್ ನೀಡಲಾಗಿದೆ.

    ಮೂವರು ಬಾಲಿವುಡ್ ನಟರು ಈ ಗುಟ್ಕಾ ಬ್ರ‍್ಯಾಂಡ್ ಅನ್ನು ಪ್ರಚಾರ ಮಾಡುತ್ತಿದ್ದು, ಗ್ರಾಹಕರನ್ನು ಖರೀದಿಸುವಂತೆ ಆಕರ್ಷಿಸುತ್ತಿದ್ದಾರೆ. ಗುಟ್ಕಾ ಉತ್ಪನ್ನವು ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೂ ಅದರಲ್ಲಿ ಕೇಸರಿ ಇದೆ ಎಂದು ದಾರಿತಪ್ಪಿಸುತ್ತಿದ್ದಾರೆ. ಈ ದಾರಿತಪ್ಪಿಸುವ ಜಾಹೀರಾತು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಅನ್ನು ಉಲ್ಲಂಘಿಸುತ್ತದೆ ಮತ್ತು ಸಾರ್ವಜನಿಕರನ್ನು ದಾರಿತಪ್ಪಿಸುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ.

    ಈ ಮೂವರು ನಟರು ಬಹಳ ಸಮಯದಿಂದ ಪಾನ್ ಮಸಾಲಾ ಮತ್ತು ಗುಟ್ಕಾ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. “ಟೇಸ್ಟ್ ಆಫ್ ಬಿಗ್ ಬ್ರಾಂಡ್ಸ್” ಎಂಬ ಟ್ಯಾಗ್‌ಲೈನ್ ಅಡಿಯಲ್ಲಿ ಈ ಜಾಹೀರಾತುಗಳು ಇದನ್ನು “ಕೇಸರ್” ಉತ್ಪನ್ನವೆಂದು ಪ್ರಚಾರ ಮಾಡುತ್ತವೆ. ಆದರೆ ವಾಸ್ತವದಲ್ಲಿ ಇದು ಗುಟ್ಕಾ ಉತ್ಪನ್ನಗಳ ಪ್ರಚಾರವಾಗಿದೆ ಎಂದು ಯೋಗೇಂದ್ರ ಸಿಂಗ್ ಹೇಳಿದ್ದಾರೆ.

    ಕಾನೂನು ಪರಿಣಾಮ ಏನಾಗಬಹುದು?
    ಆಯೋಗದಲ್ಲಿ ಆರೋಪ ಸಾಬೀತಾದರೆ, ಈ ಜಾಹೀರಾತುಗಳನ್ನು ನಿಷೇಧಿಸಬಹುದು. ಇದರೊಂದಿಗೆ, ಸೆಲೆಬ್ರಿಟಿಗಳ ಮೇಲೆ ಆರ್ಥಿಕ ದಂಡವನ್ನು ವಿಧಿಸಬಹುದು. ಅದೇ ಸಮಯದಲ್ಲಿ, ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲು ಸಹ ಸಾಧ್ಯವಿದೆ.ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಎರಡು ಬಣಗಳಿವೆ – ಪಕ್ಷದ ವೇದಿಕೆಯಲ್ಲೇ ರಾಹುಲ್ ಗಾಂಧಿ ಅಸಮಾಧಾನ

     

  • 10 ದಿನಗಳಲ್ಲಿ 300 ಕೋಟಿ ರೂ. ಕ್ಲಬ್ ಸೇರಿದ ‘ಸಿಂಗಂ ಅಗೇನ್’ ಸಿನಿಮಾ

    10 ದಿನಗಳಲ್ಲಿ 300 ಕೋಟಿ ರೂ. ಕ್ಲಬ್ ಸೇರಿದ ‘ಸಿಂಗಂ ಅಗೇನ್’ ಸಿನಿಮಾ

    ಬಾಲಿವುಡ್‌ನಲ್ಲಿ ‘ಸ್ತ್ರೀ 2’ (Stree 2) ಸಕ್ಸಸ್ ಬಳಿಕ ‘ಸಿಂಗಂ ಅಗೇನ್’ (Singham Again) ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ರಿಲೀಸ್ ಆದ 10 ದಿನಗಳಲ್ಲಿ 300 ಕೋಟಿ ರೂ. ಕ್ಲಬ್ ಸೇರಿದೆ. ಅಜಯ್ ದೇವಗನ್ (Ajay Devgn) ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ:ಸೆಟ್ಟೇರಿತು ರಾಘು ಶಿವಮೊಗ್ಗ ನಿರ್ದೇಶನದ ಹೊಸ ಸಿನಿಮಾ-‘ದಿ ಟಾಸ್ಕ್’ನಲ್ಲಿ ನವಪ್ರತಿಭೆಗಳ ಸಂಗಮ

    ಅಜಯ್ ದೇವಗನ್ ಅವರು ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ‘ಸಿಂಗಂ ಅಗೇನ್’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ಅಜಯ್ ದೇವಗನ್, ಕರೀನಾ ಕಪೂರ್, ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್, ರಣ್‌ವೀರ್ ಸಿಂಗ್, ಟೈಗರ್ ಶ್ರಾಫ್, ಅರ್ಜುನ್ ಕಪೂರ್ ಸೇರಿದಂತೆ ಅನೇಕರು ನಟಿಸಿದ್ದಾರೆ.

    ನ.1ರಂದು ‘ಸಿಂಗಂ ಅಗೇನ್’ ಚಿತ್ರ ರಿಲೀಸ್ ಆಗಿತ್ತು. ಕಳೆದ 10 ದಿನಗಳಲ್ಲಿ 300 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಚಿತ್ರಕ್ಕಾಗಿ ಥಿಯೇಟರ್‌ನತ್ತ ಪ್ರೇಕ್ಷಕರು ಹೆಜ್ಜೆ ಹಾಕಿದ್ದಾರೆ.

  • ‌’ಸಿಂಗಂ ಅಗೇನ್’ ಟ್ರೈಲರ್ ಔಟ್- ಸೀತೆ ಪಾತ್ರದಲ್ಲಿ ಕರೀನಾ ಕಪೂರ್

    ‌’ಸಿಂಗಂ ಅಗೇನ್’ ಟ್ರೈಲರ್ ಔಟ್- ಸೀತೆ ಪಾತ್ರದಲ್ಲಿ ಕರೀನಾ ಕಪೂರ್

    ‘ಕ್ರೀವ್’ ಸಕ್ಸಸ್ ನಂತರ ಹೊಸ ಚಿತ್ರವನ್ನು ಕರೀನಾ ಕಪೂರ್ (Kareena Kapoor) ಒಪ್ಪಿಕೊಂಡಿದ್ದಾರೆ. ‌’ಸಿಂಗಂ ಅಗೇನ್’ (Singham Again) ಸಿನಿಮಾದಲ್ಲಿ ನಟಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‌’ಸಿಂಗಂ ಅಗೇನ್’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಇದನ್ನೂ ಓದಿ:‘ವಾರ್ 2’ ಸೆಟ್‌ನ ಫೋಟೋ ಹಂಚಿಕೊಂಡ ಕಿಯಾರಾ ಅಡ್ವಾಣಿ

    ‌’ಸಿಂಗಂ ಅಗೇನ್’ ಸಿನಿಮಾದ ಟ್ರೈಲರ್ ನೋಡಿದವರಿಗೆ ಕರೀನಾ ಎಂಟ್ರಿ ಅಚ್ಚರಿ ಮೂಡಿಸಿದೆ. ಈ ಚಿತ್ರದಲ್ಲಿ ಇರುವುದು ರಾಮಾಯಣದ ಕಥೆಯಾಗಿದೆ. ಕರೀನಾ ಅವರಿ ಸೀತೆಯ ಪಾತ್ರ ಮಾಡಿದ್ದಾರೆ.

    ಶ್ರೀಲಂಕಾದಲ್ಲಿ ಇರುವ ನಟೋರಿಯಸ್ ವ್ಯಕ್ತಿಯಾಗಿ ಅರ್ಜುನ್ ಕಪೂರ್ ಜೀವ ತುಂಬಿದ್ದಾರೆ. ನಾಯಕಿಯನ್ನು ವಿಲನ್ ಅಪಹರಣ ಮಾಡಿದ ಬಳಿಕ ಆಕೆಯನ್ನು ಮರಳಿ ಕರೆದುಕೊಂಡು ಬರಲು ಲಂಕೆಗೆ ಸಿಂಗಂ ಅಜಯ್ ದೇವಗನ್ ಪ್ರಯಾಣ ಮಾಡುತ್ತಾನೆ. ಅವನಿಗೆ ಲಕ್ಷ್ಮಣ (ಟೈಗರ್ ಶ್ರಾಫ್), ಆಂಜನೇಯ (ರಣವೀರ್ ಸಿಂಗ್), ಜಟಾಯು (ಅಕ್ಷಯ್ ಕುಮಾರ್) ಮುಂತಾದವರು ಸಾಥ್ ನೀಡುತ್ತಾರೆ. ರಾಮಾಯಣದಂತೆಯೇ ಈ ಕಥೆಯನ್ನು ‌’ಸಿಂಗಂ ಅಗೇನ್’ ಸಿನಿಮಾದಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿ ತೋರಿಸಲಿದ್ದಾರೆ.

    ಸೀತಾ ಮಾತೆಯನ್ನು ರಾವಣ ಅಪಹರಿಸಿಕೊಂಡು ಹೋಗುತ್ತಾನೆ. ಇದನ್ನೇ ಇಟ್ಟುಕೊಂಡು ರೋಹಿತ್ ಶೆಟ್ಟಿ ಅವರು ‘ಸಿಂಗಂ ಅಗೇನ್’ ಚಿತ್ರ ಮಾಡಿದ್ದಾರೆ. ಆದರೆ ಈ ಸಿನಿಮಾವನ್ನು ಆಧುನಿಕವಾಗಿ ಮಾಡಿದ್ದಾರೆ. ಇಲ್ಲಿ ರಾಮನಾಗಿ ಅಜಯ್ ದೇವಗನ್ ನಟಿಸಿದ್ರೆ, ಸೀತೆಯಾಗಿ ಕರೀನಾ ಕಪೂರ್ ಜೀವ ತುಂಬಿದ್ದಾರೆ. ಇನ್ನೂ ದೀಪಿಕಾ ಪಡುಕೋಣೆ ಲೇಡಿ ಸಿಂಗಂ ಆಗಿ ನಟಿಸಿದ್ರೆ, ರಣ್‌ವೀರ್ ಸಿಂಗ್ ಕೂಡ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ.

  • ಅಭಿಮಾನಿಗಳಿಗೆ ಗುಡ್‌ ನ್ಯೂಸ್- ಬರಲಿದೆ ‘ಶೈತಾನ್’ ಚಿತ್ರದ ಸೀಕ್ವೆಲ್

    ಅಭಿಮಾನಿಗಳಿಗೆ ಗುಡ್‌ ನ್ಯೂಸ್- ಬರಲಿದೆ ‘ಶೈತಾನ್’ ಚಿತ್ರದ ಸೀಕ್ವೆಲ್

    ಬಾಲಿವುಡ್‌ ನಟ ಅಜಯ್‌ ದೇವಗನ್‌ (Ajay Devgn) ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಈ ವರ್ಷ ಗೆದ್ದು ಬೀಗಿದ್ದ ಶೈತಾನ್‌ ಮತ್ತೆ ಹೊಸ ಕಥೆಯೊಂದಿಗೆ ಬರುತ್ತಿದೆ.  ‘ಶೈತಾನ್ ಪಾರ್ಟ್ 2’ಗೆ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಇದರ ಸೀಕ್ವೆಲ್‌ ಖಾತ್ರಿಯಾಗಿದೆ. ಇದನ್ನೂ ಓದಿ:ನಾನು ಭೂಮಿಯ ಮೇಲಿನ ಅದೃಷ್ಟ ವ್ಯಕ್ತಿ: ವಿಕ್ರಮ್ ಭೇಟಿಯಾದ ಡಿವೈನ್ ಸ್ಟಾರ್

    ಈ ವರ್ಷ ತೆರೆಕಂಡ ‘ಶೈತಾನ್’ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿತ್ತು. ಬ್ಲ್ಯಾಕ್ ಮ್ಯಾಜಿಕ್‌ನ ಕಥೆ ಈ ಚಿತ್ರದಲ್ಲಿ ಇತ್ತು. ಅಜಯ್ ದೇವಗನ್ ಈ ಚಿತ್ರಕ್ಕೆ ಹೀರೋ ಆಗಿದ್ದರು. ಸೌತ್ ನಟಿ ಜ್ಯೋತಿಕಾ (Jyothika) ಅವರು ಅಜಯ್ ದೇವಗನ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆರ್. ಮಾಧವನ್ (R. Madhavan) ಅವರು ನೆಗೆಟಿವ್ ಶೇಡ್‌ನ ಪಾತ್ರಕ್ಕೆ ಜೀವ ತುಂಬಿದ್ದರು.

    ಇದೀಗ ಶೈತಾನ್ ಸೀಕ್ವೆಲ್‌ಗೆ ಕಥೆ ಸಿದ್ಧವಾಗಿದೆ. ಅಜಯ್ ದೇವಗನ್ ಜೊತೆ ತಂಡ ಮಾತುಕತೆ ನಡೆಸಿ ಪಾರ್ಟ್ 2 ಭಾಗದ ಕಥೆ ಒಪ್ಪಿಸಿದ್ದಾರೆ. ಅವರು ಕೂಡ ಚಿತ್ರಕ್ಕೆ ಓಕೆ ಎಂದಿದ್ದಾರೆ. ಆದರೆ ಈಗಾಗಲೇ ಅಜಯ್ ದೇವಗನ್ ಒಪ್ಪಿಕೊಂಡಿರುವ ಚಿತ್ರಗಳ ಶೂಟಿಂಗ್ ಇರುವ ಕಾರಣ, ಅದನ್ನು ಮುಗಿಸಿದ ಬಳಿಕ ‘ಶೈತಾನ್ 2’ ಕಥೆ ಕೈಗೆತ್ತಿಕೊಳ್ಳಲಿದ್ದಾರೆ.

    ಸದ್ಯ ಈ ವಿಚಾರ ತಿಳಿದು ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ‘ಶೈತಾನ್’ 2ಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ಹೊಸ ಸಿನಿಮಾ ಒಪ್ಪಿಕೊಂಡ ರಕುಲ್ ಪ್ರೀತ್ ಸಿಂಗ್

    ಹೊಸ ಸಿನಿಮಾ ಒಪ್ಪಿಕೊಂಡ ರಕುಲ್ ಪ್ರೀತ್ ಸಿಂಗ್

    ಬಾಲಿವುಡ್ ಬೆಡಗಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಮದುವೆ ಬಳಿಕ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಮದುವೆ ನಂತರ ಉದ್ಯಮ ಕ್ಷೇತ್ರಕ್ಕೆ ನಟಿ ಕಾಲಿಟ್ಟಿದ್ದರು. ಇದೀಗ ಹೊಸ ಪ್ರಾಜೆಕ್ಟ್‌ ಒಪ್ಪಿಕೊಂಡಿದ್ದಾರೆ. ಮತ್ತೆ ಸಿನಿಮಾ ಚಿತ್ರೀಕರಣದತ್ತ ನಟಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ:ರವೀನಾ ಟಂಡನ್ ರಸ್ತೆ ಅಪಘಾತ: ಪ್ರತಿಕ್ರಿಯೆ ಕೊಟ್ಟ ಕೆಜಿಎಫ್ ರಮಿಕಾ

    ಅಜಯ್ ದೇವಗನ್ (Ajay Devgn) ಜೊತೆ ಮತ್ತೆ ರಕುಲ್ ಕೈಜೋಡಿಸಿದ್ದಾರೆ. ‘ದೇ ದೇ ಪ್ಯಾರ್ ದೇ 2’ (De De Pyaar De 2) ಎಂಬ ಸಿನಿಮಾದಲ್ಲಿ ರಕುಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ಸೆಟ್‌ನ ಫೋಟೋವೊಂದನ್ನು ನಟಿ ಹಂಚಿಕೊಂಡಿದ್ದಾರೆ. ‘ನನ್ನ ಫೇವರೇಟ್ ಸೆಟ್ ಹಿಂದಿರುಗಿದ್ದೇನೆ’ ಎಂದು ನಟಿ ಕ್ಯಾಪ್ಷನ್ ನೀಡಿದ್ದಾರೆ. ಇದನ್ನೂ ಓದಿ:ಡೇಟಿಂಗ್‌ಗೆ ಸಿಕ್ತು ಸಾಕ್ಷಿ- ಯುರೋಪ್‌ನಲ್ಲಿ ಸಿಕ್ಕಿಬಿದ್ದ ನಾಗಚೈತನ್ಯ, ಶೋಭಿತಾ ಜೋಡಿ

    ‘ದೇ ದೇ ಪ್ಯಾರ್ ದೇ’ ಸಿನಿಮಾದಲ್ಲಿ ಟಬು ಜೊತೆ ಅಜಯ್ ದೇವಗನ್, ರಕುಲ್ ನಟಿಸಿದ್ದರು. ಈ ಸಿನಿಮಾದ ಮುಂದುವರೆದ ಭಾಗವನ್ನು ಇದೀಗ ಶೂಟಿಂಗ್ ಮಾಡಲಾಗುತ್ತಿದೆ. ಮುಂದಿನ ವರ್ಷ ಮೇ 1ರಂದು ಸಿನಿಮಾ ರಿಲೀಸ್ ಆಗಲಿದೆ.

    ಚಿತ್ರದ ಪಾರ್ಟ್ 1ರಲ್ಲಿ ಅಜಯ್ ಮತ್ತು ರಕುಲ್ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಹಿಡಿಸಿತ್ತು. ‘ದೇ ದೇ ಪ್ಯಾರ್ ದೇ 2’ನಲ್ಲಿ ಕಥೆ ಮತ್ತು ಇಬ್ಬರ ರೊಮ್ಯಾನ್ಸ್ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ.

  • ಕ್ರಿಕೆಟಿಗ ಪಾಲ್ವಂಕರ್ ಬಾಲೂ ಬಯೋಪಿಕ್‌ನಲ್ಲಿ ಅಜಯ್ ದೇವಗನ್

    ಕ್ರಿಕೆಟಿಗ ಪಾಲ್ವಂಕರ್ ಬಾಲೂ ಬಯೋಪಿಕ್‌ನಲ್ಲಿ ಅಜಯ್ ದೇವಗನ್

    ಬಾಲಿವುಡ್ ನಟ ಅಜಯ್ ದೇವಗನ್ (Ajay Devgn) ಇತ್ತೀಚೆಗೆ ‘ಮೈದಾನ್’ (Maidaan) ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದರು. ಫುಟ್‌ಬಾಲ್ ಕೋಚ್ ಸೈಯದ್ ಅಬ್ದುಲ್ ರಹೀಮ್ ಜೀವನದ ಕಥೆಯನ್ನು ಈ ಸಿನಿಮಾದ ಮೂಲಕ ಹೇಳಿದ್ದರು. ಈಗ ‘ಮೈದಾನ್’ ಸಕ್ಸಸ್ ನಂತರ ಮತ್ತೊಂದು ಬಯೋಪಿಕ್ ಈಗ ಅಜಯ್ ದೇವಗನ್‌ರನ್ನು ಅರಸಿ ಬಂದಿದೆ.

    ಇದೀಗ ಭಾರತದ ಖ್ಯಾತ ಕ್ರಿಕೆಟಿಗ ಪಾಲ್ವಂಕರ್ ಬಾಲೂ (Palwankar Baloo) ಅವರ ಜೀವನ ಚರಿತ್ರೆಯನ್ನು (Biopic) ಸಿನಿಮಾ ಮಾಡಲು ಭರ್ಜರಿ ತಯಾರಿ ನಡೆಯುತ್ತಿದೆ. ನಿರ್ಮಾಪಕಿ ಪ್ರೀತಿ ಸಿನ್ಹಾ ಕ್ರಿಕೆಟಿಗ ಪಾಲ್ವಂಕರ್ ಬಾಲೂ ಬಯೋಪಿಕ್ ಅನ್ನು ಸಿನಿಮಾ ಮಾಡೋದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ:ಕುತೂಹಲ ಕೆರಳಿಸಿದ ವಿಜಯ್‌ ಸೇತುಪತಿ ನಟನೆಯ 50ನೇ ಚಿತ್ರದ ‌’ಮಹಾರಾಜ’ ಟ್ರೈಲರ್

    ಪಾಲ್ವಂಕರ್ ಬಾಲೂ ಪಾತ್ರವನ್ನು ಖ್ಯಾತ ನಟ ಅಜಯ್ ದೇವಗನ್ ನಟಿಸುತ್ತಾರೆ ಎಂದು ತಿಳಿಸಿದ್ದಾರೆ. ಈ ಚಿತ್ರವನ್ನು ತಿಗ್‌ಮಂಶು ದುಲಿಯಾ ನಿರ್ದೇಶನ ಮಾಡಲಿದ್ದಾರೆ. ರಾಮಚಂದ್ರ ಗುಹಾ ಬರೆದ ‘ಎ ಕಾರ್ನರ್ ಆಫ್ ಎ ಫಾರೆನ್ ಫೀಲ್ಡ್’ ಪುಸ್ತಕ ಆಧರಿಸಿ ಈ ಚಿತ್ರವನ್ನು ಮಾಡಲಾಗುತ್ತಿದೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ಶೂಟಿಂಗ್ ಶುರುವಾಗಲಿದೆ.

    ಕ್ರಿಕೆಟಿಗ ಪಾಲ್ವಂಕರ್ ಬಾಲೂ ಅವರ ಯಶಸ್ಸು ಮತ್ತು ಸವಾಲಿನ ಹಾದಿಯ ಬಗ್ಗೆ ಅಜಯ್ ದೇವಗನ್ ನಟನೆಯ ಮೂಲಕ ತೋರಿಸಲಾಗುತ್ತದೆ.

  • ಒಟಿಟಿಗೆ ಬಂತು ಜ್ಯೋತಿಕಾ ನಟನೆಯ ಶೈತಾನ್ ಸಿನಿಮಾ

    ಒಟಿಟಿಗೆ ಬಂತು ಜ್ಯೋತಿಕಾ ನಟನೆಯ ಶೈತಾನ್ ಸಿನಿಮಾ

    ಕ್ಷಿಣ ಭಾರತದ ಹೆಸರಾಂತ ನಟಿ, ನಿರ್ಮಾಪಕಿ ಜ್ಯೋತಿಕಾ (Jyothika) ನಟನೆಯ ಶೈತಾನ್ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿತ್ತು. ಇದೀಗ ನಾಳೆಯಿಂದ ಒಟಿಟಿಯಲ್ಲಿ ಈ ಸಿನಿಮಾ ಲಭ್ಯವಿರಲಿದೆ. ಬರೋಬ್ಬರಿ 25 ವರ್ಷಗಳ ಬಳಿಕ ಬಾಲಿವುಡ್ ಗೆ ಜ್ಯೋತಿಕಾ ಈ ಸಿನಿಮಾದ ಮೂಲಕ ಮರಳಿದ್ದಾರೆ. ಶೈತಾನ್ (Shaitan) ಸಿನಿಮಾದಲ್ಲಿ ಅವರು ಹೊಸ ಬಗೆಯ ಪಾತ್ರ ಮಾಡಿದ್ದಾರೆ.

    ಹಾರರ್ ಕಥಾನಕ ಹೊಂದಿರುವ ಸಿನಿಮಾದ ದೃಶ್ಯಗಳು ಬೆಚ್ಚಿ ಬೀಳಿಸುತ್ತಿವೆ. ವಶೀಕರಣದ ವಿಷಯವನ್ನೂ ಸಿನಿಮಾ ಒಳಗೊಂಡಿದೆ. ಜ್ಯೋತಿಕಾ ಹಿಂದೆ ಹಿಂದಿ, ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ, ಆನಂತರ ಚಿತ್ರೋದ್ಯಮದಿಂದಲೇ ದೂರವಾಗಿದ್ದರು. ಇದೀಗ ಬಾಲಿವುಡ್ (Bollywood) ಶೈತಾನ್ ಸಿನಿಮಾವನ್ನು ಒಪ್ಪಿಕೊಳ್ಳುವ ಮೂಲಕ ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ.

     

    ಅಜಯ್ ದೇವಗನ್ (Ajay Devgn) ಕೂಡ ಸಿನಿಮಾದಲ್ಲಿ ನಟಿಸಿದ್ದು, ಜ್ಯೋತಿಕಾ ಇವರ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಹಾರರ್ ಚಿತ್ರವಾಗಿದ್ದು, ಆರ್. ಮಧುವನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.