Tag: ಅಜಮ್ ಖಾನ್

  • 23 ತಿಂಗಳ ಜೈಲುವಾಸದ ಬಳಿಕ ಜಾಮೀನು – ಎಸ್ಪಿ ನಾಯಕ ಅಜಮ್ ಖಾನ್ ಬಿಡುಗಡೆ

    23 ತಿಂಗಳ ಜೈಲುವಾಸದ ಬಳಿಕ ಜಾಮೀನು – ಎಸ್ಪಿ ನಾಯಕ ಅಜಮ್ ಖಾನ್ ಬಿಡುಗಡೆ

    ಲಕ್ನೋ: 23 ತಿಂಗಳ ಜೈಲುವಾಸದ ಬಳಿಕ ಇಂದು (ಸೆ.23) ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಮ್ ಖಾನ್ (Azam Khan) ಅವರು ಉತ್ತರಪ್ರದೇಶದ (Uttara Pradesh) ಸೀತಾಪುರ (Sitapur) ಜೈಲಿನಿಂದ ಬಿಡುಗಡೆಯಾದರು.

    ಸೆ.10ರಂದು ಅಲಹಾಬಾದ್ ಹೈಕೋರ್ಟ್ ಅಜಮ್ ಖಾನ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ನ್ಯಾಯಾಲಯ ವಿಧಿಸಿದ ದಂಡ ಪಾವತಿ ಹಾಗೂ ಇನ್ನಿತರ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸದ ಹಿನ್ನೆಲೆ ಬಿಡುಗಡೆ ತಡವಾಗಿತ್ತು. ಬಳಿಕ ಇಂದು ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಬಿಡುಗಡೆ ಮಾಡಲಾಯಿತು.ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆ – 7 ಮಂದಿ ಬಲಿ

    ಇನ್ನೂ ಅಜಮ್ ಖಾನ್ ಬಿಡುಗಡೆ ಹಿನ್ನೆಲೆ ಸೀತಾಪುರ ನಗರದಲ್ಲಿ ಸೆಕ್ಷನ್ 144ರ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಹೀಗಾಗಿ ಅಜಮ್ ಖಾನ್ ಬಿಡುಗಡೆ ವೇಳೆ ಬಂದಿದ್ದ ಬೆಂಬಲಿಗರ ಗುಂಪನ್ನು ಹೆಚ್ಚು ಕಾಲ ಜೈಲಿನ ಗೇಟ್ ಬಳಿ ನಿಲ್ಲಲು ಅವಕಾಶ ನೀಡಲಿಲ್ಲ ಎಂದು ತಿಳಿದುಬಂದಿದೆ.

    ಎಸ್ಪಿ ನಾಯಕ ಅಜಮ್ ಖಾನ್ ಅವರ ವಿರುದ್ಧ ಒಟ್ಟು 104 ಪ್ರಕರಣಗಳಿದ್ದು, ಆ ಪೈಕಿ 12 ಪ್ರಕರಣಗಳಲ್ಲಿ ತೀರ್ಪು ನೀಡಲಾಗಿದೆ. ಇನ್ನೂ 5 ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದ್ದು, 7 ಪ್ರಕರಣಗಳು ಖುಲಾಸೆಯಾಗಿವೆ. ಪ್ರಸ್ತುತ 59 ಪ್ರಕರಣಗಳು ಸೆಷನ್ಸ್ ನ್ಯಾಯಾಲಯದಲ್ಲಿ ಹಾಗೂ 19 ಪ್ರಕರಣಗಳು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. ಸದ್ಯ ಹೈಕೋರ್ಟ್‌ನಿಂದ ಜಾಮೀನು ಮಂಜೂರಾದ ಹಿನ್ನೆಲೆ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಇಬ್ಲೂರು ಜಂಕ್ಷನ್ ಟ್ರಾಫಿಕ್ ಸಮಸ್ಯೆ: ಅಜೀಂ ಪ್ರೇಮ್ ಜೀಗೆ ಸಿಎಂ ಪತ್ರ

     

  • ನಿಮ್ಮ ಮಾತುಗಳಿಗೆ ನಾನು ಅಂಜಲ್ಲ, ಈ ವ್ಯಕ್ತಿಯನ್ನು ಚುನಾವಣೆಯಿಂದ ಬ್ಯಾನ್ ಮಾಡಿ – ಅಜಮ್ ಖಾನ್ ವಿರುದ್ಧ ಜಯಪ್ರದಾ ಕಿಡಿ

    ನಿಮ್ಮ ಮಾತುಗಳಿಗೆ ನಾನು ಅಂಜಲ್ಲ, ಈ ವ್ಯಕ್ತಿಯನ್ನು ಚುನಾವಣೆಯಿಂದ ಬ್ಯಾನ್ ಮಾಡಿ – ಅಜಮ್ ಖಾನ್ ವಿರುದ್ಧ ಜಯಪ್ರದಾ ಕಿಡಿ

    ನವದೆಹಲಿ: ನಾನು ನಿಮ್ಮ ಕೀಳಾದ ಟೀಕೆಗಳಿಗೆ ಅಂಜಲ್ಲ, ರಾಮ್‍ಪುರ ಬಿಟ್ಟು ಹೋಗುವುದೂ ಇಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಜಮ್ ಖಾನ್ ಅವರ ಕೀಳು ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಜಯಪ್ರದಾ ತಿರುಗೇಟು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಎಲ್ಲಿಗೆ ಹೋಗಬೇಕು? ನಾನು ಸಾಯಬೇಕೇ? ಆಗ ನಿಮಗೆ ಸಮಧಾನವಾಗುತ್ತಾ? ನಿಮ್ಮ ಈ ಕೀಳು ಹೇಳಿಕೆಗಳಿಗೆ, ಟೀಕೆಗೆ ಹೆದರಿ ನಾನು ರಾಮ್‍ಪುರ ಬಿಟ್ಟು ಹೋಗುತ್ತೇನೆ ಅಂದುಕೊಂಡಿದ್ದೀರಾ? ನಾನು ನಿಮ್ಮ ಮಾತುಗಳಿಗೆ ಅಂಜಲ್ಲ, ಇಲ್ಲಿಂದ ಹೋಗುವುದೂ ಇಲ್ಲವೆಂದು ಖಡಕ್ ಆಗಿ ಉತ್ತರ ನೀಡಿದ್ದಾರೆ. ಇದನ್ನೂ ಓದಿ:ಜಯಪ್ರದಾ ಒಳ ಉಡುಪು ಬಗ್ಗೆ ಎಸ್‍ಪಿ ನಾಯಕ ಅಜಮ್ ಖಾನ್ ಕೀಳು ಹೇಳಿಕೆ

    ಹೆಣ್ಣಿನ ಬಗ್ಗೆ ಇಷ್ಟು ಕೀಳಾಗಿ ಮಾತನಾಡುವ ವ್ಯಕ್ತಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಡಿ. ಒಂದುವೇಳೆ ಈ ವ್ಯಕ್ತಿ ಗೆದ್ದರೆ ಪ್ರಜಾಪ್ರಭುತ್ವದ ಗತಿ ಏನಾಗುತ್ತೆ? ಸಾಮಾಜದಲ್ಲಿ ಮಹಿಳೆಯರಿಗೆ ಸ್ಥಾನಮಾನ ಸಿಗುವುದಿಲ್ಲ. ಆದರಿಂದ ಅಜಮ್ ಖಾನ್‍ರನ್ನು ಚುನಾವಣೆಯಿಂದ ಬ್ಯಾನ್ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಅಜಮ್ ಖಾನ್ ಹೇಳಿದ್ದೇನು?
    ಭಾನುವಾರದಂದು ರಾಮ್‍ಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಿದ್ದ ಅಜಮ್ ಖಾನ್ ಅವರು, ಅವರನ್ನು(ಜಯಪ್ರದಾ) ರಾಮ್‍ಪುರಕ್ಕೆ ಕರೆತಂದಿದ್ದು ನಾನು. ಆಗ ನಾನು ಅವರನ್ನು ಯಾರಿಗೂ ಮುಟ್ಟಲು ಬಿಟ್ಟಿರಲಿಲ್ಲ. ಅದಕ್ಕೆ ನೀವೇ ಸಾಕ್ಷಿ. ನಿಮಗೆ ಅವರ ನಿಜವಾದ ಮುಖ ಗೊತ್ತಾಗಲು 17 ವರ್ಷ ಬೇಕಾಯ್ತು. ಆದ್ರೆ ನನಗೆ ಕೇವಲ 17 ದಿನಗಳಲ್ಲಿ ಅವರು ಖಾಕಿ ಬಣ್ಣದ ಒಳ ಉಡುಪು ಹಾಕುತ್ತಾರೆ ಅನ್ನೋದು ಗೊತ್ತಾಯ್ತು ಎಂದು ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಯಾದವ್ ಹಾಗೂ ಇನ್ನಿತರ ನಾಯಕರ ಮುಂದೆಯೇ ಬಿಜೆಪಿ ನಾಯಕಿಯ ವಿರುದ್ಧ ಅಸಂಬದ್ಧವಾಗಿ ಮಾತನಾಡಿದ್ದಾರೆ.

    ಅಜಮ್ ಖಾನ್ ಅವರು ಸದ್ಯ ಲೋಕಸಭಾ ಚುನಾವಣೆಗೆ ರಾಮ್‍ಪುರದಿಂದ ಎಸ್‍ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ನಾಯಕಿ ಬಗ್ಗೆ ಅಸಂಬದ್ಧವಾಗಿ ಹೇಳಿಕೆ ನೀಡಿರುವುದಕ್ಕೆ ಅಜಮ್ ಖಾನ್ ವಿರುದ್ಧ ಎಫ್‍ಐಆರ್ ಕೂಡ ದಾಖಲಿಸಲಾಗಿದೆ.

    ಅಜಮ್ ಖಾನ್ ಹಾಗೂ ಜಯಪ್ರದಾ ಅವರು ರಾಮ್‍ಪುರ ಕ್ಷೇತ್ರದಲ್ಲಿ ಬದ್ಧ ರಾಜಕೀಯ ವೈರಿಗಳು. ಅಲ್ಲದೆ ಎಸ್‍ಪಿ ನಾಯಕ ಬಿಜೆಪಿ ನಾಯಕಿ ವಿರುದ್ಧ ಕೊಟ್ಟಿರುವ ವಿವಾದಾತ್ಮಕ ಹೇಳಿಕೆ ಉಭಯ ಪಕ್ಷಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ರಾಜಕೀಯವಾಗಿ ಹಾಗೂ ವೈಯಕ್ತಿಕವಾಗಿ ಅಜಮ್ ಖಾನ್ ಒಂದು ಮಹಿಳಾ ನಾಯಕಿಯನ್ನು ಕೀಳಾಗಿ ಟೀಕಿಸಿದ್ದಕ್ಕೆ ಅವರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

  • ಜಯಪ್ರದಾ ಒಳ ಉಡುಪು ಬಗ್ಗೆ ಎಸ್‍ಪಿ ನಾಯಕ ಅಜಮ್ ಖಾನ್ ಕೀಳು ಹೇಳಿಕೆ

    ಜಯಪ್ರದಾ ಒಳ ಉಡುಪು ಬಗ್ಗೆ ಎಸ್‍ಪಿ ನಾಯಕ ಅಜಮ್ ಖಾನ್ ಕೀಳು ಹೇಳಿಕೆ

    ಲಕ್ನೋ: ನಟಿ ಹಾಗೂ ರಾಮ್‍ಪುರದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಪ್ರದಾ ಅವರು ಖಾಕಿ ಬಣ್ಣದ ಒಳ ಉಡುಪು ಧರಿಸುತ್ತಾರೆ ಎಂದು ಸಮಾಜವಾದಿ ಪಕ್ಷದ(ಎಸ್‍ಪಿ) ನಾಯಕ ಅಜಮ್ ಖಾನ್ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ.

    ಭಾನುವಾರದಂದು ರಾಮ್‍ಪುರದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಅಜಮ್ ಖಾನ್ ಅವರು, ಅವರನ್ನು(ಜಯಪ್ರದಾ) ರಾಮ್‍ಪುರಕ್ಕೆ ಕರೆತಂದಿದ್ದು ನಾನು. ಆಗ ನಾನು ಅವರನ್ನು ಯಾರಿಗೂ ಮುಟ್ಟಲು ಬಿಟ್ಟಿರಲಿಲ್ಲ. ಅದಕ್ಕೆ ನೀವೇ ಸಾಕ್ಷಿ. ನಿಮಗೆ ಅವರ ನಿಜವಾದ ಮುಖ ಗೊತ್ತಾಗಲು 17 ವರ್ಷ ಬೇಕಾಯ್ತು. ಆದ್ರೆ ನನಗೆ ಕೇವಲ 17 ದಿನಗಳಲ್ಲಿ ಅವರು ಖಾಕಿ ಬಣ್ಣದ ಒಳ ಉಡುಪು ಹಾಕುತ್ತಾರೆ ಅನ್ನೋದು ಗೊತ್ತಾಯ್ತು ಎಂದು ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಯಾದವ್ ಹಾಗೂ ಇನ್ನಿತರ ನಾಯಕರ ಮುಂದೆಯೇ ಬಿಜೆಪಿ ನಾಯಕಿಯ ವಿರುದ್ಧ ಅಸಂಬದ್ಧವಾಗಿ ಮಾತನಾಡಿದ್ದಾರೆ.

    ಅಜಮ್ ಖಾನ್ ಅವರು ಸದ್ಯ ಲೋಕಸಭಾ ಚುನಾವಣೆಗೆ ರಾಮ್‍ಪುರದಿಂದ ಎಸ್‍ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ನಾಯಕಿ ಬಗ್ಗೆ ಅಸಂಬದ್ಧವಾಗಿ ಹೇಳಿಕೆ ನೀಡಿರುವುದಕ್ಕೆ ಅಜಮ್ ಖಾನ್ ವಿರುದ್ಧ ಎಫ್‍ಐಆರ್ ಕೂಡ ದಾಖಲಿಸಲಾಗಿದೆ.

    ಈ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ಅಜಮ್ ಖಾನ್ ಅವರು, ನಾನು ಬಿಜೆಪಿ ಅಭ್ಯರ್ಥಿ ವಿರುದ್ಧ ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ. ಒಂದು ವೇಳೆ ನಾನು ಮಾತನಾಡಿರುವುದು ತಪ್ಪು ಎಂದು ಸಾಬೀತಾದರೆ, ನಾನು ಚುನಾವಣೆಯಿಂದ ಹಿಂದಕ್ಕೆ ಸರಿಯುತ್ತೇನೆ ಎಂದು ತಿಳಿಸಿದರು.

    ಜನರ ನಿಜ ಮುಖವನ್ನು ತಿಳಿಯಲು ವರ್ಷಗಟ್ಟಲೇ ಸಮಯ ಬೇಕು ಅನ್ನುವ ಅರ್ಥದಲ್ಲಿ ನಾನು ಮಾತನಾಡಿದ್ದು, ಹಿಂದೊಮ್ಮೆ ಒಬ್ಬ ವ್ಯಕ್ತಿ 150 ಬಂದೂಕನ್ನು ತಂದು ನನ್ನನ್ನು ಕಂಡರೆ ಸಾಯಿಸುತ್ತಾನೆ ಅಂತ ಹೇಳಿದ್ದನು. ಆದ್ರೆ ಬಳಿಕ ಆ ವ್ಯಕ್ತಿ ಆರ್ ಎಸ್‍ಎಸ್ ಪ್ಯಾಂಟ್ ಹಾಕಿದ್ದ. ಅದಕ್ಕೆ ಆ ರೀತಿ ಹೇಳಿದ್ದ ಅನ್ನೊದು ಗೊತ್ತಾಯ್ತು ಎಂದು ಒಂದು ಕಥೆಯನ್ನು ಹೇಳಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ನಾನು 9 ಬಾರಿ ರಾಮ್‍ಪುರ ಕ್ಷೇತ್ರದಿಂದ ಎಂಎಲ್‍ಎ ಆಗಿದ್ದೇನೆ. ಮಂತ್ರಿ ಕೂಡ ಆಗಿದ್ದೇನೆ. ಏನು ಹೇಳಬೇಕು ಅನ್ನೋದು ನನಗೆ ಗೊತ್ತಿದೆ. ನಾನು ಯಾರ ಹೆಸರನ್ನು ಹೇಳಿಲ್ಲ. ಹೆಸರು ಹೇಳಿ ಯಾರಿಗೂ ಅವಮಾನ ಮಾಡಿಲ್ಲ. ಒಂದು ವೇಳೆ ನನ್ನ ಹೇಳಿಕೆ ತಪ್ಪೆಂದು ಸಾಬೀತಾದರೆ ನಾನು ಚುನಾವಣೆಯಿಂದ ಹಿಂದಕ್ಕೆ ಸರಿಯುತ್ತೇನೆ ಎಂದರು.

    ನನಗೆ ಬೇಸರವಾಗಿದೆ. ಮಾಧ್ಯಮಗಳು ನನ್ನನ್ನು ಇಷ್ಟಪಡಲ್ಲ. ಹಾಗೆಯೇ ನಾನು ಕೂಡ ಮಾಧ್ಯಮಗಳನ್ನು ಇಷ್ಟಪಡಲ್ಲ. ಯಾಕೆಂದರೆ ಮಾಧ್ಯಮಗಳಿಂದ ದೇಶಕ್ಕೆ ಹಾನಿಯಾಗುತ್ತದೆ ಎಂದು ಹೇಳಿ ಪತ್ರಕರ್ತರ ವಿರುದ್ಧವೂ ಕಿಡಿಕಾರಿದರು.